Categories
ಚಿಕ್ಕಮಗಳೂರು

ಕಾಫಿನಾಡಿನಲ್ಲಿ ಅಪರೂಪದ ಹಾವು ಪತ್ತೆ!

ಕಾಫಿನಾಡಿನಲ್ಲಿ ಅಪರೂಪದ ಹಾವು ಪತ್ತೆ!
– ಬ್ಯಾಂಬೋ ಪಿಟ್ ವೈಫರ್ ಹಾವು ಕಂಡು ಜನರಿಗೆ ಸೋಜಿಗ
– ಕಳಸದಲ್ಲಿ ಪತ್ತೆಯಾದ ಹಾವನ್ನು ರಕ್ಷಣೆ
– ಫೈನಾನ್ಸ್ ಕಿರುಕುಳ: ಮಹಿಳೆ ಆತ್ಮಹತ್ಯೆ?… ಇನ್ನು ಹಲವು ಸುದ್ದಿಗಳು

NAMMUR EXPRESS NEWS
ಚಿಕ್ಕಮಗಳೂರು: ಹಾವಿನ ಸಂತತಿಯಲ್ಲೇ ಅತ್ಯಂತ ಅಪರೂಪವೆನಿಸಿದ ಬ್ಯಾಂಬೋ ಪಿಟ್ ವೈಫರ್ ಹಾವೊಂದು ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ಸೆರೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಹಾವು ಈಗ ಅಳಿವಿನಂಚಿಗೆ ತಲುಪಿದೆ, ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಿರುವ ಬ್ಯಾಂಬೋ ಪಿಟ್ ವೈಫರ್ ಹಾವು ಕಳಸೇಶ್ವರ ದೇವಸ್ಥಾನದ ಪಕ್ಕದ ಚಂದ್ರು ಭಟ್ ಅವರ ಮನೆಯ ಅಂಗಳದಲ್ಲಿ ಕಾಣಿಸಿಕೊಂಡಿದೆ. ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಅಪರೂಪದ ಲಕ್ಷಣ ಈ ಹಾವಿಗಿದೆ, ಈ ಹಾವುಗಳು ವಿಷಕಾರಿಯಲ್ಲ ಆದರೆ ಕಡಿದರೆ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತದಂತೆ.ಈ ಅಪರೂಪದ ಹಾವಿನ ಸೌಂದರ್ಯ ನೋಡಿ ಇಲ್ಲಿನ ಜನ ತಮ್ಮ ಮೊಬೈಲ್ ಗಳಲ್ಲಿ ಚಿತ್ರವನ್ನು ಸೆರೆಹಿಡಿದಿದ್ದಾರೆ. ಬಳಿಕ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ ರಿಜ್ವಾನ್ ಅರಣ್ಯಕ್ಕೆ ಬಿಟ್ಟಿದ್ದಾರೆ.

ಶೃಂಗೇರಿ: ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದ ಬೈಕ್ ಸವಾರ

ಶೃಂಗೇರಿ: ಕೆ.ಎಸ್.ಆರ್.ಟಿ.ಸಿ ಬಸ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೆಬೈಲ್ ಸಮೀಪ ನಡೆದಿದೆ. ಶುಕ್ರವಾರ ಸಂಜೆ ಸುಮಾರು 6.30 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಬೈಕ್ ನ ಮುಂಭಾಗ ನಜ್ಜುಗುಜ್ಜಾಗಿದೆ. ಇನ್ನು ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫೈನಾನ್ಸ್ ಕಿರುಕುಳ: ಮಹಿಳೆ ಆತ್ಮಹತ್ಯೆ?

ಚಿಕ್ಕಮಗಳೂರು: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಾತಿಗೆ ಮನೆ ಬಾಗಿಲಿಗೆ ಬಂದು ಅವಮಾನಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ವರದಿಯಾಗಿದೆ. ತಾಲೂಕಿನ ತಂಗಲಿ ಗ್ರಾಮದ ದೇವೀರಮ್ಮ (58) ಎಂಬವರೇ ಫೈನಾನ್ಸ್ ಸಿಬ್ಬಂದಿಯ ಅವಮಾನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಆಗಿದ್ದು, ಗುರುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ದೇಹವನ್ನು ಪುತ್ರ ಹಾಗೂ ದೂರುದಾರ ರಾಘವೇಂದ್ರ ನೋಡಿದ್ದು ಮಧ್ಯಾಹ್ನ ಕಡೂರು ಠಾಣೆಗೆ ದೂರು ನೀಡಿದ್ದಾರೆ. ಈ ಸಮಯದಲ್ಲಿ ದೇವೀರಮ್ಮ ಅವರು ಪುತ್ರ ರಾಘವೇಂದ್ರ ಅವರ ಜೊತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು.

ಆಗ ಸೊಸೆ ದೂರವಾಣಿ ಮೂಲಕ ಕರೆಮಾಡಿ ಘಟನೆಯ ಮಾಹಿತಿ ನೀಡಿದ್ದು ಮನೆಗೆ ಬಂದ ಪುತ್ರ ಮತ್ತು ತಾಯಿ ದೇವೀರಮ್ಮ ಹಾಗೂ ಫೈನಾನ್ಸ್ ಸಿಬ್ಬಂದಿ ನಡುವೆ ಚರ್ಚೆ ನಡೆದಿದ್ದು ಅಂತಿಮವಾಗಿ ಪುತ್ರ ರಾಘವೇಂದ್ರ ಅವರು ಶುಕ್ರವಾರ ಹಣ ಪಾವತಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಫೈನಾನ್ಸ್ ಸಿಬ್ಬಂದಿ ತೆರಳಿದ್ದಾರೆ ಎನ್ನಲಾಗಿದೆ.
ಆದರೆ ಘಟನೆ ನಡೆದ ದಿನ ರಾತ್ರಿ ಊಟ ಮುಗಿಸಿ ಮಲಗಲು ತೆರಳಿದ ದೇವೀರಮ್ಮ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದು, ಬೆಳಗ್ಗೆ ಮನೆ ಮಂದಿಗೆ ಆತ್ಮಹತ್ಯೆ ವಿಷಯ ಗೊತ್ತಾಗಿದೆ.

Categories
ತೀರ್ಥಹಳ್ಳಿ

ಮಂಜುನಾಥ ಗೌಡ ರಾಜಕೀಯ ಅಲೆಮಾರಿ.. ಅವರ ವಿರುದ್ಧ ತನಿಖೆಗೆ ಈಗಲೂ ಹೋರಾಟ ಮಾಡುತ್ತೇನೆ

ಮಂಜುನಾಥ ಗೌಡ ರಾಜಕೀಯ ಅಲೆಮಾರಿ.. ಅವರ ವಿರುದ್ಧ ತನಿಖೆಗೆ ಈಗಲೂ ಹೋರಾಟ ಮಾಡುತ್ತೇನೆ
– ಕಿಮ್ಮನೆ ರಾಜಕೀಯ ಲಾಭಕ್ಕೆ ನಾಟಕದ ಮಾತು: ಕಿಮ್ಮನೆ ವಿರುದ್ಧ ಸಿಡಿದೆದ್ದ ಆರಗ ಜ್ಞಾನೇಂದ್ರ
– ಪತ್ರಿಕಾಗೋಷ್ಠಿ ಉದ್ದಕ್ಕೂ ಕಿಮ್ಮನೆ ವಿರುದ್ಧ ಕಿಡಿ.. ಏನಿದು ಸ್ಟೋರಿ?

NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ನಾಯಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಅರ್.ಎಂ.ಮಂಜುನಾಥ ಗೌಡ ಅವರ ಮನೆ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಮಾಜಿ ಗೃಹ ಸಚಿವ, ಹಾಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಿಮ್ಮನೆ ಅವರಿಗೆ ಡಿಸಿಸಿ ಬ್ಯಾಂಕ್ ಏನಾದರೂ ಆಗಲಿ. ರಾಜಕೀಯ ಲಾಭ ಅಷ್ಟೇ ಬೇಕು. ಒಂದು ಸಮಯದಲ್ಲಿ ಕೆಟ್ಟ ಭಾಷೆ ಬಳ್ಸಿ ಬೈದು ಈಗ ಅವರಿಂದ ರಾಜಕೀಯ ಲಾಭ ಪಡೆಯಲು ಅವರನ್ನು ಮೆಚ್ಚಿಸುತ್ತಿದ್ದಾರೆ. ನನಗೂ ರಾಘವೇಂದ್ರ ಅವರಿಗೂ ಈ ದಾಳಿಗೂ ಸಂಬಂಧ ಇಲ್ಲ. ನಾವು ಅಂತಹ ಸಣ್ಣ ಮಟ್ಟದ ಕೆಲಸ ಮಾಡುವುದಿಲ್ಲ. ನಮಗೆ ಜನರೇ ಗೆಲ್ಲಿಸಿದ್ದಾರೆ. ವಾಮಮಾರ್ಗದಲ್ಲಿ ಚುನಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಗಾಂಧಿ ಅನುವಾದಿ ಎನ್ನುವ ಕಿಮ್ಮನೆ ಅವರು, ಜ್ಞಾನೇಂದ್ರ ಗೆಣಸು ಕೀಳುತ್ತಿದ್ರಾ ಎಂದಿದ್ದಾರೆ. ನಾನು ಗೆಣಸು ತಿಂದು ಬೆಳೆದವರು. ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಬೆಳೆದಿಲ್ಲ. ಆರಗ ಕಾಯಂ ದೋಸೆ ಮಾಡಬೇಕು ಎಂದಿದ್ದರು. ಗಾಂಧಿ ಅವರ ಅನುಯಾಯಿ ಆದವರು ಸರಿಯಾಗಿ ಮಾತನಾಡಬೇಕು. ಜನ ನನಗೆ ಅಧಿಕಾರ ಕೊಟ್ಟಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಾಯಕರಾದ ನಾಗರಾಜ್ ಶೆಟ್ಟಿ, ಸಂದೇಶ್ ಜವಳಿ, ಚಂದವಳ್ಳಿ ಸೋಮಶೇಖರ್, ಪೂರ್ಣೇಶ್ ಕುರುವಳ್ಳಿ, ಬಸವರಾಜ್ ಹೊದಲ ಇತರರು ಇದ್ದರು.

ಆಗ ಮಂಜುನಾಥ ಗೌಡ ವಿರುದ್ಧ ತನಿಖೆ ಮಾಡಲು ಹೇಳಿದ್ದೆ ಕಿಮ್ಮನೆ

67 ಕೋಟಿ 76 ಲಕ್ಷ ಚಿನ್ನದ ಬದಲು ಕಬ್ಬಿಣ ಇಟ್ಟು ಮಂಜುನಾಥ ಗೌಡ ಹಗರಣ ಮಾಡಿದ್ದಾರೆ ಎಂದು ವಿಧಾನ ಸಭೆಯಲ್ಲಿ ಬೊಬ್ಬೆ ಹೊಡೆದಿದ್ದು ಕಿಮ್ಮನೆ ಅವರೇ. ಆಗ ಹಗರಣದ ತನಿಖೆ ಸಿಬಿಐ ಹಾಕಬೇಕು ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿ ಬಿ ರಿಪೊರ್ಟ್ ಕೊಡಿಸಿದ್ದು ಇವರೇ. ಹೇಗೆ ಬಂತು ಬಿ ರಿಪೋರ್ಟ್? ತಮ್ಮ ರಾಜಕೀಯ ಲಾಭಕ್ಕಾಗಿ ಕಿಮ್ಮನೆ ಏನೂ ಮಾಡಲು ಸಿದ್ಧ ಎಂದರು.

ಕಳ್ಳ ಸುಳ್ಳ ಎಂದರೂ ನಾನು ಹೇಳಿಲ್ಲ!

ಕಾಂಗ್ರೆಸ್ ಸೇರಿಸಿಕೊಂಡರು. ಕಳ್ಳ ಸುಳ್ಳ ಅಂತ ಸಭೆಯಲ್ಲಿ ಮಾತನಾಡಿದರು. ನಾನು ಯಾವುದೇ ಇಂತಹ ಶಬ್ದ ಬಳಸಲಿಲ್ಲ. ಈಗ ರಾಜಕೀಯ ಲಾಭಕ್ಕಾಗಿ ಮಂಜುನಾಥ ಗೌಡರ ಸೇರಿಸಿಕೊಂಡರು. ಅವರ ವೇದಿಕೆ ಇದ್ದರೆ ವೇದಿಕೆ ಕೂರುತ್ತಿರಲಿಲ್ಲ. ಆದರೆ ಈಗ ಏಕಾಏಕಿ ಪ್ರೇಮ ಬಂದಿದೆ ಎಂದು ಕಿಮ್ಮನೆ ವಿರುದ್ಧ ಕಿಡಿಕಾರಿದರು.

ರೈತರ ಹಣ ಮೋಸ ಆಗಿದ್ದು ಕೇಳಿದ್ದೇನೆ ಅಷ್ಟೇ..!

ನಾನು ಯಾವುದೇ ರಾಜಕೀಯ ಮಾಡಲಿಲ್ಲ. 62 ಕೋಟಿ ಯಾವಾಗ ಜಮೆ ಮಾಡುತ್ತೀರಿ. ಅದು ರೈತರ ಬ್ಯಾಂಕ್. ರೈತರಿಗೆ ತೊಂದರೆ ಆಗಬಾರದು ಎಂದು ಹೋರಾಟ ಮಾಡಿದ್ದೇನೆ. ಮಂಜುನಾಥ ಗೌಡ ಮನೆ ಮೇಲೆ ದಾಳಿ ಆಗಿದ್ದಕ್ಕೆ ಸಂತೋಷ್ ಪಡುವ ವ್ಯಕ್ತಿ ಯಾರು ಎಂದು ಎಲ್ಲರಿಗೂ ಗೊತ್ತಿದೆ. ರಾಘವೇಂದ್ರ, ನಾನು ಮನಸು ಮಾಡಿದರೆ ಏನಾದರೂ ಮಾಡುತ್ತಿದ್ದೆವು ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮದು ಇದ್ದಾಗ ಮಾಡಬಹುದಿತ್ತು. ಆದರೆ ನಾವು ಮಾಡಲಿಲ್ಲ ಎಂದು ಆರಗ ಹೇಳಿದ್ದಾರೆ.
ಕಿಮ್ಮನೆಗೆ ಬ್ಯಾಂಕ್ ಬಗ್ಗೆ ಆಸಕ್ತಿ ಇಲ್ಲ. ರಾಜಕೀಯ ಇದ್ದರೆ ಬೇರೆ ರೀತಿಯಲ್ಲಿ ಮಾಡಿಕೊಳ್ಳಲಿ. ನಮ್ಮನ್ನು ಯಾಕೆ ಟಾರ್ಗೆಟ್ ಮಾಡಬೇಕು. ಕಿಮ್ಮನೆ ಗೊಂದಲದಲ್ಲಿ ಇದ್ದಾರೆ ಎಂದರು.

ಮಂಜುನಾಥ ಗೌಡ ರಾಜಕೀಯ ಅಲೆಮಾರಿ!

