Categories
ತೀರ್ಥಹಳ್ಳಿ

ಹುಂಚದಕಟ್ಟೆಯಿಂದ ಅಯೋಧ್ಯೆಗೆ ಹೊರಟ ಭಕ್ತರು!

ಹುಂಚದಕಟ್ಟೆಯಿಂದ ಅಯೋಧ್ಯೆಗೆ ಹೊರಟ ಭಕ್ತರು!
– ತೀರ್ಥಹಳ್ಳಿಯಿಂದ 52 ಜನರ ತಂಡ ಪ್ರಯಾಣ
– ಹುಂಚದಕಟ್ಟೆ ಗ್ರಾಮಸ್ಥರಿಂದ ಶುಭ ಹಾರೈಕೆ

NAMMUR EXPRESS NEWS
ತೀರ್ಥಹಳ್ಳಿ: ಭಾರತದ ಉತ್ತರ ಪ್ರದೇಶದ ಅಯೋದ್ಯೆ ಶ್ರೀ ರಾಮನ ಜನ್ಮ ಸ್ಥಳದಲ್ಲಿ ಶಿಲಾನ್ಯಾಸಗೊಂಡಿರುವ ಶ್ರೀ ರಾಮನ ಪ್ರತಿರೂಪ ರಾಮ ಲಲ್ಲಾ ದೇವರ ಪ್ರಾಣ ಪ್ರತಿಷ್ಠಾಪನೆ ಪವಿತ್ರ ಸ್ಥಳಕ್ಕೆ ಹುಂಚದಕಟ್ಟೆಯ ಪ್ರಮುಖರು ತೆರಳಿದ್ದಾರೆ. ಹುಂಚದಕಟ್ಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಹೆಚ್.ಆರ್.ರಾಘವೇಂದ್ರ, ಉದ್ಯಮಿಗಳಾದ ಶಶಿಧರ್, ಗಿರೀಶ್, ರಾಜು, ಶರತ್ ಕೋಣಂದೂರು ಸೇರಿ ತೀರ್ಥಹಳ್ಳಿಯಿಂದ 52 ಜನರ ತಂಡ ಪ್ರಯಾಣ ಬೆಳೆಸಿದ್ದು, ಇವರ ಪ್ರಯಾಣ ಸುಖಕರವಾಗಿರಲಿ ಎಂದು ಹುಂಚದಕಟ್ಟೆ ಗ್ರಾಮಸ್ಥರು ಶುಭ ಕೋರಿದ್ದಾರೆ.

Categories
ತೀರ್ಥಹಳ್ಳಿ

ಖೋ ಖೋ ಪಂದ್ಯಾವಳಿಗೆ ಸಿದ್ಧಗೊಳ್ಳುತ್ತಿರುವ ಗ್ರೌಂಡ್!

ಖೋ ಖೋ ಪಂದ್ಯಾವಳಿಗೆ ಸಿದ್ಧಗೊಳ್ಳುತ್ತಿರುವ ಗ್ರೌಂಡ್!
– ತೀರ್ಥಹಳ್ಳಿಯ ಮಾರಿಕಾಂಬಾ ಜಾತ್ರೆಗೆ ರಂಗು
– ಕುರಿ ಮೇಳ, ನಾಟಿ ಕೋಳಿ ಮೇಳ ಸೇರಿದಂತೆ ಹಲವು ಝಲಕ್

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಪ್ರಸಿದ್ಧ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು. ಮಾ.12 ರಿಂದ 19 ರವರೆಗೆ ವಿಶೇಷ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ಈ ಬಾರಿ ಮಾರಿಕಾಂಬಾ ಜಾತ್ರೆ ನಡೆಸಲಾಗುವುದು. ತೀರ್ಥಹಳ್ಳಿ ತಾಲೂಕಿನ ಕ್ರೀಡ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಮಾರಿಕಾಂಬ ಜಾತ್ರೆಯ ಪ್ರಯುಕ್ತ ರಾಷ್ಟ್ರಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ ಖೋ ಪಂದ್ಯಾವಳಿ ನಡೆಸಲಾಗುವುದು. ಭಾರತದ ಕ್ರೀಡಾ ನಕಾಶೆಯಲ್ಲಿಯೇ ತೀರ್ಥಹಳ್ಳಿಯ ಹೆಸರನ್ನು ರಾರಾಜಿಸುವಂತೆ ಮಾಡುವ ಐತಿಹಾಸಿಕ ಹಾಗೂ ಭಾವನಾತ್ಮಕ ಖೋ ಖೋ ಪಂದ್ಯಾವಳಿಯನ್ನು ನಡೆಸಲು ಗ್ರೌಂಡ್ ಸಿದ್ದ ಮಾಡಲಾಗುತ್ತಿದೆ.

ದಿನನಿತ್ಯ ಗ್ರೌಂಡ್ ಕೆಲಸ ನಡೆಯುತ್ತಿದೆ. ಇದರ ಜೊತೆಗೆ ಈ ಬಾರಿ ಮಹಿಳೆಯರಿಗೆ ಶಾಪಿಂಗ್ ಐಟಂಸ್ ,ಮಕ್ಕಳ ಆಟೋಟ, ಗಿಫ್ಟ್ ಐಟಂಸ್, ಪೆಟ್ ಶಾಪ್ ಹಾಗೂ ವಿಶೇಷವಾಗಿ ಕುರಿ ಮೇಳ, ನಾಟಿ ಕೋಳಿ ಮೇಳ ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಈ ಬಾರಿ ಮಾರಿಕಾಂಬ ಜಾತ್ರೆಗೆ ಏರ್ಪಡಿಸಿದೆ. ಬೆಳಗ್ಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಸತತ ಎಂಟು ದಿನವೂ ಅನ್ನಸಂತರ್ಪಣ ಕಾರ್ಯ ನಡೆಯಲಿದೆ. ಒಟ್ಟಿನಲ್ಲಿ ಈ ಬಾರಿಯ ತೀರ್ಥಹಳ್ಳಿ ಮಾರಿಕಾಂಬ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Categories
ಕರಾವಳಿ ಮಂಗಳೂರು

ಮಂಗಳೂರಿನ ಈಶಿಕಾ ಶೆಟ್ಟಿ ಸೌಂದರ್ಯ ಸ್ಪರ್ಧೆಯಲ್ಲಿ ವಿನ್!

ಮಂಗಳೂರಿನ ಈಶಿಕಾ ಶೆಟ್ಟಿ ಸೌಂದರ್ಯ ಸ್ಪರ್ಧೆಯಲ್ಲಿ ವಿನ್!
– ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ 2024’ ಪ್ರಶಸ್ತಿ
– ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಿ ಈಶಿಕಾ!

