Categories
ಬೆಂಗಳೂರು ರಾಜ್ಯ

ಪ್ರೇಮಿಗಳ ದಿನ ಗುಲಾಬಿ ಸಿಗೋದು ಡೌಟು!

ಪ್ರೇಮಿಗಳ ದಿನ ಗುಲಾಬಿ ಸಿಗೋದು ಡೌಟು!
– ಕೆಂಗುಲಾಬಿಗೆ ಭಾರಿ ಬೇಡಿಕೆ: ವಿದೇಶಕ್ಕೆ ಕೋಟಿ ಗುಲಾಬಿ ರಫ್ತು
– ಕೇಕ್,ಚಾಕೊಲೇಟ್‌, ಗಿಫ್ಟ್ಗಳಿಗೆ ಡಿಮ್ಯಾಂಡ್ ಡಿಮ್ಯಾಂಡ್

NAMMUR EXPRESS NEWS
ಬೆಂಗಳೂರು: ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಿಂದ ವಾರಕ್ಕೂ ಮುನ್ನವೇ ಕೆಂಗುಲಾಬಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ರಾಜ್ಯದಿಂದ ಈ ಬಾರಿ 1 ಕೋಟಿ ಗುಲಾಬಿ ಹೂಗಳು ವಿದೇಶಗಳಿಗೆ ರಫ್ತಾಗಲಿವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ, ಸಿಂಗಾಪುರ, ಜಪಾನ್, ಮಲೇಶಿಯಾ, ರಷ್ಯಾ ಸೇರಿ ವಿವಿಧ ದೇಶಗಳಿಂದ ಗುಲಾಬಿಗೆ ಹೆಚ್ಚಿನ ಬೇಡಿಕೆ ಇದ್ದು, ಕಳೆದ ವರ್ಷದಂತೆ ಈ ಬಾರಿಯೂ ಕೋಟಿಗೂ ಅಧಿಕ ಹೂವುಗಳು ರವಾನೆಯಾಗಲಿವೆ. ರಾಜ್ಯದಲ್ಲಿ ಈ ಬಾರಿ ಬರದ ನಡುವೆಯೂ ಹೂವಿನ ಇಳುವರಿಯಲ್ಲಿ ಸಮಸ್ಯೆಯಾಗಿಲ್ಲ. ಆದರೆ ನಿರೀಕ್ಷಿತ ಬೆಲೆ ಸಿಕ್ಕಿಲ್ಲ. ದೊಡ್ಡಬಳ್ಳಾಪುರ, ಆನೇಕಲ್‌, ಚಿಕ್ಕಬಳ್ಳಾಪುರ ಸೇರಿ ಬೆಂಗಳೂರು ಸುತ್ತಮುತ್ತಲ ಭಾಗಗಳಿಂದ ವಿವಿಧ ತಳಿಯ ಹೂವುಗಳು ಪೂರೈಕೆಯಾಗುತ್ತಿದ್ದು, ಪ್ರೇಮಿಗಳ ದಿನಕ್ಕೆ ಬೇಡಿಕೆಗೆ ಅನುಗುಣವಾಗಿ ಹೂವು ಲಭ್ಯವಾಗಲಿವೆ. ರಾಜ್ಯದ ವಿವಿಧ ಕಡೆ ಕೂಡ ಗುಲಾಬಿಗಳಿಗೆ ಭಾರೀ ಡಿಮ್ಯಾಂಡ್ ಇದೆ.

ಕೇಕ್, ಚಾಕೊಲೇಟ್‌ಗಳ ಆಕರ್ಷಣೆ!

ಪ್ರೇಮಿಗಳ ದಿನಕ್ಕೆ ನಗರದ ಹಲವು ಕೇಕ್ ಹಾಗೂ ಚಾಕೊಲೇಟ್ ಮಳಿಗೆಗಳು ಪ್ರೇಮಿಗಳ ದಿನಕ್ಕೆ ಹೃದಯದ ಆಕಾರದ ಕೇಕ್ ಹಾಗೂ ಚಾಕೊಲೇಟ್‌ಗಳ ತಯಾರಿಯಲ್ಲಿ ತೊಡಗಿಕೊಂಡಿವೆ. ಬಹಳಷ್ಟು ಮಂದಿ ಪ್ರೇಮ ನಿವೇದನೆಗಾಗಿ ಹೃದಯಾಕಾರದ ಕೇಕ್‌ಗಳಿಗೆ ಈಗಾಗಲೇ ಬುಕಿಂಗ್ ಮಾಡುತ್ತಿದ್ದಾರೆ. ನಗರದ ಮಾಲ್ ಗಳು ಹಾಗೂ ಕೆಲ ಹೋಟೆಲ್‌ಗಳೂ ಪ್ರೇಮಿಗಳ ದಿನಕ್ಕೆ ಸಭಾಂಗಣಗಳು ಸಿಂಗಾರಗೊಳ್ಳತೊಡಗಿವೆ. ನಮ್ಮಲ್ಲಿ ಕೆಂಪು, ಬಿಳಿ, ಹಳದಿ, ನಸುಗೆಂಪು ಸೇರಿ ವಿವಿಧ ಬಣ್ಣದ ಗುಲಾಬಿ ಲಭ್ಯವಿದ್ದು, ಫೆಬ್ರವರಿಯಲ್ಲಿ ಕೆಂಗುಲಾಬಿಗೆ ಬೇಡಿಕೆ ಹೆಚ್ಚು.

