Categories
ರಾಜ್ಯ

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್.!

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್.!
– ಸರ್ಕಾರಿ ಆಸ್ಪತ್ರೆಯ ದುರ್ಬಳಕೆ ಆರೋಪ
– ವೈದ್ಯ ಜೋಡಿ ವಿರುದ್ಧ ಭಾರೀ ಆಕ್ರೋಶ

NAMMUR EXPRESS NEWS
ಚಿತ್ರದುರ್ಗ: ಮದುವೆಗೂ ಮುನ್ನ ಜೋಡಿ ಹಕ್ಕಿಗಳು ಫೋಟೋಶೂಟ್ ಮಾಡಿಸುವುದು ಕಾಮನ್ ಆಗಿದೆ. ಟ್ರೆಂಡಿಂಗ್ ಇದ್ದಂತ ಸಮಯದಲ್ಲಿ ನಾರ್ಮಲ್ ಆಗಿ ಫೋಟೋಶೂಟ್ ಮಾಡಿಸುತ್ತಾ ಇದ್ದರು. ಆದರೆ ಈಗ ಫೋಟೋಶೂಟ್ ಕ್ರೇಜ್ ಹಾಗೇ ಇದೆ. ಆದರೆ ಡಿಫ್ರೆಂಟ್ ಥೀಮ್ ನಲ್ಲಿ ಫೋಟೋಶೂಟ್‌ ಮಾಡಿಸಲು ಪ್ಲಾನ್ ಮಾಡುತ್ತಾರೆ. ಕೆರೆ-ಗದ್ದೆಗಳಲ್ಲಿ, ವ್ಯವಸಾಯ ಮಾಡುವ ರೀತಿ ಸಹಜ ಜೀವನಕ್ಕೆ ಹತ್ತಿರವಿರುವಂತ ಫೋಟೋಶೂಟ್ ಮಾಡಿಸುತ್ತಾರೆ. ಅಂಥದ್ದೇ ಥಿಂಕಿಂಗ್ ನಲ್ಲಿ ಚಿತ್ರದುರ್ಗದ ವೈದ್ಯರೊಬ್ಬರು ಆಪರೇಷನ್ ಥಿಯೇಟರ್ ಬಳಕೆ ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಅಭಿಷೇಕ್ ಫೋಟೋಶೂಟ್ ಮಾಡಿಸಿದವರು. ತಮ್ಮದೇ ವೃತ್ತಿ ಬದುಕನ್ನು ಆಧಾರವಾಗಿಟ್ಟುಕೊಂಡು ಫೋಟೋಶೂಟ್ ಮಾಡಿಸುವುದಕ್ಕೆಂದು ಹೊರಟಿದ್ದರು ಎನಿಸುತ್ತದೆ.

ಆದರೆ ಈಗ ಟೀಕೆಗೆ, ವಿರೋಧಕ್ಕೆ ಕಾರಣವಾಗಿದ್ದಾರೆ. ಡಾ.ಅಭಿಷೇಕ್ ಮತ್ತು ಜೋಡಿ ಆಪರೇಷನ್ ಥಿಯೇಟರ್ ನಲ್ಲಿ ತಮ್ಮ ಮದುವೆಯ ಪ್ರಿವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ಡಾ. ಅಭಿಷೇಕ್ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈಗ ಅದೇ ಆಸ್ಪತ್ರೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಗೆ ಆಪರೇಷನ್‌ ಮಾಡುತ್ತಿರುವಂತೆ ವಧು-ವರ ವಿಡಿಯೋ ಶೂಟ್ ಮಾಡಿಸಿದ್ದಾರೆ. ಡಾ.ಅಭಿಷೇಕ್ ಜೋಡಿಯ ಪ್ರಿವೆಡ್ಡಿಂಗ್ ಫೋಟೋಶೂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಆಪರೇಷನ್‌ ಥಿಯೇಟರ್ ಅನ್ನು ಇವರ ಪ್ರಿವೆಡ್ಡಿಂಗ್ ಫೋಟೋಶೂಟ್ ಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Categories
ತೀರ್ಥಹಳ್ಳಿ ರಾಜಕೀಯ

ಬಿಜೆಪಿ ನೂತನ ತಂಡದ ಪದಗ್ರಹಣಕ್ಕೆ ಸಜ್ಜು..!

ಬಿಜೆಪಿ ನೂತನ ತಂಡದ ಪದಗ್ರಹಣಕ್ಕೆ ಸಜ್ಜು..!
– ಫೆ.10 ರಂದು ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಕಾರ್ಯಕ್ರಮ
– ಸರ್ವರನ್ನು ಸ್ವಾಗತಿಸಿದ ಹೆದ್ದೂರು ನವೀನ್

NAMMUR EXPRESS NEWS
ತೀರ್ಥಹಳ್ಳಿ : ಬಿಜೆಪಿ ತಂಡದ ಪದಗ್ರಹಣ ಜವಾಬ್ದಾರಿಯನ್ನು ಫೆ.10ರ ಮಧ್ಯಾಹ್ನ 1:00ಗೆ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಸಲಾಗುವುದು. ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ಆರಗ ಜ್ಞಾನೇಂದ್ರ ಮತ್ತು ಬಿ ವೈ ರಾಘವೇಂದ್ರ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ. ಎಲ್ಲಾ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಆಗಮಿಸುವಂತೆ ನೂತನ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮನವಿ ಮಾಡಿದ್ದಾರೆ.

