Categories
ಕರಾವಳಿ ಬೆಂಗಳೂರು ಹಾಸನ

ಕರ್ನಾಟಕ ಟಾಪ್ 5 ನ್ಯೂಸ್..!

ಪಾಕಿಸ್ತಾನ್ ಜಿಂದಾಬಾದ್ ಎಂದ 3 ಮಂದಿ ಅಂದರ್..!
– ಉದರದಲ್ಲಿ 9 ಕೆ.ಜಿ. ಮಾಂಸದ ಗಡ್ಡೆ!
– ಬೆಳ್ತಂಗಡಿ: 1 ಕೋಟಿ ಮೌಲ್ಯದ ಕರೆನ್ಸಿ ಕೊಡುವುದಾಗಿ ವಂಚನೆ!
– ಬೆಂಗಳೂರು: ಮೆಲ್ಸೇತುವೆ ಯಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ವ್ಯಕ್ತಿ ಸಾವು!
– ಹಾಸನ: ಪ್ರೀತಿ ನಿರಾಕರಿಸಿದ ಶಾಲಾ ಬಾಲಕಿಯನ್ನು ಕೊಂದ ಯುವಕ

NAMMUR EXPRESS NEWS
ಬೆಂಗಳೂರು: ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ನಾಯಕ ನಾಸಿರ್ ಹುಸೇನ್ ಗೆದ್ದಾಗ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಮೊಳಗಿಸಿದ್ದ ಮೂವರನ್ನು ಬಂಧಿಸಲಾಗಿದೆ. ಒಂದು ವಾರದಿಂದ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದ ಪ್ರಕರಣ ಈಗ ಪ್ರಮುಖ ಘಟ್ಟ ತಲುಪಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ವಿಧಾನಸೌಧ ಠಾಣೆ ಪೊಲೀಸರು, ತನಿಖೆ ಪೂರ್ಣಗೊಳಿಸಿ ವಿಧಿವಿಜ್ಞಾನ ಪ್ರಯೋ ಗಾಲಯದ ವರದಿ ಆಧರಿಸಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಕರ್ನಾಟಕ ಮೂಲದವರಾಗಿದ್ದರೆ, ಮತ್ತೊಬ್ಬ ದಿಲ್ಲಿಗೆ ಸೇರಿದವನಾಗಿದ್ದಾನೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್ ಶಫಿ ನಾಶಿಪುಡಿ, ಆರ್.ಟಿ.ನಗರದ ಮುನಾವರ್ ಮತ್ತು ದೆಹಲಿ ಮೂಲದ ಇಲ್ತಾಜ್ ಎಂಬವವರನ್ನು ಬಂಧಿಸಲಾಗಿದೆ. ಫೆ.27ರಂದು ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಜಯಗಳಿಸಿದ್ದರು. ನಂತರ ನಡೆದ ಸಂಭ್ರಮಾಚರಣೆ ವೇಳೆ ಆರೋಪಿಗಳು ಪಾಕಿಸ್ಥಾನ್ ಜಿಂದಾಬಾದ್‌ ಎಂಬ ಘೋಷಣೆಕೂಗಿದ್ದರು. ಈಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರೋಪಿಗಳ ಪೈಕಿ ಮೊಹಮ್ಮದ್ ಶಫಿ ನಾಶಿಪುಡಿ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಮುನಾವರ್ ನಗರದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ಇಲ್ತಾಜ್ ಎಂಬಾತನೂ ನಾಸೀರ್ ಹುಸೇನ್ ಆಪ್ತ ಬೆಂಬಲಿಗ ನಾಗಿದ್ದಾನೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂವರು ಅಧಿಕೃತವಾಗಿ ವಿಧಾನಸೌಧ ಪ್ರವೇಶ ಪಾಸ್ ಪಡೆದು ಬಂದಿರುವುದು ಖಾತ್ರಿಯಾಗಿದೆ.

ಉದರದಲ್ಲಿ 9 ಕೆ.ಜಿ. ಮಾಂಸದ ಗಡ್ಡೆ!:

ಕಾಸರಗೋಡು: ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಮಹಿಳೆಯ ಉದರದಿಂದ ಬರೋಬ್ಬರಿ 9.8 ಕೆ.ಜಿ.ತೂಕದ ಮಾಂಸದ ಗಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹೊಟ್ಟೆ ಊದಿಕೊಂಡ ಸ್ಥಿತಿಯಲ್ಲಿ ಇದ್ದುದರಿಂದ ಮಹಿಳೆ ಆಸ್ಪತ್ರೆಗೆ ತಪಾಸಣೆಗಾಗಿ ಬಂದಿದ್ದರು. ತಪಾಸಣೆಯಲ್ಲಿ ಮಾಂಸದ ಗಡ್ಡೆ ಪತ್ತೆಯಾಗಿತ್ತು. ಆಕೆ ಈವರೆಗೆ ಹೆರಿಗೆ ಶಸ್ತ್ರಚಿಕಿತ್ಸೆ, ಅಪೆಂಡಿಸೈಟಿಸ್, ಹರ್ನಿಯಾ ಸೇರಿದಂತೆ ನಾಲ್ಕು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತಜ್ಞ ವೈದ್ಯರ ತಂಡ ಶಸ್ತ್ರಕ್ರಿಯೆ ನಡೆಸಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

