Categories
ಅಪರಾಧ ಕರಾವಳಿ

ಬೆಚ್ಚಿ ಬಿದ್ದ ಕರಾವಳಿ: ಯುವಕ ಮರ್ಡರ್!

ಬೆಚ್ಚಿ ಬಿದ್ದ ಕರಾವಳಿ: ಯುವಕ ಮರ್ಡರ್!
– ಪುತ್ತೂರು ಟೈಗರ್ಸ್ ಕಲ್ಲೇಗ ತಂಡದ ಮುಖ್ಯಸ್ಥ ಅಕ್ಷಯ್ ಕೊಲೆ
– ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣು

NAMMUR EXPRESS NEWS
ಪುತ್ತೂರು: ದಿನೇ ದಿನೇ ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕರಾವಳಿಯಲ್ಲಿ ಮತ್ತೊಂದು ಮರ್ಡರ್ ಆಗಿದೆ. ಪುತ್ತೂರು ಟೈಗರ್ಸ್ ಕಲ್ಲೇಗ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ತಡರಾತ್ರಿ ಪುತ್ತೂರು ತಾಲೂಕಿನ ನೆಹರೂ ನಗರ ಜಂಕ್ಷನ್ ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಕೃತ್ಯದ ಬಳಿಕ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಪುತ್ತೂರಿನ ಬನ್ನೂರು ನಿವಾಸಿ ಚೇತನ್ ಹಾಗೂ ದಾರಂದಕುಕ್ಕು ನಿವಾಸಿ ಮನೀಶ್ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಸಹಿತ ಪೊಲೀಸರು ಭೇಟಿ ನೀಡಿದ್ದು, ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

ಸಣ್ಣ ಕಾರಣಕ್ಕೆ ಕೊಲೆ!

ಹತ್ಯೆ ನಡೆಸಿದ ತಂಡ ಹಾಗೂ ಅಕ್ಷಯ್‌ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಅಕ್ಷಯ್ ನನ್ನು ನೆಹರೂ ನಗರಕ್ಕೆ ಬರಲು ಸವಾಲು ಹಾಕಲಾಗಿದೆ. ರಾತ್ರಿ 11:30ರ ವೇಳೆಗೆ ಅಕ್ಷಯ್ ನ ಬರ್ಬರ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ವಿವರಗಳು ಪೊಲೀಸರ ತನಿಖೆಯ ಬಳಿಕ ತಿಳಿದುಬರಬೇಕಿದೆ.

Categories
ರಾಜ್ಯ

ಬಂತು ಬಂತು ಬೆಳಕಿನ ಹಬ್ಬ ದೀಪಾವಳಿ..!

ಬಂತು ಬಂತು ಬೆಳಕಿನ ಹಬ್ಬ ದೀಪಾವಳಿ..!
– ಮನೆ ಮನೆಯಲ್ಲೂ ದೀಪಾವಳಿ ಸಡಗರಕ್ಕೆ ಸಿದ್ಧತೆ
– ಪಟಾಕಿ ಹೊಡೆಯಲು ಈ ವರ್ಷ ಹೊಸ ನಿಯಮ
– ಯಾವತ್ತು ಹಬ್ಬ..?, ಈ ವರ್ಷದ ವಿಶೇಷ ಏನು..?

NAMMUR EXPRESS NEWS
ಭಾರತದ ಮಹತ್ವದ ಹಾಗೂ ಮನೆ ಮಂದಿ ಎಲ್ಲಾ ಸೇರಿ ಆಚರಣೆ ಮಾಡುವ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಈಗಲೇ ಮನೆ ಮನೆಯಲ್ಲಿ ಸಂಭ್ರಮ ಶುರುವಾಗಿದೆ ಕೆಡುಕಿನ ಮೇಲೆ ಒಳಿತಿನ ವಿಜಯ, ಕತ್ತಲೆಯ ಮೇಲೆ ಬೆಳಕಿನ ವಿಜಯ ಎಂದೆಲ್ಲಾ ಹೇಳುವ ಈ ಹಬ್ಬದ ಆಚರಣೆಯ ಹಿಂದೆ, ಬದುಕಿನ ಕತ್ತಲನ್ನು ಕಳೆದು ಜ್ಯೋತಿ ಹರಡಲಿ ಎಂಬ ಆಶಯ ಇದ್ದೇ ಇದೆ. ಬೆಳಕನು ಚೆಲ್ಲುತ್ತಾ ಬರುವ ಈ ಹಬ್ಬದ ದಿನಗಳು ಈ ಬಾರಿ ಎಂದಿನಿಂದ ಪ್ರಾರಂಭ, ಆಯಾ ದಿನಗಳ ವಿಶೇಷತೆ ಏನು ಎಂಬ ಇತ್ಯಾದಿ ಮಾಹಿತಿಗಳು ಇಲ್ಲಿವೆ.

ನವೆಂಬರ್‌ 12ರಿಂದ ದೀಪಾವಳಿ ಹಬ್ಬ ಪ್ರಾರಂಭವಾಗುತ್ತದೆ. ಮೂರು ದಿನಗಳ ಹಬ್ಬದ ಆಚರಣೆಯ ಪದ್ಧತಿಯ ಪ್ರಕಾರ ಹೇಳುವುದಾದರೆ, ನವೆಂಬರ್ 12ನೇ ದಿನ, ಭಾನುವಾರ ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ. ಪೂಜೆಯ ಮುಹೂರ್ತವು ಸಂಜೆ 5.39ರಿಂದ 7.35ರವರೆಗಿದೆ. ಪ್ರದೋಷ ಕಾಲವು ಸಂಜೆ 5.29ರಿಂದ 8.08ರವರೆಗೆ ಇರುತ್ತದೆ. 13ರಂದು ಅಮಾವಾಸ್ಯೆ. 14ರಂದು ಬಲಿಪಾಡ್ಯಮಿ.