ಹೆದ್ದೂರು ನವೀನ್ ಹೇಳಿದ್ದೇನು?

ಬಿಜೆಪಿಯಲ್ಲಿ ಸಂಘಟನೆಯ ದೃಷ್ಟಿಯಿಂದ ಮೂರು ವರ್ಷಗಳಿಗೊಮ್ಮೆ ಸಂಘಟನೆಯ ಜವಾಬ್ದಾರಿಯ ಘೋಷಣೆಯನ್ನು ಮಾಡಲಾಗುವುದು. ಈ ಬಾರಿ ನಮ್ಮ ಜಿಲ್ಲೆಯವರಾದಂತ ವಿಜೇಂದ್ರ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ ನಂತರ ಜಿಲ್ಲೆಗೆ ಅಧ್ಯಕ್ಷರನ್ನು ಘೋಷಣೆ ಮಾಡಿದರು. ಎಲ್ಲಾ ಸಂಘಟನೆಗಳ ಜವಾಬ್ದಾರಿಯನ್ನು ಘೋಷಣೆ ಮಾಡುವುದು ನಮ್ಮ ತಂಡದ ಜವಾಬ್ದಾರಿಯಾಗಿರುತ್ತದೆ. ನಮ್ಮ ಹಿರಿಯ ಸಲಹಾ ಸಮಿತಿಯ ಸಲಹೆಯೊಂದಿಗೆ ಒಂದಿಷ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿ ಸಂಘಟನೆಯ ಜವಾಬ್ದಾರಿಯನ್ನು ನಿಯುಕ್ತಿ ಮಾಡಲಾಗಿದೆ.

ತೀರ್ಥಹಳ್ಳಿ ಮಂಡಲಕ್ಕೆ ಗಾಜನೂರಿನ ಐದು ಗ್ರಾಮ ಪಂಚಾಯಿತಿಗಳು ಒಳಗೊಂಡಂತಹ ಒಂದು ಮಹಾ ಶಕ್ತಿ ಕೇಂದ್ರ ಅದನ್ನು ಸೇರಿಸಿಕೊಂಡು ತೀರ್ಥಹಳ್ಳಿಯಲ್ಲಿ ಆರು ಮಹಾ ಶಕ್ತಿ ಕೇಂದ್ರಗಳು ಬರುತ್ತವೆ. ಮಂಡಗದ್ದೆ, ಕುಪ್ಪಳ್ಳಿ, ಆಗುಂಬೆ, ಮೇಗರವಳ್ಳಿ,ಆರಗ, ತೀರ್ಥಹಳ್ಳಿ ನಗರ ಈ ಸಂಘಟನೆಗೆ ಬರುತ್ತದೆ. ಎಲ್ಲಾ ಕಡೆ ಬಿಜೆಪಿ ಪದಾಧಿಕಾರಿಗಳ ನೇಮಕ ನಡೆದಿದೆ. ಫೆ.10ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

Categories
ಉಡುಪಿ ಕರಾವಳಿ ಮಂಗಳೂರು

ಕರಾವಳಿಯಲ್ಲಿ ಕೋಳಿ ಅಂಕದ ದರ್ಬಾರ್!

ಕರಾವಳಿಯಲ್ಲಿ ಕೋಳಿ ಅಂಕದ ದರ್ಬಾರ್!
– ಕೋಳಿ ಅಂಕದ ಜೂಜಾಟ ನಿಷೇಧ
– ತಮಿಳು ನಾಡಿನಿಂದ ಬರುತ್ತಿದೆ ಕೋಳಿ

NAMMUR EXPRESS NEWS
ರಾಜ್ಯದಲ್ಲಿ ಅವ್ಯಾಹತವಾಗಿ ಕೋಳಿ ಅಂಕದ ಜೂಜಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ನಿಷೇಧ ಹೇರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಆದೇಶ ಮಾಡಿದ್ದಾರೆ. ರಾಷ್ಟ್ರೀಯ ಪರಿಸರ ಒಕ್ಕೂಟ ಕೋಳಿ ಅಂಕದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಅವರು, ಕೋಳಿ ಅಂಕವು ಪ್ರಾಣಿ ಹಿಂಸೆ ತಡೆ ಕಾಯಿದೆ- 1960 ಕಲಂ-11ರ ಪ್ರಕಾರ ಅಪರಾಧ. ಈ ಕಾಯಿದೆಯನ್ನು ಎಲ್ಲ ಠಾಣಾ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

ನಿಷೇಧದ ಹಿಂದಿರುವ ಕಾರಣ ಏನು?