NAMMUR EXPRESS NEWS
ಮಂಗಳೂರು: ದೆಹಲಿಯಲ್ಲಿ ನಡೆದ “ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಷಿಯಾನ 2024” ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಈಶಿಕಾ ಶೆಟ್ಟಿ “ಮಿಸ್‌ ಟೀನ್‌ ಗ್ಲೋಬಲ್‌ ವರ್ಲ್ಡ್‌ ಇಂಡಿಯಾ ಓಷಿಯಾನಿಯಾ-2024” ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ದೆಹಲಿಯ ಟಾಲಕಟೋರ ಸ್ಟೇಡಿಯಂನಲ್ಲಿ ಫೆ.27 ರಂದು ನಡೆದ ಸ್ಪರ್ಧೆಯಲ್ಲಿ ದೇಶದ ಒಟ್ಟು 65 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಿ ಈಶಿಕಾ. ಈಕೆ 2023 ರಲ್ಲಿ “ಮಿಸ್ ಟೀನ್ ಮಂಗಳೂರು” ಆಗಿ, 2023 ರಲ್ಲಿ “ಮಿಸ್ ಟೀನ್ ಕರ್ನಾಟಕ” ಆಗಿ ಆಯ್ಕೆಯಾಗಿದ್ದರು.

ಗ್ಲೋಬಲ್ ಇಂಡಿಯಾ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಮತ್ತು ಅಲಿ ಶರ್ಮಾ ವತಿಯಿಂದ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾವೂರಿನ ಶಿವನಗರದ ನಿವಾಸಿ, ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿರುವ ಶರತ್ ಕುಮಾರ್ ಶೆಟ್ಟಿ ಹಾಗೂ ಶ್ವೇತಾ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಇವರು ಶಾರದಾ ವಿದ್ಯಾಲಯ ಮತ್ತು ಬೆಸೆಂಟ್ ಕಾಲೇಜ್‌ನಲ್ಲಿ ಶಿಕ್ಷಣ ಮುಗಿಸಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪದವಿ ಓದುತ್ತಿದ್ದಾರೆ. ತಮಗೆ ಹೆತ್ತವರು ನೀಡಿದ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಸಣ್ಣಂದಿನಿಂದಲೇ ನಾಟಕದಲ್ಲಿ‌‌ ಅಭಿನಯ ಮತ್ತು ಮಾಡೆಲಿಂಗ್‌ ನಲ್ಲಿ ತುಂಬಾ ಆಸಕ್ತಿ ಇತ್ತು. ಈಗ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ ಈಶಿಕಾ. ತುಳುನಾಡಿನ ಈಶಿಕಾ ಪ್ರಶಸ್ತಿ ಗೆದ್ದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

Categories
ಕರಾವಳಿ ಚಿಕ್ಕಮಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಮಂಗನ ಕಾಯಲೆಗೆ ಮತ್ತೆರಡು ಬಲಿ!

ಮಂಗನ ಕಾಯಲೆಗೆ ಮತ್ತೆರಡು ಬಲಿ!
– ಮಲೆನಾಡು, ಕರಾವಳಿಯಲ್ಲಿ ಅಲರ್ಟ್
– ಬಿಸಿಲು ಹೆಚ್ಚಾಗುತ್ತಿದ್ದಂತೆ ಹೆಚ್ಚಿದ ಮಂಗನ ಕಾಯಲೆ
– ಮಂಗನ ಕಾಯಲೆ ಹುಷಾರ್ ಹುಷಾರ್…

NAMMUR EXPRESS NEWS
ಬಿಸಿಲು ಹೆಚ್ಚಾಗುತ್ತಿದ್ದಂತೆ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಾಗುತ್ತಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ಮೂರು ಜಿಲ್ಲೆಯಲ್ಲಿ‌ ಇತ್ತೀಚಿಗೆ ಎರಡು ಸಾವಾಗಿದೆ.‌ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಂಗನ ಕಾಯಲೆ ಹೆಚ್ಚಾಗಿದ್ದು, ಎಲ್ಲೆಡೆ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೆ.ಎಫ್.ಡಿ‌ ಹೆಲ್ತ್ ಬುಲಿಟಿನ್ ಮಾತ್ರ ಕಾಣೆಯಾಗಿದೆ. ಕೆಎಫ್ ಡಿಗೆ ಮೂರು ಜಿಲ್ಲೆಯಲ್ಲಿ 43 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಸಲಾಗಿದೆ. ಎರಡು ಪಾಸಿಟಿವ್ ಪತ್ತೆಯಾಗಿದ್ದು, ಎರಡು ಸಾವು ಕಂಡುಬಂದಿದೆ.

ಚಿಕ್ಕಮಗಳೂರು ಮತ್ತು ಶಿರಸಿ ಜಿಲ್ಲೆಯಲ್ಲಿ ಎರಡು ಪಾಸಿಟಿವ್ ಕಂಡು ಬಂದಿದ್ದು, ಎರಡು ಸಾವು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಕಾಯಿಲೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಸಿದ್ಧತೆಗೊಂಡಿದೆ. ಮೂರು ಜಿಲ್ಲೆಯಿಂದ ಇದುವರೆಗೂ ಕೆಎಫ್ ಡಿ ಸಾವು ಇದುವರೆಗೂ 8 ಕ್ಕೆ ಏರಿಕೆಯಾಗಿದೆ. ಶಿವಮೊಗ್ಗ 1, ಚಿಕ್ಕಮಗಳೂರಿನಲ್ಲಿ 3, ಶಿರಸಿಯಲ್ಲಿ 4 ಸಾವಾಗಿದೆ.

Categories
ಬೆಂಗಳೂರು ರಾಜ್ಯ

ಡಿಗ್ರಿ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ

ಡಿಗ್ರಿ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ
– ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
– ಅರ್ಹತೆ ಆಧರಿಸಿ 8 ಸಾವಿರ ರು.ವರೆಗೂ ಏರಿಕೆ

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಮತ್ತು ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಕಿರಿಯ ತಾಂತ್ರಿಕ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರಿಗೆ ಅವರ ಸೇವಾವಧಿ ಹಾಗೂ ಶೈಕ್ಷಣಿಕ ಅರ್ಹತೆ ಆಧರಿಸಿ ಕನಿಷ್ಠ 5 ಸಾವಿರರು.ನಿಂದ ಗರಿಷ್ಠಃ ಸಾವಿರ ರು.ವರೆಗೆ ವೇತನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿಂದೆ ನೀಡಿದ್ದ ಭರವಸೆಯಂತೆ ಎಲ್ಲ ಅತಿಥಿ ಉಪನ್ಯಾಸಕರಿಗೂ ತಲಾ 5 ಲಕ್ಷ ರು. ಆರೋಗ್ಯ ವಿಮಾ ಸೌಲಭ್ಯ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಮೀರಿದ ನಂತರ ಭದ್ರತಾ ರೂಪದಲ್ಲಿ ವಾರ್ಷಿಕ 50 ಸಾವಿರ ರು. ನಂತರ ಗರಿಷ್ಠ 5 ಲಕ್ಷ ರು.ಗಳ ಇಡುಗಂಟು ಮಂಜೂರು ಮಾಡಲು ಉನ್ನತ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು ಆದೇಶಿಸಿವೆ.

