Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ಐಪಿಎಲ್ -2025
* ಸತತ ಎರಡನೇ ಸೋಲು ಕಂಡ ಸನ್ ರೈಸರ್ಸ್
* ಚೆನ್ನೈ ವಿರುದ್ಧ ತವರಲ್ಲಿ ಗೆದ್ದ ರಾಜಸ್ಥಾನ್

NAMMUR EXPRESS SPORTS NEWS
* ಸತತ ಎರಡನೇ ಸೋಲು ಕಂಡ ಸನ್ ರೈಸರ್ಸ್
ಹೈದ್ರಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಐಪಿಎಲ್ 2025 ರಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲಿ 163 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 16 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಜಯದ ಗುರಿ ತಲುಪಿತು. ಇದು ಸನ್‌ರೈಸರ್ಸ್‌ಗೆ ಸತತ ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಸೋಲನ್ನು ಎದುರಿಸಿತ್ತು.
ಹೊಸ ನಾಯಕ ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಲಿಷ್ಠ ಪ್ರದರ್ಶನ ಮುಂದುವರೆದಿದೆ. ಲಕ್ನೋ ವಿರುದ್ಧದ ಮೊದಲ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಇದೀಗ ಸತತ ಎರಡನೇ ಪಂದ್ಯವನ್ನು ಸುಲಭವಾಗಿ ಗೆದ್ದಿದೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ತಂಡವು ಕಳೆದ ಸೀಸನ್​ನ ಫೈನಲಿಸ್ಟ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ದೆಹಲಿಯ ಈ ಗೆಲುವಿನಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಪ್ರಮುಖ ಪಾತ್ರವಹಿಸಿದರು. ಅವರು ಪ್ರಮುಖ 5 ವಿಕೆಟ್‌ಗಳನ್ನು ಪಡೆದು ಸನ್‌ರೈಸರ್ಸ್‌ನ ಸ್ಫೋಟಕ ಬ್ಯಾಟಿಂಗ್ ಕನಸನ್ನು ಭಗ್ನಗೊಳಿಸಿದರು. ಆ ಬಳಿಕ 163 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿಗೆ ಫಾಫ್ ಡು ಪ್ಲೆಸಿಸ್ ಅಬ್ಬರದ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

* ಚೆನ್ನೈ ವಿರುದ್ಧ ತವರಲ್ಲಿ ಗೆದ್ದ ರಾಜಸ್ಥಾನ್
ಗುವಾಹಟಿ: ತವರು ಮೈದಾನದಲ್ಲಿ ನಡೆದ ಐಪಿಎಲ್​ನ 11ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಖಾತೆಯನ್ನು ತೆರೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ ತಂಡ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 176 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಗೂ ಐಪಿಎಲ್ 2025 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದ್ದು. ಗುವಾಹಟಿಯಲ್ಲಿ ನಡೆದ ತನ್ನ ತವರು ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದ ರಾಜಸ್ಥಾನ್ ಕೊನೆಯ ಓವರ್​ವರೆಗೆ ನಡೆದ ರೋಚಕ ಪಂದ್ಯದಲ್ಲಿ 6 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ, ರಾಜಸ್ಥಾನ ಮೂರನೇ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತ ಮೊದಲ ಪಂದ್ಯವನ್ನು ಗೆದ್ದು ಗೆಲುವಿನ ಆರಂಭ ಪಡೆದುಕೊಂಡಿದ್ದ ಸಿಎಸ್​ಕೆ, ಆ ನಂತರದ ಎರಡು ಪಂದ್ಯಗಳನ್ನು ಸೋತಿದೆ. ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟ್ ಮಾಡಿ 182 ರನ್‌ಗಳ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಚೆನ್ನೈ 176 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು.

Categories
ತೀರ್ಥಹಳ್ಳಿ

ಮಲೆನಾಡಲ್ಲಿ ಅರಣ್ಯ ಒತ್ತುವರಿಗೆ ಶಿಕ್ಷೆ ಫಿಕ್ಸ್!?

ಮಲೆನಾಡಲ್ಲಿ ಅರಣ್ಯ ಒತ್ತುವರಿಗೆ ಶಿಕ್ಷೆ ಫಿಕ್ಸ್!?
– ಅರಣ್ಯ ಒತ್ತುವರಿದಾರನಿಗೆ 1 ವರ್ಷ ಜೈಲು, 5 ಸಾವಿರ ರೂ. ದಂಡ !!
* ತೀರ್ಪು ನೀಡಿದ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ಕೋರ್ಟ್
* ದಂಡ ತಪ್ಪಿದಲ್ಲಿ 3 ತಿಂಗಳು ಸಾದಾ ಜೈಲು ಶಿಕ್ಷೆ

NAMMUR EXPRESS NEWS
ತೀರ್ಥಹಳ್ಳಿ: ಮೀಸಲು ಕಿರು ಅರಣ್ಯ ಪ್ರದೇಶ ಒತ್ತುವರಿ ಸಾಬೀತಾದ ಹಿನ್ನೆಲೆಯಲ್ಲಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾ.ಪಂ. ವ್ಯಾಪ್ತಿಯ ಹುಣಸವಳ್ಳಿ ಗ್ರಾಮದ ಉಮೇಶ್ (43)ಗೆ 1 ವರ್ಷ ಸಾದಾ ಜೈಲು ಶಿಕ್ಷೆ 5 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಹುಣಸವಳ್ಳಿ ಗ್ರಾಮದ ಸರ್ವೆ ನಂಬರ್ 13ರಲ್ಲಿ 12 ಗುಂಟೆ ಕಿರು ಅರಣ್ಯ ಪ್ರದೇಶ ಒತ್ತುವರಿ ಮಾಡಿದ ಕುರಿತಂತೆ ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ 2019ರಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ, ಕಂದಾಯ ಸದಸ್ಯ ಕೆ.ಎಚ್‌. ಅಶ್ವತ್ಥನಾರಾಯಣಗೌಡ ನೇತೃತ್ವದ ಪೀಠ ವಿಚಾರಣೆ ನಡೆಸಿ ಮಾರ್ಚ್ 3ರಂದು ತೀರ್ಪು ನೀಡಿದೆ.
ಒತ್ತುವರಿ ಆರೋಪಿ ದಂಡ ಪಾವತಿಸಲು ವಿಫಲವಾದರೆ 3 ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು.ತಕ್ಷಣ ಒತ್ತುವರಿ ಜಮೀನು ತೆರವು ಮಾಡಬೇಕು. ಈ ಕುರಿತಂತೆ 60 ದಿನದೊಳಗೆ ವರದಿ ಸಲ್ಲಿಸುವಂತೆ ವಲಯಾರಣ್ಯಾಧಿಕಾರಿಗೆ ನ್ಯಾಯಪೀಠ ಆದೇಶಿಸಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾಶಿವನ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡುಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ಸಣ್ಣ ಹಣಕಾಸಿನ ಬಾಕಿಗಳಿಗೆ ಆದ್ಯತೆ ನೀಡುವುದರಿಂದ ನಿಮ್ಮ ಹಣವನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಪೋಷಕರೊಂದಿಗಿನ ದಿನನಿತ್ಯದ ಮಾತುಗಳು ಅನಿರೀಕ್ಷಿತ ಭಾವನಾತ್ಮಕ ತಿರುವು ಪಡೆಯಬಹುದು. ಆರೋಗ್ಯವು ಸ್ಥಿರವಾಗಿರುತ್ತದೆ. ನೀವು ಆರ್ಥಿಕ ಬಲವನ್ನೂ ಪಡೆಯುತ್ತೀರಿ. ವಾಹನ ನಿರ್ವಹಣೆಗೆ ಹಣ ವ್ಯಯವಾಗಲಿದೆ.