ಕೆಲವೆಡೆ ನ.10ರಿಂದಲೇ ಸಂಭ್ರಮ

ಐದು ದಿನಗಳ ದೀಪಾವಳಿ ಆಚರಿಸುವ ಪ್ರಾಂತ್ಯಗಳಲ್ಲಿ, ನವೆಂಬರ್‌ 10 ರಿಂದಲೇ ದೀಪಗಳ ಸಂಭ್ರಮ ಆರಂಭವಾಗುತ್ತದೆ. ಮೊದಲನೇ ದಿನ ಧನ್‌ ತೆರಾಸ್‌ ಆಚರಿಸುವವರು, ಹೊಸದಾಗಿ ವಸ್ತುಗಳು, ಆಭರಣ, ಆಸ್ತಿಯನ್ನು ಖರೀದಿಸುವ ಸಂಪ್ರದಾಯವಿದೆ. ಅಂದು ಕೊಂಡಿದ್ದು 13 ಪಟ್ಟು ಹೆಚ್ಚುತ್ತದೆ ಎನ್ನುವುದು ಪ್ರತೀತಿ. ಸಂಜೆ 5.27ರಿಂದ 7.27ರವರೆಗಿನ ಸಮಯ ಈ ದಿನದ ಪೂಜೆಗೆ ಪ್ರಶಸ್ತ. ಮಾರನೇ ದಿನ, ಅಂದರೆ 11ನೇ ತಾರೀಕು ಛೋಟಿ ದಿವಾಲಿ, 12ರಂದು ಸಂಜೆ ಅಮಾವಾಸ್ಯೆಯ ಪ್ರದೋಷಕ್ಕೆ ಲಕ್ಷ್ಮೀ ಪೂಜೆ, 14ನೇ ತಾರೀಕು ಗೋವರ್ಧನ ಪೂಜೆಯ ಮುಹೂರ್ತ ಸಂಜೆ 5.54ರಿಂದ 8.09ರವರೆಗಿದೆ. ಐದನೇ ದಿನ, 15ಕ್ಕೆ ಅಣ್ಣ-ತಂಗಿಯರ ಹಬ್ಬವಾಗಿ ಭಾಯ್‌ ದೂಜ್‌ ಆಚರಿಸುತ್ತಾರೆ. ಅಂದು ಮಧ್ಯಾಹ್ನ 12.38ರಿಂದ 2.53ರವರೆಗಿನ ಸಮಯ ಪೂಜೆಗೆ ಸೂಕ್ತ ಎನ್ನಲಾಗಿದೆ.

ಸಿಹಿ ಹಂಚಿಕೆ..ಪಟಾಕಿ ಸಂಭ್ರಮ

ಬಂಧು ಮಿತ್ರರಿಗೆ ಸಿಹಿ ಹಂಚುವುದು, ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತದೆ. ಕತ್ತಲೆಯ ರಾತ್ರಿಗಳನ್ನು ಬೆಳಗಿಸುವಂಥ ಹಣತೆಗಳು, ಆಕಾಶಬುಟ್ಟಿಗಳು ಲೋಕವನ್ನೆಲ್ಲ ಬೆಳಗುವಂತೆ ಭಾಸವಾಗುತ್ತದೆ. ಇವೆಲ್ಲವುಗಳ ನಡುವೆ ಪಟಾಕಿಗಳು ಶಬ್ದ ಮಾಡುತ್ತಿರುತ್ತವೆ. ಹಲವು ತಿಂಗಳುಗಳಿಂದ ನಡೆದು ಬರುತ್ತಿದ್ದ ಹಬ್ಬಗಳ ಸಾಲಿಗೊಂದು ಬೆಳಕಿನ ಸಮಾರೋಪದಂತೆ ದೀಪಾವಳಿ ಕಂಗೊಳಿಸುತ್ತದೆ.

ಪಟಾಕಿಗೂ ನಿಯಮ!

ಈ ವರ್ಷ ಪರಿಸರ ಸಂರಕ್ಷಣೆ ಹಾಗೂ ಪಟಾಕಿ ದುರಂತ ಹೆಚ್ಚುತ್ತಿರುವ ಹಿನ್ನೆಲೆ ಪಟಾಕಿ ಹೊಡೆಯಲು ಸರ್ಕಾರ ನಿಯಮ ತಂದಿದೆ. ರಾತ್ರಿ 8ರಿಂದ 10ರವರೆಗೆ ಕಾಲ ನಿಗದಿ ಮಾಡಿದೆ.

Categories
ಕೊಪ್ಪ

ಕೊಪ್ಪ: ನೀರಿನ ಬಕೆಟ್‌ಗೆ ಬಿದ್ದ ಮಗು ಸಾವು..!

ಕೊಪ್ಪ: ನೀರಿನ ಬಕೆಟ್‌ಗೆ ಬಿದ್ದ ಮಗು ಸಾವು..!
– ಆಟ ಆಡುವಾಗ ನೀರಿನ ಬಕೆಟಿಗೆ ಬಿದ್ದು ದುರ್ಮರಣ
– ತೀರ್ಥಹಳ್ಳಿಯಲ್ಲಿ ಜಿಂಕೆ ಭೇಟೆ: ಮುಚ್ಚಿಹಾಕ್ತಾರಾ ಕೇಸ್?
– ಕುಡಿದ ಮತ್ತಿನಲ್ಲಿ ಅಪ್ಪನನ್ನೇ ಕಲ್ಲು ಹೊತ್ತು ಹಾಕಿ ಕೊಂದ ಪಾಪಿ ಮಗ!

NAMMUR EXPRESS NEWS
ಕೊಪ್ಪ ತಾಲೂಕಿನ ಕುದುರೆಗುಂಡಿಯ ಗೌರಿಹಳ್ಳ ಸಮೀಪದ ಮನೆಯಲ್ಲಿ ಮಗುವೊಂದು ನೀರು ತುಂಬಿದ ಬಕೆಟ್‌ಗೆ ಬಿದ್ದು ಮರಣ ಹೊಂದಿದ ಘಟನೆ ಭಾನುವಾರ ನಡೆದಿದೆ. ರಿಜಾ (4) ಮೃತಪಟ್ಟ ಮಗು. ರಿಯಾಜ್, ಸಾಹಿನಾ ದಂಪತಿ ಪತ್ನಿ ರಿಜಾ ಆಟವಾಡುವಾಗ ನೀರು ತುಂಬಿದ ಬಕೆಟ್‌ಗೆ ಬಿದ್ದು ಮೃತಪಟ್ಟಿದ್ದಾಳೆ. ದೂರು ದಾಖಲಾಗಿಲ್ಲ ಎನ್ನಲಾಗಿದೆ.

ತೀರ್ಥಹಳ್ಳಿಯಲ್ಲಿ ಜಿಂಕೆ ಬೇಟೆ

ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಕೈ ಬಳಿ ಅರಣ್ಯ ಅಧಿಕಾರಿಗಳು ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಜಿಂಕೆ ಕೊಂದ ವ್ಯಕ್ತಿಗಳನ್ನ ರಾಜಕೀಯ ಪ್ರಭಾವದ ಒತ್ತಡಕ್ಕೆ ಮಣಿದು ಅರಣ್ಯ ಅಧಿಕಾರಿಗಳು ಪರಾರಿಯಾಗುವುದಕ್ಕೆ ಬಿಟ್ಟು ಕಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕುಡಿದ ಮತ್ತಿನಲ್ಲಿ ಅಪ್ಪನನ್ನೇ ಕಲ್ಲು ಹೊತ್ತು ಹಾಕಿ ಕೊಂದ ಪಾಪಿ ಮಗ!