ಆದೇಶಾನುಸಾರ ಸೇವಾವಧಿ ಮತ್ತು ವಿದ್ಯಾರ್ಹತೆ ಆಧಾರದಲ್ಲಿ ಕ್ರಮವಾಗಿ 5, 6,7 ಮತ್ತು8 ಸಾವಿರದಂತೆ ನಾಲ್ಕು ರೀತಿಯಲ್ಲಿ ವೇತನ ಹೆಚ್ಚಿಸಲಾಗಿದೆ. ಪದವಿ ಕಾಲೇಜುಗಳಲ್ಲಿ 5 ವರ್ಷಕ್ಕಿಂತ ಕಡಿಮೆ ಸೇವಾವಧಿ ಸಲ್ಲಿಸಿದ್ದು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ ಮಾಸಿಕ ಗೌರವ ಧನ 35 ಸಾವಿರರು., ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 31 ಸಾವಿರ ರು., 5ರಿಂದ 10 ವರ್ಷಗಳ ಕಾಲ ಸೇವಾವಧಿ ಸಲ್ಲಿಸಿರುವವರ ಪೈಕಿ ಯುಜಿಸಿ ವಿದ್ಯಾರ್ಹತೆ ಇರುವವರಿಗೆ 38 ಸಾವಿರ ರು., ಯುಜಿಸಿ ವಿದ್ಯಾರ್ಹತೆ ಇಲ್ಲದವ ರಿಗೆ 34 ಸಾವಿರ ರು., 10ರಿಂದ 15 ವರ್ಷ ಸೇವಾವಧಿ ಸಲ್ಲಿಸಿರುವವರಲ್ಲಿ ಯುಜಿಸಿ ವಿದ್ಯಾರ್ಹತೆಯುಳ್ಳವರಿಗೆ 39 ಸಾವಿರ ರು., ಯುಜಿಸಿ ವಿದ್ಯಾರ್ಹತೆ ಇಲ್ಲದವರಿಗೆ 35 ಸಾವಿರ ರು., 15 ವರ್ಷಕ್ಕಿಂತ ಹೆಚ್ಚು ಕಾಲಸೇವೆಸಲ್ಲಿಸಿದ್ದು ಯುಜಿಸಿ ವಿದ್ಯಾರ್ಹತೆ ಇರುವವರಿಗೆ 40 ಸಾವಿರ ರು. ಹಾಗೂ ಯುಜಿಸಿ ವಿದ್ಯಾರ್ಹತೆ ಇಲ್ಲದವರಿಗೆ 36 ಸಾವಿರ ರು.ಗಳಿಗೆ ವೇತನ ಹೆಚ್ಚಳವಾಗಲಿದೆ.

Categories
ಬೆಂಗಳೂರು ರಾಜ್ಯ

ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಕ್ಯಾನ್ಸ‌ರ್..!

ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಕ್ಯಾನ್ಸ‌ರ್..!
– ಆದಿತ್ಯ-ಎಲ್1 ಉಡಾವಣೆ ದಿನವೇ ಪತ್ತೆ
– ಸಂದರ್ಶನದಲ್ಲಿ ಬಹಿರಂಗ

NAMMUR EXPRESS NEWS
ಬೆಂಗಳೂರು: ಇಸ್ರೋ ಸಂಸ್ಥೆ ಮಾತ್ರವಲ್ಲ ಇಡೀ ದೇಶವೇ ಸಂಭ್ರಮದಲ್ಲಿ ಇದ್ದ ದಿನವೇ ಇಸ್ರೋ ಮುಖ್ಯಸ್ಥರಿಗೆ ಆಘಾತಕಾರಿ ಸುದ್ದಿ ಕಾದಿತ್ತು. ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್ – 1 ಯೋಜನೆಯ ಉಪಗ್ರಹವನ್ನು ಹೊತ್ತ ರಾಕೆಟ್ ಗಗನಕ್ಕೆ ಚಿಮ್ಮಿದ ದಿನವೇ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್ ಅವರಿಗೆ ಕ್ಯಾನ್ಸ‌ರ್ ದೃಢಪಟ್ಟಿತ್ತು. 2023ರ ಆರಂಭದಿಂದಲೇ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಚಂದ್ರಯಾನ – 3 ಯೋಜನೆ ಅನ್ವಯ ರಾಕೆಟ್ ಉಡಾವಣೆಗೊಂಡ ಹೊತ್ತಲ್ಲೂ ಸೋಮನಾಥ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಅದು ಮಾರಣಾಂತಿಕ ಕ್ಯಾನ್ಸ‌ರ್ ಇರಬಹುದು ಅನ್ನೋ ಕಲ್ಪನೆಯೇ ಇರಲಿಲ್ಲ. ಬಳಿಕ ನಡೆದ ಆರೋಗ್ಯ ತಪಾಸಣೆಗಳ ವೇಳೆ ಸೋಮನಾಥ್ ಅವರ ಹೊಟ್ಟೆಯಲ್ಲಿ ಗಡ್ಡೆ ರೀತಿ ಬೆಳವಣಿಗೆ ಪತ್ತೆಯಾಗಿದ್ದು, ಇದಕ್ಕೆ ಶಸ್ತ್ರ ಚಿಕಿತ್ಸೆ ಹಾಗೂ ಕಿಮೋ ಥೆರಪಿ ಅಗತ್ಯತೆ ಇದೆ ಎಂದು ವೈದ್ಯರು ಹೇಳಿದ್ದರು.

