Categories
ಕೃಷಿ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

ಎಲೆ ಚುಕ್ಕಿ, ಹಳದಿ ರೋಗ: ರೈತರಿಗೆ ಆತಂಕ!

ಎಲೆ ಚುಕ್ಕಿ, ಹಳದಿ ರೋಗ: ರೈತರಿಗೆ ಆತಂಕ!
– ಶೃಂಗೇರಿ, ಕೊಪ್ಪ, ಹೊಸನಗರ ಭಾಗದಲ್ಲಿ ಹೆಚ್ಚು
– ತೀರ್ಥಹಳ್ಳಿ ತಾಲೂಕಲ್ಲಿ ಕೂಡ ರೋಗ
– ಸರ್ಕಾರಗಳಿಗೆ ಈ ಬಗ್ಗೆ ನೆನಪೇ ಇಲ್ಲ..!

NAMMUR EXPRESS NEWS
ಶೃಂಗೇರಿ/ತೀರ್ಥಹಳ್ಳಿ: ಎಲೆ ಚುಕ್ಕಿ, ಹಳದಿ ರೋಗ ಮಲೆನಾಡ ಭಾಗದಲ್ಲಿ ಹೆಚ್ಚಳವಾಗಿರುವುದು ಇದೀಗ ಅಡಿಕೆ ಬೆಳೆಗಾರರಿಗೆ ಆತಂಕ ಉಂಟು ಮಾಡಿದೆ. ಆದರೆ ಯಾವುದೇ ಸರ್ಕಾರಗಳು ಈ ಬಗ್ಗೆ ಗಮನ ವಹಿಸದಿರುವುದು ಇದೀಗ ಮತ್ತಷ್ಟು ಜನಾಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಭಾಗದಲ್ಲಿ ಅಡಿಕೆಗೆ ರೋಗ ಹೆಚ್ಚಾಗುತ್ತಿದೆ. ಗಿಡಗಳು ಸುಟ್ಟು ಹೋಗುತ್ತಿವೆ. ಇನ್ನು ಫಸಲು ಕೂಡ ಕಡಿಮೆ ಆಗಿದೆ. ಶೃಂಗೇರಿ, ಕೊಪ್ಪ, ಹೊಸನಗರ ಭಾಗದಲ್ಲಿ ರೋಗ ಹೆಚ್ಚಾಗಿ ಕಾಣುತ್ತಿದೆ. ಅತೀ ಹೆಚ್ಚು ಅಡಿಕೆ ಬೆಳೆಯುವ ತೀರ್ಥಹಳ್ಳಿ ತಾಲೂಕಲ್ಲಿ ಕೂಡ ರೋಗ ನಿಧಾನಕ್ಕೆ ಆಗಮಿಸುತ್ತಿದೆ.

ಸರ್ಕಾರಗಳಿಗೆ ಈ ಬಗ್ಗೆ ನೆನಪೇ ಇಲ್ಲ..!

ಅಡಿಕೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗಗಳ ಬಾಧೆಯ ನಿವಾರಣೆಗಾಗಿ ಸಂಕಷ್ಟದಲ್ಲಿದ್ದ ರೈತರು ಕಳೆದ ವರ್ಷ ಶೃಂಗೇರಿ ಜಗದ್ಗುರುಗಳವರಲ್ಲಿ ತಮ್ಮ ಅಳಲನ್ನು ನಿವೇದಿಸಿಕೊಂಡಿದ್ದರು. ಶೃಂಗೇರಿಯಲ್ಲಿ ವಿಶೇಷ ಪೂಜೆ ಕೂಡ ಮಾಡಲಾಗಿತ್ತು. ಆದರೆ ಸರ್ಕಾರಗಳು, ಜನ ನಾಯಕರಿಗೆ ಮಾತ್ರ ಈ ಬಗ್ಗೆ ಗಮನ ಇಲ್ಲ.

ರೋಗ ಸಂಶೋಧನೆ ನೆಪ ಮಾತ್ರಕ್ಕೆ!

ಅಡಿಕೆಗೆ ರೋಗ ಸಂಶೋಧನೆಗೆ ಈಗಾಗಲೇ ಅನೇಕ ಪ್ರಯತ್ನ ನಡೆದಿದೆ. ಆದರೆ ಯಾವುದೂ ಫಲ ನೀಡಿಲ್ಲ. ಅಲ್ಲದೆ ಸಂಶೋಧನೆ ಮಾಡದಿದ್ರೆ ಇಡೀ ಮಲೆನಾಡ ಬದುಕು ಸಂಕಷ್ಟಕ್ಕೆ ಬೀಳಲಿದೆ.

