Categories
ಕಾರ್ಕಳ

ಕ್ರೈಸ್ಟ್ ಕಿಂಗ್: ಶಟಲ್ ಬ್ಯಾಡ್ಮಿಂಟನ್‌ನಲ್ಲಿ 6 ಬಾಲಕ-ಬಾಲಕಿ ಆಯ್ಕೆ

ಕ್ರೈಸ್ಟ್ ಕಿಂಗ್: ಶಟಲ್ ಬ್ಯಾಡ್ಮಿಂಟನ್‌ನಲ್ಲಿ 6 ಬಾಲಕ-ಬಾಲಕಿ ಆಯ್ಕೆ
– ೧೪/೧೭ರ ವಯೋಮಿತಿ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ
– ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಹಾಗೂ ಪ್ರೌಢಶಾಲಾ ಬಾಲಕರ ತಂಡ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

NAMMUR EXPRESS NEWS
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ ಇವರ ಆಶ್ರಯದಲ್ಲಿ ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ೧೪/೧೭ರ ವಯೋಮಿತಿ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ೧೪ರ ವಯೋಮಿತಿಯ ಬಾಲಕಿಯರ ತಂಡ ಹಾಗೂ ಪ್ರೌಢಶಾಲೆಯ ೧೭ರ ವಯೋಮಿತಿಯ ಬಾಲಕರ ತಂಡಗಳು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿವೆ. ೧೪ರ ವಯೋಮಿತಿಯ ಬಾಲಕಿಯರ ತಂಡವನ್ನು ಪ್ರತಿನಿಧಿಸಿದ್ದ ಎಂಟನೇ ತರಗತಿಯ ಖುಷಿ ಶೆಟ್ಟಿ, ಆರನೇ ತರಗತಿಯ ತ್ರಿಷ್ಮ ಎಸ್ ಹಾಗೂ ಕೆಟ್ಲಿನ್ ಏಂಜೆಲ್ ಪಿಂಟೊ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದರೆ ಪ್ರೌಢಶಾಲಾ ಬಾಲಕರ ೧೭ರ ವಯೋಮಿತಿಯ ತಂಡವನ್ನು ಪ್ರತಿನಿಧಿಸಿದ್ದ ಹತ್ತನೇ ತರಗತಿಯ ಗೌರವ್ ಆರ್, ಪ್ರಥಮ್ ಶೆಟ್ಟಿ, ಶೋಭಿತ್ ಕೆ ಎಚ್ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

•ಉಡುಪಿ: ಹೊಟೇಲ್ ಮಾಲೀಕನ ಹತ್ಯೆ

•ಕುಂದಾಪುರ: ಕರ್ತವ್ಯಕ್ಕೆ ಅಡ್ಡಿ ; ಗ್ರಾಮಸ್ಥರ ದೂರು

•ಬೈಂದೂರು: ಬೈಕ್ ಸವಾರನ ಮೇಲೆ ಹಲ್ಲೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

•ಕಾರ್ಕಳ: ಹೊಟೇಲ್ ಮಾಲಿಕನ ಹತ್ಯೆ

ಕಾರ್ಕಳ: ಎಣ್ಣೆ ಹೊಳೆ ಕುಮೇರುಮನೆ ನಿವಾಸಿ, ಹೊಟೇಲ್ ಉದ್ಯಮಿಯಾದ ಸಂತೋಷ್ ಶೆಟ್ಟಿ ಅವರನ್ನು ಹತ್ಯೆ ಮಾಡಿರುವ ಘಟನೆ ಪೂನಾದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ವೆಯರ್ ಹೊಟೇಲ್ ನಲ್ಲಿ ಕೆಲಸದ ಸಮಯದಲ್ಲಿ, ಮದ್ಯಪಾನ ಮಾಡಿರುವುದಕ್ಕಾಗಿ ಸಿಬ್ಬಂದಿಯನ್ನು ಗದರಿಸಿ, ಬುದ್ಧಿ ಹೇಳಿದ್ದರಿಂದ, ಆ ಸಿಬ್ಬಂದಿ ಉದ್ರೇಕಕ್ಕೆ ಒಳಗಾಗಿ ತನ್ನ ಮಾಲೀಕನನ್ನೇ ಕತ್ತಿಯಿಂದ ಕಡಿದು ಕೊಂದಿದ್ದಾನೆ. ಇದರಿಂದ ಪುನಾದ ಹೊಟೇಲ್ ಉದ್ಯಮಿಗಳು ಬೆಚ್ಚಿಬಿದ್ದಿದ್ದಾರೆ.‌ ಘಟನಾ ಸ್ಥಳಕ್ಕೆ ಸಾವಿರಾರು ಜನ ಆಗಮಿಸಿದ್ದರು ಎನ್ನಲಾಗಿದೆ. ಸಂತೋಷ್ ಅವರ ಪಾರ್ಥಿವ ಶರೀರವನ್ನು ಕಾರ್ಕಳದ ಎಣ್ಣೆ ಹೊಳಗೆ ತರಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.‌

• ಕುಂದಾಪುರ: ಕರ್ತವ್ಯಕ್ಕೆ ಅಡ್ಡಿ; ಪಿಡಿಒ ಸಿಬ್ಬಂದಿ ದೂರು

ಕುಂದಾಪುರ: ಕನ್ಯಾನ ಗ್ರಾಮದ ಗಾಣಿಗರ ಕೇರಿಯಲ್ಲಿ ರಸ್ತೆಗೆ ತಡೆಯನ್ನುಂಟು ಮಾಡುವುದನ್ನು ತೆರವುಗೊಳಿಸುವಾಗ, ಹಟ್ಟಿಯಂಗಡಿಯ ಪಂಚಾಯತ್ ಪಿಡಿಓ ಮಂಜುನಾಥ್ ಅವರ ಕರ್ತವ್ಯಕ್ಕೆ ಸಿಂಗಾರಿ ಗಾಣಿಗ ಎನ್ನುವವರ ಕಡೆಯವರು ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ದೂರು ನೀಡಿದ್ದಾರೆ. ಈ ಹಿಂದೆ ರಸ್ತೆ ತಕರಾರಿನ ವಿಚಾರದಲ್ಲಿ ಸಿಂಗಾರಿ ಗಾಣಿಗ ಕಡೆಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಈ ದಾವೆಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಅಲ್ಲದೆ ಇಪ್ಪತ್ತೊಂದು ದಿನಗಳವರೆಗೆ ಇದೇ ರೀತಿಯ ಪರಿಸ್ಥಿತಿಯನ್ನು ಕಾಪಾಡುವಂತೆ, ನ್ಯಾಯಾಲಯದಿಂದ ತಡೆಯಾಜ್ಞೆ ತರದೇ ಇದ್ದಲ್ಲಿ ಗ್ರಾಮಸ್ಥರ ದೂರಿನಂತೆ ರಸ್ತೆಗೆ ಅಡ್ಡಿಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯನ್ನು ಕೋರಿ ಪಿಡಿಒ ಗ್ರಾಮ ಪಂಚಾಯತ್ ನಲ್ಲಿ ತೆರವು ಕಾರ್ಯ ಕಾಮಗಾರಿಯನ್ನು ನಡೆಸಲು ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಸಿಂಗಾರಿ ಗಾಣಿಗ, ಸುರೇಶ್ ಗಾಣಿಗ, ಸುಮಿತ್ರ, ಗೌತಮಿ, ರಾಘವೇಂದ್ರ ಮತ್ತು ಚೈತ್ರ ಅವರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಬೈಂದೂರು: ಬೈಕ್ ಸವಾರನ ಮೇಲೆ ಹಲ್ಲೆ

