Categories
ಉಡುಪಿ ಕರಾವಳಿ

ಕರಾವಳಿ ಟಾಪ್ ನ್ಯೂಸ್

ಉಡುಪಿ: ಕಂದಕಕ್ಕೆ ಉರುಳಿಬಿದ್ದ ಕಾರು!
ಉಡುಪಿ: ಚಿಕಿತ್ಸೆ ನೀಡುತ್ತಿರುವಾಗಲೇ ಮೃತಪಟ್ಟ ವೈದ್ಯೆ!
ಸುರತ್ಕಲ್: ನಾಪತ್ತೆಯಾಗಿದ್ದ ಭಿನ್ನಕೋಮಿನ ಜೋಡಿ ಮದುವೆ

NAMMUR EXPRESS NEWS
ಉಡುಪಿ: ಪೆರಂಪಳ್ಳಿಯ ರೈಲ್ವೆ ಸೇತುವೆ ಬಳಿ ತಡೆಗೋಡೆ ಇಲ್ಲದ ಕಾರಣ ಕಾರೊಂದು ಕಂದಕಕ್ಕೆ ಉರುಳಿ ಬಿದ್ದಿದ್ದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಪೆರಂಪಳ್ಳಿ ರೈಲ್ವೆ ಸೇತುವೆಯ ಬಳಿ ತಡೆಗೋಡೆ ಇಲ್ಲದೇ ಸಾಕಷ್ಟು ಸಮಸ್ಯೆ ಆಗುತ್ತಿದ್ದು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ರಾತ್ರಿಯ ಹೊತ್ತು ವಾಹನ ಸವಾರರು ಇಲ್ಲಿ ವಾಹನ ಚಲಾಯಿಸಲು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಚಿಕಿತ್ಸೆ ನೀಡುತ್ತಿರುವಾಗಲೇ ಮರಣ ಹೊಂದಿದ್ದ ವೈದ್ಯೆ

ಉಡುಪಿ: ವೈದ್ಯೆಯೊಬ್ಬರು ಚಿಕಿತ್ಸೆ ನೀಡುತ್ತಿರುವ ವೇಳೆಯೇ ಹೃದಯದ ನೋವಿನಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ದುರಂತ ಘಟನೆ ನಡೆದಿದೆ. ಡಾ. ಶಶಿಕಲಾ ಚಿಕಿತ್ಸೆ ನೀಡುತ್ತಿದ್ದ ವೇಳೆ ಮೃತಪಟ್ಟವರು. ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದ ವೈದ್ಯರಾಗಿರುವ ಡಾ. ಶಶಿಕಲಾ ಅವರು ರೋಗಿಗೆ ಚಿಕಿತ್ಸೆ ನೀಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅವರಿಗೆ 60 ವರ್ಷ ಆಗಿತ್ತು.ಶಶಿಕಲಾ ಅವರು 2022ರ ಫೆಬ್ರವರಿಯಲ್ಲಿ ವಯೋ ನಿವೃತ್ತಿ ಹೊಂದಿದ್ದರು.ಆದರೆ, ವೈದ್ಯರಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಹೊರಗುತ್ತಿಗೆಯಲ್ಲಿ ಮುಂದುವರಿಸಲಾಗಿತ್ತು.

ಅವರು ಹೊರರೋಗಿಗಳ ವಿಭಾಗದಲ್ಲಿ ಪ್ರಮುಖವಾಗಿ ರೋಗಿಗಳನ್ನು ನೋಡುತ್ತಿದ್ದರು. ಗುರುವಾರ ಅವರು ಜಿಲ್ಲಾಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಸೇವೆ ನೀಡುತ್ತಿದ್ದ ವೇಳೆ ಒಮ್ಮೆಗೇ ಕುಸಿದು ಬಿದ್ದರು. ರೋಗಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲೇ ಕುಸಿದು ಬಿದ್ದಿದ್ದ ಶಶಿಕಲಾ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ಆದರೆ, ಶಶಿಕಲಾ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಕಳೆದುಕೊಂಡರು.

ನಾಪತ್ತೆಯಾಗಿದ್ದ ಭಿನ್ನಕೋಮಿನ ಜೋಡಿ ಮದುವೆ!

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಬ್ಲಾಕ್ ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಹಾಗೂ 3ನೇ ಬ್ಲಾಕ್ ಆಶ್ರಯ ಕಾಲೋನಿ ನಿವಾಸಿ ಆಯೇಷಾ (19) ಡಿ.1ರಂದು ನಾಪತ್ತೆಯಾಗಿದ್ದರು. ಇದೀಗ ಈ ಜೋಡಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಪ್ರಕರಣಕ್ಕೆ ಪುಷ್ಠಿ ಎಂಬಂತೆ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಇದರಲ್ಲಿ ಯುವಕ ಪ್ರಶಾಂತ್ ಮತ್ತು ಆಯೇಷಾ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಅವರ ಮಿತ್ರರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ವೈರಲ್‌ ಮಾಡಿದ್ದಾರೆ. ಅಯೇಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಿಸಿಕೊಂಡಿದ್ದಾರೆ. ನಾಪತ್ತೆಯಾದ ದಿನ ಆಯೇಷಾ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿ ಕುಟುಂಬ ಮೂಲತಃ ಕಾರವಾರದ ಮುಂಡಗೋಡದವರಾಗಿದ್ದು, ಈಕೆಯ ತಂದೆ ಸ್ಥಳೀಯವಾಗಿ ಉದ್ಯೋಗದಲ್ಲಿದ್ದಾರೆ. ಅವರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದರೆ

Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಅಮೃತ್-2 ಯೋಜನೆ ಭಾಗ್ಯ!

