Categories
ರಾಜ್ಯ

ಟಾಪ್ ನ್ಯೂಸ್

ಗದ್ದೆಯಲ್ಲಿದ್ದವನನ್ನು ತಿವಿದು ಕೊಂದ ಹಂದಿ!
– ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದ ಘಟನೆ
– ರೈತನ ಕೊಂದ ಹಂದಿಯನ್ನು ಹತ್ಯೆ ಮಾಡಿದ ಜನ!
– ಹಾವೇರಿ: ಅರೆಬೆತ್ತಲೆ ಮಾಡಿ ಥಳಿತ: ಕೇಸ್
– ದಾವೂದ್ ಇಬ್ರಾಹಿಂಗೆ ವಿಷಪ್ರಾಶನ!?

NAMMUR EXPRESS NEWS
ಹಾಸನ: ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ರೈತನ ಮೇಲೆ ಕಾಡು ಹಂದಿಯೊಂದು ಬೀಭತ್ಸ ದಾಳಿ ನಡೆಸಿ ರೈತನನ್ನ ಸಾಯಿಸಿದೆ. ಅಲ್ಲದೆ ತಡೆಯಲು ಬಂದ ಮಹಿಳೆಯರ ಮೇಲೂ ದಾಳಿ ನಡೆಸಿದ ಹಂದಿಯು ಸಿಕ್ಕಸಿಕ್ಕಲ್ಲಿ ತಿವಿದಿದೆ. ಈ ಘಟನೆಯಲ್ಲಿ ಯಜಮಾನರೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ದೊಣ್ಣೆ, ಲಟ್ಟಾ, ಕುಡುಗೋಲು ಇತ್ಯಾದಿಗಳನ್ನ ತೆಗೆದುಕೊಂಡು ಹಂದಿಯನ್ನ ಅಟ್ಟಾಡಿಸಿ ಹುಡುಕಿ ಕೊಂದಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಾರಗೌಡನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ರಾಜೇಗೌಡ ಎಂಬ 63 ವರ್ಷದ ರೈತ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಮನುಷ್ಯರ ಕಂಡರೆ ಓಡುವ ಕಾಡು ಹಂದಿ ಹೀಗೆ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ಇನ್ನು ಗ್ರಾಮಸ್ಥರು ಪ್ರತಿದಾಳಿಯಲ್ಲಿ ಹಂದಿಯನ್ನು ಸಹ ಸಾಯಿಸಿದ್ದಾರೆ. ಪ್ರಕರಣ ಕುತೂಹಲ ಮೂಡಿಸಿದ್ದು, ಅರಣ್ಯ ಇಲಾಖೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

ಅರೆಬೆತ್ತಲೆ ಮಾಡಿ ಥಳಿತ: ಕೇಸ್

ಯುವಕ-ಯುವತಿ ಪರಸ್ಪರ ಪ್ರೀತಿಸಿ ಓಡಿ ಹೋದ ಕಾರಣಕ್ಕೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದಲ್ಲಿ ಯುವತಿಯ ಕಡೆಯವರು ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ. ಚಳಗೇರಿ ಗ್ರಾಮದ ಯುವತಿಯೊರ್ವಳು ರಾಣೆಬೆನ್ನೂರು ತಾಲುಕಿನ ಮುದೇನೂರ ಗ್ರಾಮದ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ಈ ಪ್ರಕರಣದಲ್ಲಿ ಹುಡುಗ- ಹುಡುಗಿ ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಹುಡುಗಿಯ ಕಡೆಯವರು ಅವರಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಿದ್ದು ಪೊಲೀಸ್ ಠಾಣೆ ಎದುರು ಅವರ ಕಡೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ.

ದಾವೂದ್ ಇಬ್ರಾಹಿಂಗೆ ವಿಷಪ್ರಾಶನ!?

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದಲ್ಲಿ ವಿಷಪ್ರಾಶನ ಮತ್ತು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಊಹಾಪೋಹ ಇದೀಗ ಭಾರೀ ಸದ್ದು ಮಾಡುತ್ತಿದೆ. ಆದರೆ ಆತ ಬದುಕಿದ್ದಾನಾ… ಮೃತ ಪಟ್ಟಿದ್ದಾನಾ ಅಥವಾ ಆತನಿಗೆ ವಿಷ ಪ್ರಾಶನ ಮಾಡಿದ್ದು ಹೌದಾ ಎಂಬ ಸಂಗತಿಗಳು ಈಗ ಅನೇಕ ಪ್ರಶ್ನೆ ಹುಟ್ಟು ಹಾಕಿದೆ. ಜಾಗತಿಕ ಇಂಟರ್ ನೆಟ್ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಇಂಟರ್ ನೆಟ್ ವಾಚ್ ಡಾಗ್ ನೆಟ್ಬ್ಲಾಕ್ಸ್ ಭಾನುವಾರ ಸಂಜೆ ಸುಮಾರು ಏಳು ಗಂಟೆಗಳ ಕಾಲ ಪಾಕಿಸ್ತಾನದ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್‌ಗಳ ಮೇಲೆ ನಿರ್ಬಂಧಗಳನ್ನು ಸೂಚಿಸುವ ಮೆಟ್ರಿಕ್‌ಗಳನ್ನು ಬಿಡುಗಡೆ ಮಾಡಿದೆ. ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಂಡು ಜಾಗತಿಕ ನಿರ್ಬಂಧಗಳಿಂದ ತಪ್ಪಿಸಿಕೊಂಡಿರುವ 67 ವರ್ಷದ ಇಬ್ರಾಹಿಂ ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರ, ರಿಯಲ್ ಎಸ್ಟೇಟ್, ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಯಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಎಳ್ಳಮಾವಾಸ್ಯೆಗೆ ಸಜ್ಜು!

ತೀರ್ಥಹಳ್ಳಿ ಎಳ್ಳಮಾವಾಸ್ಯೆಗೆ ಸಜ್ಜು!
– ಜ.11ರಂದು ತೀರ್ಥಸ್ನಾನ, ಜ.12ರಂದು ರಥೋತ್ಸವ, ಜ.13ರಂದು ತೆಪ್ಪೋತ್ಸವ
– ಜಾತ್ರಾ ಸಮಿತಿ ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಆಯ್ಕೆ.. ಸಮಿತಿಯಲ್ಲಿ ಯಾರು..?