ಬೈಂದೂರು: ಧನಂಜಯ ಎನ್ನುವರು ಹೆಮ್ಮಾಡಿ ಕಡೆಯಿಂದ ಚಿತ್ತೂರಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ, ವಂಡ್ಸೆ ಕಡೆಯಿಂದ ಬರುತ್ತಿದ್ದ ಕಾರೊಂದು ಧನಂಜಯ ಅವರಿಗೆ ಅಡ್ಡಿಪಡಿಸಿದೆ. ನಂತರ ಆಟೋ ಚಾಲಕರ ಬಳಿಯೂ ಇದೇ ರೀತಿ ವರ್ತಿಸಿದ್ದಾರೆ. ಅವರ ವರ್ತನೆಯನ್ನು ಕುರಿತು ಆಟೋ ಚಾಲಕ ಪ್ರಶ್ನಿಸಿದಾಗ ಕಾರಿನಲ್ಲಿದ್ದ ಸುಶಾಂತ್, ರಂಜಿತ್, ಪುನೀತ್ ಹಾಗೂ ಸುಕೇಶ್ ಜಗಳಕ್ಕೆ ಇಳಿದರು. ಇದನ್ನು ಕಂಡ ಧನಂಜಯ ಅವರು, ಕಾರಿನವರ ವರ್ತನೆಯನ್ನು ಆಕ್ಷೇಪಿಸಿದಾಗ ಧನಂಜಯ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದುದಷ್ಟೇ ಅಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಗಾಯಗೊಂಡ ಧನಂಜಯ ಅವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.‌ ಇದಕ್ಕೆ ಸಂಬಂಧಿಸಿದಂತೆ ಧನಂಜಯ ಅವರು ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.‌

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

•ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕುಗಳಿಗೆ ರಜೆ ಘೋಷಣೆ

•ಬಂಟ್ವಾಳ: ಕಂಗೊಳಿಸುತ್ತಿದೆ ನವೀಕರಣಗೊಂಡ ರೈಲ್ವೆ ನಿಲ್ದಾಣ

•ಮಂಗಳೂರು: ಕಳಸದ ಮರು ಸ್ಥಾಪನೆ.

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

•ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕುಗಳಿಗೆ ರಜೆ ಘೋಷಣೆ

ಉಳ್ಳಾಲ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸೇರಿದಂತೆ ಪುತ್ತೂರು, ಮೂಲ್ಕಿ, ಮೂಡಬಿದರೆ ಹಾಗೂ ಬಂಟ್ವಾಳ ತಾಲ್ಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆಯನ್ನು ಘೋಷಿಸುವಂತೆ, ಆಯಾ ತಾಲ್ಲೂಕಿನ ತಹಶೀಲ್ದಾರರು ಆದೇಶಿಸಿದ್ದಾರೆ. ಮಳೆಯು ಹೆಚ್ಚಾಗಿರುವ ಕಾರಣ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಅನ್ನು ಘೋಷಿಸಿದೆ. ಅಲ್ಲದೆ ಪೋಷಕರಿಗೆ ಮಕ್ಕಳು ಸಮುದ್ರ ತೀರ, ತಗ್ಗು ಪ್ರದೇಶ ಮತ್ತು ನದಿಯ ತೀರದ ಸಮೀಪಕ್ಕೆ ತೆರಳದಂತೆ ನೋಡಿಕೊಳ್ಳಿ ಎಂದು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.‌ ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಕೇಂದ್ರ ಕಚೇರಿಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯದಲ್ಲಿ ಇರಬೇಕೆಂದು ಹಾಗೂ ವಿವಿಧ ಸಂಬಂಧಿತ ಹುದ್ದೆಗಳಿಗೆ, ಜಿಲ್ಲಾಡಳಿತದಿಂದ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು ಎಂಬ ಸೂಚನೆಯನ್ನು ಸಹ ನೀಡಲಾಗಿದೆ.

• ಬಂಟ್ವಾಳ: ಕಂಗೊಳಿಸುತ್ತಿದೆ ನವೀಕರಣಗೊಂಡ ರೈಲ್ವೆ ನಿಲ್ದಾಣ

ಬಂಟ್ವಾಳ: ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಪ್ರಧಾನಮಂತ್ರಿಗಳು ವರ್ಚುವಲ್ ಮುಖಾಂತರ, ಶಿಲಾನ್ಯಾಸವನ್ನು ನೆರವೇರಿಸಿದ್ದ ಬಂಟ್ವಾಳ ರೈಲ್ವೆ ನಿಲ್ದಾಣವು, ನವೀಕರಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಅಮೃತ್ ಭರತ್ ಯೋಜನೆ ಅಡಿಯಲ್ಲಿ, ಸುಮಾರು 28.49 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಂಟ್ವಾಳ ರೈಲ್ವೆ ನಿಲ್ದಾಣವು, ಸುಸಜ್ಜಿತವಾದ ದ್ವಿಪಥ ರಸ್ತೆ, ಉದ್ಯಾನ, ದ್ವಿಚಕ್ರ ವಾಹನಗಳು, ಕಾರ್ ಗಳು ಮತ್ತು ಆಟೋಗಳ ನಿಲುಗಡೆಗೆ ಆಧುನಿಕ ಸ್ಪರ್ಶವನ್ನೊಳಗೊಂಡ ಪ್ರತ್ಯೇಕ ವ್ಯವಸ್ಥೆ, ನವೀನ ಮಾದರಿಯ ಬೀದಿ ದೀಪಗಳು, ವಿಸ್ತಾರವಾದ ಪ್ಲಾಟ್ ಫಾರ್ಮ್ ಗಳನ್ನು ಹೊಂದಿದೆ. ಈಗಾಗಲೇ ಡಿಆರ್ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ಕಾಮಗಾರಿಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಲ್ಲದೆ ಅಪರಿಚಿತರು ಬಂದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಸಂಗತಿ ತಿಳಿದು ಬಂದ ಹಿನ್ನೆಲೆಯಲ್ಲಿ, ನೂತನ ರೈಲ್ವೆ ನಿಲ್ದಾಣವು ಉದ್ಘಾಟನೆಗೊಂಡ ಬಳಿಕ, ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ರೈಲ್ವೆ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