ರಾಜ್ಯದಲ್ಲಿ ನಾನಾ ಕಡೆ ಅದರಲ್ಲೂ ಕರಾವಳಿಭಾಗದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕ ಆಯೋಜಿಸಿ ಪ್ರತಿನಿತ್ಯ ಕೋಟ್ಯಂತರ ರೂ. ಮೌಲ್ಯದ ಜೂಜಾಟ ನಡೆಯುತ್ತಿದೆ. ದಿನದ 24 ಗಂಟೆಯೂ ಎಡೆಬಿಡದೆ ಕೋಳಿ ಅಂಕ ನಡೆಯುತ್ತಿದ್ದು, ವಿದ್ಯಾರ್ಥಿಗಳು, ಯುವ ಸಮುದಾಯ ಈ ಜೂಜಿಗೆ ಬಲಿಯಾಗುತ್ತಿದ್ದಾರೆ. 100 ರೂ.ನಿಂದ ಆರಂಭವಾಗುವ ಈ ಜೂಜು 5 ಲಕ್ಷ ರೂ.ವರೆಗೂ ನಡೆಯುತ್ತಿದೆ. ಕರಾವಳಿ ಭಾಗದ ದೊಡ್ಡ ದೊಡ್ಡ ಜಾತ್ರೆಯಲ್ಲಿಒಂದೊಂದು ಕೋಳಿಗಳ ಮೇಲೆ 1ರಿಂದ 5 ಲಕ್ಷ ರೂ.ವರೆಗೂ ಜೂಜು ನಡೆಯುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ ಕೋಳಿ ಅಂಕದಿಂದ 10 ಸಾವಿರಕ್ಕೂ ಅಧಿಕ ಕೋಳಿಗಳು ಬಲಿಯಾದರೆ, ಇವುಗಳಲ್ಲಿ ಶೇ.60ರಷ್ಟು ಕೋಳಿ ಬಲಿ ಕರಾವಳಿ ಭಾಗದಲ್ಲೇ ನಡೆಯುತ್ತಿದೆ.ಕರಾವಳಿ ಭಾಗದಲ್ಲಿ ಜಾತ್ರೆ, ರಥೋತ್ಸವದ ನೆಪದಲ್ಲಿ ಕೋಳಿ ಅಂಕ ನಡೆಯುತ್ತಿದೆ.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ 09-02-2024

ಅಡಿಕೆ ದರ 
09-02-2024
ಗೊರಬಲು 16099 34118
ಬೆಟ್ಟೆ 39555 54419
ರಾಶಿ 32010 48098
ಸರಕು 45155 80986
Nammur Express

Categories
ಚಿಕ್ಕಮಗಳೂರು

ಶ್ರೀ ರಂಭಾಪುರಿ ಜಗದ್ಗುರುಗಳ ಪೀಠಾರೋಹಣ ವರ್ಧಂತಿ ಮಹೋತ್ಸವ

ಶ್ರೀ ರಂಭಾಪುರಿ ಜಗದ್ಗುರುಗಳ ಪೀಠಾರೋಹಣ ವರ್ಧಂತಿ ಮಹೋತ್ಸವ
– ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ

NAMMUR EXPRESS NEWS
ಎನ್.ಆರ್.ಪುರ: ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 33ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ ಮಹಾಮಸ್ತಕಾಭಿಷೇಕ ಫೆ. 12-13ರಂದು ಶಿಕಾರಿಪುರ ತಾಲೂಕ ಶ್ರೀ ಮಳೆ ಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ಕಡೇನಂದಿಹಳ್ಳಿ ತಪೋಕ್ಷೇತ್ರ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ನಡೆಯುವುದು. 12ರ ಸಂಜೆ 4 ಗಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಕಡೇನಂದಿಹಳ್ಳಿಯಿಂದ ಜರುಗಲಿದ್ದು ಸಂಜೆ 7 ಗಂಟೆಗೆ ಜನ ಜಾಗೃತಿ ಧರ್ಮ ಸಮಾರಂಭ ಶ್ರೀ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಡೆಯುವುದು. ದುಗ್ಗಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಯತಿ ನೇತೃತ್ವ ವಹಿಸುವರು.

ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿರುವ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸುವರು. ಶ್ರೀ ರಂಭಾಪುರಿ ಪೀಠದ ವಾರ್ತಾ ಸಂಕಲನವನ್ನು ಅ.ಭಾ.ವೀರಶೈವ ಮಹಾಸಭಾದ ಅಧ್ಯಕ್ಷ- ಶಾಸಕ ಶಾಮನೂರು ಶಿವಶಂಕರಪ್ಪನವರು ಬಿಡುಗಡೆ ಮಾಡುವರು. ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಚಿತ್ರನಟ ಕೆ.ಸುಚೆಂದ್ರ ಪ್ರಸಾದ, ಎನ್‌.ವಿ.ಈರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಎಮ್ಮಿಗನೂರಿನ ಡಾ.ವಾಮದೇವ ಮಹಾಂತ ಶಿವಾಚಾರ್ಯರು ಭಾಗವಹಿಸುವರು. ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿ ಲೋಕಾರ್ಪಣಾ ಸೇವಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರಿಗೆ ಗುರು ರಕ್ಷೆ ನೀಡಿ ಆಶೀರ್ವದಿಸಲಾಗುವುದು.

