ಅಡಿಕೆ ದರ ಎಷ್ಟಿದೆ…?
– ನ.5ರ ಅಡಿಕೆ ದರ… ಸರಕು 80 ಸಾವಿರದತ್ತ
NAMMUR EXPRESS NEWS
ಸರಕು – 60009 – 80000
ಬೆಟ್ಟೆ – 46009 – 52099
ರಾಶಿ – 44009 – 47609
ಗೊರಬಲು – 34009 – 37009
ಅಡಿಕೆ ದರ ಎಷ್ಟಿದೆ…?
– ನ.5ರ ಅಡಿಕೆ ದರ… ಸರಕು 80 ಸಾವಿರದತ್ತ
NAMMUR EXPRESS NEWS
ಸರಕು – 60009 – 80000
ಬೆಟ್ಟೆ – 46009 – 52099
ರಾಶಿ – 44009 – 47609
ಗೊರಬಲು – 34009 – 37009
ಮಂಜುನಾಥ ಗೌಡರ ಸನ್ಮಾನಕ್ಕೆ ತೀರ್ಥಹಳ್ಳಿ ರಂಗು!
-5000 ಜನರಿಗೆ ಅಡುಗೆ: 100 ಜನ ಅಡಿಗೆ ಭಟ್ಟರಿಂದ ಸಸ್ಯಹಾರಿ, ಮಾಂಸಾಹಾರಿ ಊಟ
– ಅಭಿಮಾನಿಗಳಿಂದ ಒಂದು ಸಾವಿರ ಕಿತ್ತಲೆ ಹಣ್ಣಿನ ಹಾರ!
-ಸಾವಿರಕ್ಕೂ ಹೆಚ್ಚು ಬೈಕ್ ಮೆರವಣಿಗೆ: ಹುಲಿವೇಷ ಕಲಾವಿದರ ಮೆರುಗು
NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ನಾಯಕ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ತೀರ್ಥಹಳ್ಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಡಾ.ಮಂಜುನಾಥ ಗೌಡರ ತವರೂರು ತೀರ್ಥಹಳ್ಳಿ ಸನ್ಮಾನ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ತೀರ್ಥಹಳ್ಳಿಯ ಹಳ್ಳಿ ಹಳ್ಳಿಗಳಲ್ಲಿಯೂ ಸಿದ್ಧತೆ ನಡೆದಿದ್ದು ಸೋಮವಾರ ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ಬೆಳಗ್ಗೆ 10 ಗಂಟೆಗೆ ಬೈಕ್ ರಾಲಿ ಶುರುವಾಗಲಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಬೈಕ್ಗಳು ರಾಲಿಗೆ ಬರಲು ಸಿದ್ಧವಾಗಿದೆ.
5000 ಜನಕ್ಕೆ ಊಟದ ವ್ಯವಸ್ಥೆಯನ್ನು ಟಿಎಪಿಸಿಎಂಎಸ್ ಅಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ನೂರಕ್ಕೂ ಹೆಚ್ಚು ನುರಿತ ಅಡಿಗೆ ತಯಾರಕರು ಅಡಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲರಿಗೂ ಆಸನ ಸಿದ್ಧ ಮಾಡಲಾಗಿದೆ. ಸನ್ಮಾನ ಕಾರ್ಯಕ್ರಮಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ.ವೇದಿಕೆಯಲ್ಲಿ ರಾಜಣ್ಣ ರೆಡ್ಡಿ ಅವರು ಅಭಿನಂದನಾ ಭಾಷಣವನ್ನು ಮಾಡಲಿದ್ದಾರೆ.
ತೀರ್ಥಹಳ್ಳಿಯ ಸಹಕಾರಿ ಕ್ಷೇತ್ರದ ಪ್ರಮುಖರು, ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಹಕಾರ ಸಂಘದ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಶಿವಮೊಗ್ಗ ಸೇರಿದಂತೆ ತೀರ್ಥಹಳ್ಳಿ, ಹೊಸನಗರ ಬಹುತೇಕ ಭಾಗಗಳ ಸಹಕಾರಿ ಆಗಮಿಸಲಿದ್ದಾರೆ. ಎಲ್ಲ ಸಹಕಾರಿಗಳು ಈ ಕಾರ್ಯಕ್ರಮದ ಸಾರಥ್ಯವನ್ನು ವಹಿಸಲಿದ್ದಾರೆ. ಇನ್ನು ಹಿರಿಯ ಸಹಕಾರಿಗಳಾದ ಬಿ. ಎಸ್ ವಿಶ್ವನಾಥ್ ಹಾಗೂ ನರಸಿಂಹ ನಾಯಕ್ ವೇದಿಕೆ ಸಿದ್ಧಮಾಡಲಾಗಿದೆ.
ಮಲೆನಾಡಲ್ಲಿ ಸಂಜೆ ಮಳೆ ಅಬ್ಬರ!