** ವೃಷಭ ರಾಶಿ :
ಇಂದು ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆರ್ಥಿಕ ನಷ್ಟ ಉಂಟಾಗಬಹುದು. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಕಿರಿಯ ಸಹೋದರನು ತನ್ನ ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವನು. ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವಿರಿ. ನಿಮ್ಮ ಸಂಗಾತಿಯೊಂದಿಗೆ ನೀವು ಸಂಜೆ ರಾತ್ರಿ ಊಟವನ್ನು ಯೋಜಿಸಬಹುದು.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇಂದು ಬಹಳ ವಿಶೇಷವಾದ ದಿನವಾಗಿರುತ್ತದೆ. ವೃತ್ತಿಯಲ್ಲಿ ಉನ್ನತಿಗೆ ಹಲವು ಅವಕಾಶಗಳು ದೊರೆಯಲಿವೆ. ನಿಮ್ಮ ಕೆಲಸವನ್ನು ಕಚೇರಿಯಲ್ಲಿ ಪ್ರಶಂಸಿಸಲಾಗುತ್ತದೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಕೆಲವು ಜನರು ಇಂದು ಪೂರ್ವಜರ ಆಸ್ತಿಯಿಂದ ಆರ್ಥಿಕವಾಗಿ ಲಾಭ ಪಡೆಯಬಹುದು. ಸಾಂಸಾರಿಕ ಸೌಕರ್ಯ ಮತ್ತು ಸಂಪತ್ತು ವೃದ್ಧಿಯಾಗಲಿದೆ.

** ಕರ್ಕಾಟಕ ರಾಶಿ :
ಇಂದು ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಹೊಸ ವ್ಯಾಪಾರ ಆರಂಭಿಸಬಹುದು. ಉದ್ಯಮಿಗಳು ತಮ್ಮ ವ್ಯಾಪಾರವನ್ನು ಬೆಳೆಸಲು ಅನೇಕ ಸುವರ್ಣ ಅವಕಾಶಗಳನ್ನು ಪಡೆಯುತ್ತಾರೆ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವರು. ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಹೊಸ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವಲ್ಲಿ ನೀವು ಧೈರ್ಯ ತೋರುತ್ತೀರಿ. ನಿಮ್ಮ ಕನಸುಗಳನ್ನು ನನಸಾಗಿಸಲು ನೀವು ಪ್ರೇರೇಪಿಸುತ್ತೀರಿ. ಇಂದು ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಅಗತ್ಯವಿದ್ದರೆ ಆರ್ಥಿಕ ತಜ್ಞರಿಂದ ಸಲಹೆ ಪಡೆಯಲು ಹಿಂಜರಿಯಬೇಡಿ.

** ಕನ್ಯಾ ರಾಶಿ :
ಇಂದು ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ವೃತ್ತಿ ಜೀವನದಲ್ಲಿ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಕೆಲಸ ಕಾರ್ಯಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಹಣದ ಹರಿವಿಗೆ ಹೊಸ ದಾರಿಗಳು ಸುಗಮವಾಗಲಿವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬದೊಂದಿಗೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ನೀವು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ.

** ತುಲಾ ರಾಶಿ :
ಈ ದಿನ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇಂದು ನೀವು ಸಾಲದಿಂದ ಮುಕ್ತರಾಗುತ್ತೀರಿ. ನೀವು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಹೊಸ ಸ್ಥಳಗಳಿಂದ ಹಣವನ್ನು ಪಡೆಯುತ್ತಾರೆ. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಳಿಯುತ್ತವೆ. ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸಿ.

** ವೃಶ್ಚಿಕ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ ಆಹ್ಲಾದಕರ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಆದಾಯವನ್ನು ಹೆಚ್ಚಿಸಲು ಹೊಸ ಆಯ್ಕೆಗಳನ್ನು ನೋಡಿ. ವಿದೇಶ ಪ್ರಯಾಣದ ಅವಕಾಶವಿರುತ್ತದೆ. ಮನೆಗೆ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣವಿರುತ್ತದೆ. ಹೊಸ ಆಸ್ತಿ ಅಥವಾ ವಾಹನ ಖರೀದಿ ಸಾಧ್ಯ. ನಿಮ್ಮ ಫಿಟ್ನೆಸ್ ಬಗ್ಗೆ ಗಮನ ಕೊಡಿ. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಾಗುತ್ತವೆ.

** ಧನಸ್ಸು ರಾಶಿ :
ಇಂದು ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ತಜ್ಞರ ಸಲಹೆ ಪಡೆಯಲು ಹಿಂಜರಿಯದಿರಿ. ಶೈಕ್ಷಣಿಕ ಕೆಲಸದಲ್ಲಿ ಗೌರವ ಹೆಚ್ಚುವುದು. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಬಡ್ತಿ ಅಥವಾ ಮೌಲ್ಯಮಾಪನದ ಅವಕಾಶಗಳು ಹೆಚ್ಚಾಗುತ್ತವೆ. ಪ್ರೇಮ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.

** ಮಕರ ರಾಶಿ :
ಇಂದು ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ನೀವು ಕುಟುಂಬದೊಂದಿಗೆ ವಿಹಾರವನ್ನು ಯೋಜಿಸಬಹುದು. ಹಳೆಯ ಆಸ್ತಿ ಮಾರಾಟದಿಂದ ಆರ್ಥಿಕ ಲಾಭ ಉಂಟಾಗಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಕೆಲಸದಲ್ಲಿ ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಒತ್ತಡ ನಿರ್ವಹಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

** ಕುಂಭ ರಾಶಿ :
ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ನಿಮ್ಮ ಮಾನಸಿಕ ಆರೋಗ್ಯಕ್ಕೆ ಗಮನ ಕೊಡಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಇಂದು, ಹೊಸ ಆಸ್ತಿ ಅಥವಾ ವಾಹನ ಖರೀದಿ ಸಾಧ್ಯ. ಇಂದು ನೀವು ಕಿರಿಯ ಒಡಹುಟ್ಟಿದವರಿಗೆ ಅಥವಾ ಆಪ್ತ ಸ್ನೇಹಿತರಿಗೆ ಹಣಕಾಸಿನ ಸಹಾಯವನ್ನು ನೀಡಬೇಕಾಗಬಹುದು.

** ಮೀನ ರಾಶಿ :
ಇಂದು ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ. ಆಸ್ತಿ ಖರೀದಿಗೆ ಉತ್ತಮ ದಿನ. ಶೈಕ್ಷಣಿಕ ಕೆಲಸದಲ್ಲಿ ನೀವು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಪ್ರಯಾಣದ ಸಮಯದಲ್ಲಿ ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ವ್ಯಾಪಾರದಲ್ಲಿ ಆರ್ಥಿಕ ಲಾಭಕ್ಕೆ ಹೊಸ ಅವಕಾಶಗಳು ದೊರೆಯಲಿವೆ. ವೃತ್ತಿ ಜೀವನದಲ್ಲಿ ಕೆಲಸದ ಜವಾಬ್ದಾರಿ ಹೆಚ್ಚಲಿದೆ. ಹೊಸ ಯೋಜನೆಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗಬಹುದು.

