Categories
ರಾಜ್ಯ

ರಾಜ್ಯದಲ್ಲಿ ನಾಯಿಗಳಿಗೆ ಹುಚ್ಚು ರೋಗ..!

ರಾಜ್ಯದಲ್ಲಿ ನಾಯಿಗಳಿಗೆ ಹುಚ್ಚು ರೋಗ..!
– ನಾಯಿಗಳ ಬಗ್ಗೆ ಎಚ್ಚರ ಎಚ್ಚರ..!
– ನಾಯಿ ಕಡಿತಕ್ಕೆ ಬಲಿಯಾದ ಬಾಲಕ
– ನಿಮ್ಮ ನಾಯಿಗೂ ಲಸಿಕೆ ಕೊಡಿಸಿ.. ಜಾಗೃತಿ ವಹಿಸಿ..!

NAMMUR EXPRESS NEWS
ರಾಜ್ಯಾದಲ್ಲಿ ಹಲವು ಕಡೆಗಳಲ್ಲಿ ಹುಚ್ಚು ನಾಯಿಗಳ ಕಾಟ ಶುರುವಾಗಿದೆ. ಎಲ್ಲಿ ಅಂದರಲ್ಲಿ ಬಂದು ಮನೆಯಲ್ಲಿ ಸಾಕಿರುವ ನಾಯಿಗಳಿಗೆ ಕಚ್ಚುತ್ತಿವೆ. ಇನ್ನೊಂದೆಡೆ ಸಣ್ಣ ಮಕ್ಕಳು, ಹಾದಿ ಬೀದಿಯಲ್ಲಿ ಹೋಗುವವರಿಗೆ ನಾಯಿ ಕಡಿತದ ಕಾರಣ ಅನೇಕರು ಆಸ್ಪತ್ರೆ ಸೇರಿದ್ದಾರೆ. ಚಳಿಗಾಲದ ಸಮಯದಲ್ಲಿ ಸಾಕು ನಾಯಿಗಳಿಗೆ ಹುಚ್ಚು ಹಿಡಿಯುವುದು ಸರ್ವೇ ಸಾಮಾನ್ಯ. ಆದರೆ ಈ ವರ್ಷ ಅದು ಹೆಚ್ಚಿದೆ. ಇತ್ತೀಚೆಗೆ ಹುಚ್ಚುನಾಯಿಗಳ ಕಾಟದಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ಒಂಟಿಯಾಗಿ ಶಾಲೆಗೆ ಹೋಗಲು ತೊಂದರೆ ಆಗಿದೆ. ಹಾಗೆಯೇ ದೊಡ್ಡವರಿಗೂ ಕೂಡ ಕೆಲಸ ಕಾರ್ಯಗಳಿಗೆ ತಲುಪುವ ವೇಳೆ ಹುಚ್ಚು ನಾಯಿಗಳು ದಾಳಿ ಮಾಡಿರುವ ಘಟನೆ ಕಂಡುಬಂದಿದೆ.

ಹುಚ್ಚು ನಾಯಿ ದಾಳಿಗೆ ಬಲಿ!

ಚಿತ್ರದುರ್ಗದ ತರುಣ್ ಎಂಬ ಬಾಲಕ ನಾಯಿ ಕಡಿತಕ್ಕೆ ಬಲಿಯಾಗಿದ್ದಾನೆ. ಹುಚ್ಚು ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ. ಹೀಗೆ ದಿನದಿಂದ ದಿನಕ್ಕೆ ಹುಚ್ಚು ನಾಯಿಗಳ ಕಾಟ ಜಾಸ್ತಿಯಾದರೆ ಮನುಷ್ಯನಿಗೂ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ.

ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಿ..!

ನಿಮ್ಮ ಮನೆ ನಾಯಿಗೂ ಹುಚ್ಚು ನಾಯಿ ಕಚ್ಚಿದೆಯಾ ಇದರ ಬಗ್ಗೆ ಹೆಚ್ಚು ಗಮನವಹಿಸಿ. ನಾಯಿಗಳ ಆರೋಗ್ಯ ಸರಿ ಇದೆಯಾ ಎಂದು ಗಮನಿಸಿ ಹುಚ್ಚು ನಾಯಿ ಕಚ್ಚಿದೆ ಎಂಬ ಸಂದೇಹ ಬಂದಲ್ಲಿ ಪಶು ವೈದ್ಯರನ್ನು ಸಂಪರ್ಕಿಸಿ ಲಸಿಕೆ ಕೊಡಿಸಿ. ಹುಚ್ಚು ನಾಯಿ ಸಮಸ್ಯೆ ಬಗ್ಗೆ ಪಶು ವೈದ್ಯರು ಹಾಗೂ ಆರೋಗ್ಯ ಇಲಾಖೆ, ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ.

Categories
ಕರಾವಳಿ ಮಂಗಳೂರು

ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳು ಎಲ್ಲಿದ್ದಾರೆ?!

ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳು ಎಲ್ಲಿದ್ದಾರೆ?!
– ಐವರು ವಾಂಟೆಡ್‌ ಲಿಸ್ಟ್ ಬಿಡುಗಡೆ ಮಾಡಿದ ಎನ್‌ಐಎ
– ಕಾಡುಗಳ್ಳ ವೀರಪ್ಪನ್ ಸಹಚರ ಸಾವು: ಏನಿದು ಕೇಸ್?

NAMMUR EXPRESS NEWS
ಮಂಗಳೂರು: ಹಿಂದೂಪರ ಸಂಘಟನೆಯ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪಟ್ಟಿಯನ್ನು ರಾಷ್ಟ್ರೀಯ ತನಿಖಾ ದಳ ಬಿಡುಗಡೆ ಮಾಡಿದೆ.
ಎನ್‌ಐಎ ವಾಂಟೆಡ್ ಲಿಸ್ಟ್ ನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ದುಷ್ಕರ್ಮಿಗಳ ಹೆಸರು ಪ್ರಕಟಗೊಂಡಿದ್ದು, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ವಾಂಟೆಡ್ ಲಿಸ್ಟ್ ಅನ್ನು ಎನ್‌ಐಎ ಬಿಡುಗಡೆಗೊಳಿಸಿದೆ. ಎನ್‌ಐಎ ಪಟ್ಟಿಯಲ್ಲಿ ಬಿಡುಗಡೆಗೊಂಡಿರುವ ಈ ಎಲ್ಲಾ ಆರೋಪಿಗಳು ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಕರಣಗಳು, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ.

ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದಲ್ಲಿರುವ ಎನ್‌ಐಎ, ಇದೀಗ 24 ಆರೋಪಿಗಳ ಹೆಸರುಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಸೇರಿದ್ದಾರೆ. ಈ ಎಲ್ಲಾ ಆರೋಪಿಗಳ ಸುಳಿವು ಸಿಕ್ಕಲ್ಲಿ ತಿಳಿಸುವಂತೆ ಮನವಿ ಮಾಡಲಾಗಿದೆ. ಕೇರಳದ 11 ಆರೋಪಿಗಳು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮೂವರು, ಕರ್ನಾಟಕ ಹಾಗೂ ತಮಿಳುನಾಡಿನ ಐವರು ಆರೋಪಿಗಳ ಹೆಸರು ಪ್ರಕಟಿಸಲಾಗಿದೆ. ಆರೋಪಿಗಳ ಹೆಸರು, ಭಾವಚಿತ್ರ, ವಿಳಾಸ ಸಹಿತ ಮಾಹಿತಿ ಪ್ರಕಟಿಸಿ ಸುಳಿವು ಸಿಕ್ಕಲ್ಲಿ ಎನ್‌ಐಎಗೆ ವಾಟ್ಸ್ಆ್ಯಪ್ ಅಥವಾ ದೂರವಾಣಿ ಕರೆ ಮೂಲಕ ಮಾಹಿತಿ ನೀಡುವಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಬೆಳ್ಳಾರೆ ಮುಸ್ತಫಾ, ಮಸೂದ್ ಅಗ್ನಾಡಿ, ಮೊಹಮ್ಮದ್ ಶರೀಫ್ ಕೊಡಾಜೆ, ಉಮ್ಮರ್ ಅಲಿಯಾಸ್ ಉಮರ್ ಫಾರೂಕ್, ಅಬೂಬ್ಬಕ್ಕರ್ ಸಿದ್ದಿಕ್ ಎಂಬ ಐವರ ಹೆಸರುಗಳನ್ನು ಪ್ರಕಟಿಸಲಾಗಿದೆ.

ಕಾಡುಗಳ್ಳ ವೀರಪ್ಪನ್ ಸಹಚರ ಸಾವು

ಕಾಡುಗಳ್ಳ ವೀರಪ್ಪನ್ ಸಹಚರ ಹಾಗೂ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜ್ಞಾನಪ್ರಕಾಶ್, ಸಂದನಪಾಳ್ಯ ಗ್ರಾಮದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾನೆ. ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿ ಜ್ಞಾನಪ್ರಕಾಶ್ (68) ಕಾಡುಗಳ್ಳ ವೀರಪ್ಪನ್ ಮುಖ್ಯ ಸಹಚರನಾಗಿದ್ದ. ಭಯಾನಕ ಎನಿಸುವ “ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಖ್ಯ ಆರೋಪಿಯೂ ಆಗಿದ್ದ. ಆದ್ದರಿಂದ ಜ್ಞಾನಪ್ರಕಾಶ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ, ಸುಪ್ರೀಂ ಕೋರ್ಟ್ 2014 ರಲ್ಲಿ ಈತನಿಗೆ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