ರಾಜಕೀಯ ಅಲೆಮಾರಿಯನ್ನು ಪಕ್ಷಕ್ಕೆ ಸೇರಿಸಿಕೊಂಡು ನಾಟಕ ಮಾಡುತ್ತಿದ್ದಾರೆ. ಮಂಜುನಾಥ ಗೌಡರ ಮೇಲೆ ವಯುಕ್ತಿಕ ದ್ವೇಷ ಇಲ್ಲ. ಬ್ಯಾಂಕ್ ಹಣ ಏನಾಯಿತು ಎಂದು ನಾನು ಈಗಲೂ ಕೇಳುತ್ತೇವೆ. ರಾಜಕೀಯವಾಗಿ ಮುಗಿಸುವ ಯಾವುದೇ ತಂತ್ರ ಇಲ್ಲ. ಇಬ್ಬರೂ ಒಟ್ಟಾದರೂ ಏನು ಮಾಡಲಿಲ್ಲ. ನಾನು ಯಾವುದೇ ಲೂಟಿ ಮಾಡಿ ಹಣ ತಂದಿದ್ದರೆ ತನಿಖೆ ಮಾಡಲಿ. ವಯುಕ್ತಿಕ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಬೆಳೆದ ಮೇಲೆ ರಾಜಕೀಯದಲ್ಲಿ ಸ್ಥಿತಿಪ್ರಜ್ಞೆ ಇರಬೇಕು. ಬ್ಯಾಂಕಿಗೆ ಹಣ ಕಟ್ಟಲು ಹೇಳಿ. ಎಲ್ಲರೂ ಸೇರಿ ಸನ್ಮಾನ ಮಾಡೋಣ. ಕಿಮ್ಮನೆಗೂ ಭಾಷಣ ಮಾಡೋಣ ಎಂದು ಟೀಕಿಸಿದರು.

Categories
ರಾಜ್ಯ

ಕರ್ನಾಟಕ ಟಾಪ್ 5 ನ್ಯೂಸ್..!

– ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ, ಮಗು ಸಾವು!
– ಟಾಟಾ ಎಸ್ ವಾಹನಕ್ಕೆ ಬೈಕ್ ಡಿಕ್ಕಿ: ದಂಪತಿ ದುರ್ಮರಣ!
– ದೇವನಹಳ್ಳಿ: ಬೈಕ್‌ಗಳ ನಡುವೆ ಡಿಕ್ಕಿ, ವ್ಯಕ್ತಿ ಸಾವು..!
– ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸ್ಥಳದಲ್ಲೇ ದುರ್ಮರಣ!
– ವಿದ್ಯಾರ್ಥಿನಿಯರೊಂದಿಗಿನ ಅಶ್ಲೀಲ ವಿಡಿಯೋ ವೈರಲ್: ಪ್ರಾಂಶುಪಾಲ ಸಸ್ಪೆಂಡ್

NAMMUR EXPRESS NEWS
ಚಿಕ್ಕಬಳ್ಳಾಪುರ: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ 4 ವರ್ಷದ ಮಗು ಸ್ಥಳದಲ್ಲೇ ದುರ್ಮರಣಹೊಂದಿದ ಘಟನೆ ತಾಲೂಕಿನ ಶ್ರೀನಿವಾಸ ಸಾಗರ ಕ್ರಾಸ್ ಬಳಿ ನಡೆದಿದೆ. ಕೆಪಿಸಿ ಗೋಣಿಚೀಲ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಮನೋಜ್, ಸಂತನ್ ದೇವಿ ಅವರ ಪುತ್ರಿ ಅಂಕುಶ್ (4) ಮೃತಪಟ್ಟ ಮಗು. ಸ್ಥಳದಲ್ಲಿ ಮೃತ ಅಂಕುಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಂತರ ಚಾಲಕ ಕಾರು ಸಹಿತ ಪರಾರಿಯಾಗಿದ್ದಾನೆ.

ಟಾಟಾ ಎಸ್ ವಾಹನಕ್ಕೆ ಬೈಕ್ ಡಿಕ್ಕಿ: ದಂಪತಿ ದುರ್ಮರಣ!

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೆವಾಡಿ ಗ್ರಾಮದ ಬಳಿ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಅನಿಲ್ ಪಾಟೀಲ್ (45) ಮತ್ತು ಅನಿತಾ ಪಾಟೀಲ್ (40) ಮೃತಪಟ್ಟಿದ್ದಾರೆ. ಇವರು ಮಹಾರಾಷ್ಟ್ರದ ಜತ್ತ ತಾಲೂಕಿನ ಶಿಗನಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಅಥಣಿಯಿಂದ ಶಿಗನಾಪುರಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತ ಇದಾಗಿದೆ.

ಬೈಕ್‌ಗಳ ನಡುವೆ ಡಿಕ್ಕಿ, ವ್ಯಕ್ತಿ ಸಾವು!

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದ ಟೋಲ್ ಪ್ಲಾಜಾ ಬಳಿ ಎರಡು ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಸವಾರನೊಬ್ಬ ಸಾವನ್ನಪ್ಪಿದ್ದಾನೆ. ದರ್ಶನ್ (25) ಮೃತ ವ್ಯಕ್ತಿ. ಘಟನೆಯಲ್ಲಿ ಮತ್ತೊಬ್ಬ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಲಾರದಿಂದ ಬೆಂಗಳೂರಿನತ್ತ ಚಲಿಸುತ್ತಿದ್ದ ಬೈಕ್‌ಗಳ ನಡುವೆ ಡಿಕ್ಕಿ ಹೊಡೆದಿದ್ದು, ಈ ವೇಳೆ ದರ್ಶನ್ ಟಿಪ್ಪರ್ ಅಡಿಕೆ ಬಿದ್ದ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಆಗಮಿಸಿದ ಹೊಸಕೋಟೆ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸ್ಥಳದಲ್ಲೇ ದುರ್ಮರಣ

2 ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು – ಹಾಸನ ಹೆದ್ದಾರಿಯ ಸೋಲೂರು ಗ್ರಾಮದ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ವಿದ್ಯಾರ್ಥಿನಿಯರೊಂದಿಗಿನ ಅಶ್ಲೀಲ ವಿಡಿಯೋ ವೈರಲ್: ಪ್ರಾಂಶುಪಾಲ ಸಸ್ಪೆಂಡ್ :

ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸಿದ್ದಪ್ಪ ಅವರನ್ನು ಅಮಾನತು ಮಾಡಲಾಗಿದೆ. ಲೈಂಗಿಕ ಕಿರುಕುಳ ನೀಡಿದ ಆರೋಪ ಮತ್ತು ಎರಡನೇ ಮದುವೆಯಾದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.
ಎರಡನೇ ಪತ್ನಿಯೊಂದಿಗೆ ಸಿದ್ದಪ್ಪ ಇರುವ ಫೋಟೋ ಜಾಲತಾಣಗಳಲ್ಲಿ ಹರಿದಾಡಿವೆ. ಅಲ್ಲದೇ ಸಿದ್ದಪ್ಪ ವಿದ್ಯಾರ್ಥಿನಿಯರೊಂದಿಗೆ ಇರುವ ಫೋಟೋ, ವಿಡಿಯೋ, ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ಡಿಡಿಪಿಯು ಸೋಮಶೇಖರ ಹೊಕ್ರಾಣಿ ನೇತೃತ್ವದ ತ್ರಿಸದಸ್ಯ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಲಾಗಿತ್ತು. ಈ ತಂಡ ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ರಾಜ್ಯ ನಿರ್ದೇಶಕರಿಗೆ ಪ್ರಾಥಮಿಕ ವರದಿ ನೀಡಿದ್ದು, ಪ್ರಭಾರ ಪ್ರಾಂಶುಪಾಲ ಸಿದ್ದಪ್ಪ ಅವರು ಲೈಂಗಿಕ ಕಿರುಕುಳ ನೀಡಿದ ಮತ್ತು ಎರಡನೇ ಮದುವೆಯಾದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ಕಾಯ್ದಿರಿಸಿ ಅವರನ್ನು ಅಮಾನತು ಮಾಡಲಾಗಿದೆ.

Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ಪುತ್ತಿಲ ವಿರುದ್ಧ ಸುಮೋಟೋ ಕೇಸ್..!
– ಸಾಗರದ ಗಣಪತಿ ಕೆರೆಯಲ್ಲಿ ಅಪರಿಚಿತ ಶವ ಪತ್ತೆ
– ಶಿವಮೊಗ್ಗ :ಅಪ್ರಾಪ್ತ ಮೇಲೆ ಅತ್ಯಾಚಾರ: ಜೈಲು
– ಸಾಗರ :ಪರವಾನಗಿ ಇಲ್ಲದೆ ಹಸುಗಳ ರವಾನೆ
– ರಿಪ್ಪನ್‌ಪೇಟೆ: ಇನ್ನೋವಾ ಕಾರು ಪಲ್ಟಿ
– ಓಮ್ಮಿಯಲ್ಲಿ ಜಾನುವಾರು ಸಾಗಣೆ: ಧರ್ಮದೇಟು

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದ ಕರಾವಳಿ ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ಅರುಣ್ ಕುಮಾರ್ ಪುತ್ತಿಲ್ಲ ರಾಗಿಗುಡ್ಡದಲ್ಲಿ ಸೆಕ್ಷನ್ ಜಾರಿ ಇದ್ದರೂ ಆಯುಧ ಪೂಜೆಯ ದಿನ ಶಸಸ್ತ್ರಗಳಿಗೆ ಪೂಜೆ ಮಾಡಿ ಎಂದು ಕರೆ ನೀಡಿರುವುದು ಪ್ರಚೋದನೆಗೆ ಪುಷ್ಠಿ ನೀಡುತ್ತಿರುವುದರಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೋಟೋ ದೂರು ದಾಖಲಾಗಿದೆ. ಸ್ಕ್ಯಾನರ್, ಸ್ಕ್ರೂಡ್ರೈವರ್ ಹೊರತು ಪಡಿಸಿ ತಲ್ವಾರ್ ಪೂಜೆಗೆ ಕರೆ ನೀಡಿದ್ದ ಪುತ್ತಿಲ್ಲರ ವಿರುದ್ಧ ಸುಮೋಟೋ ದೂರು ದಾಖಲಾಗಿದೆ.

ಸಾಗರದ ಗಣಪತಿ ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಸಾಗರ: ಅಪರಿಚಿತ ವ್ಯಕ್ತಿಯ ಶವವೊಂದು ಸಾಗರದ ಗಣಪತಿ ಕೆರೆಯಲ್ಲಿ ಪತ್ತೆಯಾಗಿದೆ. 25 ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು ಶವವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಯಾವುದೆ ಸುಳಿವು ಸಿಗದ ಕಾರಣ ಸುಳಿವು ದೊರೆತರೆ ಕೂಡಲೆ ಸಮೀಪದ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ಮೇಲೆ ಅತ್ಯಾಚಾರ: ನಾಲ್ವರಿಗೆ ಜೈಲು!

ಶಿವಮೊಗ್ಗ: ಡಿಸೆಂಬರ್ 6 2020 ರಂದು ನಡೆದಿದ್ದ ಬಾಲಕಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಶಿವಮೊಗ್ಗ ಕೋರ್ಟ್‌ ತೀರ್ಪು ನೀಡಿದ್ದು, ಪ್ರಕರಣದ ನಾಲ್ವರು ಆರೋಪಿಗಳಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಿದೆ. ಕೋವಿಡ್ ಸಂದರ್ಭದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ಆರೈಕೆ ಮಾಡುತ್ತಿದ್ದ ಬಾಲಕಿಯೊಬ್ಬಳನನ್ನು ಪುಸಲಾಯಿಸಿ ಒಮಿನಿ ವಾಹನದಲ್ಲಿ ಕರೆದೊಯ್ದು ಅತ್ಯಾಚಾರವೆಸಗಲಾಗಿತ್ತು. ಶಿವಮೊಗ್ಗದಲ್ಲಿ ಕೋಮು ವಿಚಾರಕ್ಕೆ ಸೆಕ್ಷನ್ ಜಾರಿಯಾಗಿದ್ದ ಸಂದರ್ಭ ಹಾಗಾಗಿ ಊಟ, ಹಣ್ಣು, ಹಾಲು ಹತ್ತಿರದಲ್ಲಿಯೇ ಸಿಗುತ್ತಿರಲಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು, ತಾಯಿಗೆ ಊಟ ತರಲು ಪರದಾಡುತ್ತಿದ್ದ ಬಾಲಕಿಯನ್ನು ಊಟ ಕೊಡಿಸುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದರು.

ಆನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ, ವಾಪಸ್ ಆಸ್ಪತ್ರೆಯ ಬಳಿಯಲ್ಲಿ ಕರೆತಂದು ಬಿಟ್ಟಿದ್ದರು. ಈ ಅಲ್ಲಿದ್ದವರು ಗಮನಿಸಿ ಆಸ್ಪತ್ರೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ನಂತರ ಪ್ರಕರಣ ಸಂಬಂಧ ಕೇಸ್ ದಾಖಲಾಗಿತ್ತು. ಸೆಕ್ಷನ್, ಸೆಕ್ಷನ್ (366, 376 ಬಿ, 506, ಪೋಕ್ಸ್‌ ಆ್ಯಕ್ಟ್!) ಅಡಿಯಲ್ಲಿ ದಾಖಲಾಗಿದ್ದ ಕೇಸ್‌ನ ವಿಚಾರಣೆ ಮುಗಿದು ಇದೀಗ ಶಿವಮೊಗ್ಗ ಕೋರ್ಟ್‌ ತೀರ್ಪು ನೀಡಿದೆ. ಪ್ರಕರಣದ ನಾಲ್ವರು ಆರೋಪಿಗಳಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಿರುವ ಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ಹಾಕಿದ್ದು, ದಂಡ ಕಟ್ಟದಿದ್ದರೆ ಆರು ತಿಂಗಳು ಶಿಕ್ಷೆ ವಿಧಿಸಿದೆ.

ಓಮ್ಮಿಯಲ್ಲಿ ಜಾನುವಾರು ಸಾಗಣೆ: ಧರ್ಮದೇಟು

ರಿಪ್ಪನ್‌ಪೇಟೆ: ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಓಮ್ಮಿ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯನ್ನಾದರಿ ಗ್ರಾಮಸ್ಥರು ವಾಹನವನ್ನು ತಡೆದು ತಪಾಸಣೆಗೆ ಮುಂದಾಗುತ್ತಿದ್ದಂತೆ ವಾಹನ ಚಾಲಕ ತಪ್ಪಿಸಿಕೊಂಡು ಪರಾರಿಯಾಗಿದ್ದು ಇನ್ನೋರ್ವ ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿದ ಘಟನೆ ಶುಕ್ರವಾರ ರಾತ್ರಿ ಕೆಂಚನಾಲ ಗ್ರಾಮದಲ್ಲಿ ನಡೆದಿದೆ. ಸಮೀಪದ ಆಚಾಪುರ ಗ್ರಾಮದವರೆಂದು ಹೇಳಲಾಗುತ್ತಿದ್ದು ಎರಡು ಜಾನುವಾರುಗಳನ್ನು ಮತ್ತು ಓರ್ವ ಆರೋಪಿಯನ್ನು ಹಿಡಿದ ಕೆಂಚನಾಲ ಗ್ರಾಮಸ್ಥರು ಠಾಣೆಗೆ ಒಪ್ಪಿಸಿದ್ದಾರೆ. ಪಿಎಸ್‌ಐ ಪ್ರವೀಣ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪರವಾನಗಿ ಇಲ್ಲದೆ ಹಸುಗಳ ಸಾಗಾಟ