ಫೆ. 13ರ ಬೆಳಿಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಗೆ 1008 ಕುಂಭಗಳಿಂದ ಮಹಾಮಸ್ತಕಾಭಿಷೇಕ ಜರುಗುವುದು. ಸಂಜೆ 4 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಬೃಹತ್ ಮೂರ್ತಿಯ ಲೋಕಾರ್ಪಣೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಂದ ನಡೆಯುವುದು. ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪರಂಪರೆ ರಕ್ಷಣಾ ಧರ್ಮ ಸಮಾರಂಭ ಜರುಗಲಿದ್ದು ಸಂಸದ ಬಿ.ವೈ. ರಾಘವೇಂದ್ರ ಇವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸುವರು.

ದುಗ್ಗಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಕೆ.ಎಸ್. ಗುರುಮೂರ್ತಿ, ಹೆಚ್.ಟಿ.ಬಳಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಿಲ್ಪಿಗಳಾದ ಕಾರ್ಕಳದ ಕೃಷ್ಣಾ ಆಚಾರ್ಯ, ಶಿವಮೊಗ್ಗದ ಜೀವನ್, ಗುತ್ತಿಗೆದಾರ ದೇವೇಂದ್ರಪ್ಪ ಪಿ.ಎಸ್. ಇವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾತ್ರಿ 9 ಗಂಟೆಗೆ ಹರ್ಲಾಪುರದ ಮೆಹಬೂಬಸಾಬ್‌, ಸಾಗರದ ಸುಹಾನಾ ಸೈಯದ್, ಚಿಕ್ಕಬೆಂಡಿಗೇರಿಯ ಲಿಂಗರಾಜ ಕಮ್ಮಾರ ಇವರಿಂದ ಸಂಗೀತ ಸೌರಭ ನಡೆಯುವುದು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದ ಚರಂಡಿ ಸರಿಯಿಲ್ಲ ಮಾರ್ರೆ!

ತೀರ್ಥಹಳ್ಳಿ ಪಟ್ಟಣದ ಚರಂಡಿ ಸರಿಯಿಲ್ಲ ಮಾರ್ರೆ!
– ಹಲವೆಡೆ ಮೋರಿ ತುಂಡಾಗಿ ಕೊಳಕು ಕೊಳಕು
– ಪಟ್ಟಣದ ಅಂದ ಹಾಳಾಗೋದು ಬೇಡ..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸುತ್ತಮುತ್ತಲಿನ ಡ್ರೈನೇಜ್ (ನೀರಿನ ಮೋರಿ) ತುಂಡಾದ ಸ್ಥಿತಿ ಯಲ್ಲಿ ಜನಸಾಮಾನ್ಯರಿಗೆ   ಪಾದಚಾರಿಗಳಿಗೆ, ವಾಹನ ಚಾಲಕರಿಗೆ ಹಾಗೂ ಮುಖ್ಯವಾಗಿ ಶಾಲಾ ಮಕ್ಕಳಿಗೆ ಅಪಾಯ ತಂದೊಡ್ಡುವ ರೂಪದಲ್ಲಿ ಹಾಳಾಗಿ ಹೋಗಿದೆ. ತೀರ್ಥಹಳ್ಳಿಯ ಜನವಾಸಿ ಪ್ರದೇಶಗಳಾದ ಕೊಳಿಕಾಳುಗುಡ್ದ, ಸೊಪ್ಪುಗುಡ್ದೆ, ವಿನಾಯಕಚಿತ್ರ ಮಂದಿರ ರಸ್ತೆ ಹೀಗೆ ನಗರದ ಸರಿ ಸುಮಾರು ಕಡೆಗಳಲ್ಲಿ ಇಂತಹ ಹಲವು ಡ್ರೈನೇಜ್ ನ ಮುಚ್ಚಿಗೆ ಕುಸಿದಿರುವ , ಹಾಳಾಗಿರುವ, ಅರ್ಧಂಬರ್ಧ ಕಾಮಗಾರಿ ಪೂರ್ಣಗೊಳ್ಳದೆ ಜನ ಸಾಮಾನ್ಯರಿಗೆ ಶಾಲಾ ಮಕ್ಕಳಿಗೆ, ವಾಹನ ಚಾಲಕರಿಗೆ ತಲೆ ನೋವಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಆಗದಿರುವ ಕೆಲವು ಸರ್ಕಾರಿ ಕೆಲಸಗಳು ಮಳೆಗಾಲ ಮುಗಿದ ಮೇಲಾದರೂ ಜನರು ಆಗಬಹುದು ಎಂದುಕೊಂಡರೆ ಈಗ ಮಳೆಗಾಲ ಕಳೆದು 4-5 ತಿಂಗಳು ಕಳೆದರೂ ಸಂಬಂಧಪಟ್ಟವರ ಇಲಾಖೆ, ಜನ ನಾಯಕರು, ಸರ್ಕಾರದ ಸಿಬ್ಬಂದಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನಸಾಮಾನ್ಯರು ಛೀ ಮಾರಿ ಹಾಕುವ ಸ್ಥಿತಿ ಬಂದಿದ್ದರೂ ಏನೂ ಕೆಲಸ ಆಗದೆ ಉಳಿದಿದೆ. ಇನ್ನಾದರೂ ಜನರಿಗೆ ಯಮ ಸ್ವರೂಪ ತೋರುವ ಮೊದಲೇ ಪಟ್ಟಣ ಪಂಚಾಯತಿ ಸಿಬ್ಬಂದಿ ಹಾಗೂ ಜನ ನಾಯಕರು, ಸಂಬಂಧಪಟ್ಟವರು ಬೇಗ ಎಚ್ಚೆತ್ತುಕೊಳ್ಳಿ ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಸಾಮಾಜಿಕ ಕಾಳಜಿ.