1 ಕೋಟಿ ಮೌಲ್ಯದ ಕರೆನ್ಸಿ ಕೊಡುವುದಾಗಿ ನಂಬಿಸಿ ಮಹಿಳೆಗೆ ವಂಚನೆ:

ಬೆಳ್ತಂಗಡಿ: ಕೊಯ್ಯರು ಗ್ರಾಮದ ಮಹಿಳೆಯೊಬ್ಬರಿಗೆ 1 ಕೋಟಿ ರೂ. ಮೌಲ್ಯದ ಕರೆನ್ಸಿ ಕೊಡುವುದಾಗಿ ಹೇಳಿ ಆಕೆಯಿಂದ 14.55 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಮಂಗಳೂರಿನ ಸೈಬರ್ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಕೊಯ್ಯರು ಗ್ರಾಮದ ಬರಮೇಲು ನಿವಾಸಿ ಮಹಿಳೆ ದೂರು ನೀಡಿದವರು. 2023ರಲ್ಲಿ ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಮೆಸೇಜ್ ಮಾಡಿ, ಪರಿಚಯ ಮಾಡಿಕೊಂಡಿದ್ದ. 2023ರ ಮೇ ತಿಂಗಳಿನಲ್ಲಿ ಈ ಅಪರಿಚಿತ ವ್ಯಕ್ತಿ ಕರೆ ಮಾಡಿ 1 ಕೋಟಿ ಮೌಲ್ಯದ ಕರೆನ್ಸಿ ಕಳುಹಿಸಿರುವುದಾಗಿ ತಿಳಿಸಿದ್ದ.

1 ಕೋಟಿ ಹಣ ಪಡೆಯಬೇಕಾದರೆ ತೆರಿಗೆ ಹಾಗೂ ಇತರ ಚಾರ್ಜ್‌ಗೆ ಹಣ ಕಟ್ಟಬೇಕೆಂದು ತಿಳಿಸಿ ಬೇರೆ ಬೇರೆ ಖಾತೆಗಳನ್ನು ನೀಡಿದ್ದು ಮಹಿಳೆ ಸೌಹಾರ್ದ ಸಹಕಾರಿ ಸಂಘದ ಖಾತೆ ಹಾಗೂ ಬ್ಯಾಂಕ್‌ನ ಖಾತೆಯಿಂದ ಈ ವ್ಯಕ್ತಿ ತಿಳಿಸಿದ ಖಾತೆಗಳಿಗೆ 2023ರ ಮೇ 5ರಿಂದ 2024ರ ಫೆ.22 ರ ವರೆಗೆ 14, 55, 364 ರೂ. ಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದುಕೊಂಡ ಅಪರಿಚಿತ ವ್ಯಕ್ತಿ ಮತ್ತೆ ಸಂಪರ್ಕಕ್ಕೆ ಸಿಗದಿದ್ದಾಗ ತಾನು ವಂಚನೆಗೊಳಗಾಗಿರುವುದು ತಿಳಿದು, ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೆಲ್ಸೇತುವೆ ಯಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ವ್ಯಕ್ತಿ ಸಾವು!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಮೆಲ್ಸೇತುವೆ ಯಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ವ್ಯಕ್ತಿಯೊಬ್ಬ ಬಿದ್ದ ಘಟನೆ ಹೈಗೌಂಡ್ಸ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.ಹೌದು, ನಗರದ ಹೃದಯ ಭಾಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹೈಗೌಂಡ್ಸ್ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ಬ್ರಿಡ್ಜ್ ಮೇಲಿನಿಂದ ಕೆಳಗೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದಾರೆ. ಪರಿಣಾಮ ಕಾರಿನ ಗ್ಲಾಜು ಪುಡಿ ಪುಡಿಯಾಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಪ್ರೀತಿ ನಿರಾಕರಿಸಿದ SSLC ವಿದ್ಯಾರ್ಥಿನಿಯ ಕೊಲೆಗೈದು ರೈಲಿಗೆ ತಲೆಕೊಟ್ಟ ಯುವಕ!

ಹಾಸನ : ಪ್ರೀತಿ ನಿರಾಕರಿಸಿದ ಶಾಲಾ ಬಾಲಕಿಯನ್ನು ಕೊಂದು ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಕೊಲೆಯಾದ ಬಾಲಕಿಯಾಗಿದ್ದು, ಶರತ್ (23) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು ಎಸ್ ಎಸ್ ಎಲ್ ಸಿ ಓದುತ್ತಿದ್ದ ಭೂಮಿಕಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಶರತ್‌ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ವಿದ್ಯಾರ್ಥಿನಿ ಭೂಮಿಕಾ ಶಾಲೆ ಮುಗಿಸಿ ಮನೆಗೆ ಹೋಗುವಾಗ ತೋಟದಲ್ಲಿ ಆಕೆಯನ್ನು ಅಡ್ಡಗಟ್ಟಿದ ಶರತ್‌ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಅರಸೀಕೆರೆ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Categories
ಮಾಹಿತಿ ಹವಾಮಾನ ಸುದ್ದಿ

ವಸಂತ ಕಾಲ ಬಂದಾಗ..!