29 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ ಜ್ಞಾನಪ್ರಕಾಶ್ ಗೆ ಮೂರು ವರ್ಷಗಳಿಂದ ಶ್ವಾಸಕೋಸ ಕ್ಯಾನ್ಸರ್ ಬಾಧಿಸಿತ್ತು. ಮಾನವೀಯತೆ ಆಧಾರದಲ್ಲಿ ಸುಪ್ರೀಂ ಜಾಮೀನು ಮಂಜೂರು ಮಾಡಿತ್ತು. ಆದ್ದರಿಂದ ಚಾಮರಾಜನಗರ ನ್ಯಾಯಾಲಯವು ಇಬ್ಬರಿಂದ ಶೂರಿಟಿ ಪಡೆದು ಜಾಮೀನು ಮಂಜೂರು ಮಾಡಿತ್ತು. ಜಾಮೀನು ಮೇಲೆ ಬಿಡುಗಡೆಯಾದ ಜ್ಞಾನಪ್ರಕಾಶ್ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದನು. ಆದರೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳುತ್ತಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಂದನಪಾಳ್ಯ ಗ್ರಾಮದ ಸ್ವಗೃಹದಲ್ಲಿ ನಿಧನ ಹೊಂದಿದ್ದಾನೆ.

Categories
ತೀರ್ಥಹಳ್ಳಿ

20ಕ್ಕೂ ಹೆಚ್ಚಿನ ಬೈಕ್ ಬೆಂಕಿಗೆ!

20ಕ್ಕೂ ಹೆಚ್ಚಿನ ಬೈಕ್ ಬೆಂಕಿಗೆ!
– ಕಂಡಿಲ್ ಮೋಟಾರ್ಸ್ ಶೋ ರೂಂಗೆ ಬೆಂಕಿ!
– ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್‌ ನಿಲ್ದಾಣದಲ್ಲಿ ಘಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್‌ ನಿಲ್ದಾಣದಲ್ಲಿರುವ ಕಂಡಿಲ್ ಮೋಟಾರ್ಸ್ ಶೋ ರೂಂಗೆ ಬೆಂಕಿ ಬಿದ್ದಿದ್ದು 20ಕ್ಕೂ ಹೆಚ್ಚು ಬೈಕ್ ಹಾನಿಯಾಗಿವೆ. 2ಕ್ಕೂ ಹೆಚ್ಚು ಬೈಕ್ ಸಂಪೂರ್ಣ ಸುಟ್ಟು ಹೋಗಿದೆ. ಯುಪಿಎಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೈಕ್, ಕಂಪ್ಯೂಟರ್, ಕುರ್ಚಿ ಸೇರಿ ಕೋಟ್ಯಾಂತರ ರೂ ಹಾನಿಯಾಗಿದೆ. ಅಗ್ನಿ ಶಾಮಕ ದಳದ ಕಾರ್ಯಾಚರಣೆ ಬಳಿಕ ಈಗ ಬೆಂಕಿ ನಂದಿದೆ. ಆಗುಂಬೆ ಬಸ್ ನಿಲ್ದಾಣದಲ್ಲಿರುವ ಬೈಕ್ ಶೋ ರೂಮ್ ಖಂಡಿಲ್ ಮೋಟಾರ್ಸ್ ಗೆ ಭಾನುವಾರ ಮದ್ಯಾನ್ಹ ಏಕಾಏಕಿ ಬೆಂಕಿ ಹತ್ತಿಕೊಂಡು ಶೋ ರೂಮ್ ಒಳಗಿದ್ದ 20 ಕ್ಕೂ ಹೆಚ್ಚು ಹೊಸ ಬೈಕ್‌ ಗಳಿಗೆ ಡ್ಯಾಮೇಜ್ ಆಗಿದೆ ಹಾಗೂ ಎರಡು ಬೈಕ್‌ ಸಂಪೂರ್ಣ ಸುಟ್ಟು ಕರಕಲಾಗಿದೆ.

ಭಾನುವಾರವಾಗಿದ್ದರಿಂದ ಶೋ ರೂಮ್ ರಜೆ ಇತ್ತು. ಯುಪಿಎಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಒಳಗಿದ್ದ ಕಂಪ್ಯೂಟರ್, ಕುರ್ಚಿ ಸೇರಿ ಕೋಟ್ಯಾಂತರ ರೂ ಹಾನಿಯಾಗಿದೆ. ಸ್ಥಳದಲ್ಲಿ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

Categories
ಉದ್ಯೋಗ ಸುದ್ದಿ ರಾಜ್ಯ ಶಿಕ್ಷಣ

ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ.. ಯಾರಿಗೆ ಅವಕಾಶ?

ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ.. ಯಾರಿಗೆ ಅವಕಾಶ?
– 2,500 ದೈಹಿಕ ಶಿಕ್ಷಕರ ನೇಮಕ್ಕೆ ಗ್ರೀನ್ ಸಿಗ್ನಲ್‌
– ಶಿಕ್ಷಣ ಸಚಿವರಿಂದ ಹೊಸ ಘೋಷಣೆ

NAMMUR EXPRESS NEWS
ಸತತ 15 ವರ್ಷದಿಂದ ನೇಮಕಾತಿಗೆ ಎದುರು ನೋಡುತ್ತಿದ್ದ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕರಿಗೆ ಸರ್ಕಾರ ಸಂತಸದ ಸುದ್ದಿ ನೀಡಿದೆ. ಪ್ರಾಥಮಿಕ ಶಾಲೆಯ 2,120 ಮತ್ತು ಪ್ರೌಢಶಾಲೆಯ 200 ದೈಹಿಕ ಶಿಕ್ಷಕರ ಹುದ್ದೆ ಖಾಲಿಯಿದ್ದು, ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿರುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 41913 ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ 6772 ದೈಹಿಕ ಶಿಕ್ಷಕರ ಹುದ್ದೆಗಳು ಮಂಜೂರಾಗಿದೆ. ಆದರೆ, ಕಾರ್ಯನಿರತ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು 4127 ಆಗಿದೆ. ಈ ನಿಟ್ಟಿನಲ್ಲಿ 2120 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಕುರಿತು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಸದ್ಯ, ಇಲಾಖೆ ಸಮಾಲೋಚನೆ ನಡೆಸುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

15,000 ಹುದ್ದೆಗಳಲ್ಲಿ ಪ್ರೌಢಶಾಲಾ ಶಿಕ್ಷಕರುಗಳ ನೇಮಕಾತಿಗೆ 1648 ಹುದ್ದೆಗಳು ಮಾತ್ರ ಉಳಿದಿದ್ದು, ಪ್ರಸ್ತುತ ಸಾಲಿನಲ್ಲಿ 200 ದೈಹಿಕ ಶಿಕ್ಷಕರ ಹುದ್ದೆಯು ಸೇರಿದ್ದು ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿರುವ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಅದೇ ರೀತಿ, ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಿಸಿದ ಹಾಗೆ ರಾಜ್ಯದಲ್ಲಿ 4844 ಸರ್ಕಾರಿ ಪ್ರೌಢ ಶಾಲೆಯಿದ್ದು, ಇದರಲ್ಲಿ 5210 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ.

ರಾಜ್ಯದಲ್ಲಿ 4844 ಸರ್ಕಾರಿ ಪ್ರೌಢ ಶಾಲೆಯಿದ್ದು, ಇದರಲ್ಲಿ 5210 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ರಾಜ್ಯ ಸರ್ಕಾರಿ ಪ್ರೌಢಶಾಲೆಗಳಲ್ಲಿರುವ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 1 ಶಿಕ್ಷಕರ ಕಾರ್ಯನಿರತ ಹುದ್ದೆಗಳ ಸಂಖ್ಯೆ 3589 ಆಗಿದ್ದು, ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ವಿವಿಧ ವೃಂದದ ದೈಹಿಕ ಶಿಕ್ಷಣ ಶಿಕ್ಷಕರ 200 ಹುದ್ದೆಗಳು ಒಳಗೊಂಡಂತೆ ಒಟ್ಟು 2500 ಶಿಕ್ಷಕರುಗಳ ಹುದ್ದೆ ಖಾಲಿಯಿದೆ. ಇದರ ಜೊತೆಗೆ 15,000 ಪದವೀಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿನ ಅನುಸಾರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

Categories
ತೀರ್ಥಹಳ್ಳಿ

ಸರ್ಕಾರಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ!