NAMMUR EXPRESS NEWS
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಶುರುವಾಗಿದೆ. ತೀರ್ಥಹಳ್ಳಿ ಯಲ್ಲಿ ಜನವರಿ 11 ರಿಂದ 13ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಸಲು ಆಡಳಿತ ಹಾಗೂ ಜಾತ್ರಾ ಸಮಿತಿ ನಿರ್ಧಾರ ಮಾಡಿದೆ. ಜ.11ರಂದು ತೀರ್ಥಸ್ನಾನ, ಜ.12ರಂದು ರಥೋತ್ಸವ, ಜ.13ರಂದು ತೆಪ್ಪೋತ್ಸವ ನಡೆಯಲಿದೆ. ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ನಡೆದಿದೆ.

ಎಳ್ಳಮಾವಾಸ್ಯೆ ಜಾತ್ರಾ ಸಮಿತಿಯ ಸಂಚಾರಕರಾಗಿ ಧಾರ್ಮಿಕ ಮುಖಂಡರು, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಸರ್ವನುಮತದಿಂದ ಆಯ್ಕೆ ಆಗಿದ್ದಾರೆ. ಆರ್ಥಿಕ ಸಮಿತಿಯ ಸಂಚಾಲಕರನ್ನಾಗಿ ಅಶೋಕ್ ಶೆಟ್ಟಿ ಮತ್ತು ಕಿಶೋರ್ ನೇಮಕಗೊಂಡಿದ್ದಾರೆ. ಇನ್ನುಳಿದಂತೆ ಈ ಹಿಂದಿನ ಸಾಲಿನ ಎಲ್ಲಾ ಪದಾಧಿಕಾರಿಗಳು ಹಾಗೂ ಕೆಲವೊಂದಿಷ್ಟು ಮಂದಿ ನೂತನ ಪದಾಧಿಕಾರಿಗಳು ವಿವಿಧ ಉಪ ಸಮಿತಿಗಳ ಸಂಚಾಲಕರು ಮತ್ತು ಸದಸ್ಯರಾಗಿ ಜಾತ್ರಾ ಸಮಿತಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಸುಮಾರು 15 ಲಕ್ಷ ವೆಚ್ಚದಲ್ಲಿ ಆಚರಣೆ ಮಾಡಲು ನಿರ್ಧಾರ ಮಾಡಲಾಯಿತು.

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕುರಿಯ ಕೋಸ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಷ್ಮಾ,ತೀರ್ಥಹಳ್ಳಿ ತಹಸೀಲ್ದಾರ್ ಜಕ್ಕಣ್ಣಗೌಡರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನ ಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.

Categories
ಬೆಂಗಳೂರು ರಾಜ್ಯ

ಹೊಸ ವರ್ಷದ ಜೋಶ್ ಶುರು!

ಹೊಸ ವರ್ಷದ ಜೋಶ್ ಶುರು!
– ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಿಸಲು ಸಜ್ಜು
– ಹೊಸ ಹೊಸ ವಸ್ತು ಖರೀದಿಗೆ ಸಿದ್ಧತೆ
– ಡಿ.31ಕ್ಕೆ ಹೆಚ್ಚಿನ ನಿರ್ಬಂಧ ಬೇಡ: ಮನವಿ

NAMMUR EXPRESS NEWS
ಬೆಂಗಳೂರು: ಇನ್ನೇನು 2023ರ ಕೊನೆಯ ತಿಂಗಳಾದ ಡಿಸೆಂಬರ್ ಮುಗಿದು 2024 ಪ್ರಾರಂಭವಾಗಲು ದಿನಗಣನೆ ಆರಂಭವಾಗಿದ್ದು, ಜನರು ಅದ್ದೂರಿಯಾಗಿ ಹೊಸ ವರ್ಷ ಆಚರಿಸಲು ಸಜ್ಜುಗೊಂಡಿದ್ದಾರೆ. ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಹೋಟೆಲ್, ರೆಸಾರ್ಟ್‌, ಹೋಂ ಸ್ಟೇ ಮತ್ತು ಬಾರ್,ಪಬ್‌ಗಳ ಮಾಲೀಕರು ಲಾಭದ ನಿರೀಕ್ಷೆಯಲ್ಲಿದ್ದು, ಡಿಸೆಂಬರ್ 31 ರಂದು ಜನರನ್ನು ಸೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಇನ್ನು ಬಟ್ಟೆ, ಚಿನ್ನ, ವಾಹನ ಶೋ ರೂಂಗಳು ಗ್ರಾಹಕರಿಗೆ ಹೊಸ ವರ್ಷದ ಆಫರ್ ಬಿಡುಗಡೆ ಮಾಡುತ್ತಿವೆ. ಅಲ್ಲದೆ, ಹೊಸ ವರ್ಷದ ಮುನ್ನಾದಿನದಂದು ಹೆಚ್ಚಿನ ನಿರ್ಬಂಧಗಳನ್ನು ವಿಧಿಸದಂತೆ ಅಧಿಕಾರಿಗಳಿಗೆ ವರ್ತಕರು ಮನವಿ ಮಾಡಿಕೊಂಡಿದ್ದಾರೆ. ಹಲವೆಡೆ ಈವೆಂಟ್‌ಗಳನ್ನು ಆಯೋಜಿಸಲು ಡಿಜೆ, ಲೈಟಿಂಗ್ಸ್ ಹಾಕಿ ನಟರು ಮತ್ತು ಗಾಯಕರನ್ನು ಆಹ್ವಾನಿಸಲು ರೆಸಾರ್ಟ್ ಮತ್ತು ಪಬ್ ಮಾಲೀಕರು ನಿರ್ಧರಿಸಿದ್ದಾರೆ. ಮತ್ತು ಈ ವರ್ಷ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಗಳಿವೆ.

ಮಧ್ಯದ ಬೆಲೆಯಲ್ಲಿ ಏರಿಕೆ!?