ವಸಂತ ಕಾಲ ಬಂದಾಗ..!
– ಮತ್ತೆ ಬಂದಿದೆ ಋತುಗಳ ರಾಜ ವಸಂತ
– ಹಸಿರಿನಿಂದ ಕಂಗೊಳಿಸುತ್ತಿರುವ ಪರಿಸರ
– ಮಾವು, ಹಲಸು ಫಸಲು: ಗಿಡ ಮರಗಳಲ್ಲಿ ಹಸಿರು

NAMMUR EXPRESS NEWS
ಕುಹೂ ಕುಹೂ ಎಂದು ಕೂಗುವ ಕೋಗಿಲೆ. ಫಸಲು ಬಿಡುತ್ತಿರುವ ಮಾವು, ಹಲಸು. ಗಿಡ ಮರಗಳಲ್ಲಿ ನವ ಚೈತನ್ಯ, ಹೊಸ ಚಿಗುರು ಕಾಣುತ್ತಿದೆ. ವಸಂತ ಮಾಸದಲ್ಲಿ ಮರಗಳಲ್ಲಿ ಒಣಗಿದ ಎಲೆಗಳು ಉದುರುತ್ತಿದೆ, ಹಚ್ಚ ಹಸಿರಾದ ಹೊಸ ಎಲೆಗಳಿಂದ ಗಿಡಮರಗಳು ನಳನಳಿಸುತ್ತಿವೆ. ಪ್ರಕೃತಿ ಮಾತೆ ಹಳೆಯದೆಲ್ಲ ಕಳಚಿ ಹೊಸ ರೂಪ ಪಡೆಯುತ್ತಿದ್ದಾಳೆ. ಹಸಿರಿನಿಂದ ಪರಿಸರವೆಲ್ಲ ಕಂಗೊಳಿಸುತ್ತಿದೆ. ಋತುಗಳ ರಾಜ ವಸಂತನ ಪುನರಾಗಮನವಾಗಿದೆ. ವಸಂತ ಋತುವಿನ ಆಗಮನವಾಗುತ್ತಲೇ, ಪ್ರಕೃತಿಯ ಎಲ್ಲಾ ತತ್ವಗಳಾದ ಮಾನವ, ಪಶು, ಪಕ್ಷಿ, ಗಿಡ ಮರಗಳಲೆಲ್ಲ ಉತ್ಸಾಹ ಉಕ್ಕಿ ಹರಿಯುತ್ತದೆ.

ವಸಂತ ಬರುತಲೆ ಚಳಿಗಾಲ ಮುಕ್ತಾಯವಾಗುತ್ತದೆ. ವಸಂತ ನಮ್ಮ ಆಂತರಿಕ ಕಲ್ಪನೆಗಳ ಮೊಗ್ಗು ಅರಳಿಸಲು ಬರುತ್ತಾನೆ. ಒಣ ಭೂಮಿಯಂತಿರುವ ನಮ್ಮ ಮನದಲ್ಲಿ ಹೊಸ ಉತ್ಸಾಹ ಚಿಗುರುಡೆಯುತ್ತಾನೆ. ವಸಂತ ಹೊಸತನದ ಆರಂಭ, ಆತ ಪ್ರಕೃತಿಯ ಶೃಂಗಾರ ಮತ್ತು ಸೌಂದರ್ಯದ ಉತ್ಸಾಹವನ್ನು ಹೊತ್ತು ತರುತ್ತಾನೆ. ವಸಂತ ಪಂಚಮಿಯ ನಂತರ ಹಳೆಯದೆಲ್ಲ ಉದುರಿ ಬೀಳುತ್ತದೆ. ಮಂಜು ಕರಗಿ ಹೋಗುತ್ತದೆ, ಮೊಗ್ಗುಗಳು ಅರಳಿ ತೂಗುಯ್ಯಾಲೆ ಆಡದೊಡಗುತ್ತವೆ. ಕೋಗಿಲೆ ಹಾಡುತ್ತದೆ, ಚಳಿಗಾಲದಲ್ಲಿ ತಟಸ್ಥವಾಗಿದ್ದ ಗಿಡ ಮರಗಳು ಮೈಚಳಿ ಬಿಟ್ಟು ಅಲುಗಾಡ ತೊಡಗುತ್ತವೆ. ನಾವು ಕೂಡ ವಸಂತನನ್ನು ಸ್ವಾಗತಿಸೋಣ, ಪ್ರಕೃತಿಯಂತೆ ಹೊಸದನ್ನು ಅಳವಡಿಸಿಕೊಳ್ಳೋಣ. ಹಳೆಯದೆಲ್ಲವನ್ನು ಮರೆತು ಬಿಡೋಣ, ಹೊಸದನ್ನೇನಾದರೂ ಸಾದಿಸೋಣ.

Categories
ರಾಷ್ಟ್ರೀಯ ವಾರ್ತೆ

ಡಾರ್ಲಿಂಗ್ ಅಂಥ ಕರೆದ್ರೆ ಇನ್ನು ಕೇಸ್, ಜೈಲು!

ಡಾರ್ಲಿಂಗ್ ಅಂಥ ಕರೆದ್ರೆ ಇನ್ನು ಕೇಸ್, ಜೈಲು!
– ಹೆಣ್ಣು ಮಕ್ಕಳನ್ನು ಡಾರ್ಲಿಂಗ್ ಅನ್ನುವುದು ಲೈಂಗಿಕ ಕಿರುಕುಳ
– ಅಪರಿಚಿತರಿಗೆ ಕರೆದ್ರೆ ಕೇಸ್ ಹಾಕಿ ಎಂದ ಹೈಕೋರ್ಟ್!