ಕಳೆದ ವರ್ಷ ಪ್ರೇಮಿಗಳ ದಿನದಂದು 7 ಲಕ್ಷಕ್ಕೂ ಅಧಿಕ ಕೆಂಗುಲಾಬಿ ಹೂವು ಮಾರಾಟವಾಗಿತ್ತು. ಈ ಬಾರಿ 8-9 ಲಕ್ಷ ಮಾರಾಟವಾಗುವ ನಿರೀಕ್ಷೆ ಇದೆ. ಸದ್ಯ ಒಂದು ಗುಲಾಬಿ ಹೂವು 10-15 ರೂ.ಗೆ ಮಾರಾಟವಾಗುತ್ತಿದ್ದು, ಪ್ರೇಮಿಗಳ ದಿನದಂದು 18-20 ರೂ. ಏರಿಕೆಯಾಗುವ ಸಾಧ್ಯತೆ ಇದೆ. ಪ್ರೇಮಿಗಳ ದಿನವನ್ನು ವ್ಯಾಲೆಂಟೈನ್ಸ್ ವೀಕ್ ಎಂದು ಏಳು ದಿನಗಳ ಕಾಲ ಆಚರಿಸಲಾಗುತ್ತದೆ. ಫೆ. 7ರಂದು ಗುಲಾಬಿ ದಿನದಿಂದ ಪ್ರಾರಂಭವಾಗಿ, ನಂತರ ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಅಂತಿಮವಾಗಿ ಫೆ. 14ರಂದು ವ್ಯಾಲೆಂಟೈನ್ಸ್ ಡೇವರೆಗೂ ಈ ವ್ಯಾಲೆಂಟೈನ್ಸ್‌ ವೀಕ್ ಆಚರಿಸಲಾಗುತ್ತದೆ.

Categories
ಕೊಪ್ಪ

ಕೊಪ್ಪದ ಕುಂಚೂರು ಜಾತ್ರೆಗೆ ಸಜ್ಜು!

ಕೊಪ್ಪದ ಕುಂಚೂರು ಜಾತ್ರೆಗೆ ಸಜ್ಜು!
– ಫೆ.14ರಿಂದ ಫೆ.19ರವರೆಗೆ ಧಾರ್ಮಿಕ ಕಾರ್ಯಕ್ರಮ
– ದುರ್ಗಾಪರಮೇಶ್ವರಿ ಅಮ್ಮನವರ ಸೇವೆಗೆ ಭಕ್ತರು ಸಿದ್ಧ

NAMMUR EXPRESS NEWS
ಕೊಪ್ಪ: ಕೊಪ್ಪ ಸಮೀಪದ ಶ್ರೀ ಕ್ಷೇತ್ರ ಕುಂಚೂರು ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವ ಫೆಬ್ರವರಿ 15 ರಂದು ನೆರವೇರಲಿದೆ. ಈ ಅಂಗವಾಗಿ ಫೆ.14ರಿಂದ ಫೆ.19ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆಬ್ರವರಿ 14 ರಂದು ಶ್ರೀ ಗಣಪತಿ ಹೋಮ, ರಾಶಿಪೂಜೆ ಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದ್ದು, ಫೆ.15ರಂದು ಮಧ್ಯಾಹ್ನ ರಥಾರೋಹಣ, ರಾತ್ರಿ 8 ಗಂಟೆಗೆ ರಥೋತ್ಸವ ನೆರವೇರಲಿದ್ದು, ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಮಂದಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.

ಫೆ. 16 ರಂದು ತುಲಾಭಾರ, ರಾತ್ರಿ ಯಕ್ಷಗಾನ ನಡೆಯಲಿದೆ. ಫೆ.17 ರಂದು ಶ್ರೀ ದುರ್ಗಿ ಸಮಾರಾಧನೆ, ಸಾಮೂಹಿಕ ಸತ್ಯನಾರಾಯಣ ವ್ರತ, ರಾತ್ರಿ ಮಾರಿ ಹಾಗೂ ಭೂತನ ಪೂಜೆ ನಡೆಯುತ್ತವೆ. ಫೆಬ್ರವರಿ 18 ರಂದು ಮಾರಿ ಪೂಜೆ ನಡೆಯಲಿದ್ದು, ಫೆ.19 ರಂದು ಸಂಪ್ರೋಕ್ಷಣೆಯೊಂದಿಗೆ ಕುಂಚೂರು ಜಾತ್ರೆಗೆ ತೆರೆ ಬೀಳಲಿದೆ. ಇತ್ತೀಚಿನ ವರ್ಷಗಳಲ್ಲಿ ಶ್ರೀ ಕ್ಷೇತ್ರ ಕುಂಚೂರು ಅಭಿವೃದ್ಧಿ ಹೊಂದಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಇಮ್ಮಡಿಯಾಗಿದೆ. ಶ್ರೀ ಕ್ಷೇತ್ರದ ಮುಖ್ಯಸ್ಥರಾದ ಕುಂಚೂರು ಶ್ರೀನಿವಾಸ್ ಹಾಗೂ ಗ್ರಾಮಸ್ಥರು ರಥೋತ್ಸವ, ಜಾತ್ರೆ, ಮಾರಿ ಹರಕೆಗಳನ್ನು ವಿಶೇಷ ಪರಿಶ್ರಮದಿಂದ ನಿರ್ವಹಿಸಲಿದ್ದಾರೆ.