•ಮಂಗಳೂರು: ಕಳಸದ ಮರು ಸ್ಥಾಪನೆ

ಮಂಗಳೂರು: 2016ರಲ್ಲಿ ಪಂಪ್ ವೆಲ್ ಮೇಲ್ಸೇತುವೆಯ ನಿರ್ಮಾಣದ ಸಂದರ್ಭದಲ್ಲಿ ತೆರವುಗೊಳಿಸಿದ, ಮಂಗಳೂರಿಗೆ ಕಿರೀಟದಂತಿದ್ದ ಕಳಶವನ್ನು ಮಂಗಳವಾರದಂದು ಮಹಾವೀರ ವ್ರತ್ತದಲ್ಲಿ ಮರುಸ್ಥಾಪನೆ ಮಾಡಲಾಗಿದೆ. 43 ಸೆಂಟ್ಸ್ ಜಾಗದ ಮಹಾವೀರ ವೃತ್ತದಲ್ಲಿ, 2006ರಲ್ಲಿ ಈ ಕಲಶವು ನಿರ್ಮಾಣವಾಗಿತ್ತು. 2016ರಲ್ಲಿ ಮೇಲ್ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಇದನ್ನು ತೆರವುಗೊಳಿಸಿ, ಹೊರ ಠಾಣೆಯ ಬಳಿಯ ಖಾಲಿ ಜಾಗವೊಂದರಲ್ಲಿ ತಾತ್ಕಾಲಿಕವಾಗಿ ಇರಿಸಲಾಗಿತ್ತು. ಸೋಮವಾರ ರಾತ್ರಿ ಆರಂಭಿಸಲಾದ ಸ್ಥಳಾಂತರ ಪ್ರಕ್ರಿಯೆಯು ಮಂಗಳವಾರದಂದು ನಸುಕಿನ ಜಾಗ 4:30ರ ಸುಮಾರಿಗೆ ಪೂರ್ಣಗೊಂಡಿತು. ಪೊಲೀಸ್ ಇಲಾಖೆ, ಮೆಸ್ಕಾಂ ಸಿಬ್ಬಂದಿ ಮತ್ತು ಕೆಲ ಸ್ಥಳೀಯ ಯುವಕರ ಸಹಕಾರದಿಂದ ಕಳಶವನ್ನು ಮರುಸ್ಥಾಪನೆ ಮಾಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.‌ “ಕಳೆದ ಎರಡು ತಿಂಗಳ ಹಿಂದೆಯೇ ಸ್ಥಾಪನೆಗೆ ಸ್ಥಳವನ್ನು ಗುರುತಿಸಲಾಗಿದ್ದು, ಮಳೆಯ ಕಾರಣದಿಂದಾಗಿ ಮರುಸ್ಥಾಪನೆ ವಿಳಂಬವಾಯಿತು. ಮುಂದಿನ ಎರಡು ತಿಂಗಳ ಒಳಗಾಗಿ ಕಳಶವನ್ನು ಮತ್ತಷ್ಟು ಸುಂದರಗೊಳಿಸುವ ಮೂಲಕ ಉದ್ಘಾಟನೆಯನ್ನು ಕೈಗೊಂಡು, ಮಹಾವೀರರ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳುತ್ತೇವೆ” ಎಂದು ಮಂಗಳೂರು ಜೈನ್ ಸಮಿತಿಯ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಅವರು ತಿಳಿಸಿದ್ದಾರೆ.

Categories
ಚಿಕ್ಕಮಗಳೂರು

ಗೌರಿಗಣೇಶ ಸಂದರ್ಭದಲ್ಲೇ ಮಲೆನಾಡಲ್ಲಿ ಅರಳುವ ವಿಶಿಷ್ಟವಾದ ‘ಗೌರಿ ಹೂವು’

ಗೌರಿಗಣೇಶ ಸಂದರ್ಭದಲ್ಲೇ ಮಲೆನಾಡಲ್ಲಿ ಅರಳುವ ವಿಶಿಷ್ಟವಾದ ‘ಗೌರಿ ಹೂವು’

* ಗೌರಿ ಹೂವಿನ ವಿಶೇಷತೆಯೇನು,ಎಲ್ಲೆಲ್ಲಿ ಇದು ಬೆಳೆಯುತ್ತೆ
* ಇದರ ಬೆಳವಣಿಗೆ ಹೇಗಿರತ್ತೆ,ಇದಕ್ಕಿರುವ ಇತರೆ ಹೆಸರುಗಳೇನು ಇಲ್ಲಿದೆ ಮಾಹಿತಿ

ವಿಶೇಷ ವರದಿ: ಸಚಿನ್, ಶೃಂಗೇರಿ

NAMMMUR EXPRESS NEWS
ಮಲೆನಾಡು ಭಾಗದಲ್ಲಿ ವಿಶೇಷವಾದ ಹೂವೊಂದಿದೆ. ಅದು ವರ್ಷಕ್ಕೆ ಒಂದು ಬಾರಿ ಮಾತ್ರ ಕಾಣ ಸಿಗುತ್ತದೆ. ಆ ಹೂವೇ ಗೌರಿ.
ಮಲೆನಾಡಿನಲ್ಲಿ ವಿವಿಧ ಬಗೆಯ ಹೂಗಳಿವೆ. ಈ ಪೈಕಿ ಹಲವು ಹೂವುಗಳು ಔಷಧೀಯ ಗುಣಗಳನ್ನು ಹೊಂದಿದ್ದರೆ, ಇನ್ನೂ ಕೆಲವು ದೈವಿಕ ಗುಣಗಳನ್ನೂ ಹೊಂದಿರುತ್ತವೆ,ಅಂಥ ಸಾಲಿಗೆ ಪಶ್ಚಿಮ ಘಟ್ಟದ ಗೌರಿ ಹೂವು ಸೇರುತ್ತದೆ.
ಕಾಡು, ಹೊಲ-ತೋಟಗಳಲ್ಲಿ ಸಿಗುವ ಮಲೆನಾಡಿನ ಗೌರಿ ಹೂವಿಗೆ ವಿಶೇಷವಾದ ಬೇಡಿಕೆ ಇದೆ. ಯಾವುದೇ ಪೂಜೆ ಇರಲಿ, ದೇವರಿಗೆ ಪುಷ್ಪಾರ್ಚನೆ ಮಾಡದೇ ಪೂಜೆ ಸಮಾಪ್ತಿಯಾಗದು. ಈ ಹಿನ್ನೆಲೆಯಲ್ಲಿ ಹಬ್ಬ-ಹರಿದಿನಗಳಲ್ಲಿ ಗೌರಿ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ.
ಬ್ರಹ್ಮಕಮಲ, ಕೃಷ್ಣಕಮಲ, ಕುರಿಂಜಿ ಸೇರಿದಂತೆ ಹಲವು ಹೂವುಗಳ ಹೆಸರಿನೊಂದಿಗೆ ದೇವತೆಗಳಿಗೆ ನಂಟಿದೆ. ಅಂತಹ ಹೂಗಳ ಸಾಲಿನಲ್ಲಿ ಗೌರಿ ಹೂವು ಕೂಡಾ ಒಂದು. ಗೌರಿ ದೇವತೆಯ ಹೆಸರಿನಲ್ಲಿರುವ ವಿಶಿಷ್ಟವಾದ ಹೂವು ಈಗ ಎಲ್ಲೆಡೆ ಅರಳಿ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದೆ.