ಸರ್ಕಾರಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ!
– 2023-24 ನೇ ಸಾಲಿನ ವಿವಿಧ ವೇದಿಕೆಗಳ ಉದ್ಘಾಟನೆ
– ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾದ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2023-24ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ ಚಟುವಟಿಕೆ, ರೋವರ್ನ್ ಮತ್ತು ರೇಂಜನ್, ಯುವ ರೆಡ್ ಕ್ರಾಸ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಿತು. ಶಾಸಕರು, ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಹಾಗೂ ಕಾಲೇಜಿನಲ್ಲಿ ಪದವಿಯನ್ನು ಪೂರೈಸಿ ಅತ್ಯುತ್ತಮ ನಾಗರೀಕರಾಗಿ ಹೊರಹೊಮ್ಮಲಿ ಎಂದು ಹಾರೈಸಿದರು. ವಿಶೇಷ ಉಪನ್ಯಾಸವನ್ನು ಮಾಡಿದಂತಹ ಎನ್.ಆರ್. ಪುರದ ಸ.ಪ್ರ.ದ.ಕಾಲೇಜು ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ನಾಗೇಶ್ ಗೌಡ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ನಮ್ಮ ನಾಡಿನ ಭವ್ಯ ಪರಂಪರೆಯನ್ನು ಸ್ಮರಿಸುತ್ತ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವತ್ತ ವಿದ್ಯಾರ್ಥಿಗಳ ಮನಸ್ಸು ಸಾಗಬೇಕೆಂದು ಹಾಗೂ ಜ್ಞಾನವಂತರಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಧರ್ಮಣ್ಣ ಎಚ್. ಡಿ ಅವರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರಿಯಾಶೀಲ ಚಟುವಟಿಕೆಗಳಲ್ಲೂ ಸಾಧನೆ ಮಾಡಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು. ವಿದ್ಯಾರ್ಥಿಗಳು ನಾಡಗೀತೆಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ. ಸೌಮ್ಯ ಕೆ. ಸಿ. ಅವರು ಪ್ರಸ್ತಾವಿಕ ನುಡಿಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು. ಗ್ರಂಥ ಪಾಲಕರಾದ ಪ್ರೇಮ ಅವರು ಸರ್ವರನ್ನು ವಂದಿಸಿದರು. ಎಂ.ಕಾಂ. ವಿದ್ಯಾರ್ಥಿನಿ ಕು.ಶ್ರುತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ ಮತ್ತು ಇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ಸಿಗೆ ಸಹಕರಿಸಿದರು.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು… ಸರಕು ಎಷ್ಟು..?
– ನಿಧಾನಕ್ಕೆ ಇರುತ್ತಿದೆ ಅಡಿಕೆ ದರ!

ಸರಕು – 65009 – 79529
ಬೆಟ್ಟೆ –   50009 – 52009
ರಾಶಿ –   46009 – 48309
ಗೊರಬಲು – 35509 – 37009

Categories
ಸಿನಿಮಾ

ಡಿ ಬಾಸ್ ಅಭಿನಯದ ಕಾಟೇರ ಚಿತ್ರದ ಟ್ರೈಲರ್ ಹವಾ!

ಡಿ ಬಾಸ್ ಅಭಿನಯದ ಕಾಟೇರ ಚಿತ್ರದ ಟ್ರೈಲರ್ ಹವಾ!
– ಬಿಡುಗಡೆಯಾದ ಕೆಲವೇ ಗಂಟೆಗೆ 5 ಮಿಲಿಯನ್ ವೀಕ್ಷಣೆ
– ಹುಬ್ಬಳ್ಳಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆ
– ಸಿನಿಮಾ ಡಿ.29ರಂದು ರಾಜ್ಯದಾದ್ಯಂತ ರಿಲೀಸ್

NAMMUR EXPRESS NEWS
ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಭರವಸೆಯೊಂದಿಗೆ ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಚಿತ್ರ ಡಿಸೆಂಬರ್ 29ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಇದೀಗ ಶನಿವಾರ ಹುಬ್ಬಳ್ಳಿಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದ್ದು ಈಗಾಗಲೇ ಆನಂದ್ ಆಡಿಯೋ ಯೂಟ್ಯೂಬಲ್ಲಿ ಬಿಡುಗಡೆಯಾದ ಕೆಲವೇ ಗಂಟೆಯೊಳಗೆ 5 ಮಿಲಿಯನ್ ವೀಕ್ಷಣೆ ಪಡೆದಿದೆ. 1972ರಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು, ರೈತರ ಜೀವನದ ಆಧಾರಿತ ಚಿತ್ರವಾಗಿದೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಧೀರ ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆರಾಧನಾ ರಾಮ್, ಕುಮಾರ್ ಗೋವಿಂದ್, ಜಗಪತಿ ಬಾಬು, ಶೃತಿ, ವೈಜನಾಥ್ ಬಿರಾದಾರ್, ರಾಷ್ಟ್ರ ಪ್ರಶಸ್ತಿ ವಿಜೇತ ಮಾಸ್ಟರ್ ರೋಹಿತ್ ಅಭಿನಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ದರ್ಶನ್ ಸೇರಿ ಸಿನಿಮಾ, ಸಾಮಾಜಿಕ ಕ್ಷೇತ್ರದ ಗಣ್ಯರು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಕಾಟೇರ ಚಿತ್ರವು ಶತದಿನೋತ್ಸವ ಪೂರೈಸಲಿ ಎಂದು ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್, ಎಲ್ಲಾ ದರ್ಶನ್ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಟ್ರೈಲರ್ ಲಿಂಕ್ ನೋಡಿ…

