Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ನೂತನ ತಹಶೀಲ್ದಾರ್ ಆಗಮನ!

ತೀರ್ಥಹಳ್ಳಿಗೆ ನೂತನ ತಹಶೀಲ್ದಾರ್ ಆಗಮನ!
– ಜಕ್ಕಣ್ಣ ಗೌಡರ್ ನೇಮಕ ಮಾಡಿ ಆದೇಶ
– ಸರ್ಕಾರದಿಂದ ಆದೇಶ ಶ್ರೀಘ್ರದಲ್ಲೇ ಅಧಿಕಾರ ಸ್ವೀಕಾರ
– ತೀರ್ಥಹಳ್ಳಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಾ..?!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ನೂತನ ತಹಶೀಲ್ದಾರ್ ಆಗಿ ಜಕ್ಕಣ್ಣ ಗೌಡರ್ ಅವರನ್ನು ಸರ್ಕಾರ ನಿಯೋಜನೆ ಮಾಡಿ ಆದೇಶವನ್ನು ಹೊರಡಿಸಿದೆ. ತೀರ್ಥಹಳ್ಳಿಯಲ್ಲಿ ಇದುವರೆಗೆ ಹಂಗಾಮಿ ತಹಶೀಲ್ದಾರರಾಗಿ ಲಿಂಗರಾಜು ಅವರು ಕೆಲಸ ಮಾಡುತ್ತಿದ್ದರು. ಈಗ ಜಕ್ಕಣ್ಣಗೌಡರ್ ನೇಮಕದಿಂದಾಗಿ ತೀರ್ಥಹಳ್ಳಿ ತಾಲೂಕು ಆಡಳಿತಕ್ಕೆ ಚುರುಕು ಸಿಗಲಿದೆ. ತೀರ್ಥಹಳ್ಳಿ ತಹಶೀಲ್ದಾರರಾಗಿ ಇತ್ತೀಚಿಗೆ ಅಮೃತ್ ಅತ್ರೆಶ್ ಅವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಬಳಿಕ ಈ ಸ್ಥಾನ ಖಾಲಿ ಇದ್ದು ಹಂಗಾಮಿ ತಹಶೀಲ್ದಾರರಾಗಿ ಲಿಂಗರಾಜು ಅವರು ಕೆಲಸ ಮಾಡುತ್ತಾ ಇದ್ದರು. ಇದೀಗ ಜಕಣ್ಣಗೌಡರ್ ಅವರನ್ನ ಸರ್ಕಾರ ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ. ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಲಂಚ ಹಾಗೂ ಇತರೆ ಸೇರಿದಂತೆ ದಾಖಲೆಗಳ ಸಮಸ್ಯೆ ಇದೆ. ರೈತರು ಮತ್ತು ಜನರ ದಾಖಲೆಗಳು ಬೇಗ ಸಿಗಬೇಕು. ಜನರ ಕೆಲಸ ಕಾರ್ಯಗಳು ಪೂರ್ಣಗೊಳಿಸುತ್ತಿಲ್ಲ ಎನ್ನುವ ದೂರುಗಳು ಇವೆ. ಈ ಹಿನ್ನಲೆಯಲ್ಲಿ ಜಕ್ಕಣ್ಣಗೌಡರ್ ಅವರ ಆಗಮನ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.

Categories
ಮಂಗಳೂರು

ಸಿದ್ದಾರ್ಥ ರೀತಿಯಲ್ಲಿ ಉದ್ಯಮಿ ಆತ್ಮಹತ್ಯೆ!

ಸಿದ್ದಾರ್ಥ ರೀತಿಯಲ್ಲಿ ಉದ್ಯಮಿ ಆತ್ಮಹತ್ಯೆ! –
– ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ಉದ್ಯಮಿ ಆತ್ಮಹತ್ಯೆ
– ಕಾಫಿ ಡೇ ಮಾಲೀಕ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಮತ್ತೆ ಮರುಕಳಿಸಿದ ಘಟನೆ

NAMMUR EXPRESS NEWS
ಮಂಗಳೂರು: ನಗರದ ಹೊರವಲಯದ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಕೆಳಗೆ ಹಾರಿ ಚಿಕ್ಕಮಗಳೂರಿನ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದ್ದು ಉದ್ಯಮಿ ಸಿದ್ದಾರ್ಥ ಆತ್ಮಹತ್ಯೆ ಹೋಲುವಂತಿದೆ. ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ ಫಾರ್ಮ್ ನಿವಾಸಿ ಪ್ರಸನ್ನ (37) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಪ್ರಸನ್ನ ಅವರು ತೊಕ್ಕೊಟ್ಟುವಿನಿಂದ ಮಂಗಳೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ಅವರ ರಕ್ಷಣೆಗೆ ಧಾವಿಸಿದರೂ, ಅದಾಗಲೇ ಅವರು ನದಿಪಾಲಾಗಿದ್ದು ರಕ್ಷಣಾ ಕಾರ್ಯ ಸಾಧ್ಯವಾಗಿಲ್ಲ.