* ಗೌರಿ ಹೂವಿಗಿರುವ ವಿವಿಧ ಹೆಸರುಗಳೇನು,ಇದರ ಬೆಳವಣಿಗೆ ಹೇಗೆ ?
ಗೌರಿ ಹೂವಿನ ವೈಜ್ಞಾನಿಕ ಹೆಸರು ಗ್ಲೊರಿಯೊಸಾ ಸುಪರ್ಬಾ. ಇಂಗ್ಲಿಷ್‌ನಲ್ಲಿ ಗ್ಲೋರಿ ಲಿಲ್ಲಿ, ಫ್ಲೆಮ್​ ಲಿಲ್ಲಿ ಎನ್ನುತ್ತಾರೆ. ದೇಶದ ವಿವಿಧ ಪ್ರದೇಶಗಳಲ್ಲಿ ಬೇರೆಬೇರೆ ಹೆಸರುಗಳಿವೆ. ಅರಳಿ ನಿಂತ ಹೂಗಳು ಬೆಂಕಿಯ ಜ್ವಾಲೆಯಂತೆ ಕಾಣುವುದರಿಂದ ‘ಅಗ್ನಿಶಿಖೆ’ ಎಂದು, ಕೋಳಿ ಜುಟ್ಟಿನಂತೆ ಕಾಣುವುದರಿಂದ ಕೋಳಿಜುಟ್ಟಿನ ಹೂವೆಂದೂ, ಕೋಳಿ ಕುಟುಮ ಎಂದೆಲ್ಲ ಜನರು ಕರೆಯುತ್ತಾರೆ.
ಇದೊಂದು ಸತ್ವಯುತ ಮೃದು ಕಾಂಡಗಳನ್ನು ಹೊಂದಿರುವ ಬಳ್ಳಿ. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ನೋಡಬಹುದು. ಹೂವಿನ ಮೊಗ್ಗು ಹಸಿರು ಬಣ್ಣ, ಅರಳುವಾಗ ಹಸಿರು, ಹಳದಿ ಮಿಶ್ರಿತ ಬಣ್ಣದಿಂದ ಕೂಡಿರುತ್ತದೆ. ಎರಡನೇ ಹಂತದ ಬೆಳವಣಿಗೆಯಲ್ಲಿ ಹೂವಿನ ದಳಗಳ ಮೇಲ್ಭಾಗ ಕೆಂಪಾಗಿ ಕೆಳಭಾಗ ಹಳದಿಯಾಗುತ್ತದೆ. ಅಂತಿಮ ಹಂತದಲ್ಲಿ ರಕ್ತ ವರ್ಣ ಪಡೆದುಕೊಂಡು ಕಾಯಿಯಾಗಿ ಉದುರುತ್ತವೆ.
ಗೌರಿ-ಗಣೇಶ ಹಬ್ಬ ಹಿಂದೂಗಳಿಗೆ ತುಂಬಾ ಸಂಭ್ರಮ ಸಡಗರದ ಹಬ್ಬ. ಗೌರಿ ಹಬ್ಬದ ಸಂದರ್ಭದಲ್ಲಿ ವಿಶೇಷವಾದ ಹೂವೊಂದು ಮಲೆನಾಡಿನಲ್ಲಿ ಅರಳುತ್ತದೆ. ಅದರ ಹೆಸರೇ ಗೌರಿ ಹೂವು. ಇದನ್ನು ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ. ಇದರಲ್ಲಿ ಔಷಧೀಯ ಅಂಶಗಳು ಹೆಚ್ಚಿವೆ. ಹೂವಿನ ಮೇಲ್ಭಾಗ ಕೆಂಪು, ಕೆಳಭಾಗ ಹಳದಿ ಬಣ್ಣದಿಂದ ಕೂಡಿರುತ್ತದೆ. ಮಲೆನಾಡು ಭಾಗದ ಈ ಹೂವನ್ನು ಹೆಚ್ಚು ಬಳಸುತ್ತಾರೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
​ಮೇಷ ರಾಶಿಯ ಜನರ ಖರ್ಚುಗಳು ಇಂದು ಹೆಚ್ಚಾಗುತ್ತವೆ, ಆದರೆ ಹಣ ಗಳಿಸುವ ಹೊಸ ಮೂಲಗಳು ಸಹ ಸೃಷ್ಟಿಯಾಗುತ್ತವೆ. ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡುವಿರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ನೀವು ಇಂದು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು.

** ವೃಷಭ ರಾಶಿ :
ಇಂದು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಆದಾಯದ ಹೊಸ ಮೂಲಗಳಿಗಾಗಿ ನೋಡಿ. ಆಸ್ತಿ ಮಾರಾಟ ಅಥವಾ ಬಾಡಿಗೆಗೆ ಹಣ ಗಳಿಸುವಿರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಶ್ರಮಿಸಬೇಕು.

** ಮಿಥುನ ರಾಶಿ :
ಇಂದು ದಿನವು ಏರಿಳಿತಗಳಿಂದ ಕೂಡಿರುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದಗಳು ಉಂಟಾಗಬಹುದು. ಇದರಿಂದ ಋಣಾತ್ಮಕತೆ ಹೆಚ್ಚುತ್ತದೆ. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಳಿಯುತ್ತವೆ. ಇಂದು ನೀವು ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಶೈಕ್ಷಣಿಕ ಕೆಲಸದಲ್ಲಿ ಅಡಚಣೆ ಉಂಟಾಗಬಹುದು.

** ಕರ್ಕಾಟಕ ರಾಶಿ :
ಕಟಕ ರಾಶಿಯವರು ಇಂದು ನಿಮ್ಮ ಹಣಕಾಸಿನ ವಿಷಯಗಳಿಗೆ ಸ್ವಲ್ಪ ಗಮನ ಕೊಡಿ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಆದಾಯವನ್ನು ಹೆಚ್ಚಿಸಲು ಹೊಸ ಆಯ್ಕೆಗಳನ್ನು ನೋಡಿ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ ಮತ್ತು ಅನಗತ್ಯ ವಾದಗಳನ್ನು ತಪ್ಪಿಸಿ. ಇದು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ.

** ಸಿಂಹ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ ಪ್ರಗತಿಗಾಗಿ ಹೊಸ ಅವಕಾಶಗಳ ಲಾಭ ಪಡೆಯಲು ಸಿದ್ಧರಾಗಿರಿ. ಹಣವನ್ನು ಉಳಿಸಿ. ಕೆಲವು ಜನರು ಇಂದು ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಕಚೇರಿ ರಾಜಕೀಯದಿಂದ ದೂರವಿರಿ. ಕೆಲವರು ಹೊಸ ವಾಹನ ಖರೀದಿಸಬಹುದು. ಆಸ್ತಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಇಂದು ಉತ್ತಮ ದಿನವಾಗಿದೆ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

** ಕನ್ಯಾ ರಾಶಿ :
ಇಂದು ನಿಮಗೆ ಬಹಳ ಶುಭ ದಿನವಾಗಲಿದೆ. ನೀವು ಸಾಲದಿಂದ ಮುಕ್ತರಾಗುತ್ತೀರಿ. ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುವುದು. ಸಂಬಂಧಿಕರೊಂದಿಗೆ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಕೆಲವರು ಹೊಸ ಮನೆ ಖರೀದಿಸಲು ಯೋಜಿಸಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದ ಸಾಕಷ್ಟು ಹಣವನ್ನು ಗಳಿಸುವಿರಿ.

** ತುಲಾ ರಾಶಿ :
ಇಂದು ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗಲಿವೆ. ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಿ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಹಣ ಉಳಿಸಿ. ಇಂದು ವೃತ್ತಿ ಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸಲಾಗುವುದು. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಆಸ್ತಿ ಸಂಬಂಧಿತ ವಿವಾದಗಳಿಂದ ಮುಕ್ತಿ ದೊರೆಯಲಿದೆ.