– ಇನ್ನು ಮೂರು ದಿನ ಮಳೆ ಅಲರ್ಟ್
– ಎಲ್ಲೆಲ್ಲಿ ಮಳೆ…? ಏನಿದು ಏಕಾಏಕಿ ಮಳೆ?
NAMMUR EXPRESS NEWS
ತೀರ್ಥಹಳ್ಳಿ /ಕೊಪ್ಪ: ಮಲೆನಾಡಿನ ಅನೇಕ ಕಡೆ ಭಾನುವಾರ ಸಂಜೆ ಭಾರೀ ಮಳೆ ಸುರಿದಿದೆ. ಮಳೆ ಆರ್ಭಟ, ಸಿಡಿಲು, ಗುಡುಗು ಕೆಲ ಕಾಲ ಗಾಬರಿ ಹುಟ್ಟಿಸಿತು. ತೀರ್ಥಹಳ್ಳಿ ಪಟ್ಟಣದಲ್ಲಿ ಭಾರೀ ಮಳೆ ಸುರಿದಿದ್ದು ತಾಲೂಕು ಸೇರಿ ಕೊಪ್ಪ, ಹೊಸನಗರ ತಾಲೂಕಲ್ಲಿ ಭಾರೀ ಮಳೆ ಆಗುತ್ತಿದೆ. ಒಂದು ಕಡೆ ಅಡಿಕೆ ಕೊಯ್ಲು ಶುರುವಾಗಿದೆ. ಈ ನಡುವೆ ಮಳೆ ಸುರಿಯುತ್ತಿದೆ
ಮಲೆನಾಡು, ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ನವೆಂಬರ್ 5 ರಿಂದ 7 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಇಂದಿನಿಂದ ನವೆಂಬರ್ 7 ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು,ಮಂಡ್ಯ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ತೀರ್ಥಹಳ್ಳಿಗೆ ಮಹಿಳಾ ಅಧಿಕಾರಿ ಮೃತದೇಹ!?
– ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
– ಪೋಲೀಸರ ತನಿಖೆ ಶುರು… ಏನಿದೆ ರಿಪೋರ್ಟ್?
– ಹಂತಕರ ಪತ್ತೆಗೆ ತೀರ್ಥಹಳ್ಳಿ ಮುಖಂಡರ ಪಟ್ಟು
NAMMUR EXPRESS NEWS
ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ವೊಬ್ಬರನ್ನು ಶನಿವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ(45) ಭೀಕರವಾಗಿ ಹತ್ಯೆಗೀಡಾದವರಾಗಿದ್ದು ಅವರ ಮೃತದೇಹ ತೀರ್ಥಹಳ್ಳಿಗೆ ತರಲಾಗುತ್ತಿದೆ. ಮಹಿಳಾ ಅಧಿಕಾರಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ರಾತ್ರಿ ಪ್ರತಿಮಾ ಅವರಿಗೆ ಅವರ ಸಹೋದರ ಕರೆ ಮಾಡಿದ್ದರು. ಆದ್ರೆ ಅವರು ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಮನೆಗೆ ಬಂದಾಗಿ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ ಎಂದು ತಿಳಿದು ಬಂದಿದೆ. ಪ್ರತಿಮಾ ಅವರ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ಕೆಲಸದ ನಿಮಿತ್ತ ಪ್ರತಿಮಾ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಇವರಿಗೆ 15 ವರ್ಷದ ಮಗ ಕೂಡ ಇದ್ದಾನೆ. ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.
ಪ್ರತಿಮಾ ಅವರನ್ನು ಶನಿವಾರ ಕಚೇರಿಯಿಂದ ಮನೆಗೆ ಕರೆದುಕೊಂಡು ಬಂದಿದ್ದ ಕಾರು ಚಾಲಕ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ಘಟನೆ ಬಗ್ಗೆ ಹಲವಾರು ಅನುಮಾನಗಳು ಮೂಡಿವೆ. ಸದ್ಯ ಕೊಲೆ ಮಾಡಿದವರು ಯಾರು ಹಾಗೂ ಕೊಲೆಗೆ ಕಾರಣಗಳೇನು ಎನ್ನುವ ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಕ್ಕಿಲ್ಲ.
ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ ಕೊಲೆ ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಈಗಷ್ಟೇ ಮಾಹಿತಿ ತಿಳಿಯಿತು. ಅವರು ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದು ಅವರ ಪತಿ ಪರವೂರಿನಲ್ಲಿದ್ದರಂತೆ. ಅವರ ಕೊಲೆ ಹೇಗಾಯ್ತು, ಯಾಕಾಯ್ತು ಎಂದು ತನಿಖೆ ಮಾಡಿಸಲಾಗುವುದು ಎಂದರು.