Categories
ಉಡುಪಿ ಮಂಗಳೂರು ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಕಟೀಲ್ ಮನೆಗೆ ಮುತ್ತಿಗೆ: 20ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ!
– ದಕ್ಷಿಣ ಕನ್ನಡ ಜಿಲ್ಲೆಗೆ ಬಾರದ ಅನುದಾನ: ಆಕ್ರೋಶ
– ತುಮಕೂರು: ಶಿಕ್ಷಕರು-ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
– ಮಂಗಳೂರು: ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್

NAMMUR EXPRESS NEWS
ಮಂಗಳೂರು: ದ.ಕ.ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲವಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ ಎಂದು ಎನ್‌ಎಸ್ ಯುಐ ಕಾರ್ಯಕರ್ತರು ಸಂಸದ ನಳಿನ್ ಕುಮಾ‌ರ್ ಕಟೀಲು ಅವರ ಮನೆಗೆ ಮುತ್ತಿಗೆ ಯತ್ನ ನಡೆಸಿದ್ದಾರೆ. ಒಂದು ಕಡೆ ದೆಹಲಿ, ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರ ಹೋರಾಟದ ನಡುವೆ ನಳಿನ್ ಕುಮಾರ್ ಕಟೀಲ್ ಮನೆಗೆ ಮುತ್ತಿಗೆ ಹಾಕಲಾಗಿದೆ. ಉರ್ವ ಠಾಣೆಯ ಪೊಲೀಸರು ನಳಿನ್ ಅವರ ಮನೆಗಿಂತ ಮೊದಲೇ ಬ್ಯಾರಿಕೇಡ್ ಅಳವಡಿಸಿ ಮುತ್ತಿಗೆ ಹಾಕುವವರನ್ನು ತಡೆದಿದ್ದಾರೆ.

ಈ ವೇಳೆ ಎನ್‌ಎಸ್‌ ಯುಐ ಜಿಲ್ಲಾಧ್ಯಕ್ಷ ಸುಹಾನ್‌ ಆಳ್ವ ಅವರು ಮುತ್ತಿಗೆ ಹಾಕಲು ಅವಕಾಶ ನೀಡಬೇಕೆಂದು ಉರ್ವ ಠಾಣಾಧಿಕಾರಿ ಭಾರತಿಯವರಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಅವಕಾಶ ನೀಡದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ನೂಕಿ ಮುತ್ತಿಗೆ ಹಾಕುವ ಯತ್ನ ನಡೆದಿದೆ. ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಡದೆ 20-25 ಮಂದಿ ಎನ್‌ಎಸ್ ಯುಐ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುತ್ತಿಗೆಯತ್ನದ ವೇಳೆ ನಳಿನ್ ಹಠಾವೋ ದೇಶ್ ಬಚಾವೋ ಘೋಷಣೆ ಕೇಳಿ ಬಂದಿದೆ

ಶಿಕ್ಷಕರು-ವಿದ್ಯಾರ್ಥಿಗಳಿಗೆ ವಾಂತಿ ಭೇದಿ!

ತುಮಕೂರು: ಬಿಸಿಯೂಟ ಸೇವಿಸಿದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಬ್ಬರು ಅಸ್ವಸ್ಥಗೊಂಡಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯಲ್ಲಿ ಘಟನೆ ನಡೆದಿದೆ. ಅಂಬಾಭವಾನಿ ಅನುದಾನಿತ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ಮೊಸರನ್ನ ಸೇವಿಸಿದ್ದರು. ಶಾಲೆ ಮುಗಿಸಿ ಮನೆಗೆ ಹೋದಾಗ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಎಲ್ಲರಿಗೂ ವಾಂತಿ ಭೇದಿಯಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥಗೊಂಡವರನ್ನು ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. 12 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಣಿಗಲ್ ಟಿಹೆಚ್ಓ ಡಾ.ಮರಿಯಪ್ಪ ಹಾಗೂ ಬಿಇಒ ಬೋರೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ 13 ವಿದ್ಯಾರ್ಥಿಗಳಿಗೆ ಕುಣಿಗಲ್ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮಂಗಳೂರಲ್ಲೂ ಹೊಟ್ಟೆ ನೋವಿನಿಂದ ನರಳಾಡಿದ ವಿದ್ಯಾರ್ಥಿಗಳು!

ಮಂಗಳೂರು ಹೊರವಲಯದ ವಲಚ್ಚಿಲ್ ಬಳಿಯ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಕಾಲೇಜಿನ ಹಾಸ್ಟೆಲ್‌ನಲ್ಲಿ ರಾತ್ರಿ ಊಟ ಮಾಡಿದ ಬಳಿಕ ನೂರಾರು ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವಿನಿಂದ ನರಳಾಡಿದ ಕಾರಣ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಮಂಗಳೂರು ಮತ್ತು ತುಂಬೆಯ ಆಸ್ಪತ್ರೆಗೆ‌ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಕಾಲೇಜಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Categories
ಕರಾವಳಿ ಕಾರ್ಕಳ

ಶಿರಸಿಯಲ್ಲಿ ಕ್ರಿಯೇಟಿವ್ ಸಂಸ್ಥೆಯಿಂದ ಪ್ರೇರಣಾ ಶಿಬಿರ

ಶಿರಸಿಯಲ್ಲಿ ಕ್ರಿಯೇಟಿವ್ ಸಂಸ್ಥೆಯಿಂದ ಪ್ರೇರಣಾ ಶಿಬಿರ
– ಮಕ್ಕಳಿಗೆ ಭವಿಷ್ಯದ ಶಿಕ್ಷಣದ ಪಾಠ ಮಾಡಿದ ಶಿಕ್ಷಕರು
– 300ಕ್ಕೂ ಹೆಚ್ಚು ಎಸ್. ಎಸ್. ಎಲ್. ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಜರ್
– ಕ್ರಿಯೇಟಿವ್ ಸಂಸ್ಥಾಪಕರಾದ ಗಣಪತಿ ಭಟ್, ಗಣಪತಿ ಕೆ.ಎಸ್ ಅವರಿಗೆ ಗೌರವ ಸಮರ್ಪಣೆ

