Categories
ಕಾರ್ಕಳ

ಕ್ರೈಸ್ಟ್ ಕಿಂಗ್: ವಾಲಿಬಾಲ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಪೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

ಕ್ರೈಸ್ಟ್ ಕಿಂಗ್: ವಾಲಿಬಾಲ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಪೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ
– ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ 

NAMMUR EXPRESS NEWS 
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಸಹಯೋಗದಲ್ಲಿ ವಿದ್ಯಾವರ್ಧಕ ಪ್ರೌಢಶಾಲೆ ಮುಂಡ್ಕೂರು ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಒಂಬತ್ತನೇ ತರಗತಿಯ ಶೈನಿ ಡಿಸೋಜಾ, ಶಗುನ್ ವರ್ಮಾ, ಕಾರ್ತಿಕಾ ಶೆಟ್ಟಿ, ಆಶಿಕಾ, ಹತ್ತನೇ ತರಗತಿಯ ವಿದ್ಯಾಶ್ರೀ, ಕೀರ್ತನಾ ಡಿಸೋಜ, ಎಂಟನೇ ತರಗತಿಯ ಸಾನ್ವಿ ಶೆಟ್ಟಿ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾಟದಲ್ಲಿ ಶಗುನ್ ವರ್ಮಾ ಬೆಸ್ಟ್ ಅಟ್ಯಾಕರ್ ಮತ್ತು ಶೈನಿ ಡಿಸೋಜ ಬೆಸ್ಟ್ ಪಾಸರ್ ಪ್ರಶಸ್ತಿ ಪಡೆದುಕೊಂಡರು.

Categories
ಉಡುಪಿ

ವಿದುಷಿ ದೀಕ್ಷಾ ವಿ ವಿಶ್ವ ದಾಖಲೆ..!

ವಿದುಷಿ ದೀಕ್ಷಾ ವಿ ವಿಶ್ವ ದಾಖಲೆ..!
– ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ದಾಖಲೆ ಸೃಷ್ಠಿಸಿದ ದೀಕ್ಷಾ
– 7 ದಿನಗಳಲ್ಲಿ 170 ಗಂಟೆ ಭರತನಾಟ್ಯ ಪ್ರದರ್ಶಿಸಿದ್ದ ರೆಮೋನಾ ದಾಖಲೆ
– 9 ದಿನದಲ್ಲಿ 216 ಗಂಟೆ ಭರತನಾಟ್ಯ ಪ್ರದರ್ಶಿಸುವ ಹೊಸ ಗುರಿ

NAMMMUR EXPRESS NEWS
ಉಡುಪಿ: ಸತತ 9 ದಿನದಲ್ಲಿ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಿ ನೂತನ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಿ ಭರತನಾಟ್ಯ ಪ್ರದರ್ಶಿಸುತ್ತಿರುವ ವಿದೂಷಿ ದೀಕ್ಷಾ ವಿ ಇದೀಗ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ.
,ಈ ಹಿಂದೆ ವಿಶ್ವದಾಖಲೆಗಾಗಿ 7 ದಿನಗಳಲ್ಲಿ 170 ಗಂಟೆ ನಿರಂತರ ಭರತನಾಟ್ಯ ಪ್ರದರ್ಶಸಿ ಮಂಗಳೂರಿನ ರೆಮೋನಾ ಪೆರೇರಾ ನಿರ್ಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಇದೀಗ ದೀಕ್ಷಾ ಮುಡಿಗೆ ಏರಿದೆ.

ಆ. 21ರಂದು ಶುರು ಮಾಡಿದ್ದ ನೃತ್ಯಗಾರ್ತಿ

ಹೊಸ ದಾಖಲೆ ಬರೆಯುವಲ್ಲಿ ಸಾಗುತ್ತಿರುವ ಉಡುಪಿಯ ವಿದುಷಿ ದೀಕ್ಷಾ ವಿ ಆ. 21 ರಂದು ಮಧ್ಯಾಹ್ನ 3:30 ಕ್ಕೆ ನೃತ್ಯ ಪ್ರದರ್ಶನ ಆರಂಭಿಸಿ, 9 ದಿನಗಳಲ್ಲಿ 216 ಗಂಟೆ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ. ಸದ್ಯ ಅವರ 170 ಗಂಟೆಗಳ ಪ್ರದರ್ಶನ ಪೂರ್ಣಗೊಳ್ಳುತ್ತಿದ್ದಂತೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮುಖ್ಯಸ್ಥ ಮನೀಶ್ ವಿಷ್ಟೋಯಿ ಘೋಷಿಸಿದರು. ಬಳಿಕ ಹಲವಾರು ಮಂದಿ ಗಣ್ಯರು ಅಭಿನಂದಿಸಿದರು.