ಪ್ರತಿಮಾ ಅವರ ಮೃತ ದೇಹ ತೀರ್ಥಹಳ್ಳಿ ಪಟ್ಟಣದ ಸಮೀಪದ ತುಡ್ಕಿ ಬಳಿ ಇರುವ ಅವರ ಮನೆಗೆ ತರಲಾಗುತ್ತಿದೆ. ಸೋಮವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿ : ತೀರ್ಥಹಳ್ಳಿ ಮೂಲದ ಗಣಿ ಅಧಿಕಾರಿ ಬೆಂಗಳೂರಿನಲ್ಲಿ ಕೊಲೆಯಾಗಿದ್ದು ಹಂತಕರನ್ನ ಶೀಘ್ರವಾಗಿ ಬಂಧಿಸಬೇಕೆಂದು ಬಿಜೆಪಿ ಯುವ ನಾಯಕ ಕುಕ್ಕೆ ಪ್ರಶಾಂತ್ ಅಗ್ರಹಿಸಿದ್ದಾರೆ. ತೀರ್ಥಹಳ್ಳಿ ಮೂಲದ ಗೃಹಿಣಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದು ಈ ಹಿಂದೆ ಗಣಿ ಲಾಬಿ ಇದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಗುಂಡಾಗಿರಿ ಹತ್ಯೆಗಳು ಹೆಚ್ಚಾಗಿದೆ. ಇನ್ನು ಅಧಿಕಾರಿಗಳ ಮೇಲೆ ಪದೇಪದೇ ಹಲ್ಲೆ ನಡೆಯುತ್ತಿದ್ದು ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಹಂತಕರನ್ನು ಬಂಧಿಸಬೇಕು ಇದರ ಹಿಂದೆ ಇರುವ ಷಡ್ಯಂತರವನ್ನ ಭೇದಿಸಬೇಕು ಎಂದು ಅಗ್ರಹಿಸಿದ್ದಾರೆ. ತೀರ್ಥಹಳ್ಳಿ ಮೂಲದ ಪ್ರತಿಮಾ ಅವರು ಬೆಂಗಳೂರಿನಲ್ಲಿ ಗಣಿ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಗಣಿ ಅವ್ಯವಹಾರ ಮತ್ತು ಅಕ್ರಮದ ಸಂಬಂಧಪಟ್ಟ ಹಾಗೆ ಖಡಕ್ ಆಗಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂಬ ಬಗ್ಗೆ ತನಿಖೆ ಬೆನ್ನಲ್ಲೇ ಕುಕ್ಕೆ ಪ್ರಶಾಂತ್ ಅವರು ತಕ್ಷಣ ಹಂತಕರನ್ನು ಬಂಧಿಸಲು ಅಗ್ರಹಿಸಿದ್ದಾರೆ.
ದೀಪಾವಳಿಗೆ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ…?
– ಪೆಟ್ರೋಲ್ ಡೀಸೆಲ್ ಬೆಲೆ ರೂ.10 ಇಳಿಕೆ ಸಾಧ್ಯತೆ
– ಹೊಸ ವಾಹನ ಖರೀದಿಗೆ ಭಾರಿ ಆಫರ್
NAMMUR EXPRESS NEWS
ದಿಪಾವಳಿ ಹಬ್ಬ ಸಮೀಪಿಸುತ್ತಿದ್ದು, ಕೇಂದ್ರ ಸರ್ಕಾರ ದೇಶದ ಜನರಿಗೆ ದೊಡ್ಡ ಸಿಹಿಸುದ್ದಿ ನೀಡಲು ಮುಂದಾಗಿದೆ. ಪೆಟ್ರೋಲ್, ಡೀಸೆಲ್ ದರವನ್ನು ಇಳಿಸಿ, ವಾಹನ ಸವಾರರ ಜೇಬಿನ ಹೊರೆಯನ್ನು ಒಂದಷ್ಟು ಕಡಿಮೆಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತೈಲೋತ್ಪನ್ನ ಕಂಪನಿಗಳು ನಿರ್ಧರಿಸಲಿದ್ದು, ಪ್ರತಿದಿನವು ಬೆಲೆಯನ್ನು ಪರಿಷ್ಕರಿಸುವ ಅಧಿಕಾರವನ್ನು ಹೊಂದಿವೆ. ಆದರೆ, ಮೇ.22 2022 ರ ಬಳಿಕ ಅಂದರೆ ಬರೋಬ್ಬರಿ 1.4 ವರ್ಷಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುವುದು ಅಥವಾ ಇಳಿಸುವುದು ಮಾಡಿಲ್ಲ.