ಈ ಕುರಿತಾಗಿ ಖಾಸಗಿ ಮಾಧ್ಯಮ ಸಂಸ್ಥೆಯ ಸಂದರ್ಶನವೊಂದಲ್ಲಿ ಇದೇ ಮೊದಲ ಬಾರಿಗೆ ಮಾಹಿತಿ ನೀಡಿರುವ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್, ತಮ್ಮ ಆರೋಗ್ಯ ಸಮಸ್ಯೆಯನ್ನು ಸುದೀರ್ಘವಾಗಿ ವಿವರಿಸಿದ್ದಾರೆ. ಸೂರ್ಯನ ಅಧ್ಯಯನಕ್ಕಾಗಿ ರೂಪಿಸಲಾಗಿದ್ದ ಆದಿತ್ಯ – ಎಲ್ 1 ಉಪಗ್ರಹವನ್ನು ಹೊತ್ತ ರಾಕೆಟ್ ಗಗನಕ್ಕೆ ಚಿಮ್ಮಿದ ದಿನವೇ ನಾನು ಸ್ಕ್ಯಾನಿಂಗ್‌ ಮಾಡಿಸಿಕೊಂಡಿದ್ದೆ. ಈ ವೇಳೆ ನನ್ನ ಹೊಟ್ಟೆಯಲ್ಲಿ ಅಸಹಜ ಬೆಳವಣಿಗೆ ಕಂಡು ಬಂದಿತ್ತು. ಆದಿತ್ಯ ನೌಕೆ ಉಡಾವಣೆಯಾದ ನಂತರ ನಾನು ಚೆನ್ನೈಗೆ ತೆರಳಿ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಿಸಿಕೊಂಡೆ. ಈ ವೇಳೆ ನನಗೆ ಇರುವ ಸಮಸ್ಯೆ ದೃಢವಾಯ್ತು. ಇದಾದ ಬಳಿಕ ನಾನು ವಿಶ್ರಾಂತಿ ಪಡೆದೆ ಹಾಗೂ ಹಲವು ಪರೀಕ್ಷೆಗಳನ್ನು ಮಾಡಿಸಿಕೊಂಡೆ ಎಂದು ಸೋಮನಾಥ್ ವಿವರಿಸಿದ್ದಾರೆ. ಆದಿತ್ಯ – ಎಲ್ 1 ಉಪಗ್ರಹ ಉಡಾವಣೆಯಾದ ಒಂದು ತಿಂಗಳ ಬಳಿಕ ವೈದ್ಯರ ಸಲಹೆ ಮೇರೆಗೆ ಸೋಮನಾಥ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾದರು.

ಆಪರೇಷನ್ ಬಳಿಕ ಕಿಮೋಥೆರಪಿ ಚಿಕಿತ್ಸೆಯನ್ನೂ ಸೋಮನಾಥ್ ಅವರು ಪಡೆದಿದ್ದಾರೆ. 2023ರ ಸೆಪ್ಟೆಂಬರ್ 2 ರಂದು ಆದಿತ್ಯ ಎಲ್ 1 ಉಪಗ್ರಹವನ್ನು ಹೊತ್ತ ರಾಕೆಟ್ ಗಗನಕ್ಕೆ ಚಿಮ್ಮಿತ್ತು. ಇದು ಭಾರತದ ಮೊಟ್ಟ ಮೊದಲ ಸೂರ್ಯ ಅಧ್ಯಯನ ಯೋಜನೆ. ಈ ಯೋಜನೆ ಅಡಿ ಉಪಗ್ರಹ ಎಲ್ 1 ಪಾಯಿಂಟ್ ಅನ್ನು ಜನವರಿ ವೇಳೆಗೆ ತಲುಪಿತು. ಭೂಮಿಯಿಂದ 1.5 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿ ಉಪಗ್ರಹ ನೆಲೆಗೊಂಡಿದೆ. ಉಪಗ್ರಹದ ಒಳಗೆ ಇರುವ 7 ಪೇಲೋಡ್‌ಗಳು ನಿರಂತರವಾಗಿ ಸೂರ್ಯನ ಅಧ್ಯಯನದಲ್ಲಿ ತೊಡಗಿವೆ. ಚಂದ್ರಯಾನ, ಆದಿತ್ಯ ಯಾನ, ಗಗನ ಯಾನ ಹಾಗೂ ಶುಕ್ರಯಾನ ಸೇರಿದಂತೆ ಹಲವು ಯೋಜನೆಗಳು ಎಸ್. ಸೋಮನಾಥ್‌ ಅವರ ಅಧಿಕಾರಾವಧಿಯಲ್ಲಿ ವೇಗ ಪಡೆದುಕೊಂಡಿವೆ. ಈ ಹೊತ್ತಲ್ಲೇ ಇಸ್ರೋ ಮುಖ್ಯಸ್ಥರ ಅನಾರೋಗ್ಯದ ಕುರಿತ ಸುದ್ದಿ ಬೇಸರ ತರಿಸುವಂತಿದೆ.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಅಂಚೆ ಇಲಾಖೆಯಲ್ಲಿ 55,000 ಉದ್ಯೋಗ!

ಅಂಚೆ ಇಲಾಖೆಯಲ್ಲಿ 55,000 ಉದ್ಯೋಗ!
– 10ನೇ ಕ್ಲಾಸ್ ಆದವರಿಗೆ 81,000 ರೂ.ವರೆಗೆ ವೇತನ
– ಯಾರಿಗೆ ಸಿಗುತ್ತೆ ಕೆಲಸ…!.. ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ 55,000 ಪೋಸ್ಟ್ ಮ್ಯಾನ್ ಮತ್ತು ಇತರ ವರ್ಗಗಳ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು 81,000 ರೂ.ವರೆಗೆ ವೇತನ ಪಡೆಯುವ ಅವಕಾಶವಿದೆ. ಅಂಚೆ ಇಲಾಖೆ ದೂರಸಂಪರ್ಕ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದಾದ್ಯಂತ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿಯಿದ್ದೆ ಹಾಗಾಗಿ ರಾಜ್ಯವಾರು ಭಾರತದಾದ್ಯಂತ ವಾರ್ಷಿಕವಾಗಿ 50,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ರೀತಿಯಾಗಿ, 2024ರ ನೇಮಕಾತಿ ವಿವರಗಳನ್ನು ಬಿಡುಗಡೆ ಮಾಡಲಾಗಿದೆ. 2024 ರಲ್ಲಿ ಅಂಚೆ ಇಲಾಖೆಯಲ್ಲಿ ಒಟ್ಟು 5 ವಿಭಾಗಗಳಿಗೆ ನೇಮಕಾತಿ ನಡೆಸಲಾಗುವುದು ಅವುಗಳೆಂದರೆ ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್ ಮ್ಯಾನ್, ಮೇಲ್ ಕಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಎಂಬ 5 ವಿಭಾಗಗಳಲ್ಲಿ

ವಯೋಮಿತಿಯ ವಿವರ ಇಲ್ಲಿದೆ :

ಒಟ್ಟು 55,000 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ತಿಂಗಳು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ 18 ರಿಂದ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. 18 ರಿಂದ 25 ವರ್ಷ ವಯಸ್ಸಿನ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಎಸ್ಸಿ/ಎಸ್ಪಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಐಕಾನ್ ಬಿಲ್ಡಿಂಗ್: ಜ್ಞಾನೇಂದ್ರ ಅವರೇ ಫೋಕಸ್!

