Categories
ತೀರ್ಥಹಳ್ಳಿ

ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ತೀರ್ಥಹಳ್ಳಿ ಖೋ ಖೋ ಪಂದ್ಯ

ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ತೀರ್ಥಹಳ್ಳಿ ಖೋ ಖೋ ಪಂದ್ಯ
– ತೀರ್ಥಹಳ್ಳಿ ಇತಿಹಾಸದಲ್ಲೆ ಅವಿಸ್ಮರಣೆಯ ಟೂರ್ನಿ
– ಕ್ರೀಡಾಕೂಟವನ್ನು ವೀಕ್ಷಿಸಿದ 50,000 ಕ್ರೀಡಾಭಿಮಾನಿಗಳು
– ಗೆದ್ದವರು ಯಾರು ಯಾರು? ಏನಿದು ವಿಶೇಷ…?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಮಾರಿ ಜಾತ್ರೆ ಅಂಗವಾಗಿ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಲು ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ. ಇಡೀ ರಾಜ್ಯದಲ್ಲಿ ಈ ಪಂದ್ಯ ಗಮನ ಸೆಳೆದಿದೆ. ಮಾ.14 ರಿಂದ 17 ರವರೆಗೆ ತೀರ್ಥಹಳ್ಳಿಯ ಆಗುಂಬೆ ಪೆಟ್ರೋಲ್ ಬಂಕ್ ಬಳಿ ಇರುವ ಎಪಿಎಂಸಿ ಪಕ್ಕದ ಮೈದಾನದಲ್ಲಿ ಏರ್ಪಡಿಸಿದ್ದ ಈ ಪಂದ್ಯಾವಳಿಯು ತಾಲೂಕಿನ ಕ್ರೀಡಾ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಅವಿಸ್ಮರಣೀಯ ಟೂರ್ನಿಯಾಗಿ ಹೊರಹೊಮ್ಮಿದ್ದು, ಇಡೀ ರಾಜ್ಯದಲ್ಲೇ ಗಮನ ಸೆಳೆದಿದೆ.

ದೇಶದ ವಿವಿಧ ಭಾಗದಿಂದ ತಂಡ

ದೇಶದ ವಿವಿಧ ಭಾಗಗಳಿಂದ 14 ತಂಡಗಳು ಭಾಗವಹಿಸಿದ್ದು, 350 ಕ್ರೀಡಾಪಟುಗಳು ಆಗಮಿಸಿದ್ದರು ಕೇರಳ, ತಮಿಳುನಾಡು, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸಿದ್ದು, ಸುಮಾರು 50,000 ಕ್ರೀಡಾಭಿಮಾನಿಗಳು ಕ್ರೀಡಾಕೂಟವನ್ನು ವೀಕ್ಷಿಸಿದ್ದಾರೆ. ತೀರ್ಥಹಳ್ಳಿಯ ಹಿರಿಮೆ ಕ್ರೀಡಾ ಕ್ಷೇತ್ರದಲ್ಲಿ ಕೂಡ ಈ ಟೂರ್ನಿ ಆಯೋಜನೆ ಮೂಲಕ ಮೆರಗು ನೀಡಿದ್ದು, ಮೂರು ದಿನಗಳ ಕಾಲ ಅತ್ಯುತ್ತಮವಾದ ಪ್ರದರ್ಶನವನ್ನು ನೀಡಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಗೆದ್ದವರು ಯಾರು ಯಾರು..?

ಫೈನಲ್ ನಲ್ಲಿ ಪುರುಷರ ವಿಭಾಗದಲ್ಲಿ ಪುಣೆ ತಂಡ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡರೆ, ಕರ್ನಾಟಕದ ಖೇಲೊ ಇಂಡಿಯಾ ದ್ವಿತೀಯ ಸ್ಥಾನ, ಕೇರಳ ತಂಡ ತೃತೀಯ ಸ್ಥಾನ, ವಿಹಂಗ್ ಮುಂಬೈ ಚತುರ್ಥ ಸ್ಥಾನ ಪಡೆದಿದೆ. ಇನ್ನು ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನ, ಉಸ್ಮನಾಬಾದ್ ದ್ವಿತೀಯ ಸ್ಥಾನ, ಕೊಲ್ಲಾಪುರ್ ತಂಡ ತೃತೀಯ ಸ್ಥಾನ, ದೆಹಲಿ ತಂಡ ಚತುರ್ಥ ಸ್ಥಾನ ಪಡೆದಿದೆ. ನಾಲ್ಕು ದಿನಗಳ ಕಾಲ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ರೂಪಿಸಿ ಅಷ್ಟೇ ವ್ಯವಸ್ಥಿತವಾಗಿ ನಿರ್ವಹಿಸಿದ ಕ್ರೀಡಾಕೂಟದ ಆಯೋಜಕರಾದ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಇಬ್ಬರು ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತಾನೂ ಆಹುತಿಯಾದ ತಾಯಿ
– ಹೆಂಡತಿ ಮೇಲೆ ಆಸಿಡ್‌ ದಾಳಿ ನಡೆಸಿದ ಗಂಡ
– ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು
– ವಿಜಯಪುರದ ಗ್ರಾಮದಲ್ಲಿ ಕುಡಿಯುವ ನೀರಿಲ್ಲವೆಂದು ಮೊಬೈಲ್‌ ಟವರ್‌ ಏರಿದ ಯುವಕ!

NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲ ಸಮುದ್ರ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊನೆಗೆ ತಾನೂ ಅಗ್ನಿ ಪ್ರವೇಶ ಮಾಡಿದ್ದಾಳೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದುರಂತ ನಡೆದಿದೆ ಎಂದು ಹೇಳಲಾಗಿದೆ. ಮಾರಕ್ಕ ಎಂಬ 24 ವರ್ಷದ ಮಹಿಳೆಯೇ ತನ್ನ ಇಬ್ಬರು ಪುಟ್ಟ ಕಂದಮ್ಮಗಳಾದ ನಯನ (4) ಮತ್ತು ಹರ್ಷ ವರ್ಧನ್ (2)ಗೆ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಿ ತಾನೂ ಸಾವನ್ನಪ್ಪಿದವರು. ಮಕ್ಕಳನ್ನು ಮನೆಯಿಂದ ಹೊರಡಿಸಿ ಗ್ರಾಮದ ಹೊರವಲಯಕ್ಕೆ ಹೋಗಿ ಅಲ್ಲಿ ಈ ಅತಿರೇಕದ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದಿಂದ ತೀವ್ರವಾಗಿ ನೊಂದಿದ್ದ ಆಕೆ ಬದುಕು ಬೇಡವೆಂದು ತೀರ್ಮಾನಿಸಿದ್ದಾರೆ.

ನಾನು ಇಲ್ಲದಿದ್ದರೆ ಈ ಪುಟ್ಟ ಮಕ್ಕಳು ಹೇಗೆ ಬದುಕಿಯಾವು ಎಂಬ ಯೋಚನೆ ಬರುತ್ತಿದ್ದಂತೆಯೇ ಮೊದಲು ಅವರನ್ನು ಬೆಂಕಿಗೆ ಹಾಕಿ ಕೊನೆಗೆ ತಾನೂ ಆಹುತಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಮಕ್ಕಳು ಮತ್ತು ತಾಯಿ ಸುಟ್ಟು ಹೋದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಮಾರಕ್ಕ ಎದುರಿಸುತ್ತಿದ್ದ ಮಾನಸಿಕ ಹಿಂಸೆ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

– ಹೆಂಡತಿ ಮೇಲೆ ಆಸಿಡ್‌ ದಾಳಿ ನಡೆಸಿದ ಗಂಡ

ಆನೇಕಲ್: ಹೆಣ್ಮಕ್ಕಳ ಮೇಲೆ ದುಷ್ಟರು, ಕಾಮುಕರು ಆಸಿಡ್‌ ದಾಳಿ ನಡೆಸುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ದುಷ್ಟ ಪತಿಯೇ ತನ್ನ ಹೆಂಡತಿಯ ಮೇಲೆ ಆಸಿಡ್‌ ದಾಳಿ ನಡೆಸಿದ್ದಾನೆ. ಘಟನೆ ನಡೆದಿರುವುದು ಬೆಂಗಳೂರು ಹೊರವಲಯದ ಆನೆಕಲ್‌ ತಾಲೂಕಿನ ಗೌರೇನ ಹಳ್ಳಿಯಲ್ಲಿ. ಚಾಂದ್‌ ಪಾಷಾ (45) ಎಂಬಾತ ತನ್ನ ಪತ್ನಿಯಾದ ನಾಜಿಯಾ ಬೇಗಂ (40) ಮೇಲೆ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಾಜಿಯಾ ಬೇಗಂ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಂದ್‌ ಪಾಷಾ ಮತ್ತು ನಾಜಿಯಾ ಬೇಗಂ ಹಲವು ವರ್ಷದ ಹಿಂದೆ ಮದುವೆಯಾದವರು. ಆದರೆ, ಹಿಂದಿನಿಂದಲೇ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಗಂಡನ ಕಿರಿಕಿರಿಯಿಂದ ನಾಜಿಯಾ ಹತಾಶರಾಗಿದ್ದರು. ಆತ ಆಗಾಗ ಹೊಡೆಯುವುದು, ಮನೆಯಿಂದ ಹೊರಹಾಕುವ ಹಿಂಸೆ ನೀಡುತ್ತಿದ್ದ. ಆದರೆ ನಾಜಿಯಾ ಅದನ್ನೆಲ್ಲ ಸಹಿಸಿಕೊಂಡಿದ್ದರು. ಕೌಟುಂಬಿಕ ಕಲಹ ಇತ್ತೀಚೆಗೆ ತೀವ್ರವಾಗಿತ್ತು.