NAMMUR EXPRESS NEWS
ಕೋಲ್ಕತ್ತಾ: ಇಲ್ಲೊಂದು ಶಾಕಿಂಗ್ ನ್ಯೂಸ್. ಹೆಣ್ಣು ಮಕ್ಕಳನ್ನು ಡಾರ್ಲಿಂಗ್,ಬೇಬಿ, ಬೇಬ್ ಎಂದು ಕರೆಯುವ ರೂಢಿ ತುಂಬ ಯುವಕರಿಗೆ ಇರುತ್ತದೆ. ಆದರೆ, ಇನ್ನುಮುಂದೆ ಅಪರಿಚಿತ ಹೆಣ್ಣುಮಕ್ಕಳನ್ನು ಡಾರ್ಲಿಂಗ್ ಎಂದು ಕರೆಯುವುದು, ಛೇಡಿಸುವ ಚಾಳಿ ಇದ್ದರೆ, ಯುವಕರು ಕೂಡಲೇ ಈ ಚಾಳಿಯನ್ನು ಬಿಡಬೇಕು. ಏಕೆಂದರೆ, “ಅಪರಿಚಿತ ಹೆಣ್ಣುಮಕ್ಕಳನ್ನು ಡಾರ್ಲಿಂಗ್ ಎಂದು ಕರೆಯುವುದು ಕೂಡ ಲೈಂಗಿಕ ಕಿರುಕುಳವಾಗಿದ್ದು ಅಪರಾಧ ಪ್ರಕರಣ ದಾಖಲಿಸಿ” ಎಂಬುದಾಗಿ ಕೊಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ. ಹೌದು, ಅಪರಿಚಿತ ಮಹಿಳೆ ಅಥವಾ ಯುವತಿಯನ್ನು ಡಾರ್ಲಿಂಗ್ ಎಂದು ಕರೆಯುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 354 ಎ (ಮಹಿಳೆ ಜತೆ ಅತಿರೇಕದ ವರ್ತನೆ) ಹಾಗೂ 509 (ಹೆಣ್ಣುಮಕ್ಕಳನ್ನು ಚುಡಾಯಿಸುವುದು) ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಬೇಕು. ಅವರನ್ನು ಡಾರ್ಲಿಂಗ್ ಎಂದು ಕರೆಯುವುದು ಕೂಡ ಸೆಕ್ಸುವಲ್ ಹೇಳಿಕೆಯಾಗಿದೆ. ಅದರಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಜಯ್ ಸೇನ್‌ಗುಪ್ತಾ ಆದೇಶ ಹೊರಡಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

-ಒಂದು ರೂಪಾಯಲ್ಲಿ ಮದುವೆ..!

-ಒಂದು ರೂಪಾಯಲ್ಲಿ ಮದುವೆ..!
– ವಿಕಲಚೇತನರಿಗೆ ನೆರವಾಗುವ ಅಮ್ಮ ಫೌಂಡೇಶನ್
– 15 ವರ್ಷಗಳಲ್ಲಿ 100ಕ್ಕೂ ಹೆಚ್ಚು ವಿಕಲಚೇತನರ ಮದುವೆಗೆ ಸಹಕರಿಸಿದ ಸಂಸ್ಥೆ

NAMMUR EXPRESS NEWS
ತೆಲಂಗಾಣ: ಮದುವೆಯೆಂಬುದು ವಧು-ವರರ ಪರಿವಾರಗಳಿಗೆ ಆರ್ಥಿಕ ಹೊರೆಯಾಗಿರುವ ಕಾಲದಲ್ಲಿ ವಿಕಲಚೇತನರಿಗೆ ಒಂದು ರೂಪಾಯಿಯಲ್ಲಿ ಮದುವೆ ಮಾಡಿಸುವ ಕೆಲಸವನ್ನು ತೆಲಂಗಾಣದ ಅಮ್ಮ ಫೌಂಡೇಶನ್‌ನ ನಿರ್ವಾಹಕರಾದ ನಾಗಮಲ್ಲ ಅನಿಲ್‌ಕುಮಾ‌ರ್ ಮತ್ತು ಅರುಣಾ ಮಾಡುತ್ತಿದ್ದಾರೆ. ಇದು ಕೇವಲ ವಿಕಲಚೇತನರಿಗೆ ಅನ್ವಯಿಸಿದ್ದು, ಒಂದು ರೂಪಾಯಿ ನೋಂದಣಿ ಮಾಡಿಸಿ ಉಚಿತ ಮದುವೆ ಮಾಡಿಸಲಾಗುತ್ತದೆ.ಕಳೆದ 15 ವರ್ಷಗಳಲ್ಲಿ ಈ ಫೌಂಡೇಶನ್ ನೂರಕ್ಕೂ ಅಧಿಕ ಅನಾಥ ಮತ್ತು ವಿಕಲಚೇತನರಿಗೆ ಮದುವೆ ಮಾಡಿಸಿದೆ. ಈ ಸಂಸ್ಥೆಯ ಕೆಲಸ ಈಗ ಭಾರೀ ಮೆಚ್ಚುಗೆ ಪಡೆದಿದೆ.

Categories
ಬೆಂಗಳೂರು ರಾಜ್ಯ

ಲೋಕ ಸಭಾ ಚುನಾವಣಾ ಸಮರಕ್ಕೆ ಸಜ್ಜು!