ಇನ್ನು ಹೊಸ ವರ್ಷವಾಗಿರುವುದರಿಂದ ಡಿ.31 ಹಾಗೂ ಜ.1ರಂದು ಎಲ್ಲೆಡೆ ಪಾರ್ಟಿ ಮಾಡುವುದರಿಂದ ಮದ್ಯಕ್ಕೆ ಡಿಮ್ಯಾಂಡ್ ಹೆಚ್ಚಾಗಲಿದ್ದು ಮದ್ಯದ ಬೆಲೆಯು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.

ಕರೋನಾ ಕರಿ ನೆರಳು!

ನೆರೆಯ ಕೇರಳದಲ್ಲಿ ಕರೋನಾ ಸಂಖ್ಯೆ ಹೆಚ್ಚಿರುವುದರಿಂದ ರಾಜ್ಯದ ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಹೀಗಾಗಿ ಕರೋನಾ ಕರಿ ನೆರಳು ಇದೀಗ ಹೊಸ ವರ್ಷದ ಆಚರಣೆ ಮೇಲೂ ಬೀಳುವ ಸಾಧ್ಯತೆ ಇದೆ.

ವ್ಯಾಪಾರ ಹೆಚ್ಚಾಗುವ ನಿರೀಕ್ಷೆ

ವ್ಯಾಪಾರಿಗಳು, ಉದ್ಯಮಗಳಲ್ಲಿ ಹೊಸ ವರ್ಷ ಉತ್ತಮ ವ್ಯಾಪಾರವಾಗುವ ನಿರೀಕ್ಷೆ ಇದೆ. ಇನ್ನು ಬಟ್ಟೆ, ಚಿನ್ನ, ಫ್ಯಾಷನ್, ವಾಹನ ಶೋ ರೂಂಗಳು ಗ್ರಾಹಕರಿಗೆ ಹೊಸ ವರ್ಷದ ಆಫರ್ ಬಿಡುಗಡೆ ಮಾಡುತ್ತಿವೆ.. ಹೊಸ ವರ್ಷದ ಗಿಫ್ಟ್ ಐಟೆಮ್ಸ ಹೆಚ್ಚಿನ ಡಿಮ್ಯಾಂಡ್ ಬರಲಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕುವೆಂಪು ಶಾಲೆಯ ಅಭಿವೃದ್ಧಿ ಪರ್ವ!

ತೀರ್ಥಹಳ್ಳಿ ಕುವೆಂಪು ಶಾಲೆಯ ಅಭಿವೃದ್ಧಿ ಪರ್ವ!
– ಹೆಚ್ಚುವರಿ ಕೊಠಡಿ, ನವೀಕೃತ ಕಾಮಗಾರಿಗಳ ಉದ್ಘಾಟನೆ
– ಇತಿಹಾಸ ಹೊಂದಿರುವ ಶಾಲೆಗೆ ಹೊಸ ಕಳೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಸಮೀಪ ಇರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ (ಕುವೆಂಪು) ಶಾಲೆ,ತೀರ್ಥಹಳ್ಳಿ, ಹೆಚ್ಚುವರಿ ಕೊಠಡಿ ಉದ್ಘಾಟನೆ ಹಾಗೂ ನವೀಕೃತ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ಶಾಲೆಯ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಮಾಜಿ ಗೃಹ ಸಚಿವರು, ಶಾಸಕರಾದ ಆರಗ ಜ್ಞಾನೇಂದ್ರ ಅವರು ಸುಮಾರು 51.5 ಲಕ್ಷ ವೆಚ್ಚದ ಕಾಮಗಾರಿಯನ್ನು ಉದ್ಘಾಟನೆ ಮಾಡಿದರು.

ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಂಗಮ್ಮ,ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ. ಗಣಪತಿ, ಸದಸ್ಯರಾದ ಸಂದೇಶ್ ಜವಳಿ, ಜ್ಯೋತಿ ಗಣೇಶ್, ಸೊಪ್ಪುಗುಡ್ಡೆ ರಾಘವೇಂದ್ರ, ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಅಧ್ಯಕ್ಷರಾದ ಕಡಿದಾಳ್ ಪ್ರಕಾಶ್, ತಹಸೀಲ್ದಾರ್ ಜಕ್ಕಣ್ಣ ಗೌಡರ್, ತಾಪಂ ಸಿಇಓ ಶೈಲಾ, ಶಿಕ್ಷಣಾಧಿಕಾರಿ ಗಣೇಶ್, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಶ್ರೀ ಕುರಿಯಾಕೋಸ್, ಅಣ್ಣಪ್ಪ ಹೆಚ್.ಕೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್, .ನಾಗರಾಜ್ ಜೆ. ಮುಖ್ಯ ಶಿಕ್ಷಕರು, ಭಾರತಿ ಕೆ. ಸಹ ಶಿಕ್ಷಕರು, ಹೆಚ್.ಎಸ್. ಅಭಿಲಾಷ್ ಕಿ.ಇಂ. ಪಂ.ರಾ.ಇಂ.ಉಪವಿಭಾಗ ತೀರ್ಥಹಳ್ಳಿ, ಸತೀಶ್ ಶೆಟ್ಟಿ, ಉಪಾಧ್ಯಕ್ಷರು, ಎಸ್.ಡಿ.ಎಂ.ಸಿ. ಸ.ಮಾ.ಹಿ.ಪ್ರಾ.ಬಾ (ಕುವೆಂಪು) ಶಾಲೆ ತೀರ್ಥಹಳ್ಳಿ, ಗೋಪಾಲಕೃಷ್ಣ, ಅಮರನಾಥ ಶೆಟ್ಟಿ ಸೇರಿ ಶಿಕ್ಷಕರು, ಪೋಷಕರು ಹಾಜರಿದ್ದರು.

ಇತಿಹಾಸ ಹೊಂದಿರುವ ಶಾಲೆಗೆ ಹೊಸ ಕಳೆ!