Categories
ತೀರ್ಥಹಳ್ಳಿ

ಛಲಗಾರ ಪತ್ರಿಕೆಗೆ 50 ವರ್ಷ: ಗೌರವ ಸಮರ್ಪಣೆ

ಛಲಗಾರ ಪತ್ರಿಕೆಗೆ 50 ವರ್ಷ: ಗೌರವ ಸಮರ್ಪಣೆ
– ತೀರ್ಥಹಳ್ಳಿಯಲ್ಲಿ ಅಭಿನಂದನಾ ಕಾರ್ಯಕ್ರಮ
– ನಿಶಾಂತ್ ಗಣಪತಿ ಅವರಿಗೆ ವಿಶೇಷ ಗೌರವ
– ಪತ್ರಿಕೆ ಬಗ್ಗೆ ಗುಣಗಾನ ಮಾಡಿದ ಜನ ನಾಯಕರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ದಿನ ಪತ್ರಿಕೆ ಬೆಳಗಿನ ಛಲಗಾರ ಪತ್ರಿಕೆಗೆ 50 ವರ್ಷದ ಸಂಭ್ರಮದ ಅಂಗವಾಗಿ ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ಬಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು ಸಂಪಾದಕರಾದ ನಿಶಾಂತ್ ಗಣಪತಿ ಅವರಿಗೆ ಸನ್ಮಾನ ಮಾಡಲಾಯಿತು.

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ ಮಾತನಾಡಿ, ಆತ್ಮೀಯ ಸಮಾರಂಭ. ತಂದೆ ಜತೆಗೆ ಉತ್ತಮ ಒಡನಾಟ ಇತ್ತು. ಪತ್ರಿಕೋದ್ಯಮದ ಒಂದು ಇತಿಹಾಸ. ಛಲಗಾರ ಪತ್ರಿಕೆ 50 ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಈಗ ಹುಟ್ಟಿ ಸಾಯುವ ಪತ್ರಿಕೆಗಳೇ ಹೆಚ್ಚು. ಮೊಳೆ ಕಾಲದಿಂದ ಇಲ್ಲಿವರೆಗೂ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಸಮಾಜವನ್ನು ತಿದ್ದುವ ಕೆಲಸ ಪತ್ರಿಕೆಗಳಿಂದ ಆಗಬೇಕು. ಸಾಮಾಜಿಕ ಜವಾಬ್ದಾರಿ ದೊಡ್ಡದು. ಇಂದು ಪತ್ರಿಕಾ ಕ್ಷೇತ್ರ ಆತಂಕದಲ್ಲಿದೆ ಎಂದರು.

ಪ್ರಗತಿಪರ ಚಿಂತಕ ಕಡಿದಾಳ್ ದಯಾನಂದ ಅವರು ಮಾತನಾಡಿ, ಗಣಪತಿ ಮತ್ತು ಛಲಗಾರದ ನೆನಪುಗಳನ್ನು ಮಾಡಿಕೊಂಡರು. ಬಿಜೆಪಿ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಮಾತನಾಡಿ, ಪತ್ರಿಕೆಯಲ್ಲಿ ನಾನು ಕೂಡ ಪತ್ರಿಕೆ ಬಂಡಲ್ ಹಾಕುವ ಕೆಲಸದ ಮಾಡಿದ್ದೇನೆ. ಗಣಪತಿ ಓರ್ವ ಪರಿಣಾಮಕಾರಿ ಪತ್ರಕರ್ತ. ಸಾಮಾಜಿಕ ಓರೆ ಕೋರೆ ತಿದ್ದುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಾತನಾಡಿ, ಗಣಪತಿ ಮತ್ತು ನಾವೆಲ್ಲ ಒಳ್ಳೆ ಸ್ನೇಹಿತರು. ಪತ್ರಿಕಾ ಕ್ಷೇತ್ರದಲ್ಲಿ ನಿಶಾಂತ್ ತಮ್ಮದೇ ಸಾಧನೆ ಮಾಡಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಆರ್. ಮದನ್ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಜನರಿಗೆ ಅವಶ್ಯವಾದ ನಿಷ್ಪಕ್ಷಪಾತ ಲೇಖನಗಳನ್ನು ನೀಡಿದ್ದಾರೆ. ಪತ್ರಿಕೆ ನೂರು ವರ್ಷಗಳ ಸಂಭ್ರಮ ಆಚರಿಸುವಂತಾಗಲಿ ಎಂದರು.ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಶೆಟ್ಟಿ ಮುನ್ನೂರು, ಮಲ್ನಾಡ್ ಕ್ಲಬ್ ಅಧ್ಯಕ್ಷರಾದ ಸುಂದರೇಶ್, ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ವೆಂಕಟೇಶ್ ಹೆಗ್ಡೆ ಇತರರು ಇದ್ದರು. ಪತ್ರಕರ್ತ ಡಾನ್ ರಾಮಣ್ಣ ಮತ್ತು ಆದರ್ಶ ಹುಂಚದಕಟ್ಟೆ ಕಾರ್ಯಕ್ರಮ ಆಯೋಜಿಸಿದ್ದರು. ಜನಪ್ರತಿನಿಧಿಗಳು, ಪತ್ರಿಕಾ ಕ್ಷೇತ್ರದವರು, ಸಂಘ ಸಂಸ್ಥೆಗಳ ಪ್ರಮುಖರು ಪಾತ್ರ ವಹಿಸಿದ್ದರು.