Categories
ಚಿಕ್ಕಮಗಳೂರು

ಅಡಿಕೆ ರೋಗ ನಿವಾರಣೆಗಾಗಿ ಶೃಂಗೇರಿಯಲ್ಲಿ ಪೂಜೆ!

ಅಡಿಕೆ ರೋಗ ನಿವಾರಣೆಗಾಗಿ ಶೃಂಗೇರಿಯಲ್ಲಿ ಪೂಜೆ!
– ಎಲೆ ಚುಕ್ಕಿ, ಹಳದಿ ರೋಗ ನಿವಾರಣೆಗಾಗಿ ಪೂಜೆ
– ಲಲಿತಾ ಪಂಚಮಿಯ ದಿನದಂದು ಲಲಿತಾ ಹೋಮ
– ಸರ್ವರನ್ನೂ ಆಹ್ವಾನಿಸಿದ ಶೃಂಗೇರಿ ಮಠ

NAMMUR EXPRESS NEWS
ಶೃಂಗೇರಿ: ಮಲೆನಾಡ ಭಾಗದಲ್ಲಿ ಅಡಿಕೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗಗಳು ಅತಿಯಾಗಿ ಬಾಧಿಸುತ್ತಿದ್ದು ಈ ರೋಗಗಳ ನಿವಾರಣೆಗಾಗಿ ಸಂಕಷ್ಟದಲ್ಲಿದ್ದ ರೈತರು ಕಳೆದ ವರ್ಷ ಶೃಂಗೇರಿ ಜಗದ್ಗುರುಗಳಲ್ಲಿ ತಮ್ಮ ಅಳಲನ್ನು ನಿವೇದಿಸಿಕೊಂಡಿದ್ದರು. ಅದಕ್ಕೆ ಪರಿಹಾರೋಪಾಯವಾಗಿ ಮಹಾ ಸನ್ನಿಧಾನಂಗಳ ಸೂಚನೆಯ ಮೇರೆಗೆ ಸನ್ನಿಧಾನಂಗಳವರು ಜಗನ್ಮಾತೆಗೆ ಕೋಟಿ ಕುಂಕುಮಾರ್ಚನೆ ಮತ್ತು ಲಲಿತಾ ಹೋಮವನ್ನು ಕೈಗೊಳ್ಳುವಂತೆ ಭಕ್ತಾದಿಗಳಿಗೆ ತಿಳಿಸಿದ್ದರು. ಅದರಂತೆ ಶೃಂಗೇರಿ ಶ್ರೀ ಮಠದಲ್ಲಿಯೇ ದಿನಾಂಕ 26.01.2023 ರಿಂದ ಪ್ರಾರಂಭಿಸಿ 11 ದಿನಗಳ ಪರ್ಯಂತ ಕೋಟಿ ಕುಂಕುಮಾರ್ಚನೆ ಹಾಗೂ ಲಲಿತಾ ಹೋಮಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಶಾಸ್ತ್ರೋಕ್ತವಾಗಿ ನಡೆದಿತ್ತು.

ಈ ಕಾರ್ಯಕ್ರಮಕ್ಕೆ ಸಂಗ್ರಹವಾದ ಕಾಣಿಕೆಯ ಹಣದಲ್ಲಿ ಕೋಟಿ ಕುಂಕುಮಾರ್ಚನೆಗೆ ಖರ್ಚಾಗಿ ಉಳಿದ ಹಣದ ಬಡ್ಡಿಯಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟ ಪರಿಹಾರದ ಸಂಕಲ್ಪವನ್ನು ಇಟ್ಟುಕೊಂಡು ಪ್ರತಿವರ್ಷವೂ ಲಲಿತಾ ಪಂಚಮಿಯ ದಿನದಂದು ಶೃಂಗೇರಿ ಶ್ರೀ ಮಠದಲ್ಲಿ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಜಗದ್ಗುರುಗಳು ಸೂಚಿಸಿದ ಬಗ್ಗೆ ಈ ಹಿಂದೆ ತಿಳಿಸಲಾಗಿತ್ತು. ಅದರಂತೆ ದಿನಾಂಕ 14.02.2024 ನೇ ಬುಧವಾರ ಲಲಿತಾ ಪಂಚಮಿಯ ದಿನದಂದು ಶ್ರೀ ಮಠದಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ.

ಧಾರ್ಮಿಕ ಕಾರ್ಯಕ್ರಮ ಏನೇನು?