ಸಾಗರ: ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ವಿಠಲ್ ಪೈ ಅವರಿಗೆ ಸೇರಿದ ನಾಲ್ಕು ಹಸುಗಳನ್ನು ಮೂರಳ್ಳಿಯ ಶಿವರಾಜ್ ಮತ್ತು ನಾಗರಾಜ್ ಎಂಬುವವರು ಲಗೇಜ್ ಆಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ತೆಗೆದುಕೊಂಡು ಬರುತ್ತಿದ್ದಾಗ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಮುಂಡಿಗೇಸರ ವೃತ್ತದಲ್ಲಿ ತಡೆದು ನಿಲ್ಲಿಸಿದ ತನಿಖೆ ನಡೆದಿದೆ. ಶಿವರಾಜ್ ಮತ್ತು ನಾಗರಾಜ್ ಹಸುಗಳನ್ನು ಖರೀದಿಸಿ ಲಗೇಜ್ ಆಟೋದಲ್ಲಿ ಒಯ್ಯುತ್ತಿದ್ದರು. ಆದರೆ ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಹಿಂದೂ ಜಾಗರಣಾ ವೇದಿಕೆ ಮತ್ತು ಗ್ರಾಮಸ್ಥರು ಆಟೋ ಸಹಿತ ಶಿವರಾಜ್, ನಾಗರಾಜ್ ಅವರನ್ನು ಗ್ರಾಮಾಂತರ ಠಾಣೆಗೆ ಒಪ್ಪಿಗೆ ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಪ್ಪನ್‌ಪೇಟೆ: ಇನ್ನೋವಾ ಕಾರು ಪಲ್ಟಿ!

ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಜಂಬಳ್ಳಿ ತಿರುವಿನಲ್ಲಿ ಇನ್ನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಹುಂಚ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತ್ತಿದ್ದ ಟೊಯೋಟಾ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಲ್ಲಿ ನಾಲ್ವರು ಪ್ರಯಾಣಿಸುತಿದ್ದರು. ಜಂಬಳ್ಳಿ ತಿರುವಿನಲ್ಲಿ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಮನ್ (21) ಕುಮಾರ್ (21) ಇಬ್ಬರಿಗೆ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಇಬ್ಬರನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಇನ್ನೊಬ್ಬ ಪ್ರಯಾಣಿಕ ಮದನ್ ಎಂಬಾತನಿಗೆ ಸಣ್ಣಪುಟ್ಟ ಗಾಯಾಗಳಾಗಿವೆ.

Categories
ತೀರ್ಥಹಳ್ಳಿ

ಅಪೂರ್ವ ಎಸ್ ಗೌಡ ಜೀ ಕನ್ನಡ ಆಡಿಷನ್ ಅಲ್ಲಿ ಉತ್ತಮ ಸಾಧನೆ

ಅಪೂರ್ವ ಎಸ್ ಗೌಡ ಜೀ ಕನ್ನಡ ಆಡಿಷನ್ ಅಲ್ಲಿ ಉತ್ತಮ ಸಾಧನೆ
– 20 ಸಾವಿರ ಸ್ಪರ್ಧಿಗಳ ನಡುವೆಯೂ ಮಲೆನಾಡಿನ ಹಳ್ಳಿ ಪ್ರತಿಭೆಯ ಸಾಧನೆ ಪ್ರದರ್ಶನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರು ಸತೀಶ್ ಕೆ.ಎಸ್ ಮತ್ತು ಆಶಾ ಸತೀಶ್ ಇವರ ಪುತ್ರಿ ಕುಮಾರಿ ಅಪೂರ್ವ ಎಸ್ ಗೌಡ ಇವರು ಜೀ ಕನ್ನಡ ವಾಹಿನಿ ಜನಪ್ರಿಯ ಕಾರ್ಯಕ್ರಮವಾದ ಸರಿಗಮಪ ಸೀಸನ್ 20ರ ಮೆಗಾ ಆಡಿಷನ್ ನಲ್ಲಿ ಸ್ಪರ್ಧಿಸಿ ಅಮೋಘ ಪ್ರದರ್ಶನ ನೀಡಿದ್ದಾರೆ. ಹೊರದೇಶಗಳಿಂದ ಹಾಗೂ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಬಂದಂತಹ 20 ಸಾವಿರ ಸ್ಪರ್ಧಿಗಳ ನಡುವೆಯೂ ಮಲೆನಾಡಿನ ಹಳ್ಳಿ ಪ್ರತಿಭೆ ಕೊನೆ ಹಂತದವರೆಗೂ ಭಾಗವಹಿಸಿದ್ದಾರೆ. ಈಗಾಗಲೇ ಹತ್ತಾರು ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿರುವ ಅಪೂರ್ವ ಗೌಡ ಅವರಿಗೆ ಶುಭಾಶಯಗಳು.

ವಾಯ್ಸ್ ಆಫ್ ಶಿವಮೊಗ್ಗ- ಸೀಸನ್ – 04 ಗ್ರಾಂಡ್ ಫಿನಾಲೆಯಲ್ಲಿ ಅಪೂರ್ವ ಗೌಡ ರನ್ನರ್ ಅಪ್

ಶಿವಮೊಗ್ಗದ ಅರುಣೋದಯ ಇವೆಂಟ್ಸ್ ಇವರ ಸಾರಥ್ಯದಲ್ಲಿ ಕುವೆಂಪು ರಂಗಮಂದಿರ ಶಿವಮೊಗ್ಗದಲ್ಲಿ ನಡೆದ ವಾಯ್ಸ್ ಆಫ್ ಶಿವಮೊಗ್ಗ, ಸೀಸನ್ – 4 ರ ಗ್ರಾಂಡ್ ಫಿನಾಲೆಯಲ್ಲಿ ಕು.ಅಪೂರ್ವ ಎಸ್ ಗೌಡ ಇವರು ಸೆಕೆಂಡ್ ರನ್ನರ್ ಅಪ್ ಟ್ರೋಫಿ ಪಡೆದುಕೊಂಡಿದ್ದರು. ಮುಂಬರುವ ದಿನಗಳಲ್ಲಿ ಇಂತಹ ಉತ್ತಮವಾದ ವೇದಿಕೆಗಳು ಅಪೂರ್ವ ಅವರಿಗೆ ಒದಗಿಬರಲಿ ಎಂದು ಅವರ ಕುಟುಂಬದವರು ಆಶಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಏಷ್ಯಾನ್ ಗೇಮಿನಲ್ಲಿ ಭಾರತ ಐತಿಹಾಸಿಕ ಸಾಧನೆ

ಕ್ರೀಡೆಯಲ್ಲಿ ಭಾರತ ಜೈ ಹೋ..!
– ಏಷ್ಯಾನ್ ಗೇಮಿನಲ್ಲಿ ಭಾರತ ಐತಿಹಾಸಿಕ ಸಾಧನೆ
– ನೂರು ಪದಕಗಳನ್ನು ಭಾರತಾಂಬೆಯ ಮಡಿಲಿಗೆ ಹಾಕಿದ ಹೆಮ್ಮೆಯ ಕ್ರೀಡಾಪಟುಗಳು
– ಚಿನ್ನ ಗೆದ್ದ ಹಾಕಿ ತಂಡ: ಒಲಂಪಿಕ್ಸ್ ಅರ್ಹತೆ

