ಅವಧಿ ಮುಗಿದ್ರೂ ಅಂಗಡಿ ಖಾಲಿ ಮಾಡದಕ್ಕೆ ಆಕ್ರೋಶ
– ಅಂಗಡಿ ವಸ್ತುಗಳನ್ನು ಹೊರಗೆ ಅಲ್ಲಿ ಸ್ಥಳೀಯರು
– ತೀರ್ಥಹಳ್ಳಿ ತಾಲೂಕಿನ ಗಡಿಕಲ್ ಅಲ್ಲಿ ಘಟನೆ
NAMMUR EXPRESS NEWS
ತೀರ್ಥಹಳ್ಳಿ: ತಮ್ಮ ಜಾಗದಲ್ಲಿ ಬಾಡಿಗೆಗೆ ಕೊಟ್ಟ ಜಾಗವನ್ನು 12 ವರ್ಷ ಅವಧಿ ಮುಗಿದರೂ ಬಿಡಲಿಲ್ಲ ಎಂಬ ಕಾರಣಕ್ಕೆ ಜಾಗದ ಮಾಲೀಕರು ಹಾಗೂ ಸ್ಥಳೀಯರು ಸೇರಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತೀರ್ಥಹಳ್ಳಿ ತಾಲೂಕು ಕೊಪ್ಪ ತಾಲೂಕು ಗಡಿ ಭಾಗದ ಗಡಿಕಲ್ ಅಲ್ಲಿ ಸೋಮವಾರ ನಡೆದಿದೆ. ನೂರಾರು ಮಂದಿ ಸೇರಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಹೊರ ಹಾಕಿದ್ದಾರೆ. ಮಂಜುನಾಥ್ ಎಂಬ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿ ಅಂಗಡಿ ಮಾಡಲು ಕರಾರು ಮಾಡಿಕೊಂಡು ಜಾಗ ಕೊಟ್ಟಿದ್ದಾರೆ. ಆದ್ರೆ ಅಂಗಡಿಯವರು 12 ವರ್ಷ ಆದರೂ ಜಾಗ ಬಿಟ್ಟಿರಲಿಲ್ಲ.
ಇದರಿಂದ ಮಂಜುನಾಥ್ ಮತ್ತು ಕುಟುಂಬ ಹಲವು ಬಾರಿ ಮನವಿ ಮಾಡಿದ್ದರು. ಆದರೂ ಅವರು ಜಾಗ ಬಿಟ್ಟಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಇದೀಗ ಸೋಮವಾರ ಮಂಜುನಾಥ್ ಮತ್ತು ಕುಟುಂಬದ ಮಹಿಳೆಯರು, ಸ್ಥಳೀಯರು ಸೇರಿ ಅಂಗಡಿ ವಸ್ತುಗಳನ್ನು ಹೊರ ಹಾಕಿದ್ದಾರೆ.