ಇದೀಗ, ದೀಪಾವಳಿಗೂ ಮುನ್ನವೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತದೆ ಎಂದು ಹೇಳಲಾಗಿದೆ. ಪ್ರತಿ ಲೀಟರ್ ಗೆ ಸುಮಾರು 10 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಸಂಬಂಧ ತೈಲ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಅಧಿಕಾರಿಗಳು ತೈಲೋತ್ಪನ್ನ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
2021 ರಲ್ಲಿಯೂ ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿಯನ್ನು ಕಡಿಮೆ ಮಾಡಿತ್ತು. ಈ ಬಾರಿ ಪಂಚರಾಜ್ಯ ಚುನಾವಣೆ (ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ) ಹಾಗೂ ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ಬಹುತೇಕ ಇಂಧನ ದರ ಇಳಿಸಬಹುದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಸದ್ಯ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.96.72, ಲೀಟರ್ ಡೀಸೆಲ್ ಬೆಲೆ ರೂ.89.62, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ ರೂ.106.31 ಮತ್ತು 1 ಲೀ. ಡೀಸೆಲ್ ಬೆಲೆ ರೂ.94.27, ಕೋಲ್ಕತ್ತಾದಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.106.03, ಲೀಟರ್ ಡೀಸೆಲ್ ಬೆಲೆ ರೂ. 92.76 38. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.101.94, ಲೀಟರ್ ಡೀಸೆಲ್ ಬೆಲೆ ರೂ.87.89, ಮೈಸೂರಿನಲ್ಲಿ ಲೀಟರ್ ಪೆಟ್ರೋಲ್ ದರ ರೂ.101.50 ಮತ್ತು 1 ಲೀ. ಡೀಸೆಲ್ ಬೆಲೆ ರೂ.87.49, ಮಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.101.50, ಲೀಟರ್ ಡೀಸೆಲ್ ಬೆಲೆ ರೂ.87.49 ಇದೆ.
ಆಗೊಮ್ಮೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಇಳಿಕೆ ಮಾಡಿದರೆ, ಮಧ್ಯಮ ವರ್ಗದ ದುಡಿಯುವ ವರ್ಗದ ಜನರಿಗೆ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ. ಅಲ್ಲದೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೊಸ ವಾಹನ ಖರೀದಿಗೆ ಜನ ಪ್ಲಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ವಾಹನ ಕಂಪನಿಗಳು ಹೊಸ ಹೊಸ ಆಫರ್ ಘೋಷಣೆ ಮಾಡಿವೆ.
ಅಂಗಡಿ, ಕಚೇರಿ ಫಲಕದಲ್ಲಿ ಕನ್ನಡ ಕಡ್ಡಾಯ..!
– ಎಲ್ಲಾ ಊರಿಗೂ ನಿಯಮ ಅನ್ವಯ
– ಆದೇಶ ನವೆಂಬರ್ ತಿಂಗಳಿಗೆ ಸೀಮಿತವಲ್ಲ
NAMMUR EXPRESS NEWS
ನಾಡಿನ ರಾಜ್ಯ ಭಾಷೆ ಕನ್ನಡದ ಉಳಿವಿಗಾಗಿ ಮತ್ತು ನಮ್ಮಸಂಸ್ಕೃತಿ ತಿಳಿದುಕೊಳ್ಳುವ ಸಲುವಾಗಿ ರಾಜ್ಯದ ಎಲ್ಲಾ ಅಂಗಡಿ, ಮುಂಗಟ್ಟು, ಹೋಟೆಲ್, ಕಂಪನಿಗಳು ಕನ್ನಡದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಇತರೆ ಭಾಷೆಯ ನಾಮಫಲಕಕ್ಕಿಂತ ಕನ್ನಡದ ನಾಮಫಲಕವನ್ನು ದೊಡ್ಡದಾಗಿ ಅಳವಡಿಸುವಂತೆ ಸರ್ಕಾರದ ಆದೇಶವಿದೆ.
ರಾಜ್ಯೋತ್ಸವದ ಸಂದರ್ಭದಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ. ಈಗಾಗಲೇ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಸಂಘಟನೆಗಳ ಎಚ್ಚರಿಕೆ:
ಕರವೇ, ಜಯ ಕರ್ನಾಟಕ ಸೇರಿ ಕನ್ನಡಪರ ಸಂಘಟನೆಗಳು ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿವೆ. ಉದ್ಯಮಿಗಳು ಸ್ವ ಪ್ರೇರಣೆಯಿಂದ ಕನ್ನಡ ಗೌರವಿಸಿ ಕನ್ನಡ ಫಲಕ ಹಾಕಬೇಕಿದೆ.
ಬ್ಯಾಂಕ್, ಸರ್ಕಾರಿ ಕಚೇರಿಯಲ್ಲಿ ಕಡ್ಡಾಯ
ಬ್ಯಾಂಕ್ ಹಾಗೂ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆ ಮಾಡಬೇಕಿದೆ. ಸಿಬ್ಬಂದಿ ಕೂಡ ಕನ್ನಡದಲ್ಲಿ ವ್ಯವಹಾರ ಮಾಡಬೇಕಿದೆ. ಇಲ್ಲವಾದಲ್ಲಿ ಕನ್ನಡ ಸಹಾಯವಾಣಿ ವಿಭಾಗ ತೆರೆಯಬೇಕಿದೆ.
ಕನ್ನಡ ಮಾತನಾಡಿ… ಕನ್ನಡ ಉಳಿಸಿ…!
ತೀರ್ಥಹಳ್ಳಿ ಮೂಲದ ಅಧಿಕಾರಿ ರಾಜಧಾನಿಯಲ್ಲಿ ಮರ್ಡರ್!
– ತೀರ್ಥಹಳ್ಳಿ ಮೂಲದ ಉಪ ನಿರ್ದೇಶಕಿ ಪ್ರತಿಮಾ ಹತ್ಯೆ
– ಅಪಾರ್ಟ್ಮೆಂಟ್ನಲ್ಲಿಯೇ ಭೀಕರ ಘಟನೆ: ಗಣಿ ಮಾಫಿಯಾಕ್ಕೆ ಅಧಿಕಾರಿ ಬಲಿ?
NAMMUR EXPRESS NEWS
ಬೆಂಗಳೂರು: ರಾಜಧಾನಿಯಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮೂಲದ ಮಹಿಳಾ ಗಣಿ ಇಲಾಖೆ ಅಧಿಕಾರಿಯೊಬ್ಬರನ್ನು ರಾಜಧಾನಿ ಬೆಂಗಳೂರಿನಲ್ಲಿ ಬರ್ಬರವಾಗಿ ಶನಿವಾರ ಕೊಲೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೈರೆಕ್ಟರ್ ಆಗಿ ತೀರ್ಥಹಳ್ಳಿ ಮೂಲದ ಪ್ರತಿಮಾ ಎಂಬವರು ಕೆಲಸ ಮಾಡುತ್ತಿದ್ದಾರೆ. ಅವರನ್ನ ಅವರ ದೊಡ್ಡಲಕ್ಕಸಂದ್ರದ ಗೋಕುಲ್ ಅಪಾರ್ಟ್ಮೆಂಟ್ ಮನೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಶನಿವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸ್ಥಳದಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕಿಯಾಗಿದ್ದ ಪ್ರತಿಮಾರವರು ತೀರ್ಥಹಳ್ಳಿಯ ಕೊಂಡ್ಲೂರು ಕಲಕಟ್ಟೆಯವರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ದೊಡ್ಡಕಲ್ಲಸಂದ್ರದಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದರು. ಗೋಕುಲ್ ಅಪಾರ್ಟ್ಮೆಂಟ್ನಲ್ಲಿ ಏಕಾಂಗಿಯಾಗಿ ವಾಸವಿದ್ದ ಅವರ ಮನೆಯಲ್ಲಿಯೇ ಅವರನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಇತ್ತೀಚಿಗೆ ಹೊಸ ಮನೆ ಮಾಡಿದ್ದರು.
ಪತಿ ರಾಮಣ್ಣ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಾಗಿದ್ದರು. ಇತ್ತೀಚಿಗೆ ಹೊಸ ಮನೆ ಮಾಡಿದ್ದರು. ರಾತ್ರಿ 8 ಗಂಟೆಗೆ ಕಚೇರಿಯಿಂದ ಕಚೇರಿ ವಾಹನದಲ್ಲೇ ಮನೆಗೆ ಬಂದಿದ್ದರು. ಮನೆಯಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಪ್ಲಾನ್ ಮರ್ಡರ್. ಗಣಿ ಇಲಾಖೆಯ ಮಾಫಿಯಾ ಘಟನೆಗೆ ಕಾರಣ ಎನ್ನಲಾಗಿದೆ.
ಕಾರ್ಕಳದಲ್ಲೊಂದು ಪುಸ್ತಕ ಮನೆ..!
– ಒಂದೇ ಕಡೆ ಸಿಗಲಿದೆ ಸಾಹಿತ್ಯ ಕೃತಿ ಭಂಡಾರ
– ಚಿನ್ನರ ಅಚ್ಚುಮೆಚ್ಚಿನ ತಾಣ.. ಏನೇನಿದೆ..?