ವ್ಯಾಪಾರಿ ಸೇತುವೆ ಬದಿಯಿಂದ ನದಿಗೆ ಹಾರಿದ್ದು, ಘಟನಾ ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಸ್ತವ್ಯಸ್ತ ಆಯಿತು ಪೊಲೀಸರು ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸಿದರು. ಯುವಕ ನೀರುಪಾಲಾಗುತ್ತಿರುವ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ಕಾರಿನಲ್ಲಿ ಪ್ರಸನ್ನ ಅವರ ಡ್ರೈವಿಂಗ್‌ ಲೈಸೆನ್ಸ್‌ ಸಿಕ್ಕಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಪ್ರಸನ್ನ ಅವರ ಸಂಬಂಧಿಕರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನೋಡಲು ಪ್ರಸನ್ನ ಮಂಗಳೂರಿಗೆ ಬಂದಿದ್ದರು ಎಂಬ ಮಾಹಿತಿ ಲಭಿಸಿದೆ. ಸ್ಥಳೀಯ ನಾಡದೋಣಿಗಳಿಂದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.2019ರಲ್ಲಿ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಆತ್ಮಹತ್ಯೆ ನಂತರ ಸರಣಿ ಆತ್ಮಹತ್ಯೆಗಳೇ ನೇತ್ರಾವತಿ ಸೇತುವೆಯಲ್ಲಿ ನಡೆದಿತ್ತು. ಅದೇ ರೀತಿಯಲ್ಲಿ ಈ ಘಟನೆ ನಡೆದಿದೆ.

Categories
ಕರಾವಳಿ ಬೆಂಗಳೂರು ಮಲ್ನಾಡ್

ರಾಜಧಾನಿಯಲ್ಲಿ ಮಲೆನಾಡು, ಕರಾವಳಿ ಜನರ ದನಿ..!

ರಾಜಧಾನಿಯಲ್ಲಿ ಮಲೆನಾಡು, ಕರಾವಳಿ ಜನರ ದನಿ..!
– ಅ.31 ಬೆಂಗಳೂರಲ್ಲಿ ಬೃಹತ್ ಸಭೆ
– ಸರ್ವರಿಗೂ ಸ್ವಾಗತಿಸಿದ ಸುಧೀರ್ ಕುಮಾರ್ ಮುರೊಳ್ಳಿ

NAMMUR EXPRESS NEWS
ಮಲೆನಾಡು ಹಾಗೂ ಕರಾವಳಿಯ ಹಲವಾರು ಸಮಸ್ಯೆಗಳು ಇದ್ದು ಅವೆಲ್ಲವನ್ನೂ ಪರಿಹರಿಸುವ ಸಲುವಾಗಿ ಮಲೆನಾಡ ಕರಾವಳಿ ಜನಪರ ಒಕ್ಕೂಟದಿಂದ ಅಕ್ಟೋಬರ್ 31ರಂದು ಬೆಂಗಳೂರಿನ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೃಹತ್ ಸಭೆ ನಡೆಯಲಿದೆ. ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ಕೊಪ್ಪ ಶೃಂಗೇರಿ ಸೇರಿ ಕರಾವಳಿ ಜಿಲ್ಲೆಗಳ ಹಲವು ತಾಲೂಕುಗಳ ಸಮಸ್ಯೆಗಳು ಏಕರೂಪದಲ್ಲಿವೆ. ಭೂ ಮಂಜೂರಾತಿ ಗ್ರಾಮಪಂಚಾಯಿತಿಯ ನಿವೇಶನ ರಹಿತ ಸಮಸ್ಯೆ, ಆಟೋ ಚಾಲಕರ ಸಮಸ್ಯೆ, ಯುವಕರ ನಿರುದ್ಯೋಗ ಸಮಸ್ಯೆ, ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಾಗಿ ಹಾಕ್ಕೋತ್ತಾಯ ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಮಲೆನಾಡು ಹಾಗೂ ಕರಾವಳಿಯ ಹಲವು ಸಂಘಟನೆಗಳು ಒಗ್ಗೂಡಿ ಸಮಾಲೋಚನೆ ಸಭೆ ನಡೆಯಲಿದೆ.

ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದ್ದರೂ ಉದ್ಯೋಗ ಸಮಸ್ಯೆ ಬಗೆ ಹರಿದಿಲ್ಲ. ಮಲೆನಾಡು ಹಾಗೂ ಕರಾವಳಿಯ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ವಕೀಲರು, ನ್ಯಾಯವಾದಿ ಸುಧೀರ್ ಕುಮಾರ್ ಮೊರಳ್ಳಿ, ಅನಿಲ್ ಹೊಸಕೊಪ್ಪ ಸೇರಿದಂತೆ ಹಲವರು ಸಾರತ್ಯ ವಹಿಸಿದ್ದಾರೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಅಪ್ಪ ಮಗನ ಜಗಳ – ಕೊಲೆಯಲ್ಲಿ ಅಂತ್ಯ!
– ಕುಲ್ಲಕ ವಿಚಾರಕ್ಕೆ ಅಪ್ಪ ಮಗನಿಗೆ ಗಲಾಟೆ
ಉಳ್ಳಾಲ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ
ಮೂಡುಬಿದಿರೆ: ಅಂತರ್ ಜಿಲ್ಲಾ ಬೈಕ್ ಕಳ್ಳರ ಸೆರೆ

NAMMUR EXPRESS NEWS
ಬೆಳ್ತಂಗಡಿ: ಕುಲ್ಲಕ ವಿಚಾರಕ್ಕೆ ಅಪ್ಪ ಮಗನಿಗೆ ನಡೆದ ಜಗಳದಿಂದ ಮಗ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಅ. 29 ರಂದು ಭಾನುವಾರ ರಾತ್ರಿ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರ್(75) ಅವರ ಪುತ್ರ ಜಗದೀಶ್ (30) ಎಂದು ತಿಳಿದುಬಂದಿದೆ ಆರೋಪಿ ತಂದೆ ಕೃಷ್ಣಯ್ಯ ಆಚಾರ್ ಚೂರಿಯಿಂದ ಇರಿದು ಮಗನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ ಅ.29 ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ(75) ಮಲಗಿದ್ದ ಸಂದರ್ಭ ಮಗ ಜಗದೀಶ್ ಆಚಾರಿ(31) ನಡುವೆ ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ತಂದೆ ಹಾಗೂ ಮಗನ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ಬಳಿಕ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.

ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದು, ಮಗ ಜಗದೀಶ ಕಾಲಿನಿಂದ ತುಳಿದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಕೋಪಗೊಂಡ ಅಪ್ಪ ಕೃಷ್ಣಯ್ಯ ತನ್ನ ಕಪಾಟಿನಲ್ಲಿ ಇರಿಸಿದ್ದ ಚೂರಿಯಿಂದ ಮಗನ ಕುತ್ತಿಗೆಗೆ ಇರಿದಿದ್ದಾನೆ. ಜಗದೀಶನಿಗೆ ಎಡ ಭುಜಕ್ಕೆ ಹಾಗೂ ಎಡ ಎದೆ ಭಾಗಕ್ಕೆ ಚೂರಿಯಿಂದ ತಂದೆ ಇರಿದಿದ್ದು, ಇರಿತಕ್ಕೆ ಒಳಗಾಗಿ ಕುಸಿದು ಬಿದ್ದ ಜಗದೀಶ್ ಅನ್ನು ತಕ್ಷಣವೇ ಮನೆಯವರು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಈ ಸಂದರ್ಭ ಜಗದೀಶ್ ಆಚಾರಿ ಮೃತಪಟ್ಟಿದ್ದಾರೆ. ಇನ್ನು ಮಗನನ್ನು ಕೊಲೆ ಮಾಡಿದ ತಂದೆ ಕೃಷ್ಣಯ್ಯ ಅಚಾರಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಉಳ್ಳಾಲ: ನೇತ್ರವತಿ ನದಿಗೆ ಹಾರಿ ಆತ್ಮಹತ್ಯೆ ಯುವಕನನ್ನು ಚಿಕ್ಕಮಗಳೂರು ಮೂಲದ ಪ್ರಸನ್ನ (37) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ್ ಫಾರ್ಮ್ ನಿವಾಸಿ ಬಿ.ಎಸ್ ಶಂಕರಗೌಡ ಎಂಬವರ ಪುತ್ರ ಪ್ರಸನ್ನ (37) ಎಂಬವರ ಆತ್ಮಹತ್ಯೆಯಿಂದ ಮತ್ತೆ ಆತಂಕ ಮೂಡಿಸಿದೆ. ಮಧ್ಯಾಹ್ನ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದು ರಾ.ಹೆ.66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ನೀರುಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು.

ಮೂಡುಬಿದಿರೆ: ಅಂತರ್ ಜಿಲ್ಲಾ ಬೈಕ್ ಕಳ್ಳರ ಸೆರೆ!