ತೀರ್ಥಹಳ್ಳಿ ಸರ್ಕಾರಿ ಶಾಲೆಗಳಲ್ಲಿ ಇತಿಹಾಸ ಹೊಂದಿರುವ ಈ ಶಾಲೆಗೆ ಈಗ ಹೊಸ ಕಳೆ ಬಂದಿದೆ. ಹೊಸ ಕಟ್ಟಡ, ಡಿಜಿಟಲ್ ಕ್ಲಾಸ್ ರೂಂ, ಹೊಸ ಕುರ್ಚಿ, ಬೆಂಚು, ಅಡುಗೆ ಕೋಣೆ ಹೀಗೆ ಅನೇಕ ಹೊಸ ಯೋಜನೆಗಳು ಆಗಿದೆ.

 

Categories
ಬೆಂಗಳೂರು ರಾಜ್ಯ

ಶಾಲೆಗೂ ಬರಲಿದೆ ಸೆಮಿಸ್ಟರ್ ಪದ್ಧತಿ!

ಶಾಲೆಗೂ ಬರಲಿದೆ ಸೆಮಿಸ್ಟರ್ ಪದ್ಧತಿ!
– ಶಾಲಾ ಮಕ್ಕಳ ಇನ್ನು ದೊಡ್ಡ ಬ್ಯಾಗ್ ಹೊರಬೇಕಿಲ್ಲ!
– ಮುಂದಿನ ವರ್ಷದಿಂದ ಹೊಸ ಪಠ್ಯ ಕ್ರಮ ಜಾರಿ
– 2 ಭಾಗಗಳಾಗಿ ಪಠ್ಯ ಮುದ್ರಿಸಲು ಶಿಕ್ಷಣ ಇಲಾಖೆ ನಿರ್ಧಾರ

NAMMUR EXPRESS NEWS
ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಬ್ಯಾಗ್‌ ಹೊರೆ ತಗ್ಗಿಸುವ ನಿಟ್ಟಿಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಮುಂದಿನ ವರ್ಷದಿಂದ ಪಠ್ಯ ಗಳನ್ನು ಎರಡು ಭಾಗಗಳಾಗಿ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ಪಠ್ಯ ಪುಸ್ತಕ ಸಂಘ ಈ ಕುರಿತು ಆದೇಶ ಹೊರಡಿಸಿದ್ದು, ಇನ್ನು ಮುಂದೆ ಪ್ರತಿ ವಿಷಯದ ಪಠ್ಯಪುಸ್ತಕವೂ ಸೆಮಿಸ್ಟರ್ 1, ಸೆಮಿಸ್ಟರ್ 2 ಎಂದು ಮುದ್ರಣವಾಗಲಿದೆ. ಎರಡು ಭಾಗ ಮಾಡಿ ಪಠ್ಯಪುಸ್ತಕ ಮುದ್ರಿಸುವುದರಿಂದ ಶೇಕಡ 50ರಷ್ಟು ತೂಕ ಕಡಿಮೆಯಾಗಲಿದೆ ಎಂದು ಹೇಳಿದೆ. ಈ ಮಧ್ಯೆರಾಜ್ಯದ ವಿವಿಧ ಭಾಗಗಳ ಪ್ರಮುಖ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯ ಪಠ್ಯಕ್ರಮದ ಭಾಗವಾಗಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಚಿತ್ರಕಲೆ, ರಂಗಭೂಮಿ, ಸಂಗೀತ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಸಂಸ್ಕೃತಿ, ಕಲೆಗಳನ್ನು ಒಳಗೊಂಡ ಸಮಗ್ರ ಪಠ್ಯವನ್ನು ಶಾಲಾ ಶಿಕ್ಷಣ ನೀತಿಯ ಭಾಗವಾಗಿಸುವಂತೆ ಆಯೋಗಕ್ಕೂ ಸಲಹೆ ನೀಡಲಾಗಿದ್ದು, 2024-25ನೇ ಸಾಲಿನಿಂದಲೇ ಅಳವಡಿಸಲಾಗುತ್ತಿದೆ ಎನ್ನಲಾಗಿದೆ. ಪಠ್ಯಪುಸ್ತಕ ವಿಭಜಿಸಿ ನೀಡುವುದರಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ಕಡಿಮೆಯಾಗಲಿದೆ. ನಿರ್ವಹಣೆ ಸುಲಭವಾಗುತ್ತದೆ. ಮಕ್ಕಳ ಒತ್ತಡ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಯೋಜನೆ ಜಾರಿಗೊಳಿಸಲಿದ್ದು, ಪುಸ್ತಕಗಳ ಮುದ್ರಣ ವೆಚ್ಚ ಅಂದಾಜು 10 ಕೋಟಿ ರೂಪಾಯಿಯಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.

Categories
ಬೆಂಗಳೂರು ರಾಜ್ಯ

ರಾಜ್ಯದಲ್ಲಿ ಕರೋನಾ ಹೈ ಅಲರ್ಟ್..!

ರಾಜ್ಯದಲ್ಲಿ ಕರೋನಾ ಹೈ ಅಲರ್ಟ್..!
– ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ
– 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ
– ವಿವಿಧ ರಾಜ್ಯದ ಗಡಿ ಮೇಲೆ ನಿಯಂತ್ರಣ