NAMMUR EXPRESS NEWS
ಚೀನಾದ ಹ್ಯಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ನೂರು ಪದಕ ಗೆದ್ದು ಇತಿಹಾಸ ಸೃಷ್ಟಿಸಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪದಕಗಳ ಬೇಟೆಯಲ್ಲಿ ಭಾರತ ಸೆಂಚುರಿ ಬಾರಿಸಿದೆ.
ಕ್ರೀಡಾಕೂಟ ಆರಂಭವಾದ ದಿನದಿಂದ ಇಲ್ಲಿಯವರೆಗೆ ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ 100 ಪದಕಗಳಿಗೆ ಮುತ್ತಿಟ್ಟಿದ್ದಾರೆ. ಭಾರತದ ಕ್ರೀಡಾ ಪ್ರಾಧಿಕಾರವು ಈ ಐತಿಹಾಸಿಕ ಸಾಧನೆಗೆ ಕಾರಣಕರ್ತರಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಎಕ್ಸಲ್ಲಿ ಪೋಸ್ಟ್ ಮಾಡಿದೆ. ಏಷ್ಯನ್ ಗೇಮ್ ನಲ್ಲಿ ಭಾರತವು ತನ್ನ 100 ಪದಕವನ್ನು ಪಡೆಯುತ್ತಿದ್ದಂತೆ ಇತಿಹಾಸವನ್ನು ನಿರ್ಮಿಸಲಾಗಿದೆ. ಟೀಮ್ ಇಂಡಿಯಾ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಕ್ರೀಡಾಪಟುಗಳ ಕನಸುಗಳ ಶಕ್ತಿ, ಸಮರ್ಪಣೆ ಮತ್ತು ತಂಡದ ಕೆಲಸಗಳಿಗೆ ಇದು ಸಾಕ್ಷಿಯಾಗಿದೆ. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಬರೆದುಕೊಂಡಿದೆ.

ಇದುವರೆಗೆ ಭಾರತಕ್ಕೆ 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕ ಸೇರಿದಂತೆ ಒಟ್ಟು 100 ಪದಕಗಳು ಏಷ್ಯನ್ ಗೇಮ್ಸ್ಲ್ಲಿ ಸಿಕ್ಕಿವೆ. ಶುಕ್ರವಾರ ಕಾಂಪೌಡ್ ಆರ್ಚರಿ (3), ಕಬಡ್ಡಿ (2), ಬ್ಯಾಡ್ಮಿಂಟನ್ (1), ಮತ್ತು ಪುರುಷರ ಕ್ರಿಕೆಟ್ (1) ನಲ್ಲಿ ಹೆಚ್ಚಿನ ಪದಕಗಳನ್ನು ಗೆದ್ದು 100 ರ ಗಡಿ ತಲುಪಿತ್ತು. ಇಂಡೋನೇಷ್ಯಾದಲ್ಲಿ ಕಳೆದ ಆವೃತ್ತಿಯಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಅಲ್ಲಿ ದೇಶದ ಕ್ರೀಡಾಪಟುಗಳು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚಿನ ಪದಕಗಳನ್ನು ಗೆದ್ದು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದ್ದರು.

ಹಾಕಿಯಲ್ಲಿ ಭಾರತ ಕಮಾಲ್

ಹಾಕಿಯಲ್ಲೂ ಭಾರತ ಕಮಾಲ್ ಮಾಡಿದೆ. 2014ರ ಬಳಿಕ ಮೊದಲ ಬಾರಿಗೆ ಚಿನ್ನ ಗೆದ್ದಿದೆ. ಈ ಮೂಲಕ ಮುಂಬರುವ ಒಲಂಪಿಕ್ಸ್ ಅಲ್ಲಿ ಆಡಲು ಅರ್ಹತೆ ಪಡೆದಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ನಕಲಿ ದುನಿಯಾ…!ನಕಲಿ ದಾಖಲೆ ಪತ್ರಗಳ ಜಾಲ ಪತ್ತೆ
– ಮಂಗಳೂರಲ್ಲಿ ಹೆಲ್ಪ್ ಲೈನ್ ಹೆಸರಲ್ಲಿ ವಂಚನೆ ಆರೋಪ
– ಮಂಗಳೂರು : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ 20 ವರ್ಷ ಜೈಲು
– ಮಂಗಳೂರು : ವಾಟರ್ ಬಾಟಲ್‌ಗೆ ಮಾತ್ರೆ ಹಾಕಿದ ವಿದ್ಯಾರ್ಥಿಗಳು
– ಮೂಲ್ಕಿ : ವಿದ್ಯುತ್ ತಗುಲಿ ಕಾರ್ಮಿಕ ಸಾವು
– ಪಡುಬಿದ್ರಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

NAMMUR EXPRESS NEWS
ಮಂಗಳೂರು: ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಬಜೋಡಿ ಬಿಕರ್ನಕಟ್ಟೆಯ ಬರ್ನಾಡ್ ರೋಶನ್ ಮಸ್ಕರೇನಸ್(41) ಬಂಧಿತ ಆರೋಪಿ. ಈತ ಮಂಗಳೂರು ನಗರದ ಕಂಕನಾಡಿ ಪಂಪ್‌ವೆಲ್‌ನ ಹಳೆ ರಸ್ತೆಯಲ್ಲಿರುವ ವಿಶ್ವಾಸ್ ಕ್ರೌನ್ ಅಪಾರ್ಟ್‌ಮೆಂಟ್‌ನ ನೆಲ ಅಂತಸ್ತಿನಲ್ಲಿರುವ ಕೊಠಡಿಯೊಂದರಲ್ಲಿ “ಹೆಲ್ಫ್ ಲೈನ್ ಮಂಗಳೂರು’ ಎಂಬ ಹೆಸರಿನ ಸಂಸ್ಥೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಅಂಕ ಪ್ರಮಾಣಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿಗಳ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಇತರೇ ದಾಖಲಾತಿಗಳನ್ನು ಮಾಡಿಕೊಟ್ಟು ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿದ್ದ.

ಆರೋಪಿ ವಿವಿಧ ಹೆಸರಿನಲ್ಲಿ ತಯಾರಿಸಿದ ನಕಲಿ ಆಧಾರ್ ಕಾರ್ಡ್‌ಗಳು, ನಕಲಿ ರೇಷನ್ ಕಾರ್ಡ್, ನಕಲಿ ಉದ್ದಿಮೆ ಪರವಾನಿಗೆ ಪತ್ರ, ನಕಲಿ ಎಸ್ಎಸ್ಎಲ್‌ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಳೆದ 3 ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದುಕೊಂಡವರು ಅವುಗಳನ್ನು ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿ ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ನಕಲಿ ಪ್ರಮಾಣಪತ್ರಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಲ್ಯಾಪ್‌ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್,ಬಯೋ ಮೆಟ್ರಿಕ್ ಡಿವೈಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಕಲಿ ದಾಖಲೆ ಪತ್ರ ತಯಾರಿಸುವ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು

ಮಂಗಳೂರು : ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ-2 ನ್ಯಾಯಾಲಯವು 20 ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು ನೀಡಿದೆ.ಹಾವೇರಿ ಜಿಲ್ಲೆಯ ನೆಲೋಗಲ್ ಗ್ರಾಮದ ಬೆನಕರಾಜ್ ಆಲಿಯಾಸ್ ಲಮಾಣಿ ಶಿಕ್ಷೆಗೊಳಗಾದಾತ ಈತ ಹೋಮ್ ನರ್ಸ್ ಆಗಿದ್ದ ನೊಂದ ಬಾಲಕಿಯ ಅಜ್ಜ ಅಸೌಖ್ಯದಿಂದ ಸುರತ್ಕಲ್ ಪರಿಸರದ ಮನೆಯಲ್ಲಿದ್ದರು. ಅವರನ್ನು ನೋಡಿಕೊಳ್ಳಲು ಆರೋಪಿಯನ್ನು ಕರೆಸಿಕೊಳ್ಳಲಾಗಿತ್ತು. 2022ರ ಜನವರಿಯಲ್ಲಿ ಒಂದು ದಿನ ಬಾಲಕಿಯ ತಾಯಿ ಔಷಧ ತರಲೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದ ಅಲ್ಲದೆ ಕಚ್ಚಿ ಗಾಯಗೊಳಿಸಿದ್ದ ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.