ಈ ಹಂತದಲ್ಲಿ ಗಂಡ ತನ್ನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ. ಮಾರ್ಚ್‌ 17ನೇ ತಾರೀಖಿನ ರಾತ್ರಿ ಪತ್ನಿ ಮಲಗಿದ್ದನ್ನು ಗಮನಿಸಿದ ಗಂಡ ಆಕೆಯ ಮೇಲೆ ಮಲಗಿದಲ್ಲಿಗೇ ಆಸಿಡ್‌ ದಾಳಿ ನಡೆಸಿದ್ದಾನೆ. ಮನೆಯಲ್ಲಿ ಟಾಯ್ಲೆಟ್‌ ಕ್ಲೀನ್‌ ಮಾಡಲು ಬಳಸುವ ಆಸಿಡನ್ನೇ ಆತ ಆಕೆಯ ಮೇಲೆ ಎರಚಿದ್ದ. ಮಲಗಿದ್ದಾಗ ಒಮ್ಮಿಂದೊಮ್ಮೆಗೇ ಮುಖದ ಮೇಲೆ ಏನೋ ಬಿದ್ದು ಉರಿ ಏಳುತ್ತಿದ್ದಂತೆಯೇ ನಾಜಿಯಾ ಎದ್ದು ಜೋರಾಗಿ ಬೊಬ್ಬೆ ಹೊಡೆದರು. ಹೆಂಡತಿ ಕಿರುಚಾಡುತ್ತಿದ್ದಂತೆಯೇ ಚಾಂದ್‌ ಪಾಷಾ ಬೈಕ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಸೇರಿ ನಾಜಿಯಾ ಅವರನ್ನು ಆನೇಕಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಾಯ್ಲೆಟ್‌ಗೆ ಬಳಸುವ ಆಸಿಡ್‌ ಆಗಿದ್ದರಿಂದ ಸ್ವಲ್ಪ ದುರ್ಬಲವಾಗಿದೆ. ಹೀಗಾಗಿ ಆಕೆಯ ಪ್ರಾಣ ಉಳಿದಿದೆ ಎನ್ನಲಾಗಿದೆ.

– ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು

ತುಮಕೂರು : ಶಾಲೆಯ ಸಮೀಪದ ದೇವಸ್ಥಾನವೊಂದರಲ್ಲಿ ದೀಪ ಹಚ್ಚಲು ಹೋದ ಸಂದರ್ಧದಲ್ಲಿ ಬಟ್ಟೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾ ಮೃತಪಟ್ಟ ದುರ್ದೈವಿ ಬಾಲಕಿ . ಶಾಲೆಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ಆಕೆ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ಹಿರಿಯರು ಮಾಡುವ ಸಂಪ್ರದಾಯಗಳನ್ನು ಗಮನಿಸಿದ್ದ ಆಕೆ ಭಕ್ತಿಯಿಂದ ಆಕೆ ಈ ಕೆಲಸವನ್ನು ಮಾಡಿದ್ದಳು. ತನ್ನ ಜತೆಗೆ ತರಗತಿಯ ಇತರ ಕೆಲವು ಮಕ್ಕಳನ್ನು ಕೂಡಾ ಆಕೆ ಕರೆದುಕೊಂಡು ಹೋಗಿದ್ದಳು. ಆ ಬಾಲಕಿಗೆ ದೀಪ ಹಚ್ಚಿದರೆ ಒಳ್ಳೆಯದಾಗುತ್ತದೆ ಎನ್ನುವುದು ಗೊತ್ತಿತ್ತೇ ವಿನಃ ಬೆಂಕಿಯಿಂದ ಆಗಬಹುದಾದ ಅನಾಹುತಗಳ ಅರಿವು ಇರಲಿಲ್ಲ. ಆದರೆ, ದುರದೃಷ್ಟವಶಾತ್‌ ಅಲ್ಲಿ ದುರಂತ ಸಂಭವಿಸಿಯೇ ಬಿಟ್ಟಿತು.

ಗೆಳತಿಯರೊಂದಿಗೆ ಖುಷಿ ಖುಷಿಯಾಗಿ ಹೋಗಿ ದೇವರಿಗೆ ದೀಪ ಹಚ್ಚಿದ ಆಕೆ ಈ ಸಂಭ್ರಮದಲ್ಲಿ ಮೈಮರೆತಿದ್ದಳೋ ಗೊತ್ತಿಲ್ಲ. ಅಂತೂ ಆಕೆಯ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಬಟ್ಟೆಗೆ ತಗುಲಿ ಮೈಗೆ ಸುಟ್ಟ ಗಾಯಗಳಾಗಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಆಕೆ ಚಿಕಿತ್ಸೆ ಫಲಿಸದೆ ಮಾರ್ಚ್‌ 19ರಂದು ಮೃತಪಟ್ಟಿದ್ದಾಳೆ.

– ವಿಜಯಪುರದ ಗ್ರಾಮದಲ್ಲಿ ಕುಡಿಯುವ ನೀರಿಲ್ಲವೆಂದು ಮೊಬೈಲ್‌ ಟವರ್‌ ಏರಿದ ಯುವಕ!

ವಿಜಯಪುರ: ರಾಜ್ಯದಲ್ಲಿ ಭೀಕರ ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಗರ ಸೇರಿ ಹಲವಾರು ಹಳ್ಳಿಗಳಲ್ಲೂ ಈಗ ನೀರಿಗೆ ಹಾಹಾಕಾರ ಎದುರಾಗಿದೆ. ನೀರು ಪೂರೈಕೆ ಮಾಡಲು ಕಷ್ಟಪಡುತ್ತಿರುವ ಸ್ಥಳೀಯ ಆಡಳಿತಗಳು ಹೈರಾಣಾಗಿವೆ. ಈ ವೇಳೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಯುವಕನೊಬ್ಬ ಮೊಬೈಲ್‌ ಟವರ್‌ ಏರಿ ಹುಚ್ಚಾಟ ನಡೆಸಿದ್ದಾನೆ. ಅರೆಬೆತ್ತಲೆಯಾಗಿ ಕೂಗಾಡಿದ್ದಾನೆ. ನನ್ನ ಗ್ರಾಮಕ್ಕೆ ಕುಡಿಯುವ ನೀರಿಲ್ಲ. ಪಿಡಿಒ, ತಾಲೂಕು ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪ ಮಾಡಿದ್ದಾನೆ.