NAMMUR EXPRESS NEWS
ಬೆಂಗಳೂರು: ಆರೋಗ್ಯ ಇಲಾಖೆಯು 60 ವರ್ಷ ಮೇಲ್ಪಟ್ಟವರು ಹಾಗೂ ಹೃದಯ ಸಮಸ್ಯೆ ಇರುವವರೆಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಿದೆ. ಅಲ್ಲದೆ ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇಡಲು ನಿರ್ಧಾರ ಮಾಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಜನ ಓಡಾಡದೆ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸಹಜ ಸ್ಥಿತಿಯಲ್ಲಿ ಇದೆ ಯಾವುದೇ ರೀತಿಯಾದ ನಿರ್ಬಂಧವಿಲ್ಲ. ಹೆಚ್ಚು ಪಾಸಿಟಿವ್‌ ಪ್ರಕರಣಗಳು ಬಂದರೆ ಮಾತ್ರ ನಿರ್ಬಂಧದ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯಕ್ಕೆ ರಾಜ್ಯದಲ್ಲಿ ನಿರ್ಬಂಧದ ಪರಿಸ್ಥಿತಿ ಇಲ್ಲ. ಯಾವುದೇ ರೀತಿಯಾಗಿ ಆತಂಕ ಪಡುವುದು ಬೇಡ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅಗತ್ಯವಿರುವ ಬೆಡ್ ಪಿಪಿಇ ಕಿಟ್ ಆಕ್ಸಿಜನ್ ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೇರಳ ಗಡಿ ಜಿಲ್ಲೆಯಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಹೆಚ್ಚು ಟೆಸ್ಟಿಂಗ್ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಕೊರೊನಾ ರೂಪಾಂತರ ತಳಿ ಬಗ್ಗೆ ಯಾರೂ ಕೂಡ ಭಯಪಡಬೇಕಿಲ್ಲ. 60 ವರ್ಷ ಮೇಲ್ಪಟ್ಟ ವೃದ್ಧರು ಎಲ್ಲರೂ ತಪಾಸಣೆ ಮಾಡಿಕೊಳ್ಳಬೇಕು. ಕೊರೊನಾ ಲಕ್ಷಣ ಇದ್ದರೆ ಕಡ್ಡಾಯವಾಗಿ ಮಾಸ್ಕ ಧರಿಸಿ ಎಂದು ಸೂಚಿಸಿದರು. ಜ್ವರ, ಶೀತ, ಕೆಮ್ಮು ಇರುವವರು ಟೆಸ್ಟ್ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರೆ ಅಷ್ಟೇ ನಿಷೇಧ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರ ಸಿದ್ಧತೆ

ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕರೋನಾದ ಹೊಸ ಸಬ್ ವೇರಿಯಂಟ್ ಜೆಎನ್-1 ಇದೀಗ ಭಾರತದಲ್ಲೂ ಪತ್ತೆಯಾಗಿದ್ದು, ದೇಶದೆಲ್ಲೆಡೆ ಆತಂಕ ಮನೆ ಮಾಡಿದೆ. ಕೇರಳದಲ್ಲಿ ಕೇಸ್ ಹೆಚ್ಚಳದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು,ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಮಂಗಳವಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿರೋ ಆರೋಗ್ಯ ಸಚಿವರು ಮುಂದಿನ 3 ತಿಂಗಳಿಗೆ ಅವಶ್ಯಕತೆ ಇರುವಷ್ಟು ಟೆಸ್ಟಿಂಗ್ ಕಿಟ್ಟನ್ನ ಕರ್ನಾಟಕ ಮೆಡಿಕಲ್‌ ಕಾರ್ಪೋರೆಶನ್ನಿಂದ ಖರೀದಿ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇನ್ನೂ ಮಂಗಳವಾರ ಡಾ.ರವಿ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ, ತಜ್ಞರಿಂದ ಸಲಹೆಗಳನ್ನು ಪಡೆಯಲು ಮುಂದಾಗಿದ್ದಾರೆ. ಕೋವಿಡ್ ಮಾರ್ಗಸೂಚಿ ಹೊರಡಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆಯಲು ಸರ್ಕಾರ ಮುಂದಾಗಿದೆ.

Categories
ರಾಜ್ಯ

ಸರ್ಕಾರಿ ಬಸ್ ಟಿಕೆಟ್‌ಗೆ ಡಿಜಿಟಲ್ ಪೇ ಹಣ ಪಾವತಿ!

ಸರ್ಕಾರಿ ಬಸ್ ಟಿಕೆಟ್‌ಗೆ ಡಿಜಿಟಲ್ ಪೇ ಹಣ ಪಾವತಿ!
– ಬಿಎಂಟಿಸಿ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್
– ಕ್ಯೂ ಆರ್ ಕೋಡ್ ಬಳಸಿ ಟಿಕೆಟ್ ಖರೀದಿ

NAMMUR EXPRESS NEWS
ಸರಕಾರಿ ಬಸ್ಸುಗಳಲ್ಲಿ ಇನ್ನು ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮೂಲಕ ಸುಲಭವಾಗಿ ಟಿಕೆಟ್ ಖರೀದಿಸಬಹುದು. ಈ ಹೊಸ ವ್ಯವಸ್ಥೆ ಯಾವೆಲ್ಲ ಬಸ್ಸುಗಳಲ್ಲಿ ಸಿಗಲಿದೆ? ಇಲ್ಲಿದೆ ಮಾಹಿತಿ… ಗೂಗಲ್ ಪೇ, ಪೇಟಿಎಂ ಸೇರಿದಂತೆ ಇತ್ಯಾದಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಈಗ ಗಲ್ಲಿ ಗಲ್ಲಿಯ ಗೂಡಂಗಡಿಗಳಲ್ಲೂ ಶುರುವಾಗಿದೆ. 5-10 ರೂಪಾಯಿ ವ್ಯಾಪಾರಕ್ಕೂ ಸಹ ನಗದು ಬದಲು ಫೋನ್ ಮೂಲಕ ಹಣ ಪಾವತಿಸಲಾಗುತ್ತಿದೆ. ಆದರೆ ಈ ವ್ಯವಸ್ಥೆ ಇದೀಗ ವಾಯುವ್ಯ ಕರ್ನಾಟಕ ಸರಕಾರಿ ಬಸ್‌ಗಳಲ್ಲಿಯೂ ಜಾರಿಯಾಗಿದೆ.

ಇದರಿಂದ ಚಿಲ್ಲರೆಗಾಗಿ ಪರದಾಡುವ ಕಂಡಕ್ಟರ್ ತಲೆಬಿಸಿ ಕಮ್ಮಿಯಾಗುವುದರ ಜತೆಗೆ ಗ್ರಾಹಕರಿಗೂ ಸಾಕಷ್ಟು ಅನುಕೂಲವಾಗುತ್ತಿದೆ. ಸದ್ಯಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಡಿಯಲ್ಲಿ ಬರುವ ಐದು ಡಿಪೋಗಳ 415 ಲಾಂಗ್ ರೂಟ್ ಬಸ್‌ಗಳಲ್ಲಿ ಈಗಾಗಲೇ ಫೋನ್ ಪೇ, ಯುಪಿಐ ಮುಖಾಂತರ ಬಸ್‌ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜಯಪುರ ಜಿಲ್ಲೆಯೊಂದನ್ನು ಹೊರತುಪಡಿಸಿ ಕಿತ್ತೂರು ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳ ವ್ಯಾಪ್ತಿಯ 4,581 ಬಸ್‌ಗಳಲ್ಲಿಯೂ ಸಹ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇಷ್ಟರಲ್ಲೇ ವಿಸ್ತರಣೆಯಾಗಲಿದೆ.