ತೀರ್ಥಹಳ್ಳಿಗೆ ಅಮೃತ್-2 ಯೋಜನೆ ಭಾಗ್ಯ!
– ತೀರ್ಥಹಳ್ಳಿ ಪ.ಪಂ.ಗೆ 2.69 ಕೋಟಿ ಅನುದಾನ
– ಶುದ್ಧ ನೀರು ನೀಡುವ ಯೋಜನೆಗೆ ಹಣ

NAMMUR EXPRESS NEWS
ತೀರ್ಥಹಳ್ಳಿ: ಅಮೃತ್‌ ಯೋಜನೆ 2.0 ಅಡಿಯಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಗೆ ಅಂದಾಜು 400 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಹಾಗೂ 24/7 ನೀರು ಶುದ್ದೀಕರಣ ಘಟಕದ ಉನ್ನತೀಕರಣ ಕಾಮಗಾರಿಗೆ 2.69 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ. ಅನುದಾನ ಮಂಜೂರಾಗಲು ಕಾರಣರಾದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾ‌ರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಗೆ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್‌ ಅವರಿಗೆ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರಿಗೆ ಸಮಸ್ತ ಪಟ್ಟಣ ವಾಸಿಗಳು ಹಾಗೂ ಕೌನ್ಸಿಲ್ ಸದಸ್ಯರ ಪರವಾಗಿ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ  ಅಭಿನಂದನೆ ಸಲ್ಲಿಸಿದ್ದಾರೆ.

Categories
ರಾಜ್ಯ

ಧರ್ಮಸ್ಥಳ ಲಕ್ಷದೀಪೋತ್ಸವ ಸಡಗರ ಶುರು!

ಧರ್ಮಸ್ಥಳ ಲಕ್ಷದೀಪೋತ್ಸವ ಸಡಗರ ಶುರು!
– ಅದ್ದೂರಿಯಾಗಿ ನಡೆಯಲಿದೆ ಸರ್ವಧರ್ಮ ಸಮ್ಮೇಳನ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
– ಧರ್ಮಸ್ಥಳ ಕ್ಷೇತ್ರದಲ್ಲಿ ಜನವೋ ಜನ

NAMMUR EXPRESS NEWS
ಮಂಗಳೂರು: ಧರ್ಮಸ್ಥಳದಲ್ಲಿ ಇಂದಿನಿಂದ ಡಿ.12ರ ತನಕ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮ. ಇಂದು ಶುಕ್ರವಾರ ಬೆಳಿಗ್ಗೆ ಗಂಟೆ 10.30ಕ್ಕೆ ಹೈಸ್ಕೂಲು ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ ನಡೆಯಲಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸುವರು. ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಡಿ. 10ರಂದು ರಾತ್ರಿ 7ರಿಂದ 10ರ ವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಡಿ. 11ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.ಸುಪ್ರೀಂ ಕೋರ್ಟಿನ ನ್ಯಾಯವಾದಿ ಡಾ. ಎಂ. ಆರ್. ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ ಧಾರ್ಮಿಕ ಉಪನ್ಯಾಸ ನೀಡುವರು. ರಾತ್ರಿ ಗಂಟೆ 8.30ರಿಂದ ಬೆಂಗಳೂರಿನ ಅನುರಾಧಾ ವಿಕ್ರಾಂತ್ ಮತ್ತು ಬಳಗದಿಂದ ನೃತ್ಯ ಪ್ರದರ್ಶನವಿದೆ.

ಡಿ. 12ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ. ಎಸ್.ಸೋಮನಾಥ್ ಉದ್ಘಾಟಿಸುವರು. ಬೆಂಗಳೂರಿನ ಖ್ಯಾತ ಗಮಕಿ ಡಾ.ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸುವರು. ಹೊನ್ನಾವರದ ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಡಿ ಮತ್ತು ಬಂಟ್ವಾಳದ ಡಾ. ಅಜಕ್ಕಳ ಗಿರೀಶ್ ಭಟ್ ಉಪನ್ಯಾಸ ನೀಡುವರು. ರಾತ್ರಿ ಗಂಟೆ 8.30ರಿಂದ ಬೆಂಗಳೂರಿನ ಜತಿನ್ ನೃತ್ಯ ಅಕಾಡೆಮಿಯ ವಿದುಷಿ ಅರ್ಚನಾ ಪುಣೇಶ್ ಮತ್ತು ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಡಿ.12ರಂದು 12 ಗಂಟೆ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ. ಅಂದು ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಧರ್ಮಸ್ಥಳಕ್ಕೆ ಬಂದು ವೈವಿಧ್ಯಮಯ ಸೇವೆ ಅರ್ಪಿಸುವರು. ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