ಮೂಡುಬಿದಿರೆ: ಉತ್ತರ ಕನ್ನಡ ಮುರುಡೇಶ್ವರ ಠಾಣಾ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡದ ಮೂಡುಬಿದಿರೆಯಿಂದ ಬೈಕ್ ಕಳವು ಮಾಡಿರುವ ಅಂತರ್ ಜಿಲ್ಲಾ ಚೋರರನ್ನು ಮೂಡುಬಿದಿರೆ ಪೊಲೀಸರ ತಂಡ ಬಂಧಿಸಿದೆ. ತುಮಕೂರು ಜಿಲ್ಲೆಯ ಆಕಾಶ್ ಹಾಗೂ ವೀರೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ.ಆರೋಪಿಗಳಿಂದ ಕಳವು ಮಾಡಿದ 2 ಬೈಕುಗಳು ಸೇರಿ ಒಟ್ಟು 1.80 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಹಾವೀರ ಕಾಲೇಜಿನ ಎದುರು ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರನ್ನು ನಿಲ್ಲಿಸಲು ಹೇಳಿದಾಗ ನಿಲ್ಲಿಸದೇ ಮರಳಿ ಹೋಗುವ ಯತ್ನದ ವೇಳೆ ಪೊಲೀಸ್ ನಿರೀಕ್ಷಕ ಸಂದೇಶ್ ಹಾಗೂ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಮುರುಡೇಶ್ವರ ಮತ್ತು ಜೈನ್ ಪಿ.ಯು. ಕಾಲೇಜಿನ ಎದುರು ನಿಲ್ಲಿಸಿದ ಮೋಟಾರು ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂತು. ಈ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಇವರ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ದಾರ್ಥ ಗೊಯಲ್, ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರ ನಿರ್ದೇಶನದಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.

Categories
ಬೆಂಗಳೂರು

ಶೀಘ್ರವೇ ಪುನೀತ್ ಹೆಸ್ರಲ್ಲಿ ಹೃದಯ ಜ್ಯೋತಿ ಯೋಜನೆ

ಶೀಘ್ರವೇ ಪುನೀತ್ ಹೆಸ್ರಲ್ಲಿ ಹೃದಯ ಜ್ಯೋತಿ ಯೋಜನೆ
– ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆಗೆ ಸಿದ್ಧತೆ

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಹೃದಯಸಂಬಂಧಿ ಉಚಿತ ಚಿಕಿತ್ಸೆಯ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಗೆ ಶೀಘ್ರವೇ ಚಾಲನೆ ನೀಡಲು ಮುಂದಾಗಿದೆ.
ಹೌದು, ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ವಯೋಮಾನದವರಿಗೆ ಹೃದಯಕ್ಕೆ ಸಂಬಂಧಿಸಿದ ಉಚಿತ ಚಿಕಿತ್ಸೆಯನ್ನು ಶೀಘ್ರದಲ್ಲೇ ನೀಡಲು ರಾಜ್ಯದ 16 ಜಿಲ್ಲೆಗಳಲ್ಲಿರುವ ಶೇ.85 ರಷ್ಟು ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿಯ 50 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಈ ಯೋಜನೆಗೆ ಜೋಡಿಸುವ ಕೆಲಸವಾಗುತ್ತಿದ್ದು, ಶೀಘ್ರವೇ ಈ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಆರೋಗ್ಯ ಇಲಾಕೆಯ ಮೂಲಕ ಯೋಜನೆ ರೂಪಿಸಿದ್ದು, ಇದಕ್ಕೆ ಚಿತ್ರನಟ ದಿ.ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಎನ್ನುವ ಹೆಸರಿಡಲಾಗಿದೆ.

Categories
ಕರಾವಳಿ

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೊಂದು ಕೇಸ್!

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೊಂದು ಕೇಸ್!
– ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
– ಏನಿದು ಕೇಸ್… ಯಾಕೆ ದೂರು ದಾಖಲು?

NAMMUR EXPRESS NEWS
ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಧರ್ಮಸ್ಥಳ ಗ್ರಾಮದ ಸಂದೀಪ್ ರೈ ಎಂಬವರು ತಿಮರೋಡಿ ಮತ್ತಿತರರ ವಿರುದ್ಧ ಕೇಸು ದಾಖಲಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ, ಅನಿಲ್ ಕುಮಾರ್ ಅಂತರ, ಕಿರಣ್ ಗೌಡ, ಪ್ರಜ್ವಲ್ ಕೆ.ವಿ. ಗೌಡ, ಮನೋಹರ್ ಮನ್ನಡ ಮನೋಜ್ ಸಾಲ್ಯಾನ್ ಕುಂಜರ್ಪ ಮತ್ತು ಇತರರ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ಕೆಟ್ಟದಾಗಿ ಶಬ್ದಗಳನ್ನು ಬರೆದ ಬ್ಯಾನರ್ ಅಳವಡಿಸಲು ಅನುಮತಿ ನೀಡಿದ ಉಜಿರೆಯ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಅ.29ರಂದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್‌ಗಳ ಸಮೀಪದಲ್ಲೇ ಪಾದಯಾತ್ರೆಯನ್ನು ನಿಲ್ಲಿಸುವ ಒಳಸಂಚಿನಿಂದ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ದಕ್ಕೆ ದಕ್ಕೆ ತರುವಂತ ಬರವಣೆಗೆಗಳನ್ನು ಹೊಂದಿರುವ ಬ್ಯಾನರ್‌ಗಳನ್ನು ಅಳವಡಿಸಿ ಪ್ರಾದೇಶಿಕ ಗುಂಪುಗಳ ನಡುವೆ ವೈರತ್ವ, ದ್ವೇಷ, ವೈಮನಸ್ಸು ಭಾವನೆಗಳನ್ನು ಬಿತ್ತಿಸಿ ಅಸೌಹಾರ್ದತೆಯನ್ನು ಸೃಷ್ಟಿಸಿರುವುದಾಗಿ ಸಂದೀಪ್ ರೈ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಬೆಂಗಳೂರು

ರೈತರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸರಳ ಮಾಡಲು ಪಟ್ಟು

ರೈತರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸರಳ ಮಾಡಲು ಪಟ್ಟು
– ಕಾಯ್ದೆ ಜಾರಿಗೊಳಿಸುವಾಗ ಎಚ್ಚರಿಕೆ ವಹಿಸಲು ಅರಣ್ಯ ಸಚಿವರಿಗೆ ಟಿ.ಡಿ.ರಾಜೇಗೌಡ ಪತ್ರ
– ಈಗ ರೈತರು, ಜನರ ಮೇಲೆ ಕೇಸ್ ಬೇಡ: ಮನವಿ

NAMMUR EXPRESS NEWS
ಬೆಂಗಳೂರು/ಕೊಪ್ಪ: ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ 1972, 2003 ಮತ್ತು 2022ರ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವಾಗ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವನ್ಯ ಜೀವಿಗಳೊಂದಿಗೆ ಜೀವಿಸಿರುವ ಮಲೆನಾಡಿನ ರೈತರ ಮೇಲೆ ಈ ಕಾಯ್ದೆ ಜಾರಿಗೊಳಿಸುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಶೃಂಗೇರಿ ಶಾಸಕರಾದ ಟಿ. ಡಿ.ರಾಜೇಗೌಡ ಪತ್ರ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ ಮಲೆನಾಡಿನ ರೈತರು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಜಾರಿ ನಂತರ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಸ್ವಯಂ ಪ್ರೇರಿತರಾಗಿ ಜಾರಿಗೆ ತಂದಿದ್ದಾರೆ.

ತಮ್ಮ ಬೆಳೆ, ತೋಟ ನಷ್ಟವಾದರೂ ರೈತರು ಪ್ರಾಣಿಗಳ ಮೇಲೆ ಹಿಂಸೆ ಮಾಡಿರುವುದಿಲ್ಲ, ಮಲೆನಾಡಿನಲ್ಲಿ
ಕಾಯ್ದೆ ಜಾರಿ ನಂತರ ಬಹುತೇಕ ಪ್ರಾಣಿ ಶಿಕಾರಿ ಕಡಿಮೆಯಾಗಿದೆ.
ಮಲೆನಾಡಿನ ಅನೇಕ ರೈತರು ವನ್ಯಜೀವಿ ಸಂರಕ್ಷಣಾ ಕಾಯ್ದೆಯ 1972 ಮತ್ತು 2003ರ ನಿಯಮಗಳ ಪ್ರಕಾರ ಹಲವು ದಶಕಗಳಿಂದ ತಮ್ಮಮನೆಯಲ್ಲಿ ಕೆಲವು ಪ್ರಾಣಿಗಳ ಕೊಂಬು, ಚರ್ಮ, ಗೊರಸು ಬಳಸಿಕೊಂಡು ಅಲಂಕಾರಿಕ ವಸ್ತುಗಳನ್ನು ತಮ್ಮ ಮನೆಯಲ್ಲಿ ಜೋಪಾನ ಮಾಡಿದ್ದಾರೆ. ಇವುಗಳಿಗೆ ಇಲಾಖೆಯ ಅನುಮತಿ ಕೂಡ ಪಡೆದಿರುತ್ತಾರೆ. ಜಿಂಕೆ, ಸಾರಂಗ,ಕಡ ಮುಂತಾದ ಪ್ರಾಣಿಗಳ ಕೋಡು ವಯಸ್ಸಾದ ನಂತರ ಉದುರಿದ್ದನ್ನು ಮಲೆನಾಡಿನ ರೈತರು ಸಂಗ್ರಹಿಸಿ ಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಗ್ಗೆ ರೈತರಿಗೆ ಮಾಹಿತಿ ಇರಲಿಲ್ಲ. ಅನುಮತಿ ಪಡೆದ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಮತ್ತು ಉನ್ನತ ಸಮಿತಿಯಲ್ಲಿ ಮಲೆನಾಡು ಭಾಗದ ಜನ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಲು ಅವಕಾಶ ಮಾಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಸಲ್ಲಿಸಿದ್ದಾರೆ.

ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೊದಲು ಸಾರ್ವಜನಿಕರು ತಮ್ಮ ಬಳಿ ಹೊಂದಿರುವ ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಲಾಖೆಯ ವಶಕ್ಕೆ ನೀಡಲು ಅರಣ್ಯ ಅಧಿಕಾರಿಗಳ ಉನ್ನತ ಸಮಿತಿಯ ವರದಿ ನಂತರ ಎರಡು ತಿಂಗಳ ಅವಕಾಶ ನೀಡಲಾಗುವುದು ಮತ್ತು ಅಲ್ಲಿಯವರೆಗೆ ನಾಗರೀಕರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡದಂತೆ ಅಧಿಕಾರಿಗಳಿಗೆ ಸೂಚಿಸಿರುವುದನ್ನು ಶಾಸಕ ಟಿ.ಡಿ.ರಾಜೇಗೌಡರು ಸ್ವಾಗತಿಸಿದ್ದಾರೆ.

Categories
ಮಲ್ನಾಡ್

ಮಲೆನಾಡ ಸಮಸ್ಯೆ ಪರಿಹರಿಸಲು ಜನಪರ ಒಕ್ಕೂಟ ಪ್ರಾರಂಭ!

ಮಲೆನಾಡ ಸಮಸ್ಯೆ ಪರಿಹರಿಸಲು ಜನಪರ ಒಕ್ಕೂಟ ಪ್ರಾರಂಭ!
– ಇನ್ನಾದರೂ ಸಮಸ್ಯೆಗೆ ಪರಿಹಾರ ಸಿಗುತ್ತಾ?

NAMMUR EXPRESS
ತೀರ್ಥಹಳ್ಳಿ : ಮಲೆನಾಡಿನಲ್ಲಿ ಹಲವಾರು ಸಮಸ್ಯೆಗಳು ಇದ್ದು ಅವೆಲ್ಲವನ್ನೂ ಪರಿಹರಿಸುವ ಸಲುವಾಗಿ ಮಲೆನಾಡ ಕರಾವಳಿ ಜನಪರ ಒಕ್ಕೂಟ ಎಂಬ ಸಮಿತಿಯೊಂದಿಗೆ ಅಕ್ಟೋಬರ್ 31 ರಂದು ಬೆಂಗಳೂರಿನ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಹೋರಾಟದ ವಿಚಾರವಾಗಿ ಸಭೆ ಇಟ್ಟುಕೊಂಡಿದ್ದೇವೆ ಎಂದು ಸುಧೀರ್ ಕುಮಾರ್ ಮುರಳ್ಳಿ ಹೇಳಿದರು.
ಭಾನುವಾರ ಪಟ್ಟಣದ ಮಯೂರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ಕೊಪ್ಪ ಶೃಂಗೇರಿ ಸೇರಿ ಹಲವು ತಾಲೂಕುಗಳ ಸಮಸ್ಯೆಗಳು ಏಕರೂಪದಲ್ಲಿವೆ. ಭೂ ಮಂಜೂರಾತಿ ಗ್ರಾಮಪಂಚಾಯಿತಿಯ ನಿವೇಶನ ರಹಿತ ಸಮಸ್ಯೆ, ಆಟೋ ಚಾಲಕರ ಸಮಸ್ಯೆ, ಯುವಕರ ನಿರುದ್ಯೋಗ ಸಮಸ್ಯೆ, ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಾಗಿ ಹಾಕ್ಕೋತ್ತಾಯ ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಮಲೆನಾಡು ಹಾಗೂ ಕರಾವಳಿಯ ಹಲವು ಸಂಘಟನೆಗಳು ಒಗ್ಗೂಡಿ ಸಮಾಲೋಚನೆ ಸಭೆ ನೆಡೆಸಲಿದ್ದೇವೆ ಎಂದರು.

ಮಲೆನಾಡ ಭಾಗದಲ್ಲಿ ಕೃಷಿಯೇ ಜೀವಾಳ, ಇಲ್ಲಿನ ಯಾವುದೇ ಕೃಷಿಯಾದರೂ ಏಕರೂಪದಲ್ಲಿ ಇದೆ. ಹಾಗೆಯೇ ಈ ಭಾಗದ ಜನಪ್ರತಿನಿಧಿಗಳು ಕೂಡ ಏಕರೂಪದಲ್ಲಿ ಒಗ್ಗಟ್ಟಾಗಬೇಕು. ಇಲ್ಲಿ ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದ್ದರೂ ಉದ್ಯೋಗ ಸಮಸ್ಯೆ ಬಗೆ ಹರಿದಿಲ್ಲ. ಇನ್ನು ಇಲ್ಲಿನ ಹಲವು ಭಾಗಗಳಿಗೆ ಸೀಮಿತ ರೈಲ್ವೆ ಮಾಡುವ ಅವಶ್ಯಕತೆ ಇದೆ. ಹಾಗೂ ಈ ಭಾಗದ ಪ್ರವಾಸೋದ್ಯಮಕ್ಕೆಹೆಚ್ಚಿನ ಆದ್ಯತೆ ನೀಡಿದರೆ ಅದರಿಂದ ಎಷ್ಟೋ ಯುವಕರಿಗೆ ಉದ್ಯೋಗ ನಿರ್ಮಾಣ ಆಗಲಿದೆ ಎಂದರು.