ವಾಟರ್ ಬಾಟಲ್‌ಗೆ ಮಾತ್ರೆ ಹಾಕಿದ ವಿದ್ಯಾರ್ಥಿಗಳು!

ಮಂಗಳೂರು: ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ ಕಡಿಮೆ ಅಂಕ ನೀಡಿದ ದ್ವೇಷಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಶಿಕ್ಷಕರಿಗೆ ಕುಡಿಯುವ ನೀರಿನ ಬಾಟಲಿಯ ಅವಧಿ ಮುಗಿದ ಮಾತ್ರೆ ಹಾಕಿ ಕುಡಿಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಮಾತ್ರೆ ಬೆರೆತ ನೀರನ್ನು ಸೇವಿಸಿದ ಇಬ್ಬರು ಶಿಕ್ಷಕರು ಅಸ್ವಸ್ಥಗೊಂಡಿದ್ದಾರೆ.ಓರ್ವ ಶಿಕ್ಷಕರಿಗೆ ಮುಖದಲ್ಲಿ ಊಟ ಉಂಟಾಗಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡುಬಂದಿದ್ದು ಸೂಕ್ಷ್ಮವಾಗಿ ಗಮನಿಸಿದಾಗ ನೀರಲ್ಲಿ ಮಾತ್ರೆಗಳಿರುವುದು ಕಂಡುಬಂದಿದೆ.

ಈ ಕುರಿತು ವಿಚಾರಿಸಿ ಸಿಸಿಟಿವಿ ಗಮನಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ. ಉಳ್ಳಾಲದ ಖಾಸಗಿ ಶಾಲೆಯಲ್ಲಿ ನಡೆದ ಘಟನೆ ಇದಾಗಿದೆ, 6 ನೇ ತರಗತಿ ವಿದ್ಯಾರ್ಥಿನಿಯರ ಈ ಅಟಾಟೋಪ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಪೊಲೀಸ್ ದೂರು ಕೊಡದೇ ಇದ್ದು, ಸದ್ಯ ಅವರ ಪೋಷಕರನ್ನ ಕರೆಸಿ ಎಚ್ಚರಿಕೆ ನೀಡಲಾಗಿದೆ.

ವಿದ್ಯುತ್ ತಗುಲಿ ಕಾರ್ಮಿಕ ಸಾವು

ಮೂಲ್ಕಿ: ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ವಯರ್‌ನಿಂದ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಯುವಕ ಮೃತಪಟ್ಟಿದ್ದಾನೆ. ಝಾರ್ಖಂಡ್ ಮೂಲದ ಬಬ್ಲಿ ಬಸೇರಾ (27) ಮೃತ ಯುವಕ. ಮೇಸ್ತ್ರಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಅವರು ರಾತ್ರಿ 11 ಗಂಟೆ ಸುಮಾರಿಗೆ ಕಟ್ಟಡದಲ್ಲಿ ವಯರ್ ಅನ್ನು ಸುತ್ತಿ ಬದಿಗಿರಿಸಲು ಹೋದಾಗ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದೆ.ಮೂಲ್ಕಿ ಪೊಲೀಸರು ನಿರ್ಮಾಣ ಕೆಲಸದಲ್ಲಿ ನಿರ್ಲಕ್ಷ್ಯತನದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

ಪಡುಬಿದ್ರಿ: ಸಾಂತೂರು ಗ್ರಾಮದ ನಿವಾಸಿ ಸುರೇಶ್ ಮೂಲ್ಯ (51) ಅವರು ಕಾಂಜರಕಟ್ಟೆ ಕಾಮತ್ ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅ, 5ರಂದು ಬೆಳಗ್ಗೆ ಮನೆ ಬಿಟ್ಟು ಹೋದವರು ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಧಿ ಮೈಬಣ್ಣ, ದುಂಡು ಮುಖ, 170 ಸೆ.ಮೀ. ಎತ್ತರ ಇರುವ ಇವರು ಸಾಮಾನ್ಯ ಮೈಕಟ್ಟು ಹೊಂದಿದ್ದಾರೆ. ಹಿಂದಿ, ಕನ್ನಡ ಹಾಗೂ ತುಳು ಮಾತನಾಡಬಲ್ಲ ಅವರು ಕೆಂಪು, ಕಾಫಿ, ಬಿಳಿ ಬಣ್ಣದ ಗೆರೆಗಳುಳ್ಳ ಟಿ ಶರ್ಟ್ ಮತ್ತು ನೇರಳೆ ಲುಂಗಿ ಧರಿಸಿದ್ದರು. ಇವರ ಬಗ್ಗೆ ಯಾರಿಗಾದರೂ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ (08202555452)ಯನ್ನು ಸಂಪರ್ಕಿಸಲು ಕೋರಲಾಗಿದೆ.

Categories
ಉದ್ಯೋಗ ಸುದ್ದಿ

ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್..!

ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್..!
– ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭರ್ಜರಿ ಉದ್ಯೋಗವಕಾಶ!
– ಎಸ್ ಬಿಐ ನಲ್ಲಿ 2000 ಹುದ್ದೆಗಳಿಗೆ ಅರ್ಜಿ ಆಹ್ವಾನ

NAMMUR EXPRESS NEWS
ಎಸ್‌ಬಿಐ ಅಧಿಕೃತ ಅಧಿಸೂಚನೆಯ ಮೂಲಕ ಪ್ರೊಬೇಷನರಿ ಆಫೀಸರ್ (ಪಿಒ) ಪೋಸ್ಟ್‌ಗಳನ್ನು ಭರ್ತಿ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಎಸ್ ಬಿಐ ಹುದ್ದೆಯ ಅಧಿಸೂಚನೆ

ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಗಳ ಸಂಖ್ಯೆ: 2000
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಯ ಹೆಸರು: ಪ್ರೊಬೇಷನರಿ ಅಧಿಕಾರಿ (PO)
ವೇತನ: ರೂ.36000-63840/- ಪ್ರತಿ ತಿಂಗಳು

ಎಸ್ ಬಿಐ ನೇಮಕಾತಿ 2023 ಅರ್ಹತಾ ವಿವರಗಳು:

ಶೈಕ್ಷಣಿಕ ಅರ್ಹತೆ: ಎಸ್‌ಬಿಐ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-Apr-2024 ರಂತೆ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

– OBC (NCL) ಅಭ್ಯರ್ಥಿಗಳು: 03 ವರ್ಷಗಳು
– SC/ST ಅಭ್ಯರ್ಥಿಗಳು: 05 ವರ್ಷಗಳು
– PwBD ಅಭ್ಯರ್ಥಿಗಳು: 10 ವರ್ಷಗಳು
– PwBD (OBC) ಅಭ್ಯರ್ಥಿಗಳು: 13 ವರ್ಷಗಳು
– PwBD (SC/ST) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ:
– SC/ST/PwBD ಅಭ್ಯರ್ಥಿಗಳು: ಇಲ್ಲ ಸಾಮಾನ್ಯ/EWS/OBC ಅಭ್ಯರ್ಥಿಗಳು: ರೂ.750/-
– ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

– ಪೂರ್ವಭಾವಿ ಪರೀಕ್ಷೆ
– ಮುಖ್ಯ ಪರೀಕ್ಷೆ
– ಸೈಕೋಮೆಟ್ರಿಕ್ ಪರೀಕ್ಷೆ
– ಗುಂಪು ವ್ಯಾಯಾಮ
– ಸಂದರ್ಶನ/ಗುಂಪು ಚರ್ಚೆ
– ಡಾಕ್ಯುಮೆಂಟ್ ಪರಿಶೀಲನೆ
– ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವುದು ಹೇಗೆ
– ಮೊದಲನೆಯದಾಗಿ ಎಸ್ ಬಿಐ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
– ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಗ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
– ಎಸ್‌ಬಿಐ ಪ್ರೊಬೇಷನರಿ ಆಫೀಸರ್ (ಪಿಒ) ಆನ್‌ಲೈನ್‌ನಲ್ಲಿ ಅನ್ವಯಿಸು – ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
– ಎಸ್‌ಬಿಐ ಪ್ರೊಬೇಷನರಿ ಆಫೀಸರ್ (ಪಿಒ) ಆನ್‌ಲೈನ್‌ನಲ್ಲಿ ಅನ್ವಯಿಸು – ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
– ಎಸ್‌ಬಿಐ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
– ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
– ಎಸ್ ಬಿಐ ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.