ಕುಡಿತದ ಮತ್ತಿನಲ್ಲಿ ಮಗನೊಬ್ಬ ತಂದೆಯನ್ನೇ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯನ್ನು ಇಟ್ಟುಕೊಂಡು ಜಗಳ ಮಾಡಿಕೊಂಡು ಆತ ಈ ಕೃತ್ಯವನ್ನು ಎಸಗಿದ್ದಾನೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ಘಟನೆ ನಡೆದಿದೆ. ಬತ್ತಯ್ಯನ ಹಟ್ಟಿ ಗ್ರಾಮದ ನಿವಾಸಿಯಾಗಿರುವ ಸೂರಯ್ಯ (55) ಎಂಬವರೇ ಕೊಲೆಯಾದವರು. ಅವರನ್ನು ಕೊಂದಿದ್ದು ಅವರ ಸ್ವಂತ ಮಗ ಮೋಹನ. ಕೌಟುಂಬಿಕ ಕಲಹ, ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು.

ಇದರ ಮುಂದುವರಿದ ಭಾಗ ಸೋಮವಾರ ರಾತ್ರಿಯೂ ನಡೆದಿತ್ತು. ಚೆನ್ನಾಗಿ ಕುಡಿದು ಬಂದಿದ್ದ ಮೋಹನ ಅಪ್ಪನ ಜತೆ ಖ್ಯಾತೆ ತೆಗೆದಿದ್ದ. ಅದೆಲ್ಲ ಮುಗಿದು ಎಲ್ಲರೂ ಮಲಗಿದ್ದರೂ ಅಪ್ಪ-ಮಗನ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಆಗ ಮತ್ತಿನಲ್ಲಿದ್ದ ಮೋಹನ ದೊಡ್ಡ ಕಲ್ಲನ್ನು ತಂದು ತಂದೆಯ ತಲೆ ಮೇಲೆ ಎತ್ತಿಹಾಕಿದ್ದಾನೆ. ಸೂರಯ್ಯ ಅವರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.ಹೀಗೆ ಕೊಲೆ ಮಾಡಿದ ಬಳಿಕ ಮೋಹನ ನೇರವಾಗಿ ಚಳ್ಳಕೆರೆ ಠಾಣೆಗೆ ಬಂದು ವಿಷಯ ತಿಳಿಸಿದ್ದಾನೆ.

Categories
ತೀರ್ಥಹಳ್ಳಿ

ಸಹಕಾರ ಕ್ಷೇತ್ರದ ಮರೆಯಲಾಗದ ಹೆಜ್ಜೆ…!

ಸಹಕಾರ ಕ್ಷೇತ್ರದ ಮರೆಯಲಾಗದ ಹೆಜ್ಜೆ…!
– ತೀರ್ಥಹಳ್ಳಿಯಲ್ಲಿ ಸಹಕಾರಿ ವೇದಿಕೆ ಮಾದರಿ ಕಾರ್ಯಕ್ರಮ
– 5000ಕ್ಕೂ ಹೆಚ್ಚು ಮಂದಿ ಆಗಮನ: ಕಿಮ್ಮನೆ ಹೇಳಿದ್ದೇನು?
– ಡಾ. ಆರ್. ಎಂ. ಮಂಜುನಾಥ ಗೌಡರಿಗೆ ತವರೂರು ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಸೋಮವಾರ ಸಹಕಾರ ನಾಯಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್. ಎಂ. ಮಂಜುನಾಥ ಗೌಡ ಅವರ ತವರೂರು ಸನ್ಮಾನ ಕಾರ್ಯಕ್ರಮಕ್ಕೆ ಭರ್ಜರಿ ಜನ ಸೇರಿತು. ಸುಮಾರು 5000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಇಡೀ ಸಭಾಂಗಣ ತುಂಬಿ ಹೋಗಿತ್ತು. ತೀರ್ಥಹಳ್ಳಿ ಪಟ್ಟಣದ ಅನಂತಮೂರ್ತಿ ಶಾಲೆ ಮೈದಾನದಲ್ಲಿ ನೂರಾರು ಬೈಕ್ ಮೆರವಣಿಗೆ ನಡೆಯಿತು.

ಸಭೆ ಕಾರ್ಯಕ್ರಮದಲ್ಲಿ ಅದ್ದೂರಿ ಸನ್ಮಾನ!

ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಬಲೇಶ್ವರ್ ಹೆಗ್ಡೆ ಸ್ವಾಗತ ಮಾಡಿದರು. ಸಹಕಾರಿ ವೇದಿಕೆ ಅಧ್ಯಕ್ಷ ವಿಜಯದೇವ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ನಾಯಕರಾದ ಕಿಮ್ಮನೆ ರತ್ನಾಕರ್, ಬೇಳೂರು ಗೋಪಾಲಕೃಷ್ಣ, ಆಯನೂರು ಮಂಜುನಾಥ್, ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್, ಷಡಕ್ಷರಿ ಉಪಾಧ್ಯಕ್ಷರು ಡಿಸಿಸಿ ಬ್ಯಾಂಕ್, ಗೀತಾ ರಮೇಶ್, ರಾಜಣ್ಣ ರೆಡ್ಡಿ, ಕೆ ರತ್ನಾಕರ್, ಕಲಗೋಡು ರತ್ನಾಕರ್, ಶ್ರೀಪಾದ್ ಹೆಗಡೆ ಶಿಮುಲ್ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಸದಸ್ಯರಾದ ದುಗ್ಗಪ್ಪ ಗೌಡ, ಸುಧೀರ್, ತೀರ್ಥಹಳ್ಳಿ ಪ್ರಮುಖರಾದ ನಾರಾಯಣರಾವ್, ಮುಡುಬ ರಾಘವೇಂದ್ರ, ವಿದ್ಯಾಧರ್, ಕೆಸ್ತೂರು ಮಂಜುನಾಥ್, ಮಣಿ ಹೆಗ್ಡೆ ಸೇರಿ ಅನೇಕರು ಹಾಜರಿದ್ದರು. ಉಷಾ ಪ್ರಾರ್ಥನೆ ಮಾಡಿದರು.
ರಾಘವೇಂದ್ರ ಶೆಟ್ಟಿ, ಸಚ್ಚಿದ್ರ ಹೆಗ್ಡೆ, ನಾಗರಾಜ್ ಕುರುವಳ್ಳಿ ಸೇರಿದಂತೆ ಅನೇಕರು ಹಾಜರಿದ್ದರು.