ಲೋಕ ಸಭಾ ಚುನಾವಣಾ ಸಮರಕ್ಕೆ ಸಜ್ಜು!
– ಈ ತಿಂಗಳೇ ಅಧಿಸೂಚನೆ ಪ್ರಕಟ ಸಾಧ್ಯತೆ
– ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿದ್ಧತೆಗೆ ಸೂಚನೆ
– ಏನೇನು ನಿಯಮ… ಏನೇನು ಸಿದ್ಧತೆ…?

NAMMUR EXPRESS NEWS
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲು ಕೇಂದ್ರ ಚುನಾವಣೆ ಆಯೋಗ ಸೂಚನೆ ನೀಡಿದೆ. ಲೋಕ ಸಭಾ ಯಾವುದೇ ಲೋಪವಾಗದಂತೆ ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಸೂಚನೆ ನೀಡಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲಾ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಚುನಾವಣೆ ಕರ್ತವ್ಯವನ್ನು ನಿಷ್ಪಕ್ಷ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ.

ಜಿಲ್ಲಾಡಳಿತ ಏನೇನ್ ಮಾಡಬೇಕು?

ಚುನಾವಣೆ ಘೋಷಣೆಯಾದ ತಕ್ಷಣ ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ- ಕಾಲೇಜುಗಳ ಗೋಡೆಯ ಮೇಲಿನ ಬರಹ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿರುವ ರಾಜಕೀಯ ಪಕ್ಷಗಳ ಬ್ಯಾನರ್, ಪ್ಲೆಕ್ಸ್, ಹೋರ್ಡಿಂಗಳನ್ನು ತೆರವುಗೊಳಿಸಬೇಕು. ವಿವಿಧ ಇಲಾಖೆಗಳ ವೆಬ್‌ಸೈಟ್ ಹಾಗೂ ಸಾಮಾಜಿಕ ತಾಣಗಳಲ್ಲಿ ಸಚಿವರು ಹಾಗೂ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸಲು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಆಯಾ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಚುನಾವಣೆ ಕುರಿತು ಅರಿವು ಮೂಡಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಿ, ಮತದಾರರು ಹೆಚ್ಚಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕ್ರಮ ವಹಿಸಬೇಕು.

ಜಾಗೃತಿ ಮೂಡಿಸಲು ಹಂಚಿಕೆ ಮಾಡಲಾದ ಇ.ವಿ.ಎಂ ಮೆಷಿನ್ ಗಳನ್ನು ಹಿಂಪಡೆಯಬೇಕು. ಗುರುತಿಸಲಾಗಿರುವ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ವಿಕಲಚೇತನರು, ಅಶಕ್ತರು ಪ್ರವೇಶಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ಮತದಾನ ಕೇಂದ್ರಗಳಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಅಗತ್ಯವಿದ್ದಲ್ಲಿ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಎಲ್ಲಾ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಧಿಕಾರಿಗಳು ಏನೇನ್ ಮಾಡಬೇಕು?

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದರೆ ಎಂಸಿಎಂಸಿ ತಂಡಗಳು ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಸಹಾಯಕ ವೆಚ್ಚ ವೀಕ್ಷಕರು, ಫೈಯಿಂಗ್‌ ಸ್ವಾಡ್‌ಗಳು, ವೀಡಿಯೋ ಸರ್ವೆಲನ್ಸ್ ವೀಡಿಯೋ ವಿಲ್ಡಿಂಗ್ ತಂಡಗಳು, ಸ್ಟ್ರಾಟಿಕ್ ಸರ್ವೆಲನ್ಸ್ ತಂಡಗಳು ಜಾಗೃತರಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು.
ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ತಂಡಗಳ ಅಧಿಕಾರಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳಿಗೆ ನಿಗದಿಯಾಗುವ ಚುನಾವಣಾ ವೆಚ್ಚದ ಕುರಿತು ಸರಿಯಾದ ಲೆಕ್ಕಪತ್ರಗಳು ಇರಬೇಕು. ಈ ಸಂಬಂಧ ಯಾವುದೇ ಗೊಂದಲಕ್ಕೆ ಒಳಗಾಗದೇ ಎಲ್ಲ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು.

ಆಂತರಿಕ ಪ್ರದೇಶಗಳಲ್ಲಿ ಗಾಂಜಾ ಹಾಗೂ ಕಳ್ಳಭಟ್ಟಿ ಸಾಗಾಟ ಸೇರಿದಂತೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಅರಣ್ಯ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಬಂದರುಗಳಿಗೆ ಆಗಮಿಸುವ ಬೋಟುಗಳ ತಪಾಸಣೆಯನ್ನು ಸಹ ಕರಾವಳಿ ಕಾವಲು ಪೊಲೀಸ್‌ ಅಧಿಕಾರಿಗಳು ನಡೆಸಬೇಕು.ಚೆಕ್‌ಪೋಸ್ಟ್‌ ಸ್ಥಾಪನೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಈಗಲೇ ಕಾರ್ಯಪ್ರವೃತ್ತವಾಗಬೇಕು ಹಾಗೂ ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.ಚುನಾವಣಾ ಘೋಷಣೆ ನಂತರ ಯಾವುದೇ ಹೊಸದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಟೆಂಡ‌ರ್ ಪ್ರಕಟಣೆಯನ್ನು ಹೊರಡಿಸಬಾರದು. ಈಗಾಗಲೇ ಚುನಾವಣೆ ಘೋಷಣೆ ಪೂರ್ವದಲ್ಲಿ ಕಾರ್ಯಾದೇಶ ನೀಡಿ, ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂಬ ಸೂಚನೆ ನೀಡಲಾಗಿದೆ. ಪೊಲೀಸ್, ಜಿಲ್ಲಾಡಳಿತ, ಚುನಾವಣೆ ವಿಭಾಗ ಈಗ ಅಲರ್ಟ್ ಆಗಿದೆ.