Categories
ತೀರ್ಥಹಳ್ಳಿ

ಬಸವಾನಿಯಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ

ಬಸವಾನಿಯಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ
– ಶಾಲಾ ಮಕ್ಕಳ ವೇಷಭೂಷಣ: ಸಂಭ್ರಮದ ಸ್ವಾಗತ
– ಅಂಬೇಡ್ಕರ್, ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ

NAMMUR EXPRESS NEWS
ಬಸವಾನಿ ಗ್ರಾಮ ಪಂಚಾಯಿತಿಯಲ್ಲಿ ಭಾರತ ಸಂವಿಧಾನ ಜಾರಿಗೆ ಬಂದ 75 ವರ್ಷ ನಿಮಿತ್ತ ಶನಿವಾರ ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಬಸವಾನಿಯಲ್ಲಿ ಜಾಗೃತಿ ಜಾಥಾ ವಾಹನವನ್ನು ಕೆನರಾ ಬ್ಯಾಂಕ್ ಸರ್ಕಲ್ ನಿಂದ ಬ್ಯಾಂಡ್ ಸೆಟ್ ಮುಖಾಂತರ ಶಾಲಾ ಮಕ್ಕಳ ವೇಷಭೂಷಣ ಹಾಗೂ ಬಲೂನ್ ಮತ್ತು ರಾಷ್ಟ್ರಧ್ವಜಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿ ಆವರಣದವರೆಗೆ ಜಾಥಾದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನ ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೈತ್ರಾ ಎಂಜಿ ಅವರು ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಣಿ ಸರ್ವರನ್ನು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಸಂವಿಧಾನ ಪೂರ್ವ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಸತೀಶ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಯ ಲಕ್ಷ್ಮಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಸಂವಿಧಾನದ ಬಗ್ಗೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಿ ಬಹುಮಾನ ನೀಡಲಾಯಿತು. ಮತ್ತು ರಂಗೋಲಿ ಸ್ಪರ್ಧೆಯ ವಿಜೇತರಿಗೂ ಬಹುಮಾನವನ್ನು ನೀಡಲಾಯಿತು. ಬಸವಾನಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀದೀಪ್, ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಎನ್ ಆರ್ ಎಲ್ ಎಮ್ ಒಕ್ಕೂಟದ ಸಿಬ್ಬಂದಿ ವರ್ಗ, ಬಸವಾನಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.

Categories
ತೀರ್ಥಹಳ್ಳಿ

ಗಾಂಜಾ ಮಾರಾಟ ಮಾಡಿ ಸಿಕ್ಕಿ ಬಿದ್ದ ಹುಡುಗರು!

ಗಾಂಜಾ ಮಾರಾಟ ಮಾಡಿ ಸಿಕ್ಕಿ ಬಿದ್ದ ಹುಡುಗರು!
– ಕೆರೆ ಬಳಿ ಗಾಂಜಾ ಮಾರಾಟ ಮಾಡಲು ಪ್ಲಾನ್
– ತೀರ್ಥಹಳ್ಳಿಯಲ್ಲಿ ಗಾಂಜಾ ಜಾಲ ಬೇರು..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯ ಕೆರೆ ದಂಡೆಯ ಮೇಲೆ ಮೂರು ಯುವಕರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಬಂಧಿತರೆಲ್ಲರೂ ಹುಡುಗರು!.

ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಗಜಾನನ ವಾಮನ ಸುತಾರ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ 1) ಆದಿತ್ಯ, 23 ವರ್ಷ, ತ್ಯಾರಂದೂರು ಗುಡ್ಡೆಕೊಪ್ಪ ಗ್ರಾಮ ತೀರ್ಥಹಳ್ಳಿ, 2) ಅಭಿಷೇಕ್, 21 ವರ್ಷ, ಬಿ ಅಗ್ರಹಾರ ಕುರುವಳ್ಳಿ, ತೀರ್ಥಹಳ್ಳಿ ಮತ್ತು 3) ಅಮೀರ್ ಕೆ, 20 ವರ್ಷ, ಆರಗ, ತೀರ್ಥಹಳ್ಳಿ ಇವರನ್ನು ದಸ್ತಗಿರಿಮಾಡಿ, 190 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕ್ ಗಳನ್ನು ಅಮಾನತುಪಡಿಸಿಕೊಂಡು ಮೂರು ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತೀರ್ಥಹಳ್ಳಿಯಲ್ಲಿ ಗಾಂಜಾ ಜಾಲ ಬೇರೂರಿದ್ದು ಇದೀಗ ಹುಡುಗರು ಗಾಂಜಾ ಸಪ್ಲೈ ಜಾಲದಲ್ಲಿರುವುದು ತೀರ್ಥಹಳ್ಳಿಗೆ ಕಳಂಕವಾಗಿದೆ.

Categories
ಚಿಕ್ಕಮಗಳೂರು ರಾಜ್ಯ

ಮೋಸ್ಟ್ ವಾಂಟೆಡ್ ನಕ್ಸಲರಿಬ್ಬರು ಅರೆಸ್ಟ್!