ನನ್ನ ಉನ್ನತಿಗೆ ಕೊಡುಗೆ ಅಪಾರ – ಆರಗ ಜ್ಞಾನೇಂದ್ರ

ಛಲಗಾರ ಗಣಪತಿ ಅವರು ಅತ್ಯಂತ ಸಣ್ಣ ಹೋರಾಟವನ್ನು ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದರು. ನನ್ನ ಏಳಿಗೆಯಲ್ಲಿ ಛಲಗಾರ ಪತ್ರಿಕೆ ಬಹಳ ಮುಖ್ಯ ಕಾರಣವಾಗಿದೆ. ನನ್ನ ಬಗ್ಗೆ ಬರೆಯುತ್ತಿದ್ದ ಚಿಕ್ಕ ವರದಿಗಳು ಸಮಾಜ ನನ್ನ ಬೆನ್ನು ತಟ್ಟುತ್ತಿದೆ ಎಂಬ ಭಾವನೆ ಹೆಚ್ಚಿನ ಕೆಲಸಕ್ಕೆ ಸ್ಪೂರ್ತಿ ನೀಡುತ್ತಿತ್ತು. ಚುನಾವಣೆಯಲ್ಲಿ ಸೋತರೂ , ಗೆದ್ದರೂ ಗಣಪತಿ ಬೆನ್ನಿಗೆ ನಿಲ್ಲುತ್ತಿದ್ದರು. ಆಲೋಚನೆ ಹಚ್ಚುವ ಲೇಖನ ಬರೆಯುತ್ತಿದ್ದರು. ದೇವಣ್ಣ ರಾಯರು ಬೃಹಸ್ಪತಿ ವಾಣಿ ಬರುತ್ತಿದ್ದ ಕಾಲದಲ್ಲೂ ಛಲಗಾರವಾಗಿಯೇ ಉಳಿದಿತ್ತು. ಬರವಣಿಗೆಯ ಶೈಲಿ, ಪ್ರಕಟಿಸುವ ಸುದ್ದಿ ಜನರನ್ನು ಸೆಳೆಯುತ್ತಿತ್ತು. ಆಗ ಜನರು ಛಲಗಾರಕ್ಕೆ ಹೇಳಿ ಬರೆಸುತ್ತೇನೆ ಎಂದು ಅನೇಕರಿಗೆ ಹೆದರಿಸುತ್ತಿದ್ದರು. ಜನರ ನಂಬಿಕೆ ಛಲಗಾರದ ಮೇಲಿತ್ತು. ನನ್ನ ಬದುಕು ಮತ್ತು ಛಲಗಾರ ಪತ್ರಿಕೆ ಬೇರೆಯಾಗಿ ಉಳಿದಿಲ್ಲ. ಅತ್ಯಂತ ನಿಕಟವಾದ ಸ್ನೇಹ ಇತ್ತು. ಬರೆದ ವರದಿಗಳ ಬಗ್ಗೆ ಟೀಕೆ ಮಾಡಿ ಅವರೊಂದಿಗೆ  ಜಗಳವಾಡುತ್ತಿತ್ತು  ಎಂದು ಶಾಸಕ  ಆರಗ ಜ್ಞಾನೇಂದ್ರ  ನೆನಪಿಸಿಕೊಂಡರು.

 

Categories
ರಾಜ್ಯ

9 ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಹೆಲ್ಮೆಟ್.!

9 ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಹೆಲ್ಮೆಟ್.!
– ಚಿಕ್ಕ ಮಕ್ಕಳನ್ನು ಮೋಟಾರ್ ವಾಹನಗಳಲ್ಲಿ ಕರೆದೊಯ್ಯುವಾಗ ಸುರಕ್ಷತಾ ಕ್ರಮ
– ಹೈಕೋರ್ಟ್ ನೋಟಿಸ್‌: ಏನಿದು ಹೊಸ ನಿಯಮ?

NAMMUR EXPRESS NEWS
ಬೆಂಗಳೂರು: ಒಂಭತ್ತು ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಸುರಕ್ಷತಾ ಹೆಲ್ಮೆಟ್ ಹಾಗೂ ಮಕ್ಕಳ ಸುರಕ್ಷತಾ ಸಾಧನಗಳು ಲಭ್ಯವಾಗುವಂತೆ ಮಾಡಲು ತುರ್ತು ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ಬೆಂಗಳೂರಿನ ಡಾ.ಕೆ. ಅರ್ಚನಾಭಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು. ಜತೆಗೆ, ಆರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಜನವರಿಗೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ಚಿಕ್ಕಮಕ್ಕಳಿಗೆ ಅಗತ್ಯ ಹೆಲ್ಮೆಟ್ ಗಳು ದೊರಕುತ್ತಿಲ್ಲ. ಹಾಗಾಗಿ ಅವುಗಳು ಲಭ್ಯವಾಗುವಂತೆ ಮಾಡಬೇಕು. ಮೋಟಾರು ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದರು.