** ವೃಶ್ಚಿಕ ರಾಶಿ :
ಇಂದು ವೃಶ್ಚಿಕ ರಾಶಿಯ ಜನರು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಕಾನೂನು ವಿಷಯಗಳಲ್ಲಿ ಜಯ ದೊರೆಯಲಿದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಕುಟುಂಬದೊಂದಿಗೆ ಎಲ್ಲೋ ಹೋಗಬಹುದು. ಶೈಕ್ಷಣಿಕ ಕೆಲಸದಲ್ಲಿ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ.

** ಧನಸ್ಸು ರಾಶಿ :
ಧನು ರಾಶಿಯವರು ಇಂದು ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಕಚೇರಿಯಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸುತ್ತಲೇ ಇರುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಅನೇಕ ಸುವರ್ಣ ಅವಕಾಶಗಳಿವೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳು ಪೋಷಕರ ಬೆಂಬಲವನ್ನು ಪಡೆಯುತ್ತಾರೆ. ಇಂದು ನೀವು ಆಸ್ತಿ ಸಂಬಂಧಿತ ವಿವಾದಗಳಿಂದ ಪರಿಹಾರವನ್ನು ಪಡೆಯುತ್ತೀರಿ.

** ಮಕರ ರಾಶಿ :
ಇಂದು ಮಕರ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನೀವು ಸಾಲದಿಂದ ಮುಕ್ತರಾಗುತ್ತೀರಿ. ಹಣದ ಹರಿವಿಗೆ ಹೊಸ ದಾರಿಗಳು ಸುಗಮವಾಗಲಿವೆ. ವೃತ್ತಿಪರ ಜೀವನದಲ್ಲಿ ಶಕ್ತಿ ಮತ್ತು ಆತ್ಮವಿಶ್ವಾಸ ತುಂಬಿರುತ್ತದೆ. ಪ್ರಯಾಣದ ಅವಕಾಶವಿರುತ್ತದೆ. ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಸಂಸ್ಥೆಯಲ್ಲಿ ಸುಲಭವಾಗಿ ಪ್ರವೇಶ ಪಡೆಯುತ್ತಾರೆ.

** ಕುಂಭ ರಾಶಿ :
ಕುಂಭ ರಾಶಿಯವರಿಗೆ ಇಂದು ವೃತ್ತಿ ಪ್ರಗತಿಗೆ ಹಲವು ಅವಕಾಶಗಳು ಸಿಗಲಿವೆ. ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಲಿವೆ. ಹೊಸ ಜನರ ಪರಿಚಯವಾಗುತ್ತದೆ. ಆದರೆ ಕುಟುಂಬ ಜೀವನದಲ್ಲಿ ನೀವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಆರ್ಥಿಕ ಸಮೃದ್ಧಿ ಇರುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ.

** ಮೀನ ರಾಶಿ :
ಇಂದು ನೀವು ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಜೀವನಶೈಲಿ ಕೂಡ ಸುಧಾರಿಸುತ್ತದೆ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ.

Categories
ರಾಜ್ಯ

ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವಿನಾಯಕ ವೈಬ್ VLOG SERIES-2025

ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ

ವಿನಾಯಕ ವೈಬ್

VLOG SERIES-2025

ರಾಜ್ಯದ ಮುಂಚೂಣಿ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್‌ಪ್ರೆಸ್ ವತಿಯಿಂದ ರಾಜ್ಯದ ಯಾವುದೇ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣೇಶೋತ್ಸವದ ಸಂಪೂರ್ಣ ವಿಡಿಯೋ ಸ್ಪರ್ಧೆ.

1. ಪ್ರಥಮ ಬಹುಮಾನ : 3000 ರೂ.
2. ದ್ವಿತೀಯ ಬಹುಮಾನ : 2000 ರೂ.
3. ತೃತೀಯ ಬಹುಮಾನ : 1000 ರೂ. ಹಾಗೂ 5 ಸಮಾಧಾನಕರ ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು.

ವಿಡಿಯೋ ಕಳುಹಿಸಬೇಕಾದ ವಾಟ್ಸಾಪ್ ನಂಬರ್

8762674294

ನಿಯಮಗಳು :

ರಾಜ್ಯದ ಯಾವುದೇ ಭಾಗದವರಿಗೂ ಈ ಕಂಟೆಸ್ಟ್ ನಲ್ಲಿ ಭಾಗವಹಿಸಿಲು ಅವಕಾಶವಿರುತ್ತದೆ.
ವಿಡಿಯೋ HD ಕ್ವಾಲಿಟಿ ಕಡ್ಡಾಯವಾಗಿರಬೇಕು.
ಸಂಘದ ಹೆಸರು, ಊರು, ತಾಲೂಕು, ವಿಳಾಸ ಮತ್ತು ಫೋನ್ ನಂಬರ್ ವಿಡಿಯೋ ಕಳುಹಿಸಿದವರು ತಮ್ಮ ಹೆಸರುನ್ನು ನಮೂದಿಸುವುದು ಕಡ್ಡಾಯ.
ಸಮಿತಿ ಸದಸ್ಯರು, ಪೂಜೆ, ಸಾಂಸ್ಕೃತಿಕ ವಿಸರ್ಜನೆ ಮೆರವಣಿಗೆ, ಅಲಂಕಾರ ವಿಶೇಷತೆ ವಿಡಿಯೋದಲ್ಲಿರಬೇಕು.
ವಿಡಿಯೋ ಚಿತ್ರೀಕರಣ ಕನಿಷ್ಠ 2 ನಿಮಿಷದಿಂದ 5 ನಿಮಿಷದವರೆಗೆ ಇರಬೇಕು.
ಅತಿ ಹೆಚ್ಚು ಲೈಕ್ಸ್ ಮತ್ತು ವೀಪ್ಸ್ ಆಧಾರದಲ್ಲಿ ಬಹುಮಾನ ಘೋಷಣೆ ಮಾಡಲಾಗುವುದು.

ನೀವು ಕಳುಹಿಸಿದ ವಿಡಿಯೋಗಳನ್ನು ನಮ್ಮೂರ್ ಎಕ್ಸ್‌ಪ್ರೆಸ್ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರಮಾಡಲಾಗುತ್ತದೆ.

ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15 ರ ವರೆಗೆ ಮಾತ್ರ ಅವಕಾಶವಿರುತ್ತದೆ.

Categories
ಕರಾವಳಿ

ಬೆಳ್ತಂಗಡಿ: ತಲೆ ಬುರುಡೆ ರಹಸ್ಯ ಬಯಲು

• ಬೆಳ್ತಂಗಡಿ: ತಲೆ ಬುರುಡೆ ರಹಸ್ಯ ಬಯಲು

• ಕುಂದಾಪುರ: ಎಕ್ಸ್ ಪ್ರೆಸ್ ರೈಲು ಢಿಕ್ಕಿ; ಯುವಕನ ಸಾವು

• ಉಳ್ಳಾಲ: ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ

• ಅಂಕೋಲಾ: ಅನುಮಾನಾಸ್ಪದ ಸೂಟ್ ಕೇಸ್ ಪತ್ತೆ

• ಮಂಗಳೂರು: ಅಪ್ರಾಪ್ತೆ ಅತ್ಯಾಚಾರದ ಆರೋಪಿಗೆ ಜಾಮೀನು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ಎಸ್ಐಟಿ ತನಿಖಾಧಿಕಾರಿಗಳ ವಿಚಾರಣೆಯನ್ನು ಎದುರಿಸುತ್ತಿರುವ, ಮುಸುಕುಧಾರಿಯಾಗಿದ್ದ ಚಿನ್ನಯ್ಯ ತಂದ ತಲೆಬುರುಡೆ ಪುರುಷನದ್ದು ಎನ್ನುವ ಸಂಗತಿ ಎಫ್ಎಸ್ಎಲ್ ವರದಿಯಿಂದ ತಿಳಿದುಬಂದಿದೆ. ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ಧರ್ಮಸ್ಥಳ ವಿರೋಧಿ ಹೋರಾಟಗಾರನಾದ ಮಹೇಶ್ ತಿಮ್ಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದೆ. ಈಗಾಗಲೇ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿರುವ ಎಸ್ಐಟಿ ಅಧಿಕಾರಗಳು ಇಡೀ ಮನೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆತನ ಮನೆಯಲ್ಲಿ ಬಟ್ಟೆಗಳು, ಅನುಮಾನಾಸ್ಪದ ಮತ್ತು ಪ್ರಕರಣಕ್ಕೆ ಪೂರಕವಾಗಿರುವಂತಹ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