ಇಂಡಿ ಬಸವೇಶ್ವರ ಸರ್ಕಲ್‌ನಲ್ಲಿರುವ ಜಿಯೋ ಟವರ್ ಅನ್ನು ಯುವಕ ಏರಿದ್ದಾನೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಯುವಕ ಸತೀಶ್ ಚಂದ್ರಶೇಖರ ಕಡಣಿ ಎಂಬಾತನೇ ಟವರ್‌ ಏರಿರುವುದು ಎಂದು ತಿಳಿದುಬಂದಿದೆ. 250 ಅಡಿ ಎತ್ತರದ ಟವರ್‌ನ ತುದಿಗೆ ಯುವಕ ಏರಿದ್ದಾನೆ. ಸತೀಶ್ ಚಂದ್ರಶೇಖರ ಕಡಣಿ ಬಿಎಸ್ಎನ್ಎಲ್ ಟವರ್ ಹತ್ತಿದ್ದು, ನೀರಿಗಾಗಿ ಆಗ್ರಹಿಸುತ್ತಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ‌ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಯುವಕನನ್ನು ಕೆಳಗೆ ಇಳಿಸಲು ಹರಸಾಹಸಪಡುತ್ತಿದ್ದಾರೆ. ಕೆಳಗಿಳಿಸುವಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಯಶಸ್ವಿಯಾದರು.

Categories
ರಾಜಕೀಯ ರಾಜ್ಯ ಹುಬ್ಬಳ್ಳಿ

ಮೋದಿ ಗ್ಯಾರಂಟಿ ವದಂತಿ

ಮೋದಿ ಗ್ಯಾರಂಟಿ ವದಂತಿ
– ಅಂಚೆ ಕಚೇರಿಗೆ ಮುಗಿಬಿದ್ದ ಮಹಿಳೆಯರು
– ಉಳಿತಾಯ ಖಾತೆ ತೆರೆದರೆ ₹3000 ಜಮೆ

NAMMUR EXPRESS NEWS
ಹುಬ್ಬಳ್ಳಿ: ಕಡಿಮೆ ಬೆಲೆಗೆ ಸಿಲಿಂಡರ್ ಪಡೆಯಲು ಕೆವೈಸಿ ಅಪ್‌ಡೇಟ್ ವದಂತಿ ಆಯ್ತು, ಈಗ ಅಂಚೆ ಇಲಾಖೆಯ ಸರದಿ. ಅಂಚೆ ಇಲಾಖೆ ಯಲ್ಲಿ ಉಳಿತಾಯ ಖಾತೆ ತೆರೆದರೆ ಕೇಂದ್ರ ಸರ್ಕಾರದಿಂದ 3 ಸಾವಿರ ಜಮಾ ಮಾಡಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ನಗರದ ಅಂಚೆ ಇಲಾಖೆ ಕಚೇರಿಗಳು ಕಳೆದ 3-4 ದಿನ ಗಳಿಂದ ಜನರಿಂದ ತುಂಬಿ ತುಳುಕುತ್ತಿವೆ.

ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆ ಅಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರ ಖಾತೆಗೆ ₹ 3 ಸಾವಿರ ಜಮಾ ಮಾಡಲಾಗುತ್ತದೆ ಎಂದು ನಗರದಾದ್ಯಂತ ವದಂತಿ ಹರಡಿದೆ. ಇದರಿಂ ದಾಗಿ ನಗರದ ಅಂಚೆ ಕಚೇರಿಗಳಿಗೆ ಮಹಿಳೆ ಯರು ಖಾತೆ ತೆರೆಯಲು ಮುಗಿಬೀಳುತ್ತಿ ದ್ದಾರೆ. ಬೆಳಗ್ಗೆ 7 ಗಂಟೆಗೆ ಅಂಚೆ ಕಚೇರಿಗಳ ಎದುರು ನೂರಾರು ಮಹಿಳೆಯರು ಖಾತೆ ತೆರೆಯಲು ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದೆ. ಇಲ್ಲಿನ ಉಪ ಅಂಚೆ ಕಚೇರಿಗಳ ಎದುರು ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿರುವುದು ಕಂಡು ಬಂತು. ಕಳೆದ ಡಿಸೆಂಬರ್ ತಿಂಗಳಲ್ಲಿ ಇ-ಕೆವೈಸಿ ಮಾಡಿಸದೇ ಇದ್ದರೆ ಗ್ಯಾಸ್ ಕಡಿತಗೊಳ್ಳುತ್ತದೆಂಬ ವದಂತಿ ಹಬ್ಬಿತ್ತು.

Categories
ಅಡಿಕೆ-ದರ ತೀರ್ಥಹಳ್ಳಿ ಶಿವಮೊಗ್ಗ

ಅಡಿಕೆ ದರ 19-03-2024

ಅಡಿಕೆ ದರ
19-03-2024
ಸರಕು 48200 81660
ಬೆಟ್ಟೆ 44110 54789
ರಾಶಿ 24406 48759
ಗೊರಬಲು 18000 37869
Nammur Express
Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಮೋದಿ ಗರ್ಜನೆ…!