NAMMUR EXPRESS NEWS
ಶಿರಸಿ: ಶಾಲಾ ಶಿಕ್ಷಣ ಇಲಾಖೆ ಶಿರಸಿ ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರೇರಣಾ ಶಿಬಿರ ಒಂದು ವಾರಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಯಿತು. ಜ.29ರಿಂದ ಫೆ.3ರವರೆಗೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ಅಧ್ಯಯನ ಹಾಗೂ ಕಲಿಕಾ ಗುಣಮಟ್ಟ ಹೆಚ್ಚಿಸುವ ಸಲುವಾಗಿ ನಡೆಸಿದ ಶಿಬಿರದಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ, ಶಿರಸಿ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಶಿಬಿರ – 2024 ಆಯೋಜಿಸಲಾಗಿದ್ದು ವಿವಿಧ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಪ್ರೇರಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಲಯನ್ಸ್ ಅಧ್ಯಕ್ಷರಾದ ಪ್ರಭಾಕರ್ ಹೆಗಡೆ, ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಎಂ. ಎಚ್. ನಾಯಕ್, ಕ್ರಿಯೇಟಿವ್ ಪಿಯು ಕಾಲೇಜಿನ ಪ್ರಿನ್ಸಿಪಾಲರು, ಸಂಸ್ಥಾಪಕರಲ್ಲಿ ಒಬ್ಬರಾದ ವಿದ್ವಾನ್ ಗಣಪತಿ ಭಟ್, ಸಹ ಸಂಸ್ಥಾಪಕರಾದ ಗಣಪತಿ ಕೆ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಏಳು ದಿನಗಳ ಕಾಲ ಎಸ್ ಎಸ್ ಎಲ್ ಸಿ ಮಕ್ಕಳಿಗೆ 625 ಅಂಕಗಳಿಗೆ 625 ಅಂಕ ತೆಗೆಯುವುದು ಹೇಗೆ?, ಮಕ್ಕಳು ಪರೀಕ್ಷೆ ಎದುರಿಸುವಲ್ಲಿ ಆಗುವ ಗೊಂದಲ, ಪೂರ್ವ ಸಿದ್ಧತೆ, ಸಮಯ ಪಾಲನೆ, ಓದುವ ಶಿಸ್ತು ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಲಾಯಿತು. ವಿವಿಧ ನುರಿತ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಿದರು. ಮಕ್ಕಳು ಕೂಡ ಉತ್ಸುಕತೆಯಿಂದ ಶಿಬಿರದಲ್ಲಿ ಭಾಗಿಯಾದರು. ಈ ಶಿಬಿರಕ್ಕೆ ಪೋಷಕ ವಯಲದಿಂದ ಮೆಚ್ಚುಗೆ ವ್ಯಕ್ತವಾಯಿತು.

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲರಾದ ವಿಧ್ವಾನ್ ಗಣಪತಿ ಭಟ್ ಮಾತನಾಡಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳ ವಿಕಸನ ಶಿಬಿರಗಳಿಗೆ ಎಂದಿಗೂ ಬೆಂಬಲ ನೀಡಲಿದೆ ಎಂದರು. ನೀದಳೋದೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಮತ್ತೋರ್ವ ಸಂಸ್ಥಾಪಕರಾದ ಗಣಪತಿ ಕೆ. ಎಸ್ ಅವರಿಗೆ ಶಿರಸಿ ವಲಯದ ಶಾಲಾ ಶಿಕ್ಷಣ ಇಲಾಖೆಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯರು, ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕ ವರ್ಗ, ಪೋಷಕರು ಹಾಜರಿದ್ದರು.

Categories
ಉದ್ಯೋಗ ಸುದ್ದಿ

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್!

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್!
ಸುವರ್ಣಾವಕಾಶ
– ಅಗ್ನಿವೀರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ: ಮಾರ್ಚ್‌ 21 ಕೊನೆಯ ದಿನ

NAMMUR EXPRESS NEWS
ನವದೆಹಲಿ: ಭಾರತೀಯ ಸೇನೆಯ ಅಗ್ನಿವೀರ್‌ ನೇಮಕಾತಿ 2024ರ ಅಧಿಸೂಚನೆ ಫೆಬ್ರವರಿ 8 ಬಿಡುಗಡೆಯಾಗಲಿದೆ. ಅಗ್ನಿವೀರ್‌-ಜನರಲ್‌ ಡ್ಯೂಟಿ, ಟೆಕ್ನಿಕಲ್‌, ಕ್ಲರ್ಕ್‌ / ಸ್ಟೋರ್‌ ಕೀಪರ್‌ ಮತ್ತು ಟ್ರೇಡ್‌ ಮ್ಯಾನ್‌ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 8 / 10 / 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್‌ 21 .

ವಿದ್ಯಾರ್ಹತೆ
ಅಗ್ನಿವೀರ್‌ ಜನರಲ್‌ ಡ್ಯೂಟಿ: 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿಯೂ ಶೇ. 45 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಅಗ್ನಿವೀರ್‌ ಟೆಕ್ನಿಕಲ್‌: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಶೇ. 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿವೀರ್‌ ಕ್ಲರ್ಕ್‌ / ಸ್ಟೋರ್‌ ಕೀಪರ್‌: ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಶೇ. 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌ (10ನೇ ತರಗತಿ): 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಪ್ರತಿ ವಿಷಯದಲ್ಲಿಯೂ ಶೇ. 33ರಷ್ಟು ಅಂಕ ಕಡ್ಡಾಯ.
ಅಗ್ನಿವೀರ್‌ ಟ್ರೇಡ್ಸ್‌ಮ್ಯಾನ್‌ (8ನೇ ತರಗತಿ): 8ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಪ್ರತಿ ವಿಷಯದಲ್ಲಿಯೂ ಶೇ. 33ರಷ್ಟು ಅಂಕ ಕಡ್ಡಾಯ.

ಪರೀಕ್ಷಾ ಶುಲ್ಕ ಮತ್ತು ವಯೋಮಿತಿ
ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 550 ರೂ. ಪಾವತಿಸಬೇಕು. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 17 ವರ್ಷ 6 ತಿಂಗಳು ಮತ್ತು ಗರಿಷ್ಠ ವಯಸ್ಸು 21 ವರ್ಷ.