Categories
ಬೆಂಗಳೂರು

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನ ‘ಕೈ’ವಶಕ್ಕೆ ತಂತ್ರ

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನ ‘ಕೈ’ವಶಕ್ಕೆ ತಂತ್ರ

* ಬ್ಯಾಂಕ್‌ನ ಹಾಲಿ ಅಧ್ಯಕ್ಷ ಬೆಳ್ಳಿ ಪ್ರಕಾಶ್‌ ವಿರುದ್ಧ ಅವಿಶ್ವಾಸ ನೋಟಿಸ್‌
* ಅಪೆಕ್ಸ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ನೀಡಿದ ಎಸ್‌ ರವಿ, ಲಕ್ಷ್ಮಣ ಸವದಿ
* ಸೋದರ ಸಂಬಂಧಿ ಕರೆತರಲು ಡಿಕೆಶಿ ಪ್ರಯತ್ನ

NAMMUR EXPRESS NEWS
ಬೆಂಗಳೂರು:ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷಗಾದಿ ‘ಕೈ’ ವಶಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಹೆಜ್ಜೆ ಇಟ್ಟಿದ್ದು, ಹಾಲಿ ಅಧ್ಯಕ್ಷ ಬೆಳ್ಳಿ ಪ್ರಕಾಶ್‌ ವಿರುದ್ಧ ಅವಿಶ್ವಾಸ ನೋಟಿಸ್‌ ನೀಡಲಾಗಿದೆ.
ಸಹಕಾರಿಗಳೂ ಆದ ಮೇಲ್ಮನೆ ಸದಸ್ಯ ಎಸ್‌.ರವಿ ಹಾಗೂ ಲಕ್ಷ್ಮಣ ಸವದಿ ಅವರು ಶನಿವಾರ ಅಪೆಕ್ಸ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ನೀಡಿದ್ದಾರೆ. ಹಾಲಿ ಅಧ್ಯಕ್ಷರ ಅವಧಿ ಇನ್ನು ಸುಮಾರು 6 ತಿಂಗಳಷ್ಟೇ ಇದ್ದರೂ, ಬೆಳ್ಳಿ ಪ್ರಕಾಶ್‌ ಅವರನ್ನು ಬದಲಿಸಿ ಆಡಳಿತ ಪಕ್ಷದವರನ್ನು ಈ ಹುದ್ದೆಗೆ ತರುವ ಬಹುದಿನಗಳ ಯೊಚನೆಯಂತೆ ಈ ಪ್ರಯತ್ನ ಆರಂಭವಾಗಿದೆ.
ನೋಟಿಸ್‌ ಹಿನ್ನೆಲೆಯಲ್ಲಿ ಸದ್ಯದಲ್ಲೇ ನಿರ್ದೇಶಕರ ಮಂಡಳಿ ಸಭೆ ನಡೆಯಲಿದೆ, ಸಭೆಯಲ್ಲಿ ಅಧ್ಯಕ್ಷರು ಬಹುಮತ ಸಾಬೀತು ಪಡಿಸಬೇಕಾಗುತ್ತದೆ. ಆದರೆ, ಬಹುಮತ ಇಲ್ಲದ ಕಾರಣ ಅದಕ್ಕೆ ಮುನ್ನವೇ ಬೆಳ್ಳಿ ಪ್ರಕಾಶ್‌ ಅವರು ಹುದ್ದೆ ತೊರೆಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

* ನೋಟಿಸ್‌ ನೀಡಿರುವ ಬಗ್ಗೆ ಖಚಿತಪಡಿಸಿದ ಎಸ್‌.ರವಿ
”ಆಡಳಿತ ಪಕ್ಷದವರೇ ಕೆ.ಎಂ.ಎಫ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗುವ ಸಂಪ್ರದಾಯವಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆಯುತ್ತಿದ್ದರೂ ಬೆಳ್ಳಿ ಪ್ರಕಾಶ್‌ ಅವರು ನಾನಾ ನೆಪವೊಡ್ಡಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ, ನಿರಂತರ ಅವ್ಯವಹಾರದಿಂದ ಬ್ಯಾಂಕ್‌ ಮುಚ್ಚುವ ಸ್ಥಿತಿ ತಲುಪಿದೆ. ಸರಕಾರದ ಮಧ್ಯಪ್ರವೇಶ ಮತ್ತು ನೆರವು ಅಪೇಕ್ಷಿತವಾಗಿದೆ. ಹಾಗಾಗಿ, ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನೋಟಿಸ್‌ ನೀಡಲಾಗಿದೆ,” ಎಂದು ಎಸ್.ರವಿ ತಿಳಿಸಿದರು.

* ಸೋದರ ಸಂಬಂಧಿ ಕರೆತರಲು ಡಿಕೆಶಿ ಪ್ರಯತ್ನ
ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಸೋದರ ಸಂಬಂಧಿ ಹಾಗೂ ಮೇಲ್ಮನೆ ಸದಸ್ಯ ಎಸ್‌.ರವಿ ಅವರನ್ನು ತರಲು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಶತ ಪ್ರಯತ್ನ ನಡೆಸಿದ್ದಾರೆ. ಇದರ ಅಂಗವಾಗಿ ಈ ಹಿಂದೆ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದರು.
ವಿಧಾನಸಭೆಯಲ್ಲೇ ರಾಜಣ್ಣ ಅವರನ್ನು ಭೇಟಿ ಮಾಡಿ ಡಿ.ಕೆ.ಶಿ ಸುಮಾರು ಅರ್ಧ ತಾಸು ಮಾತುಕತೆ ನಡೆಸಿದ್ದರು. ರಾಜಣ್ಣ ಜತೆ ಲಕ್ಷ್ಮಣ ಸವದಿ ಅವರನ್ನೂ ಕರೆದು ಕೂರಿಸಿಕೊಂಡ ಶಿವಕುಮಾರ್‌ ಸುಮಾರು ಹೊತ್ತು ಗಂಭೀರ ಸಮಾಲೋಚನೆ ನಡೆಸಿದ್ದರು. ಇದೇ ಸವದಿ ಇದೀಗ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿದ್ದಾರೆ.

Categories
ವಿಜಯಪುರ

ಮುಂದಿನ ವಿಜಯದಶಮಿಗೆ ರಾಜ್ಯದಲ್ಲಿ ಯತ್ನಾಳ್ ಹೊಸ ಪಕ್ಷ ಘೋಷಣೆ !!

ಮುಂದಿನ ವಿಜಯದಶಮಿಗೆ ರಾಜ್ಯದಲ್ಲಿ ಯತ್ನಾಳ್ ಹೊಸ ಪಕ್ಷ ಘೋಷಣೆ !!