* ಗುರುಭವನದಲ್ಲಿ ಗುರುದರ್ಶನವನ್ನು ಮಾಡಿ ಫಲ ಸಮರ್ಪಣೆ ಮಾಡುವುದು, ನಂತರ ಜಗದ್ಗುರುಗಳ ಅನುಗ್ರಹ ಭಾಷಣ.
* ಅಮ್ಮನವರಿಗೆ ಲಕ್ಷ ಕುಂಕುಮಾರ್ಚನೆ.
* ಲಲಿತಾ ಹೋಮ
* ಅಮ್ಮನವರಿಗೆ ದಿಂಡಿ ಉತ್ಸವ
* ಬೆಟ್ಟದ ಮಲಹಾನಿಕೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ರುದ್ರಾಭಿಷೇಕ ಮತ್ತು ರುದ್ರ ಹೋಮ.
* ಶ್ರೀ ಮಠದ ಭೋಜನ ಪ್ರಸಾದ.
ಅಡಿಕೆ ಬೆಳೆಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಗನ್ಮಾತೆಯ ಹಾಗೂ ಜಗದ್ಗುರುಗಳ ಪರಿಪೂರ್ಣ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಶೃಂಗೇರಿ ಶ್ರೀ ಮಠದ ಸೂಚನೆಯ ಮೇರೆಗೆ ಸರ್ವರನ್ನು ಈ ಮೂಲಕ ಆಹ್ವಾನಿಸಲಾಗಿದೆ.

Categories
ಉದ್ಯೋಗ ಸುದ್ದಿ ರಾಜ್ಯ

ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಾವಕಾಶ.

ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಾವಕಾಶ.
– 2860 ಹುದ್ದೆಗಳ ಭರ್ತಿಗೆ ಅಧಿಸೂಚನೆ
– ಆನ್‌ಲೈನ್‌ ಅರ್ಜಿ ಆಹ್ವಾನ

NAMMUR EXPRESS NEWS
ದಕ್ಷಿಣ ರೈಲ್ವೆ ವಲಯದ, ರೈಲ್ವೆ ನೇಮಕಾತಿ ಕೋಶವು ವಲಯದ ಎಲ್ಲ ಡಿವಿಷನ್‌ಗಳಲ್ಲಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗ ಪ್ರಕಟಣೆ ಹೊರಡಿಸಿದೆ. 1961 ರ ಅಪ್ರೆಂಟಿಸ್ ಕಾಯ್ದೆಯಡಿ, ಈ ಶಿಶಿಕ್ಷು ಹುದ್ದೆಗಳನ್ನು ಭರ್ತಿ ಮಾಡಲಿದ್ದು ಇಲ್ಲಿದೆ ಮಾಹಿತಿ ಅರ್ಜಿ ಸಲ್ಲಿಸಿ.

ಉದ್ಯೋಗ ರೈಲ್ವೆ ವಲಯ: ದಕ್ಷಿಣ ರೈಲ್ವೆ
ಹುದ್ದೆಗಳ ಹೆಸರು : ಅಪ್ರೆಂಟಿಸ್ (ತರಬೇತುದಾರರು)
ಹುದ್ದೆಗಳ ಸಂಖ್ಯೆ : 2860

ಫ್ರೆಶರ್‌ ಕೆಟಗರಿ ಅಡಿಯಲ್ಲಿ ಕೊಯಂಬತೂರು, ಪೆರಂಬೂರು ಡಿವಿಷನ್‌ಗಳ ವರ್ಕ್‌ಶಾಪ್‌ ಹಾಗೂ ಹಾಸ್ಪಿಟಲ್‌ಗಳಲ್ಲಿ ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಾಜಿ- ಐಟಿಐ ಅಭ್ಯರ್ಥಿಗಳ ಕೆಟಗರಿ ಅಡಿಯಲ್ಲಿ ಸೇಲಂ, ಪಲಕ್ಕಾಡ್, ಪರೆಂಬೂರು, ಅರಕ್ಕೋನಂ, ಚೆನ್ನೈ ಡಿವಿಷನ್, ಅವಡಿ, ರೊಯಪುರಂ, ಪೊನ್ಮಲೈ, ಮಧುರೈ, ತಿರುಚನಾಪಲ್ಲಿ, ತಂಬರಂ, ಸೇರಿದಂತೆ ವಿವಿಧ ವರ್ಕ್‌ಶಾಪ್‌ ಹಾಗೂ ಡಿವಿಷನ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.

ಅರ್ಹತೆಗಳು
ಅರ್ಜಿ ಸಲ್ಲಿಸಲು ಬಯಸುವವರು 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪಾಸ್ ಮಾಡಿರಬೇಕು. ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದವರು ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಬಹುದು. ಕಾರ್ಪೆಂಟರ್, ಮಷಿನಿಸ್ಟ್‌, ಪೇಂಟರ್, ಫಿಟ್ಟರ್, ವೆಲ್ಡರ್, ರೇಡಿಯಾಲಜಿ, ಎಂಎಂವಿ, ಇಲೆಕ್ಟ್ರೀಷಿಯನ್, ಟರ್ನರ್, ಅಡ್ವಾನ್ಸ್‌ಡ್ ವೆಲ್ಡರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಪಾಸ್ಸಾ, ವೈಯರ್‌ಮನ್, ಕಾರ್ಪೆಂಟರ್ ಟ್ರೇಡ್‌ಗಳಲ್ಲಿ ಐಟಿಐ ಓದಿರಬೇಕು.