ರಾಜ್ಯದಲ್ಲಿ ಮೋದಿ ಗರ್ಜನೆ…!
– ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿ
– ಕನ್ನಡದಲ್ಲೇ ಭಾಷಣ ಮಾಡಿದ ಮೋದಿ
– ಈಶ್ವರಪ್ಪ ಗೈರು, ಕುಮಾ‌ರ್ ಬಂಗಾರಪ್ಪ ಹಾಜರು

NAMMUR EXPRESS NEWS
ಶಿವಮೊಗ್ಗ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ಮತ್ತೆ ರಣಕಹಳೆ ಮೊಳಗಿಸುವ ಮೂಲಕ ಚುನಾವಣಾ ಕಾವು ರಂಗೇರುವಂತೆ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕಲ್ಯಾಣ ಕರ್ನಾಟಕದ ಮುಖ್ಯ ಕೇಂದ್ರ ಕಲಬರುಗಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಮೋದಿಯವರು ಸೋಮವಾರ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದರು.

ಶಿವಮೊಗ್ಗದ ಅಲ್ಲಮ್ಮಪ್ರಭು ಕ್ರೀಡಾಂಗಣದಲ್ಲಿ ಜಿಲ್ಲಾ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ ಮೋದಿ, ರಾಜ್ಯದಲ್ಲಿ ಈ ಬಾರಿ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲ ನೀಡಬೇಕೆಂದು ಕೋರಿದರು.
ಎಂದಿನಂತೆ ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿದ ಮೋದಿಯವರು ತಮ್ಮ ಅರ್ಧಗಂಟೆಗಳ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಗಳನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದಲ್ಲಿ ಇಲ್ಲಿನ ಜನತೆ ನನಗೆ ಒಂದು ಗ್ಯಾರಂಟಿಯನ್ನು ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಿಸಿ ಕಾಂಗ್ರೆಸ್‌ಗೆ ಒಂದೇ ಒಂದು ಕ್ಷೇತ್ರವನ್ನು ಸಹ ಬಿಟ್ಟು ಕೊಡುವುದಿಲ್ಲ ಎಂದು ವಾಗ್ದಾನ ಮಾಡಬೇಕು. ಕರುನಾಡಿನಲ್ಲಿ ಎಲ್ಲಾ ಕಡೆ ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲಬೇಕೆಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಕರ್ನಾಟಕವನ್ನು ಗ್ಯಾರಂಟಿ ನೆಪದಲ್ಲಿ ಲೂಟಿ ಹೊಡೆಯುತ್ತಿದೆ. ಇಲ್ಲಿನ ಹಣವು ದೆಹಲಿ ಪಾಲಾಗುತ್ತದೆ. ಅಲ್ಲಿನ ನಾಯಕರು ಕರುನಾಡನ್ನು ಎಟಿಎಂ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಎನ್‌ಡಿಎ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ ಎಂದು ಹೇಳಿದರು. ಹತ್ತು ವರ್ಷಗಳಲ್ಲಿ ನಾವು ಒಂದೇ ಒಂದು ಹಗರಣವಿಲ್ಲದೆ ಸರ್ಕಾರವನ್ನು ಮುನ್ನಡೆಸಿದ್ದೇವೆ. ಕೇಂದ್ರದಲ್ಲಿ ಮೂರನೇ ಬಾರಿಗೆ ನಾವು ಅಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ಗ್ಯಾರಂಟಿಗಳನ್ನು ನಂಬಿ ಕಾಂಗ್ರೆಸ್‌ಗೆ ಮರಳಾಗಬೇಡಿ. ವಿಶ್ವದಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ವಿನಮ್ರವಾಗಿ ಕೋರಿದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತೆರೆದ ವಾಹನದಲ್ಲಿ ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ನಿಂತು ಜನರಿಗೆ ಕೈಮುಗಿದರು. ಈ ವೇಳೆ ‘ಮೋದಿ’, ‘ಮೋದಿ’ ಘೋಷಣೆ ಜೋರಾಗಿ ಕೇಳಿ ಬಂತು. ಕೇಸರಿ ಶಾಲು, ಟೋಪಿ ಬೀಸಿ ಜನರು ಪ್ರಧಾನಿಯತ್ತ ಅಭಿಮಾನ ತೋರಿದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘಟಕರು ಅವರಿಗೆ ವಿಐಪಿ ಪಾಸ್ ನೀಡಿದ್ದರು. ನವ ಮತದಾರರು ಪ್ರಧಾನಿಯನ್ನು ಹತ್ತಿರದಿಂದ ನೋಡಿದರು. ಚಿತ್ರದುರ್ಗ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವೇದಿಕೆಯಲ್ಲಿದ್ದರು.

ಈಶ್ವರಪ್ಪ ಗೈರು, ಕುಮಾ‌ರ್ ಹಾಜರು: ಹಾವೇರಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಮನವೊಲಿಸಲು ಈ ಸಮಾವೇಶ ವೇದಿಕೆ ಆಗಲಿದೆ ಎಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು. ಪ್ರಧಾನಿ ಕಾರ್ಯಕ್ರಮದಿಂದ ಕೆ.ಎಸ್.ಈಶ್ವರಪ್ಪ ದೂರ ಉಳಿದರು.