ಉತ್ಸವಗಳು

ಡಿ. 8- ಹೊಸಕಟ್ಟೆ ಉತ್ಸವ
ಡಿ. 9- ಕೆರೆಕಟ್ಟೆ ಉತ್ಸವ
ಡಿ. 10- ಲಲಿತೋದ್ಯಾನ ಉತ್ಸವ
ಡಿ. 11- ಕಂಚಿಮಾರುಕಟ್ಟೆ ಉತ್ಸವ,
ಡಿ. 12- ಗೌರಿಮಾರುಕಟ್ಟೆ ಉತ್ಸವ,ಲಕ್ಷದೀಪೋತ್ಸವ,
ಡಿ. 13- ಸಂಜೆ 7ರಿಂದ ಸಮವಸರಣ ಪೂಜೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಜರಗಲಿದೆ. ವಿಶೇಷ ಮಹತ್ವದ ಸರ್ವಧರ್ಮ ಸಮ್ಮೇಳನ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಸರ್ವಧರ್ಮ ಸಮ್ಮೇಳನ, 1933ರಿಂದ ನಡೆದುಕೊಂಡು ಬರುತ್ತಿರುವ ಸರ್ವಧರ್ಮ ಸಮ್ಮೇಳನವನ್ನು ಮೊದಲು ಆರಂಭಿಸಿದರು ದಿ.ಮಂಜಯ್ಯ ಹೆಗ್ಗಡೆಯವರಾಗಿದ್ದಾರೆ. ಲಕ್ಷದೀಪೋತ್ಸವದ ವೇಳೆ ಧರ್ಮಸ್ಥಳ ಕ್ಷೇತ್ರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ, ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನಗಳು ನಡೆಯುತ್ತವೆ. ಆದ್ದರಿಂದಲೇ ಲಕ್ಷದೀಪೋತ್ಸವ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಉಳಿಯದೆ ಸಮಾಜಮುಖಿಯಾಗಿ ಬೆಳೆದು ನಿಲ್ಲಲು ಸಾಧ್ಯವಾಗಿದೆ. ಇದು ಸಾಂಸ್ಕೃತಿಕ ಹಾಗೂ ಬೌದ್ಧಿಕತೆಯ ಸಮಾಗಮವಾಗಿದೆ. ಇಂಥ ವಿಶೇಷಗಳನ್ನು ನೋಡಲೆಂದೇ ಲಕ್ಷದೀಪೋತ್ಸವದಲ್ಲಿ ರಾಜ್ಯದ ವಿವಿಧ ಕಡೆಯಿಂದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಲಕ್ಷದೀಪೋತ್ಸವದ ಅಂಗವಾಗಿ ರಾತ್ರಿ ಇಡೀ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಮನೋರಂಜನಾ ಕಾರ್ಯಕ್ರಮಗಳು ಧರ್ಮಸ್ಥಳದಲ್ಲಿ ನಡೆಯಲಿವೆ

Categories
ಅಪರಾಧ ಶಿವಮೊಗ್ಗ

ಮನೆಗೆ ನುಗ್ಗಿದ್ದ ಕಳ್ಳರು ಬೇಲಿ ಹಾರಿ ಎಸ್ಕೆಪ್!

ಮನೆಗೆ ನುಗ್ಗಿದ್ದ ಕಳ್ಳರು ಬೇಲಿ ಹಾರಿ ಎಸ್ಕೆಪ್!
– ಕಳ್ಳರನ್ನು ಸೆರೆ ಹಿಡಿದ ಗ್ರಾಮಸ್ಥರು
– ಬೈಕ್ ವೀಲಿಂಗ್ ಮಾಡಿದ ಆರೋಪಿಗಳಿಗೆ ದಂಡ
– ಶಿಕಾರಿಪುರ : ಅಡಿಕೆಗೆ ಸಸಿ ಕಡಿತಲೆ

NAMMUR EXPRESS NEWS
ಶಿವಮೊಗ್ಗ ಜಿಲ್ಲೆ ಸಾಗರ ಪೇಟೆಯ ಹೊರವಲಯದಲ್ಲಿ ನಡೆಯುತ್ತಿದ್ದ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳನ್ನ ಜನರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. ಕಳೆದ ಹಲವು ದಿನಗಳಿಂದ ತಾಲೂಕಿನ ಯಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಕರ್ಕಿಕೊಪ್ಪ ಗ್ರಾಮದಲ್ಲಿ ಕಳೆದೊಂದು ವಾರದಲ್ಲಿ 3 ಮನೆಗಳಲ್ಲಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ ಗೀಜಗಾರು, ಮಂಕಳಲೆ, ಹಳೆ ಇಕ್ಕೇರಿಗಳಲ್ಲಿ ತಲಾ ಒಂದೊಂದು ಕಳವು ಪ್ರಕರಣ ವರದಿಯಾಗಿದೆ.