ಕನಿಷ್ಠ 15 ವರ್ಷ ಆಗಿರುವ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಒಬಿಸಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-02-2024 ರ ಸಂಜೆ 05 ಗಂಟೆವರೆಗೆ.

ಆಯ್ಕೆ ವಿಧಾನ ಹೇಗಿರುತ್ತದೆ?
ಅಭ್ಯರ್ಥಿಗಳನ್ನು ಅವರು ಐಟಿಐ ಟ್ರೇಡ್‌ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ದಾಖಲೆಗಳ ಪರಿಶೀಲನೆ / ಮೆಡಿಕಲ್ ಟೆಸ್ಟ್‌ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

Categories
ಕರಾವಳಿ ಕಾರ್ಕಳ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಪರಶುರಾಮ ಥೀಂ ಪಾರ್ಕ್ ಕೇಸ್: ಸುನೀಲ್ ಕುಮಾರ್ ಹೇಳಿದ್ದೇನು?
– ಅಂತೂ ಕೊನೆಗೂ ಪ್ರಕರಣಕ್ಕೆ ಮುಕ್ತಿ ಸಿಗಲಿದೆ
– ಮಂಗಳೂರಿನಿಂದ ಅಯೋಧ್ಯೆಗೆ ರೈಲು ನಡುವೆ ಸಂಪರ್ಕ

NAMMUR EXPRESS NEWS
ಕಾರ್ಕಳ: ಪರಶುರಾಮ ಥೀಂ ಪಾರ್ಕ್ ವಿಚಾರದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸಲು ಮುಂದಾಗಿರುವುದು ಸ್ವಾಗತ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ಪರಶುರಾಮ ಥೀಂ ಪಾರ್ಕ್ ವಿಚಾರದ ಬಗ್ಗೆ ಅನಗತ್ಯವಾಗಿ ಎಬ್ಬಿಸುತ್ತಿದ್ದ ಊಹಾಪೋಹ ಹಾಗೂ ಸುಳ್ಳು ಆರೋಪಗಳಿಗೆ ಒಂದು ಪೂರ್ಣ ವಿರಾಮ ಬೇಕಿತ್ತು. ಈ ಸುಳ್ಳು ಆರೋಪಗಳ ತನಿಖೆಗಾಗಿ ರಾಜ್ಯ ಸರ್ಕಾರ ಕೊನೆಗೂ ಸಿಐಡಿ ತನಿಖೆ ನಡೆಸಲು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್‌ ಕುಮಾ‌ರ್ ಹೇಳಿದ್ದಾರೆ.ಈ ಬಗ್ಗೆ ತನಿಖೆ ನಡೆಯಬೇಕೆಂದು ಆರು ತಿಂಗಳು ಹಿಂದೆಯೇ ನಾನು ಆಗ್ರಹಿಸಿದ್ದೆ.

ಸರ್ಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವ ಜತೆಗೆ ಥೀಂ ಪಾರ್ಕ್ ಅಭಿವೃದ್ಧಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಆದಷ್ಟು ಬೇಗ ಥೀಂ ಪಾರ್ಕ್ ಪ್ರವಾಸಿಗಳ ವೀಕ್ಷಣೆಗೆ ಮುಕ್ತಗೊಳ್ಳುವಂತಾಗಬೇಕೆಂದು ಎಂದು ಒತ್ತಾಯಿಸಿದ್ದಾರೆ. ಸಿಐಡಿ ತನಿಖೆಗೆ ಒತ್ತಾಯ ಹಾಗೂ ಮುತುವರ್ಜಿ ತೋರಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ಹೇಳಿದ್ದಾರೆ.

ಮಂಗಳೂರಿನಿಂದ ಅಯೋಧ್ಯೆಗೆ ರೈಲು ನಡುವೆ ಸಂಪರ್ಕ

ಮಂಗಳೂರು: ಮಂಗಳೂರು ನಗರದಿಂದ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ವಿಶೇಷ ರೈಲು ಸೇವೆಯನ್ನು ನೀಡಲಾಗುತ್ತಿದೆ. ರೈಲು ಸಂಖ್ಯೆ 06517 ಕೊಯಮತ್ತೂರು-ದರ್ಶನ್ ನಗರ-ಕೊಯಮತ್ತೂರು ಆಸ್ತಾ, ಫೆಬ್ರವರಿ 8 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಹೊರಟು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಮೂಲಕ ಅಯೋಧ್ಯೆ ಜಂಕ್ಷನ್‌ಗೆ ಪ್ರಯಾಣಿಸಲಿದೆ.