ಇನ್ನು 1 ದಿನ ಬಾಕಿ: ಸಾವಿರಾರು ಜನರ ಹಾರೈಕೆ

ಶನಿವಾರ ಮಧ್ಯಾಹ್ನ 3:30ಕ್ಕೆ 216 ಗಂಟೆ ಪೂರೈಸಲಿರುವ ದೀಕ್ಷಾ ಅವರಿಗೆ ನಾಡಿನ ಹಾಗೂ ದೇಶದ ವಿವಿಧ ಕಡೆಯಿಂದ ಹಾರೈಕೆಗಳು ಬರುತ್ತಿವೆ. ಕರಾವಳಿಯ ಈ ಪ್ರತಿಭೆಗೆ ಶುಭಾಶಯಗಳು

ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ
ಕರಾವಳಿ

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ
– ತೀರ್ಥಹಳ್ಳಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ!
– ಗಣೇಶ ಕಾರ್ಯಕ್ರಮ, ವಿಸರ್ಜನೆಗೆ ಸಂಕಷ್ಟ
– ಅಡಿಕೆಗೆ ಕೊಳೆ ರೋಗ ಹೆಚ್ಚುವ ಭೀತಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಳೆದ 3-4 ದಿನದಿಂದ ಭಾರೀ ಮಳೆ ಆಗುತ್ತಿದೆ.
ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ವ್ಯಾಪಾಕವಾಗಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ & ಪ್ರೌಢ ಶಾಲೆಗಳಿಗೆ & ಪಿ ಯು ಸಿ ಕಾಲೇಜುಗಳಿಗೆ ದಿನಾಂಕ:29.8.25 ದಂದು ರಜೆ ಘೋಷಿಸಿದೆ. ಸದರಿ ರಜಾ ಅವಧಿಯಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನದಲ್ಲಿ ಸರಿಹೊಂದಿಸಿಕೊಳ್ಳಲು ಸಂಬಂಧಿತ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಿದೆ ಎಂದು ತಹಶೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರೀ ಮಳೆ ಜನ ಜೀವನ ಅಸ್ತವ್ಯಸ್ತ

ಮಳೆ ಕಾರಣ ಎಲ್ಲೆಡೆ ನೆಟ್ವರ್ಕ್ ಹಾಗೂ ವಿದ್ಯುತ್ ಇಲ್ಲ. ಇನ್ನು ಅಡಿಕೆಗೆ ಕೊಳೆ ರೋಗ ಹೆಚ್ಚಳವಾಗಿದೆ. ತೋಟದಿಂದ ಅಡಿಕೆ ಉದುರುತ್ತಿದೆ. ಇತ್ತ ಜನ ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾಲಕ್ಷ್ಮಿ ತಾಯಿಯ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ತುಂಬಾ ಶುಭ ದಿನವಾಗಲಿದೆ. ಉದ್ಯೋಗ ಹುಡುಕಾಟ ಪೂರ್ಣಗೊಳ್ಳಲಿದೆ. ಪರಿಸ್ಥಿತಿಗಳು ಕ್ರಮೇಣ ಅನುಕೂಲಕರವಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ, ಕೆಲವರು ತಮ್ಮ ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ವೃಷಭ ರಾಶಿ :
ಇಂದು ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿಯೂ ಸಮತೋಲನದಿಂದಿರಿ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂದರ್ಭಗಳು ಅನುಕೂಲಕರವಾಗಿರುತ್ತದೆ. ಇಂದು ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಇಂದು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಎಚ್ಚರವಿರಲಿ.

** ಮಿಥುನ ರಾಶಿ :
ಇಂದು ಸಂದರ್ಭಗಳು ಪ್ರತಿಕೂಲವಾಗಿರಲಿವೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಗಾಯಗಳು ಸಂಭವಿಸಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆದರೆ, ವ್ಯವಹಾರದಲ್ಲಿ ಹಣ ನಷ್ಟವಾಗುವ ಲಕ್ಷಣಗಳಿವೆ. ಆದ್ದರಿಂದ, ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಮತ್ತು ಯಾರ ಭಾವನೆಗಳಿಗೂ ಧಕ್ಕೆ ತರುವಂತಹ ಪದಗಳನ್ನು ಬಳಸಬೇಡಿ.

** ಕರ್ಕಾಟಕ ರಾಶಿ :
ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಯೋಜನೆಗೆ ಜವಾಬ್ದಾರಿ ಸಿಗಲಿದೆ. ಆದಾಯದ ಮೂಲವಾಗಲಿದೆ. ಕಚೇರಿ ಸಭೆಗಳಲ್ಲಿ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ.

** ಸಿಂಹ ರಾಶಿ :
ಇಂದು ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅತಿಯಾದ ಕೋಪವನ್ನು ತಪ್ಪಿಸಿ ಮತ್ತು ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಇಂದು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ಮುಕ್ತಿ ದೊರೆಯಲಿದೆ.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರು ಶೈಕ್ಷಣಿಕ ಕೆಲಸದಲ್ಲಿ ನೀವು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ, ಉದ್ಯೋಗಿಗಳು ಇಂದು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರ ವಹಿವಾಟುಗಳಿಗೆ ಸಹಿ ಹಾಕುವಾಗ ವ್ಯಾಪಾರಸ್ಥರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ ಮತ್ತು ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ.