ಈ ಮಧ್ಯೆ ಕರ್ಕಿಕೊಪ್ಪದ ಮನೆಯೊಂದರ ಹಿಂಭಾಗದಿಂದ ಕಳ್ಳರು ನುಗ್ಗಲು ಯತ್ನಿಸಿದ್ದರು. ಮನೆಯವರು ಊಟ ಮುಗಿಸಿ ಹೊರ ಬರುವುದನ್ನು ಅರಿತ ಕಳ್ಳರು ಹೊರಗಿನ ತಂತಿ ಬೇಲಿ ಹಾರಿಕೊಂಡು ಕಾರು ಹತ್ತಿ ಪರಾರಿಯಾಗಿದ್ದಾರೆ. ಅವರನ್ನ ಫಾಲೋ ಮಾಡಿದ ಗ್ರಾಮಸ್ಥರ ಹಿಂಡು, ವರದಹಳ್ಳಿ ಕ್ರಾಸ್ ಬಳಿ ಕಾರನ್ನ ಅಡ್ಡಗಟ್ಟಿದ್ದಾರೆ. ಇದರ ನಡುವೆ ಗ್ರಾಮಸ್ಥರ ಮೇಲೂ ಕಾರು ಹರಿಸುವ ಪ್ರಯತ್ನವನ್ನ ಕಳ್ಳರು ನಡೆಸಿದ್ದಾರೆ. ಅಂತಿಮವಾಗಿ ರಸ್ತೆ ಅಡ್ಡಗಟ್ಟಿ ಕಳ್ಳರ ಕಾರನ್ನ ತಡೆದ ಗ್ರಾಮಸ್ಥರು ಎರಡು ಬಡಗಿ ಬಿಟ್ಟು ಪೊಲೀಸರನ್ನ ಕರೆಸಿ, ಕಳ್ಳರನ್ನ ಹಾಗೂ ಅವರು ಹೋಗುತ್ತಿದ್ದ ಒಮಿನಿಯನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬೈಕ್ ವೀಲಿಂಗ್ ಮಾಡಿದ ಆರೋಪಿಗಳಿಗೆ ದಂಡ

ಬೈಕ್ ವೀಲಿಂಗ್ ಮಾಡಿದ ಆರೋಪಿಗಳಿಗೆ ಮತ್ತು ವೀಲಿಂಗ್ ನಡೆಸಲು ಸಹಕರಿಸಿದ ಬೈಕ್ ಮಾಲೀಕನಿಗೂ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ‌. ದಿನಾಂಕ:15/08/2023 ರಂದು ಬೆಳಿಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್ ಎಂಬ ಯುವಕರಿಬ್ಬರು ಎರಡು YAMAHA RX ಬೈಕಿಗಳಲ್ಲಿ ಅತಿ ವೇಗ, ಅಜಾಗರುಕತೆ ಮತ್ತು ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕರ ಮತ್ತು ತನ್ನ ಪ್ರಾಣಕ್ಕೆ ಹಾನಿಯಾಗುವಂತೆ ವ್ಹೀಲಿಂಗ್ ಮಾಡುತ್ತಿದ್ದರು. ಈ ಬಗ್ಗೆ ಗುನ್ನೆ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಕುರಿತು ತನಿಖಾಧಿಕಾರಿಗಳಾಗಿ ಪಿಎಸ್ಐ ತಿರುಮಲೇಶ್ ರನ್ನ ನೇಮಿಸಲಾಗಿತ್ತು. ಬೈಕ್ ಗಳ ಚಾಲಕರು & ಮಾಲೀಕ ಸೇರಿ 3 ಜನ ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣ ಪತ್ರವನ್ನು ಸಲ್ಲಿಸಿದ್ದರು.ಆರೋಪಿ 1) ಫೈಸಲ್ ಅಹ್ಮದ್, 20 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 11,000 ರೂ, ದಂಡ, 2) ಸೂಫಿಯಾನ್ ಖಾನ್, 21 ವರ್ಷ ಟ್ಯಾಂಕ್ ಮೊಹಲ್ಲಾ , ಶಿವಮೊಗ್ಗ ಟೌನ್ ಈತನಿಗೆ 8000 ರೂ ದಂಡ ಮತ್ತು ಬೈಕಿನ ಆರ್ ಸಿ ಮಾಲೀಕನಾದ 3) ಮೊಹಮ್ಮದ್ ಸೈಫುಲ್ಲಾ, 50 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 4500 ರೂ ದಂಡ ವಿಧಿಸಿ ಅದೇಶಿಸಿದ್ದಾರೆ.