ಆಯ್ಕೆ ವಿಧಾನ
ಮೂರು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೊದಲ ಹಂತ ಆನ್‌ಲೈನ್‌ ಪರೀಕ್ಷೆ. ಇದರಲ್ಲಿ ಟೈಪಿಂಗ್‌ ಟೆಸ್ಟ್‌ ಕೂಡ ಇರಲಿದೆ. ಎರಡನೇ ಹಂತದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ಇದರಲ್ಲಿ ತೇರಗಡೆಯಾದವರನ್ನು ಮೂರನೇ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ದಾಖಲೆಗಳ ಪರೀಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಮೆರಿಟ್‌ ಲಿಸ್ಟ್‌ ತಯಾರಿಸಿ ಆಯ್ಕೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು https://joinindianarmy.nic.in/ ವೆಬ್‌ಸೈಟ್‌ಗೆ ತೆರಳಿ ಹೆಸರು ನೋಂದಾಯಿಸಿ ಅರ್ಜಿ ಸಲ್ಲಿಸಬಹುದು.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ದಿನೇ ದಿನೇ ಕಡಿಮೆ ಆಗುತ್ತಿದೆ ಅಡಿಕೆ ದರ

ಅಡಿಕೆ ದರ
( 08-02-2024 )
ಬೆಟ್ಟೆ 44000 54719
ಗೊರಬಲು 15009 36500
ರಾಶಿ 30019 48519
ಸರಕು 46699 83096
ಸಿಪ್ಪೆಗೋಟು 10000 19599
ಚಾಲಿ 23199 37610
ಕೋಕಾ 11899 31599
ಕರೆ ಗೋಟು 23199 37099
ಬಿಳೆ ಗೋಟು 20199 29199

Categories
ತೀರ್ಥಹಳ್ಳಿ

ಈಡಿಗ ಸಂಘಕ್ಕೆ ಮತ್ತೆ ರಾಮಚಂದ್ರ ಸಾರಥ್ಯ.!

ಈಡಿಗ ಸಂಘಕ್ಕೆ ಮತ್ತೆ ರಾಮಚಂದ್ರ ಸಾರಥ್ಯ.!
– ಉಪಾಧ್ಯಕ್ಷರಾಗಿ ವಿಕ್ರಮ್ ಕೆ.ಎಸ್, ವಿನಯ್ ಕಣಗಲು ಆಯ್ಕೆ, ಗೌರವಾಧ್ಯಕ್ಷರಾಗಿ ಮಹೇಶ್ ನಾಯ್ಕ್
– ಪ್ರಧಾನ ಕಾರ್ಯದರ್ಶಿಯಾಗಿ ಚಿಪ್ಪಿನಕೊಡಿಗೆ ವೆಂಕಟೇಶ್ ಆಯ್ಕೆ
– ಖಜಾಂಚಿಯಾಗಿ ಹೊದಲ ಶಿವು, ಸಹ ಕಾರ್ಯದರ್ಶಿಯಾಗಿ ಪ್ರದೀಪ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಈಡಿಗ ಸಂಘದ ಅಧ್ಯಕ್ಷರಾಗಿ ಮತ್ತೆ ಮಟ್ಟಿನಮನೆ ರಾಮಚಂದ್ರ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಕ್ರಮ್ ಕಬಸೆ ಹಾಗೂ ವಿನಯ್ ಕಣಗಲು ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಮಹೇಶ್ ನಾಯ್ಕ್ ಅವರು ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಹೊದಲ ಶಿವು, ಸಹ ಕಾರ್ಯದರ್ಶಿಯಾಗಿ ಕೂರಣಕಟ್ಟೆ ಪ್ರದೀಪ್, ಪ್ರಧಾನ ಕಾರ್ಯದರ್ಶಿಯಾಗಿ ಚಿಪ್ಪಿನಕೊಡಿಗೆ ವೆಂಕಟೇಶ್ ಆಯ್ಕೆಯಾಗಿದ್ದಾರೆ. ಗುರುವಾರ ತೀರ್ಥಹಳ್ಳಿಯ ಕೋಳಿಕಾಲು ಗುಡ್ಡದಲ್ಲಿರುವ ಈಡಿಗ ಸಂಘದ ಸಮುದಾಯ ಭವನದಲ್ಲಿ ನಡೆದಂತಹ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಆಡಳಿತ ಮಂಡಳಿಯ 21 ಸದಸ್ಯರು ಹಾಜರಿದ್ದರು. ಇತ್ತೀಚೆಗಷ್ಟೇ ಈಡಿಗ ಸಂಘದ ಚುನಾವಣೆ ನಡೆದಿದ್ದು,21 ಮಂದಿ ಆಯ್ಕೆ ನಡೆದಿತ್ತು.

Categories
ರಾಜ್ಯ

ಸದ್ಯಕ್ಕೆ ಚಾರಣಿಗರಿಗೆ ಕುಮಾರಪರ್ವತ ಬಂದ್‌..!