* ರಾಜ್ಯದಲ್ಲಿ ಹಿಂದೂ ಪಕ್ಷ ಕಟ್ಟುವ ಅನಿವಾರ್ಯತೆ
* ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ

NAMMUR EXPRESS NEWS
ವಿಜಯಪುರ: ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆಗೊಂಡ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಂಬರುವ ವಿಜಯದಶಮಿಗೆ ರಾಜ್ಯದಲ್ಲಿ ಹೊಸ ಪಕ್ಷ ರಚನೆ ಮಾಡುವ ಕುರಿತು ಸುಳಿವು ನೀಡಿದ್ದಾರೆ.
ರಾಜ್ಯದಲ್ಲಿ ಹಿಂದೂ ಪಕ್ಷವನ್ನು ಕಟ್ಟುವ ಅನಿವಾರ್ಯತೆ ಇದ್ದು, ಹಾಗಾಗಿ ಮುಂದಿನ ವಿಜಯದಶಮಿಗೆ ಹೊಸ ಪಕ್ಷ ರಚನೆ ಮಾಡುವ ಅನಿವಾರ್ಯತೆ ಬರಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್ ರಾಜ್ಯದಲ್ಲಿ ಹಿಂದೂ ಪಕ್ಷವನ್ನು ಕಟ್ಟುವ ಅನಿವಾರ್ಯತೆ ಇದೆ. ಇದರಿಂದ ರಾಜ್ಯಾದ್ಯಂತ ನಮ್ಮ ಹೋರಾಟ ಆರಂಭವಾಗಿದೆ. ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ. ಬಿ.ಎಸ್ ಯಡಿಯೂರಪ್ಪ ವಿಜಯೇಂದ್ರ ಕುಟುಂಬದ ರಾಜಕಾರಣ ತಡೆಯಬೇಕು ಎಂದು ಅವರು ಮತ್ತೆ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಕಸ್ಮಾತ್ ಯಡಿಯೂರಪ್ಪ ವಿಜಯೇಂದ್ರನೆ ಪಕ್ಷಕ್ಕೆ ಅನಿವಾರ್ಯವಾದರೆ, ವಿಜಯೇಂದ್ರನನ್ನು ಅಧ್ಯಕ್ಷರಾಗಿ ಮುಂದುವರಿಸಿದರೆ ಅದು ಪಕ್ಷದ ಕರ್ಮ. ನಾವು ಹಿಂದೂ ಪರವಾಗಿ ಪಕ್ಷ ಕಟ್ಟಬೇಕಾದ ಅನಿವಾರ್ಯತೆ ಬರಲಿದೆ. ಮುಂದಿನ ವಿಜಯದಶಮಿಗೆ ರಾಜ್ಯದಲ್ಲಿ ಹೊಸ ಪಕ್ಷ ರಚನೆ ಮಾಡಲಾಗುತ್ತೆ ಎಂದು ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದರೆ.

Categories
ತೀರ್ಥಹಳ್ಳಿ

ಇನ್ನೋವಾ ಕಾರಲ್ಲಿ ತಡರಾತ್ರಿ ಗೋ ಕಳ್ಳತನ!

ಇನ್ನೋವಾ ಕಾರಲ್ಲಿ ತಡರಾತ್ರಿ ಗೋ ಕಳ್ಳತನ!
– ತೀರ್ಥಹಳ್ಳಿ ತಾಲೂಕಿನ ಬಾನುಗೋಡು ಎಂಬಲ್ಲಿ ಘಟನೆ
– ಮಲೆನಾಡಲ್ಲಿ ಹೆಚ್ಚಾಯ್ತು ಗೋ ಕಳ್ಳತನ..!

NAMMUR EXPRESS NEWS
ತೀರ್ಥಹಳ್ಳಿ: ಇನ್ನೋವಾ ಕಾರಿನಲ್ಲಿ ದನ ಕಳ್ಳತನ ಮಾಡಿರುವ ಘಟನೆ ತೀರ್ಥಹಳ್ಳಿ ಪಟ್ಟಣ ಸಮೀಪದ ಬಾನುಗೋಡು ಎಂಬಲ್ಲಿ ಮಾ. 29ರ ತಡರಾತ್ರಿ ನಡೆದಿದೆ.
29.03.2025. ಶನಿವಾರ 03 ಗಂಟೆ ಬೆಳಗಿನ ಜಾವ ಬಾನಗೋಡು ಸೀತಮ್ಮ ಎಂಬುವರ ಮನೆಯಲ್ಲಿ ಒಂದು ಗಬ್ಬದ ದನ ಸೇರಿ ಎರಡು ಜಾನುವಾರುಗಳನ್ನು ಗೋ ಕಳ್ಳರು ಕದ್ದಿದ್ದಾರೆ.
ಮನೆಯ ಬಾಗಿಲಿಗೆ ಚಿಲಕ ಹಾಕಿ ಗೋ ಕಳ್ಳತನ ಮಾಡಿದ್ದು ತೀರ್ಥಹಳ್ಳಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯವಾಗಿ ಲಭ್ಯವಾಗಿರುವ ಸಿಸಿಟಿವಿ ದೃಶ್ಯಗಳ ಪ್ರಕಾರ ಇನ್ನೋವಾ ಕಾರಿನಲ್ಲಿ ಬಂದ ಕಳ್ಳರು ರಸ್ತೆ ಪಕ್ಕ ಮಲಗಿರುವ ದನಗಳನ್ನು ಕಾರಿನಲ್ಲಿ ತುಂಬಿ ಕದ್ದಿದ್ದಾರೆ. ಇದೇ ರೀತಿಯಲ್ಲಿ ಸಿಂಗನಬಿದರೆ ವ್ಯಾಪ್ತಿಯಲ್ಲಿಗೋ ಕಳ್ಳತನ ನಡೆದಿತ್ತು. ಈ ಬಗ್ಗೆ ನಮ್ಮೂರ್ ಎಕ್ಸ್ಪ್ರೆಸ್ ವಿಶೇಷ ವರದಿ ಮಾಡಿತ್ತು.
ಇತ್ತೀಚಿಗೆ ಮಲೆನಾಡು ಜಿಲ್ಲೆಗಳ ಪ್ರತಿ ತಾಲೂಕಲ್ಲಿ ಗೋ ಕಳ್ಳತನ ಹೆಚ್ಚಾಗಿರುವುದು ದುರಂತ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಪದಕ

ತೀರ್ಥಹಳ್ಳಿಯ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಪದಕ
– ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಎನ್. ಕಲಗುಜ್ಜಿ ಹಾಗೂ ಮಾಳೂರು ಸಿಪಿಐ ಶ್ರೀಧರ್ ಅವರಿಗೆ ಸಿಎಂ ಪದಕ ಗೌರವ
– ಇಬ್ಬರು ಜನ ಸ್ನೇಹಿ ಅಧಿಕಾರಿಗಳಿಗೆ ಶುಭಾಶಯಗಳು

NAMMUR EXPRESS NEWS
ತೀರ್ಥಹಳ್ಳಿ: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 197 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕಗಳನ್ನು ಪ್ರಕಟಿಸಲಾಗಿದೆ. ಅಚ್ಚರಿ ಎಂದರೆ ತೀರ್ಥಹಳ್ಳಿಯ ಇಬ್ಬರು ಅಧಿಕಾರಿಗಳಿಗೆ ಈ ಸಾಲಿನ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಎನ್. ಕಲಗುಜ್ಜಿ ಹಾಗೂ ಮಾಳೂರು ಸಿಪಿಐ ಶ್ರೀಧರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ.
ಒಳಾಡಳಿತ ಇಲಾಖೆ ಮುಖ್ಯ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾಗಿ ಇದೀಗ ತೀರ್ಥಹಳ್ಳಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿರುವ ಅರವಿಂದ ಎನ್. ಕಲಗುಜ್ಜಿ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ.
ಮೂಲತಃ ಕಾರವಾರದವರಾದ ಅರವಿಂದ್ ಎನ್. ಕಲಗುಜ್ಜಿ ಅವರು
2023ರ ಫೆ. 1ರಂದು ಕಾರ್ಕಳದ ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿದ್ದರು. 2 ವರ್ಷಗಳ ಕಾಲ ಕಾರ್ಕಳದಲ್ಲಿ ಕರ್ತವ್ಯ ಸಲ್ಲಿಸಿದ ಅವರು 2025ರ ಫೆಬ್ರವರಿಯಲ್ಲಿ ವರ್ಗಾವಣೆಗೊಂಡಿದ್ದು, ಪ್ರಸ್ತುತ ತೀರ್ಥಹಳ್ಳಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಳ ವ್ಯಕ್ತಿತ್ವದ ಡೈನಾಮಿಕ್ ಅಧಿಕಾರಿ ಎಂದು ಹೆಸರು ಪಡೆದಿರುವ ಅರವಿಂದ್ ಅವರಿಗೆ ಪೊಲೀಸ್ ಇಲಾಖೆ ಸಿಬ್ಬಂದಿ ಶುಭಾಶಯ ಸಲ್ಲಿಸಿದ್ದಾರೆ.