ವಿಶೇಷ ವರದಿ: ಅಮರ್ ಬಾಗಲಕೋಟೆ

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಡೌನ್!

ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಡೌನ್!
– ಲಾಗಿನ್ ಸಮಸ್ಯೆ, ಫೀಡ್ ರಿಫ್ರೆಶ್ ಸಮಸ್ಯೆ: ಬಳಕೆದಾರರ ಪರದಾಟ
– ಏಕೆ ಹ್ಯಾಂಗ್ ಆಯ್ತು..ಏನಿದು ಸಮಸ್ಯೆ

NAMMUR EXPRESS NEWS
ನವದೆಹಲಿ : ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಭಾರತ ಸೇರಿ ವಿಶ್ವದ್ಯಾಂತ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಪ್ರಪಂಚದಾದ್ಯಂತದ ಬಳಕೆದಾರರು ತಮ್ಮ ಫೇಸ್ಟುಕ್ ಪ್ರೊಫೈಲ್ ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸೇರಿದಂತೆ ಕಂಪನಿಯ ಒಡೆತನದ ಇತರ ಸೇವೆಗಳಲ್ಲಿ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ.

ಲಾಗಿನ್ ಸಮಸ್ಯೆಗಳು ಮತ್ತು ಫೀಡ್ ರಿಫ್ರೆಶ್ ಸಮಸ್ಯೆಗಳು.!

ಬಳಕೆದಾರರು ತಮ್ಮ ಫೇಸ್ಬುಕ್ ಖಾತೆಗಳಿಂದ ಲಾಗ್ ಔಟ್ ಆಗುವುದು, ಮತ್ತೆ ಲಾಗ್ ಇನ್ ಮಾಡುವುದು ಅಸಾಧ್ಯವಾಗುವಂತಹ ವಿವಿಧ ಸಮಸ್ಯೆಗಳನ್ನ ವರದಿ ಮಾಡುತ್ತಿದ್ದಾರೆ. ಅಂತೆಯೇ, ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಫೀಡ್ ಗಳನ್ನ ರಿಫ್ರೆಶ್’ಗೊಳಿಸಲು ತೊಂದರೆಗಳನ್ನ ಎದುರಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳಿಗೆ ಸ್ಟೋರಿ ಮತ್ತು ಕಾಮೆಂಟ್ಗಳು ಲೋಡ್ ಆಗಲು ವಿಫಲವಾಗಿವೆ. ಮೆಟಾ ಅಭಿವೃದ್ಧಿಪಡಿಸಿದ ಬ್ರೆಡ್ಸ್ ಎಂಬ ಅಪ್ಲಿಕೇಶನ್ ಸಹ ಸಂಪೂರ್ಣ ಸ್ಥಗಿತವನ್ನ ಅನುಭವಿಸುತ್ತಿದೆ, ಬಿಡುಗಡೆಯಾದ ನಂತರ ದೋಷ ಸಂದೇಶವನ್ನ ಪ್ರದರ್ಶಿಸುತ್ತದೆ.

Categories
ರಾಜಕೀಯ ಶಿವಮೊಗ್ಗ

ರಾಜ್ಯದ ಮುಂದಿನ ಸಿಎಂ ವಿಜಯೇಂದ್ರ!

ರಾಜ್ಯದ ಮುಂದಿನ ಸಿಎಂ ವಿಜಯೇಂದ್ರ!
– ಸಾಗರದಲ್ಲಿ ಶಕ್ತಿ ಸಾಗರ ಸಮಾವೇಶದಲ್ಲಿ ಪ್ರಣವಾನಂದ ಸ್ವಾಮೀಜಿ ಭವಿಷ್ಯ
– ರಾಘವೇಂದ್ರ ಕೇಂದ್ರ ಸಚಿವರಾಗ್ತಾರೆ ಎಂದ ವಿನಯ್ ಗುರೂಜಿ

NAMMUR EXPRESS NEWS
ಶಿವಮೊಗ್ಗ: ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ವಿಜಯೇಂದ್ರ ಆಗಬೇಕು ಎಂಬುದು ನಮ್ಮ ಬಯಕೆ. ಅದು ಯಡಿಯೂರಪ್ಪ ಆಸೆ ಕೂಡ ಹೌದು ಎಂದು ಪ್ರಣವಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದ ಸಾಗರದಲ್ಲಿ ಶಕ್ತಿ ಸಾಗರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಆಗುತ್ತಾರೆ. ಪ್ರಣಾವಾನಂದ ಸ್ವಾಮೀಜಿ ಸತ್ಯಾಂಶ ಹೇಳುತ್ತಾರೆ. ಯಡಿಯೂರಪ್ಪ ಋಣ ಸಮಾಜ ತೀರಿಸಬೇಕು.