• ಕುಂದಾಪುರ: ಎಕ್ಸ್ ಪ್ರೆಸ್ ರೈಲು ಢಿಕ್ಕಿ; ಯುವಕನ ಸಾವು

ಕುಂದಾಪುರ: ರೈಲು ಹಳಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ, ಮಡಗಾಂವ್ ನಿಂದ ಎರ್ನಾಕುಲಂಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲು ಢಿಕ್ಕಿ ಹೊಡೆದ ಪರಿಣಾಮ, ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೂಡ್ಲಕಟ್ಟೆ ರೈಲು ನಿಲ್ದಾಣದ ಸಮೀಪ ನಡೆದಿದೆ. ಸಿಗ್ನಲ್ ಬದಲಾಯಿಸುವ ಸಂದರ್ಭದಲ್ಲಿ ಯುವಕ ಹಳಿ ದಾಟಲು ಪ್ರಯತ್ನಿಸಿದ್ದು, ಆಗ ರೈಲು ಢಿಕ್ಕಿ ಹೊಡೆದಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಮೃತಪಟ್ಟ ವ್ಯಕ್ತಿಯನ್ನು ಮಧ್ಯಪ್ರದೇಶ ಮೂಲದ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ತಲೆ ಮತ್ತು ಕೈಗೆ ಬಲವಾದ ಹೊಡೆತ ಬಿದ್ದ ಕಾರಣ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಉಳ್ಳಾಲ: ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ

ಉಳ್ಳಾಲ: ಉತ್ತರ ಕರ್ನಾಟಕ ಮೂಲದ ಸಂಜೀವ್ ಎನ್ನುವವರು, ಅಸೈಗೋಳಿಯಲ್ಲಿ ಕರ್ನಾಟಕ ಮೀಸಲು ಪಡೆಯ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು . ಇವರು ತಾವು ವಾಸಿಸುತ್ತಿದ್ದ ಕ್ವಾರ್ಟರ್ಸ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪತ್ನಿ ಮತ್ತು ಮಕ್ಕಳು ಊರಿಗೆ ತೆರಳಿದ್ದ ಸಂದರ್ಭದಲ್ಲಿ, ಸಂಜೀವ್ ಅವರು ಸಾವಿಗೆ ಶರಣಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಆಗಮಿಸಿದ ಕೊಣಾಜೆ ಪೊಲೀಸರು ತನಿಖೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡರು.

• ಅಂಕೋಲಾ: ಅನುಮಾನಾಸ್ಪದ ಸೂಟ್ ಕೇಸ್ ಪತ್ತೆ

ಅಂಕೋಲಾ: ಪೊಲೀಸ್ ಠಾಣಾ ವ್ಯಾಪ್ತಿಯ ಪುರಸಭೆಯ ಎದುರುಗಿರುವ, ಪಂಚಾಯತ್ ರಾಜ್ ಕಚೇರಿಯ ಪಕ್ಕದಲ್ಲಿ, ಮಂಗಳವಾರದಂದು ಅನುಮಾನಾಸ್ಪದ ಸೂಟ್ ಕೇಸ್ ಒಂದು ಪತ್ತೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿ ಮಾಡಿತು. ಸಾರ್ವಜನಿಕರು ಸೂಟ್ ಕೇಸ್ ನಲ್ಲಿ ಬಾಂಬ್ ಇರಬಹುದು ಎಂದು ಅನುಮಾನಿಸಿ ಪೊಲೀಸರಿಗೆ ತಿಳಿಸಿದರು.‌ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸೂಟ್ ಕೇಸ್ ಇದ್ದ ಜಾಗದಲ್ಲಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿದರು. ಬಳಿಕ ಕಾರವಾರದಿಂದ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದಾಗ ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದಿಲ್ಲ. ಬದಲಿಗೆ ಕೇವಲ ಬಟ್ಟೆಗಳು, ಔಷಧಿಗಳು, ಯಲ್ಲಾಪುರ ಮೂಲದ ಸಂಬಂಧಿತ ವ್ಯಕ್ತಿಯ ಮತದಾರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ಮಾತ್ರ ಲಭಿಸಿತು ಎನ್ನುವ ಸಂಗತಿ ತಿಳಿದ ಮೇಲೆ ಜನರು ನಿರಾಳರಾದರು.

• ಮಂಗಳೂರು: ಅಪ್ರಾಪ್ತೆ ಅತ್ಯಾಚಾರದ ಆರೋಪಿಗೆ ಜಾಮೀನು

ಮಂಗಳೂರು: ಹದಿನೈದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕುರಿತು, ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂದೇಶ್ ಎಂಬ ಆರೋಪಿಯನ್ನು ಬಂಧಿಸಿದ್ದರು. ಈಗ ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಎಫ್. ಟಿ. ಎಸ್. ಸಿ. ನ್ಯಾಯಾಧೀಶರಾದ ಮಾನು ಕೆ ಎಸ್ ಅವರು ಆರೋಪಿಗೆ ಷರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಿದ್ದಾರೆ.

Categories
ಕರಾವಳಿ

ಉಡುಪಿ: ಗಣೇಶ ಚತುರ್ಥಿಯ ಪ್ರಯುಕ್ತ ಮದ್ಯ ನಿಷೇಧ

• ಉಡುಪಿ: ಗಣೇಶ ಚತುರ್ಥಿಯ ಪ್ರಯುಕ್ತ ಮದ್ಯ ನಿಷೇಧ

• ಬಂಟ್ವಾಳ: ದೈವೀವನಕ್ಕೆ ಬೇಕಿದೆ ತುರ್ತು ಚಿಕಿತ್ಸೆ

• ಪುತ್ತೂರು: ಗೌರಿಹೊಳೆಯ ದಡದಲ್ಲಿ ಮೊಸಳೆ; ಜನರಲ್ಲಿ ಆತಂಕ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಉಡುಪಿ: ಗಣೇಶ ಚತುರ್ಥಿ ಪ್ರಯುಕ್ತ ಮದ್ಯ ನಿಷೇಧ

ಉಡುಪಿ: ಗಣೇಶ ಚತುರ್ಥಿಯ ದಿನವಾದ ಬುಧವಾರದಂದು ಬೆಳಿಗ್ಗೆ ಆರು ಗಂಟೆಯಿಂದ, ರಾತ್ರಿ ಹನ್ನೆರಡು ಗಂಟೆಯವರೆಗೆ ಹಾಗೂ 29 ಮತ್ತು 31 ರಂದು ಮಧ್ಯಾಹ್ನ ಎರಡು ಗಂಟೆಯಿಂದ, ರಾತ್ರಿ ಹನ್ನೆರಡು ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ, ಮದ್ಯ ಮಾರಾಟವನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ ಅವರು ಆದೇಶವನ್ನು ಹೊರಡಿಸಿದ್ದಾರೆ.