Categories
ತೀರ್ಥಹಳ್ಳಿ

ಮಲೆನಾಡು ಕರಾವಳಿ ಯುವ ನಾಯಕರ ಸಮಾಗಮ

ಮಲೆನಾಡು ಕರಾವಳಿ ಯುವ ನಾಯಕರ ಸಮಾಗಮ
– ಮಲೆನಾಡು ಕರಾವಳಿ ಜನಪರ ಒಕ್ಕೂಟದ ಆಯೋಜನೆ
– 250ಕ್ಕೂ ಹೆಚ್ಚು ಮಂದಿ ಭಾಗಿ: ನಾಳೆಯೂ ಶಿಬಿರ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಕರಾವಳಿ ಜನಪರ ಒಕ್ಕೂಟದ ವತಿಯಿಂದ ಕುಪ್ಪಳಿಯಲ್ಲಿ ಶನಿವಾರ ನಾಯಕತ್ವ ಶಿಬಿರ ಆರಂಭಗೊಂಡಿತು. ಭಾನುವಾರ ಕೂಡ ಈ ಶಿಬಿರ ನಡೆಯಲಿದೆ. ಮಲೆನಾಡು ಕರಾವಳಿ ಜನರ ಬದುಕು, ಭಾವನೆ, ಶ್ರದ್ಧೆ, ನಂಬಿಕೆಗಳ ಗಟ್ಟಿ ದನಿಯಾಗಿ ಈ ಶಿಬಿರ ಕೆಲಸ ಮಾಡಲಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ ಜಿಲ್ಲೆಗಳ 250ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಇಲ್ಲಿನ ಜನರ ಹೋರಾಟ, ಸಾಂಸ್ಕೃತಿಕ ಸಮಾಗಮ, ಉದ್ಯೋಗ, ಅಭಿವೃದ್ಧಿ, ಕಲೆ, ಬದುಕು ಎಲ್ಲದರ ಅಭಿವೃದ್ಧಿ ಹಾಗೂ ವಿಚಾರಧಾರೆ ವಿನಿಮಯ, ನೇತೃತ್ವಕ್ಕೆ ಈ ಶಿಬಿರ ನಾಂದಿ ಹಾಡಲಿದೆ ಎಂದರು.
ರೋಷನಿ ಸಂವಿಧಾನ ಪೀಠಿಕೆ ಓದಿ ಉದ್ಘಾಟನೆ ಮಾಡಿದರು.

ಎಂ.ಜಿ ಹೆಗ್ಗಡೆ, ನೆಂಪೆ ದೇವರಾಜ್, ಅನಿಲ್ ಹೊಸಕೊಪ್ಪ ಇತರರು ಇದ್ದರು. ಎಂ.ಎನ್ ಮೂರ್ತಿ ಮಾತನಾಡಿ, ಇದು ಚಿಂತನೆಗೆ ಪೂರಕವಾಗುವ ವಾತಾವರಣ. ಇವತ್ತು ಯುವ ಜನತೆ ರಾಜಕೀಯ ಹಿಂದೆ ಹೋಗಿ ಕೆಟ್ಟ ಚಟುವಟಿಕೆಗೆ ಕಾರಣ ಆಗಿದೆ. ಎಲ್ಲಾ ಪಕ್ಷದಲ್ಲೂ ವಂಚಕರೇ. ಮುಂದಿನ ಪೀಳಿಗೆಯ ಅಭಿವೃದ್ಧಿ ಯಾರಿಗೂ ಬೇಕಿಲ್ಲ.. ಮಕ್ಕಳು ದಿನ ದಿನೇ ಹಾಳಾಗುತ್ತಿದ್ದಾರೆ. ಮಲೆನಾಡು ಕರಾವಳಿ ಅಭಿವೃದ್ಧಿ ಮಂಡಳಿ ರಚನೆ ಆಗಿದೆ. ಎಲ್ಲಾ ಸಮಸ್ಯೆಗೆ ನಾವು ದನಿ ಆಗಬೇಕು ಎಂದರು. ಆಯೋಜಕರು ಮಲೆನಾಡು ಮತ್ತು ಕರಾವಳಿ ಹೋರಾಟಕ್ಕೆ ನೂರಾರು ಮಂದಿ ಜತೆಗೂಡಿದ್ದಾರೆ. ಎಲ್ಲರೂ ಸೇರಿ ಸಂಘಟನೆ ಕಟ್ಟೋಣ ಎಂದು ಕರೆ ನೀಡಿದರು. 250ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.