ದೇಶ ಕಂಡ ಅಪ್ರತಿಮ ರಾಜಕಾರಣಿ ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿ ಮಕ್ಕಳು ಹೇಗೆ ಇರಬೇಕೆಂಬುದು ರಾಘವೇಂದ್ರ, ವಿಜಯೇಂದ್ರ ನೋಡಿ ಕಲಿಯಬೇಕು. ಅವರಿಬ್ಬರಲ್ಲೂ ತಾಳ್ಮೆ ನೋಡಬಹುದು ಎಂದರು. ಸಮಾವೇಶದಲ್ಲಿ ಮಾತನಾಡಿದ ವಿನಯ್ ಗುರೂಜಿ ಅವರು, ಬಿ.ವೈ.ರಾಘವೇಂದ್ರ ಮಾಡಿರುವ ಕೆಲಸದಿಂದ ಅವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಪ್ರಮಾಣವಾಗಿ ಹೇಳುತ್ತೇನೆ, ಅವರಿಗೆ ಭಗವಂತ ಪ್ರಮಾಣ ವಚನ ಸ್ವೀಕಾರ ಮಾಡುವ ಅನುಗ್ರಹ ಮಾಡುತ್ತಾರೆ. ರಾಘವೇಂದ್ರ ಕೇಂದ್ರ ಸಚಿವರಾಗುತ್ತಾರೆ ಎಂದು ಭವಿಷ್ಯ‌ ನುಡಿದರು.

Categories
ತೀರ್ಥಹಳ್ಳಿ ಬೆಂಗಳೂರು

ಬೆಂಗಳೂರಿನಲ್ಲಿ ಈಡಿಗ ಕ್ರಿಕೆಟ್ ಟೂರ್ನಮೆಂಟ್ ಸಕ್ಸಸ್!

ಬೆಂಗಳೂರಿನಲ್ಲಿ ಈಡಿಗ ಕ್ರಿಕೆಟ್ ಟೂರ್ನಮೆಂಟ್ ಸಕ್ಸಸ್!
– ಫೈನಲ್ ಗೆದ್ದ ತೀರ್ಥಹಳ್ಳಿ ಎಸ್ ಎನ್ ಜಿ ವಿ ತಂಡ
– ಅತ್ಯಂತ ಶಿಸ್ತಿನ ಆಯೋಜನೆ: ಗಣ್ಯರ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರಿನಲ್ಲಿ ಈಡಿಗ ಕ್ರಿಕೆಟ್ ಲೀಗ್ ಅತ್ಯಂತ ಯಶಸ್ವಿಯಾಗಿ ನಡೆಯಿತು. ಆರ್ಯ ಈಡಿಗ ಯೂತ್ ಕಮಿಟಿ ವತಿಯಿಂದ ನಡೆದ ಟೂರ್ನಿಯಲ್ಲಿ ಸಮಾಜ ಬಾಂಧವರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ತೀರ್ಥಹಳ್ಳಿ ತಾಲೂಕಿನಿಂದ ತೀರ್ಥಹಳ್ಳಿ ಎಸ್ ಎನ್ ಜಿ ವಿ ತಂಡ ಫೈನಲ್ ಗೆಲ್ಲುವ ಮೂಲಕ ಪ್ರಥಮ ಟೂರ್ನಮೆಂಟ್ ನಲ್ಲಿ ತಮ್ಮ ಚಾಪನ್ನು ಮೂಡಿಸಿತು. ತಂಡದ ಮಾಲೀಕರಾದ ಲೋಕೇಶ್ ಟೆಂಕಬೈಲು, ಮೋಹನ್ ಸಿಂಧುವಾದಿ, ವಿಶಾಲ್ ಕುಮಾರ್ ಹಾಗೂ ಆದರ್ಶ ಆಟಗಾರರಿಗೆ ಅಭಿನಂದನೆ ತಿಳಿಸಿದರು. ತಂಡ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರವೀಣ್ ಮಂಡಗದ್ದೆ ಹಾಗೂ ಸತೀಶ್ ಚಿಡುವ ರವರಿಗೂ ಧನ್ಯವಾದ ತಿಳಿಸಿದರು. ಇನ್ನು ಬೆಂಗಳೂರು ಎಸ್ ಎನ್ ಜಿವಿ ತಂಡದ ಮಾಲೀಕರಾದ ಎಸ್ ಎನ್ ಜಿ ವಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಂಟ್ರಲ್ಲಿ ರಾಘವೇಂದ್ರ ಅವರು ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದರು. ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ತಿಮ್ಮಗೌಡ್ರು ಬಹುಮಾನ ಕೊಡುವುದರ ಮೂಲಕ ಎಸ್ ಎಲ್ ಜಿ ವಿ ತೀರ್ಥಹಳ್ಳಿ ತಂಡಕ್ಕೆ ಶುಭ ಹಾರೈಸಿದರು. ತೀರ್ಥಹಳ್ಳಿ ಹಾಗೂ ಶಿವಮೊಗ್ಗದ ಎಲ್ಲಾ ಪದಾಧಿಕಾರಿಗಳಿಗೂ ತಂಡಕ್ಕೆ ಬೆಂಬಲ ಕೊಟ್ಟಿದ್ದಕ್ಕೆ ತೀರ್ಥಹಳ್ಳಿ ಎಸ್ ಎನ್ ಜಿ ವಿ ತಂಡವು ಈ ಮೂಲಕ ಧನ್ಯವಾದ ತಿಳಿಸಿದೆ.

ಉತ್ತಮ ಪ್ರದರ್ಶನ ನೀಡಿದ ತಂಡಗಳು!