** ತುಲಾ ರಾಶಿ :
ಇಂದು ಜೀವನದಲ್ಲಿ ಹಲವು ಏರಿಳಿತಗಳು ಎದುರಾಗುತ್ತವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ವ್ಯಾಪಾರಿಗಳು ವ್ಯಾಪಾರದಲ್ಲಿ ತೊಂದರೆಗಳನ್ನು ಎದುರಿಸಬಹುದು. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ. ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ ಮತ್ತು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ಟೀಮ್ ವರ್ಕ್ ಮೇಲೆ ಗಮನ ಹರಿಸಿ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿ ಮತ್ತು ಸವಾಲುಗಳನ್ನು ಜಯಿಸಲು ಪರಸ್ಪರ ಪ್ರೇರೇಪಿಸುತ್ತಿರಿ. ಇಂದು ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಇಂದು, ಹಿಂದಿನ ನೆನಪುಗಳು ಗೊಂದಲವನ್ನು ಹೆಚ್ಚಿಸಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಕುಟುಂಬದೊಂದಿಗೆ ಸಮಯ ಕಳೆಯಿರಿ.

** ಧನಸ್ಸು ರಾಶಿ :
ಇಂದು ನೀವು ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತೀರಿ. ಸೋಮಾರಿತನದಿಂದ ದೂರವಿರಿ. ನಿಮ್ಮ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಶುಭ ದಿನವಾಗಿದೆ. ಹಿಂದಿನ ತಪ್ಪುಗಳಿಂದ ಕಲಿಯುವ ಮೂಲಕ ಜೀವನದಲ್ಲಿ ಮುನ್ನಡೆಯಿರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಕೆಲವು ಜನರು ತಮ್ಮ ಸಂಗಾತಿಯೊಂದಿಗೆ ವಾರಾಂತ್ಯವನ್ನು ಯೋಜಿಸಬಹುದು.

** ಮಕರ ರಾಶಿ :
ಇಂದು ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಕೆಲವರ ಮದುವೆ ನಿಶ್ಚಯವಾಗಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಭೋಜನವನ್ನು ಯೋಜಿಸಬಹುದು. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಕೆಲವು ಸ್ಮರಣೀಯ ಕ್ಷಣಗಳನ್ನು ಕಳೆಯಿರಿ. ಇದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಆದಾಗ್ಯೂ, ಹೆಚ್ಚಿನ ಜವಾಬ್ದಾರಿಯಿಂದ ಕಚೇರಿ ಕೆಲಸವನ್ನು ನಿರ್ವಹಿಸಿ.

** ಕುಂಭ ರಾಶಿ :
ಇಂದು ನಿಮ್ಮ ಕಠಿಣ ಪರಿಶ್ರಮದಿಂದ ಫಲವಿದೆ. ಕುಂಭ ರಾಶಿಯ ಜನರು ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಎಲ್ಲಾ ಕೆಲಸಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇಂದು ಕೆಲಸದ ಸಂಬಂಧದಲ್ಲಿ ಪ್ರಯಾಣಿಸುವ ಸಾಧ್ಯತೆಗಳಿವೆ.

** ಮೀನ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ, ಸೃಜನಶೀಲತೆ ಮತ್ತು ಹೊಸ ನವೀನ ಆಲೋಚನೆಗಳೊಂದಿಗೆ ಮಾಡಿದ ಕೆಲಸವು ಯಶಸ್ವಿಯಾಗುತ್ತದೆ. ಇಂದು ಹಣದ ವ್ಯವಹಾರಗಳನ್ನು ತಪ್ಪಿಸಿ. ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ. ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದು ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಕಚೇರಿಯಲ್ಲಿ ಅನಗತ್ಯ ಚರ್ಚೆಗಳಿಂದ ದೂರವಿರಿ. ನಿಮ್ಮ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ. ಇಂದು ವೈವಾಹಿಕ ಜೀವನದಲ್ಲಿ ಸಂತೋಷದ ವಾತಾವರಣವಿರುತ್ತದೆ.

Categories
ಚಿಕ್ಕಮಗಳೂರು

ಎನ್ ಆರ್ ಪುರ ಪೊಲೀಸ್‌ಗೆ ದಂಡ ಹಾಕಿದ ಕೊಪ್ಪ ಪೊಲೀಸ್

ಎನ್ ಆರ್ ಪುರ ಪೊಲೀಸ್‌ಗೆ ದಂಡ ಹಾಕಿದ ಕೊಪ್ಪ ಪೊಲೀಸ್

* ನೋ ಪಾರ್ಕಿಂಗ್‌ನಲ್ಲಿ ಎನ್ ಆರ್ ಪುರ ಪೊಲೀಸ್ ವಾಹನ ಪಾರ್ಕಿಂಗ್
* ಕಾನೂನು ಎಲ್ಲರಿಗೂ ಒಂದೇ ಎಂದು ಸಾರಿದ ಕೊಪ್ಪ ಪಿಎಸ್‌ಐ ಕಾರ್ಯಕ್ಕೆ ಶ್ಲಾಘನೆ