• ಬಂಟ್ವಾಳ: ದೈವೀವನಕ್ಕೆ ಬೇಕಿದೆ ತುರ್ತು ಚಿಕಿತ್ಸೆ

ಬಂಟ್ವಾಳ: ನರಹರಿ ಪರ್ವತ ಸದಾಶಿವ ದೇವಸ್ಥಾನದ ಬಳಿ, ಅರಣ್ಯ ಇಲಾಖೆಯವರು ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಉದ್ದೇಶದಿಂದ ನಿರ್ಮಿಸಿದ್ದ ದೈವೀವನ, ಈಗ ಭಕ್ತರು ಪ್ರವೇಶಿಸಲು ಆತಂಕಪಡುವ ರೀತಿಯಲ್ಲಿ ಅವ್ಯವಸ್ಥೆಗೆ ಗುರಿಯಾಗಿದೆ. ಅರಣ್ಯ ಇಲಾಖೆಯವರ ಪ್ರಕಾರ ಸಾಮಾನ್ಯವಾಗಿ ದೇವರಕಾಡುಗಳಿಗೆ ಸಾರ್ವಜನಿಕರು ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ವಿಶ್ರಮಿಸಿಕೊಳ್ಳಲು ಬೆಂಚುಗಳು, ಕುಡಿಯುವ ನೀರು, ಸುಗಮ ಕಾಲ್ನಡಿಗೆಯ ಹಾದಿ ಮತ್ತು ಮೆಟ್ಟಿಲುಗಳ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಆದರೆ, ನರಹರಿ ಪರ್ವತದಲ್ಲಿ ಕಲ್ಲು ಬೆಂಚುಗಳು ಸಹ ಪೊದೆಗಳಿಂದ ಕೂಡಿ, ಒಳಗೆ ಪ್ರವೇಶಿಸಲು ಭಯಪಡುವಂತಾಗಿದೆ. ಮತ್ತು ಈ ರೀತಿಯ ಪೊದೆಗಳಿರುವ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆದರೂ ಸಂಶಯವಿಲ್ಲ. ಹೀಗಾಗಿ ಅರಣ್ಯ ಇಲಾಖೆಯವರು ಈ ವಿಚಾರದ ಕುರಿತು ಪರಿಶೀಲನೆ ನಡೆಸಿ, ಉತ್ತಮ ರೀತಿಯಲ್ಲಿ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಂಗಳೂರು ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕ್ಲಿಫರ್ಡ್ ಲೋಗೋ ಅವರು “ದೈವೀವನ ನಿರ್ವಹಣೆಗೆ ಸಂಬಂಧಿತ ಇಲಾಖೆಯಿಂದ ಅನುದಾನ ಬರುತ್ತಿರುವುದು ನಿಜ. ಆದರೆ, ಈ ಬಾರಿಯ ವಿಪರೀತ ಮಳೆಯಿಂದಾಗಿ ಪೊದೆಗಳ ಸಂಖ್ಯೆ ಅಧಿಕವಾಗಿದೆ.‌ ಅಲ್ಲದೆ ಈ ವರ್ಷ ನಿರ್ವಹಣೆಗೆ ಸಂಬಂಧಿಸಿದ ಅನುದಾನ ಬಿಡುಗಡೆಗೊಂಡಿದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ, ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ

• ಪುತ್ತೂರು: ಗೌರಿಹೊಳೆಯ ದಡದಲ್ಲಿ ಮೊಸಳೆ; ಜನರಲ್ಲಿ ಆತಂಕ

ಪುತ್ತೂರು: ಗೌರಿಹೊಳೆಯ ದಡದಲ್ಲಿ ಮರಳಿನ ನಡುವೆ ಮೊಸಳೆಯೊಂದು ಕಂಡಿದ್ದು, ಸ್ಥಳೀಯ ಕೃಷಿಕರಾದ ಕೇಶವಚಂದ್ರ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಸುತ್ತಮುತ್ತಲು ಗದ್ದೆ ತೋಟಗಳನ್ನು ಹೊಂದಿರುವ ಇತರ ಕೃಷಿಕರು ಓಡಾಡಲು ಆತಂಕಪಡುವಂತಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ನದಿಯಿಂದ ದಡದ ಮೇಲೆ ಬಂದಿರುವ ಮೊಸಳೆ, ಮುಂದೆ ರಸ್ತೆಗೆ ಬರಬಹುದು ಎಂಬ ಭಯದ ವಾತಾವರಣ ಸೃಷ್ಟಿಯಾಗಿದೆ. 2024ರ ಡಿಸೆಂಬರ್ ಸಮಯದಲ್ಲೂ ಗೌರಿಹೊಳೆಯಲ್ಲಿ ಮೊಸಳೆ ಕಂಡುಬಂದಿತ್ತು ಎಂಬ ಸಂಗತಿ ತಿಳಿದುಬಂದಿದೆ. ಹೆದರಿದವರ ಮೇಲೆ ಹಾವು ಎಸೆದಂತೆ, ಈಗಾಗಲೇ ಕಾಡಾನೆ ದಾಳಿಯಿಂದ ಭೀತರಾದ ಜನರಿಗೆ, ಮೊಸಳೆ ಮತ್ತೊಂದು ರೀತಿಯ ಸಮಸ್ಯೆಯನ್ನು ತಂದೊಡ್ಡಿದೆ. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಯನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ, ರೈತರು ನಿರಾತಂಕವಾಗಿ ಓಡಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Categories
ಬೆಂಗಳೂರು

ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!: ಸಂಭ್ರಮಕ್ಕೆ ಕಿರಿಕ್!

ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!: ಸಂಭ್ರಮಕ್ಕೆ ಕಿರಿಕ್!
– ರಾಜ್ಯದಲ್ಲಿ ಎಲ್ಲೆಡೆ ಮಳೆ: 3 ದಿನಗಳಿಂದ ಮಳೆ
– ಮಳೆ ನಡುವೆ ರಾಜ್ಯದಲ್ಲಿ ಸಂಭ್ರಮದ ಹಬ್ಬ