ತೀರ್ಥಹಳ್ಳಿಗೆ ಮಂಜುನಾಥ ಗೌಡರ ಸೇವೆ ಅಪಾರ

ಮನೆ ಮಗನ ಸನ್ಮಾನ ಇದು. ನಾವು ಪ್ರಚಾರಕ್ಕಾಗಿ ಕಾರ್ಯಕ್ರಮ ಮಾಡುವುದಲ್ಲ. ಸಹಕಾರಿ ಸಂಸ್ಥೆ ಅಭಿವೃದ್ಧಿಗಾಗಿ ಕೊಡುಗೆ ನೀಡಿದ್ದಾರೆ. ಈ ಹಿಂದೆ ಸಹಕಾರ ನೀಡಿದ್ದಾರೆ. ಹಾಗಾಗಿ ಗೌರವಿಸಲಾಗಿದೆ ಎಂದು ಸಹಕಾರಿ ನಾಯಕ ವಿಜಯ ದೇವ್ ಹೇಳಿದರು. ಫೈನಾನ್ಸ್ ಹಾವಳಿಯಿಂದ ಕಂಗೆಟ್ಟಿದ್ದ ಜನ ಸಹಕಾರಿ ವ್ಯವಸ್ಥೆಯಿಂದ ಅನುಕೂಲ ಪಡೆದಿದ್ದಾರೆ. ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಅತೀ ಹೆಚ್ಚು ರಿಸ್ಕ್ ತೆಗೆದುಕೊಂಡ ನಾಯಕ ಮಂಜುನಾಥ ಗೌಡರು. 6000ಕ್ಕೂ ಹೆಚ್ಚು ಕೋಟಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಹಣ ಕೊಟ್ಟಿದ್ದಾರೆ. ದಿವಾಳಿಯಾಗಿದ್ದ ಬ್ಯಾಂಕ್ ಇಂದು ನಂಬರ್ 1 ಬ್ಯಾಂಕ್ ಆಗಿದೆ. ಅವರ ಶಕ್ತಿ ಮುಗಿದಿಲ್ಲ. ಯಾರೇ ವಿರೋಧ ಮಾಡಿದರೂ ನಾವು ಅವರಿಂದ ಬೆಳೆದಿದ್ದೇವೆ ಎಂದರು.

ಜನ ನೋಡುವಂತೆ ಎದ್ದು ನಿಂತರು!

ಬಿದ್ದು ಎದ್ದರೆ ಎಲ್ಲರೂ ನೋಡುವಂತೆ ಎದ್ದು ನಿಲ್ಲಬೇಕು. ಮಂಜುನಾಥ ಗೌಡರ ಸಾಧನೆ ಎಲ್ಲರೂ ಮೆಚ್ಚುವಂತಹದ್ದು. ಜಿಲ್ಲೆಯ ಸಹಕಾರ ವ್ಯವಸ್ಥೆಗೆ ಹೊಸ ತಿರುವು ತಂದು ಕೊಟ್ಟವರು ಮಂಜುನಾಥ ಗೌಡ. ಬೆಳೆಯುವ ಬೆಳೆಸುವ ಮನಸು ಇರಬೇಕು. ಇದು ಮಂಜುನಾಥ ಗೌಡರ ಆತ್ಮೀಯತೆಯ ಸಭೆಯಾಗಿದೆ ಎಂದು ಹಿರಿಯ ಸಹಕಾರಿ ನಾರಾಯಣ ರಾವ್ ಹೇಳಿದರು.

ಎಂದೂ ಬೆನ್ನಿಗೆ ಚೂರಿ ಹಾಕಲ್ಲ..!

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಮಂಜುನಾಥ ಗೌಡ ಅವರು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಸಹಕಾರ ಕ್ಷೇತ್ರದಲ್ಲಿ ಸಕ್ರಿಯ ಆಗಿಲ್ಲ. ಸಹಕಾರ ರಂಗದಲ್ಲಿ ಸಾಲ ಪಡೆದ್ದೇನೆ. ರಾಜ್ಯ ಮಟ್ಟದಲ್ಲಿ ಸಹಕಾರ ನಾಯಕರಾಗಿದ್ದಾರೆ. ಅವರು ಮತ್ತೆ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರಾಗಬಹುದು ಎಂದರು. ಒಟ್ಟಾಗಿ ಪಕ್ಷ ಕಟ್ಟಿದ್ದೇವೆ. ಪಕ್ಷಕ್ಕೆ ತೊಂದರೆ ಕೆಲಸ ಮಾಡಿಲ್ಲ. ನಮ್ಮ ಜೊತೆ ಬಂದಾಗ ಅತ್ಯಂತ ಪ್ರೀತಿ ಗೌರವ ಕೊಟ್ಟಿದ್ದೇವೆ. ಅವರ ಬೆಳೆವಣಿಗೆಗೆ ಅವರ ಜತೆ ಇದ್ದೇನೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಇರಬಾರದು.
ಸಹಕಾರ ಕ್ಷೇತ್ರದಲ್ಲಿ ಶಿವಮೊಗ್ಗ ಮತ್ತು ತೀರ್ಥಹಳ್ಳಿಗೆ ಮಂಜುನಾಥ ಗೌಡರ ಕೊಡುಗೆ ಅಪಾರ.
ರಾಜಕೀಯ ಹೆಜ್ಜೆಯಲ್ಲೂ ನಿಮ್ಮ ಜತೆ ಇದ್ದೇನೆ ಎಂದು ಅಭಯ ನೀಡಿದರು.
ಎಂತಹ ಕಷ್ಟ ಬಂದ್ರೂ ನಾನು ಬೆನ್ನಿಗೆ ಚೂರಿ ಕೆಲಸ ಮಾಡಿಲ್ಲ.ಬಿಜೆಪಿ ವಿರುದ್ಧ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಮಾಡಿದ್ದೇವೆ. ವಯುಕ್ತಿಕ ವಿರೋಧ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಬಡವರಿಗೆ ಸಹಾಯ ಮಾಡೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಹೇಳಿದ್ದೇನು?

ಬಡವರು, ಕೃಷಿಕರಿಗೆ ಸಹಕಾರ ಕ್ಷೇತ್ರದಲ್ಲಿ ಅನುಕೂಲ ಮಾಡಿಕೊಟ್ಟ ನಾಯಕ ಮಂಜುನಾಥ ಗೌಡ. ಅವರು ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಶಾಸಕರಾಗೋದು ಬಾಕಿ…!

ಆಯನೂರು ಮಂಜುನಾಥ ಅವರು ಮಾತನಾಡಿ, ಅನೇಕ ಪೆಟ್ಟು ತಿಂದು ಶಕ್ತಿಯಾಗಿ ಬೆಳೆದು ನಿಂತಿದೆ. ಮಂಜುನಾಥ ಗೌಡ ಇತಿಹಾಸ ಮುಗಿಯುತ್ತೆ ಅಂದವರು ಈಗ ತಣ್ಣಗಾಗಿದ್ದಾರೆ. ನಾನು ಕೂಡ ಅಂದು ಒಂದು ಕಲ್ಲು ಹೊಡೆದಿದ್ದೇನೆ. ಒಂದು ಬಾರಿ ತೀರ್ಥಹಳ್ಳಿ ಶಾಸಕರಾಗೋದು ಒಂದೇ ಬಾಕಿ ಎಂದರು.