NAMMUR EXPRESS NEWS
ಕಾರ್ಕಳ: ಸಾಹಿತ್ಯದ ಕಡೆಯ ಒಲವು ಹೆಚ್ಚಳ ಹಾಗೂ ಒಂದೇ ಕಡೆ ಲಭ್ಯವಾಗಲಿರುವ ಪುಸ್ತಕ ಸಂಗ್ರಹಗಳಿಗೆ ಅವಕಾಶ ಕಲ್ಪಿಸುವ ವಿನೂತನ ಯೋಜನೆಯನ್ನು ಕಾರ್ಕಳ ಪುಸ್ತಕ ಮನೆ ಆರಂಭಿಸಿದೆ. ಕಾರ್ಕಳದ ಕುಕ್ಕುಂದೂರು ಜೋಡು ರಸ್ತೆಯ ಆದಿಧನ್ ಎನ್ ಕ್ಲೇವ್ ನಲ್ಲಿ ಪುಸ್ತಕ ಮತ್ತು ಸ್ಟೇಷನರಿ ವಸ್ತುಗಳನ್ನೊಳಗೊಂಡ ಪುಸ್ತಕ ಮನೆ ಆರಂಭಗೊಂಡಿದೆ. ಇದೀಗ ಕಾರ್ಕಳ ಸೇರಿ ರಾಜ್ಯದ ಹಲವೆಡೆಗೂ ಪುಸ್ತಕ ನೀಡುತ್ತಿದೆ. ಸೇವಾ ಮನೋಭಾವನೆ ಜೊತೆಗೆ ಎಲ್ಲರೂ ಪುಸ್ತಕ ಪ್ರೀತಿ ಹೊಂದುವುದೇ ಈ ಪರಿಕಲ್ಪನೆಯ ಹಿಂದಿರುವ ಉದ್ದೇಶ. ಎಲ್ಲಾ ವಯೋಮಾನದ ವ್ಯಕ್ತಿಗಳಿಗೆ ಪುಸ್ತಕಪ್ರಿಯರಿಗೂ ಅಲ್ಲಿಯೇ ಓದುವ ಅವಕಾಶವನ್ನು ಗ್ರಂಥಾಲಯದ ರೂಪದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ದೊಡ್ಡ ಮಟ್ಟದ ಪುಸ್ತಕ ಸಂಗ್ರಹವೇ ಅಲ್ಲಿದೆ. ದೂರದ ಊರುಗಳಿಂದ ಪುಸ್ತಕ ಅಥವಾ ಸಾಮಗ್ರಿಗಳನ್ನು ತರಲು ಅನುಕೂಲವೆನಿಸಿದ ಸಂದರ್ಭ ಕಾರ್ಕಳದಲ್ಲಿಯೇ ಹೊಸ ಪರಿಕಲ್ಪನೆಯ ಸೃಷ್ಟಿ ಈ ಪುಸ್ತಕ ಮನೆ.
ಕಾರ್ಕಳ ಪುಸ್ತಕ ಮನೆ ಕ್ರಿಯೇಟಿವ್ ಸಂಸ್ಥೆಯ ಸಂಸ್ಥಾಪಕ ಕನಸಿನ ಕೂಸು. ಆಸು ಪಾಸಿನ ಜನತೆ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಯಾವುದೇ ಲೇಖಕರ ಕೃತಿಗಳ ಓದು ಸುಲಭ ಸಾಧ್ಯವಾಗಬೇಕು ಮತ್ತು ಮುಂದಿನ ಪೀಳಿಗೆಯ ಜನರನ್ನು ಸಾಹಿತ್ಯಸಕ್ತರನ್ನಾಗಿಸಿ, ಕೃತಿ ಪರಿಚಯ ಮಾಡಿಸಬೇಕೆಂಬ ಉದ್ದೇಶ ಹೊಂದಲಾಗಿದೆ. ಇಲ್ಲಿ ಕೇವಲ ಪುಸ್ತಕಗಳಷ್ಟೇ ಅಲ್ಲದೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಕ್ರಿಯಾಶೀಲ ಆಟದ ವಸ್ತುಗಳು, ಸ್ಟೇಷನರಿ, ಉಡುಗೊರೆಯ ಬೃಹತ್ ಸಂಗ್ರಹವೇ ಇದೆ. ಗ್ರಂಥಾಲಯಗಳಿಗೆ ಅಗತ್ಯವಿರುವ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಆನ್ಲೈನ್ ಪುಸ್ತಕ ಖರೀದಿಗೂ ಅವಕಾಶ ಮಾಡಿಕೊಡಲಾಗಿದೆ.
ಪುಸ್ತಕ ಪೋಷಕ ಯೋಜನೆ : ಈ ಯೋಜನೆಯಲ್ಲಿ ತಾವು ಓದಿದ ಯಾವುದೇ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಕಾರ್ಕಳ ತಾಲ್ಲೂಕಿನ ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ಕೊಡ ಮಾಡುವ ಹಾಗೂ ಅವರಿಗೆ ಬೇಕಾದ ಪುಸ್ತಕಗಳನ್ನು ಒದಗಿಸುವ ಸಮಾಜ ಮುಖಿ ಚಿಂತನೆಯ ಯೋಜನೆಯನ್ನು ಸಂಸ್ಥೆ ರೂಪಿಸಿದೆ. ಯಾವ ವಿದ್ಯಾರ್ಥಿಯು ಪಠ್ಯ ಪುಸ್ತಕದ ವೆಚ್ಚವನ್ನು ಬರಿಸಲಾಗದೆ ವಿದ್ಯಾಭ್ಯಾಸ ಮುಂದುವರಿಸಲಾಗದಿದ್ದಲ್ಲಿ ಈ ಯೋಜನೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಪರಿಣಮಿಸಲಿದೆ. ಇದಕ್ಕಾಗಿ ತಾವು ಓದಿ, ತಮಗೆ ಬೇಡವೆನಿಸಿದ ಪುಸ್ತಕಗಳನ್ನು ದಾನ ರೂಪದಲ್ಲಿ ಪುಸ್ತಕ ಪೋಷಕ ಯೋಜನೆಗೆ ನೀಡಬಹುದಾಗಿದೆ.