Categories
ಕೊಪ್ಪ ಚಿಕ್ಕಮಗಳೂರು ರಾಜಕೀಯ

ಚಿಕ್ಕಮಗಳೂರು ಲೋಕ ಸಭೆ: ಆರಗ ನೇತೃತ್ವದಲ್ಲಿ ಸಭೆ

ಚಿಕ್ಕಮಗಳೂರು ಲೋಕ ಸಭೆ: ಆರಗ ನೇತೃತ್ವದಲ್ಲಿ ಸಭೆ
– ಶೃಂಗೇರಿಯಲ್ಲಿ ನಡೆದ ಸಭೆಯಲ್ಲಿ ಜನವೋ ಜನ
– ಕೋಟಾ ಶ್ರೀನಿವಾಸ್ ಪೂಜಾರಿ, ಜೀವರಾಜ್ ಹಾಜರ್

NAMMUR EXPRESS NEWS
ಶೃಂಗೇರಿ: ಲೋಕ ಸಭಾ ಚುನಾವಣೆ ಕಣ ರಂಗೇರುತ್ತಿದೆ. ಶೃಂಗೇರಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಲೋಕಸಭಾ ಚುನಾವಣೆ ಪ್ರಭಾರಿಗಳಾಗಿರುವ ಆರಗ ಜ್ಞಾನೇಂದ್ರ ಭಾಗವಹಿಸಿ ಮಾತನಾಡಿದರು. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಡಿ.ಎನ್ ಜೀವರಾಜ್, ದೇವರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ಮೋದಿ ಭೇಟಿ: ಸ್ವಾಗತಿಸಿದ ಕುಕ್ಕೆ ಪ್ರಶಾಂತ್

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಜೀ ಅವರು ಶಿವಮೊಗ್ಗ ಭೇಟಿ ನೀಡಿದ ವೇಳೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಕುಕ್ಕೆ ಪ್ರಶಾಂತ್ ಅವರು ಸ್ವಾಗತ ಕೋರಿ ಬರಮಾಡಿಕೊಂಡರು. ಈ ಅವಕಾಶ ಮಾಡಿ ಕೊಟ್ಟ ಸಂಘಟನೆಯ ಎಲ್ಲ ಪ್ರಮುಖರಿಗೆ ಧನ್ಯವಾದಗಳನ್ನು ಕುಕ್ಕೆ ಪ್ರಶಾಂತ್ ಅರ್ಪಿಸಿದ್ದಾರೆ.

Categories
ರಾಜಕೀಯ ರಾಜ್ಯ ಶಿವಮೊಗ್ಗ

ಗೀತಾ ಪರ ಶಿವಣ್ಣ ಎಂಟ್ರಿ!

ಗೀತಾ ಪರ ಶಿವಣ್ಣ ಎಂಟ್ರಿ!
– ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್
– ಲಗಾನ್ ಕಲ್ಯಾಣ ಮಂದಿರದಲ್ಲಿ ಮಾ.20ಕ್ಕೆ ಸಭೆ
– ಶಿವಣ್ಣ ಕೂಡ ಹಾಜರ್: ಹೊಸ ಹುಮ್ಮಸ್ಸು

NAMMUR EXPRESS NEWS
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರು ಲಗಾನ್ ಕಲ್ಯಾಣ ಮಂದಿರದಲ್ಲಿ ದಿನಾಂಕ: 20-03-2024 ರ ಬುಧವಾರ ಮಧ್ಯಾಹ್ನ 12.00ಗಂಟೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಇವರೊಂದಿಗೆ ಖ್ಯಾತ ಚಲನಚಿತ್ರ ನಟ ಡಾ. ಶಿವರಾಜ್ ಕುಮಾರ್ ರವರು ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾ‌ರ್ ರವರನ್ನು ಬೆಂಬಲಿಸಿ ಭದ್ರಾವತಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಬಿ.ಕೆ. ಸಂಗಮೇಶ್ ರವರ ನೇತೃತ್ವದಲ್ಲಿ ಆಯೋಜಿಸಿರುವ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದು ನಂತರ 11.30ಕ್ಕೆ MRS ಸರ್ಕಲ್ ನಿಂದ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿರುವ ಬೃಹತ್ ಬೈಕ್ ರ್ಯಾಲಿಯ ಮುಖಾಂತರ ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆಯಲಿರುವ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕಾಂಗ್ರೆಸ್ ಮನವಿ ಮಾಡಿದೆ.

Categories
ಕರಾವಳಿ

ತಲೆ ತುಂಡಾದ ಮೃತದೇಹ ಬಿದ್ದಿದೆ ಸುಳ್ಳು ಸುದ್ದಿಗೆ ಹೈರಾಣಾದ ಪೊಲೀಸರು!

ತಲೆ ತುಂಡಾದ ಮೃತದೇಹ ಬಿದ್ದಿದೆ ಸುಳ್ಳು ಸುದ್ದಿಗೆ ಹೈರಾಣಾದ ಪೊಲೀಸರು!
– ಬೈಂದೂರು ಪೊಲೀಸರನ್ನು ದಿನವಿಡೀ ಅಲೆದಾಡಿಸಿದ ಭೂಪ
– ಪೊಲೀಸರ ಅತಿಥಿಯಾದ ವ್ಯಕ್ತಿ: ಏನಿದು ಘಟನೆ..?