ಫೆಬ್ರವರಿ 8 ರಂದು ಸಂಜೆ 5:50 ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 6 ಗಂಟೆಗೆ ಹೊರಡಲಿದೆ. ರೈಲು ಫೆಬ್ರವರಿ 11 ರಂದು ಮುಂಜಾನೆ ಅಯೋಧ್ಯೆಯ ದರ್ಶನ್ ನಗರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಫೆಬ್ರವರಿ 12 ರಂದು ಬೆಳಿಗ್ಗೆ 8 ಗಂಟೆಗೆ ಅಯೋಧ್ಯೆಯಿಂದ ಮರಳಿ ಫೆಬ್ರವರಿ 14 ರ ಸಂಜೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

Categories
ಬೆಂಗಳೂರು ರಾಜ್ಯ ರಾಷ್ಟ್ರೀಯ ವಾರ್ತೆ

ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಮಹಿಳೆಯ ಕಳ್ಳಾಟ

ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಮಹಿಳೆಯ ಕಳ್ಳಾಟ
– ಕೋಟಿ ಕೋಟಿ ರೂ. ವಂಚನೆ!
– ಟ್ರಸ್ಟ್‌ಗೆ ಆರ್‌ಬಿಐನಿಂದ 17 ಕೋಟಿ ರೂ ಬಂದಿದೆ ಎಂದು ಮೋಸ !

NAMMUR EXPRESS NEWS
ಆನೇಕಲ್: ಬೇಕಾದಷ್ಟು ಸಾಲ ಕೊಡುವುದಾಗಿ ಹೇಳಿ, ಅದರಲ್ಲಿ ಅರ್ಧದಷ್ಟು ಸಬ್ಸಿಡಿ ಸಿಗುತ್ತೆ ಎಂದೆಲ್ಲ ಹೇಳಿ ಖತರ್ನಾಕ್‌ ಲೇಡಿಯೊಬ್ಬಳು ಅಮಾಯಕ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ನಡೆದಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಾಗೂ ಆರ್‌ಬಿಐ ಹೆಸರು ಹೇಳಿಕೊಂಡು ಈಕೆ ಮುಗ್ಧರಿಗೆ ನಾಮ ಹಾಕಿದ್ದಾಳೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಈಕೆಯ ಕಳ್ಳಾಟ ನಡೆದಿದೆ. ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಎಂಬಾಕೆ ಹೀಗೆ ವಂಚಿಸಿದವಳು. ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡು ಅಮಾಯಕ ಜನರಿಗೆ ವಂಚನೆ ಮಾಡುವುದನ್ನು ಕಸುಬಾಗಿ ಮಾಡಿಕೊಂಡಿದ್ದಾಳೆ.

ಟ್ರಸ್ಟ್‌ಗೆ ಆರ್‌ಬಿಐನಿಂದ 17 ಕೋಟಿ ರೂ. ಬಂದಿರುವುದಾಗಿ ಮೊದಲು ಈಕೆ ಜನರಿಗೆ ನಂಬಿಸಿದ್ದಾಳೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ಇರುವಂತೆ ನಕಲಿ ಪತ್ರ ಸೃಷ್ಟಿಸಿಕೊಂಡು ಅದನ್ನು ತೋರಿಸಿದ್ದಾಳೆ. ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನು ಕಳುಹಿಸಿ ಜನರನ್ನು ನಂಬಿಸಿದ್ದಳು. ಸುಲಭವಾಗಿ ಸಾಲ ಕೊಡುತ್ತೇನೆ. ಒಬ್ಬರಿಗೆ ಹತ್ತು ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ ಎಂದು ಹೇಳಿದ್ದಾಳೆ. ಆದರೆ ಲೋನ್ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕು ಎಂದು ಕಥೆ ಕಟ್ಟಿದ್ದಳು. ಇದನ್ನು ನಂಬಿದ ಜನರು ಒಂದು ಗುಂಪು ಮಾಡಿಕೊಂಡು ಈಕೆಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಸಿಕ್ಕ ಸಿಕ್ಕ ಕಡೆಗಳಲ್ಲಿ ಸಾಲ ಮಾಡಿ ಹಣ ಕೊಟ್ಟಿದ್ದರು. ತಿಂಗಳುಗಳು ಕಳೆದರೂ ಲೋನ್ ಬಾರದೆ ಇದ್ದಾಗ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಸಾಲದ ಸುಳಿಗೆ ಸಿಲುಕಿದ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ಚಂದಾಪುರು, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ಈಕೆ ವಂಚನೆ ಮಾಡಿದ್ದು, ನೂರಾರು ಮಂದಿಗೆ ವಂಚಿಸಿದ್ದಾಳೆ.

ಸೂರ್ಯನಗರ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ವಂಚಕಿ ಪವಿತ್ರ ಹಾಗೂ ಆಕೆಯ ಜೊತೆಗಾರರಾದ ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಹಾಲ್ಬರ್ಟ್ ಮಾರ್ಟಿನ್, ಹೇಮಲತಾ, ಶಾಲಿನಿ ಹೀಗೆ ವಂಚನೆ ಮಾಡಿದ ಒಟ್ಟು ಹದಿನಾಲ್ಕು ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.