ಮಾಳೂರು ಸಿಪಿಐ ಶ್ರೀಧ‌ರ್ ಕೆ ಅವರಿಗೆ ಪದಕ ಸಂಭ್ರಮ

2024ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳಿಗೆ ಘೋಷಿಸಲಾಗಿದ್ದು ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಧ‌ರ್ ಕೆ. ಅವರನ್ನು ಆಯ್ಕೆ ಮಾಡಿ ಸರ್ಕಾರದ ಒಳಾಡಳಿತದ ಅಪರ ಮುಖ್ಯ ಕಾರ್ಯದರ್ಶಿ ಎಂ.ಧನಂಜಯ ಅದೇಶಿಸಿದ್ದಾರೆ.
ಶ್ರೀಧ‌ರ್ ಮಾಳೂರು ವೃತ್ತ ನಿರೀಕ್ಷಕರಾಗಿದ್ದು ಅವರ ಅಧೀನದಲ್ಲಿ ಮಾಳೂರು ಮತ್ತು ಆಗುಂಬೆ ಪೊಲೀಸ್ ಠಾಣೆ ಇದೆ. ಸಿಬ್ಬಂದಿಗಳೊಂದಿಗೆ ಸೌಜನ್ಯಯುತವಾಗಿರುವ ಅವರ ಬಗ್ಗೆ ಸಿಬ್ಬಂದಿ ವರ್ಗದಲ್ಲಿ ಉತ್ತಮ ಅಭಿಪ್ರಾಯಗಳು ಇವೆ. ಬಂದೋಬಸ್ತ್ ಮುಂತಾದ ಕಠಿಣ ಸಂದರ್ಭದಲ್ಲಿಯೂ ಸಿಬ್ಬಂದಿಗಳ ಮಾನಸಿಕ ಸ್ಥೆರ್ಯವನ್ನು ಹೆಚ್ಚಿಸುವ ನಿಪುಣತೆಯನ್ನು ಹೊಂದಿದ್ದಾರೆ. ಸೌಜನ್ಯಯುತವಾಗಿ ಸಿಬ್ಬಂದಿಗಳ ಜೊತೆ ಕರ್ತವ್ಯಕ್ಕೆ ಅಣಿಯಾಗುತ್ತಾರೆಂಬ ಅಭಿಪ್ರಾಯಗಳು ಇವೆ. ಜೊತೆಗೆ ಇವರ ಅವಧಿಯಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ತೀರ್ಥಹಳ್ಳಿ ತಾಲೂಕಿನ ಸಜ್ಜನ ಅಧಿಕಾರಿಗೆ ಪದಕ ಸಿಕ್ಕಿರುವುದು ಇಲಾಖೆಯಲ್ಲಿ ಸಂತಸಕ್ಕೆ ಕಾರಣವಾಗಿದೆ.

Categories
Uncategorized

ಹಿಂದೂಗಳ ಹೊಸ ವರ್ಷ ಯುಗಾದಿಗೆ ಸುಸ್ವಾಗತ!

ಹಿಂದೂಗಳ ಹೊಸ ವರ್ಷ ಯುಗಾದಿಗೆ ಸುಸ್ವಾಗತ!
– ಹೊಸ ಚೈತನ್ಯ ನೀಡುವ ಹಬ್ಬ ಯುಗಾದಿ ಹಬ್ಬ
– ಯುಗಾದಿ ಚಂದ್ರ ನೋಡಿದ್ರೆ ಒಳ್ಳೇದು