ಶಿಕಾರಿಪುರ : 30ಕ್ಕೂ ಹೆಚ್ಚು ಅಡಿಕೆಗೆ ಸಸಿ ಕಡಿತಲೆ

ಶಿಕಾರಿಪುರ : ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ಕಡಿದಿದ್ದಾರೆ. ಶಿಕಾರಿಪುರ ತಾಲೂಕು ಮಳವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರೈತ ಮಂಜಪ್ಪ ಎಂಬುವವರ ತೋಟದಲ್ಲಿ ಘಟನೆ ಸಂಭವಿಸಿದೆ. ಸುಮಾರು 30 ಅಡಿಕೆ ಸಸಿಗಳನ್ನು ಕಡಿದು ಹಾಕಲಾಗಿದೆ. ವಿಷಯ ತಿಳಿದು ಕಾಂಗ್ರೆಸ್‌ ಮುಖಂಡ ನಾಗರಾಜ ಗೌಡ ಸೇರಿದಂತೆ ಹಲವರು ಭೇಟಿ ನೀಡಿದ್ದರು.

ಶಿವಮೊಗ್ಗದಲ್ಲಿ ಬೈಕ್ ಕಳ್ಳತನ

ಶಿವಮೊಗ್ಗ : ಮನೆ ಮುಂದೆ ನಿಲ್ಲಿಸಿದ್ದ ಹೊಸ ಪಲ್ಸರ್‌ ಬೈಕ್‌ ಕಳ್ಳತನವಾಗಿದೆ. ವಿನೋಬನಗರ 60 ಅಡಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಲಲಿತಮ್ಮ ಎಂಬುವವರ ಹೆಸರಿನಲ್ಲಿದ್ದ ಪಲ್ಸರ್‌ ಬೈಕ್‌ ಅನ್ನು ಅವರ ಮಗ ಚಲಾಯಿಸುತ್ತಿದ್ದರು. ನ.26ರಂದು ರಾತ್ರಿ ಕೆಲಸ ಮುಗಿಸಿ ಬಂದು ಮನೆ ಮುಂದೆ ಬೈಕ್‌ ನಿಲ್ಲಿಸಿದ್ದರು. ಬೆಳಗ್ಗೆ ಲಲಿತಮ್ಮ ಅವರು ಮನೆಯಿಂದ ಹೊರಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಲಲಿತಮ್ಮ ಮತ್ತು ಅವರ ಮಗ ಬಳಿಕ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಜೂನ್‌ ತಿಂಗಳಲ್ಲಿ ಆ ಬೈಕ್‌ ಖರೀದಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದರು.‌

Categories
ತೀರ್ಥಹಳ್ಳಿ ಮಲ್ನಾಡ್

ಸಾಮಾಜಿಕ ಕ್ರಾಂತಿಯತ್ತ ಮಲೆನಾಡಿನ ಅಂಟಿಕೆ ಪಿಂಟಿಗೆ!

ಸಾಮಾಜಿಕ ಕ್ರಾಂತಿಯತ್ತ ಮಲೆನಾಡಿನ ಅಂಟಿಕೆ ಪಿಂಟಿಗೆ!
– ಸರ್ಕಾರಿ ಶಾಲೆ ಉಳಿವಿಗಾಗಿ ಆಂಟಿಗೆ ಪಿಂಟಿಗೆ
– ದೇಗುಲ, ಚಿಕಿತ್ಸೆ, ಬಡವರ ಸೇವೆ ಸೇರಿ ಸಮಾಜ ಸೇವೆಗಾಗಿ ಕಲೆ

NAMMUR EXPRESS NEWS
ದೀಪಾವಳಿಯಲ್ಲಿ ಅಂಟಿಗೆ ಪಿಂಟಿಗೆ ಕಲೆ ರಾತ್ರಿ ಇಡೀ ಆಡಿ ಕೊನೆಗೆ ಆ ಹಣದಿಂದ ಊಟ ಮಾಡಿ ಅಲ್ಲಿಗೆ ವಿರಾಮ ಹಾಡುತ್ತಿದ್ದ ಕಲೆ ಇದೀಗ ಸಾಮಾಜಿಕ ಅಭಿವೃದ್ಧಿಯ ಕ್ರಾಂತಿಯತ್ತ ಸಾಗುತ್ತಿದೆ. ಮಲೆನಾಡಿನ ಸಾಂಪ್ರದಾಯಕ ಕಲೆ ಇದೀಗ ಸರ್ಕಾರಿ ಶಾಲೆಗಳ ಅಭಿವೃದ್ಧಿ, ದೇಗುಲ ಅಭಿವೃದ್ಧಿ, ಚಿಕಿತ್ಸೆ, ಬಡ ಮಕ್ಕಳಿಗೆ ಸಹಾಯಕ್ಕಾಗಿ ಸಂಪರ್ಪಣೆ ಆಗುತ್ತಿದೆ. ನೂರಾರು ಕಲಾವಿದರು ತಮ್ಮ ಕಲೆ, ನಿದ್ರೆ ಬಿಟ್ಟು ಸಮಾಜದ ಏಳ್ಗೆಗಾಗಿ ದೀಪಾವಳಿ ಸಂದರ್ಭದಲ್ಲಿ ಶ್ರಮಿಸಿದ್ದಾರೆ. ಇತ್ತೀಚೆಗೆ ನಡೆದ ಆಂಟಿಗೆ ಪಿಂಟಿಗೆ ಕಾರ್ಯಕ್ರಮಗಳು ಸಮಾಜಮುಖಿ ಕೆಲಸಕ್ಕೆ ಮುನ್ನುಡಿಯಾಗಿವೆ.