NAMMUR EXPRESS NEWS
ಬೆಂಗಳೂರು: ಗಣೇಶ ಹಬ್ಬಕ್ಕೆ ಮಳೆ ಅಡ್ಡಿಯಾಗಿದೆ. ಕಳೆದ 2 ದಿನಗಳಿಂದ ಮಳೆ ಹಬ್ಬದ ಸಂಭ್ರಮಕ್ಕೆ ಕಿರಿಕ್ ಮಾಡುತ್ತಿದೆ.
ರಾಜ್ಯದಲ್ಲಿ ಎಲ್ಲೆಡೆ 3 ದಿನಗಳಿಂದ ಮಳೆಯಾಗುತ್ತಿದೆ. ಮಳೆ ನಡುವೆ ರಾಜ್ಯದಲ್ಲಿ ಸಂಭ್ರಮದ ಹಬ್ಬ ಆಚರಣೆ ಆಗುತ್ತಿದೆ. ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.
ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಿದ್ದ ವ್ಯಾಪಾರಿಗಳು ಮಳೆಯಿಂದಾಗಿ ಮೂರ್ತಿಗಳ ರಕ್ಷಣೆ ಮಾಡಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇತರೆ ಪೂಜಾ ಕೈಂಕಾರ್ಯಗಳಿಗೆ ಮಳೆರಾಯ ಅಡ್ಡಿಪಡಿಸುತ್ತಿದೆ.
ವಿದ್ಯುತ್ ಬಗ್ಗೆ ಗಣೇಶ ಆಚರಣೆ ವೇಳೆ ಜಾಗೃತಿ ಇರಲಿ. ಸರ್ವರಿಗೂ ಗಣೇಶ ಹಬ್ಬದ ಶುಭಾಶಯಗಳು.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ವಿನಾಯಕ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಆರೋಗ್ಯ ಸುಧಾರಿಸಲಿದೆ. ವೃತ್ತಿ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಕುಟುಂಬಕ್ಕೆ ಕೀರ್ತಿ ತರಲಿದೆ. ಕೆಲವರು ಹಳೆಯ ಆಸ್ತಿಯನ್ನು ಮಾರಾಟ ಮಾಡಲು ಯೋಜಿಸಬಹುದು. ಇಂದು ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ.

** ವೃಷಭ ರಾಶಿ :
ಇಂದು ಸಾಮಾನ್ಯ ದಿನವಾಗಲಿದೆ. ಹಣ ಗಳಿಸಲು ಕಷ್ಟಪಡಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಹಣದ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ. ಹಣವನ್ನು ಉಳಿಸುವತ್ತ ಗಮನ ಹರಿಸಿ.

** ಮಿಥುನ ರಾಶಿ :
ಇಂದು ಮಿಥುನ ರಾಶಿಯವರಿಗೆ ಅನೇಕ ಸುವರ್ಣ ಹೂಡಿಕೆ ಅವಕಾಶಗಳು ಸಿಗುತ್ತವೆ. ಆದರೆ ಯಾವುದೇ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ನಿಮ್ಮ ಫಿಟ್ನೆಸ್ ಬಗ್ಗೆ ಗಮನ ಕೊಡಿ. ಇಂದು ನಿಮ್ಮ ಕೆಲಸವನ್ನು ಕಚೇರಿಯಲ್ಲಿ ಪ್ರಶಂಸಿಸಲಾಗುತ್ತದೆ. ಉನ್ನತ ಅಧಿಕಾರಿಗಳಿಂದ ಬೆಂಬಲ ದೊರೆಯಲಿದೆ.

** ಕರ್ಕಾಟಕ ರಾಶಿ :
ಕಟಕ ರಾಶಿಯವರಿಗೆ ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣದ ಒಳಹರಿವಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಉದ್ಯೋಗಗಳನ್ನು ಬದಲಾಯಿಸಲು ಯೋಜಿಸುತ್ತಿರುವವರು ಉತ್ತಮ ಪ್ಯಾಕೇಜ್‌ನೊಂದಿಗೆ ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ವೃತ್ತಿ ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ.

** ಸಿಂಹ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಆಯ್ಕೆಯ ಹೊಸ ಯೋಜನೆಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಕಚೇರಿಯಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಿ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಇದು ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ.

** ಕನ್ಯಾ ರಾಶಿ :
ಇಂದು ಹಣಕಾಸಿನ ವಿಚಾರದಲ್ಲಿ ಏರುಪೇರು ಉಂಟಾಗುವುದು. ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗಬಹುದು. ಆದರೆ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ. ನಿಮ್ಮ ಬಾಸ್ ನಿಮ್ಮ ಕೆಲಸದಿಂದ ಪ್ರಭಾವಿತರಾಗುತ್ತಾರೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನೀವು ಕುಟುಂಬದೊಂದಿಗೆ ವಿಹಾರವನ್ನು ಯೋಜಿಸಬಹುದು.

** ತುಲಾ ರಾಶಿ :
ಇಂದು, ತುಲಾ ರಾಶಿಯವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ನೀವು ಏಕಾಗ್ರತೆಯ ಕೊರತೆಯನ್ನು ಅನುಭವಿಸುವಿರಿ. ಕೆಲಸವು ಮಧ್ಯಂತರವಾಗಿ ಮುಂದುವರಿಯುತ್ತದೆ. ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸಿ. ಆದಾಗ್ಯೂ, ಮನಸ್ಸು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತದೆ.

** ವೃಶ್ಚಿಕ ರಾಶಿ :
ಇಂದು, ವೃತ್ತಿಪರ ಜೀವನದಲ್ಲಿ ಕೆಲಸದ ಜವಾಬ್ದಾರಿ ಹೆಚ್ಚಾಗುತ್ತದೆ. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಪ್ರಗತಿಗೆ ಅಸಂಖ್ಯಾತ ಅವಕಾಶಗಳಿವೆ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಕೌಟುಂಬಿಕ ಜೀವನದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ.

** ಧನಸ್ಸು ರಾಶಿ :
ಇಂದು ಧನು ರಾಶಿಯವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಕಂಡುಬರುತ್ತವೆ. ನವೀನ ಆಲೋಚನೆಗಳು ಮತ್ತು ಸೃಜನಶೀಲತೆಯೊಂದಿಗೆ ಮಾಡಿದ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವ್ಯಾಯಾಮ ಮತ್ತು ಯೋಗದೊಂದಿಗೆ ದಿನವನ್ನು ಪ್ರಾರಂಭಿಸಿ. ನಿಮ್ಮ ಫಿಟ್ನೆಸ್ ಬಗ್ಗೆ ಗಮನ ಕೊಡಿ. ಇಂದು ನೀವು ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು.

** ಮಕರ ರಾಶಿ :
ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಗೃಹೋಪಯೋಗಿ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಯೋಜಿಸಬಹುದು. ವೃತ್ತಿ ಜೀವನದಲ್ಲಿ ಸ್ವಲ್ಪ ಎಚ್ಚರದಿಂದ ಕೆಲಸ ಮಾಡಬೇಕಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಲಾಂಗ್ ಡ್ರೈವ್ ಅನ್ನು ಯೋಜಿಸಬಹುದು.

** ಕುಂಭ ರಾಶಿ :
ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಇಂದು ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಸವಾಲಿನ ಕೆಲಸಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಕುಟುಂಬ ಪ್ರವಾಸವನ್ನು ಯೋಜಿಸಬಹುದು. ಹೊಸ ಆಸ್ತಿ ಅಥವಾ ವಾಹನ ಖರೀದಿ ಸಾಧ್ಯ. ಒಂಟಿ ಜನರು ಇಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು.

** ಮೀನ ರಾಶಿ :
ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ವೃತ್ತಿಪರ ಜೀವನದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನವಾಗಿದೆ. ಅನಿರೀಕ್ಷಿತ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಸಂಪತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತೀರಿ. ಕುಟುಂಬದಿಂದ ಬೆಂಬಲ ಸಿಗಲಿದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಸಾಕಷ್ಟು ಪ್ರಗತಿ ಹೊಂದುವಿರಿ.