NAMMMUR EXPRESS NEWS
ಕೊಪ್ಪ: ಪೊಲೀಸರಿಗೆ ಪೊಲೀಸರೇ ದಂಡ ವಿಧಿಸಿ ಕಾನೂನು ಎಲ್ಲರಿಗೂ ಒಂದೇ ಎಂದು ಸಾರಿದ ವಿಶೇಷ ಘಟನೆಯೊಂದು ಕೊಪ್ಪ ಪಟ್ಟಣದಲ್ಲಿ ನಡೆದಿದೆ.
ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಎನ್‍ಆರ್ ಪುರ ಪೊಲೀಸ್ ಠಾಣೆಯ ಪೊಲೀಸ್ ಜೀಪಿಗೆ ಕೊಪ್ಪದ ಪೊಲೀಸರು ದಂಡ ವಿಧಿಸಿದ್ದಾರೆ.
ಎನ್‍ಆರ್ ಪುರ ಠಾಣೆಯ ಸಿಪಿಐ ಜೀಪು ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ರೌಂಡ್ಸ್‌ನಲ್ಲಿದ್ದ ಕೊಪ್ಪ ಪೊಲೀಸರು ವಾಹನ ಲಾಕ್ ಮಾಡಿದ್ದರು. ಬಳಿಕ ಪಿಎಸ್‍ಐ 500 ರೂ. ದಂಡ ವಿಧಿಸಿದ್ದಾರೆ.
500 ದಂಡ ಕಟ್ಟಿ ಚಾಲಕ ವಾಹನವನ್ನು ಬಿಡಿಸಿಕೊಂಡು ಹೋಗಿದ್ದಾರೆ. ಕೊಪ್ಪ ಪಿಎಸ್‍ಐ ಬಸವರಾಜ್ ಕಾರ್ಯಕ್ಕೆ ಕೊಪ್ಪ ತಾಲೂಕಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಪೊಲೀಸರಿಗೆ ದಂಡ ವಿಧಿಸುವ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಪಿಎಸ್‍ಐ ಸಾರಿದ್ದಾರೆ ಎಂದು ಜನ ಕೊಂಡಾಡಿದ್ದಾರೆ.

Categories
ರಾಜ್ಯ

ರಾಜ್ಯದ ಎಲ್ಲೆಡೆ ಗಣಪತಿ ಹಬ್ಬದ ಸಂಭ್ರಮ..!!

ರಾಜ್ಯದ ಎಲ್ಲೆಡೆ ಗಣಪತಿ ಹಬ್ಬದ ಸಂಭ್ರಮ..!!
– ಗಣೇಶ ಹಬ್ಬಕ್ಕೆ ಮಳೆ ಅಡ್ಡಿ
– ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಆಗುವ ಸಾಧ್ಯತೆ

ರಾಜ್ಯದ ಎಲ್ಲೆಡೆ ಗಣಪತಿ ಹಬ್ಬದ ಸಂಭ್ರಮ. ಎಲ್ಲಾ ಊರುಗಳಲ್ಲೂ ಹಾಗೂ ಮನೆಮನೆಗಳಲ್ಲೂ ಕೂಡ ಗಣಪತಿಯನ್ನು ಕೂರಿಸಿ ಗಣಪತಿಗೆ ಎಲ್ಲೆಡೆ ಪೂಜೆ ಪುನಸ್ಕಾರ ಇದರ ನಡುವೆ ಮಳೆಯೂ ಕೂಡ ಅಡ್ಡಿಯಾಗಿದೆ. ಕಳೆದ 2 ದಿನಗಳಿಂದ ಮಳೆ ಹಬ್ಬದ ಸಂಭ್ರಮಕ್ಕೆ ತೊಂದರೆ ಮಾಡುತ್ತಿದೆ. ರಾಜ್ಯದಲ್ಲಿ ಎಲ್ಲೆಡೆ 3 ದಿನಗಳಿಂದ ಮಳೆಯಾಗುವ ಸಾಧ್ಯತೆ. ಮಳೆ ನಡುವೆ ರಾಜ್ಯದಲ್ಲಿ ಸಂಭ್ರಮದ ಗಣಪತಿ ಹಬ್ಬ ಆಚರಣೆ ಆಗುತ್ತಿದೆ.