ಆಂಟಿಗೆ ಪಿಂಟಿಗೆ ತಂಡವು ಯುವಕ ಸಂಘ , ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ನಡೆದಿದ್ದು, ಇದರಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾನಗಳ ಅಭಿವೃದ್ಧಿ,, ಸಮುದಾಯ ಭವನ ನಿರ್ಮಾಣ, ಶಾಲೆಗಳ ಅಭಿವೃದ್ಧಿ, ಜೊತೆಗೆ ಮಾನವೀಯ ದೃಷ್ಟಿಯಿಂದ ಆರೋಗ್ಯ ಚಿಕಿತ್ಸೆಗಾಗಿ , ಶಿಕ್ಷಣಕ್ಕಾಗಿ ನೀಡಲಾಗಿದೆ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ನಡೆಯುವ ಅಂಟಿಗೆ ಪಿಂಟಿಗೆ ಈ ಬಾರಿ ಅತಿ ಹೆಚ್ಚು ಹಳ್ಳಿಗಳಲ್ಲಿ ನಡೆದಿದ್ದು ಶಾಲೆಯ ಅಭಿವೃದ್ಧಿಗಾಗಿಯೂ ಕೂಡ ಹಣವನ್ನು ನೀಡಿದ್ದಾರೆ.

ಅಂಟಿಗೆ ಪಿಂಟಿಗೆಯಿಂದ ಶಾಲೆ ಅಭಿವೃದ್ಧಿ

ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರವಳ್ಳಿ, ಹಿಲಿಕೆರೆ, ಹೊನ್ನೆತಾಳು, ಸಾಲೂರು, ಕೊಪ್ಪದ ಭಂಡಿಗಡಿ, ಹೊಸನಗರ ಸೇರಿದಂತೆ ಅನೇಕ ಕಡೆ ಈ ರೀತಿಯ ಮಾದರಿಯ ಕೆಲಸವನ್ನು ಮಾಡಲಾಗಿದ್ದು, ಇದಕ್ಕೆ ಯುವಕರು ಸೇರಿದಂತೆ ಗ್ರಾಮಸ್ತರು ಕೈ ಜೋಡಿಸಿದ್ದಾರೆ. ಈ ಮೂಲಕ ಅಂಟಿಗೆ ಪಿಂಟಿಗೆ ಕಲೆ ಸಾಮಾಜಿಕ ಕ್ರಾಂತಿಯತ್ತ ಸಾಗುತ್ತಿದೆ.

Categories
ಕರಾವಳಿ

ಕರಾವಳಿ ರೈತನಿಗೆ ಸಿಗ್ತು ಬಿಲಿಯನೇರ್ ರೈತ ಪ್ರಶಸ್ತಿ

ಕರಾವಳಿ ರೈತನಿಗೆ ಸಿಗ್ತು ಬಿಲಿಯನೇರ್ ರೈತ ಪ್ರಶಸ್ತಿ
– ಕುಂದಾಪುರದ ತೆಕ್ಕಟ್ಟೆಯ ರಮೇಶ್ ನಾಯಕ್ ಸಾಧನೆ
– ಡಿ.7ರಂದು ಪ್ರಶಸ್ತಿ: ಮೆಚ್ಚುಗೆ ಮಹಾಪೂರ

NAMMUR EXPRESS NEWS
ಒಂದು ಕೋಟಿಗೂ ಅಧಿಕ ವಹಿವಾಟು ನಡೆಸಿದ ಉಡುಪಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕ ಹಾಗೂ ಪ್ರಗತಿಪರ ರೈತ ರಮೇಶ್ ನಾಯಕ್ ಅವರಿಗೆ ಕೇಂದ್ರ ಸರ್ಕಾರದ ‘ಬಿಲಿಯನೇರ್ ರೈತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ತೆಕ್ಕಟ್ಟೆ ವ್ಯವಸಾಯ ಮತ್ತು ವ್ಯವಸಾಯ ಆಧಾರಿತ ಉದ್ಯಮವನ್ನು ಮಾಡಿ ಮಿಲಿಯನ್ ಹಾಗೂ ಬಿಲಿಯನ್ ವಹಿವಾಟು ಹೊಂದಿದ ರೈತರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಎಂಬ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ತೆಕ್ಕಟ್ಟೆಯ ಪ್ರತಿಪರ ರೈತ ಟಿ. ರಮೇಶ್ ನಾಯಕ್ ಇವರು ಬಿಲಿಯನೇರ್ ಫಾರ್ಮರ್ ಎಂಬ ಪ್ರಶಸ್ತಿ ಸ್ವೀಕರಿಸಿದರು
ಗುಜರಾತ್ ರಾಜ್ಯದ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ರಮೇಶ್ ನಾಯಕ್ ಅವರಿಗೆ ದೆಹಲಿಯ ಮೇಳ ಗೌಂಡ್ ಐಎಆರ್ ಐನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಆಚಾರ್ಯ ದೇವವ್ರತ್ ಅವರು, ಕೃಷಿ ಎಂದರೆ ಕೇವಲವಾಗಿ ಕಾಣುವ ಈ ದಿನಗಳಲ್ಲಿ ದೇಶದಾದ್ಯಂತ ಇರುವ ಲಕ್ಷ ಕೋಟಿಗಳಲ್ಲಿ ಕೃಷಿ ಸಂಬಂಧಿತ ವ್ಯವಸಾಯ ನಡೆಸುವವರನ್ನು ಗುರುತಿಸುವುದರಿಂದ ಇತರ ಕೃಷಿಕರಿಗೆ ಹುಮ್ಮಸ್ಸು ಬರುತ್ತದೆ. ಮತ್ತು ಕೃಷಿಕರು ಈ ರೀತಿಯ ಗೌರವವನ್ನು ಪಡೆಯಲು ನಿಜವಾಗಿಯೂ ಅರ್ಹರು ಎಂದು ಅಭಿಪ್ರಾಯಪಟ್ಟರು.