ತೀರ್ಥಹಳ್ಳಿ ಐಕಾನ್ ಬಿಲ್ಡಿಂಗ್: ಜ್ಞಾನೇಂದ್ರ ಅವರೇ ಫೋಕಸ್!
– ಜ್ಞಾನೇಂದ್ರ 5 ಬಾರಿ ಗೆದ್ದು ಏನು ಮಾಡಿದ ಅಂತ ಅಭಿವೃದ್ಧಿ ಹೇಳುತ್ತೆ..!
– ರಾಜಕೀಯ ಮಾಡಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ

ತೀರ್ಥಹಳ್ಳಿ: 13.5 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ ತಾಲೂಕು ಪಂಚಾಯತ್ ಕಟ್ಟಡ ಸೋಮವಾರ ಉದ್ಘಾಟನೆಗೊಂಡಿದ್ದು,
ಶಾಸಕ ಆರಗ ಜ್ಞಾನೇಂದ್ರ ಇಡೀ ಕಾರ್ಯಕ್ರಮದ ಫೋಕಸ್ ಆದರು. ತಮ್ಮ ಹಠ ಬಿಡದ ಛಲದಿಂದ ಎಲ್ಲಾ ಇಲಾಖೆ, ಸಚಿವರ ಸಹಾಯ ಪಡೆದು ಈ ಕಟ್ಟಡ ತೀರ್ಥಹಳ್ಳಿಯ ಐಕಾನಿಕ್ ಕಟ್ಟಡವಾಗಿ ಮಾಡಿದ್ದಾರೆ. ಈ ಕಟ್ಟಡ ಉದ್ಘಾಟನೆ ವೇಳೆ ಸಚಿವ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ, ಎಂಎಡಿಬಿ ಅಧ್ಯಕ್ಷರಾದ ಮಂಜುನಾಥ ಗೌಡ, ಎಂಎಲ್ಸಿ ರುದ್ರೇಗೌಡ, ಮಾಜಿ ಶಾಸಕ ಕಡಿದಾಳ್ ದಿವಾಕರ್, ಅಧಿಕಾರಿಗಳಾದ ಇಒ ಶೈಲಾ, ಪ್ರಮುಖರಾದ ಗಣೇಶ್, ವಿಜಯಕುಮಾರ್ ಇತರರು ಇದ್ದರು.

ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅಂದು ತಾಲೂಕು ಪಂಚಾಯತ್ ಕಟ್ಟಡ ಕಳಚಿಬಿತ್ತು. ಆಗ ನನಗೆ ನೋವಾಯಿತು. ಅಂದು ಗುಜ್ಜುಕೊಟ್ಟು ನಿಲ್ಲಿಸಿದ್ದ ಫೋಟೋ ಅಂದು ಸಿಎಂ ಯಡಿಯೂರಪ್ಪ ಅವರಿಗೆ ಕೊಟ್ಟೆ. ಹೊಸ ಕಟ್ಟಡ ಆಗಲೇಬೇಕು ಎಂದೂ ಪತ್ರ ಕೊಟ್ಟೆ. 3 ಕೋಟಿ ಕೊಟ್ಟರು. ಕೋವಿಡ್ ಬಂತು ಆಗ ಏನು ಮಾಡಲು ಆಗಲಿಲ್ಲ. ಬಳಿಕ 10.5 ಕೋಟಿ ಲೋಕೋಪಯೋಗಿ ಇಲಾಖೆಯಿಂದ ತಂದೆ ಇದು ನನ್ನ ಕನಸಿನ ಕಟ್ಟಡ ಮಾತ್ರ ಅಲ್ಲ, ತಾಲೂಕಿನ ಜನರ ಕನಸಿನ ಕಟ್ಟಡ ಎಂದರು.

ಬಿಜೆಪಿ ನಾಯಕ ದಿ.ಡಾ. ವಿ. ಎಸ್. ಆಚಾರ್ಯ ಕಟ್ಟಿಸಿದ್ದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಅಷ್ಟು ಚೆನ್ನಾಗಿತ್ತು. ನನಗೂ ಅಂತಹ ಕಟ್ಟಡ ಕಟ್ಟಬೇಕು ಎಂಬ ಅಸೆ ಇತ್ತು. ಇಂಜಿನಿಯರ್ ಜತೆ ಚರ್ಚೆ ಮಾಡಿ ಇಂತಹ ಪ್ಲಾನ್ ಮಾಡಿದೆವು. ಈ ಭವ್ಯ ಕಟ್ಟಡ ತಲೆಯೆತ್ತಿದೆ. ಈಗ ಎಲ್ಲರೂ ಲಿಫ್ಟ್ ಬಳಕೆ ಮಾಡಬೇಡಿ. ಎಲ್ಲಾ ಮಹಡಿಯಲ್ಲೂ ಶೌಚಾಲಯ ಇದೆ. ಅತ್ಯುತ್ತಮ ಕಟ್ಟಡ. ಎಲ್ಲಾ ಅಧಿಕಾರಿಗಳಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದರು.

150 ಮಂದಿ ಸಿಬ್ಬಂದಿ ಸಂಭ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಮಾಜಿ ಶಾಸಕರಿಗೆ ಗೌರವಿಸುವ ಪ್ಲಾನ್ ಮಾಡಿದ್ದೆವು. ಕಿಮ್ಮನೆ ರತ್ನಾಕರ್ ಅವರು ಕೂಡ ಅನಿವಾರ್ಯ ಕಾರಣದಿಂದ ಬರಲಾಗಲಿಲ್ಲ. ರಾಜಕಾರಣದಲ್ಲಿ ತೀವ್ರ ವಯುಕ್ತಿಕ ಇಳಿಯಬಾರದು. ಸಂತೋಷದಿಂದ ಒಬ್ಬರು ಒಬ್ಬರು ನೋಡಿಕೊಳ್ಳಬೇಕು. ನನ್ನಗೂ ಹಿಂದಿನದು ಯೋಚನೆ ಮಾಡಿದ್ರೆ ನಾಚಿಕೆ ಆಗುತ್ತೆ.ನಾವು ದಾಯಾದಿಗಳಲ್ಲ, ನಾವೆಲ್ಲರೂ ಸೇರಿ ಕೆಲಸ ಮಾಡಬೇಕು. ಎಲ್ಲಾ ಶಾಸಕರನ್ನು ನೆನೆಯೋಣ. ಕಿಮ್ಮನೆ ಕೂಡ ಒಳ್ಳೆ ಕೆಲಸ ಮಾಡಿದ್ದಾರೆ. ಇದು ಜನರ ಸೌಧ. ಜನಪ್ರತಿನಿಧಿಗಳ ಸೌಧ. ತಾಲೂಕು ಪಂಚಾಯತ್ ಮ್ಯಾನೇಜರ್ ರಾಘವೇಂದ್ರ ನೇತೃತ್ವದಲ್ಲಿ ಎಲ್ಲರನ್ನು ಸತ್ಕಾರ ಮಾಡಲಾಗಿದೆ. ಯಾರನಾದ್ರೂ ಬಿಟ್ಟಿದ್ರೆ ಕ್ಷಮೆ ಯಾಚಿಸುತ್ತೇನೆ.