ಮೋಸ್ಟ್ ವಾಂಟೆಡ್ ನಕ್ಸಲರಿಬ್ಬರು ಅರೆಸ್ಟ್!
– ಮೂಡಿಗೆರೆಯ ನಕ್ಸಲ್ ಅಂಗಡಿ ಸುರೇಶ್ ಬಂಧನ
– ಶೃಂಗೇರಿ ಮೂಲದ ನಕ್ಸಲ್ ಶ್ರೀಮತಿಗೆ ನ್ಯಾಯಾಂಗ ಬಂಧನ
– ಆತ್ಮಹತ್ಯೆಗೆ ಶರಣಾದ ಮಹಿಳಾ ಕಾನ್‌ಸ್ಟೇಬಲ್‌

NAMMUR EXPRESS NEWS
ಮೂಡಿಗೆರೆ: ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶ್ ಎಂಬಾತನನ್ನು ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ನಕ್ಸಲ್ ಸುರೇಶ್ ಗೆ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಿಚಾರ ತಿಳಿದು ದಾಳಿ ನಡೆಸಿದ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್, ಕಳೆದ 10 ವರ್ಷಗಳಿಂದ ನಕ್ಸಲ್ ಆಗಿದ್ದಾನೆ. ಸುರೇಶ್ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಣೆಯನ್ನು ಕೂಡ ಪೊಲೀಸ್ ಇಲಾಖೆ ಮಾಡಿತ್ತು. ಸುರೇಶ್ ವಿರುದ್ಧ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಕೇಸ್ ದಾಖಲಾಗಿದ್ದು, 10 ಕ್ಕೂ ಅಧಿಕ ಪ್ರಕರಣಗಳಲ್ಲಿ ಸುರೇಶ್ ಪೊಲೀಸರಿಗೆ ಬೇಕಾಗಿರುವ ಆರೋಪಿ. ಸದ್ಯ ಕೇರಳ ಪೊಲೀಸರ ವಶದಲ್ಲಿರುವ ಸುರೇಶ್ ನನ್ನು ಚಿಕ್ಕಮಗಳೂರಿಗೆ ಕರೆತರಲಿದ್ದಾರೆ.

ಶೃಂಗೇರಿ ಮೂಲದ ನಕ್ಸಲ್ ಶ್ರೀಮತಿಗೆ ನ್ಯಾಯಾಂಗ ಬಂಧನ

ಕೇರಳದಲ್ಲಿ ಬಂಧನವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನಕ್ಸಲ್ ಶ್ರೀಮತಿಯನ್ನು ಕಾರ್ಕಳ ಪೊಲೀಸರ ವಶಕ್ಕೆ ಪಡೆದಿದ್ದಾರೆ. 9ಕ್ಕೂ ಹೆಚ್ಚು ಪ್ರಕರಣಗಳಿದ್ದ ಶ್ರೀಮತಿಗೆ 14 ದಿನ ನ್ಯಾಯಾಂಗ ಬಂಧನವನ್ನು ಎನ್.ಆ‌ರ್.ಪುರ ನ್ಯಾಯಾಲಯ ವಿಧಿಸಿದೆ. ಕರಪತ್ರ ಹಂಚಿಕೆ, ಬ್ಯಾನ‌ರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿಧ್ವಂಸಕ ಕೃತ್ಯದ ಸಂಚು, ಆಯುಧಗಳನ್ನ ಇಟ್ಟುಕೊಂಡಿದ್ದು, ಟೆಂಟ್‌ ಹಾಕಿದ್ದು, ಗನ್ ತೋರಿಸಿ ಹೆದರಿಸಿದ್ದು, ಸುಲಿಗೆ ಹಾಗೂ ಪೊಲೀಸರಿಗೆ ಸಪೋರ್ಟ್ ಮಾಡದಂತೆ ಬೆದರಿಸಿದ್ದು ಸೇರಿ ವಿವಿಧ ಪ್ರಕರಣಗಳ ಅಡಿಯಲ್ಲಿ ಕೇರಳದಲ್ಲಿ ನಕ್ಸಲ್ ಶ್ರೀಮತಿ ಬಂಧನವಾಗಿದ್ದರು.ಈ ಹಿನ್ನೆಲೆಯಲ್ಲಿ ಕಾರ್ಕಳ ಪೊಲೀಸರು ಶ್ರೀಮತಿಯನ್ನು ಕೇರಳದಲ್ಲಿ ಬಂಧಿಸಿದ್ದರು. ಬಳಿಕ ಶ್ರೀಮತಿಯನ್ನು ಶೃಂಗೇರಿ ಪೊಲೀಸರು ಕರೆತಂದು ಎನ್.ಆ‌ರ್.ಪುರ ಕೋರ್ಟ್ ಗೆ ಹಾಜರು ಪಡಿಸಿದ್ದರು. ವಿವಿಧ ಪ್ರಕರಣಗಳ ಅಡಿಯಲ್ಲಿ ನ್ಯಾಯಾಲಯವು ನಕ್ಸಲ್ ಶ್ರೀಮತಿಗೆ 14 ದಿನದ ನ್ಯಾಯಾಂಗ ಬಂಧನ ವಿಧಿಸಿದೆ.