Categories
ಅಡಿಕೆ-ದರ ಶಿವಮೊಗ್ಗ

ಅಡಿಕೆ ದರ ಎಷ್ಟಿದೆ…?

ಅಡಿಕೆ ದರ ಎಷ್ಟಿದೆ…?
– ಶಿವಮೊಗ್ಗ ಅಡಿಕೆ ದರ ಇದು ನೋಡಿ…!

ಬೆಟ್ಟೆ- 40359-52872
ಗೊರಬಲು- 17299-36699
ರಾಶಿ- 35109-47499
ಸರಕು – 47359-76110
ರಾಶಿ ನ್ಯೂ – 36219-47199
ಸಿಪ್ಪೆಗೊಟು – 12869-21100
ಚಾಲಿ -34599-38799
ಕೋಕಾ 14989-34699
ಕರೆ ಗೋಟು – 31899-34251
ಬಿಳೆ ಗೋಟು – 20299-33299

Categories
ಬೆಂಗಳೂರು ರಾಜ್ಯ

ರಾಜ್ಯಕ್ಕೆ ಮತ್ತೆ ವರುಣನ ಕಾಟ?!

ರಾಜ್ಯಕ್ಕೆ ಮತ್ತೆ ವರುಣನ ಕಾಟ?!
– ಡಿ.9ರಿಂದ 4 ದಿನ ಮಳೆ ಬರುವ ಸಾಧ್ಯತೆ
– ರೈತರಿಗೆ ಆತಂಕ: ರೋಗ ಭೀತಿ

NAMMUR EXPRESS NEWS
ಬೆಂಗಳೂರು: ಒಂದು ಕಡೆ ಚಳಿ, ಮತ್ತೊಂದು ಕಡೆ ಮಳೆ.. ಒಟ್ಟಿನಲ್ಲಿ ತಂಡಿ ವಾತಾವರಣ ಇದೀಗ ಜನರನ್ನು ಕಾಡುತ್ತಿದೆ. ಇದಲ್ಲದೆ ಇದೀಗ ಎಲ್ಲಾ ರೈತರಿಗೂ ಕೃಷಿ ಸ. ಸಮಯವಾದ್ದರಿಂದ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಡಿ.9ರಿಂದ ನಾಲ್ಕು ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಾಗಲಕೋಟೆ ಹಾಗೂ ವಿಜಯಪುರ. ಕಲ್ಯಾಣ ಕರ್ನಾಟಕದ ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ.ಜೊತೆಗೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ,ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣವಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಸಿನಿಮಾ

ಮಲೆನಾಡಿಗೆ ಬಂದ ಮಳೆ ಹುಡುಗಿ…!

ಮಲೆನಾಡಿಗೆ ಬಂದ ಮಳೆ ಹುಡುಗಿ…!
– ಕುಪ್ಪಳಿಗೆ ಭೇಟಿ ನೀಡಿದ ಪೂಜಾ ಗಾಂಧಿ ದಂಪತಿ
– ಮಂತ್ರ ಮಾಂಗಲ್ಯ ಮದುವೆಯಾಗಿದ್ದ ಪೂಜಾ ಗಾಂಧಿ

NAMMUR EXPRESS NEWS
ತೀರ್ಥಹಳ್ಳಿ : ರಾಷ್ಟ್ರಕವಿ ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಕನ್ನಡದ ಖ್ಯಾತ ನಟಿ ಪೂಜಾ ಗಾಂಧಿ ಪತಿಯೊಂದಿಗೆ ಮಂಗಳವಾರ ಕುಪ್ಪಳಿಗೆ ಆಗಮಿಸಿ ರಾಷ್ಟ್ರಕವಿ ಜನಿಸಿದ ಹಿರೇಕೊಡಿಗೆ ಸೇರಿದಂತೆ ಕವಿಮನೆ ಮತ್ತು ಕವಿಶೈಲಕ್ಕೆ ಭೇಟಿ ನೀಡಿದರು. ಪತಿ ವಿಜಯ್ ರಾಥೋಡ್ ಅವರೊಂದಿಗೆ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ದೇವಂಗಿ ಮನೆ ಮತ್ತು ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್ ಅವರ ಮನೆಗಳಿಗೆ ಭೇಟಿ ನೀಡಿ, ಅವರ ಆತಿಥ್ಯ ಸ್ವೀಕರಿಸಿದರು.