ಬಿಎಂಟಿಸಿ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ :

ಇಷ್ಟಕ್ಕೂ ಮೊದಲ ಬಾರಿಗೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿದ ಹೆಗ್ಗಳಿಕೆ ಬಿಎಂಟಿಸಿಗೆ ಸಲ್ಲುತ್ತದೆ. ಈ ಹೊಸ ವ್ಯವಸ್ಥೆಯನ್ನು ಬಿಎಂಟಿಸಿ 2020ರಲ್ಲಿ ಆರಂಭಿಸಿದೆ. ಬಿಎಂಟಿಸಿಯ ವಹಿವಾಟು ಪ್ರತೀ ತಿಂಗಳು 20 ಕೋಟಿ ರೂಪಾಯಿಗಿಂತ ಹೆಚ್ಚಿದ್ದು, ಅದರಲ್ಲಿ ನಾಲ್ಕು ಕೋಟಿಗಿಂತ ಅಧಿಕ ಹಣ ಆನ್ ಲೈನ್ ಮುಖಾಂತರವೇ ಆಗುತ್ತಿದೆ. ಎಲ್ಲ ಸಾರಿಗೆ ಸಂಸ್ಥೆಗಳಿಗಿಂತ ಬಿಎಂಟಿಸಿ ಒಂದು ಹೆಜ್ಜೆ ಮುಂದಿದ್ದು, ಈಗಾಗಲೇ Tummoc app ಮುಖಾಂತರ ಪ್ರಯಾಣವನ್ನು ಸುಲಭಗೊಳಿಸಲು ದಿನ, ವಾರ ಮತ್ತು ಮಾಸಿಕ ಬಸ್ ಪಾಸಾಗಳನ್ನು ಕೂಡ ಆನೈನ್ ಮುಖಾಂತರ ನೀಡುತ್ತಿದೆ. ಪ್ರತಿ ತಿಂಗಳು ವಿತರಣೆಯಾಗುವ ಒಂದು ಲಕ್ಷಕ್ಕಿಂತ ಅಧಿಕ ಪಾಸ್‌ಗಳಲ್ಲಿ ಸುಮಾರು 25% ರಷ್ಟು ವಹಿವಾಟು ಆನ್ ಲೈನ್ ಮುಖಾಂತರವೇ ನಡೆಯುತ್ತಿದೆ.

ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಿಂದ ಆಗುವ ಲಾಭಗಳನ್ನು ತಿಳಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೂಡ ಈಗ ತನ್ನ ವ್ಯಾಪ್ತಿಯ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಟಿಕೆಟ್ ವಿತರಣೆ ಮಾಡುತ್ತಿದೆ. ಕಳೆದ ಸೆಪ್ಟೆಂಬ‌ರ್ 1ರಿಂದ ಪ್ರಾಯೋಗಿಕವಾಗಿ ಡಿಜಿಟಲ್ ಪಾವತಿ ಸೇವೆಯನ್ನು ಆರಂಭಿಸಿದ್ದು: ಇದಕ್ಕೆ ಸಿಕ್ಕ ಪ್ರಾಯಾಣಿಕರ ಸ್ಪಂದನೆಯನ್ನು ಗಮನಿಸಿ ಈ ವ್ಯವಸ್ಥೆಯನ್ನು ಐದು ಡಿಪೋಗಳಿಗೆ ಪ್ರಾಯೋಗಿಕವಾಗಿ ವಿಸ್ತರಿಸುತ್ತಿದೆ. ಆನ್ ಲೈನ್ ಪೇಮೆಂಟ್ ಆರಂಭ ಮಾಡಿದ ನಂತರ ಇಲ್ಲಿಯ ವರೆಗೆ 415 ಬಸ್‌ಗಳಲ್ಲಿ ನಿರ್ವಾಹಕರು 30,000 ವೈಯಕ್ತಿಕ ವೈವಾಟುಗಳನ್ನು ಮಾಡಿದ್ದು, ಸುಮಾರು 75 ಲಕ್ಷ ರೂಪಾಯಿ ಮೊತ್ತವನ್ನು ನೇರವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಖಾತೆಗೆ ವರ್ಗಾಯಿಸಿದೆ. ಇದರಲ್ಲಿ ಸುಮಾರು 20% ನಷ್ಟು ಹಣ ಆನ್ಸೆನ್ ಮುಖಾಂತರವೇ ಆಗಿದ್ದು, ಡಿಜಿಟಲ್ ಪೇಮೆಂಟ್‌ಗೆ ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ.

ಸಂಸ್ಥೆಯ ಉಳಿದ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ :

ಆರಂಭಿಸಲು ಫೋನ್ ಪೇ ಖಾಸಗಿ ಸಂಸ್ಥೆಯನ್ನು ಈಗಾಗಲೇ ಸಂಪರ್ಕಿಸಿದ್ದು, ಕಂಪನಿಯು ನಿರ್ವಾಹಕರಿಗೆ ಪೇಮೆಂಟ್ ಮಾಡಿಸಿಕೊಳ್ಳಲು ಕ್ಯೂಆರ್ ಕೋಡ್ ನೀಡಿದೆ. ಪ್ರತಿದಿನ ಆನ್ಸೆನ್ ಮುಖಾಂತರ ಆಗುವ ವಹಿವಾಟುಗಳನ್ನು ನಿರ್ವಹಣೆ ಮಾಡಲು ಮುಖ್ಯ ಕಚೇರಿಯಲ್ಲಿ ಲೈವ್ ಡ್ಯಾಶ್ ಬೋರ್ಡ್ ಸ್ಥಾಪಿಸಲಾಗಿದ್ದು ಪ್ರತಿದಿನ ವ್ಯವಹಾರಗಳು ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ಸಾಗುತ್ತಿವೆ ಎನ್ನುತ್ತಾರೆ NWKRTC ಅಧಿಕಾರಿಗಳು.