ಸದ್ಯಕ್ಕೆ ಚಾರಣಿಗರಿಗೆ ಕುಮಾರಪರ್ವತ ಬಂದ್‌..!
– ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ

NAMMUR EXPRESS NEWS
ಪರ್ವತ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಿತಾರಣ್ಯಗಳಾಗಿವೆ. ಇಂತಹ ಕಡೆ ಜನ ಸಂಚರಿಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೆಲವರು ಅಲ್ಲಿಯೇ ಟೆಂಟ್‌ ಹಾಕಿ ಉಳಿಯುತ್ತಿರುವುದು ಅಲ್ಲಿರುವ ಸಾವಿರಾರು ಅಪರೂಪದ ಜೀವ ಸಂಕುಲಕ್ಕೆ ಇದು ಮಾರಕವಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪರಿಸರಕ್ಕೆ ಮಾರಕವಾಗದಂತೆ ನಿರ್ಧಾರ ಕೈಗೊಳ್ಳಲಿದೆ. ಲಾಂಗ್ ವೀಕೆಂಡ್ ಬಂತಂದ್ರೆ ಸಾಕು ಪ್ಯಾಟೆ ಮಂದಿ ಟ್ರಾಕ್ಕಿಂಗ್ ಗೆ ಸಿದ್ದರಾಗಿ ಬಿಡ್ತಾರೆ. ಅದರಲ್ಲೂ ಈಗೀಗ ಸಂರಕ್ಷಿತಾರಣ್ಯಗಳು ಪ್ರವಾಸಿತಾಣಗಳಾಗಿ ಬದಲಾಗಿ ಬಿಡುತ್ತಿದೆ. ಈ ಬೆಳವಣಿಗೆ ಪ್ರಕೃತಿಯ ಮೇಲೆ ಘೋರ ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಚಾರಣ ಪ್ರದೇಶ ಕುಮಾರ ಕುಮಾರ ಪರ್ವತ ಟ್ರೇಕ್ಕಿಗ್ ಎಂಟ್ರಿಗೆ ನಿಷೇಧ ವಿಧಿಸಲಾಗಿದೆ.

ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ. ಒಂದೆಡೆ ಹಸಿರು, ಇನ್ನೊಂದಡೆ ಮುಳಿ ಹುಲ್ಲಿನಿಂದ ಕೂಡಿದ ನುಣುಪಾದ ಶಿಖರ, ಬಂಡೆಗಳ ಕಡಿದಾದ ಪ್ರದೇಶದಲ್ಲಿ ಹೆಜ್ಜೆ ಹಾಕುವ ಚಾರಣಿಗರು. ಇದು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿ ಭಾಗದಲ್ಲಿರುವ ಕುಮಾರ ಪರ್ವತ ಪ್ರದೇಶ. ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯೊಳಗೆ ಬರುವ ಈ ಕುಮಾರ ಪರ್ವತ ಹತ್ತೋದಕ್ಕೆ ಸಾಕಷ್ಟು ಜನ ಚಾರಣಿಗರು ಬರ್ತಾರೆ. ಲಾಂಗ್ ವೀಕೆಂಡ್‌ಗಳಲ್ಲಿ ಸುಮಾರು 400 ರಿಂದ 500 ಮಂದಿ ಭೇಟಿ ನೀಡುತ್ತಿದ್ದ ಈ ಪರ್ವತಕ್ಕೆ ವಾರಗಳ ಹಿಂದೆ ಸುಬ್ರಹ್ಮಣ್ಯದ ಮೂಲಕ ಸಾವಿರಾರು ಮಂದಿ ದಾಂಗುಡಿಯಿಟ್ಟಿದ್ದರು. ಇದರಿಂದ ಟಿಕೆಟ್ ಕೌಂಟರ್‌ನಲ್ಲಿ ನೂಕು ನುಗ್ಗಲು ಉಂಟಾದ ವೀಡಿಯೋ ವೈರಲ್ ಆಗಿತ್ತು. ಇದನ್ನು ನೋಡಿ ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದರು.

ಈ ವಿಚಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಗಮನಕ್ಕೆ ಬಂದು ರಾಜ್ಯದ ಎಲ್ಲಾ ಟ್ರಕ್ಕಿಂಗ್ ಪಾಯಿಂಟ್‌ಗಳಲ್ಲಿಯೂ ಎಸ್‌ಒಪಿ ರೂಪಿಸುವ ಅಗತ್ಯವಿದ್ದು, ಅಲ್ಲಿಯವರೆಗೂ ಅನ್‌ಲೈನ್ ಬುಕ್ಕಿಂಗ್ ಇಲ್ಲದ ತಾಣಗಳಲ್ಲಿ ಟ್ರಕ್ಕಿಂಗ್ ನಿರ್ಬಂಧಿಸುವಂತೆ ಸೂಚಿಸಿದ್ದರು. ಅದರಂತೆ ಇದೀಗ ಕುಮಾರ ಪರ್ವತ ಪ್ರವೇಶ ಸ್ಥಳದಲ್ಲೂ ಅರಣ್ಯ ಇಲಾಖೆ ಪ್ರವಾಸಿಗರ ಎಂಟ್ರಿಗೆ ನಿರ್ಬಂಧ ವಿಧಿಸಿರುವ ಬ್ಯಾನರ್ ಅಳವಡಿಸಿದೆ. ಕುಮಾರ ಪರ್ವತ ಸಮುದ್ರ ಮಟ್ಟದಿಂದ ಸುಮಾರು 5,615 ಅಡಿ ಎತ್ತರದಲ್ಲಿದೆ. ದಕ್ಷಿಣ ಕನ್ನಡ, ಕೊಡಗು, ಹಾಸನ ಈ ಮೂರು ಜಿಲ್ಲೆಯ ಕಡೆಗಳಿಂದಲೂ ಇಲ್ಲಿಗೆ ಚಾರಣ ಕೈಗೊಳ್ಳಬಹುದು. ಆದ್ರೆ ಹೆಚ್ಚಿನ ಮಂದಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಬದಿಯಿಂದ ಚಾರಣ ಆರಂಭಿಸುತ್ತಾರೆ. ಸುಬ್ರಹ್ಮಣ್ಯದಿಂದ ಕುಮಾರಪರ್ವಕ್ಕೆ ಟ್ರೆಕ್ಕಿಂಗ್ ಮಾಡಲು ಇರುವ ನಡಿಗೆಯ ದೂರ 12 ಕಿ.ಮೀ. ಸದ್ಯ ಕುಮಾರ ಪರ್ವತ ಟ್ರೆಕ್ಕಿಂಗ್ ಆರಂಭಿಸುತ್ತಿದ್ದ ಜಾಗಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವ‌ರ್ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ಸಮಿತಿಗೆ ಯಾರು ಯಾರು?