ಮಂತ್ರ ಮಾಂಗಲ್ಯ ಪದ್ಧತಿಯಂತೆ ಕುಪ್ಪಳಿಯಲ್ಲಿ ಮದುವೆಯಾಗಲು ಬಯಸಿದ್ದ ಪೂಜಾ ಗಾಂಧಿ, ಅವರ ತಾಯಿ ಆರೋಗ್ಯದ ಕಾರಣದಿಂದಾಗಿ ಬೆಂಗಳೂರಿ ನಲ್ಲಿಯೇ ಮಂತ್ರ ಮಾಂಗಲ್ಯದಂತೆ ವಿವಾಹವಾಗಿದ್ದರು. ಈ ವಿವಾಹವನ್ನು ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್ ನೇತೃತ್ವದಲ್ಲಿ ಚಿತ್ರ ಸಾಹಿತಿ ಕವಿರಾಜ್ ಅವರು ನಡೆಸಿಕೊಟ್ಟಿದ್ದರು.

Categories
ತೀರ್ಥಹಳ್ಳಿ

ಈಡಿಗರ ಸಂಘದ ಅಮೃತ ಮಹೋತ್ಸವಕ್ಕೆ ಆಹ್ವಾನ

ಈಡಿಗರ ಸಂಘದ ಅಮೃತ ಮಹೋತ್ಸವಕ್ಕೆ ಆಹ್ವಾನ
– ತೀರ್ಥಹಳ್ಳಿ ಈಡಿಗರ ಸಂಘದಿಂದ ಸಭೆ: ಸರ್ವರಿಗೂ ಸ್ವಾಗತ
– ಡಿ.10ರಂದು ರಾಜಧಾನಿಯಲ್ಲಿ ಬೃಹತ್ ಕಾರ್ಯಕ್ರಮ,
–  ಸಮುದಾಯದ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಈಡಿಗರ ಸಂಘಕ್ಕೆ ಅಮೃತ ಮಹೋತ್ಸವ ಸಂಭ್ರಮ. ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಸಿದ್ಧತೆ ನಡೆದಿದೆ. ಈಗ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಲ್ಲೂ ಈಡಿಗರ ಸಂಘದಿಂದ ಬುಧವಾರ ಸಭೆ ನಡೆಸಿ ಸಮುದಾಯದ ಪ್ರತಿ ಮನೆಯಿಂದ ಈ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲು ಕೋರಲಾಗಿದೆ. ತೀರ್ಥಹಳ್ಳಿ ಕೋಳಿಕಾಲು ಗುಡ್ಡದ ಈಡಿಗರ ಭವನದಲ್ಲಿ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿ.10ರಂದು ರಾಜಧಾನಿಯ ಅರಮನೆ ಮೈದಾನದಲ್ಲಿ ಬೆಳಿಗ್ಗೆ 11ಕ್ಕೆ ಬೃಹತ್ ಕಾರ್ಯಕ್ರಮ, ಸಮುದಾಯದ ಜಾಗೃತ ಸಮಾವೇಶ ನಡೆಯಲಿದ್ದು,  ಈಡಿಗ ಸಮುದಾಯದ 25 ಉಪ ಪಂಗಡಗಳ ಸಮಾಗಮವಾಗಲಿದೆ.

ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಲಾಯಿತು.ಈಡಿಗ, ಬಿಲ್ಲವ, ಪೂಜಾರಿ, ದೀವರ, ಭಂಡಾರಿ, ಬೆಲ್ಲದ್, ಹಾಲಕ್ಷತ್ರಿಯ, ದೇಶ ಭಂಡಾರಿ, ದೇವರ, ದೇವರ ಮಕ್ಕಳು ದೀವರ ಮಕ್ಕಳು, ಎಳಿಗ, ಎಳವ, ಗಾಮಲ್ಲ, ಗೌಂಡ, ಹಳೇಪೈಕರು, ಹಳೇಪೈಕ್, ಇಲ್ಲಾವನ್, ಕಲಾಲ್, ಮಲೆಯಾಳಿ ಬಿಲ್ಲವ, ನಾಡರ್, ನಾಮಧಾರಿ, ರಿಯಾನ್ ಹಿಯ್ಯ, ಇಳಿಗ, ಗೊಂಡ್ಲತಿಯನ್-ಥಿಯ್ಯಾನ್ ಸೇರಿ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶಕ್ಕೆ ಎಲ್ಲರನ್ನು ಸ್ವಾಗತಿಸಲಾಗಿದೆ.