Categories
ಬೆಂಗಳೂರು ರಾಜ್ಯ

ರಾಜ್ಯದಲ್ಲಿ ಮೋಡ ವಾತಾವರಣ: ಮಳೆ ಸಾಧ್ಯತೆ!

ರಾಜ್ಯದಲ್ಲಿ ಮೋಡ ವಾತಾವರಣ: ಮಳೆ ಸಾಧ್ಯತೆ!
– 4 ದಿನ ಕೆಲವು ಕಡೆ ತುಂತುರು ಮಳೆ ನಿರೀಕ್ಷೆ
– ಹಗಲೇ ಚಳಿ ಚಳಿ: ಬಿಸಿಲು ಮಾಯ..!

NAMMUR EXPRESS NEWS
ಕರ್ನಾಟಕ ರಾಜ್ಯಾದ್ಯಂತ ಮೋಡದ ವಾತಾವರಣ ಮುನ್ಸೂಚನೆ ಇದೆ. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು ಹಗಲೇ ಚಳಿ ಚಳಿ ಇದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯ ಚಂಡಮಾರುತವು ಆಂದ್ರಾದ ನೆಲ್ಲೂರು ಕರಾವಳಿಯ ಮೂಲಕ ಪ್ರವೇಶಿಸುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಚಂಡಮಾರುತ ಸಂಪೂರ್ಣ ಶಿಥಿಲಗೊಂಡ ನಂತರ ಅಂದರೆ ಡಿಸೆಂಬರ್ ನಂತರ ಮಳೆಯ ಪರಿಸ್ಥಿತಿ ನೋಡಬೇಕಾಗಿದೆ. ಮಳೆ ವಾತಾವರಣ ರೈತರನ್ನು ಆತಂಕಕ್ಕೆ ಈಡು ಮಾಡಿದೆ.

ಹಗಲೇ ಚಳಿ ಚಳಿ: ಬಿಸಿಲು ಮಾಯ..!

ರಾಜ್ಯದ ಹಲವೆಡೆ ಹಗಲೇ ಚಳಿ ಶುರುವಾಗಿದೆ. ಥಂಡಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ಬಿಸಿಲು ಮಾಯವಾಗಿದೆ. ಮಲೆನಾಡು ಕರಾವಳಿ ಮಧ್ಯ ಕರ್ನಾಟಕದಲ್ಲಿ ಇದೀಗ ಅಡಿಕೆ, ಭತ್ತದ ಕೊಯ್ಲು ಸಮಯ ಆದ್ದರಿಂದ ರೈತರಿಗೆ ತಲೆ ನೋವಾಗಿದೆ.

Categories
ಬೆಂಗಳೂರು ರಾಜ್ಯ

ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ!

ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ!
– ಹೈಕೋರ್ಟ್ ಮಹತ್ವದ ಆದೇಶ: ಎಲ್ಲರಿಗೂ ಅನ್ವಯ ಆಗುತ್ತಾ?
– ವಾಹನ ಸವಾರರಿಗೆ ಸಿಹಿ ಸುದ್ದಿ..ಏನಿದು ಕೇಸ್?

NAMMUR EXPRESS NEWS
ಬೆಂಗಳೂರು: ವಾಹನ ಸವಾರರಿಗೆ ಇಲ್ಲಿದೆ ಸಿಹಿ ಸುದ್ದಿ. ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಒಂದು ಪ್ರಕರಣಕ್ಕೆ ಸೀಮಿತವೋ ಅಥವಾ ಎಲ್ಲಾ ಪ್ರಕರಣಕ್ಕೋ ಎಂಬುದು ಇನ್ನು ಇಲಾಖೆ ಪ್ರಕಟಣೆ ತಿಳಿಸಬೇಕಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ ಪೊಲೀಸರು ತಪಾಸಣೆ ಮಾಡುವುದನ್ನು ವಿಡಿಯೋ ಚಿತ್ರೀಕರಣ ಮಾಡಬೇಕಾಗುತ್ತದೆ ಹಾಗೂ ಸಂಚಾರ ಪೊಲೀಸರು ಆರೋಪಿಯಿಂದ ದಂಡದ ಮೊತ್ತ ( ಫೈನ್) ಸಂಗ್ರಹಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಏನಿದು ಕೇಸ್?

ಕೆ.ಆರ್.ಪೇಟೆ ಪಟ್ಟಣದ ಸುಭಾಷ್ ನಗರದ ನಿವಾಸಿ ಕೆ.ಟಿ.ನಟರಾಜು ಸಲ್ಲಿಸಿದ ಅರ್ಜಿ ಪುರಸರಿಸಿದ ನ್ಯಾಯಮೂರ್ತಿ ಈ ಆದೇಶ ಹೊರಡಿಸಿದೆ. ಹೆಲೈಟ್ ಧರಿಸದೇ ಇರುವುದಕ್ಕೆ ಫೈನ್ ಕಟ್ಟಲು ನಿರಾಕರಿಸಿದ ಮತ್ತು ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದ ಆರೋಪಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದು ಮಾಡುವಂತೆ ಕೋರಿ ಕೆ.ಆರ್.ಪೇಟೆ ಪಟ್ಟಣದ ಸುಭಾಷ್ ನಗರದ ನಿವಾಸಿ ಕೆ.ಟಿ.ನಟರಾಜು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖಿಸಿದ ನ್ಯಾಯಪೀಠ, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿ ಹೊರಡಿಸಿರುವ ಸುತ್ತೋಲೆ ಪ್ರಕಾರ, ದಂಡದ ಮೊತ್ತವನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಮಾತ್ರ ಅಧಿಕಾರವಿದೆ.