ಆತ್ಮಹತ್ಯೆಗೆ ಶರಣಾದ ಮಹಿಳಾ ಕಾನ್‌ಸ್ಟೇಬಲ್‌

ರಾಮನಗರ : ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ದ್ಯಾವಸಂದ್ರ ಗ್ರಾಮದಲ್ಲಿ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಓರ್ವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬೆಂಗಳೂರು ನಗರ ವ್ಯಾಪ್ತಿಯ ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್‌ಸ್ಟೇಬಲ್‌ ಮಂಜುಶ್ರೀ (27) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಮಂಜುಶ್ರೀ ಮನೆಗೆ ಆಸರೆಯಾಗಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಊರಿನ ಮನೆಗೆ ಬಂದು ಪ್ರಾಣ ಕಳೆದುಕೊಂಡಿದ್ದಾರೆ. ಮೃದು ಸ್ವಭಾವದ ಈಕೆ ಯಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Categories
ಉಡುಪಿ ಕರಾವಳಿ

ಪರೀಕ್ಷೆ ಕೊಠಡಿಯಿಂದ ಹೊರಗೆ ಕಳಿಸಿದ್ದಕ್ಕೆ ಆತ್ಮಹತ್ಯೆ!

ಪರೀಕ್ಷೆ ಕೊಠಡಿಯಿಂದ ಹೊರಗೆ ಕಳಿಸಿದ್ದಕ್ಕೆಆತ್ಮಹತ್ಯೆ!
– ಆರನೇ ಮಹಡಿಯಿಂದ ಜಿಗಿದು ಅತ್ಮಹತ್ಯೆ ಮಾಡಿಕೊಂಡ ಯುವಕ: ಮಣಿಪಾಲಲ್ಲಿ ನಡೆದ ಘಟನೆ
– ಕಡಲ ತೀರದಲ್ಲಿ ಮತ್ತೊಂದು ಮೃತ ದೇಹ ಪತ್ತೆ

NAMMUR EXPRESS NEWS
ಉಡುಪಿ : ಪರೀಕ್ಷೆಯ ವೇಳೆ ಮೊಬೈಲ್ ಫೋನ್ ಬಳಸಿದ ಕಾರಣಕ್ಕೆ ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿಯೋರ್ವ ಆರನೇ ಮಹಡಿಯಲ್ಲಿರುವ ತರಗತಿ ಕೊಠಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಣಿಪಾಲದ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ. ಬಿಹಾರ ಮೂಲದ ವಿದ್ಯಾರ್ಥಿ ಸತ್ಯಂ ಸುಮನ್(20) ಆತ್ಮಹತ್ಯೆ ಮಾಡಿಕೊಂಡ ಯುವಕ. ಸತ್ಯಂ ಸುಮನ್ ಮಾಹೆಯ ಎಂಸಿಎಚ್ ಪಿ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಯಾಗಿದ್ದರು. ಮಧ್ಯಾಹ್ನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಮೊಬೈಲ್ ಫೋನ್ ಬಳಸುತ್ತಿರುವುದನ್ನು ಪರೀಕ್ಷಾ ಮೇಲ್ವಿಚಾರಕರು ಗಮನಿಸಿ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯಿಂದ ಹೊರ ಹಾಕಿದ್ದಾರೆ. ಇದರಿಂದಮನನೊಂದ ವಿದ್ಯಾರ್ಥಿ 6ನೇ ಮಹಡಿಯಲ್ಲಿರುವ ತರಗತಿ ಕೊಠಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಲ ತೀರದಲ್ಲಿ ಮೃತ ದೇಹ ಪತ್ತೆ

ಕುಂದಾಪುರ: ಕೋಡಿ ಕಡಲ ತೀರದಲ್ಲಿ ವ್ಯಕ್ತಿಯೊಬ್ಬನ ಮೃತ ದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಶನಿವಾರ ಬೆಳಿಗ್ಗೆ ಸ್ಥಳೀಯರು ಸಮುದ್ರ ತೀರಕ್ಕೆ ಬಂದಾಗ ಶವ ಪತ್ತೆಯಾಗಿದ್ದು, ಪ್ಯಾಂಟ್, ಬೆಲ್ಟ್ ಚಪ್ಪಲ್‌, ಆಧಾರ್ ಕಾರ್ಡ್, ಕಾಲೇಜು ಐಡೆಂಟಿಟಿ ಕಾರ್ಡ್, ಬಸ್ ಟಿಕೆಟ್ ಮೊದಲಾದ ದಾಖಲೆಗಳು ದೊರಕಿವೆ. ಪ್ಯಾಂಟ್ ಜೇಬಿನಲ್ಲಿ ದಾಖಲೆಗಳು ದೊರಕಿವೆ. ಶರ್ಟ್ ಪತ್ತೆಯಾಗಿಲ್ಲ. ಹೊಟ್ಟೆಯಲ್ಲಿ ನೀರು ತುಂಬಿರದ ಕಾರಣ ನೀರಿಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನ 1.42ಕ್ಕೆ ಮಳವಳ್ಳಿಯಿಂದ ಮೈಸೂರಿಗೆ ಸರ್ಕಾರೀ ಬಸ್ಸಿನಲ್ಲಿ ಪ್ರಯಾಣಿಸಿದ ಟಿಕೆಟ್ ಪತ್ತೆಯಾಗಿದೆ. ಸ್ಥಳದಲ್ಲಿ ದೊರಕಿದ ದಾಖಲೆಗಳು ಮೃತ ವ್ಯಕ್ತಿಯದ್ದೇ ಅಲ್ಲವೇ ಎಂಬುದನ್ನು ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Categories
ತೀರ್ಥಹಳ್ಳಿ