NAMMUR EXPRESS NEWS
ಬೈಂದೂರು: “ಶಿರವಿಲ್ಲದ ಮೃತದೇಹ ಬಿದ್ದಿದೆ” ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಜನರಲ್ಲಿ ಭೀತಿ ಮೂಡಿಸಿದ ಹಾಗೂ ಪೊಲೀಸರನ್ನು ಅದಕ್ಕಾಗಿ ದಿನವಿಡೀ ಅಲೆದಾಡಿಸಿದ ಭೂಪ ಬೈಂದೂರು ಪೊಲೀಸರ ಅತಿಥಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲಾಯ ಪಕೀರಪ್ಪ ಯಲ್ಲಪ್ಪ(30) ಎಂಬಾತ ಮಾ.14ರಂದು ಠಾಣೆಗೆ ತೆರಳಿ ಯಡ್ತರೆ ಗ್ರಾಮದ ಮದ್ದೋಡಿ ಗೇರು ಹಾಡಿ ಯಲ್ಲಿ ತಲೆ ಇಲ್ಲದ ಮನುಷ್ಯನ ದೇಹ ಬಿದ್ದಿದೆ ಎಂದು ಮಾಹಿತಿ ನೀಡಿದ್ದ. ತಕ್ಷಣ ಪೊಲೀಸರು ಆತನ ಜತೆಯಲ್ಲಿ ಹೋಗಿ ಸಾರ್ವಜನಿಕರ ಸಹಕಾರದೊಂದಿಗೆ ಗೇರು  ಹಾಡಿಯಲ್ಲಿ ಹಾಗೂ ಸುತ್ತಮುತ್ತ ದಿನವಿಡೀ ಹುಡುಕಿದರೂ ಎಲ್ಲಿಯೂ ಮೃತದೇಹ ಪತ್ತೆಯಾಗಿರಲಿಲ್ಲ.

ಆತನು ಬೇರೆ ಬೇರೆ ಕಡೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಇದೆ, ಇಲ್ಲಿ ಇದೆ ಎಂದು ಹೇಳಿದ್ದು ಎಲ್ಲಿ ಹುಡುಕಿದರೂ ಮೃತ ದೇಹ ಕಾಣಿಸಲಿಲ್ಲ. ಮರು ದಿನವೂ ಹುಡುಕಿದ ಪೊಲೀಸರು ಸುಸ್ತಾಗಿದ್ದರು. ಕೊನೆಗೆ ತಲೆ ಇಲ್ಲದ ಮನುಷ್ಯನ ಮೃತದೇಹ ಇಲ್ಲದಿದ್ದರೂ ಮೃತದೇಹ ಇರುವುದಾಗಿ ಸುಳ್ಳು ಮಾಹಿತಿ ನೀಡಿ ಹುಡುಕುವಂತೆ ಮಾಡಿರುವ ಹಾಗೂ ಆ ಮೂಲಕ ಪರಿಸರದ ಸಾರ್ವಜನಿಕರು ಗಲಿಬಿಲಿ ಆಗುವಂತೆ ಮಾಡಿದ ಪಕೀರಪ್ಪ ಯಲ್ಲಪ್ಪ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Categories
ತೀರ್ಥಹಳ್ಳಿ

ಕಾಶಿ ಯಾತ್ರೆ ವೇಳೆ ತೀರ್ಥಹಳ್ಳಿ ರೈತನಿಗೆ ಹೃದಯಾಘಾತ!

ಕಾಶಿ ಯಾತ್ರೆ ವೇಳೆ ತೀರ್ಥಹಳ್ಳಿ ರೈತನಿಗೆ ಹೃದಯಾಘಾತ!
– ತೀರ್ಥಹಳ್ಳಿ ತಾಲೂಕು ಬೆಕ್ಷೆಯ ಕೇಶವ ವಿಧಿವಶ
– ಇಂದು ಸಂಜೆ ಅಂತ್ಯಕ್ರಿಯೆ: ಸಂತಾಪ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ರೈತರೊಬ್ಬರು ಕಾಶಿ ಯಾತ್ರೆ ವೇಳೆ ಮೃತಪಟ್ಟ ಘಟನೆ ಭಾನುವಾರ ಕಾಶಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮದ ಬೆಕ್ಷೆಯ ಕೇಶವ ಮೃತ ವ್ಯಕ್ತಿ. ಇವರು ಸಾಂಪ್ರದಾಯಿಕ ಕೃಷಿಕರಾಗಿದ್ದು, ಇತ್ತೀಚೆಗೆ ದಂಪತಿ,ಸಂಬಂಧಿಕರ ಜೊತೆ ತೀರ್ಥಯಾತ್ರೆ ಕೈಗೊಂಡಿದ್ದು, ಕಾಶಿ ಯಾತ್ರಾಸ್ಥಳ ಪ್ರವೇಶಿಸಿದ ವೇಳೆ ದುರದೃಷ್ಟಕರವಾಗಿ ಹೃದಯಾಘಾತಕ್ಕೊಳಗಾಗಿದ್ದಾರೆ. ಮೃತರ ಶವಸಂಸ್ಕಾರ ಮಂಗಳವಾರ ಸಂಜೆ 6ಕ್ಕೆ ಕೃಷಿಕರ ಸ್ವಂತ ಊರಾದ ಬೆಕ್ಷೆ, ಕುಡುಮಲ್ಲಿಗೆ, ತೀರ್ಥಹಳ್ಳಿಯಲ್ಲಿ ಬಂದು-ಮಿತ್ರರ ಸಮಕ್ಷಮ ನೆರವೇರಲಿದೆ.