ಮಂಜುನಾಥ ಗೌಡ್ರ ತುಳಿಯಲು ಸಾಧ್ಯವಿಲ್ಲ

ಶಿವಮೊಗ್ಗ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ ಕಾರಣಕ್ಕೆ ಮಂಜುನಾಥ ಗೌಡರ ಕೊಡುಗೆ ಅಪಾರ. ಮಂಜುನಾಥ ಗೌಡರನ್ನು ತುಳಿಯಲು ಸಾಧ್ಯವಿಲ್ಲ. ಎಲ್ಲಾ ತನಿಖೆ ಆದ್ರೂ ಎದೆಗುಂದಿಲ್ಲ. ತೀರ್ಥಹಳ್ಳಿ ಅಂದರೆ ಹೋರಾಟ ಎಂದು ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು ಹೇಳಿದರು.

[embedyt] https://www.youtube.com/watch?v=0aTVED7lK4k%5B/embedyt%5D

Categories
ಬೆಂಗಳೂರು

ರೈತರೇ ಸಿಹಿ ಸುದ್ದಿ: ಮನೆ ಬಾಗಿಲಿಗೆ ‘ಕಿಸಾನ್ ಕ್ರೆಡಿಟ್ ಕಾರ್ಡ್!

ರೈತರೇ ಸಿಹಿ ಸುದ್ದಿ: ಮನೆ ಬಾಗಿಲಿಗೆ ‘ಕಿಸಾನ್ ಕ್ರೆಡಿಟ್ ಕಾರ್ಡ್!
– ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ: ಹೇಗೆ ಸಿಗುತ್ತೆ ಸಾಲ?
– ಏನಿದು ಯೋಜನೆ?, ಯಾರಿಗೆ ಲಾಭ?

NAMMUR EXPRESS NEWS
ಬೆಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ಯೋಜನೆ) ಅಡಿಯಲ್ಲಿ ರೈತರಿಗೆ ಮಹತ್ವದ ಮಾಹಿತಿ ನೀಡಲಾಗಿದೆ. ಪಿಎಂ ಕಿಸಾನ್ ರೈತರಿಗೆ ಸಾಲ ಒದಗಿಸಲು ಕೇಂದ್ರ ಸರ್ಕಾರ ವಿಶೇಷ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ದೇಶದ ಕೃಷಿಕರ ಮನೆ ಬಾಗಿಲಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಣಾ ಅಭಿಯಾನ ಆರಂಭವಾಗಿದ್ದು ಡಿ. 31ರ ತನಕ ನಡೆಯಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಪಿಎಂ ಕಿಸಾನ್ ರೈತರಿಗೆ ಸಾಲ ನೀಡುವ ಗುರಿಯನ್ನು ವೆಬೈಟ್ ಹೊಂದಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಎಲ್ಲಾ ರೈತರಿಗೆ ಲಭ್ಯವಿದೆ. ಆದಾಗ್ಯೂ, ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳಾದ ಅನೇಕ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನಗಳನ್ನು ಇನ್ನೂ ಪಡೆದಿಲ್ಲ.

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಇನ್ನೂ ತೆಗೆದುಕೊಳ್ಳದ ಲಕ್ಷಾಂತರ ರೈತರಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಇಲ್ಲಿಯವರೆಗೆ ಸಾಲ ಪಡೆಯದ ರೈತರಿಗೆ ಯೋಜನೆಯ ಬಗ್ಗೆ ತಿಳಿಸಲು ಮತ್ತು ಅವರಿಗೆ ಸಾಲ ನೀಡಲು ಕೇಂದ್ರ ಸರ್ಕಾರವು ‘ಘರ್ ಘರ್ ಕೆಸಿಸಿ ಅಭಿಯಾನ್’ ಎಂಬ ಮನೆ ಮನೆ ಅಭಿಯಾನವನ್ನು ನಡೆಸುತ್ತಿದೆ. ಹೊಸದಾಗಿ ಪ್ರಾರಂಭಿಸಲಾದ ಪಿಎಂ ಕಿಸಾನ್ ರನ್ ಪೋರ್ಟಲ್ https://fasalrin.gov.in/ ನಲ್ಲಿ ಸಾಲಕ್ಕಾಗಿ ಹೇಗೆ ಅರ್ಜಿ ಸಲ್ಲಿಸುವುದು ಎಂಬುದನ್ನು ತಿಳಿಯಿರಿ.

ಮೊದಲಿಗೆ, ರೈತರು https://fasalrin.gov.in/ ವೆಬೈಟ್ ತೆರೆಯಬೇಕು.
1) ಲಾಗಿನ್ ಮೇಲೆ ಕ್ಲಿಕ್ ಮಾಡಿ.
2) ಮೊಬೈಲ್ ಸಂಖ್ಯೆ, ಪಾಸ್ ವರ್ಡ್, ಕ್ಯಾಪ್ಟಾಕೋಡ್ ನಮೂದಿಸಿ ಮತ್ತು ಲಾಗಿನ್ ಮಾಡಿ.
3) ಅದರ ನಂತರ, ರೈತರು ತಮ್ಮ ವಿವರಗಳೊಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ವಿವರಗಳನ್ನು ಪರಿಶೀಲಿಸಿದ ನಂತರ, ಬ್ಯಾಂಕುಗಳು ಅರ್ಹ ರೈತರಿಗೆ ಸಾಲವನ್ನು ಮಂಜೂರು ಮಾಡುತ್ತವೆ.
ಪ್ರಸ್ತುತ, 97 ವಾಣಿಜ್ಯ ಬ್ಯಾಂಕುಗಳು, 58 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು 512 ಸಹಕಾರಿ ಬ್ಯಾಂಕುಗಳು ಪಿಎಂ ಕಿಸಾನ್ ಸಾಲ ಪೋರ್ಟಲ್ಕೆ ಸೇರಿಕೊಂಡಿವೆ.