ತೀರ್ಥಹಳ್ಳಿ ತಾಲೂಕು ಸಮಿತಿಗೆ ಯಾರು ಯಾರು?
– ಯುವ ಮೋರ್ಚಾ, ಮಹಿಳಾ ಮೋರ್ಚಾಕ್ಕೆ ನೇಮಕ
– ಹಲಬರು, ಹೊಸಬರು, ಎಲ್ಲಾ ಜಾತಿ ಸಮೀಕರಣ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬಿಜೆಪಿಯಲ್ಲಿ ಎಲ್ಲಾ ಪದಾಧಿಕಾರಿಗಳ ಆಯ್ಕೆ ಆಗಿದ್ದು ಮುಂದಿನ ಲೋಕ ಸಭಾ ಚುನಾವಣೆಗೆ ಸಿದ್ಧತೆ ಶುರುವಾಗಿದೆ.

ತೀರ್ಥಹಳ್ಳಿ ತಾಲೂಕು ಸಮಿತಿಗೆ ಯಾರು ಯಾರು?

ತೀರ್ಥಹಳ್ಳಿ ಅಧ್ಯಕ್ಷರಾಗಿ ನವೀನ್ ಹೆದ್ದೂರು, ಉಪಾಧ್ಯಕ್ಷರಾಗಿ ಕವಿರಾಜ್ ಬೇಗುವಳ್ಳಿ, ಮುರುಳಿ ನಂಬಳ, ಗೀತಾ ಶೆಟ್ಟಿ, ಸುಮಾ ರಾಮಚಂದ್ರ, ಭಾರತೀ ಸುರೇಶ್, ನಂದನ್ ಹಸಿರುಮನೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ರಕ್ಷಿತ್ ಮೇಗರವಳ್ಳಿ, ಮೋಹನ್ ಕುಮಾರ್ ವಿರೂಪಾಕ್ಷ, ಕಾರ್ಯದರ್ಶಿಯಾಗಿ ಟಿ ಮಂಜುನಾಥ್ ಜಯಪುರ, ಶ್ರೀನಿವಾಸ್ ಕಾಸರವಳ್ಳಿ, ಪದ್ಮ ನವೀನ್, ಸುರೇಶ್ ನಾಯ್ಕ್ ಗಾಜನೂರು, ಮಧುರಾಜ್ ಹೆಗ್ಡೆ ತೂದೂರು, ಕವಿತಾ ರಮೇಶ್ ಹಾಗೂ ಖಜಂಚಿಯಾಗಿ ಜೆ ಮಂಜುನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಯುವ ಮೋರ್ಚಾ, ಮಹಿಳಾ ಮೋರ್ಚಾಕ್ಕೆ ಯಾರು ಸಾರಥಿಗಳು!

ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಯಶೋಧ ಮಂಜುನಾಥ್ ದಿಂಡ, ಪ್ರಧಾನ ಕಾರ್ಯದರ್ಶಿಯಾಗಿ ಸಂಧ್ಯಾ ರಮೇಶ್ ಹಾಗೂ ಜ್ಯೋತಿ ಮೋಹನ್, ಎಸ್ ಸಿ ಮೋರ್ಚಾದ ಅಧ್ಯಕ್ಷರಾಗಿ ಗಿರೀಶ್ ಪಡುವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್ ಹಾದಿಗಲ್ಲು ಹಾಗೂ ಷಣ್ಮುಖ ಮಿಲ್ ಕೇರಿ, ರೈತ ಮೋರ್ಚಾದ ಅಧ್ಯಕ್ಷರಾಗಿ ಮೋಹನ್ ಬಿ ಆರ್( ಕೇಶವ), ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಶೆಟ್ಟಿ ಬೆಜ್ಜವಳ್ಳಿ, ಪಾಂಡೇಶ್ ಹಡ್ಸೆ ಆಯ್ಕೆಯಾಗಿದ್ದಾರೆ.

ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿ ರಾಘವೇಂದ್ರ ಆಚಾರ್ಯ ಗುಡ್ಡೆಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಪೂರ್ಣೇಶ್ ಪೂಜಾರಿ, ನಿಂಗರಾಜು ಗಾಜನೂರು ಹಾಗೂ ರಾಘವೇಂದ್ರ ಕುಪ್ಪಳ್ಳಿ ಎಸ್.ಟಿ ಮೋರ್ಚಾದ ಅಧ್ಯಕ್ಷರಾಗಿ ರಮೇಶ್ ಹೊದಲ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಕುರುವಳ್ಳಿ ಹಾಗೂ ಪ್ರಕಾಶ್ ಕಟ್ಟೆಹಕ್ಕಲು ಆಯ್ಕೆಯಾಗಿದ್ದಾರೆ.

ಯುವ ಮೋರ್ಚಾಕ್ಕೆ ಸಂತೋಷ್ ದೇವಾಡಿಗ

ಯುವ ಮೋರ್ಚಾದ ಅಧ್ಯಕ್ಷರಾಗಿ ಸಂತೋಷ್ ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಗಬಡಿ, ಮಹಾಂತಗೌಡ ಹಾಗೂ ಚೇತನ್ ಗಡಿಕಲ್ಲು ಆಯ್ಕೆಯಾಗಿದ್ದಾರೆ.

ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು

ಆರಗ : ಅಧ್ಯಕ್ಷರಾಗಿ ಚಂದ್ರಶೇಖರ್ ಮರಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಕಂಠಿ
ಕುಪ್ಪಳ್ಳಿ : ಅಧ್ಯಕ್ಷರಾಗಿ ವಾಸುದೇವ ಹಾರೋಗೊಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಪ್ಪ ಮೇಲಿನ ಕುರುವಳ್ಳಿ, ಹಾಗೂ ನಟರಾಜ್ ಹುಲ್ಕುಳಿ
ಮಂಡಗದ್ದೆ : ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ತಳಲೆ, ಪ್ರಧಾನ ಕಾರ್ಯದರ್ಶಿಯಾಗಿ ಅಂಜೂರ ಕುಡುಮಲ್ಲಿಗೆ ಹಾಗೂ ರಾಘವೇಂದ್ರ ಕೆರೆಹಳ್ಳಿ.
ಮೇಗರವಳ್ಳಿ : ಅಧ್ಯಕ್ಷರಾಗಿ ಸುಧಾಕರ್ ಹೊಸಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಗುರುಮೂರ್ತಿ ಗೌಡ ಹಾಗೂ ಪ್ರದೀಪ್ ಶಿವಳ್ಳಿ

ತೀರ್ಥಹಳ್ಳಿ ಪಟ್ಟಣ ಅಧ್ಯಕ್ಷರಾಗಿ ರಾಘವೇಂದ್ರ ಸೊಪ್ಪುಗುಡ್ಡೆ

ತೀರ್ಥಹಳ್ಳಿ ಪಟ್ಟಣ ಅಧ್ಯಕ್ಷರಾಗಿ ರಾಘವೇಂದ್ರ ಸೊಪ್ಪುಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಬಾಳೆಬೈಲು ಹಾಗೂ ಪ್ರಮೋದ್ ಪೂಜಾರಿ ಕುರುವಳ್ಳಿ.

ತಂಡದ ಪದಗ್ರಹಣ ಜವಾಬ್ದಾರಿಯನ್ನ ಇದೇ ತಿಂಗಳ 10ನೇ ತಾರೀಕು ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಟಿ, ಏ, ಪಿ, ಎಂ, ಎಸ್, ಸಭಾಂಗಣದಲ್ಲಿ ನಡೆಯಲಿದ್ದು ಈ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ಆರಗ ಜ್ಞಾನೇಂದ್ರ, ಮತ್ತು ಬಿವೈ ರಾಘವೇಂದ್ರ, ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ

Categories
ಉಡುಪಿ ಕರಾವಳಿ ಕಾರ್ಕಳ

ಪರಶುರಾಮ ಥೀಮ್ ಪಾರ್ಕ್ ಕೇಸ್ ಸಿಐಡಿಗೆ !

ಪರಶುರಾಮ ಥೀಮ್ ಪಾರ್ಕ್ ಕೇಸ್ ಸಿಐಡಿಗೆ!
– ಅವ್ಯವಹಾರ ತನಿಖೆಗೆ ಸಿಎಂ ಆದೇಶ
– ಕರಾವಳಿಯಲ್ಲಿ ಭಾರೀ ಸಂಚಲನ
– ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಸಂಕಟ!

NAMMUR EXPRESS NEWS
ಕಾರ್ಕಳ: ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಂ ಪಾರ್ಕ್‌ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು ಥೀಮ್ ಪಾರ್ಕ್ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪಗಳ ಕುರಿತು ಸಿಒಡಿ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರದ ಆಡಳಿತವಿದ್ದಾಗ ಆಗ ಸಚಿವರೂ ಆಗಿದ್ದ ಶಾಸಕ ಸುನಿಲ್ ಕುಮಾ‌ರ್ ಅವರ ಮುತುವರ್ಜಿಯಿಂದಾಗಿ ಉಮಿಕಲ್‌ನ ಬೋಳುಬೆಟ್ಟದಲ್ಲಿ ಪರಶುರಾಮ ಥೀಂ ಪಾರ್ಕ್ ನಿರ್ಮಿಸಿ ಉದ್ಘಾಟಿಸಿಲಾಗಿತ್ತು.

ಆದರೆ ರಾಜ್ಯದಲ್ಲಿ ಸರಕಾರ ಬದಲಾಗಿ ಕಾಂಗ್ರೆಸ್‌ ಆಡಳಿತಕ್ಕೆ ಬಂದ ಬಳಿಕ ಪರಶುರಾಮ ಥೀಂ ಪಾರ್ಕ್ ನಿರ್ಮಾಣದಲ್ಲಿ ಭ್ರಷ್ಟಾಚಾರವಾಗಿದೆ ಮತ್ತು ಕಳಪೆ ಕಾಮಗಾರಿ ಮಾಡಲಾಗಿದೆಎಂದು ಕೆಲವರು ಆರೋಪಿಸಿ ಪ್ರತಿಭಟನೆಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ತನಿಖೆಗೆ ಆದೇಶಿಸಲಾಗಿತ್ತು. ಆ ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ಆದರೆ ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಸರಕಾರ ಸಿಒಡಿ ತನಿಖೆಗೆ ಆದೇಶಿಸಿದೆ.

ಆದೇಶದಲ್ಲೇನಿದೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಫೆ. 2ರಂದು ಬರೆದ ಪತ್ರದಲ್ಲಿ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ನಡೆದ ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಕುರಿತು ದೃಶ್ಯ ಮಾಧ್ಯಮ ಮತ್ತು ದಿನ ಪತ್ರಿಕೆಗಳು ವರದಿ ಮಾಡಿರುವುದು ತಿಳಿದುಬಂದಿದೆ. ಈ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಸಿಒಡಿ ಅಥವಾ ಉನ್ನತ ಮಟ್ಟದ ತನಿಖೆ ನಡೆದಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಒಡಿ ತನಿಖೆಗೆ ಆದೇಶಿಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.