ಹಾರೋಗೊಳಿಗೆಯಲ್ಲಿ ಸಂವಿಧಾನ ಜಾಗೃತಿ

ಹಾರೋಗೊಳಿಗೆಯಲ್ಲಿ ಸಂವಿಧಾನ ಜಾಗೃತಿ
– ಜಾಗೃತಿ ಜಾಥಾ ವಾಹನವನ್ನು ಬೈಕ್ ರ್‍ಯಾಲಿಯಲ್ಲಿ ಸ್ವಾಗತ
– ಗ್ರಾಮ ಪಂಚಾಯತ್ ಆಡಳಿತ, ಸ್ಥಳೀಯರು ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ಭಾರತ ಸಂವಿಧಾನ ಜಾರಿಗೆ ಬಂದ 75 ವರ್ಷದ ನಿಮಿತ್ತ ಶನಿವಾರ ಸಂವಿಧಾನ ಜಾಗೃತಿ ಜಾಥಾ ಹಾರೋಗೊಳಿಗೆ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದು, ಜಾಗೃತಿ ಜಾಥಾ ವಾಹನವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಮುಂಭಾಗದಿಂದ ಬೈಕ್ ರ್‍ಯಾಲಿ ಹಾಗೂ ಬ್ಯಾಂಡ್ ಸೆಟ್ ಮುಖಾಂತರ ಶಾಲಾ ಮಕ್ಕಳ ವೇಶ ಭೂಷಣ ಹಾಗೂ ಬಲೂನ್ ಒಳಗೊಂಡಂತೆ ಗ್ರಾಮ ಪಂಚಾಯಿತಿ ಆವರಣದವರೆಗೆ ಜಾಥದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಮಹತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಪುಷ್ಪ ನಮನವನ್ನು ಸಲ್ಲಿಸಿ, ಜ್ಯೋತಿ ಬೆಳಗುವುದರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಮೌನೇಶ್ ಉದ್ಘಾಟಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಣುಕಾರಾಧ್ಯ ಬಿ ಎಮ್ ಸರ್ವರನ್ನು ಸ್ವಾಗತಿಸಿದರು. ಮತ್ತು ಶಾಲಾ ಮಕ್ಕಳು ಸಂವಿಧಾನ ಪೂರ್ವ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು. ಸ.ಹಿ.ಪ್ರಾಥಮಿಕ ಶಾಲಾ ಶಿಕ್ಷಕರಾದ ರಾಘವೇಂದ್ರ ಸಂವಿಧಾನದ ಬಗ್ಗೆ, ಉಪನ್ಯಾಸ ನೀಡಿದರು. ಹಾರೋಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ ಸಸಿತೋಟ ಹಾಗೂ ಮತ್ತೊಬ್ಬ ಸದಸ್ಯರಾದ ಪ್ರಸನ್ನ ಎಂ ಟಿ ಉಪಸ್ಥಿತರಿದ್ದರು ಹಾಗೂ ಶ್ರೀಮತಿ ನರ್ಮದ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು, ಹಾಗೂ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಎನ್ ಆರ್ ಎಲ್ ಎಂ ಒಕ್ಕೂಟದ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Categories
ಚಿಕ್ಕಮಗಳೂರು ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಕಸಾಯಿ ಖಾನೆಗೆ ಸಾಗಿಸುತ್ತಿದ್ದ 19 ಗೋವು ರಕ್ಷಣೆ
– ಶೃಂಗೇರಿ ತಾಲೂಕು ಅಡ್ಡಗದ್ದೆ ಬಳಿ ಘಟನೆ
– ರಂಭಾಪುರಿ ಶ್ರೀಗಳ ಕಾರಿನ ಮೇಲೆ ಕಲ್ಲುತೂರಾಟ!
– ಬಾಗಲಕೋಟೆ ಜಿಲ್ಲೆಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ವಿವಾದ

NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 19 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಕೆಳಕೊಪ್ಪ ಗ್ರಾಮದ ಗೋಪಾಲ ನಾಯ್ಕ ಎಂಬುವವರು ತ‌ರ್ ಪ‌ರ್ ಕ‌ರ್ ಮಾತೃ ಟ್ರಸ್ಟ್‌ ಗುರು ಶಾಲಾ ವಂದಿವೆದುಂತಹಗಲ್‌ ರಸ್ತೆ, ಅನ್ನಮಲಯನಗ‌ರ್, ಗುರುವರಾಜಪೇಟೆ, ಅರಕ್ಕನಮ್ ತಾಲ್ಲೂಕು, ವೆಲ್ಲೂರು, ತಮಿಳುನಾಡು ಇವರಿಗೆ 19 ಗೋವುಗಳನ್ನು ಮಾರಾಟ ಮಾಡಿದ್ದು, ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಕೆ.ಎ 50 ಬಿ 3920 ಲಾರಿಯನ್ನು ತಡೆದು 19 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಇತ್ತೀಚಿಗೆ ಎನ್‌.ಆ‌ರ್ ಪುರ ತಾಲೂಕಿನ ಮಾಗುಂಡಿ ಗ್ರಾಮದ ಸೇತುವೆ ಕೆಳಭಾಗದಲ್ಲಿ ಗೋವಿನ ಎರಡು ತಲೆ, ಎಂಟು ಕಾಲುಗಳು ಪತ್ತೆ ಆಗಿದ್ದವು. ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಎನ್‌.ಆ‌ರ್ ಪುರ ತಾಲೂಕಿನಲ್ಲಿ ನಿರಂತರವಾಗಿ ಗೋಮಾಂಸ ದಂಧೆ ನಡೆಯುತ್ತಿದೆ.

ರಂಭಾಪುರಿ ಶ್ರೀಗಳ ಕಾರಿನ ಮೇಲೆ ಕಲ್ಲುತೂರಾಟ

ಬಾಗಲಕೋಟೆ ಜಿಲ್ಲೆಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದ ಈಗ ತಾರಕ್ಕೇರಿದೆ.ಮಠದ ವಿವಾದ ಕೋರ್ಟ್ ನಲ್ಲಿ ಇರುವಾಗಲೇ ಕಟ್ಟಡದ ದುರಸ್ತಿ ಹಾಗೂ ಜಮೀನು ಉಳುಮೆ ಮಾಡಿದ್ದಕ್ಕೆ ಭಕ್ತರಿಂದ ತಕರಾರು ವ್ಯಕ್ತವಾಗಿದೆ. ಈ ವೇಳೆ ರಂಭಾಪುರಿ ಶ್ರೀಗಳ ಕಾರಿನ ಮೇಲೆ ಮಹಿಳಾ ಭಕ್ತಿಯೊಬ್ಬರು ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಗಳು ತೆರಳುವ ವಾಹನವನ್ನು ಅಡ್ಡಗಟ್ಟಲು ಪ್ರಯತ್ನಿಸಿದ್ದು, ಈ ವೇಳೆ ಸ್ಥಳದಲ್ಲಿ ತಳ್ಳಾಟ, ನೂಕಾಟ ಉಂಟಾಗಿ ಪರಿಸ್ಥಿತಿ ಬಿಗಡಾಯಿಸಿದೆಇನ್ನೂ ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ರಂಭಾಪುರಿ ಶ್ರೀ ವಿರುದ್ಧ ಧಿಕ್ಕಾರ ಕೂಗಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಗಾಂಜಾ ಮಾರಾಟ: ಮೂವರು ಅರೆಸ್ಟ್!

ತೀರ್ಥಹಳ್ಳಿಯಲ್ಲಿ ಗಾಂಜಾ ಮಾರಾಟ: ಮೂವರು ಅರೆಸ್ಟ್!
– ಸೀಬಿನಕೆರೆ ಬಳಿ ಮಾರಾಟ: ಎಲ್ಲರೂ ಸ್ಥಳೀಯರೇ!
– ಯುವ ಸಮುದಾಯ ಗಾಂಜಾ ನಶೆಗೆ ಬಲಿ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ಶನಿವಾರ ನಡೆದಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಗಾಂಜಾ ಅಡ್ಡೆ ಹೆಚ್ಚಾಗಿದ್ದು, ಯುವ ಸಮುದಾಯ ಗಾಂಜಾ ನಶೆಗೆ ಬಿದ್ದಿದೆ. ಕಾಲೇಜು ಸಮೀಪ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ನಡುವೆ ಈ ಪ್ರಕರಣ ಮತ್ತಷ್ಟು ಪ್ರಶ್ನೆ ಮುಂದಿಟ್ಟಿದೆ.

Categories
ತೀರ್ಥಹಳ್ಳಿ ಶಿವಮೊಗ್ಗ

ಪ್ರೇಕ್ಷಕನ ಮನಗೆದ್ದ ಶಾಖಾಹಾರಿ!