ಇದರರ್ಥ ಈ ಎಲ್ಲಾ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಾಲವನ್ನು ನೀಡಬಹುದು. ಆದಾಗ್ಯೂ, ಕೇಂದ್ರ ಸರ್ಕಾರದಿಂದ 3 ಲಕ್ಷ ರೂ.ಗಳವರೆಗೆ ಬಡ್ಡಿ ಸಹಾಯಧನ ಲಭ್ಯವಿರುತ್ತದೆ. ಸಾಮಾನ್ಯವಾಗಿ, ರೈತರು 3 ಲಕ್ಷ ರೂ.ವರೆಗಿನ ಸಾಲವನ್ನು ತೆಗೆದುಕೊಂಡರೆ, ವಾರ್ಷಿಕ ಬಡ್ಡಿದರವು ಶೇಕಡಾ 7 ರಷ್ಟಿರುತ್ತದೆ. ನೀವು ಕೇಂದ್ರ ಸರ್ಕಾರದಿಂದ ಶೇಕಡಾ 3 ರಷ್ಟು ಬಡ್ಡಿ ಸಹಾಯಧನವನ್ನು ಪಡೆಯುತ್ತೀರಿ. ಆದ್ದರಿಂದ, ರೈತರು 3 ಲಕ್ಷ ರೂ.ವರೆಗಿನ ಸಾಲಕ್ಕೆ ಶೇಕಡಾ 4 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 3 ಲಕ್ಷ ರೂ.ಗಿಂತ ಹೆಚ್ಚಿನ ಸಾಲಗಳಿಗೆ, ಬ್ಯಾಂಕುಗಳು ಬಡ್ಡಿದರಗಳನ್ನು ನಿಗದಿಪಡಿಸುತ್ತವೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು 1998 ರಲ್ಲಿ ಪ್ರಾರಂಭಿಸಲಾಯಿತು. ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ನಬಾರ್ಡ್ ಜಂಟಿಯಾಗಿ ಈ ಯೋಜನೆಯನ್ನು ಪ್ರಾರಂಭಿಸಿವೆ. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ಕೇವಲ 4% ಬಡ್ಡಿದರದಲ್ಲಿ 3 ಲಕ್ಷ ರೂ.ಗಳವರೆಗೆ ಸಾಲವನ್ನು ಒದಗಿಸುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಎಲ್ಲಾ ರೈತರು ಸಾಲ ಪಡೆಯಬಹುದು. ಬೆಳೆಗಳ ಕೃಷಿಗಾಗಿ ಅಲ್ಪಾವಧಿಯ ಸಾಲದ ಅವಶ್ಯಕತೆಗಳನ್ನು ಪೂರೈಸಲು ಬ್ಯಾಂಕುಗಳಿಂದ ಸಾಲಗಳನ್ನು ಪಡೆಯಬಹುದು.

Categories
ತೀರ್ಥಹಳ್ಳಿ ಬೆಂಗಳೂರು

ಕೆಲಸದಿಂದ ತೆಗೆದಿದಕ್ಕೆ ಮಹಿಳಾ ಅಧಿಕಾರಿ ಕೊಲೆ!

ಕೆಲಸದಿಂದ ತೆಗೆದಿದಕ್ಕೆ ಮಹಿಳಾ ಅಧಿಕಾರಿ ಕೊಲೆ!
– ತೀರ್ಥಹಳ್ಳಿ ಮೂಲದ ಮಹಿಳಾ ಅಧಿಕಾರಿ ಕೊಲೆ ಸತ್ಯ ಬಯಲು
– ತೀರ್ಥಹಳ್ಳಿಯಲ್ಲಿ ಅಂತ್ಯ ಸಂಸ್ಕಾರ: ಕುಟುಂಬದ ಕಣ್ಣೀರು

NAMMUR EXPRESS NEWS
ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಕಾರಣ ಸಿಕ್ಕಿದೆ. ಪ್ರತಿಮಾ ಕಾರು ಚಾಲಕನಾಗಿದ್ದ ಕಿರಣ್ ತನ್ನನ್ನು ಕೆಲಸದಿಂದ ತೆಗೆದಿದ್ದಕ್ಕೆ ಈ ಕೊಲೆ ಮಾಡಲಾಗಿದೆ. ಬೆಂಗಳೂರಲ್ಲಿ ಸೇಡಿನಿಂದ ಪ್ರಾಣ ತೆಗೆದು ಕಿರಣ್ ಪರಾರಿ ಆಗಿದ್ದ. ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ವಿಚಾರಣೆಯ ವೇಳೆ ತಪೊಪ್ಪಿಕೊಂಡಿದ್ದು, ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕನನ್ನು ಬಂಧಿಸಲಾಗಿದೆ.

ಸೇಡು ಯಾಕೆ?

4 ವರ್ಷದಿಂದ ಕಾರು ಚಾಲಕನಾಗಿದ್ದ ಕಿರಣ್, ಬೇಜವಾಬ್ದಾರಿಯಿಂದ ಕಾರು ಓಡಿಸುತ್ತಿದ್ದನು. ಗುತ್ತಿಗೆ ಆಧಾರದ ಮೇಲೆ ಚಾಲಕ ವೃತ್ತಿ ಮಾಡುತ್ತಿರುವ ಕಿರಣ್ ಕಳೆದ ತಿಂಗಳು ಹೊಸ ಸರ್ಕಾರಿ ಕಾರು ಅಪಘಾತ ಮಾಡಿದ್ದನು. ಅಪಘಾತದ ನಂತರ ಕಚೇರಿಯಲ್ಲಿಯೇ ಕಾರು ಬಿಟ್ಟು ತೆರಳಿದ್ದನು. ಪ್ರತಿಮಾ ಕಲ್ಲು ಗಣಿಗಳಿಗೆ ಹೋಗುವ ವಿಚಾರ ಲೀಕ್ ಮಾಡುತ್ತಿರುವ ಬಗ್ಗೆ ಮಾಹಿತಿ ಇತ್ತು. ಈ ಕಾರಣಕ್ಕೆ ಪ್ರತಿಮಾ ವಾರ್ನ್ ಕೂಡ ಮಾಡಿದ್ದರು. ಈ ವೇಳೆ ಬೈದಾಗ ತಪ್ಪಾಗಿದೆ,, ಕೆಲಸದಿಂದ ತೆಗೆಯಬೇಡಿ ಎಂದು ಕೇಳಿದ್ದನಂತೆ.ಆದರೆ ಆಕೆ ಅದನ್ನು ತಿರಸ್ಕರಿಸಿದರು. ಶನಿವಾರ ಮನೆ ಬಳಿಯೇ ಕಾದು ಕುಳಿತು ಹೊಂಚು ಹಾಕಿ ಕೊಲೆ ಮಾಡಿ ಕಿರಣ್ ಎಸ್ಕೆಪ್ ಆಗಿದ್ದ. ಇದೀಗ ಆತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಮತ್ತೆ ಯಾರ ಕೈ ಇದು ಎಂಬ ಬಗ್ಗೆ ತನಿಖೆ ನಡೆಯುತ್ತದೆ.

ತೀರ್ಥಹಳ್ಳಿಯಲ್ಲಿ ಅಂತ್ಯ ಸಂಸ್ಕಾರ!

ತೀರ್ಥಹಳ್ಳಿಗೆ ಭಾನುವಾರ ರಾತ್ರಿಯೆ ಮೃತ ದೇಹ ಬಂದಿದ್ದು ಅವರ ಪತಿಯ ತೀರ್ಥಹಳ್ಳಿ ಸಮೀಪದ ಮನೆಯಲ್ಲಿ ಇಡಲಾಗಿತ್ತು. ಸೋಮವಾರ ಬೆಳಗ್ಗೆ ತೀರ್ಥಹಳ್ಳಿ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

Categories
ತೀರ್ಥಹಳ್ಳಿ

ಮಂಜುನಾಥ ಗೌಡರ ಸನ್ಮಾನಕ್ಕೆ 3 ಕ್ವಿಂಟಲ್ ಹಣ್ಣಿನ ಹಾರ!