ಯಾವುದೇ ಪರಿಸ್ಥಿತಿಯಲ್ಲೂ ಸಂಚಾರ ಪೊಲೀಸರು ಆರೋಪಿಯಿಂದ ದಂಡ ಸಂಗ್ರಹಿ ಸಲು ಸಾಧ್ಯವಿಲ್ಲ. ವಾಹನ ತಪಾಸಣಾ ಚಟುವಟಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಮುಂದಾದರೆ ವ್ಯಕ್ತಿಯನ್ನು ತಡೆಯಬೇಕು. ಸ್ಥಳಕ್ಕೆ ಠಾಣೆಯ ಪೊಲೀಸರನ್ನು ಕರೆಸಿ, ಆರೋಪಿಯನ್ನು ವಶಕ್ಕೆ ನೀಡಬೇಕು ಎಂದು ನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿದ್ದಾರೆ.

ಜಪ್ತಿ ಮಾಡುವ ಅಧಿಕಾರ ಕೂಡ ಪೊಲೀಸರಿಗಿಲ್ಲ

ದಂಡ ಪಾವತಿಸದಿದ್ದರೆ ವಾಹನವನ್ನು ಜಪ್ತಿ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ. ಪ್ರಕರಣದಲ್ಲಿ ಪೊಲೀಸರೇ ಠಾಣೆಯಲ್ಲಿ ಬೈಕ್ ನಿಲ್ಲಿಸಲು ಅರ್ಜಿದಾರರಿಗೆ ಬಲವಂತಪಡಿಸಿದ್ದಾರೆ. ಕೋರ್ಟ್ ಅನುಮತಿ ಪಡೆಯದೆ ಅರ್ಜಿದಾರನಿಗೆ ಕೋಳ ಹಾಕಿ ಬಂಧಿಸಿದ್ದಾರೆ ಎಂದು ನಟರಾಜ್ ಪರ ವಕೀಲ ಸಿ.ಎನ್.ರಾಜು ವಾದ ಮಂಡಿಸಿದ್ದರು.

Categories
ತೀರ್ಥಹಳ್ಳಿ

ಆನ್‌ಲೈನ್ ಗೇಮ್ ಚಟಕ್ಕೆ ಹುಡುಗ ಹುಡುಗಿಯಾದ…!

ಆನ್‌ಲೈನ್ ಗೇಮ್ ಚಟಕ್ಕೆ ಹುಡುಗ ಹುಡುಗಿಯಾದ…!
– ಹುಡುಗಿಯಂತೆ ನಾಟಕ ಮಾಡಿ 6.87 ಲಕ್ಷ ವಂಚನೆ
– ಶಿವಮೊಗ್ಗದಲ್ಲಿ ಅರೆಸ್ಟ್: ಏನಿದು ವಂಚನೆ ಕೇಸ್?
– ಸಾಮಾಜಿಕ ಜಾಲ ತಾಣ ಬಳಕೆದಾರರೇ ಹುಷಾರ್..!

NAMMUR EXPRES NEWS
ತೀರ್ಥಹಳ್ಳಿ: ಆನ್‌ಲೈನ್ ಗೇಮ್ ಚಟಕ್ಕೆ ಬಲಿಯಾದ ಯುವಕ ಹುಡುಗಿಯಂತೆ ನಾಟಕ ಮಾಡಿ 6.87 ಲಕ್ಷ ವಂಚನೆ ಮಾಡಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸಾಮಾಜಿಕ ಜಾಲ ತಾಣ ಬಳಕೆದಾರರು ಓದಲೇಬೇಕಾದ ಸುದ್ದಿ ಇದು.
ಫೇಸ್ಬುಕ್ ಅಲ್ಲಿ ₹6.87 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಶಿವಮೊಗ್ಗದ ಯುವಕನೊಬ್ಬನನ್ನು ಶಿವಮೊಗ್ಗ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಸುಜೇಂದ್ರ (21) ಎಂಬಾತ ಸಿರಾ ಪಟ್ಟಣದ ವಿದ್ಯಾನಗರದ ನಿವಾಸಿ ಭರತ್‌ಕುಮಾರ್ ಎಂಬಾತನ ಜತೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ಶಿಪ್ ಮಾಡಿಕೊಂಡಿದ್ದ.

ನಕಲಿ ಖಾತೆ ಮೂಲಕ ಹುಡುಗಿಯಂತೆ ವರ್ತಿಸುತ್ತಿದ್ದ. ಭರತ್‌ ಕುಮಾ‌ರ್’ಗೆ ಫೇಸ್ ಬುಕ್‌’ನಲ್ಲಿ ಪರಿಚಯ ಮಾಡಿಕೊಂಡು ನಂತರ ಶರ್ಮಿಳ ಮತ್ತು ದಿವ್ಯ ಎಂಬ ಹೆಸರಿನಲ್ಲಿ ಮೆಸೆಂಜರ್ ಹಾಗೂ ವಾಟ್ಸಾಪ್ ಮೂಲಕ ಚಾಟ್ ಮಾಡಿದ್ದಾನೆ. ಬಳಿಕ ಕಷ್ಟ ಇದೆ ಎಂದು ನಂಬಿಸಿ ಹಣವನ್ನು ಫೋನ್ ಪೇ, ಪೇಟಿಎಂ, ಗೂಗಲ್ ಪೇ ಹಾಗೂ ಬ್ಯಾಂಕ್‌ ಖಾತೆಗಳಿಗೆ ಹಾಕಿಸಿಕೊಂಡು ವಂಚಿಸಿದ್ದಾರೆ. ಹಣ ಕಳೆದುಕೊಂಡವ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಡಿಸೆಂಬರ್ 12ರಂದು ಎಂ.ಬಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿದಿದೆ.

ಆನ್ಲೈನ್ ಜೂಜಾಟದ ಚಟ!

ವಿಚಾರಣೆ ವೇಳೆ ಆರೋಪಿ ತಾನು ಆನ್‌ಲೈನ್ ಜೂಜಾಟದ ಚಟ ಹೊಂದಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಸಂತ್ರಸ್ತನಿಂದ ಪಡೆದಿದ್ದ ಹಣವನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಇಂದಿನ ಆನ್‌ಲೈನ್ ಯುಗದಲ್ಲಿ ಬೈಕ್, ಕಾರು, ಆನ್ಲೈನ್ ಗೇಮ್, ಶೋಕಿ ಜೀವನ ನಡೆಸಲು ಯುವಕರು ವಂಚನೆ ಮಾಡಿ ಈಗ ತಮ್ಮ ಸುಂದರ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ.