Categories
ಮಲ್ನಾಡ್ ವಿಶೇಷ ಸುದ್ದಿ ಶೃಂಗೇರಿ

ಕೆರೆಕಟ್ಟೆ ಬಳಿ ಮತ್ತೊಂದು ಕಾಡಾನೆ ಪ್ರತ್ಯಕ್ಷ,ಮತ್ತೆ ಆತಂಕದಲ್ಲಿ ಗ್ರಾಮಸ್ಥರು

ಕೆರೆಕಟ್ಟೆ ಬಳಿ ಮತ್ತೊಂದು ಕಾಡಾನೆ ಪ್ರತ್ಯಕ್ಷ,ಮತ್ತೆ ಆತಂಕದಲ್ಲಿ ಗ್ರಾಮಸ್ಥರು

* ಭಲೇಕಡಿ ಗ್ರಾಮದ ಹುಲ್ಗಾರ್‌ಬೈಲ್‌ನಲ್ಲಿ ಆನೆ ಓಡಾಟದ ಕುರುಹು
* ಕಾಡಾನೆ ದಾಳಿಗೆ 15 ದಿನಗಳ ಹಿಂದಷ್ಟೇ ಇಬ್ಬರು ಬಲಿಯಾಗಿದ್ದರು

NAMMMUR EXPRESS NEWS
ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾ ಪಂ ವ್ಯಾಪ್ತಿಯ ಕೆರೆಗದ್ದೆ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಹಿಂದಷ್ಟೇ ಕಾಡಾನೆ ದಾಳಿ ಮಾಡಿ ಇಬ್ಬರು ರೈತರು ಬಲಿಯಾದ ಘಟನೆ ಮಾಸುವ ಮುನ್ನವೇ ಅದೇ ಗ್ರಾಮದ ಸಮೀಪದ ಗ್ರಾಮವಾದ ಭಲೇಕಡಿಯ ಹುಲ್ಗಾರ್‌ಬೈಲ್ ಎಂಬಲ್ಲಿ ಭಾಸ್ಕರ್‌ಗೌಡ ಎಂಬುವರ ಮನೆಯ ಸಮೀಪ ಕಾಡಾನೆಯೊಂದು ಬಂದು ಓಡಾಡಿದ ಕುರುಹು ಪತ್ತೆಯಾಗಿದೆ.
ನಿನ್ನೆ ತಡರಾತ್ರಿ ಸುಮಾರಿಗೆ ಬಂದ ಕಾಡಾನೆಯು ಬೈನೇಮರವೊಂದನ್ನು ಕೆಡವಿದ್ದು ಆ ಮರವು ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬವು ತುಂಡಾಗಿದೆ.ನಂತರ ಕಾಡಿನೊಳಗೆ ಆನೆ ಸಾಗಿದ್ದು ಈ ಕುರುಹುಗಳು ಪತ್ತೆಯಾಗಿದೆ. ಇದರಿಂದ ಅಲ್ಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಭಲೇಕಡಿ,ಹುಲ್ಗಾರ್‌ಬೈಲ್‌ನಿಂದ ಸುಮಾರು 7 ಕಿ.ಮೀ ದೂರ ಕಾಡಿನ ಹಾದಿಯಲ್ಲಿ ಸಾಗಿ ಶಾಲೆ,ಕೆಲಸ ಕಾರ್ಯಗಳಿಗೆ ವಿದ್ಯಾರ್ಥಿಗಳು,ಸಾರ್ವಜನಿಕರು,ಮಹಿಳೆಯರು ದಿನವೂ ಓಡಾಡುತ್ತಾರೆ ಹೀಗಿರುವಾಗಿ ಕಾಡಾನೆ ಓಡಾಟದ ಸುದ್ದಿ ಅಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ.
ಕಾಡಾನೆ ಓಡಾಟದ ಮಾಹಿತ ತಿಳಿದ ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಹಾಗೂ ಡಿಎಫ್‌ಓ ಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ.

* 15 ದಿನಗಳ ಹಿಂದೆ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ
ಕೆರೆಕಟ್ಟೆ ಗ್ರಾ ಪಂ ವ್ಯಾಪ್ತಿರ ಕೆರೆಗದ್ದೆ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದಷ್ಟೇ ಕಾಡಿನೆಯೊಂದು ದಾಳಿ ಮಾಡಿ ಇಬ್ಬರು ರೈತರನ್ನು ಬಲಿ ಪಡೆದಿತ್ತು,ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ಸರ್ಕಾರ,ಅರಣ್ಯ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿ ಮೃತದೇಹ ಎತ್ತದೇ ಪ್ರತಿಭಟನೆ ನಡೆಸಿದ್ದರು ಹಾಗೂ ಸ್ಥಳಕ್ಕೆ ಅರಣ್ಯ ಸಚಿವರು ಬರುವಂತೆ ಪಟ್ಟು ಹಿಡಿದಿದ್ದರು. ನಂತರ ಸ್ಥಳಕ್ಕೆ ಬಂದ ಡಿಸಿ,ಎಸ್ಪಿ ಸಾರ್ವಜನಿಕರಿಂದ ತೀವ್ರ ವಿರೋಧ ಎದುರಿಸಿದರು.ನಂತರ ಸ್ಥಳಕ್ಕೆ ಬಂದ ಶಾಸಕ ಟಿ ಡಿ ರಾಜೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು,ಸಂತ್ರಸ್ತರಿಗೆ ಸೂಕ್ತ ಪರಿಹಾರದ ಭರವಸೆ ನೀಡಿ ಮತ್ತು ನ.17 ರಂದು ಜನಸಂಪರ್ಕ ಸಭೆ ನಡೆಸೋದಾಗಿ ತಿಳಿಸಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾಗಿ ಪ್ರತಿಭಟನೆ ಕೈಬಿಡಲಾಗಿತ್ತು. ನಂತರ ಸಂತ್ರಸ್ತರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಭೇಟಿ ನೀಡಿ ಸಾಂತ್ವನ ಹೇಳಿ ತಲಾ 5 ಲಕ್ಷ ರೂ.ಗಳ ವೈಯಕ್ತಿಕ ಪರಿಹಾರ ನೀಡಿ,ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸೋದಾಗಿ ಭರವಸೆ ನೀಡಿದ್ದರು. ನಂತರ ಕುದುರೆಮುಖ ರಾಷ್ಟ್ರೀಯ ಉದ್ಯಾನವ ಪುನರ್ವಸತಿ ಹೋರಾಟ ಸಮಿತಿಯು ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಕಾರ್ಕಳ ಶಾಸಕ ಸುನಿಲ್ ಕುಮಾರ್,ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡರನ್ನು ಭೇಟಿ ಮಾಡಿ 2005 ರ ಪುನರ್ವಸತಿ ಆದೇಶವನ್ನು ಪುನರ್‌ ಪರಿಶೀಲಿಸಿ ಪ್ರಸ್ತುತ ಇರುವ ಮಾನದಂಡದಲ್ಲಿ ಪರಿಹಾರ ನೀಡಿ,ಅಷ್ಟೂ ಕುಟುಂಬಗಳನ್ನು ಒಂದೇ ಸರಿ ಸ್ಥಳಾಂತರಿಸುವ ಬಗ್ಗೆ ಮನವಿ ಮಾಡಿತ್ತು.ಪದೇ ಪದೇ ಕಾಡು ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿರುವ ಜನರು ಶಾಶ್ವತ ಸೂಕ್ತ ಪರಿಹಾರಕ್ಕಾಗಿ ಎದುರುನೋಡುತ್ತಿದ್ದಾರೆ.

Categories
ನಮ್ಮೂರ್ ಪ್ರಾಬ್ಲಮ್ ಮಲ್ನಾಡ್ ಮಾಹಿತಿ ವಿಶೇಷ ಸುದ್ದಿ

ಶಾರದಾಂಬೆ ಮಡಿಲಿನ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರ!

ಶಾರದಾಂಬೆ ಮಡಿಲಿನ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರ!
– ನಕ್ಸಲೆಟ್ ಹೆಸರಿನಲ್ಲಿ ಸರ್ಕಾರದ ಅನುದಾನ ನಿರ್ಲಕ್ಷ
– ನೀರಿನ ಹನಿಗೂ, ದಾರಿಯ ಕಲ್ಲಿಗೂ ಹೋರಾಟ
– ದಶಕಗಳ ಜನರ ಮನವಿಗೆ ಬೆಲೆಯೇ ಇಲ್ಲ

ನಮ್ಮೂರ್ ಪ್ರಾಬ್ಲಮ್

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮರಕಲ್ ಗ್ರಾಮದ ಕಿಗ್ಗ ಊರಿನಿಂದ ಚೆಟ್ಟುಗುಣಿ ಗ್ರಾಮಕ್ಕೆ ಹೋಗುವ ಕಾಲುಸಂಕ ಇಂದಿಗೂ ಜನರ ಬದುಕಿನ ನಾಡಿಯಾಗಿದೆ.
ದಶಕಗಳಿಂದ ಈ ಮಾರ್ಗದ ದುರಸ್ತಿ ಬೇಡಿಕೆಗಳನ್ನು ಗ್ರಾಮಸ್ಥರು ಶಾಸಕರವರೆಗೂ ತಲುಪಿಸಿದರೂ, ಪ್ರತಿಸಾರಿ ಹಿಂತಿರುಗುವ ಉತ್ತರ ಅದು ನಕ್ಸಲೇಟು ಪ್ರದೇಶ, ಅಭಿವೃದ್ಧಿ ಸಾಧ್ಯವಿಲ್ಲ! ಎಂದು ನಿರ್ಲಕ್ಷದಿಂದ ಉತ್ತರ ಕೊಡುತ್ತಿದ್ದಾರೆ.
ಗ್ರಾಮದಲ್ಲಿ 30 ಮನೆಗಳಿದ್ದು ಆದರೆ ಜನರ ಹೋರಾಟ ಮತ್ತು ತಾಳ್ಮೆ ಕಟ್ಟೆಈಗ ಒಡೆಯುತ್ತಿದೆ. ಶಾಲಾ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ಇದೇ ದುಸ್ಥಿತಿಯ ಕಾಲುಸಂಕದ ಮೇಲೆ ನಡೆಯಬೇಕಾದ ಪರಿಸ್ಥಿತಿ ಇನ್ನೂ ಮುಂದುವರಿದಿದೆ.
ಕಲ್ಲು ಮಣ್ಣು ಮಿಶ್ರಿತ, ಮಳೆಗಾಲದಲ್ಲಿ ಹಾದಿಯೇ ಮಾಯವಾಗುವ ಈ ಮಾರ್ಗವು, ಇಂದು ಮಾನವ ಹಕ್ಕುಗಳನ್ನೇ ಪ್ರಶ್ನಿಸುವ ಮಟ್ಟಕ್ಕೇರಿದೆ.
ಶಾಸಕರು ಹಾಗೂ ಜನ ನಾಯಕರು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ, ನಮ್ಮ ಕಷ್ಟ ಕೇಳುವವರು ಯಾರು? ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಹೋರಾಟದ ಮನವಿ, ಮನವಿಯ ಬಳಿಕದ ಮೌನ, ಇವೇ ಚೆಟ್ಟುಗುಣಿಯ ದಿನಚರಿ. ನಾವು ಮತ ಹಾಕಿ ಏನು ಪ್ರಯೋಜನ? ಬದಲಾವಣೆ ಇಲ್ಲದಿದ್ದರೆ ಮತವಿಲ್ಲ ಎಂಬ ಘೋಷಣೆಯೊಂದಿಗೆ ಈ ಬಾರಿ ಚುನಾವಣಾ ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಚೆಟ್ಟುಗುಣಿ ಗ್ರಾಮದ ಪರಿಸ್ಥಿತಿ ಕೇಳೋರಿಲ್ಲ

ಚೆಟ್ಟುಗುಣಿ ಗ್ರಾಮದ ಪರಿಸ್ಥಿತಿ ಅಭಿವೃದ್ಧಿಯೆಂಬ ಶಬ್ದಕ್ಕೆ ನಾಚಿಕೆ ತರಿಸುತ್ತದೆ. ಇಲ್ಲಿಯವರೆಗೂ ರಸ್ತೆ ಇಲ್ಲ, ಸಾರಿಗೆ ಇಲ್ಲ, ಕುಡಿಯುವ ನೀರಿನ ಸರಬರಾಜಿಲ್ಲ, ನೆಟ್ವರ್ಕ್ ಸಂಪರ್ಕವಿಲ್ಲ. ಮಳೆ ಬಂದರೆ ಶಾಲಾ ಮಕ್ಕಳು ತರಗತಿಗೆ ಹೋಗದೆ ಮನೆಬದಿಯಲ್ಲಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅನಾರೋಗ್ಯ ಬಂದರೆ ಮೈಲ್ಗಟ್ಟಲೆ ನಡೆದು ಆಸ್ಪತ್ರೆಗೆ ತಲುಪಬೇಕು. ಇಂತಹ ಸ್ಥಿತಿಯಲ್ಲಿ, ಸರ್ಕಾರದ ಯೋಜನೆಗಳು, ಬೃಹತ್ ಘೋಷಣೆಗಳು ಎಲ್ಲವೂ ಕಾಗದದ ಅಕ್ಷರಗಳಷ್ಟೇ.

ಜನರ ತಾಳ್ಮೆಗೆ ಪರೀಕ್ಷೆ ಮಾಡಿದ ರಾಜಕಾರಣಿಗಳು!

ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಕಚೇರಿ, ಮತ್ತು ಶಾಸಕರ ಮನೆಬಾಗಿಲಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಜನರ ತಾಳ್ಮೆ ಇದೀಗ ಕೋಪಕ್ಕೆ ತಿರುಗಿದೆ. ಅಭಿವೃದ್ಧಿಯ ಹೆಸರು ಹೇಳುತ್ತಾ ಮತ ಬೇಡುವವರು, ನಮ್ಮ ಕಾಲುಸಂಕದ ಮೇಲಾದರೂ ನಡೆದು ನೋಡಲಿ ಎಂಬ ಸಿಡಿಲುಪದಗಳು ಚೆಟ್ಟುಗುಣಿ ನಿವಾಸಿಗಳಲ್ಲಿ ಕೇಳಿಬರುತ್ತಿದೆ.

ಬುಡಕಟ್ಟು ಬದುಕು, ನಾಳೆಯ ಕನಸು?

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲೆಡೆ 5G ತಂತ್ರಜ್ಞಾನ ಬೆಳೆಯುತ್ತಿದೆ, ಚೆಟ್ಟುಗುಣಿಯ ಜನರು ಇನ್ನೂ 2G ಬದುಕು ನಡೆಸುತ್ತಿದ್ದಾರೆ. ನೀರಿನ ಹನಿಗೂ, ದಾರಿಯ ಕಲ್ಲಿಗೂ ಹೋರಾಟ. ಆಡಳಿತದ ದೃಷ್ಟಿಯಲ್ಲಿ ನಕ್ಸಲೆಟ್ ಪ್ರದೇಶ ಎಂಬ ಹೆಸರಿನಲ್ಲಿ ಅಭಿವೃದ್ಧಿ ನಿಷೇಧದ ಫಲವಾಗಿ ಈ ಗ್ರಾಮಸ್ಥರು ಬುಡಕಟ್ಟು ಸಮುದಾಯಗಳಂತೆಯೇ ಬದುಕು ನಡೆಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ರಾಜಕಾರಣಿಗಳ ಮೌನ, ಜನರ ಘೋಷಣೆ

ಶೃಂಗೇರಿ ಶಾಸಕರು ಸೇರಿದಂತೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು, ಈಗ “ಮತವಿಲ್ಲ” ಎಂಬ ಶಸ್ತ್ರವನ್ನು ಆಯ್ದುಕೊಂಡಿದ್ದಾರೆ. ನಮ್ಮ ಹಾದಿ ಸರಿಪಡಿಸದವರೆಗೂ ಮತ ಹಾಕುವುದಿಲ್ಲ ಎಂಬ ಸ್ಪಷ್ಟ ನಿಲುವಿನಿಂದ ಚುನಾವಣಾ ಬಣ್ಣಕ್ಕೆ ಕಪ್ಪು ಸವರಲು ಗ್ರಾಮಸ್ಥರು ಸಜ್ಜಾಗಿದ್ದಾರೆ. ಚೆಟ್ಟುಗುಣಿ ಗ್ರಾಮವು ಇಂದು ಒಂದು ಪ್ರಶ್ನೆ ಎತ್ತುತ್ತಿದೆ. ನಮ್ಮ ಕಷ್ಟಕ್ಕೆ ಯಾರ ಉತ್ತರ?
ಜನರ ಕಣ್ಣೀರು ಒಣಗುವ ಮುನ್ನ, ಸರ್ಕಾರ ಮತ್ತು ಶಾಸಕರು ನಿಜವಾದ ಅಭಿವೃದ್ಧಿಯ ಹಾದಿ ತೋರಿಸುವ ಸಮಯ ಬಂದಿದೆ.ಇಂದು ಚೆಟ್ಟುಗುಣಿ ಎನ್ನುವ ಈ ಚಿಕ್ಕ ಹಳ್ಳಿಯ ಕೂಗು, ನಾಳೆ ರಾಜ್ಯದ ನಾಚಿಕೆಗಾಗಬಹುದು. ಆಡಳಿತ ಅಧಿಕಾರಿಗಳೇ ಎಚ್ಚರ.!

Categories
Uncategorized ಅಡಿಕೆ-ದರ ಉಡುಪಿ ಕರಾವಳಿ ಕೃಷಿ ಮಂಗಳೂರು ವಿಶೇಷ ಸುದ್ದಿ

ಐವತ್ತು ಸಾವಿರ ದಾಟಿದ ಚಾಲಿ ಅಡಿಕೆ!

ಐವತ್ತು ಸಾವಿರ ದಾಟಿದ ಚಾಲಿ ಅಡಿಕೆ!

– ಅಡಿಕೆ ಫಸಲು ಕಡಿಮೆ ಇರುವುದರಿಂದ ಅಡಿಕೆ ಬೆಲೆ ಏರಿಕೆ
– ರಾಜ್ಯದಲ್ಲಿ ಎಲ್ಲಾ ಕಡೆ ಅಡಿಕೆ ದರ ಹೆಚ್ಚಳ

NAMMUR EXPRESS NEWS
ಮಂಗಳೂರು : ಚಾಲಿ ಅಡಕೆ (ಸಿಂಗಲ್ ಚೋಲ್) ಮಂಗಳವಾರ ಕೆ.ಜಿಗೆ 520 ರೂ.ಗೆ ಖರೀದಿಯಾಗಿದೆ. ಕಳೆದ ವಾರ 500 ರೂ. ಗಡಿ ತಲುಪಿತ್ತು. ಮುಂದಿನ ದಿನಗಳಲ್ಲಿ ಸಿಂಗಲ್ ಮಂಗಳೂರು ಚಾಲಿ ಅಡಕೆ 550 ರೂ. ಗಡಿ ಚೋಲ್ ದಾಟುವ ನಿರೀಕ್ಷೆ ಇದೆ.
ಸಿಂಗಲ್ ಜೋಲ್ ಅಡಕೆಗೆ ಕ್ಯಾಂಪ್ಲೋ 520 ರೂ. ನಿಗದಿ ಮಾಡಿದ ಬೆನ್ನಲ್ಲೇ ಕೆಲವು ಖಾಸಗಿ ವ್ಯಾಪಾರಸ್ಥರು ವರವನ್ನು ಕೊಂಚ ಏರಿಸಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ಸಿಂಗಲ್ ಬೋಲ್ ಗೆ 480 ರೂ. ದರವಿತ್ತು. ಕರಿಕೋಕ ಅಡಕೆಗೆ ಕಳೆದ ವರ್ಷ ಬೇಡಿಕೆ ಇಲ್ಲದ ಕಾರಣ ಈ ಸಮಯಕ್ಕೆ ಕೆ.ಜಿಗೆ 70 ರೂ. ದರವಿತ್ತು. ಈ ಬಾರಿ 250 ರೂ. ದರವಿದೆ. ಉತ್ತರ ಭಾರತದಲ್ಲಿ ಅಡಕೆ ಬೇಡಿಕೆ ಹೆಚ್ಚುತ್ತಿದ್ದರೂ ಅವಕ ಕಡಿಮೆ ಇರುವ ಕಾರಣ ಧಾರಣೆ ಜಿಗಿದಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಈ ಸಾಲಿನ ಅಡಕೆ ಮಾರುಕಟ್ಟೆಗೆ ಅವಕವಾಗುತ್ತಿದ್ದು, ಇದು ಕೆ.ಜಿಗೆ 380 ರೂ.ಗೆ ಖರೀದಿಯಾಗುತ್ತಿದೆ. ಕಳೆದ ವಾರ ಇದರ ದರ 360 ರೂ. ಇತ್ತು.
ಕಳೆದ ಸಾಲಿನಲ್ಲಿ ಅಡಕೆ ಇಳುವರಿ ಕಡಿಮೆಯಿದ್ದು, ಕೊಳೆರೋಗವೂ ಬಾಧಿಸಿತ್ತು. ಸಣ್ಣ ರೈತರು ಜೂನ್ ವೇಳೆ ಮಾರಾಟ ಮಾಡಿದ್ದರೆ, ದೊಡ್ಡ ರೈತರು ಮಾತ್ರ ದಾಸ್ತಾನು ಇರಿಸಿಕೊಂಡಿದ್ದಾರೆ. ಅರ್ಧಕ್ಕರ್ಧ ಬೆಳೆ ನಷ್ಟ ಪ್ರಸ್ತುತ ಸಾಲಿನಲ್ಲೂ ವ್ಯಾಪಕ ಕೊಳೆರೋಗವಿದ್ದು ಮಳೆಗಾಲದಲ್ಲಿ ಅರ್ಧಕರ್ಧ ಅಡಕೆ ಎಳತಿನಲ್ಲೇ ಮರದಿಂದ ಉದುರಿವ ಹೀಗಾಗಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಫಸಲು ನಷ್ಟವಾಗ ಸಾಧ್ಯತೆ ಇದೆ.
ಅಡಕೆ ಫಸಲು ಕಡಿಮೆ ಇದ್ದು, ಉತ್ಪಾದನಾ ವೆಚ್ಚ ಅಧಿಕವಿದೆ. ದರ ಏರಿಕೆಯಾದಲ್ಲಿ ಮಾತ್ರ ಕೃಷಿಕರಿಗೆ ಅನುಕೂಲವಾಗುತ್ತದೆ.

ಅರ್ಧ ಲಕ್ಷ ರೂ. ತಲುಪಿದ ಚಾಲಿ ದರ :-

ರಾಜ್ಯದ ಅಡಕೆ ಮಾರುಕಟ್ಟೆಯಲ್ಲಿ ಈಗ ಚಾಲಿ ಅಡಕೆ ದರ ಹಂತಹಂತವಾಗಿ ಏರಿಕೆ ಆಗುತ್ತಿದ್ದು ಈಗ ಕ್ವಿಂಟಾಲ್‌ಗೆ ಅರ್ಧ ಲಕ್ಷ ರೂ. ತಲುಪಿದೆ. 3 ತಿಂಗಳ ಹಿಂದಿನ ದರಕ್ಕೆ ಹೋಲಿಸಿದಲ್ಲಿ ಈಗ ಕ್ವಿಂಟಾಲ್‌ಗೆ 8 ಸಾವಿರ ರೂ. ಏರಿಕೆ ಕಂಡಿದೆ. ಶಿರಸಿ ಸೇರಿ ಉತ್ತರ ಕನ್ನಡದ ನಾನಾ ಕಡೆಗಳಲ್ಲಿ ಬಹುಪಾಲು ಬೆಳೆಗಾರರ ಬಳಿ ಅಡಕೆ ಬೆಳೆ ದಾಸ್ತಾನು ಕಡಿಮೆ ಇರುವುದು ದರ ಹೆಚ್ಚಳ ಆಗುವುದಕ್ಕೆ ಮುಖ್ಯ ಕಾರಣವಾಗಿದೆ. ಸಹಕಾರ ಸಂಸ್ಥೆಗಳು ಪ್ರಬಲವಾಗಿರುವ ಕಡೆಗಳಲ್ಲಿ ಅಡಕೆ ಬೆಳೆಗಾರರು ಬೆಳೆಯನ್ನು ದಾಸ್ತಾನು ಮಾಡುವ ಪದ್ಧತಿ ಇದೆ. ಆದರೆ ಈ ದಾಸ್ತಾನು ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧದಷ್ಟು ಕಡಿಮೆ ಇದೆ. ಹೊಸ ಕೆಂಪಡಿಕೆ ಇನ್ನೆರಡು ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಬಹುದಾದರೂ ಚಾಲಿ ಅಡಕೆ ಹಂಗಾಮು ಪ್ರಾರಂಭವಾಗಿ ಬೆಳೆ ಮಾರಾಟಕ್ಕೆ ಬರುವುದಕ್ಕೆ ಇನ್ನೂ ನಾಲೈದು ತಿಂಗಳು ಕಾಯಬೇಕು. ಆದರೆ ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಾರಸ್ಥರು ಈಗಲೇ ಖರೀದಿ ಮಾಡಿಕೊಳ್ಳಲು ಮುಂದಾಗಿರುವುದರಿಂದ ದರ ಏರಿಕೆ ಆಗುತ್ತಿದೆ.

Categories
ತೀರ್ಥಹಳ್ಳಿ ನಮ್ಮೂರ್ ಸಹಾಯ ಹಸ್ತ ವಿಶೇಷ ಸುದ್ದಿ

ತೀರ್ಥಹಳ್ಳಿ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ

ತೀರ್ಥಹಳ್ಳಿ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ
– ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನುಡಿ ನಮನ
– ಸಮಾಜ ಸೇವಕ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಗಾಯತ್ರಿ ಶೇಷಗಿರಿ, ಕಲಾವಿದರಾದ ಕಾರ್ತಿಕ್, ಸುಧನ್ವ, ನಮನ ಅವರಿಗೆ ಸನ್ಮಾನ

ತೀರ್ಥಹಳ್ಳಿ: ರಾಜ್ಯದ ಕ್ರಿಯಾಶೀಲ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಅ.29ರ ಸಂಜೆ ಸರಳವಾಗಿ ಪುನೀತ್ ನಮನ-2025 ಕಾರ್ಯಕ್ರಮ ಆಚರಣೆ ಮಾಡಲಾಯಿತು.
ತೀರ್ಥಹಳ್ಳಿ ಸಮಾಜ ಸೇವಕರು, ಪಟ್ಟಣ ಪಂಚಾಯತ್ ಸದಸ್ಯರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರರಾದ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಗಾಯತ್ರಿ ಶೇಷಗಿರಿ, ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಸುಧಾಕರ್ ಕುಪ್ಪಳಿ, ಪ್ರಶಾಂತ್ ಕುಮಾರ್, ಶ್ರೀಕಾಂತ್ ಬೆಟ್ಟಮಕ್ಕಿ, ರಾಘವೇಂದ್ರ ಚಿಡುವ, ಶಿರುಪತಿ ಮಂಜುನಾಥ್ ಸೇರಿ ಅನೇಕರು, ನಮ್ಮೂರ್ ಎಕ್ಸ್ ಪ್ರೆಸ್ ಸಿಬ್ಬಂದಿ, ಪುನೀತ್ ಬ್ರಿಗೇಡ್ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸೊಪ್ಪುಗುಡ್ಡೆ ರಾಘವೇಂದ್ರ ಅವರು, ಪುನೀತ್ ಅವರ ಸೇವೆ ಎಲ್ಲರಿಗೂ ಪ್ರೇರಣೆ. ನಾವೆಲ್ಲರೂ ಸೇವೆಗೆ ಕೈ ಜೋಡಿಸೋಣ ಎಂದರು. ನಮ್ಮೂರ್ ಎಕ್ಸ್ಪ್ರೆಸ್ ಸಂಸ್ಥೆಯ ರಾಘವೇಂದ್ರ ತೀರ್ಥಹಳ್ಳಿ ನಿರೂಪಿಸಿ, ಪ್ರಾಸ್ತವಿಕ ಮಾತನಾಡಿದರು. ಇದೇವೇಳೆ ನಮ್ಮೂರ್ ಎಕ್ಸ್ ಪ್ರೆಸ್ ಸಹಾಯ ಹಸ್ತ ಸೇವಾ ಯೋಜನೆಗೆ ಚಾಲನೆ ನೀಡಲಾಯಿತು.

ಸೇವಕರು, ಸಾಧಕರಿಗೆ ಪುನೀತ್ ಸೇವಾ ಪುರಸ್ಕಾರದ ಗೌರವ

ಸಮಾಜ ಸೇವಕರು, ತೀರ್ಥಹಳ್ಳಿಯ ಹತ್ತಾರು ಸಂಘಟನೆಗಳಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ಹಾಲಿ ಪಟ್ಟಣ ಪಂಚಾಯತ್ ಸದಸ್ಯರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಹಾಗೂ ಪತ್ರಕರ್ತೆ ಗಾಯತ್ರಿ ಶೇಷಗಿರಿ, ಕಲಾವಿದರಾದ ಕಾರ್ತಿಕ್ ಶ್ರೇಯನ್, ಸುಧನ್ವ ಗಡಿಕಲ್, ಗಾಯಕಿ ನಮನ ಕ್ಯಾದಿಗೆರೆ ಅವರಿಗೆ ಪುನೀತ್ ಸೇವಾ ಪುರಸ್ಕಾರದ ಗೌರವ ನೀಡಲಾಯಿತು.

Categories
Uncategorized ಚಿಕ್ಕಮಗಳೂರು ಚುನಾವಣಾ ಸುದ್ದಿ ತೀರ್ಥಹಳ್ಳಿ ಮಲ್ನಾಡ್ ಮಾಹಿತಿ ವಿಶೇಷ ಸುದ್ದಿ ಶಿವಮೊಗ್ಗ ಶೃಂಗೇರಿ

ಜಿಎಸ್‌ಟಿ ಇಳಿಕೆ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

ಜಿಎಸ್‌ಟಿ ಇಳಿಕೆ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

* ಸಿ ಟಿ ರವಿ ಸೇರಿದಂತೆ ಕಾರ್ಯಕರ್ತರಿಂದ ಸಿಹಿಹಂಚಿ ಸಂಭ್ರಮಾಚರಣೆ
* ಜನತೆಯ ತೆರಿಗೆ ಹೊರೆ ಇಳಿಸಿದ ಪ್ರಧಾನಿಗೆ ಧನ್ಯವಾದ – ಮಣಿಕಂಠನ್ ಕಂದಸ್ವಾಮಿ

NAMMMUR EXPRESS NEWS
ಚಿಕ್ಕಮಗಳೂರು: ಜಿಎಸ್‌ಟಿ ಇಳಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸಿ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ರಾಜ್ಯದ ಕಾಂಗ್ರೆಸ್ ಸರ್ಕಾರ ತೆರಿಗೆ ಹೊರೆ ಹೆಚ್ಚಿಸಿ ಪಾಪ ಕಟ್ಟಿಕೊಂಡಿದ್ದು, ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಕೆ ಮೂಲಕ ಪುಣ್ಯ ಕಟ್ಟಿಕೊಳ್ಳುತ್ತಿದೆ,’ಜನನದಿಂದ ಮರಣದ ತನಕ ರಾಜ್ಯದಲ್ಲಿ ತೆರಿಗೆ ಇದೆ. ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದರೆ ಹೆಚ್ಚು ದರವಿದೆ,ಪ್ರಧಾನಿ ನರೇಂದ್ರ ಮೋದಿ ಅವರ ಹಾದಿಯಲ್ಲಿ ಕನಿಷ್ಠ ಎರಡು ಹೆಜ್ಜೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಟ್ಟರೆ ರಾಜ್ಯ ಜನರಿಗೆ ಒಳಿತಾಗಲಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಯೋಚಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ‘ದೇಶದ ಜನರಿಗೆ ಹಬ್ಬದ ವಾತಾವರಣವನ್ನು ನರೇಂದ್ರ ಮೋದಿ ಸರ್ಕಾರ ಮಾಡಿಕೊಟ್ಟಿದೆ’ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್, ನಗರ ಘಟಕ ಅಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌, ಮುಖಂಡರಾದ ಕೋಟೆ ರಂಗನಾಥ್, ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾ‌ರ್, ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್‌, ನಗರಸಭೆ ಸದಸ್ಯರಾದ ಕವಿತಾ ಶೇಖ‌ರ್, ಮಧುಕುಮಾ‌ರ್, ಮುಖಂಡರುಗಳದ ಪುಟ್ಟಸ್ವಾಮಿ, ಎಚ್‌.ಕೆ. ಕೇಶವಮೂರ್ತಿ, ಕೌಶಿಕ್, ದಿನೇಶ್, ಬೆನಡಿಕ್ಟ್ ಜೇಮ್ಸ್, ಪ್ರದೀಪ್ ಹಾಜರಿದ್ದರು.

* ಜನತೆಯ ತೆರಿಗೆ ಹೊರೆ ಇಳಿಸಿದ ಪ್ರಧಾನಿಗೆ ಧನ್ಯವಾದಗಳು.

ನವರಾತ್ರಿಗೆ ದೇಶದ ಜನತೆಗೆ ಎರಡು ಮಾದರಿಯ ಜಿಎಸ್ ಟಿ ಮೂಲಕ ಉಡುಗೊರೆ ನೀಡಿದ ಮೋದಿಗೆ ಹಾಗೂ ನಿರ್ಮಲ ಸೀತರಾಮನ್ ರವರಿಗೆ ಧನ್ಯವಾದಗಳು ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು .
ಅವಕಾಶವಾದಗೆಲ್ಲ ದೇಶ ಜನತೆಗೆ ಅನುಕೂಲಕರ ಅಂಶಗಳನ್ನು ಒದಗಿಸುವ ಮೋದಿಯವರ ಚಿಂತನೆಯು ದೇಶದ ಮತ್ತು ದೇಶವಾಸಿಗಳ ಅಭಿವೃದ್ಧಿಯನ್ನು ಪ್ರಗತಿಯತ್ತ ಕೊಂಡೊಯ್ಯತ್ತಿದೆ. ಎರಡು ಮಾದರಿ ಜಿ ಎಸ್ ಟಿ ಇಂದಾಗಿ ದಿನನಿತ್ಯದ ವಸ್ತುಗಳಾದ ತುಪ್ಪ, ಪನೀರ್, ಬೆಣ್ಣೆ, ನಮ್ಕೀನ್, ಜಾಮ್, ಕೆಚಪ್, ಡ್ರೈ ಫ್ರೂಟ್ಸ್, ಕಾಫಿ ಜೊತೆಗೆ ಐಸ್ ಕ್ರೀಮ್ ನಂತಹ ವಸ್ತುಗಳು ಕಡಿಮೆ ತೆರಿಗೆಗೆ ಒಳಪಡಲಿವೆ. ಈ ಮೊದಲು ಇವುಗಳ ಮೇಲೆ 12% ರಿಂದ 18% ಜಿಎಸ್ಟಿ ಇತ್ತು, ಈಗ ಅದನ್ನು 5% ಪಟ್ಟಿಗೆ ಸೇರಿಸಲಾಗಿದೆ .
ಆರೋಗ್ಯ ಕ್ಷೇತ್ರದಲ್ಲೂ ಜಿಎಸ್‌ಟಿ ಕಡಿತವಾಗಲಿದ್ದು, ಹೆಲ್ತ್ ಇನ್ಶ್ಯುರೆನ್ಸ್ ಹಾಗೂ 33 ಜೀವರಕ್ಷಕ ಮೆಡಿಸಿನ್‌ಗಳ ದರವೂ ಕಡಿಮೆ ಆಗಲಿದೆ. ಇದರಿಂದಾಗಿ ಜನಸಾಮಾನ್ಯರು ಕೂಡ ಹೆಲ್ತ್ ಇನ್ಶುರೆನ್ಸ್ ಗಳನ್ನು ಹೊಂದಲು ಸಹಾಯವಾಗುತ್ತದೆ. ಜೊತೆಗೆ ಗ್ಲುಕೋಮೀಟರ್‌ಗಳು, ರೋಗನಿರ್ಣಯ ಕಿಟ್‌ಗಳು ಮತ್ತು ಹೆಚ್ಚಿನ ಔಷಧಿಗಳ ಮೇಲೆ ಕೇವಲ 5% ಜಿಎಸ್‌ಟಿ ವಿಧಿಸಲಾಗುವುದು. ಈ ಹಿಂದೆ ಈ ವಸ್ತುಗಳು 12% ಅಥವಾ 18% ಸ್ಲ್ಯಾಬ್‌ನಲ್ಲಿದ್ದವು ಇದು ದೇಶದ ಜನತೆಗೆ ಆರೋಗ್ಯ ಚೇತರಿಕೆಗೆ ಹೆಚ್ಚು ಸಹಾಯವಾಗಲಿದೆ .
ಒಟ್ಟಾರೆ ಜನತೆಯು ಅಗತ್ಯ ವಸ್ತುಗಳ ಖರೀದಿ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಪ್ರಯತ್ನಕ್ಕೆ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರಿಗೆ ವಿಶೇಷ ಧನ್ಯವಾದಗಳು ಎಂದರು.

Categories
ಇತರೆ ಸುದ್ದಿ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಮಾಹಿತಿ ವಿಶೇಷ ಸುದ್ದಿ ಶಿವಮೊಗ್ಗ ಹೊಸನಗರ

ಶಿಕ್ಷಕರ ಸರ್ವೇ ಸಂಕಟ: ಕೇಳೋರ್ಯಾರು..?

ಶಿಕ್ಷಕರ ಸರ್ವೇ ಸಂಕಟ: ಕೇಳೋರ್ಯಾರು..?
– ತೀರ್ಥಹಳ್ಳಿಯಲ್ಲಿ ಶಿಕ್ಷಕರಿಂದ ತಹಸೀಲ್ದಾರ್ ಅವರಿಗೆ ಮನವಿ

-ಜಿ.ಎಸ್.ಟಿ. ದರ ಇಳಿಕೆ: ತೀರ್ಥಹಳ್ಳಿಯಲ್ಲೂ ಬಿಜೆಪಿ ಸಂಭ್ರಮ!

NAMMUR EXPRESS NEWS
ತೀರ್ಥಹಳ್ಳಿ: ಶಿಕ್ಷಕರಿಗೆ ಅನೇಕ ಕೆಲಸ ಒತ್ತಡ ನಡುವೆ ಇದೀಗ ಮತ್ತೆ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ಗಣತಿದಾರರಾಗಿ ನಿಯೋಜಿಸಿದ್ದು, ಶಿಕ್ಷಕರಿಗೆ ಭಾರೀ ಒತ್ತಡ ಹೇರಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು ಎಂದು ತೀರ್ಥಹಳ್ಳಿಯಲ್ಲಿ ಶಿಕ್ಷಕರು ಶಿಕ್ಷಣ ಅಧಿಕಾರಿಗಳ ಕಚೇರಿಯಿಂದ ತಹಸೀಲ್ದಾರ್ ಕಚೇರಿ ಭೇಟಿ ನೀಡಿ ಮನವಿ ಸಲ್ಲಿಸಿದರು.

ತೀರ್ಥಹಳ್ಳಿ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಏಕಕಾಲದಲ್ಲಿ ಬಿ ಎಲ್ ಓ ಅಧಿಕಾರಿಗಳಾಗಿ ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿಗೆ ಗಣತಿ ದಾರರಾಗಿ ನಿಯೋಜಿಸಿದ ಕುರಿತು ತಾಲೂಕು ದಂಡಾಧಿಕಾರಿಗಳ ಬಳಿ ಶಿಕ್ಷಕ ಸಂಘದ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ತಾಲೂಕು ದಂಡಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುಟ್ಟಪ್ಪನವರು ಹಾಗೂ ಜಿಲ್ಲಾ ಶಿಕ್ಷಕ ಸಂಘದ ಖಜಾಂಚಿಯಾದ ಶ್ರೀಯುತ ಮಂಜುನಾಥ್ ರವರು ತಾಲೂಕು ಶಿಕ್ಷಣ ಸಂಘದ ಕಾರ್ಯದರ್ಶಿಯಾದ ಲಕ್ಷ್ಮಣ್ ಅವರು ಪದಾಧಿಕಾರಿಗಳಾದ ಶ್ರೀಯುತ ಕೃಷ್ಣಮೂರ್ತಿ, ಆನಂದ ಕುಮಾರ್ ಹಾಗೂ ನೌಕರ ಸಂಘದ ಪದಾಧಿಕಾರಿಯಾದ ಶ್ರೀಯುತ ಮಂಜುನಾಥ್ ಕೆ ಆರ್ ಹಾಗೂ ಅನೇಕ ಶಿಕ್ಷಕ ಮಿತ್ರರು ಹಾಜರಿದ್ದರು.

ಜಿ.ಎಸ್.ಟಿ. ದರ ಇಳಿಕೆ: ತೀರ್ಥಹಳ್ಳಿಯಲ್ಲೂ ಬಿಜೆಪಿ ಸಂಭ್ರಮ!

ತೀರ್ಥಹಳ್ಳಿ: ನವರಾತ್ರಿಯ ಜೊತೆಜೊತೆಗೆ ರಾಷ್ಟ್ರದ ಪಾಲಿಗೆ ಐತಿಹಾಸಿಕ ದಿನ. ‘ನಾಗರೀಕ ದೇವೋಭವ’ ಎಂಬ ಅದ್ಭುತ ಘೋಷಣೆಯೊಂದಿಗೆ ಜಿ.ಎಸ್.ಟಿ. ದರಗಳನ್ನು ಎರಡು ಸ್ತರಕ್ಕೆ ಕಡಿತಗೊಳಿಸುವ ಕ್ರಾಂತಿಕಾರಕ ಹೆಜ್ಜೆ ಇಟ್ಟು ಜನಸಾಮಾನ್ಯರು, ಬಡವರು, ಮಹಿಳೆಯರು ಹಾಗೂ ರೈತರ ನಿತ್ಯ ಬದುಕಿನ ಹೊರೆ ಇಳಿಸಿದ ಕೇಂದ್ರ ಸರ್ಕಾರದ ನಡಯನ್ನು ತೀರ್ಥಹಳ್ಳಿಯಲ್ಲಿ ಸ್ವಾಗತಿಸಿ ಬಿಜೆಪಿ ವತಿಯಿಂದ ಸಂಭ್ರಮಿ ಸಲಾಯಿತು.
ಶಾಸಕರಾದ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಜೊತೆ ತೀರ್ಥಹಳ್ಳಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಂಭ್ರಮಾಚರಣೆಯ ಮೂಲಕ ತಿಳಿಸಲಾಯಿತು.
ಇದೇ ವೇಳೆ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಮೋರ್ಚಾ ತೀರ್ಥಹಳ್ಳಿ ಮಂಡಲ ವತಿಯಿಂದ ‘ಮಾ ಕೀ ನಾಮ್ ಪೆ ಏಕ್ ಪೇಡ್’ ಕಾರ್ಯಕ್ರಮದ ಅಡಿಯಲ್ಲಿ ಕುಶಾವತಿ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಅಧ್ಯಕ್ಷರಾದ ಹೆದ್ದೂರು ನವೀನ್ ಸೇರಿ ಪ್ರಮುಖರು ಹಾಜರಿದ್ದರು.

Categories
ಮಾಹಿತಿ ಸುದ್ದಿ ವಿಶೇಷ ಸುದ್ದಿ

ಮಕ್ಕಳಲ್ಲಿರದ ತಾರತಮ್ಯ ಶಿಕ್ಷಕರಲ್ಲೇಕೆ?

ಮಕ್ಕಳಲ್ಲಿರದ ತಾರತಮ್ಯ ಶಿಕ್ಷಕರಲ್ಲೇಕೆ?
– ಸರ್ಕಾರಿ ಶಾಲೆ, ಖಾಸಗಿ ಶಾಲೆ ಎಂಬ ಭೇದಕ್ಕೆ ಬೇಸರ
– ಶಿಕ್ಷಕರ ದಿನಾಚರಣೆಯಲ್ಲಿ ಖಾಸಗಿ ಶಾಲೆ ಶಿಕ್ಷಕರಿಗಿಲ್ಲ ಅವಕಾಶ
– ಸರ್ಕಾರ ಈ ಬಗ್ಗೆ ಗಮನಿಸಲು ಪಟ್ಟು

NAMMUR EXPRESS NEWS
ಶಿಕ್ಷಕರು ಮಕ್ಕಳನ್ನು ಜ್ಞಾನ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರ ಶಿಕ್ಷಕರು. ಒಬ್ಬ ಶಿಕ್ಷಕನು ದೇವರು ನೀಡಿದ ಸುಂದರವಾದ ಕೊಡುಗೆ. ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ. ಆದರೆ ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತನಾಗಿರುತ್ತಾನೆ. ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಜೀವನದಲ್ಲಿ ಅಂತಹ ಪ್ರಮುಖ ವ್ಯಕ್ತಿ ಆಗಿದ್ದು ಅವನು ತನ್ನ ಜ್ಞಾನ ತಾಳ್ಮೆ ಮತ್ತು ಪ್ರೀತಿಯ ಮೂಲಕ ವಿದ್ಯಾರ್ಥಿಯ ಇಡೀ ಜೀವನಕ್ಕೆ ಪ್ರಮುಖ ಆಕಾರವನ್ನು ನೀಡುತ್ತಾನೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು.
ಪ್ರತಿಯೊಬ್ಬ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ತಮ್ಮ ಮಾರ್ಗವನ್ನು ಆರಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಇಷ್ಟೆಲ್ಲ ಜೀವನ ಮಾರ್ಗವನ್ನು ವಿದ್ಯಾರ್ಥಿಗಳಿಗೆ ತೋರಿಸುವಂತಹ ಶಿಕ್ಷಕರಲ್ಲಿ ಖಾಸಗಿ ಶಾಲಾ ಶಿಕ್ಷಕರು ಎನ್ನುವ ತಾರತಮ್ಯವೇಕೆ? ಇತ್ತೀಚಿಗೆ ಈ ತಾರತಮ್ಯ ಶಿಕ್ಷಣ ಕ್ಷೇತ್ರದಲ್ಲಿಯೂ ಕಂಡು ಬರುತ್ತಿದ್ದು ಶಿಕ್ಷಕ ದಿನಾಚರಣೆಯಂದು ನಮ್ಮಲ್ಲಿ ಸರ್ಕಾರಿ ಶಿಕ್ಷಕರನ್ನು ಮಾತ್ರ ಸನ್ಮಾನಿಸುವಂತಹ ವ್ಯವಸ್ಥೆ ನಡೆಯುತ್ತಿದೆ.
ಖಾಸಗಿ ಶಿಕ್ಷಕರೂ ಕೂಡ ತಮ್ಮಲ್ಲಿ ಸೇವೆ ಮಾಡಿರುವುದು ಅವರ ಗಮನಕ್ಕೆ ಬಾರದೆ ಹೋಯಿತೇ?. ಶಿಕ್ಷಕರೆಂದರೇ ನಾವೆಲ್ಲ ಒಂದೇ ಎಂಬ ಭಾವನೆಯಲ್ಲಿರಬೇಕು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಏಳಿಗಾಗಿಯೇ ದುಡಿಯುತ್ತಿದ್ದಾರೆ.
ವಿದ್ಯಾರ್ಥಿಗಳ ಅಂಕವನ್ನು ಹೆಚ್ಚಿಸಿ ರಾಜ್ಯದ ಜಿಲ್ಲೆಯ ತಾಲೂಕಿನ ಹೆಸರನ್ನು ಎಲ್ಲಡೆ ಹಬ್ಬಿಸುವಂತಹ ಕೆಲಸ ಖಾಸಗಿ ಶಿಕ್ಷಕರಿಂದಲೂ ಆಗುತ್ತಿದೆ. ಅನೇಕ ಸಾಧಕ ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಅಂಕ ಬರಲು ಕಾರಣವಾದ ಖಾಸಗಿ ಶಾಲಾ ಶಿಕ್ಷಕರನ್ನು ಮರೆತು ಬಿಟ್ಟಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಕ ದಿನಾಚರಣೆಯಂದು ಸರ್ಕಾರಿ ಶಿಕ್ಷಕರಿಗೆ ಮಾತ್ರ ಉತ್ತಮ ಶಿಕ್ಷಕ ಬಹುಮಾನ, ಉತ್ತಮ ಶಾಲಾ ಬಹುಮಾನವನ್ನು ನೀಡಿ ಗೌರವಿಸುತ್ತಿದ್ದಾರೆ.
ವರ್ಷವಿಡೀ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಜಿಲ್ಲೆ, ತಾಲೂಕಿಗೆ ಉತ್ತಮ ಹೆಸರು ಬರಲು ಕಾರಣರಾದ ಖಾಸಗಿ ಶಾಲಾ ಶಿಕ್ಷಕರನ್ನು ಮರೆಮಾಚುವಂತಹ ವ್ಯವಸ್ಥೆ ನಡೆಯುತ್ತಿದೆ. ಸರ್ಕಾರಿ ಶಿಕ್ಷಕರಿಗೆ ನೀಡುವ ಬಹುಮಾನದಲ್ಲಿ 10% ಬಹುಮಾನವನ್ನು ಖಾಸಗಿ ಶಾಲಾ ಶಿಕ್ಷಕರಿಗೂ ನೀಡಿದರೆ ಅವರ ಸೇವೆಗೂ ಕೂಡ ಗೌರವ ನೀಡಿದಂತಾಗುತ್ತದೆ ಎಂಬುದು ಖಾಸಗಿ ಶಾಲೆ ಶಿಕ್ಷಕರ ಅಭಿಪ್ರಾಯ.

ಸರ್ಕಾರ ಕೂಡ ಗಮನಿಸಬೇಕು..ಎರಡು ಕಾರ್ಯಕ್ರಮ ಮಾಡಲಿ!

ಶಿಕ್ಷಕರ ದಿನಾಚರಣೆಯನ್ನು ಎರಡು ವಿಭಾಗ ಮಾಡಲಿ. ಸರ್ಕಾರಿ, ಖಾಸಗಿ ಶಾಲೆ ವಿಭಾಗ ಮಾಡಿ ಕಾರ್ಯಕ್ರಮ ಮಾಡಲಿ. ಉತ್ತಮ ಸಾಧನೆ, ಸೇವೆ ಮಾಡಿದ ಖಾಸಗಿ ಶಾಲೆ ಶಿಕ್ಷಕರಿಗೂ ಗೌರವ ಸಿಗಲಿ. ಎಲ್ಲರ ಸೇವೆಯೂ ಗಣನೆಗೆ ಬರಲಿ ಎಂಬುದು ಅನೇಕರ ಒತ್ತಾಯವಾಗಿದೆ.