ಈಗಾಗಲೇ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಪರಿಸರ ಸ್ನೇಹಿ ಗಣಪತಿಯನ್ನ ಎಲ್ಲಡೆ ಇಟ್ಟು ಪೂಜೆ ಪುನಸ್ಕಾರ ಮಾಡಲಾಗಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇತರೆ ಪೂಜಾ ಕೈಂಕಾರ್ಯಗಳಿಗೆ ಮಳೆರಾಯ ಅಡ್ಡಿಪಡಿಸುತ್ತಿದೆ. ಮಳೆಯ ನಡುವೆಯೂ ಕೂಡ ಗಣಪತಿ ಹಬ್ಬದ ಸಂಭ್ರಮ ಎಲ್ಲಡೆ ಮನೆ ಮಾಡಿದೆ. ಕೆಲವು ಕಡೆ ಈಗಾಗಲೇ ಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ. ಇನ್ನೂ ಕೆಲವು ಕಡೆ ಮೂರು ದಿನ, ಐದು ದಿನ, ಒಂಬತ್ತು ದಿನ, 13 ದಿನಗಳ ಕಾಲ ಗಣಪತಿ ಹಬ್ಬದ ಸಂಭ್ರಮವನ್ನು ಸವಿಯುತ್ತಾರೆ.

Categories
ತೀರ್ಥಹಳ್ಳಿ

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಮಾಸಿಕ ಡ್ರಾ

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಮಾಸಿಕ ಡ್ರಾ
– ರಿಯಾ ಕೋಣಂದೂರು ಅವರಿಗೆ ಒಂದು ಲಕ್ಷ ಮೌಲ್ಯದ ಬಹುಮಾನ
– ಅನೇಕ ಗ್ರಾಹಕರಿಗೆ ವಿಶೇಷ ಬಹುಮಾನ

NAMMUR EXPRESS NEWS
ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ವತಿಯಿಂದ 15ನೇ ವಾರ್ಷಿಕೋತ್ಸವದ ಮಾಸಿಕ ಡ್ರಾ 25-08-2025 ರಂದು ಶೋರೂಮ್ನಲ್ಲಿ ನಡೆಯಿತು ಈ ಡ್ರಾ ನಲ್ಲಿ ಶ್ರೀ ತೌಫೀಕ್, ಶ್ರೀ ಜಗದೀಶ್, ಶ್ರೀ ಜಲೀಲ್, ಶ್ರೀ ಶಂಕರಪ್ಪ, ಶ್ರೀಮತಿ ರೇಷ್ಮಾ ಮತ್ತು ಶ್ರೀ ವೆಂಕಟೇಶ್ ಅವರು ನಡೆಸಿಕೊಟ್ಟರು.
ದಿ ನ್ಯಾಷನಲ್ ಗೋಲ್ಡ್ & ಡೈಮಂಡ್ ಪಾಲುದಾರರಾದ ಮೊಯಿದ್ದೀನ್ ಕಬೀರ್, ಯೂಸುಫ್ ಹೈದರ್, ಶೇಖ್ ಅಹ್ಮದ್ ಶರೀಖ್ ಅವರು ಗ್ರಾಹಕರ ಸಮ್ಮುಖದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡ್ರಾದ ವಿಜೇತರ ವಿವರಗಳು ಈ ಕೆಳಗಿವೆ.

ಮಾಸಿಕ ಡ್ರಾ ವಿಜೇತರ ಪಟ್ಟಿ

1ನೇ ಬಹುಮಾನ
1,00,000 ಚಿನ್ನ ನಂ: 26943 ರಿಯಾ, ಕೊಣಂದೂರು

2 ನೇ ಬಹುಮಾನ
₹75,000 ಚಿನ್ನ ನಂ: 27406 ಸ್ಮಿತಾ.ಡಿ , ಕುರುವಳ್ಳಿ

3ನೇ ಬಹುಮಾನ
₹50,000 ಚಿನ್ನ ನಂ: 13408 ಮೀರಾ, ಮಂಡಗದ್ದೆ

4ನೇ ಬಹುಮಾನ
₹25,000 ಚಿನ್ನ ನಂ: 20946 ನಸೀಮಾ ಬಾನು ಕೊಪ್ಪ

ಸಮಾಧಾನಕರ ಬಹುಮಾನ

1ನೇ ಬಹುಮಾನ
₹10,000 ನಂ: 23206 ಅರುಣಾ.ಹೆಚ್.ವಿ, ನಾಲೂರು

2ನೇ ಬಹುಮಾನ
₹10,000 ನಂ: 15350 ಕೆ.ಹೆಚ್. ಅಬ್ದುಲ್ ನಜೀರ್, ಕೊಣಂದೂರು

3ನೇ ಬಹುಮಾನ
₹10,000 ನಂ: 17037 ಅಮೃತಾ.ಜಿ.ಎಂ,ಹಂಸಾ

ಮೊಬೈಲ್ ಹ್ಯಾಂಡ್‌ಸೆಟ್ ವಿಜೇತರು

ನಂ: 16423
ಗಣೇಶ್ ಹೆಗ್ಗಡೆಮನೆ, ತೀರ್ಥಹಳ್ಳಿ 

Categories
ತೀರ್ಥಹಳ್ಳಿ

ಸಿಗಂದೂರು ಸೇತುವೆ ಮಾದರಿ ಜತೆ ಗಣೇಶ!

ಸಿಗಂದೂರು ಸೇತುವೆ ಮಾದರಿ ಜತೆ ಗಣೇಶ!
– ಸುಳುಗೋಡು-ಯಡೂರುನಲ್ಲಿ ವಿಭಿನ್ನ ಆಕರ್ಷಣೆಯ ಗಣಪತಿ
– ಸಿಗಂದೂರು ಸೇತುವೆ ಅದ್ಭುತ ಮಾದರಿ ತಯಾರಿಸಿ ಗಣೇಶೋತ್ಸವ

NAMMUR EXPRESS NEWS
ತೀರ್ಥಹಳ್ಳಿ : ನಾಡಿನ ಮೂಲೆಮೂಲೆಗೂ ಗಣೇಶ ಚತುರ್ಥಿಯ ಹಬ್ಬದ ಕಳೆ ಮನೆಮಾಡಿದೆ. ವಿಶೇಷವಾಗಿ ಮಲೆನಾಡಿನಲ್ಲಿ ತೀವ್ರ ಮಳೆಯ ನಡುವೆಯೂ ಸಾರ್ವಜನಿಕ ಗಣೇಶೋತ್ಸವಗಳನ್ನು ಜನರು ಅಪಾರ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಸುಳುಗೋಡು-ಯಡೂರು ವಿನಾಯಕ ಸೇವಾ ಸಮಿತಿಯು ಪ್ರತಿವರ್ಷವೂ ವಿಭಿನ್ನ ಆಕರ್ಷಣೆಗಳ ಮೂಲಕ ಭಕ್ತರ ಮನಗೆಲ್ಲುತಿದೆ. ಕಳೆದ ವರ್ಷ ಮಾಣಿ ಡ್ಯಾಂ ಮಾದರಿಯನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದ ಸಮಿತಿ, ಈ ಬಾರಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಸಿಗಂದೂರು ಸೇತುವೆಯ ಅದ್ಭುತ ಮಾದರಿಯನ್ನು ತಯಾರಿಸಿ ಗಣೇಶೋತ್ಸವಕ್ಕೆ ವಿಶಿಷ್ಟ ಮೆರಗು ನೀಡಿದೆ.
ಆದರೆ ಈ ಬಾರಿ ಸಮಿತಿಯ ವಿಶೇಷತೆ ಕೇವಲ ಕಲಾತ್ಮಕತೆಯಲ್ಲಿ ಮಾತ್ರ ಸೀಮಿತವಾಗಿರದೆ, ಗ್ರಾಮದ ಸಮಗ್ರ ಅಭಿವೃದ್ಧಿಯ ಅವಶ್ಯಕತೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮಸ್ಥರಲ್ಲಿ ಹೋರಾಟದ ಕಿಚ್ಚು ಹೊತ್ತಿಸುವ ಕೆಲಸವನ್ನೂ ಕೈಗೊಂಡಿದೆ. ಹಬ್ಬದ ಸಂಭ್ರಮದ ನಡುವೆ ಸಮಾಜಮುಖಿ ಚಟುವಟಿಕೆಯನ್ನು ಹಬ್ಬದ ಅಂಗವಾಗಿ ಸೇರಿಸಿರುವುದು ಸ್ಥಳೀಯರಲ್ಲಿ ಹೊಸ ಚೈತನ್ಯವನ್ನು ಉಂಟುಮಾಡಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹಿಲಿಕೆರೆಯಲ್ಲಿ 49ನೇ ವರ್ಷದ ಗಣಪತಿ ಸಂಭ್ರಮ!

ತೀರ್ಥಹಳ್ಳಿ ಹಿಲಿಕೆರೆಯಲ್ಲಿ 49ನೇ ವರ್ಷದ ಗಣಪತಿ ಸಂಭ್ರಮ!
– ಅದ್ದೂರಿ ಆಚರಣೆ, ಮೆರವಣಿಗೆ, ಪಟಾಕಿ ಮೂಲಕ ಗಮನ ಸೆಳೆದ ಗಣಪತಿ
– ತೀರ್ಥಹಳ್ಳಿ ತಾಲೂಕಲ್ಲೇ ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ

NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನಲ್ಲಿ ಗಮನ ಸೆಳೆದ ಹಿಲಿಕೆರೆ ಹಾಗೂ ದೇವಂಗಿ ಗಣಪತಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ. ದೇವಂಗಿಯಲ್ಲಿ 99ನೇ ವರ್ಷದ ಗಣಪತಿ ಉತ್ಸವ ನಡೆಯುತ್ತಿದೆ. ಹಿಲಿಕೆರೆಯಲ್ಲಿ 49ನೇ ವರ್ಷದ ಗಣಪತಿ ಉತ್ಸವ ನಡೆಯುತ್ತಿದೆ. ಎರಡು ಗಣಪತಿಗಳು ತಾಲೂಕಿನ ಪ್ರತಿಷ್ಠಿತ ಗಣಪತಿಗಳಾಗಿದ್ದು ತಮ್ಮ ಅಲಂಕಾರದ ಮೂಲ ಹಾಗೂ ಪಟಾಕಿ ಮೂಲಕ ಗಮನ ಸೆಳೆದಿದೆ. ಹಿಲಿಕೇರಿಯಲ್ಲಿ ಹಾಗೂ ದೇವಂಗಿಯಲ್ಲಿ ಐದು ದಿನಗಳ ಕಾಲ ಗಣೇಶೋತ್ಸವ ನಡೆಯಲಿದೆ. ಎರಡು ಗಣಪತಿಗಳ ಸಮಾಗಮ ತಾಲೂಕಿನಲ್ಲಿ ಗಮನ ಸೆಳೆದಿರುವಂತದ್ದು, ಸಾವಿರಾರು ಮಂದಿ ಈ ಸಮಾಗಮದಲ್ಲಿ ಭಾಗಿಯಾಗಿ ಖುಷಿಯಲ್ಲಿ ಮಿಂದು ಏಳುತ್ತಾರೆ. ಎರಡು ಸಮಿತಿಯು ಕೂಡ ಸರ್ವರನ್ನು ಸ್ವಾಗತಿಸಿದೆ.