ಜ್ಞಾನೇಂದ್ರ ಏನು ಮಾಡಿದ ಅಂತ ಅಭಿವೃದ್ಧಿ ಹೇಳುತ್ತೆ…

5 ಬಾರಿ ಶಾಸಕರಾದ ಜ್ಞಾನೇಂದ್ರ ಏನು ಮಾಡಿದ. ಸೇತುವೆ, ರಸ್ತೆ, ಕಾಲೇಜು, ರಂಗ ಮಂದಿರ, ಈ ಕಟ್ಟಡ ಸೇರಿ ನೂರಾರು ಯೋಜನೆ, ಪಟ್ಟಣಕ್ಕೆ 24/7 ನೀರು, ಎಲ್ಲಾ ಕಡೆ ಕೆಲಸ ಆಗುತ್ತಿದೆ. ಭೀಮೇಶ್ವರ ಸಂಗಮದಲ್ಲಿ ಸ್ವಲ್ಪ ತೊಂದರೆ ಆಯಿತು. ಅಲಗೇಶ್ವರದಲ್ಲಿ ನೀರು ಎತ್ತಲ್ಲ. ವಾರಾಹಿ ಬ್ಯಾಕ್ ವಾಟರ್ ಭಾಗದಲ್ಲಿ ನೀರು ಎತ್ತಲು ನಾವು ಪ್ಲಾನ್ ಮಾಡಿದ್ದೇವೆ. 10 ಕೋಟಿ ಹೆಚ್ಚಾಗುತ್ತದೆ. ಅನಾವಶ್ಯಕ ಗೊಂದಲ ಸೃಷ್ಟಿ ಮಾಡಬೇಡಿ. ಕುಡಿಯುವ ನೀರು ಕೊಡುವ ಯೋಜನೆ. ಸುಮ್ಮನೆ ಗೊಂದಲ ಬೇಡ, ಯಾರಿಗೂ ತೊಂದರೆ ಆಗಲ್ಲ. ರೈತರು ಸಹಾಯ ಮಾಡಬೇಕು. ನಿಮಗೆ ಕೆಟ್ಟದಾಗಲ್ಲ. ಎಂದರು.

ಜನ ನನ್ನ ಕೈಬಿಡಲಿಲ್ಲ…ಅವರ ಸೇವೆ ಮಾಡ್ತೇವೆ…

ಜನ ನನ್ನ ಕೈ ಬಿಡಲಿಲ್ಲ. ಇಬ್ಬರು ಸೇರಿ ಕೆಲಸ ಮಾಡಿದ್ರು ನನಗೆ ಆಶೀರ್ವಾದ ಮಾಡಿದರು. ಜನರ ಹಿತಕ್ಕಾಗಿ ಕೆಲಸ ಮಾಡುವೆ. 2 ವರ್ಷ ಮಂತ್ರಿ ಆದಾಗ ನಾನು ಮಂತ್ರಿ ಆಗಿದ್ದಾಗ ಇಲಾಖೆ ಕೆಲಸ ಮಾಡಿದ್ದೇವೆ. ಎಲ್ಲಾ ಇಲಾಖೆ ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಪಕ್ಷ ಪಂಗಡ ಬಿಟ್ಟು ಅಭಿವೃದ್ಧಿ ಮಾಡಿದ್ದೇವೆ. ಗಡ್ಕರಿ ಅವರಿಗೆ ಆಗುಂಬೆ ಸುರಂಗ ಮಾರ್ಗ ಮನವಿ ಕೊಟ್ಟಿದ್ದೇವೆ. ಭಗವಂತ ಕೊಟ್ಟ ಅವಕಾಶ ತಾಲೂಕಿನ ಅಭಿವೃದ್ಧಿಗಾಗಿ. ನಿಮ್ಮೆಲರ ಹಾರೈಕೆ ಇರಲಿ. ತಾಲೂಕಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಲಿ ಎಂದು ಆಶಿಸಿದರು.

ಎಸಿಸಿ ಕೃಷ್ಣಮೂರ್ತಿ ಅವರಿಗೆ ಗೌರವ

ಕಟ್ಟಡವನ್ನು ಖ್ಯಾತ ಗುತ್ತಿಗೆದಾರರಾದ ಎಸಿಸಿ ಕೃಷ್ಣಮೂರ್ತಿ ಮಾಡಿದ್ದು ಅವರಿಗೆ ವೇದಿಕೆಯಲ್ಲಿ ಗಣ್ಯರು ಗೌರವಿಸಿದರು. ಜ್ಞಾನೇಂದ್ರ ತಮ್ಮ ಮಾತಲ್ಲಿ ಕಟ್ಟಡ ಚಂದ ಮಾಡುವ ಬಗ್ಗೆ ಅವರಿಗೆ ಪದೇ ಪದೇ ಎಚ್ಚರಿಕೆ ನೀಡಿದ್ದೇವೆ. ಈ ಕಟ್ಟಡ ನನಗೆ ಮತ್ತು ನಿನಗೆ ಹೊಸ ಇಮೇಜ್ ಕೊಡಲಿದೆ. ಉತ್ತಮ ಕಾಮಗಾರಿ ಮಾಡಿದ್ದಾರೆ. ಯಾವುದೇ ನೂನ್ಯತೆ ಇಲ್ಲ ಎಂದರು.

Categories
ತೀರ್ಥಹಳ್ಳಿ

ಕನಸು ನನಸಾಯಿತು.. ಹೊಸ ಕಟ್ಟಡ ಉದ್ಘಾಟನೆ ಆಯ್ತು!

ಕನಸು ನನಸಾಯಿತು.. ಹೊಸ ಕಟ್ಟಡ ಉದ್ಘಾಟನೆ ಆಯ್ತು!
– ಮಧು ಬಂಗಾರಪ್ಪ, ಆರಗ, ರಾಘವೇಂದ್ರ, ಆರ್. ಎಂ ಸೇರಿ ಗಣ್ಯರ ಸಮಾಗಮ
– ತೀರ್ಥಹಳ್ಳಿ ಜನರ ಕೆಲಸ ಇನ್ನು ಒಂದೇ ಕಟ್ಟಡದಲ್ಲಿ..!