Categories
ಬೆಂಗಳೂರು

ವಾಹನ ಸವಾರರಿಗೆ ಪೆಟ್ರೋಲ್ ಡಿಸೇಲ್ ಶಾಕ್

ವಾಹನ ಸವಾರರಿಗೆ ಪೆಟ್ರೋಲ್ ಡಿಸೇಲ್ ಶಾಕ್
– ಡಿಸೇಲ್ ದರ 20 ರೂ. ಹೆಚ್ಚಳ..!
– ಕಚ್ಚಾ ತೈಲ ಬೆಲೆಯಲ್ಲಿ 3 ಡಾಲರ್ ಇಳಿಕೆ

NAMMUR EXPRESS NEWS
ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದೆ. ಅದ್ರಲ್ಲೂ ಡಿಸೇಲ್ ಬೆಲೆಯಲ್ಲಿ ಒಂದು ವಾರದ ಅವಧಿಯಲ್ಲಿ ಬರೋಬ್ಬರಿ 20 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಡಿಸೇಲ್ ವಾಹನ ಮಾಲೀಕರಿಗೆ ಶಾಕ್ ಕೊಟ್ಟಿದೆ. ಕೇವಲ ಒಂದೇ ವಾರದ ಅವಧಿಯಲ್ಲಿ ಡಿಸೇಲ್ ಬೆಲೆಯಲ್ಲಿ 20 ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಡೀಸೆಲ್ ಬೆಲೆ ರೂ.122ಕ್ಕೆ ಏರಿಕೆ ಕಂಡಿದ್ದರೆ, ಮುಂಬೈನಲ್ಲಿ ರೂ.130 ಹಾಗೂ ಚೆನ್ನೈನಲ್ಲಿ ರೂ.129ಕ್ಕೆ ತಲುಪಿದೆ. ಆದರೆ ಡಿಸೇಲ್ ಬೆಲೆ ಏರಿಕೆ ಆಗಿರುವುದು ಸರಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಅಲ್ಲ ಬದಲಾಗಿ, ಖಾಸಗಿ ಶೆಲ್ ಬಂಕ್‌ಗಳಲ್ಲಿ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 90 ಡಾಲರ್ ಗೆ ಏರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಖಾಸಗಿ ಸ್ವಾಮ್ಯದ ಶೇಲ್ ಬಂಕ್‌ಗಳಲ್ಲಿ ಪ್ರತೀ ಲೀಟರ್ ಡಿಸೇಲ್ ಬೆಲೆಯಲ್ಲಿ ಏರಿಕೆ ಆಗಿದೆ. ಆದರೆ ಸತತ 18 ತಿಂಗಳಿನಿಂದಲೂ ಸರಕಾರಿ ಬಂಕ್ ಗಳಲ್ಲಿ ಡಿಸೇಲ್ ದರ ಏರಿಕೆಯಾಗಿಲ್ಲ. ಹೀಗಾಗಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. ಬೆಂಗಳೂರಿನ ಸರಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ 87.99 ರೂ. ಇದೆ.

ಕಚ್ಚಾ ತೈಲ ಬೆಲೆಯಲ್ಲಿ 3 ಡಾಲರ್ ಇಳಿಕೆ:

ಒಂದೆಡೆ ಖಾಸಗಿ ಕಂಪೆನಿಗಳು ತೈಲ ಬೆಲೆಯಲ್ಲಿ ಬಾರಿ ಏರಿಕೆ ಮಾಡಿದ್ದರೂ ಕೂಡ ಜಾಗತಿಕ ಆರ್ಥಿಕ ಕುಸಿತದ ಭೀತಿಯ ನಡುವೆ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 3 ಡಾಲರ್‌ಗಿಂತ ಹೆಚ್ಚು ಕುಸಿದಿದೆ. ಈ ಮೂಲಕ ಅಕ್ಟೋಬರ್ 5 ರಂದು ಪ್ರತಿ ಬ್ಯಾರೆಲ್ ಬೆಲೆ 86 ಡಾಲರ್‌ಗೆ ಇಳಿದಿದೆ. ಡಿಸೆಂಬರ್ ವರೆಗೆ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಸೌದಿ ಅರೇಬಿಯಾ ಮತ್ತು ರಷ್ಯಾ ಘೋಷಣೆ ಮಾಡಿದೆ. ಇದರ ನಡುವಲ್ಲೇ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡಿದೆ.

Categories
ಮಲ್ನಾಡ್ ಶಿವಮೊಗ್ಗ

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಗೆ ಮಲೆನಾಡು!

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಗೆ ಮಲೆನಾಡು!
– ಕುವೆಂಪು ವಿಶ್ವವಿದ್ಯಾಲಯದ ಇಬ್ಬರಿಗೆ ಸ್ಥಾನ
– ಬಿ.ಜೆ.ಗಿರೀಶ್, ಬಿ.ಇ.ಕುಮಾರಸ್ವಾಮಿ ಸತತ 3ನೇ ವರ್ಷ ಸ್ಥಾನ

NAMMUR EXPRESS NEWS
ಶಿವಮೊಗ್ಗ: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಶೇ.2ರಷ್ಟು ಅತ್ಯುತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಬಿ.ಜೆ.ಗಿರೀಶ್ ಮತ್ತು ಬಿ.ಇ.ಕುಮಾರಸ್ವಾಮಿ ಸತತ ಮೂರನೇ ವರ್ಷ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜಾನ್ ಅಯೋನ್ನಿಡಿಸ್ ಅ.4ರಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇವರು ಸ್ಥಾನ ಪಡೆದಿದ್ದು, ಇಬ್ಬರ ವಿವರ ಅಂತರ್ಜಾಲದಲ್ಲಿ ಲಭ್ಯವಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, ಸಹ ಲೇಖನಗಳು, ಎಚ್-ಇಂಡೆಕ್ಸ್ ಸೇರಿದಂತೆ ಹಲವು ಸಂಯೋಜಿತ ಮಾನದಂಡಗಳನ್ನು ಬಳಸಿ ಜಗತ್ತಿನ ಅತ್ಯುತ್ತಮ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸಿ ದತ್ತಾಂಶ ಪ್ರಕಟಿಸಲಾಗುತ್ತದೆ.

ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡುವ ಸಂಪ್ರದಾಯ ಶುರುವಾಗಿದ್ದು 2018ರಲ್ಲಿ ಸಾಧಕರ ಪಟ್ಟಿಯಲ್ಲಿ 40,686ನೇ ಸ್ಥಾನ ಪಡೆದಿರುವ ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಬಿ.ಜೆ. ಗಿರೀಶ್ ಎಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯಗಳ ಕುರಿತು ಅತ್ಯುತ್ತಮ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಔದ್ಯೋಗಿಕ ರಸಾಯನ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಬಿ.ಇ. ಕುಮಾರಸ್ವಾಮಿ 1,79,264ನೇ ಸ್ಥಾನದಲ್ಲಿದ್ದು, ಸತತ ಮೂರನೇ ವರ್ಷ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಎಸ್.ವೆಂಕಟೇಶ್ ತಿಳಿಸಿದ್ದಾರೆ.