ಹಿಲಿಕೆರೆಯಲ್ಲಿ ಸಂಭ್ರಮದ ಗಣೇಶೋತ್ಸವ!

ಶ್ರೀ ಗಜಾನನ ಸೇವಾ ಸಮಿತಿ ಹಿಲಿಕೆರೆ ವತಿಯಿಂದ 5 ದಿನಗಳ ಪರ್ಯಂತ ಹಿಲಿಕೆರೆಯಲ್ಲಿ 49 ನೇ ವರ್ಷದ ಸಾರ್ವಜನಿಕ “ಶ್ರೀ ಗಣೇಶೋತ್ಸವ” ವನ್ನು ಆಚರಿಸಲಾಗುತ್ತಿದೆ
ದಿನಾಂಕ : 27-08-2025 ನೇ ಬುಧವಾರ ಬೆಳಿಗ್ಗೆ ಗಂಟೆ 11-30ಕ್ಕೆ
“ಶ್ರೀ ವಿದ್ಯಾಗಣಪತಿ ಪ್ರತಿಷ್ಠಾಪನೆ” ಶ್ರೀಯುತ ಗುರುಪ್ರಸಾದ್ ಮತ್ತು ಸಂಗಡಿಗರಿಂದ ವಾದ್ಯಗೋಷ್ಠಿ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ವಿಗ್ರಹ ದಾನಿಗಳಿಂದ ಲಘು ಉಪಹಾರ,
ಸಂಜೆ 7-00 ಗಂಟೆಗೆ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ನಂತರ ಸ್ವರ್ಣಶ್ರೀ ಹಾಗೂ ಆದಿಶಕ್ತಿ ಮಂಡಳಿ ಇವರಿಂದ “ಭಜನಾ ಕಾರ್ಯಕ್ರಮ” ನಡೆದಿದೆ.
ದಿನಾಂಕ 28-08-2025 ನೇ ಗುರುವಾರ ಬೆಳಿಗ್ಗೆ ಗಂಟೆ 10-30 ಕ್ಕೆ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಸಂಜೆ ಗಂಟೆ 7-ಕ್ಕೆ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ. ನಂತರ ಹಿಲಿಕೆರೆ-ಹೊಸ್ತೋಟ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ವಿಜೇತೆ ಶ್ರೀಮತಿ ಸ್ನೇಹಲತಾ ಮತ್ತು ಸಂಗಡಿಗರು, ತೀರ್ಥಹಳ್ಳಿ ಇವರಿಂದ ಸಂಗೀತ ಸಂಜೆ. ದಿನಾಂಕ 29-08-2025 ನೇ ಶುಕ್ರವಾರ ಬೆಳಗ್ಗೆ ಗಂಟೆ 10-30 ಕ್ಕೆ “ಸತ್ಯನಾರಾಯಣ ವೃತ” ಮತ್ತು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ. ಸಂಜೆ 7-00 ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಂತರ “ಕನಸು ತಂಡ” ಡ್ಯಾನ್ಸ್ ಪ್ರೋ ಕಲಾವಿದರಿಂದ “ನೃತ್ಯ ಪ್ರದರ್ಶನ”
ದಿನಾಂಕ 30-08-2025 ನೇ ಶನಿವಾರ ಬೆಳಗ್ಗೆ 10-30 ಕ್ಕೆ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ನಂತರ “ಶ್ರೀ ಸತ್ಯನಾರಾಯಣ ಪೂಜೆ” ಮತ್ತು ಮಧ್ಯಾಹ್ನ “ಅನ್ನಸಂತರ್ಪಣೆ” ಸಂಜೆ 7-00 ಗಂಟೆಗೆ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ನಂತರ ಸಿದ್ದಾರ್ಥ ಅಂಧರ ಕೇಂದ್ರ (ರಿ.,) ನ್ಯೂಟೌನ್ ಭದ್ರಾವತಿ ಇವರಿಂದ ಆರ್ಕೇಸ್ಟ್ರಾ ( ಇದರ ಪ್ರಾಯೋಜಕರು : ಶ್ರೀ ಅರುಣ್ ಕುಮಾರ್ ನಾಯಕ್ ಕೋಲ್ಗರ್, ಉದ್ಯಮಿಗಳು, ಬೆಂಗಳೂರು)
ದಿನಾಂಕ 31-08-2025 ನೇ ಭಾನುವಾರ ಬೆಳಗ್ಗೆ 10-30 ಕ್ಕೆ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ,
ನಂತರ ಮಧ್ಯಾಹ್ನ ಗಂಟೆ 3-00 ಕ್ಕೆ ರಾಜಬೀದಿ ಉತ್ಸವದಲ್ಲಿ ಶ್ರೀ ಮುತ್ತಿನಮ್ಮ ಎನ್‌.ಆರ್.ಪುರ ಇವರಿಂದ “ನಾಸಿಕ್ ಬ್ಯಾಂಡ್” ಹಾಗೂ ಅಲಂಕೃತ ಮಂಟಪದ ವಾಹನದೊಂದಿಗೆ ಮೆರವಣಿಗೆ.ವಿವಿಧ ವೇಷ-ಭೂಷಣ ಮತ್ತು ಆಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ರಾಜ ಬೀದಿ ಉತ್ಸವದೊಂದಿಗೆ ಶ್ರೀ ವಿದ್ಯಾಗಣಪತಿಯ ವಿಸರ್ಜನೆ ನಡೆಯಲಿದೆ.