NAMMUR EXPRESS NEWS
ತೀರ್ಥಹಳ್ಳಿ: 13.5 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ ತಾಲೂಕು ಪಂಚಾಯತ್ ಕಟ್ಟಡ ಸೋಮವಾರ ಶುಭ ಸಂಜೆ ಸಾವಿರಾರು ಸಮ್ಮುಖದಲ್ಲಿ ಗಣ್ಯರ ಸಮಾಗಮದಲ್ಲಿ ನೆರವೇರಿತು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಇಡೀ ತೀರ್ಥಹಳ್ಳಿಯ ಹೆಮ್ಮೆಯ ಕಾರ್ಯಕ್ರಮವಾಯಿತು. ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಮಾತನಾಡಿ, ತಾಲೂಕು ಪಂಚಾಯತ್ ಅತ್ಯಂತ ಉತ್ತಮ ಕಟ್ಟಡ. ಹೈಟೆಕ್ ಕಟ್ಟಡವಾಗಿದೆ. ಜಿಲ್ಲೆ ಅಭಿವೃದ್ಧಿ ಆಗುತ್ತಿದೆ. ಮೂಲಭೂತ ಸೌಲಭ್ಯ ಅಭಿವೃದ್ಧಿ ಆಗುತ್ತಿದೆ. ಮನೆ ಮನೆಗೆ ಜಲ ಜೀವನ್ ನೀರು ಕೊಡುತ್ತೇವೆ. ಗುತ್ತಿಗೆದಾರರು, ಅಧಿಕಾರಿಗಳು ಗುಣಮಟ್ಟದ ಕೆಲಸ ಮಾಡಬೇಕು. ತೀರ್ಥಹಳ್ಳಿ ಕ್ಷೇತ್ರಕ್ಕೆ ಕಳೆ ಬರುವ ಕೆಲಸ ಇದಾಗಿದೆ ಎಂದು ಬಣ್ಣಿಸಿದರು.

ತೀರ್ಥಹಳ್ಳಿ ನೆಲ್ಲಿಸರ 538 ಕೋಟಿ ಶಂಕು ಸ್ಥಾಪನೆ, 55 ಕೋಟಿ ಸೇತುವೆ, ಆಯನೂರು ರಿಪ್ಪಿನಪೇಟೆ ಕುಂದಾಪುರ ರಸ್ತೆಗೆ
163 ಕೋಟಿ ಹಣ ಸೇರಿ ಸಾವಿರಾರು ಕೋಟಿ ಅನುದಾನ ತಂದಿದ್ದೇವೆ. ಆಗುಂಬೆ ಸುರಂಗ ಮಾರ್ಗ ಯೋಜನೆ ಬಗ್ಗೆ ಬುಧವಾರ ದೆಹಲಿಯಲ್ಲಿ ಸಭೆ ನಡೆಯಲಿದೆ. ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 16 ಕಿಮಿ ಪೈಕಿ 10 ಕಿಮಿ ಸುರಂಗ, 5 ಕಿಮಿ ರಸ್ತೆ ಕಾಮಗಾರಿ ಪ್ರಸ್ತಾಪದಲ್ಲಿದೆ ಎಂದರು. ಎಂ. ಎಲ್ಸಿ.ರುದ್ರೇಗೌಡ ಮಾತನಾಡಿ, ಮಂಜುನಾಥ ಗೌಡ ಅವರಿಗೆ ಇಂದು ಆಯ್ಕೆ ಆಗಿದ್ದಾರೆ. 13 ವರ್ಷದಿಂದ ತೀರ್ಥಹಳ್ಳಿ ಅಭಿವೃದ್ಧಿ ಆಗುತ್ತಿದೆ. ಖುಷಿಯಾಗುತ್ತಿದೆ ಎಂದರು.

ಮಾಜಿ ಶಾಸಕ ಕಡಿದಾಳ್ ದಿವಾಕರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ತವರಿನ ಸನ್ಮಾನ ಖುಷಿ ತಂದಿದೆ. ಈ ಕಟ್ಟಡ ಈಗ ನಮಗೆ ಹೆಮ್ಮೆ. ತೀರ್ಥಹಳ್ಳಿಗೆ ಎರಡು ಐಕಾನ್ ಒಂದು ತುಂಗಾ ನದಿಗೆ ಕಟ್ಟಿರುವ ಸೇತುವೆ, ಎರಡನೆಯದೂ ಈ ತಾಲೂಕು ಪಂಚಾಯತ್ ಕಟ್ಟಡ. ಜನ ನೆಮ್ಮದಿಯಿಂದ ಕೆಲಸ ಮಾಡಿಸಿಕೊಳ್ಳಲಿ ಎಂದರು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಮಾತನಾಡಿ, ತೀರ್ಥಹಳ್ಳಿ ಪಟ್ಟಣ ಅಭಿವೃದ್ಧಿಯತ್ತ ಸಾಗುತ್ತಿದೆ. ಅದಕ್ಕೆ ಇವೆಲ್ಲ ಸಾಕ್ಷಿ. ತೀರ್ಥಹಳ್ಳಿ ಬೆಳೆಯುತ್ತಿದೆ. ಇನ್ನು ಸ್ವಚ್ಛ ಹಾಗೂ ಸುಂದರ ಪಟ್ಟಣ ಮಾಡುವ ಗುರಿ ನಮ್ಮೆಲ್ಲರ ಮೇಲಿದೆ. ಇಂತಹ ಸುಂದರ ಕ್ಷಣಕ್ಕೆ ನಾನು ಸಾಕ್ಷಿಯಾಗಿರುವುದಕ್ಕೆ ನನಗೆ ಹೆಮ್ಮೆ ಎಂದರು.

ತಾಲೂಕು ಪಂಚಾಯತ್ ಇಒ ಶೈಲಾ ಸ್ವಾಗತಿಸಿ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾದ ಆಶಾಲತಾ ಪ್ರಸ್ತಾವಿಕವಾಗಿ ಮಾತನಾಡಿದರು. ನಿರೂಪಣೆಯನ್ನು ಪ್ರವೀಣ್ ಅಕ್ಷರ ದಾಸೋಹ ನಿರ್ದೇಶಕರು ಮಾಡಿದರು.

ಜನರನ್ನು ಅಲೆಸಬೇಡಿ ಎಂದ ಮಂಜುನಾಥ್ ಗೌಡ!

ಎಂಎಡಿಬಿ ಅಧ್ಯಕ್ಷ ಡಾ. ಆರ್. ಎಂ.ಮಂಜುನಾಥ್ ಗೌಡ ಮಾತನಾಡಿ, ಹಳೆ ಕಟ್ಟಡ ಒಂದು ನೆನಪು, ಇತಿಹಾಸ. ಎಲ್ಲರ ಪ್ರಯತ್ನದಿಂದ ಒಂದೊಳ್ಳೆ ಕೆಲಸ ಆಗಿದೆ. ತಾಲೂಕು ಆಡಳಿತಕ್ಕೆ ಒಳ್ಳೆ ಸಂಕೇತ. ಜನರನ್ನು ಆ ಟೇಬಲ್ ಇಂದ ಈ ಟೇಬಲ್ ಅಲೆಸಬೇಡಿ. ಈಗ ಜನ. ಸ್ನೇಹಿಯಾಗಿ ಕೆಲಸ ಮಾಡಬೇಕು. ಯುವ ನಾಯಕ ಮಧು ಬಂಗಾರಪ್ಪ ಅವರು ಬಗರ್ ಹುಕುಂ ಯೋಜನೆಗೆ ಸಹಕಾರ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಅವಕಾಶ ಸಿಕ್ಕಿ ಈಗ ಮೊದಲ ಸಭೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.