NAMMUR EXPRESS NEWS
ಚೈತ್ರ ಮಾಸದ ಆಗಮನವಾಗಿದೆ. ನಿಸರ್ಗವು ಎಲ್ಲೆಡೆ ಪಲ್ಲವಿಸಿ ಜೀವಕಳೆಯನ್ನು ತುಂಬಿದೆ. ಕೋಗಿಲೆಯ ಗಾನ, ಮಾವಿನ ಚಿಗುರಿನ ಹಸಿರು ಬಣ್ಣದಿಂದ ಕಿವಿಗೂ ಇಂಪು ಕಣ್ಣಿಗೂ ಸೊಂಪು ಎಂಬ ಭಾವ ಮೂಡುತ್ತದೆ. ಇನ್ನು ಮಾವಿನ ಹಣ್ಣಿನ ಕಾಲವಾದ್ದರಿಂದ ನಾಲಗೆ, ಉದರವೂ ಸಂತಸಗೊಳ್ಳುತ್ತದೆ. ಬಿಸಿಲಿನ ಧಗೆಗೆ ಬಸವಳಿದ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಮಾನವನಾದಿಯಾಗಿ ಸಕಲ ಜೀವಿಗಳ ಮೇಲೂ ವರುಣ ದೇವನು ಬೇಗನೆ ದಯೆ ತೋರಿ ತಂಪನ್ನೆರೆದು ದೇಹವನ್ನು, ಮನಸ್ಸನ್ನು ಆಹ್ಲಾದಗೊಳಿಸಿದ್ದಾನೆ. ಮಣ್ಣಿನ ಘಮಲು ನಾಸಿಕವನ್ನು ತೃಪ್ತಿಗೊಳಿಸಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಪ್ರಕೃತಿಯ ಜೊತೆಗೆ ಮಾನವನ ದೇಹವನ್ನೂ ಯುಗಾದಿಗೆ ಉಲ್ಲಾಸಿತವಾಗಿ ಸಜ್ಜಾಗಿಸಿದೆ.
ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ ಯುಗಾದಿ ಹಿಂದೂ ಧರ್ಮದವರ ಹೊಸ ವರ್ಷವಾಗಿದೆ. ಯುಗ + ಆದಿ ಎಂಬ ಎರಡು ಸಂಸ್ಕೃತ ಪದಗಳಿಂದ ಯುಗಾದಿ ಪದವು ಹುಟ್ಟಿಕೊಂಡಿದೆ. ಯುಗದ ಪ್ರಾರಂಭ ಎಂಬ ಅರ್ಥವನ್ನು ಇದು ಸ್ಪುರಿಸುವುದರಿಂದ ಹೊಸ ವರ್ಷ ಎಂದು ಪರಿಗಣಿಸಲಾಗಿದೆ. ಇನ್ನೊಂದೆಡೆ ಬ್ರಹ್ಮನು ಈ ದಿನದಂದು ಜಗತ್ತನ್ನು ಸೃಷ್ಟಿಸಿದ ಎನ್ನಲಾಗಿದೆ.
ಯುಗಾದಿಯು ಪ್ರಧಾನವಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ.‌ ಈ ಹಬ್ಬದಲ್ಲಿ ಮುಖ್ಯವಾಗಿ ಒಬ್ಬಟ್ಟು ಮತ್ತು ಮಾವಿನ ಹಣ್ಣಿನ ಕಾಲವಾದ್ದರಿಂದ ಅದಕ್ಕೆ ಸಂಬಂಧಿಸಿದ ಆಹಾರವನ್ನು ತಯಾರಿಸುತ್ತಾರೆ. ಯುಗಾದಿಯ ಪ್ರಧಾನ ಸೇವನೆ ಬೇವು ಬೆಲ್ಲ. ಪ್ರಕೃತಿಯ ಪ್ರತೀಕವಾದ ಇದು ಜೀವನದ ತತ್ವವನ್ನು ಸಾರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಸಿಹಿ ಕಹಿ ಎನ್ನುವುದು ಇದ್ದೇ ಇರುತ್ತದೆ. ಅದನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬುದು ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಸಂಕೇತಿಸಲಾಗುತ್ತದೆ. ಪರಸ್ಪರರು ಹಂಚಿಕೊಂಡು ಶುಭಕೋರುವಾಗ ನಿಮ್ಮ ಜೀವನದಲ್ಲಿ ಬೆಲ್ಲದ ಪ್ರಮಾಣ ಹೆಚ್ಚಾಗಿರಲಿ ಎಂದು ಅಥವಾ ಬೇವಿನ ಕಹಿಯನ್ನು ಬೆಲ್ಲದ ಸಿಹಿಯು ಮರೆಸಲಿ ಎಂದು ಹಾರೈಸುವುದು ವಾಡಿಕೆ.
ಗಣೇಶ ಚತುರ್ಥಿಯಂದು ಚಂದ್ರ ದರ್ಶನ ಮಾಡಿ ಶಾಪಕ್ಕೆ ಅಥವಾ ಸಮಸ್ಯೆಗೆ ಸಿಲುಕಿದವರು ಯುಗಾದಿ ಚಂದ್ರನನ್ನು ದರ್ಶಿಸುವ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಇದು ಸ್ವತಃ ವಿಘ್ನ ನಿವಾರಕನೇ ನೀಡಿದ ಪರಿಹಾರವಾಗಿದೆ. ಯುಗಾದಿಯು ಧಾರ್ಮಿಕ ನಂಬಿಕೆಗಳೊಂದಿಗೆ, ಪ್ರಕೃತಿಯ ಸಂಕೇತವಾಗಿ ಕೂಡ ಆಚರಿಸಲಾಗುತ್ತದೆ. ಅಲ್ಲದೆ ಆಹಾರದ ಮೂಲಕ ಷಡ್ರಸಗಳಾದ ಉಪ್ಪು, ಹುಳಿ, ಖಾರ, ಒಗರು, ಸಿಹಿ, ಕಹಿ ಅಂಶಗಳು ನಮ್ಮ ದೇಹವನ್ನು ಸೇರುವ ಮೂಲಕ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವೆನಿಸಿದೆ. ಯುಗಾದಿ ಆಚರಣೆ ಎಲ್ಲಾ ಮೂಲಗಳಿಂದ ಅರ್ಥಪ್ರಧಾನವಾಗಿದೆ.
ಸಾಮರಸ್ಯಕ್ಕೆ ಸಾಕ್ಷಿಯಾದ ಯುಗಾದಿ ಹಬ್ಬ!

ಈ ಬಾರಿಯ ಯುಗಾದಿ ಸಾಮರಸ್ಯದ ಸಂಕೇತ ಕೂಡ ಆಗಿರುವುದು ಗಮನಾರ್ಹ.‌ ಮರು ದಿನ ಮುಸ್ಲೀ ಬಾಂಧವರ ಪ್ರಧಾನ ಹಬ್ಬವಾದ ರಂಜಾನ್ ಕೂಡ ಬಂದಿರುವುದು ಕಾಕತಾಳೀಯ. ಇಬ್ಬರೂ ಚಂದ್ರ ದರ್ಶನಕ್ಕಾಗಿ ಕಾಯುವುದು ಇದರ ವಿಶೇಷ. ಹಿಂದೂ ಧರ್ಮದವರು ಹಬ್ಬ ಆಚರಿಸಿ ಚಂದ್ರ ದರ್ಶನ ಮಾಡಿದರೆ, ಮುಸಲ್ಮಾನರು ಚಂದ್ರ ದರ್ಶನದ ಬಳಿಕ ಹಬ್ಬವನ್ನು ಆಚರಿಸುತ್ತಾರೆ. ವಿಧಗಳು ಬೇರೆಯಾದರೂ ಪ್ರಕೃತಿಯ ಒಂದು ಅಂಶವಾದ ದರ್ಶನ ನೀಡುವ ಚಂದ್ರ ಒಬ್ಬನೇ ಆಗಿದ್ದಾನೆ. ಇದು ನಿಸರ್ಗದ ಮತ್ತೊಂದು ವಿಸ್ಮಯ.

Categories
ದೈವಿಕ

ಅಮಾವಾಸ್ಯೆ ಮುಗಿತಲೇ 6 ರಾಶಿಯವರಿಗೆ ಶನೇಶ್ವರ ಸ್ವಾಮಿಯ ಕೃಪೆ!

ಅಮಾವಾಸ್ಯೆ ಮುಗಿತಲೇ 6 ರಾಶಿಯವರಿಗೆ ಶನೇಶ್ವರ ಸ್ವಾಮಿಯ ಕೃಪೆ!
– ರಾಜಯೋಗ ಮುಟ್ಟಿದ್ದೆಲ್ಲ ಚಿನ್ನ!

NAMMUR EXPRESS NEWS
ಬಂಧುಗಳೇ ಮಾರ್ಚ್ 29ರ  ಅಮಾವಾಸ್ಯೆಯ ಮುಗಿತಲೇ 6 ರಾಶಿಯವರ ಜೀವನವೇ ಬದಲಾಗಲಿದೆ ಶನೇಶ್ವರ ಸ್ವಾಮಿಯ  ಕೃಪೆಯಿಂದ ಈ ಐದು ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಇವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ.

ವೃಷಭ ದ್ವೇಷದ ಭಾವನೆ ದುಬಾರಿಯೆನಿಸಬಹುದು. ಇದು ನಿಮ್ಮ ಸಹನೆಯನ್ನು ಕುಂಠಿತಗೊಳಿಸುವುದಷ್ಟೇ ಅಲ್ಲದೇ ನಿಮ್ಮ ವಿವೇಚನಾಶಕ್ತಿಯನ್ನೂ ಕುಂಠಿತಗೊಳಿಸುತ್ತದೆ ಮತ್ತು ಸಂಬಂಧದಲ್ಲಿ ಶಾಶ್ವತ ಬಿರುಕನ್ನು ಸೃಷ್ಟಿಸುತ್ತದೆ. ನಿಮ್ಮ ತಾಯಿಯ ದುಂದುಗಾರಿಕೆಯನ್ನು ನೋಡಿ ನೀವು ಚಿಂತಿತರಾಗಬಹುದು ಮತ್ತು ಆದ್ದರಿಂದ ನೀವು ಅವರ ಕೋಪದ ಬೇಟೆಯಾಗಬಹದು. ಜನರು ನಿಮಗೆ ಹೊಸ ಭರವಸೆ ಹಾಗೂ ಕನಸುಗಳನ್ನು ನೀಡುತ್ತಾರೆ -ಇದು ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಸ್ನೇಹ ಕಳೆದುಕೊಳ್ಳುವ ಸಾಧ್ಯತೆಗಳು ಇಂದು ಹೆಚ್ಚಾಗಿರುವುದರಿಂದ ಎಚ್ಚರಿಕೆಯಿಂದಿರಿ. ಪ್ರಯಾಣ ತಕ್ಷಣದ ಫಲಿತಾಂಶಗಳು ತರದಿದ್ದರೂ ಭವಿಷ್ಯದ ಪ್ರಯೋಜನಗಳಿಗೆ ಉತ್ತಮ ಅಡಿಪಾಯ ಹಾಕುತ್ತದೆ.