ಪುಸ್ತಕ ಮನೆಯಲ್ಲಿ ಯಾವುದೇ ವಿಧದ ವಸ್ತು ಅಥವಾ ಪುಸ್ತಕಗಳನ್ನು ಖರೀದಿಸಿದಲ್ಲಿ ಶೇ.10ರಿಂದ 15 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ವಾರ್ಷಿಕ ಸದಸ್ಯತ್ವ ಕಾರ್ಡಿನ ರೂಪದಲ್ಲಿ ಪ್ರತಿ ಖರೀದಿಗೂ ಆಕರ್ಷಕ ದರ ಕಡಿತ ಸಿಗಲಿದೆ.
ಚಿಣ್ಣರಿಗೆ ಇಲ್ಲಿ ಎಲ್ಲಾ ತರಹದ ಪಠ್ಯ ಪುಸ್ತಕಗಳೊಂದಿಗೆ ಆಟೋಟದ ವಸ್ತುಗಳು, ಕಥೆ ಪುಸ್ತಕಗಳು, ಡ್ರಾಯಿಂಗ್ ಸಾಧನಗಳು, ಸ್ಟೇಷನರಿ ವಸ್ತುಗಳು ಒಂದೇ ಮಳಿಗೆಯಲ್ಲಿ ದೊರಕಲಿದೆ. ವಿಶೇಷವಾಗಿ ಮಕ್ಕಳು ಇಷ್ಟಪಡುವ ಬೇಬಿ ಡಾಲ್ ನ ಬೃಹತ್ ಸಂಗ್ರಹವಿದೆ. ಮಕ್ಕಳ ಕ್ರಿಯಾಶೀಲ ಕಲಿಕೆಗೆ ಪೂರಕವಾಗಿ ಶೈಕ್ಷಣಿಕ ಕಿಟ್ ಇಲ್ಲಿ ವಯೋಮಾನಕ್ಕೆ ಅನುಗುಣವಾಗಿ ರೂಢಿಸಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲ ಮನೋವಿಕಾಸದ ಪೂರಕ ವ್ಯವಸ್ಥೆಗಳು ಲಭ್ಯವಿದೆ.
ಸಂಪರ್ಕಿಸಿ
9606474289
Visit : Pustakamane.com

ಬೈಕ್ ಮೆರವಣಿಗೆ ಮೂಲಕ ಆರ್. ಎಂ ಸ್ವಾಗತ!
– ನ.6ರ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಯಲ್ಲಿ ಸಿದ್ಧತೆ
– ಸರ್ವರನ್ನು ಸ್ವಾಗತಿಸಿದ ವಿಜಯದೇವ್, ರಾಘವೇಂದ್ರ ಶೆಟ್ಟಿ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಇದರ 10 ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರಿ ರತ್ನ ಡಾ.ಆರ್. ಎಂ. ಮಂಜುನಾಥ ಗೌಡರ ಅಭಿನಂದನಾ ಸಮಾರಂಭಕ್ಕೆ ನ.6ರಂದು ಬೃಹತ್ ಬೈಕ್ ರಾಲಿ ಹಮ್ಮಿಕೊಳ್ಳಲಾಗಿದೆ.
ಬೈಕ್ ರಾಲಿಗೆ ಸೇರುವ ಸ್ಥಳ:
ಸಾರ್ವಜನಿಕ ಕ್ರೀಡಾಂಗಣ, ತೀರ್ಥಹಳ್ಳಿ
ಸಮಯ:
ಬೆಳಗ್ಗೆ 09-30 ಗಂಟೆಗೆ
ಮಾರ್ಗ:
ಸಾರ್ವಜನಿಕ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗೋಪಾಲಗೌಡ ರಂಗಮಂದಿಕ್ಕೆ ತಲುಪುವುದು.
ತೀರ್ಥಹಳ್ಳಿ ಪಟ್ಟಣದಲ್ಲಿ ಎಲ್ಲೆಡೆ ಬ್ಯಾನರ್
ತೀರ್ಥಹಳ್ಳಿ ಪಟ್ಟಣದ ಎಲ್ಲೆಡೆ ಬ್ಯಾನರ್ ಹಾಕಲಾಗಿದೆ.
ಹಳ್ಳಿಗಳಲ್ಲೂ ಬ್ಯಾನರ್ ಹಾಕಿ ಸರ್ವರನ್ನು ಸ್ವಾಗತಿಸಲಾಗಿದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಜ್ಜು!
– ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ
– ಹೊಸ ವಿದ್ಯಾರ್ಥಿಗಳ ನೋಂದಣಿಗೆ ಆದೇಶ
NAMMUR EXPRESS NEWS
ಬೆಂಗಳೂರು: ಮಾರ್ಚ್-2024ರಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹೊಸ ವಿದ್ಯಾರ್ಥಿಗಳ ನೋಂದಣಿ ಮಾಹಿತಿಗಳನ್ನು ಮಂಡಲಿಯ ಜಾಲತಾಣದ ಪಿಯು ಎಕ್ಸಾಮ್ ಪೋರ್ಟಲ್ ಲಾಗಿನ್ ನಲ್ಲಿ ಅಪ್ಲೋಡ್ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಸರ್ಕಾರದ ಆದೇಶ ಸಂಖ್ಯೆ: ಇಪಿ.203.ಎಸ್.ಎಲ್.ಬಿ. 2023 ದಿನಾಂಕ:21-09-2023 ರನ್ವಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ವತಿಯಿಂದ 2023-24ನೇ ಸಾಲಿನಿಂದ ಜಾರಿಗೆ ಬರುವಂತೆ ದ್ವಿತೀಯ ಪರೀಕ್ಷೆಗಳನ್ನು ವಾರ್ಷಿಕ ಪರೀಕ್ಷೆ-1, ವಾರ್ಷಿಕ ಪರೀಕ್ಷೆ-2 ಮತ್ತು ವಾರ್ಷಿಕ ಪರೀಕ್ಷೆ-3ಎಂಬ ಹೆಸರಿನಲ್ಲಿ ನಡೆಸಲಾಗುವುದು.
ಮಾರ್ಚ್-2024 ರಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ-1 ಕ್ಕೆ ಅರ್ಹ ಹೊಸ ವಿದ್ಯಾರ್ಥಿಗಳ ನೋಂದಣಿ ಮಾಹಿತಿಗಳನ್ನು ಮಂಡಲಿಯ ಜಾಲತಾಣದ (https://kseab.karnataka.gov.in) ಪಿಯು ಎಕ್ಸಾಮ್ ಪೋರ್ಟಲ್ ಲಾಗಿನ್‌ನಲ್ಲಿ ಪಡೆಯಲು ಯೋಜಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜಿನ ಮಾರ್ಚ್-2024 ರ ದ್ವಿತೀಯ ಪಿಯುಸಿ ಪರೀಕ್ಷೆ-1 ನ್ನು ತೆಗೆದುಕೊಳ್ಳುವ ಹೊಸ ವಿದ್ಯಾರ್ಥಿಗಳ ವಿವರಗಳನ್ನು ಕಡ್ಡಾಯವಾಗಿ ಆನೈನ್ ಮೂಲಕ ಅಪ್ಲೋಡ್ ಮಾಡುವಂತೆ ಈ ಮೂಲಕ ಆದೇಶಿಸಿದೆ.
1) ಈ ನೋಂದಣಿ ಕಾರ್ಯಕ್ಕೆ ದಿನಾಂಕ: 03-11-2023 ರಿಂದ 21-11-2023 ರವರೆಗೆ ಮಾಹಿತಿಯನ್ನು ಅಪ್ಲೋಡ್ ಮಾಡಲು ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ.
2) ಮಾಹಿತಿಗಳನ್ನು ಮಂಡಲಿಯ ಜಾಲತಾಣದ https://kseab.karnataka.gov.in de ಪಿಯು ಎಕ್ಸಾಮ್ ಪೋರ್ಟಲ್ ಕಾಲೇಜು ಲಾಗಿನ್ ಮುಖಾಂತರ ಅಪ್ಲೋಡ್ ಮಾಡುವುದು.
3) ಪ್ರಾಂಶುಪಾಲರು ಮಂಡಲಿಯ ಕಾಲೇಜು ಲಾಗಿನ್ ನಲ್ಲಿ ಈಗಾಗಲೇ ಸೃಜಿಸಲಾಗಿರುವ ಯುಸೆರ್ ನೇಮ್ ಅಂಡ್ ಪಾಸ್ವರ್ಡ್ ಬಳಸಿ ಆನ್ಲೈನ್ ನೋಂದಣಿ ಕಾರ್ಯ ಮಾಡಬಹುದಾಗಿದೆ.
4) ನೋಂದಣಿ ಕಾರ್ಯವನ್ನು ವಿದ್ಯಾರ್ಥಿಗಳ ಸಟ್ಸ್ ನಂಬರ್ ಬಳಸಿ ಮಾಡುವುದು.
5) ಆನ್ಲೈನ್ ಡೇಟಾ ಎಂಟ್ರಿ ಪ್ರಾರಂಭಿಸುವ ಮೊದಲು ಕಾಲೇಜಿನ ಪ್ರತಿ ವಿದ್ಯಾರ್ಥಿಯ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಭಾವಚಿತ್ರ (20-80kb) ಅವರ ಸಟ್ಸ್ ನೋಂದಣಿ ಸಂಖ್ಯೆಯ ಅನುಕ್ರಮದಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು.
ಉದಾ: ಅಭ್ಯರ್ಥಿಯ ಸಟ್ಸ್ ಸಂಖ್ಯೆಯು 12345678 ಆಗಿದ್ದಲ್ಲಿ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ P12345678 ಎಂದು ಸಾಫ್ಟ್ ಕಾಪಿ ಗಳನ್ನು ಸೇವ್ ಮಾಡಿಟ್ಟುಕೊಳ್ಳುವುದು.