ಮಂಜುನಾಥ ಗೌಡರ ಸನ್ಮಾನಕ್ಕೆ 3 ಕ್ವಿಂಟಲ್ ಹಣ್ಣಿನ ಹಾರ!
– ಉದ್ಯಮಿ ಮಹೇಂದ್ರ ಗೌಡ ಅವರಿಂದ ಹಾರ ಸಿದ್ಧತೆ
– 500ಕ್ಕೂ ಹೆಚ್ಚು ಬೈಕ್ ಮೂಲಕ ಆಗಮನ
– ತೀರ್ಥಹಳ್ಳಿಯಲ್ಲಿ ಅವರ ಅಭಿಮಾನಿಗಳಿಂದ ತಯಾರು

NAMMUR EXPRESS NEWS
ತೀರ್ಥಹಳ್ಳಿ: ಸಹಕಾರ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡರ ಸನ್ಮಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಾಂಧಿ ಚೌಕದಲ್ಲಿ ಕ್ರೇನ್ ಮೂಲಕ ಹಾರ ಹಾಕಲು ಸಿದ್ಧತೆ ನಡೆದಿದೆ. ಕಿತ್ತಲೆ, ಸೇಬಿನಿಂದ ಉದ್ಯಮಿ ಎಂ. ಜಿ ಡೆವಲಪರ್ ಮಾಲೀಕ ಮಹೇಂದ್ರ ಗೌಡ ಅಂಬಳಿಕೆ ಅವರು 3 ಕ್ವಿಂಟಲ್ ಕಿತ್ತಲೆ, ಸೇಬಿನ ಹಾರ ಹಾಕಲಿದ್ದಾರೆ. ಇನ್ನು ಸರ್ಕಾರಿ ಮೈದಾನದಲ್ಲಿ 500ಕ್ಕೂ ಹೆಚ್ಚು ಬೈಕ್ ಬಂದಿದ್ದು ಮೆರವಣಿಗೆ ಪಟ್ಟಣದಲ್ಲಿ ಬರಲಿದೆ. ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ವೇದಿಕೆ, ಟಿಎಪಿಸಿಎಂಎಸ್ ಅಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಬೃಹತ್ ಶಂಕರಾಚಾರ್ಯರ ಪ್ರತಿಮೆ!

ಶೃಂಗೇರಿಯಲ್ಲಿ ಬೃಹತ್ ಶಂಕರಾಚಾರ್ಯರ ಪ್ರತಿಮೆ!
– ಪ್ರವಾಸಿ ತಾಣವಾಗಲಿದೆ ಮತ್ತೊಂದು ಪ್ರತಿಮೆ, ಸೂರ್ಯಸ್ತಮಾನ ವೀಕ್ಷಣೆಗೂ ಅವಕಾಶ
-ನ.10 ರಂದು ಶಂಕರಾಚಾರ್ಯರ ಪ್ರತಿಮೆ ಶಂಕುಸ್ಥಾಪನೆ

NAMMUR EXPRESS NEWS
ಶೃಂಗೇರಿ: ಶೃಂಗೇರಿ ಶಾರದಾಂಬೆ ಊರಲ್ಲಿ ಮತ್ತೊಂದು ಪ್ರವಾಸಿ ತಾಣ ನಿರ್ಮಾಣವಾಗಲಿದೆ. ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿರುವ ಪ್ರಶಾಂತವಾದ ಪಟ್ಟಣದಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದ್ದರು. ಇದೀಗ ಈ ಪ್ರಸಿದ್ದ ನೆಲದಲ್ಲಿ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆಗೆ ಸಜ್ಜಾಗಿದೆ. ಶಾರದಾ ಪೀಠದಿಂದ 2 ಕಿ.ಮೀ. ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಾಣವಾಗಿರುವ 32 ಅಡಿ ಎತ್ತರದ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆ ನ.10ರಂದು ನೆರವೇರಲಿದೆ. ಭವ್ಯಮೂರ್ತಿ ಸ್ಥಾಪಿಸುವ ಆಶಯದಿಂದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ 2013 ರ ಜೂ.3 ರಂದು ಮಾರುತಿ ಬೆಟ್ಟದಲ್ಲಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಶ್ರೀ ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದಲ್ಲಿಯೇ ಶಂಕರರ ಪ್ರತಿಮೆ ಜತೆಗೆ ಅವರ ಶಿಷ್ಯರಾದ ಜಗದ್ಗುರು ಶ್ರೀ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯರ ಮೂರ್ತಿಗಳು ಅನಾವರಣಗೊಳ್ಳಲಿವೆ.

2 ಎಕರೆಯಲ್ಲಿ ನಿರ್ಮಾಣ:

45 ಕೋಟಿ ರೂ. ವೆಚ್ಚದಲ್ಲಿ ಸುಮಾರು 2 ಎಕರೆ ಜಾಗದಲ್ಲಿ ಮೂರ್ತಿ ನಿರ್ಮಾಣವಾಗಿದ್ದು, ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆಯನ್ನು ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಸರಿಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.

ಸೂರ್ಯಾಸ್ತ ವೀಕ್ಷಣೆಗೆ ವ್ಯವಸ್ಥೆ!

ಈ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು ಮತ್ತು ಇಳಿಯಲು ಎಸ್ಕಲೇಟರ್ ಅಳವಡಿಸಲಾಗಿದೆ.

ಶೃಂಗೇರಿ ಪ್ರವಾಸಿಗರ ಹೆಚ್ಚಳ

ಶೃಂಗೇರಿ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಇದೀಗ ಈ ಪ್ರತಿಮೆ ನಿರ್ಮಾಣದ ಮೂಲಕ ಮತ್ತಷ್ಟು ಪ್ರವಾಸಿಗರನ್ನು ಈ ಪ್ರತಿಮೆ ಸೆಳೆಯಲಿದೆ.

Categories
ಶಿವಮೊಗ್ಗ

ಅನುಮಾನಾಸ್ಪದ ಬಾಕ್ಸಲ್ಲಿ ಇದ್ದಿದ್ದು ಬಿಳಿ ಪೌಡರ್!.ಇಟ್ಟಿದ್ದು ಯಾರು?

ಅನುಮಾನಾಸ್ಪದ ಬಾಕ್ಸಲ್ಲಿ ಇದ್ದಿದ್ದು ಬಿಳಿ ಪೌಡರ್!.ಇಟ್ಟಿದ್ದು ಯಾರು?
– ಎರಡು ಸಲ ಸ್ಫೋಟ: ಬಾಕ್ಸ್ ಇಟ್ಟ ಓರ್ವನ ಬಂಧನ
– ಶಿವಮೊಗ್ಗ ಬಾಕ್ಸ್ ಪ್ರಕರಣ ಇನ್ನು ಸಸ್ಪೆನ್ಸ್!