ಕರ್ಕಾಟಕ ರಾಶಿ

ಹಲ್ಲು ನೋವು ಅಥವಾ ಹೊಟ್ಟೆ ಹಾಳಾಗುವಿಕೆ ನಿಮಗೆ ಕೆಲವು ಸಮಸ್ಯೆಗಳನ್ನು ತರಬಹುದು. ತಕ್ಷಣ ಪರಿಹಾರ ಪಡೆಯಲು ವೈದ್ಯರ ಸಲಹೆ ಪಡೆಯಿರಿ. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ ಕುಟುಂಬದ ಸದಸ್ಯರು ಅಥವಾ ಸಂಗಾತಿ ಕೆಲವು ಆತಂಕಗಳನ್ನು ಉಂಟುಮಾಡುತ್ತಾರೆ. ನೀವು ಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕೋಲೇಟ್ ಅನ್ನು ಆಘ್ರಾಣಿಸಿದ್ದೀರೇ? ನಿಮ್ಮ ಪ್ರೇಮ ಜೀವನ ಇಂದು ಈ ರೀತಿಯಾಗಿರುತ್ತದೆ. ಇಂದು ನೀವು ಕಚೇರಿಯಿಂದ ಮನೆಗೆ ಹಿಂತಿರುಗಿ ನಿಮ್ಮ ನೆಚ್ಚಿನ ಕೆಲಸವನ್ನು ಮಾಡಬಹುದು.

ಕನ್ಯಾ ರಾಶಿ

ನಿಮ್ಮ ಸಂತೋಷದ ಪ್ರಕೃತಿ ಇತರರಿಗೆ ಸಂತೋಷ ತರುತ್ತದೆ. ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ವಾದಗಳು ಮತ್ತು ಜಗಳಗಳು ಮತ್ತು ಇತರರ ಜೊತೆ ಅನಾವಶ್ಯಕವಾಗಿ ದೋಷ ಕಂಡುಹಿಡಿಯುವದನ್ನು ತಪ್ಪಿಸಿ. ನೀವು ಇಂದು ಪ್ರೀತಿಯ ಸಮೃದ್ಧ ಚಾಕೊಲೇಟ್‌ನ ರುಚಿ ಸವಿಯುತ್ತೀರಿ. ಇಂದು ನಿಮಗೆ ನಿಮ್ಮ ಅತ್ತೆಮನೆ ಬದಿಯಿಂದ ಯಾವುದೇ ಕೆಟ್ಟ ಸುದ್ಧಿ ಸಿಗಬಹುದು. ಇದರಿಂದಾಗಿ ನಿಮ್ಮ ಮನಸ್ಸಿಗೆ ದುಃಖವಾಗುತ್ತದೆ ಮತ್ತು ನೀವು ಸಾಕಷ್ಟು ಸಮಯವನ್ನು ಆಲೋಚಿಸುವಲ್ಲಿ ಕಳೆಯಬಹುದು. ಇಂದು, ನಿಮ್ಮ ಜೀವನ ಸಂಗಾತಿ ಸಕ್ಕರೆಗಿಂತ ಸಿಹಿಯಾಗಿದ್ದಾರೆಂದು ನಿಮಗೆ ಅರಿವಾಗುತ್ತದೆ.

ವೃಶ್ಚಿಕ ರಾಶಿ

ನಿಮ್ಮ ಅನುಮಾನದ ಪ್ರಕೃತಿ ನಿಮಗೆ ಸೋಲಿನ ಮುಖ ತೋರಿಸಬಹುದು. ಆರ್ಥಿಕವಾಗಿ ಇಂದು ನೀವು ಸಾಕಷ್ಟು ಬಲವಾಗಿ ಕಾಣುವಿರಿ, ಗ್ರಹ ಮತ್ತು ನಕ್ಷತ್ರಗಳ ಚಲನೆಯಿಂದ ಇಂದು ನಿಮಗಾಗಿ ಹಣವನ್ನು ಸಂಪಾದಿಸುವ ಅನೇಕ ಅವಕಾಶಗಳು ಉಂಟಾಗುತ್ತವೆ. ಮಗುವಿನ ಅಧ್ಯಯನದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಕ್ಷಣದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇವುಗಳು ಕ್ಷಣಿಕವಾಗಿದ್ದು ಸಮಯ ಸರಿದಂತೆ ದೂರ ಸರಿಯುತ್ತವೆ. ಇಂದು ನಿಮ್ಮ ಪ್ರೇಮಿ ನಿಮ್ಮ ಮಾತುಗಳನ್ನು ಕೇಳುವುದಕ್ಕಿಂತ ತನ್ನ ಮಾತುಗಳನ್ನು ಹೇಳಲು ಇಷ್ಟಪಡುತ್ತಾನೆ. ಈ ಕಾರಣದಿಂದಾಗಿ ನೀವು ಸ್ವಲ್ಪ ಅಸಮಾಧಾನಗೊಳ್ಳಬಹುದು. ಉಚಿತ ಸಮಯದಲ್ಲಿ ಇಂದು ಯಾವುದೇ ಆಟವನ್ನು ಆಡಬಹುದು, ಆದರೆ ಈ ಸಮಯದಲ್ಲಿ ಯಾವುದೇ ಕಾರರಣದಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ಮಕರ ರಾಶಿ
ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಿಂದಿನ ಬಂಡವಾಳದಿಂದ ಆದಾಯವನ್ನು ನಿರೀಕ್ಷಿಸಿದ್ದಲ್ಲಿ. ನಿಮ್ಮ ಕೋಪವನ್ನುನಿಯಂತ್ರಿಸಿ ಹಾಗೂ ಕುಟುಂಬದ ಸದಸ್ಯರ ಮನ ನೋಯಿಸುವುದನ್ನು ತಪ್ಪಿಸಿ. ಇದೇ ಸಮಯದಲ್ಲಿ ಕೋಪ ಅಲ್ಪಾವಧಿ ಹುಚ್ಚು ಹಾಗೂ ಇದು ನಿಮ್ಮನ್ನು ಕೆಲವು ಗಂಭೀರ ತಪ್ಪುಗಳನ್ನು ಮಾಡಲು ಪ್ರೇರೇಪಿಸಬಹುದೆಂದು ಅರ್ಥ ಮಾಡಿಕೊಳ್ಳಿ ನಿಮ್ಮನ್ನು ದೀರ್ಘಕಾಲ ಹಿಡಿದಿಟ್ಟಿರುವ ಒಂದು ಏಕಾಂಗಿ ಹಂತ ನಿಮ್ಮ ಜೀವನ ಸಂಗಾತಿ ದೊರಕಿದ ತಕ್ಷಣ ಕೊನೆಗೊಳ್ಳುತ್ತದೆ. ಇಂದು ನೀವು ನಿಮಗಾಗಿ ಸಮಯವನ್ನು ತೆಗೆದುಕೊಂಡು ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಎಲ್ಲಿಗಾದರೂ ಸುತ್ತಾಡಲು ಹೋಗಬಹುದು.ಆದಾಗ್ಯೂ ಈ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ನಿಮ್ಮ ಸಂಗಾತಿಯ ಎಂದಿಗೂ ಇಷ್ಟೊಂದು ಅದ್ಭುತವಾಗಿರಲಿಲ್ಲ.