ಪತ್ನಿ ಶ್ರೀಮತಿ ಅನಸೂಯಮ್ಮ, ಮಗ ಬಿ.ಕೆ. ಮಲ್ಲಿಕಾರ್ಜುನ, ಮಗಳು ಶ್ರೀಮತಿ ಬಿ.ಕೆ. ಕೌಸ್ತುಭ, ಅಳಿಯ, ಸೊಸೆ, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಹಳೆಯ ಕಾಲದ ಕೃಷಿಯಾದಾರಿತ ಸಾಂಪ್ರದಾಯಿಕ ಶೈಲಿಯ ಕೃಷಿಗೆ ಒತ್ತುಕೊಟ್ಟು ಅದರಲ್ಲಿಯೇ ಪ್ರಗತಿ ಸಾಧಿಸಿ ಮಾದರಿಯ ರೈತರಾಗಿದ್ದ ಕೇಶವ ಅವರಿಗೆ ನಿಧನಕ್ಕೆ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ನಮ್ಮೂರ್ ಎಕ್ಸ್ ಪ್ರೆಸ್ ಪ್ರಾರ್ಥಿಸುತ್ತದೆ.

Categories
ತೀರ್ಥಹಳ್ಳಿ

ಕಮ್ಮರಡಿಯಲ್ಲಿ ಮಾ.20ಕ್ಕೆ ಪಟ್ಲ ಮೇಳದಿಂದ ಯಕ್ಷಗಾನ

ಕಮ್ಮರಡಿಯಲ್ಲಿ ಮಾ.20ಕ್ಕೆ ಪಟ್ಲ ಮೇಳದಿಂದ ಯಕ್ಷಗಾನ
– ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಕಿಮ್ಮನೆ ಆದಿತ್ಯ ಸಾರಥ್ಯ
– ಮಾ.20ಕ್ಕೆ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಪೌರಾಣಿಕ ಯಕ್ಷಗಾನ
– ಮೇ 26 ರಂದು ಉಚಿತ ನೇತ್ರ, ಆರೋಗ್ಯ ತಪಾಸಣಾ ಶಿಬಿರ

NAMMUR EXPRESS NEWS
ತೀರ್ಥಹಳ್ಳಿ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕದ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಾ.17ರ ಭಾನುವಾರ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕ ಮತ್ತು ಭಾರತೀಯ ಯೋಗ ಶಿಕ್ಷಣ ಪುರುಷ ಮತ್ತು ಮಹಿಳಾ ಘಟಕ ಕಮ್ಮರಡಿ ವತಿಯಿಂದ ಸ್ವಚ್ಛ ಕಮ್ಮರಡಿ ಅಭಿಯಾನವನ್ನು ಕಮ್ಮರಡಿಯ ಎಲ್ಲ ಸಂಘ-ಸಂಸ್ಥೆಗಳು ಹಾಗೂ ನಾಗರೀಕರ ಸಹಕಾರದೊಂದಿಗೆ ನಡೆಸಲಾಯಿತು.

ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀಮಠ ಹರಿಹರ ಪುರ ಇವರ ಕೃಪಾರ್ಶಿರ್ವಾದದೊಂದಿಗೆ ದಿನಾಂಕ : 20-03-2024 ರ ಬುಧವಾರ ಸಂಜೆ 6.30 ರಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪೌರಾಣಿಕ ಯಕ್ಷಗಾನವನ್ನು ಕಮ್ಮರಡಿಯ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಈಗಾಗಲೇ ಸಿದ್ಧತೆ ನಡೆದಿದೆ.

ಪಟ್ಲ ಫೌಂಡೇಶನ್ ಗೌರವಾಧ್ಯಕ್ಷರಾದ ಕಿಮ್ಮನೆ ಆದಿತ್ಯ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಲಿದ್ದು, ಯಕ್ಷದ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪೋಲಿಸ್ ಅಧೀಕ್ಷಕ ಮಿಥುನ್ ಹೆಚ್ ಎ, ಭೂದಾಖಲೆ ಜಂಟಿ ನಿರ್ದೇಶಕ ಸಿ ಎನ್ ರಮೇಶ್, ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕೆ ಭಂಡಾರಿ, ಕೇಂದ್ರೀಯ ಸಮಿತಿ ಖಜಾಂಚಿ ಸುದೇಶ್ ಕುಮಾರ್, ಪಟ್ಲ ಫೌಂಡೇಶನ್ ಗೌರವ ಅಧ್ಯಕ್ಷ ಶೇಷಾದ್ರಿ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಾಟಿ ವೈದ್ಯರಾದ ನೀಲಕಂಠ ಭಟ್ ಹಾಗೂ ಯಕ್ಷಗಾನ ಭಾಗವತರಾದ ಹೆಚ್ ಜಿ ಶಿವಶಂಕರ್ ಇವರಿಗೆ ಗೌರವಿಸಿ ಸನ್ಮಾನಿಸಲಾಗುವುದು.

ಉಚಿತ ಅರೋಗ್ಯ ತಪಾಸಣೆ ಶಿಬಿರ

ಯಕ್ಷದ್ರುವ ಪಟ್ಲ ಫೌಂಡೇಶನ್ ಕಮ್ಮರಡಿ ಘಟಕದ ಆಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರ ಲೋಕಸಭಾ ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆ 26-05-2024 ರ ಭಾನುವಾರ ನಡೆಯಲಿದೆ.