ಕರಾವಳಿಯಲ್ಲಿ ಪಕ್ಷತೀತವಾಗಿ ಪ್ರತಿಯೊಬ್ಬರೂ ಒಗ್ಗೂಡಿ ಸಮಸ್ಯೆ ಪರಿಹಾರಕ್ಕೆ ಕೈ ಜೋಡಿಸುತ್ತಾರೆ.ಹಾಗೆಯೇ ಮಲೆನಾಡಿಗೂ ಜಾಗತಿಕ ಮನ್ನಣೆ ಪಡೆಯುವ ಕಾರಣಕ್ಕೆ ಮಲೆನಾಡಿನ ಸಮಸ್ಯೆ ಇಲ್ಲಿಗೆ ಸೀಮಿತವಾಗದೆ ಇರುವ ಕಾರಣಕ್ಕೆ
ರಾಜಧಾನಿಯಲ್ಲಿ ವಿಷಯ ಪ್ರಜ್ವಲಿಸಬೇಕೆಂದು ಈ ರೀತಿ ಒಕ್ಕೂಟ ಆರಂಭಿಸಿದ್ದೇವೆ. ಇಲ್ಲಿಯೂ ಸಹ ಪಕ್ಷತೀತವಾಗಿ ಹೋರಾಟ ನೆಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಹೊಸಕೊಪ್ಪ ಅನಿಲ್, ಕೊರೋಡಿ ಕೃಷ್ಣಪ್ಪ, ವಾಸುಕಿ, ನವೀನ್ ಕರವಾನೆ, ನೆಂಪೆ ದೇವರಾಜ್, ಹೊದಲ ಶಿವು, ಅಮರನಾಥ್ ಶೆಟ್ಟಿ, ಪೂರ್ಣೇಶ್ ಕೆಳಕೆರೆ ಸೇರಿ ಹಲವರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಪುನೀತ್ ನೆನಪಿಗೆ ರಕ್ತದಾನ!

ತೀರ್ಥಹಳ್ಳಿಯಲ್ಲಿ ಪುನೀತ್ ನೆನಪಿಗೆ ರಕ್ತದಾನ!
– ರಾಷ್ಟ್ರ ಮಟ್ಟಕ್ಕೆ ತೆರಳಿದ ಕ್ರೀಡಾಪಟುಗಳಿಗೆ ಸನ್ಮಾನ
– ಪುನೀತ್ ಬ್ರಿಗೇಡ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ವಿಶ್ವ ಮಾನವ ಕನ್ನಡ ವೇದಿಕೆ, ರೋಟರಿ ಬ್ಲಡ್ ಬ್ಯಾಂಕ್ ಸಹಯೋಗ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಕುಪ್ಪಳಿ ಕಲ್ಲುಕೊಡಿಗೆ ವತಿಯಿಂದ ರಕ್ತದಾನ, ರಾಷ್ಟ್ರ ಮಟ್ಟದ ಕ್ರೀಡೆಯನ್ನು ಪ್ರತಿನಿಧಿಸುತ್ತಿರುವ ರಜತ ಡಿ ( ಯೋಗಾಸನ), ಆಧ್ಯಾ ಎ. ಎಚ್, ತೇಜಸ್ ಶೆಣೈ, ಶಿಕ್ಷಕ ಮಧುರಾಜ್, ರೋಟರಿ ಬ್ಲಡ್ ಬ್ಯಾಂಕ್ ಪ್ರಮುಖರಾದ ಅರುಣ್, ಎಚ್ ಡಿ ಎಫ್ ಸಿ ಬ್ಯಾಂಕ್ ಪರವಾಗಿ ರಶ್ಮಿ, ವಿನುತಾ ಅವರನ್ನು ಗೌರವಿಸಲಾಯಿತು.
ಪುನೀತ್ ಸ್ಮರಣಾರ್ಥವಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ರೋಟರಿ ಬ್ಲಡ್ ಬ್ಯಾಂಕ್ ತೀರ್ಥಹಳ್ಳಿಯಲ್ಲಿ ರಕ್ತದಾನ ಮಾಡಿ, ಪುನೀತ್ ಅವರಿಗೆ ಪುಷ್ಪ ನಮನ ಅರ್ಪಿಸಲಾಯಿತು. ರಕ್ತದಾನವನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಣೇಶ್ ಭಟ್ ಉದ್ಘಾಟನೆ ಮಾಡಿದರು.