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್​ ಸ್ಥಳದಲ್ಲಿ ಪತ್ತೆಯಾದ ಎರಡು ಪೆಟ್ಟಿಗೆಗಳನ್ನು ಒಡೆಯಲು ಎರಡು ಬಾರಿ ಸ್ಫೋಟ ನಡೆಸಲಾಗಿದ್ದು ಕೊನೆಗೂ ಅದರಲ್ಲಿ ಬಿಳಿ ಪೌಡರ್ ಪತ್ತೆಯಾಗಿದೆ. ಭಾನುವಾರ ಗೋಣಿ ಚೀಲ ಬಿಗಿದ್ದಿದ್ದ ಕಬ್ಬಿಣದ ಪೆಟ್ಟಿಗೆಯ ಬೀಗ ಓಪನ್ ಮಾಡಲು ಸಾಧ್ಯವಾಗಿರಲಿಲ್ಲ. ಒತ್ತಡ ಹೇರಿ ಲಾಕ್ ಓಪನ್ ಮಾಡುವುದು ಸಹ ಅಪಾಯಕ್ಕೆ ದಾರಿಮಾಡಿಕೊಡುವ ಸಂಭವ ಇತ್ತು. ಹೀಗಾಗಿ ಬೀಗವನ್ನ ಒಡೆಯಲು ಸಣ್ಣ ಮಟ್ಟಿಗಿನ ಸ್ಫೋಟವನ್ನ ಮಾಡಲಾಯಿತು.ತಡರಾತ್ರಿ 2.40 ರ ಸುಮಾರಿಗೆ ಮೊದಲ ಸಲ ಸ್ಫೋಟಕವನ್ನ ಬಳಸಿ ಒಂದು ಟ್ರಂಕ್​ನ್ನ ಓಪನ್​ ಮಾಡಲಾಯ್ತು. ಅದರಲ್ಲಿ ಬಿಳಿ ಬಣ್ಣದ ಪೌಡರ್ ಪತ್ತೆಯಾಗಿತ್ತು. ಆನಂತರ 3.20 ರ ಹೊತ್ತಿಗೆ ಮತ್ತೊಂದು ಟ್ರಂಕ್​ನ್ನು ಕೂಡ ಸ್ಫೋಟಕ ಬಳಸಿ ಸಿಡಿಸಲಾಯ್ತು. ಅದರಲ್ಲಿಯು ಬಿಳಿ ಬಣ್ಣದ ಪೌಡರ್ ಪತ್ತೆಯಾಗಿತ್ತು. ಕೆಲವು ನ್ಯೂಸ್‌ ಪೇಪರ್‌ಗಳು, ಬಿಳಿ ಬಣ್ಣದ ಪೌಡರ್‌ ಇರುವ ಪ್ಯಾಕೆಟ್‌ ದೊರೆತಿದೆ.

ಅನಾಮಧೇಯ ಬಾಕ್ಸ್ ಪತ್ತೆಯಾಗಿದ್ದಂತೆ ಶಿವಮೊಗ್ಗದ ಜಯನಗರ ಪೊಲೀಸರು ತನಿಖೆ ನಡೆಸಿ ಈ ವೇಳೆ ಘಟನಾ ಸ್ಥಳಕ್ಕೆ ಓಮಿನಿ ಕಾರೊಂದು ಬಂದು ಹೋಗಿರೋ ಮಾಹಿತಿ ಪಡೆದು ಆರೋಪಿಯೊಬ್ಬ ತಿಪಟೂರಿನಲ್ಲಿ ಇರೋದು ಗೊತ್ತಾಗಿ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಎರಡು ಕಬ್ಬಿಣದ ಬಾಕ್ಸ್‌ನಲ್ಲಿ ಸ್ಫೋಟಕವಿಲ್ಲ ಎಂಬ ಸಮಾಧಾನಕರ ಮಾಹಿತಿ ಸಿಕ್ಕಿದೆ. ಆದರೆ, ಅದರಲ್ಲಿರೋ ಪೌಡರ್ ರೀತಿಯ ವಸ್ತು ಏನು? ಇಲ್ಲಿ ಇಟ್ಟಿದ್ದು ಏಕೆ ಎಂಬ ಕುತೂಹಲ ಮೂಡಿದೆ

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಅಧಿಕಾರಿ ಕೊಲೆ: ಚಾಲಕ ಅರೆಸ್ಟ್!

ತೀರ್ಥಹಳ್ಳಿ ಅಧಿಕಾರಿ ಕೊಲೆ: ಚಾಲಕ ಅರೆಸ್ಟ್!
– ಪದೇ ಪದೇ ಕರೆ… ಪೊಲೀಸರಿಗೆ ಅನುಮಾನ
– ತೀರ್ಥಹಳ್ಳಿಯಲ್ಲಿ ಅಧಿಕಾರಿಗೆ ಅಂತಿಮ ನಮನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ಅಧಿಕಾರಿ ಕೊಲೆ ಪ್ರಕರಣದಲ್ಲಿ ಓರ್ವನನ್ನು ಬೆಂಗಳೂರು ಸುಬ್ರಮಣ್ಯಪುರಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಸುಬ್ರಮಣ್ಯಪುರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರತಿಮಾರವರ ಬಳಿ ಡ್ರೈವರ್ ಕೆಲಸಕ್ಕಿದ್ದ ಕಿರಣ್ ಎನ್ನುವವನ್ನ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಪ್ರತಿಮಾರವರ ಜೊತೆಗೆ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತನನ್ನು ವಾರದ ಹಿಂದಷ್ಟೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಇದೇ ಕಾರಣಕ್ಕೆ ಕಿರಣ್ ಪ್ರತಿಮಾರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ಈತನ ಹಿಂದೆ ಗಣಿ ಮಾಫಿಯಾ ಕೆಲಸ ಮಾಡಿದೆಯಾ ಎಂಬ ಅನುಮಾನ ಶುರುವಾಗಿದೆ.

ಕಿರಣ್‌ನನ್ನ ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸ್ತಿದ್ದಾರೆ. ಕಾರು ಚಾಲಕನಾಗಿದ್ದ ಕಿರಣ್ ನಿಂದ ಹಲವು ಕರೆಗಳು ಪ್ರತಿಮಾರಿಗೆ ಬಂದಿತ್ತು. ಇದರ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

ತೀರ್ಥಹಳ್ಳಿಯಲ್ಲಿ ಅಂತಿಮ ವಿಧಿ ವಿಧಾನ

ಪ್ರತಿಮಾರ ಮೃತದೇಹ ಭಾನುವಾರ ರಾತ್ರಿ ತೀರ್ಥಹಳ್ಳಿಗೆ ರವಾನೆಯಾಗಿದೆ.ರಾತ್ರಿ 10 ಗಂಟೆ ಸುಮಾರಿಗೆ ಮೃತಹದೇಹ ತೀರ್ಥಹಳ್ಳಿ ರವಾನೆ ಮಾಡಲಾಗಿದ್ದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಕುರುವಳ್ಳಿ ಸೇತುವೆ ಪಕ್ಕದಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.