ಪ್ರೇಕ್ಷಕನ ಮನಗೆದ್ದ ಶಾಖಾಹಾರಿ!
– ತೀರ್ಥಹಳ್ಳಿ ವೆಂಕಟೇಶ್ವರ ಸೇರಿ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ
– ತೀರ್ಥಹಳ್ಳಿಯ ಸುತ್ತಮುತ್ತ ಚಿತ್ರೀಕರಣ
– ತೀರ್ಥಹಳ್ಳಿ ಕಲಾವಿದ ಶಿವಕುಮಾರ್ ನಟನೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದವರೇ ಪ್ರಮುಖವಾಗಿರುವ ಹೊಸ ಭರವಸೆ ಮೂಡಿಸಿರುವ ಶಾಖಾಹಾರಿ ಸಿನಿಮಾ ಫೆ.16ರಂದು ತೆರೆ ಕಂಡಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ.  ಶಿವಮೊಗ್ಗದವರೇ ಆದ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ನಿರ್ದೇಶಕರಾಗಿರುವ ಸಿನಿಮಾ ತೀರ್ಥಹಳ್ಳಿ, ಮೇಳಿಗೆ ಸುತ್ತಮುತ್ತ ಶೂಟಿಂಗ್ ನಡೆದಿದೆ. ಶಿವಮೊಗ್ಗದವರೇ ಆದ ರಂಗ ಕಲಾವಿದ ಎಸ್.ಆರ್. ಗಿರೀಶ್‍ರವರ ನಾಟಕದ ತುಣುಕೊಂದನ್ನು ಇಟ್ಟುಕೊಂಡು ಅದನ್ನು ವಿಸ್ತರಿಸಿ ಅದಕ್ಕೊಂದು ರೂಪ ಕೊಟ್ಟು, ಕೌತುಕ ಸನ್ನಿವೇಶಗಳನ್ನು ಸೃಷ್ಠಿಸಿ ಶಿವಮೊಗ್ಗದ ತೀರ್ಥಹಳ್ಳಿ ಸುತ್ತಮುತ್ತ ಚಿತ್ರಿಕರಣ ಮಾಡಲಾಗಿದೆ.

ತೀರ್ಥಹಳ್ಳಿ ಕಲಾವಿದ ಶಿವಕುಮಾರ್ ನಟನೆ

ತೀರ್ಥಹಳ್ಳಿಯ ರಂಗಭೂಮಿ ಕಲಾವಿದರಾದ ಶಿವಕುಮಾರ್ ತೀರ್ಥಹಳ್ಳಿರವರು ಶಾಖಾಹಾರಿ ಚಿತ್ರದಲ್ಲಿ ನಟಿಸಿದ್ದಾರೆ. ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಂಡಿದೆ. ಶಿವಕುಮಾರ್ ಅವರು ನೀನಾಸಂನಲ್ಲಿ ತರಬೇತಿ ಮುಗಿಸಿ ಎರಡು ವರ್ಷ ನೀನಾಸಂ ತಿರುಗಾಟದಲ್ಲಿ ಕೆಲಸ ಮಾಡಿದ್ದಾರೆ

ಇಬ್ಬರು ನಿರ್ಮಾಪಕರು!

ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆಯಂತವರು ಚಿತ್ರದಲ್ಲಿ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಪ್ರತಿಮಾ ನಾಯಕ್, ಹರಿಣಿ, ವಿನಯ್, ಶ್ರೀಹರ್ಷಗೋಭಟ್ಟ, ನಿಧಿಹೆಗಡೆ ಮುಂತಾದವರು ಅಭಿನಯಿಸಿದ್ದಾರೆ ಎಂದರು. ರಾಜೇಶ್ ಕೀಳಂಬಿ, ರಂಜಿನಿ ಪ್ರಸನ್ನ ನಿರ್ಮಾಪಕರಾಗಿದ್ದಾರೆ.ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಶಾಖಾಹಾರಿ ಚಿತ್ರವನ್ನು ನಿರ್ಮಿಸಿದ್ದಾರೆ. ಕೆ ಆರ್ ಜಿ ಸಂಸ್ಥೆ ಚಿತ್ರ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ.

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಶಿವಮೊಗ್ಗದ ಕಾರು ಶೋ ರೂಂನಲ್ಲಿ ಹೊತ್ತಿ ಉರಿದ ಕಾರುಗಳು!
– ಬೆಂಕಿ ಹತ್ತಿದ್ದುಹೇಗೆ..? ಏನೆಲ್ಲಾ ಸುಟ್ಟು ಹೋಗಿದೆ?
• ಕಡೂರು: ಕ್ಯಾಬ್ ಚಾಲಕನ ಬರ್ಬರ ಕೊಲೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಹುಂಡೈ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ಮೌಲ್ಯದ ಕಾರುಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿ ಅಪಾರ ಹಾನಿ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದು ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ. ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ ಹುಂಡೈ ಶೋರೂಂನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಶೋಂರೂಂ ಧಗಧಗಿಸಿದೆ. ತಡ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಗೆ ಶೋರೂಂನಲ್ಲಿದ್ದ ಕಾರುಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ 5 ಅಗ್ನಿಶಾಮಕ ಸಿಬ್ಬಂದಿ 2 ಗಂಟೆಗಳ ಕಾಲ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.