Categories
ತೀರ್ಥಹಳ್ಳಿ ವಿಶೇಷ ಸುದ್ದಿ

ಅಂತ್ಯದಿಂದ ಅಗ್ರಸ್ಥಾನಕ್ಕೆ: ಸರ್ಕಾರಿ ಶಾಲೆಯ ಅಚ್ಚರಿ ಪಯಣ!

ಅಂತ್ಯದಿಂದ ಅಗ್ರಸ್ಥಾನಕ್ಕೆ: ಸರ್ಕಾರಿ ಶಾಲೆಯ ಅಚ್ಚರಿ ಪಯಣ!
* ಅಂದು ಮರೆಯಾಗುತ್ತಿದ್ದ ಹಿರೇಕಲ್ಲಹಳ್ಳಿ ಶಾಲೆ, ಇಂದು ಮಾದರಿ ಶಾಲೆ
* ಶಿಕ್ಷಕಿಯ ಶ್ರಮದಿಂದ ಶಾಲೆಗೆ ಪುನರ್ಜನ್ಮ: ಮೂಕಾಂಬಿಕಾ ಶೆಟ್ಟಿ ಪ್ರಶಸ್ತಿ ಗರಿ

ಶಿಕ್ಷಕರ ದಿನದ ವಿಶೇಷ

ವರದಿ: ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೇಕಲ್ಲಹಳ್ಳಿ ಶಾಲೆಯನ್ನು ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆಯ ದಿನದಂದು ತಾಲೂಕು ಉತ್ತಮ ಕಿರಿಯ ಪ್ರಾಥಮಿಕ ಶಾಲೆ ಎಂದು ಗುರುತಿಸಲಾಗಿದೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೇಕಲ್ಲಹಳ್ಳಿ 1962ರಲ್ಲಿ ಪ್ರಾರಂಭಗೊಂಡು ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾ ದಾನವನ್ನು ನೀಡಿದ ದೇಗುಲವಾಗಿದೆ, ಈ ಪ್ರಾಥಮಿಕ ಶಾಲೆಯಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಮಹೋನ್ನತವಾದ ಸಾಧನೆಯನ್ನು ಮಾಡಿದ್ದಾರೆ. ಕೆಲವರು ಯಾವುದೇ ರೀತಿಯ ಸಾಧನೆ ಮಾಡದಿದ್ದರೂ ತಮ್ಮ ಜೀವನವನ್ನು ಸುಂದರಗೊಳಿಸಿಕೊಳ್ಳಲು ಈ ಪ್ರಾಥಮಿಕ ಶಾಲೆಯು ಒಂದು ಚಿರಸ್ಮರಣೀಯ ಮೆಟ್ಟಿಲಾಗಿದೆ.
ಕ್ರಮೇಣ ಈ ಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆಯಿಂದ ಹಾಗೂ ಖಾಸಗಿ ಶಾಲೆಗಳ ಅಂದ ವ್ಯಾಮೋಹದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣದತ್ತ ಮುಖ ಮಾಡುತ್ತಿದ್ದರು.ಇರುವ ವಿದ್ಯಾರ್ಥಿಗಳು ವಿದ್ಯೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹಾಗೂ ಶಾಲೆಯು ಸ್ವಚ್ಛತೆಯಲ್ಲಿ ಬಹಳಷ್ಟು ಹಿಂದುಳಿದಿತ್ತು.
ಇಂತಹ ಸಮಯದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೇಕಲ್ಲಳ್ಳಿಗೆ 2023 ರಲ್ಲಿ ಶಿರಸಿಯ ಹೆಬ್ಬಾಳ ಗದ್ದೆಯಿಂದ ವರ್ಗಾವಣೆಗೊಂಡ ಮೂಕಾಂಬಿಕಾ ಶೆಟ್ಟಿ ಎಂಬ ಶಿಕ್ಷಕಿ ಇಲ್ಲಿ ಕೇವಲ 11 ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಪ್ರಾರಂಭಿಸಿದರು. ತಮ್ಮ ಚಾಕಚಕ್ಯತೆಯಿಂದ ಹಾಗೂ ತನಗಿರುವ ಜ್ಞಾನದಿಂದ ಮಕ್ಕಳನ್ನು ಆಕರ್ಷಿಸಲು ಪ್ರಾರಂಭಿಸಿದರು. ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಮೂಲಕ ಗ್ರಾಮದ ಪೋಷಕರ ಹಾಗೂ ಹಳೆಯ ವಿದ್ಯಾರ್ಥಿಗಳ ನೆರವು ಮತ್ತು ಅವರು ಹಿಂದೆ ಬೋಧಿಸಿದ ವಿದ್ಯಾರ್ಥಿಗಳ ನೆರವು ಪಡೆದು ಶಾಲೆಯನ್ನು ಉತ್ತಮ ಅಭಿವೃದ್ಧಿಗೊಳಿಸಿದ್ದಾರೆ. ಹಾಗೂ ಹಲವು ದಾನಿಗಳನ್ನು ಸಂದರ್ಶಿಸಿ ಶಾಲೆಗೆ ದಾನಿಗಳು ನೆರವಾಗುವಂತೆ ಮಾಡಿದ್ದಾರೆ. ಈಗ ಶಾಲೆಯ ಸದೃಢ ಅಭಿವೃದ್ಧಿಯೊಂದಿಗೆ ಮಕ್ಕಳ ಆಟ ಪಾಠದಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳಲ್ಲೂ ಮುಂಚಣೆಗೆ ಬರುವಂತೆ ಈ ಗೌರವಾನ್ವಿತ ಶಿಕ್ಷಕಿಯು ಕಾರ್ಯನಿರ್ವಹಿಸಿದ್ದಾರೆ.
ರಮ್ಯ ರಮಣೀಯವಾಗಿ ಇರುವ ಪ್ರಕೃತಿ ಸೌಂದರ್ಯದ ಮಧ್ಯೆ ಕುವೆಂಪುವಿನ ಕವಿಶೈಲವನ್ನು ಹೋಲುವ ವಿದ್ಯಾ ಮಂದಿರದಲ್ಲಿ ಪ್ರಸ್ತುತ ಸ್ವಗ್ರಾಮದಿಂದ ಹಾಗೂ ಅಕ್ಕ ಪಕ್ಕದ ಗ್ರಾಮಗಳಿಂದಲೂ ಹಲವು ವಿದ್ಯಾರ್ಥಿಗಳನ್ನು ಈ ಶಾಲೆ ಆಕರ್ಷಿಸಿದೆ. ಖಾಸಗಿ ಶಾಲೆಗಳತ್ತ ಮುಖ ಮಾಡುವ ಪೋಷಕರುಗಳು ಇಂತಹ ಶಾಲೆಯ ಕಡೆ ಒಮ್ಮೆ ತಿರುಗಿ ನೋಡುವಂತೆ ಮಾಡಿದೆ. ಈ ಶಾಲೆಗೆ ಕಳೆದ ಹಲವು ವರ್ಷಗಳಿಂದ ಶಾಸಕರು, ಉನ್ನತ ಅಧಿಕಾರಿಗಳು ಒಮ್ಮೆಯೂ ಭೇಟಿ ನೀಡಲಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನ. ಜನ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಇಲ್ಲಿನ ಕುಂದು ಕೊರತೆಗಳನ್ನು ನಿವಾರಿಸಲು ಪ್ರಯತ್ನ ಪಡಬೇಕು, ಆಗ ಇಂತಹ ಸಾವಿರಾರು ಸರಕಾರಿ ಶಾಲೆಗಳು ಉಳಿಯುತ್ತವೆ. ಬಡ ಮಧ್ಯಮ ವರ್ಗದ ಮಕ್ಕಳಿಗೆ ಜ್ಞಾನ ನೀಡುತ್ತವೆ.

Categories
ರಾಜ್ಯ ವಿಶೇಷ ಸುದ್ದಿ

ಸೆ. 5 ರಂದು ತೀರ್ಥಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆ

ಸೆ. 5 ರಂದು ತೀರ್ಥಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆ
– ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ
– ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಶುಭಾಶಯಗಳು

NAMMUR EXPRESS NEWS
ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 137 ನೇ ಜನ್ಮ ದಿನಾಚರಣೆ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ
ದಿನಾಂಕ : 05-09-2025, ಬೆಳಿಗ್ಗೆ 09-30ಕ್ಕೆ ಗಾಯತ್ರೀ ಮಂದಿರ, ಕುವೆಂಪು ರಸ್ತೆ, ತೀರ್ಥಹಳ್ಳಿಯಲ್ಲಿ ನೆರವೇರಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು ಭಾಗವಹಿಸಲಿದ್ದಾರೆ. ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತ ಕೋರಲಾಗಿದೆ.

Categories
ವಿಶೇಷ ಸುದ್ದಿ

ಬದುಕು ಕಲಿಸಿದ ಗುರುಗಳೇ.. ನಮಸ್ಕಾರ

ಬದುಕು ಕಲಿಸಿದ ಗುರುಗಳೇ.. ನಮಸ್ಕಾರ
– ಶಿಕ್ಷಕರ ದಿನದಂದು ಎಲ್ಲಾ ಗುರುಗಳಿಗೆ ನಮನಗಳು
– ವಿದ್ಯೆ, ಬುದ್ದಿ, ಕಲೆ, ಜೀವನ ಕಲಿಸಿದ್ದಕ್ಕೆ ಥ್ಯಾಂಕ್ಸ್

NAMMUR EXPRESS NEWS
ಶಿಷ್ಯರನ್ನು ಆಕರ್ಷಕ ಶಿಲೆಗಳನ್ನಾಗಿ ರೂಪಿಸುವ ಶಿಲ್ಪಿಗಳಿಗೆ ಧನ್ಯವಾದಗಳು. ಶಿಕ್ಷಕರ ದಿನದ ಈ ಸಂದರ್ಭದಲ್ಲಿ ಎಲ್ಲಾ ಗುರುಗಳಿಗೆ ನಮ್ಮ ನಮನಗಳು.
‘ಶ್ರೀ ಗುರುವೇ ಎನಗೆ ಕಾಯವು, ಶ್ರೀ ಗುರುವೇ ಎನಗೆ ಪ್ರಾಣವು’ ಎನ್ನುವುದು ಅಲ್ಲಮ ಪ್ರಭು ಅವರ ಸಾಲುಗಳು. ಶಿಷ್ಯನು ತನ್ನನ್ನು ಗುರುಗಳ ಚರಣಕ್ಕೆ ಸಮರ್ಪಿಸಿಕೊಂಡ ಬಗೆ ಇದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವುದು ಕೂಡ ಇದೇ ಬಗೆಯದಾಗಿದೆ. ಶಿಕ್ಷಕ ಅಥವಾ ಗುರುವನ್ನು ಭಕ್ತಿ, ಗೌರವ ಎಲ್ಲಕ್ಕಿಂತ ಮಿಗಿಲಾಗಿ ಪ್ರೀತಿಯಿಂದ ಕಾಣುವ ಪ್ರತಿಯೊಬ್ಬ ವ್ಯಕ್ತಿ ಮುಂದೆ ಅಸಮಾನ್ಯನಾಗಿ ಬೆಳೆಯುತ್ತಾನೆ, ಸಮಾಜಕ್ಕೆ ಒಂದು ಕೊಡುಗೆಯಾಗಿ ರೂಪುಗೊಳ್ಳುತ್ತಾನೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಅದೇ ರೀತಿ ವಿದ್ಯೆ ಕಲಿಸಿದ ಗುರುಗಳನ್ನು ಅಗೌರವದಿಂದ ಕಂಡು, ಅವರ ಮುಂದೆ ಅಹಂಕಾರ ತೋರಿದವರು ಸಮಾಜಕಂಟಕರಾಗಿರುವುದನ್ನೂ ನೋಡಬಹುದಾಗಿದೆ. ಇದರರ್ಥ ಗುರು ಕೇವಲ ಪಠ್ಯವನ್ನು ಕಲಿಸುವುದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದಕ್ಕಿಂತ ಮಿಗಿಲಾದ, ಮನುಷ್ಯನ ಅಂತಿಮ ದಿನಗಳವರೆಗೂ ಕಾಪಾಡಿಕೊಂಡು ಬರಬೇಕಾಗಿರುವಂತಹ, ಜೀವನದ ಮೌಲ್ಯಗಳನ್ನು ಕಲಿಸುವಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದಾಗಿದೆ. ಯಥಾ ರಾಜ ತಥಾ ಪ್ರಜಾ ಎನ್ನುವಂತೆ, ಉತ್ತಮ ಗುರು ದೊರೆತರೆ, ಶಿಷ್ಯರು ಕೂಡ ಉತ್ತಮ ರೀತಿಯಲ್ಲಿ ರೂಪುಗೊಳ್ಳುತ್ತಾರೆ. ಅಂದರೆ ಗುರುಗಳ ಮಾತನ್ನು ಒಳ್ಳೆಯ ರೀತಿಯಲ್ಲಿ ಸ್ವೀಕರಿಸುವ ಮನಸ್ಥಿತಿ ಕೂಡ ಕೆಲವೊಮ್ಮೆ ಶಿಷ್ಯರಿಗೆ ಇರಬೇಕಾಗುತ್ತದೆ.‌ ಅದೇ ರೀತಿ ಶಿಕ್ಷಕರು ಕೂಡ ತಮ್ಮ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ನಡೆದುಕೊಳ್ಳಬೇಕಾಗುತ್ತದೆ. ತಮ್ಮ ವೃತ್ತಿಯನ್ನು ಅಪವಿತ್ರಗೊಳಿಸುವಂತಹ ಶಿಕ್ಷಕರು ಸಮಾಜದಲ್ಲಿ ಕಂಡು ಬಂದದ್ದಿದೆ. ಜೊತೆಗೆ ಶಿಷ್ಯರ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆ ಎದುರಾದಾಗ, ತಮ್ಮ ವೇತನದಲ್ಲಿ ಓದಿಸಿದ ಶಿಕ್ಷಕರು, ತಪ್ಪು ದಾರಿ ಹಿಡಿಯಲು ಹೊರಟ ಶಿಷನಿಗೆ, ತನ್ನ ಒಳ್ಳೆಯ ಮಾತುಗಳ ಮೂಲಕ, ಮನವನ್ನು ಪರಿವರ್ತಿಸಿ ಉತ್ತಮ ದಾರಿಗೆ ಕರೆತಂದ ಎಷ್ಟೋ ಶಿಕ್ಷಕರಿದ್ದಾರೆ. ಶಿಕ್ಷಕರಲ್ಲಿ ಕಠಿಣತೆಯ ಜೊತೆಗೆ ತಂದೆಯ ಕಾಳಜಿ, ತಾಯಿಯ ಮಮತೆ ಕೂಡ ಅಡಕವಾಗಿರುತ್ತದೆ. ಹೀಗಾಗಿ ಎಷ್ಟೋ ಮಕ್ಕಳಿಗೆ, ಕೆಲವೊಮ್ಮೆ ಯುವಕರಿಗೆ ಶಿಕ್ಷಕರು ಸ್ಪೂರ್ತಿದಾಯಕ ವ್ಯಕ್ತಿಗಳಾಗಿರುತ್ತಾರೆ. ತಂದೆ ತಾಯಿಗಳ ಮಾತನ್ನು ಕೇಳದ ಎಷ್ಟೋ ಜನರು ಚಾಚೂತಪ್ಪದೆ ಗುರುಗಳ ಮಾತನ್ನು ಅನುಸರಿಸುತ್ತಾರೆ. ಇದಕ್ಕೆ ಕಾರಣ ಭಯವೆಂದು ಹೇಳುವುದು ಸಹಜ. ಆದರೆ ಅದಕ್ಕಿಂತ ಮಿಗಿಲಾಗಿ ಒಂದು ತೂಕ ಹೆಚ್ಚೇ ಎನ್ನುವಂತೆ ಪ್ರೀತಿ ಮನದಲ್ಲಿ ಅಡಗಿರುತ್ತದೆ.
ಶಿಕ್ಷಕ ವೃತ್ತಿಯಲ್ಲಿ ಮಾದರಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದು ಅರ್ಥಪೂರ್ಣವಾಗಬೇಕಿದೆ. ಅವರ ಹಾದಿಯಲ್ಲಿಯೇ ನಡೆದು, ಸಮಾಜದಲ್ಲಿನ ವಿವಿಧ ಕ್ಷೇತ್ರಗಳಿಗೆ ತಮ್ಮ ಶಿಷ್ಯರನ್ನು ಕೊಡುಗೆಯಾಗಿ ನೀಡುವ ಮೂಲಕ, ಇಂದಿಗೂ ತಮ್ಮ ವೃತ್ತಿ ಪವಿತ್ರವಾಗಿರುವಂತೆ ನೋಡಿಕೊಳ್ಳುತ್ತಿರುವ ಕೆಲವು ಮಕ್ಕಳ ಮತ್ತು ಯುವಕರ ಪಾಲಿನ ನಿಜದ ಆದರ್ಶ ವ್ಯಕ್ತಿಗಳಾಗಿ ಉಳಿದಿರುವ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು

ಸಮಸ್ತ ಶಿಕ್ಷಕರು, ವಿದ್ಯೆ ಕಲಿಸಿದ ಎಲ್ಲಾ ಗುರುಗಳಿಗೆ ನಮನಗಳು