ಸನ್ಮಾನ ಕಾರ್ಯಕ್ರಮ ಮತ್ತು ರಕ್ತದಾನಿಗಳಿಗೆ ಅಭಿನಂದನಾ ಪತ್ರವನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಆಸಾದಿ,ಸದಸ್ಯರಾದ ಸುಶೀಲಾ ಶೆಟ್ಟಿ, ಈಡಿಗ ಸಮಾಜದ ಪ್ರಮುಖ ಮುಖಂಡರಾದ ಲಯನ್ ಪಾಂಡುರಂಗಪ್ಪ, ಸೂರ್ಯನಾರಾಯಣ ಚಿಡುವ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ವಿಶಾಲ್ ಕುಮಾರ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ವೇದಿಕೆ ಪ್ರಮುಖರಾದ ಸುಧಾಕರ್ ಕುಪ್ಪಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು, ಶಾಲಿನಿ, ರೋಟರಿ ಮಾಜಿ ಅಧ್ಯಕ್ಷರಾದ ನಾಗರಾಜ್, ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಮುಖ್ಯಸ್ಥರಾದ ರಾಘವೇಂದ್ರ, ನಾಗೇಶ್ ಉಂಬಲೇಬೈಲು, ದಿನೇಶ್ ಯಡೂರ್, ಗಿರೀಶ್, ಶ್ರೀಕಾಂತ್,ಜಾನಪದ ಪರಿಷತ್ ಅಧ್ಯಕ್ಷರಾದ ಶಿರುಪತಿ ಮಂಜುನಾಥ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಅನೇಕರು ಸ್ವ ಪ್ರೇರಣೆಯಿಂದ ರಕ್ತದಾನ ಮಾಡಿದರು.

Categories
ಚಿಕ್ಕಮಗಳೂರು

ದತ್ತಜಯಂತಿ ಸಿದ್ಧತೆ ಶುರು!

ದತ್ತಜಯಂತಿ ಸಿದ್ಧತೆ ಶುರು!
– ದತ್ತಜಯಂತಿಯಲ್ಲಿ 20 ಸಾವಿರ ಭಕ್ತರು
– 3 ದಿನಗಳ ಅದ್ದೂರಿ ಉತ್ಸವಕ್ಕೆ ಸಿದ್ಧತೆ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲು ಮುಳ್ಳಯ್ಯನಗಿರಿ ತಪ್ಪಲಿನ ದತ್ತಪೀಠದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ದತ್ತ ಜಯಂತಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ದತ್ತ ಜಯಂತಿಯನ್ನು ನಾಡ ಉತ್ಸವನ್ನಾಗಿ ಆಚರಿಸಲಾಗುವುದು. ಡಿಸೆಂಬರ್ 17 ರಂದು ಸ್ಕಂದ ಪಂಚಮಿ ದಿನ ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲಾ ಧಾರಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲಾದ್ಯಂತ ಡಿ. 24 ರಿಂದ 26ರವರೆಗೆ ದತ್ತಜಯಂತಿ ಉತ್ಸವ ನಡೆಯಲಿದ್ದು, ಈ ವರ್ಷ ದತ್ತಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ತೀರ್ಮಾನಿಸಿದೆ. ದತ್ತಜಯಂತಿ ಉತ್ಸವ ಪ್ರಯುಕ್ತ 8.24 ರಂದು ದತ್ತಪೀಠದಲ್ಲಿ ಅನಸೂಯ ಜಯಂತಿ ನಡೆಯಲಿದೆ. ಜಯಂತಿ ಅಂಗವಾಗಿ ಅಂದು ಬೆಳಗ್ಗೆ 9.30ಕ್ಕೆ ಸಾವಿರಾರು ಮಹಿಳೆಯರು ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಲಿದ್ದಾರೆ. ನಗರದ ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಪಾಲಿಟೆಕ್ನಿಕ್ ವೃತ್ತದಿಂದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ ಎಂದು ಹೇಳಿದರು.

ಮರುದಿನ ಡಿಸೆಂಬರ್ 25ರ ಬೆಳಗ್ಗೆ ದತ್ತಪೀಠದಲ್ಲಿ ದತ್ತ ಹೋಮ, ರುದ್ರ ಹೋಮ ನಡೆಯಲಿದೆ. ಇದೇ ದಿನ ಮಧ್ಯಾಹ್ನ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯುವುದು. ನಗರದ ಕಾಮಧೇನು ಗಣಪತಿ ದೇವಾಲಯ ಆವರಣದಿಂದ ಆರಂಭವಾಗುವ ಯಾತ್ರೆ ಮುಖ್ಯರಸ್ತೆಯಲ್ಲಿ ಸಾಗಿ, ಸಂಜೆ ಆಜಾದ್ ವೃತ್ತದಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದರು.
ದತ್ತಪೀಠದಲ್ಲಿ ಡಿ.26 ರಂದು ದತ್ತಜಯಂತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 20 ಸಾವಿರ ಭಕ್ತರು ಆಗಮಿಸಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ ಎಂದು ರಂಗನಾಥ ವಿವರಿಸಿದರು