ಈ ವೇಳೆ ಬೆಂಕಿ ಕಿಡಿ ಸಿಡಿದು ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ಶೋರೂಂನ ಹೊರ ಹಾಗೂ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದ್ದರಿಂದ ಟಾಟಾ ಶೋರೂಂ ಕೂಡ ಧಗಧಗಿಸಿದೆ. ಬೆಂಕಿ ಹೊತ್ತಿಕೊಂಡ ವಿಷಯ ತಿಳಿದು ಜಮಾಯಿಸಿದ ನೂರಾರು ಮಂದಿ ಕೆಲ ಕಾರುಗಳನ್ನು ಬೆಂಕಿಯಿಂದ ರಕ್ಷಿಸಲು ಯತ್ನಿಸಿದ್ರು. ಹುಂಡೈ ಎರಡು ಅಂತಸ್ತಿನ ಕಟ್ಟಡವಾಗಿದ್ದು ಮೇಲೆ ಶೋರೂಂ ಇದ್ದು, ಕೆಳಗೆ ಸರ್ವೀಸ್ ಸೆಂಟರ್ ಇದ್ದು ಸುಟ್ಟು ಹೋಗಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ಹುಂಡೈ ಸೇರಿ ಅಕ್ಕಪಕ್ಕದಲ್ಲೇ ಇರುವ ವಿವಿಧ ಕಂಪನಿಗಳ ಕಚೇರಿಗಳಿಗೂ ಕೂಡ ಬೆಂಕಿಯಿಂದ ಹಾನಿಯಾಗಿದೆ ಎನ್ನಲಾಗಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗ್ತಿದೆ. ರಾತ್ರಿ ವೇಳೆ ಬೆಂಕಿ ಹೊತ್ತಿಕೊಂಡಿದ್ದು ಕಚೇರಿಯ ಸಿಬ್ಬಂದಿ ಇರದ ಕಾರಣ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

ಕಡೂರಲ್ಲಿ ಕ್ಯಾಬ್ ಚಾಲಕನ ಬರ್ಬರ ಹತ್ಯೆ

ಕಡೂರು: ಕ್ಯಾಬ್ ಚಾಲಕನನ್ನು ಬರ್ಬರವಾಗಿ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದರ್ಶನ್ (21) ಮೃತ ಕ್ಯಾಬ್ ಚಾಲಕ. ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್, ಹಾಫ್ ಮರ್ಡರ್ ಕೇಸಿನಲ್ಲಿ ಜೈಲು ಸೇರಿದ್ದ. ಇತ್ತೀಚೆಗೆ ಬೇಲ್ ಪಡೆದು ಇಬ್ಬರು ಸ್ನೇಹಿತರ ಜೊತೆ ಕಡೂರಿನ ಮಾಡಾಳು ಗ್ರಾಮದ ತಾತನ ಮನೆಗೆ ಬಂದಿದ್ದ.

ವಾರದ ಹಿಂದೆ ಬೆಂಗಳೂರಿಗೆ ವಾಪಸ್ ಹೋಗಿದ್ದ ಮೃತ ದರ್ಶನ್ ಸ್ನೇಹಿತರು, ಗುರುವಾರ ರಾತ್ರಿ ಪುನಃ ಬಂದಿದ್ದಾರೆ. ತಾತನಿಗೆ ಫ್ರೆಂಡ್ಸ್ ಬಂದಿದ್ದಾರೆ, ಹೊಲದ ಶೆಡ್ ನಲ್ಲಿ ಮಲಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ದರ್ಶನ್ ಕಾರಿನಲ್ಲಿ ಹೋಗಿದ್ದನ್ನ ದರ್ಶನ್ ತಾತ ಕೂಡ ನೋಡಿದ್ದರು. ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಶೆಡ್ ನಲ್ಲಿ ದರ್ಶನ್ ಇರಲಿಲ್ಲ. ಸ್ನೇಹಿತರ ಜೊತೆ ಎಲ್ಲೋ ಹೋಗಿರಬಹುದು ಎಂದು ತಾತ ಮನೆಗೆ ಬಂದಿದ್ದರು. ಬೆಳಗ್ಗೆ ಮಾಡಾಳು ಗ್ರಾಮದ ತುಸು ದೂರದಲ್ಲಿ ದರ್ಶನ್ ಮೃತದೇಹ ಪತ್ತೆಯಾಗಿದೆ. ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.