Categories
ಮಾಹಿತಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ -ರೋಷನ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ -ರೋಷನ್
– ಬೆಂಗಳೂರಿನ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ವಿವಾಹ
– ಜವಾಬ್ದಾರಿ ಮುಗಿಸಿ ಮದುವೆಯಾಗ್ತಿರೋ ನಟಿ

NAMMUR EXPRESS NEWS
ಕೆಲ ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಇಂದು ( ಆಗಸ್ಟ್‌ 28ರಂದು) ನಿರೂಪಕಿ ಅನುಶ್ರೀ ಹಾಗೂ ರೋಶನ್‌ ಮದುವೆ ಆಗಿದ್ದಾರೆ. ಹೂವುಗಳಿಂದಲೇ ಮದುವೆ ಮಂಟಪ ಸೇರಿದಂತೆ ರೆಸಾರ್ಟ್‌ನ್ನು ಸಿಂಗಾರ ಮಾಡಲಾಗಿತ್ತು. ಗೌರಿ ಗಣೇಶ ಹಬ್ಬದಂದು ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ಮೆಹೆಂದಿ ಶಾಸ್ತ್ರ ನಡೆದಿತ್ತು. ಈಗ ಮದುವೆ ಆಗಿದೆ.

ಅನುಶ್ರೀ ಅವರ ವಿವಾಹ ಬೆಂಗಳೂರಿನ ಹೊರ ವಲಯದಲ್ಲಿ ಇರುವ ಕಗ್ಗಲಿಪುರದ ರೆಸಾರ್ಟ್ ಒಂದರಲ್ಲಿ ನಡೆಯುತ್ತಿದೆ. ಈ ವಿಚಾರ ತಿಳಿದ ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಆದರೆ, ಅಭಿಮಾನಿಗಳಿಗೆ ಒಳಗೆ ಎಂಟ್ರಿ ನೀಡಲಾಗುತ್ತಿಲ್ಲ. ಅನುಶ್ರೀ ವಿವಾಹಕ್ಕೆ ಆಮಂತ್ರಣ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹೀಗಾಗಿ, ಅಭಿಮಾನಿಗಳನ್ನು ಆರಂಭದಲ್ಲೇ ತಡೆದು ಕಳುಹಿಸಲಾಗುತ್ತಿದೆ. ಇದರಿಂದ ಫ್ಯಾನ್ಸ್ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಅವರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಜವಾಬ್ದಾರಿ ಮುಗಿಸಿ ಮದುವೆಯಾಗ್ತಿರೋ ನಟಿ
ಚಿಕ್ಕ ವಯಸ್ಸಿನಲ್ಲಿಯೇ ತಂದೆ ಮನೆ ಬಿಟ್ಟು ಹೋದಾಗ ತಾಯಿ ಅನುಶ್ರೀ ಹಾಗೂ ಅವರ ತಮ್ಮನನ್ನು ಸಾಕಿದ್ದರು. ಬಹಳ ಬೇಗ ಮನೆಯ ಜವಾಬ್ದಾರಿ ಹೊತ್ತ ಅನುಶ್ರೀ ದುಡಿಯಲು ಆರಂಭಿಸಿದರು. ಕುಡ್ಲದ ಈ ನಿರೂಪಕಿ ತಾಯಿಗೋಸ್ಕರ ಮನೆ ಕೂಡ ಮಾಡಿದ್ದಾರೆ. ಅವರ ತಮ್ಮ ಕೂಡ ಹೋಟೆಲ್‌ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಮನೆಯ ಜವಾಬ್ದಾರಿಯನ್ನು ನಿಭಾಯಿಸಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.