ಧನಸ್ಸು ರಾಶಿ

ಕ್ರೀಡೆಗಳು ಸಾರ್ವಕಾಲಿಕ ಯೌವನದ ರಹಸ್ಯವಾಗಿದ್ದರಿಂದ ಯಾವುದಾದರೂ ಆಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮಗೆ ಪ್ರೋತ್ಸಾಹ ನೀಡುತ್ತಾರೆ. ಯಾರಾದರೂ ನಿಮ್ಮ ಹೆಸರು ಕೆಡಿಸಲು ಪ್ರಯತ್ನಿಸಬಹುದದ್ದರಿಂದ ಜಾಗರೂಕರಾಗಿರಿ. ನಿಮ್ಮ ವ್ಯಕ್ತಿತ್ವವು ಇತರ ಜನರಿಂದ ಸ್ವಲ್ಪ ವ್ಯತ್ಯಾಸವಾಗಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

* ಮುಂಬೈಗೆ ಮತ್ತೆ ಸೋಲಿನ ಶಾಕ್
* ಗಿಲ್ ಅಹಮದಾಬಾದ್‌ನಲ್ಲಿ 1000 ರನ್
* ಇಂದು ಎರಡು ಪಂದ್ಯ ಯಾರಿಗೆ ಬೇವು ಯಾರಿಗೆ ಬೆಲ್ಲ

NAMMUR EXPRESS SPORTS NEWS
ಅಹಮದಾಬಾದ್: ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ಇಂಡಿಯನ್ಸ್ ಈ ಐಪಿಎಲ್‌ನಲ್ಲೂ ಲಯ ಕಂಡುಕೊಳ್ಳಲು ಪರದಾಡುತ್ತಿದೆ ಎನಿಸುತ್ತಿದ್ದು, ಸತತ 2ನೇ ಸೋಲು ಅನುಭವಿಸಿದೆ. ಶನಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ 36 ರನ್‌‌ಗಳ ಸೋಲು ಎದುರಾಯಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ನಲ್ಲಿ 8 ವಿಕೆಟ್‌ಗೆ 196 ರನ್ ಕಲೆಹಾಕಿತು.
ಗುಜರಾತ್ ದಾಖಲಿಸಿದ ಕಠಿಣ ಗುರಿಯನ್ನು ಚೇಸ್ ಮಾಡಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ಆರಂಭದಲ್ಲೇ 8 ರನ್ ಗಳಿಸಿದ ರೋಹಿತ್ ವಿಕೆಟ್ ಕಳೆದುಕೊಂಡಿತು.
3ನೇ ವಿಕೆಟ್‌ಗೆ ಜೊತೆಯಾದ ತಿಲಕ್ ವರ್ಮಾ ಹಾಗೂ ನಾಯಕ ಸೂರ್ಯಕುಮಾ‌ರ್ ಯಾದವ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ಇವರಿಬ್ಬರ ವಿಕೆಟ್ ಉರುಳಿದ ಬಳಿಕ ಮುಂಬೈ ಸೋಲಿನತ್ತ ಮುಖಮಾಡಿತು. 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುಜರಾತ್‌ನ ಬೌಲರ್‌ಗಳಾದ ಪ್ರಸಿದ್ಧ್, ಸಿರಾಜ್, ಸಾಯಿ ಕಿಶೋರ್ ಉತ್ತಮ ಬೌಲಿಂಗ್ ಮಾಡಿದರು. ಇದಕ್ಕೂ ಮುನ್ನ ಗುಜರಾತ್‌ಗೆ ಮೊದಲ 3 ಬ್ಯಾಟರ್‌ಗಳಾದ ಸುದರ್ಶನ್ (63), ಗಿಲ್ (38) ಹಾಗೂ ಬಟ್ಲರ್ (39)ರ ಆಕರ್ಷಕ ಬ್ಯಾಟಿಂಗ್ ಉತ್ತಮ ಮೊತ್ತ ಕಲೆಹಾಕಲು ನೆರವಾಯಿತು.

* ಅಹಮದಾಬಾದ್‌ನಲ್ಲಿ ಗಿಲ್‌ 1000 ಐಪಿಎಲ್ ರನ್!
ಗುಜರಾತ್ ಟೈಟಾನ್ಸ್‌ನ ನಾಯಕ ಶುಭ್‌ಮನ್ ಗಿಲ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1000 ಐಪಿಎಲ್ ರನ್ ಪೂರೈಸಿದ್ದಾರೆ. ಐಪಿಎಲ್‌ನಲ್ಲಿ ಕ್ರೀಡಾಂಗಣವೊಂದರಲ್ಲಿ ಅತಿವೇಗವಾಗಿ 1000 ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಗಿಲ್ ಕೇವಲ 20 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಕ್ರಿಸ್ ಗೇಲ್, ಆರ್‌ಸಿಬಿ ಪರ ಆಡುವಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 19 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ್ದರು. ಸನ್‌ ರೈಸರ್ಸ್ ಪರ ಆಡುವ ಡೇವಿಡ್ ವಾರ್ನರ್, ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣ ದಲ್ಲಿ 22 ಇನ್ನಿಂಗ್ಸ್‌ಲ್ಲಿ 1000 ರನ್ ಗಳಿಸಿದ್ದಾರೆ.

* ಇಂದು ಎರಡು ಪಂದ್ಯ ಯಾರಿಗೆ ಬೇವು, ಯಾರಿಗೆ ಬೆಲ್ಲ !??
ಯುಗಾದಿ ದಿನವಾದ ಇಂದು ಭಾನುವಾರವಾದ್ದರಿಂದ ಎರಡು ಪಂದ್ಯಗಳು ನಡೆಯಲಿವೆ.
ಮೊದಲನೇ ಪಂದ್ಯ ಡೆಲ್ಲಿ ಹಾಗೂ ಸನ್ ರೈಸರ್ಸ್ ತಂಡಗಳ ನಡುವೆ ಮದ್ಯಾಹ್ನ 3:30 ಕ್ಕೆ ವಿಶಾಖಪಟ್ನಂ‌ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಚೆನ್ನೈ ಹಾಗೂ ರಾಜಸ್ಥಾನ್ ತಂಡಗಳ ನಡುವೆ ರಾತ್ರಿ 7:30 ಕ್ಕೆ ಗುವಾಹಟಿಯಲ್ಲಿ ನಡೆಯಲಿದೆ. ಎರಡೂ ಪಂದ್ಯಗಳಲ್ಲಿನ ಜಯ 4 ತಂಡಗಳಿಗೆ ಮುಖ್ಯವಾಗಿದ್ದು ಇಂದು ಯಾರಿಗೆ ಬೇವು ಯಾರಿಗೆ ಬೆಲ್ಲ ಸಿಗುವುದೆಂದು ಕಾದು ನೋಡಬೇಕಿದೆ.