ಹೊಸಮನೆ ಉಮೇಶ್ ಹಾಗೂ ರಘುನಾಥ್ ಮೆಡಿಕಲ್, ಷಣ್ಮುಖ ಬಿಡೆ ಅವರ ಮಾಲೀಕತ್ವದ ತಂಡ ಅತ್ಯುತ್ತಮ ಆಟದ ಮೂಲಕ ಸೆಮಿ ಫೈನಲ್ ನಲ್ಲಿ ಜಯ ಕೈ ಚೆಲ್ಲಿತು. ಎಲ್ಲಾ ತಂಡಗಳು ಶಿಸ್ತಿನ ಆಟದ ಮೂಲಕ ಗಮನ ಸೆಳೆದವು. ಸಮಾಜದ ರಾಜಕೀಯ, ಧಾರ್ಮಿಕ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.

ಯುವಕರ ಅತ್ಯುತ್ತಮ ಆಯೋಜನೆ

ಆರ್ಯ ಈಡಿಗ ಯೂತ್ ಕಮಿಟಿ ಬೆಂಗಳೂರು ಇದರ ಪ್ರಮುಖರಾದ ಸಂತೋಷ, ನೂತನ್, ಪ್ರಶಾಂತ್, ಗಿರೀಶ್, ಭರತ್, ನವೀನ್, ಧೀರಜ್ ಸೇರಿ ಅನೇಕರು ಈ ಟೂರ್ನಿಗಾಗಿ ಶ್ರಮಿಸಿದ್ದರು.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ

ಅಡಿಕೆ ದರ
05-03-2024
ಸರಕು 45159 83610
ಬೆಟ್ಟೆ 40069 54559
ರಾಶಿ 26009 48536
ಗೊರಬಲು 16009 36099

Categories
ಬೆಂಗಳೂರು ರಾಜ್ಯ

ರಾಜ್ಯ ಸರ್ಕಾರಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ.!

ರಾಜ್ಯ ಸರ್ಕಾರಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ.!
– ತನಿಖೆ ಆರಂಭಿಸಿದ ಅಧಿಕಾರಿಗಳು

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬಾಂಬ್ ಬೆದರಿಕೆ ಹಾಕುವ ಇಮೇಲ್ ಬಂದಿದೆ.ಇಮೇಲ್ ಮೂಲಕ ಬಂದ ಬೆದರಿಕೆ ನಿರ್ದಿಷ್ಟವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸೇರಿದಂತೆ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿವೆ. ವರದಿಗಳ ಪ್ರಕಾರ, ಶಾಹಿದ್ ಖಾನ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಕಳುಹಿಸಿದ್ದಾರೆಂದು ಹೇಳಲಾದ ಬೆದರಿಕೆ ಇಮೇಲ್ಗಳು ಶನಿವಾರ ಮಧ್ಯಾಹ್ನ 2: 48 ಕ್ಕೆ ನಗರದಲ್ಲಿ ಸಂಭವಿಸಲಿರುವ ಬಾಂಬ್ ಸ್ಫೋಟಗಳ ಬಗ್ಗೆ ಎಚ್ಚರಿಕೆ ನೀಡಿವೆ. ಬಸ್ಸುಗಳು, ರೈಲುಗಳು, ದೇವಾಲಯಗಳು ಮತ್ತು ಹೋಟೆಲ್ಗಳಲ್ಲಿ ಮತ್ತು ಅಂಬಾರಿ ಉತ್ಸವ ಉತ್ಸವಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಹಾಕಲಾಗಿದೆ.

ಬೆದರಿಕೆಗಳನ್ನು ಸ್ವೀಕರಿಸಿದ ನಂತರ ಅಧಿಕಾರಿಗಳು ಕ್ರಮ ಕೈಗೊಂಡರು, ಸೈಬ‌ರ್ ಅಪರಾಧ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಿಸಿದರು ಮತ್ತು ತಕ್ಷಣದ ತನಿಖೆಯನ್ನು ಪ್ರಾರಂಭಿಸಿದರು. ವಿಶೇಷವಾಗಿ ಕಳವಳಕಾರಿ ಸಂಗತಿಯೆಂದರೆ, ಬೆದರಿಕೆ ಇಮೇಲ್ಗಳು ಎಫ್‌ಐಆರ್ನಲ್ಲಿಯೇ ವಿವರಿಸಲಾದ ಸ್ಫೋಟಕ ಅಂಶಗಳನ್ನು ಉಲ್ಲೇಖಿಸಿವೆ, ಇದು ಮಾಹಿತಿಯ ಮೂಲದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಸರಣಿ ಬಾಂಬ್ ಬೆದರಿಕೆಗಳು ಬಂದ ನಂತರ ಕರ್ನಾಟಕದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಇಮೇಲ್ ಮೂಲಕ ಕಳುಹಿಸಲಾದ ಬೆದರಿಕೆಗಳಿಂದಾಗಿ ಕಾನೂನು ಜಾರಿ ಸಂಸ್ಥೆಗಳಿಂದ ತನಿಖೆ ಶುರುವಾಗಿವೆ, ಅವರು ಈಗ ದುಷ್ಕರ್ಮಿಗಳನ್ನು ಗುರುತಿಸಲು ಸಮಗ್ರ ತನಿಖೆ ನಡೆಸುತ್ತಿದ್ದಾರೆ.