ಬಗರ್ ಹುಕುಂ ನಾವು ಮಾಡೇ ಮಾಡ್ತೇವೆ…!

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ಉಸ್ತುವಾರಿ ಸಚಿವನಾಗಿ ಈ ಅದ್ಬುತ ಕಟ್ಟಡ ಉದ್ಘಾಟನೆ ಮಾಡಿರುವುದು ಸಂತಸ. ಚೆಂದ ಕಟ್ಟಡ ಮಾಡಿದರೆ ಸಾಲದು, ಇಲ್ಲಿ ಜನಪರ ಕೆಲಸ ಆಗಬೇಕು. ನಾನು ಅಭಿವೃದ್ಧಿ ಕೆಲಸಕ್ಕೆ ಸದಾ ಜತೆಯಾಗುತ್ತೇನೆ. ಮಕ್ಕಳ ಕೆಲಸ ದೇವರ ಕೆಲಸ. ಅಧಿಕಾರ ಕಷ್ಟ. ಆದರೆ ಈಗ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದರು.
ಮಕ್ಕಳ ಭವಿಷ್ಯ ಕಟ್ಟಲು ನಾವೆಲ್ಲ ಸಹಕಾರ ಮಾಡಬೇಕು. 44.5 ಸಾವಿರ ಕೋಟಿ ನಮ್ಮ ಸರ್ಕಾರ ಕೊಟ್ಟಿದೆ. ಶಾಲೆಗಳ ಅಭಿವೃದ್ಧಿಗಾಗಿ ನಾನು ಸದಾ ಬದ್ದ ಎಂದರು.

ಬಡವರ ಬಗ್ಗೆ ಏನಾದ್ರು ಹೇಳಿದ್ರೆ ಸಿದ್ದರಾಮಯ್ಯ ಕರಗುತ್ತಾರೆ. ಹಾಗಾಗಿ ಶಿಕ್ಷಣಕ್ಕಾಗಿ ಅನೇಕ ಯೋಜನೆ ತಂದಿದ್ದೇವೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಹೊಸ ಯೋಜನೆ ತರಲಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ಕೆಪಿಎಸ್ ಶಾಲೆ ಶುರು ಮಾಡುತ್ತೇವೆ. ಶಾಲಾ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ನೀಡುವ ನನ್ನ ಶಾಲೆ ಜವಾಬ್ದಾರಿ ಯೋಜನೆ ಚಾಲನೆ ನೀಡಲಾಗುವುದು ಎಂದರು.

ಗ್ಯಾರಂಟಿ ಯೋಜನೆಗಳು ಜನರ ಮನ ಸೆಳೆದಿವೆ. ಮಹಿಳೆಯರಿಗೆ ಶಕ್ತಿ ಬರಲು ಶಕ್ತಿ ಯೋಜನೆ ಕಾರಣವಾಗಿದೆ. ರಾಜ್ಯದ 83% ಮನೆಯಲ್ಲಿ ಈಗ ಫ್ರೀ ವಿದ್ಯುತ್ ನೀಡಲಾಗುತ್ತಿದೆ. ಪಟ್ಟಣಕ್ಕೆ ಒಂದು ಬಾರಿ ಬಂದರೆ ಎಲ್ಲಾ ಕೆಲಸ ಒಂದೇ ಕಡೆ ಆಗಬೇಕು. ಜನರ ಸೇವೆಯನ್ನು ಮಾಡೋಣ. ಕಷ್ಟದಲ್ಲಿ ಬಂದವರಿಗೆ ನ್ಯಾಯ ಕೊಡಬೇಕು ಎಂದರು. ಬಗರ್ ಹುಕುಂ ಸರಿ ಮಾಡದಿದ್ರೆ ಮುಂದೆ ಜನರ ಬದುಕು ಬೀದಿಗೆ ಬೀಳಲಿದೆ. ಅಧಿಕಾರ ಬಂದರೆ ಶರಾವತಿ ಸಂತ್ರಸ್ತರಿಗೆ, ಅರಣ್ಯ ಇಲಾಖೆ ಸಮಸ್ಯೆ, ಬಗರ್ ಹುಕುಂ ರೈತರಿಗೆ ನ್ಯಾಯ ಕೊಡಿಸುವುದಾಗಿ ಸರ್ಕಾರ ಹೇಳಲಿದೆ. ಬಡವರು, ರೈತರಿಗೆ ಬದುಕುವ ಹಕ್ಕು ಕೊಡಿಸುತ್ತೇವೆ ಎಂದರು.

Categories
ಬೆಂಗಳೂರು ರಾಜ್ಯ

ಗುತ್ತಿಗೆದಾರರ ಬಾಕಿ ಹಣ ಬರುತ್ತೆ!

ಗುತ್ತಿಗೆದಾರರ ಬಾಕಿ ಹಣ ಬರುತ್ತೆ!
– ನೊಂದ ಗುತ್ತಿಗೆದಾರರಿಗೆ ಗುಡ್‌ನ್ಯೂಸ್‌ ನೀಡಿದ ಸಿಎಂ..!
– ಹಂತ ಹಂತವಾಗಿ ಬಾಕಿ ಮೊತ್ತ ಬಿಡುಗಡೆ

NAMMUR EXPRESS NEWS
ಬೆಂಗಳೂರು: ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ 4 ಸಾವಿರ ಕೋಟಿ ರೂಪಾಯಿಯ ಕಾಮಗಾರಿಯನ್ನು ಪ್ಯಾಕೇಜ್ ಇಲ್ಲದೆ ನೀಡಲು ಲೋಕೋಪಯೋಗಿ ಸಚಿವರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪ್ಯಾಕೇಜ್‌ ಪದ್ದತಿ ರದ್ದುಗೊಳಿಸುವುದು, ಬಾಕಿ ಮೊತ್ತವನ್ನು ಪಾವತಿಸುವುದು ಸೇರಿದಂತೆ ಗುತ್ತಿಗೆದಾರರು ಮುಂದಿಟ್ಟ ಎಲ್ಲಾ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್, ಸಚಿವರಾದ ಸತೀಶ್ ಜಾರಕಿಹೊಳಿ, ಬೋಸ್ ರಾಜು, ಜಮೀರ್ ಅಹಮದ್‌ ಖಾನ್ ಸೇರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.