Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ

ಶೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಸಾಧನೆ

ಶೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಸಾಧನೆ
– ಲಾಭಾಂಶದಲ್ಲಿ ಎಲ್‌ಐಸಿ ದಾಖಲೆ!
– ಸರ್ಕಾರಿ ಸ್ವಾಮ್ಯದ ಕಂಪನಿಗೆ ಐದನೇ ಸ್ಥಾನ!

NAMMUR EXPRESS NEWS
ನವದೆಹಲಿ: ಶೇರು ಪೇಟೆಯಲ್ಲಿ ಉತ್ತಮ ಸಾಧನೆ ಮಾಡಿದ ಐದು ಕಂಪನಿಗಳಲ್ಲಿ ಎಲ್‌ಐಸಿ ಯೂ ಒಂದಾಗಿದ್ದು ದಾಖಲೆ ಮಾಡಿದೆ. ಎಲ್‌ಐಸಿ ಕಳೆದ ಬಾರಿಯ ಮೂರನೇ ತ್ರೈಮಾಸಿಕ ವರದಿ ಪ್ರಕಟಿಸುವುದಕ್ಕೂ ಮುನ್ನವೇ ಷೇರು ಮಾರುಕಟ್ಟೆಯಲ್ಲಿ ಎಲೈಸಿ ಷೇರುಗಳು ಶೇ.6ರಷ್ಟು ಏರಿಕೆ ಕಂಡಿದ್ದು 1,106.25 ರೂ.ಗಳನ್ನು ದಾಖಲಿಸಿದೆ. ಸರಕಾರಿ ಸ್ವಾಮ್ಯದ ವಿಮಾ ಸಂಸ್ಥೆಯಾದ ಎಲ್‌ಐಸಿ 2023 ಡಿಸೆಂಬರ್‌ನಲ್ಲಿ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಶೇ.49ರಷ್ಟು ಲಾಭ ದಾಖಲಿಸಿದ್ದು ಸಧ್ಯ ದೇಶದ 5ನೇ ಅತಿ ದೊಡ್ಡ ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನ್ನುವ ಹೆಸರಿಗೆ ಪಾತ್ರವಾಗಿದೆ.

ಐದು ಟಾಪ್ ಕಂಪನಿಗಳ ಲಾಭಾಂಶ ಈ ಕೆಳಗಿನಂತಿದೆ.

ರಿಲಯನ್ಸ್ – 19.64 ಲಕ್ಷ ಕೋಟಿ
ಟಿಸಿಎಸ್ – 15.13 ಲಕ್ಷ ಕೋಟಿ
ಎಚ್‌ಡಿಎಫ್‌ಸಿ ಬ್ಯಾಂಕ್ – 10.66 ಲಕ್ಷ ಕೋಟಿ
ಇನ್ಫೋಸಿಸ್ – 7.02 ಲಕ್ಷ ಕೋಟಿ
ಎಲ್‌ಐಸಿ – 6.99 ಲಕ್ಷ ಕೋಟಿ

Categories
ಬೆಂಗಳೂರು ರಾಜ್ಯ

ರಾಜ್ಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿ.!

ರಾಜ್ಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿ.!
– ಸಮಾನ ಕೆಲಸಕ್ಕೆ, ಸಮಾನ ವೇತನ ಜಾರಿ

NAMMUR EXPRESS NEWS
ಬೆಂಗಳೂರು: ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರಪಾವತಿ, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನೆ, ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಡಿ-ವೃಂದದ ನೌಕರರ ವೇತನ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದು, ರಾಜ್ಯದ ಎಲ್ಲಾ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ತೆಗಳಲ್ಲಿ ನೇರಪಾವತಿ, ಗುತ್ತಿಗೆ/ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಡಿ ವೃಂದದ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಹಲ್ಬರ್ (ವಾಲ್‌ಮನ್ ಮುಂತಾದ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ನೌಕರರುಗಳು ಸಾರ್ವಜನಿಕರಿಗೆ ಅತಿ ಅಗತ್ಯ ಸೇವೆಗಳನ್ನು ಪೂರೈಸುವ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ ಎಂದಿದ್ದಾರೆ.

ಈ ನೌಕರರುಗಳ ವೇತನವನ್ನು ಸ್ಥಳೀಯ ಸಂಸ್ಥೆಯ ನಿಧಿಯಿಂದ ಪ್ರಥಮ ಆದ್ಯತೆಯ ಮೇಲೆ ಪ್ರತಿ ತಿಂಗಳು ಪಾವತಿಸಬೇಕಿರುತ್ತದೆ, ಆದರೆ, ಬಹುತೇಕ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸದರಿ ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನವನ್ನು ಪಾವತಿಸದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಗುತ್ತಿಗೆದಾರರ ಬಿಲ್ಲುಗಳನ್ನು ಪಾವತಿಸುವುದಕ್ಕಾಗಿ ವಿನಿಯೋಗಿಸುತ್ತಿರುವುದನ್ನು ಗಮನಿಸಿದೆ. ಇದರಿಂದಾಗಿ ಪ್ರಸ್ತಾಪಿತ ನೌಕರರುಗಳು ಆರ್ಥಿಕವಾಗಿ ಸಂಕಷ್ಟದಿಂದ ಬಳಲುತ್ತಿರುವುದು ನಿರ್ದೇಶನಾಲಯದ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದ್ದಾರೆ.

ಆದರಿಂದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರಪಾವತಿ, ಗುತ್ತಿಗೆ/ ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ವೃಂದದ ನೌಕರರುಗಳ ವೇತನವನ್ನು ಸಾಮಾನ್ಯ ನಿಧಿಯಿಂದ ಪ್ರಥಮ ಆದ್ಯತೆ ಮೇರೆಗೆ ಪರಿಗಣಿಸಿ, ಪ್ರತಿ ತಿಂಗಳ 5ನೇ ತಾರೀಖಿನೊಳಗಾಗಿ ಕಡ್ಡಾಯವಾಗಿ ಪಾವತಿಸಲು ಎಲ್ಲಾ ಆಯುಕ್ತರು/ಪೌರಾಯುಕ್ತರು/ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ತಪ್ಪಿದಲ್ಲಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.

Categories
ತೀರ್ಥಹಳ್ಳಿ ಶಿವಮೊಗ್ಗ

ಗುಡ್ಡೆಕೊಪ್ಪ ಸಂದೀಪ್ ಭಟ್ ಅವರಿಗೆ ಮಹತ್ವದ ಹುದ್ದೆ!

ಗುಡ್ಡೆಕೊಪ್ಪ ಸಂದೀಪ್ ಭಟ್ ಅವರಿಗೆ ಮಹತ್ವದ ಹುದ್ದೆ!
– ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಹುದ್ದೆ
– 4 ವರ್ಷ ತೀರ್ಥಹಳ್ಳಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಸೇವೆ

NAMMUR EXPRESS NEWS
ತೀರ್ಥಹಳ್ಳಿ / ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಗುಡ್ಡೆಕೊಪ್ಪ ಸಂದೀಪ್ ಭಟ್ ಅವರು ಆಯ್ಕೆ ಆಗಿದ್ದಾರೆ. ತೀರ್ಥಹಳ್ಳಿ ಯುವ ಮೋರ್ಚಾ ಅಧ್ಯಕ್ಷರಾಗಿ 4 ವರ್ಷ ಕೆಲಸ ಮಾಡಿರುವ ಸಂದೀಪ್ ಭಟ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಯುವ ಮೋರ್ಚಾದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಇದೀಗ ಅವರಿಗೆ ಜಿಲ್ಲಾ ಮಟ್ಟದಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿದೆ.

Categories
ತೀರ್ಥಹಳ್ಳಿ ರಾಜಕೀಯ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ಬಿಜೆಪಿ ನೂತನ ಟೀಂಗೆ ಅಧಿಕಾರ!

ತೀರ್ಥಹಳ್ಳಿಯಲ್ಲಿ ಬಿಜೆಪಿ ನೂತನ ಟೀಂಗೆ ಅಧಿಕಾರ!
– ಪಕ್ಷದ ಧ್ವಜ ಕೊಡುವ ಮೂಲಕ ಜವಾಬ್ದಾರಿ ಹಸ್ತಾಂತರ
– ಎಲ್ಲಾ ಘಟಕಗಳ ಪಕ್ಷದ ಅಧಿಕಾರ ಸ್ವೀಕಾರ
– ತೀರ್ಥಹಳ್ಳಿ ಕಾರ್ಯಕರ್ತರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಆರಗ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಫೆ.10ರಂದು ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಜವಾಬ್ದಾರಿಯನ್ನು ಸಾವಿರಾರು ಸಂಖ್ಯೆಯ ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಸಲಾಯಿತು. ಹಿಂದಿನ ಅವಧಿಯಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಬಾಳೆಬೈಲು ರಾಘವೇಂದ್ರ ಅವರು ಪಕ್ಷದ ಧ್ವಜವನ್ನು ಹೆದ್ದೂರು ನವೀನ್ ಅವರಿಗೆ ಕೊಡುವ ಮೂಲಕ ಪಕ್ಷದ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ ತೀರ್ಥಹಳ್ಳಿಯಲ್ಲಿ ಸಂಘಟನೆಯ ಆಧಾರದ ಮೇಲೆ ಪಕ್ಷವನ್ನು ಕಟ್ಟಿದ್ದೇವೆ. ನಮ್ಮ ಕಾರ್ಯಕರ್ತರಿಂದ ತೀರ್ಥಹಳ್ಳಿಯಲ್ಲಿ ಬಿಜೆಪಿ ಎಷ್ಟೋ ಬಾರಿ ಗೆಲುವು ಸಾಧಿಸಿದೆ. ಕಾರ್ಯಕರ್ತರು ಎಲ್ಲೂ ಸುಳ್ಳು ಹೇಳಲಿಲ್ಲ, ಎಲ್ಲೂ ಮೋಸ ಮಾಡಲಿಲ್ಲ ಇದರ ಬಗ್ಗೆ ನಮಗೆ ಹೆಮ್ಮೆ ಹಾಗೂ ವಿಶ್ವಾಸ ಇದೆ. ಅತಿ ದೊಡ್ಡ ತಂಡವನ್ನು ನಮ್ಮ ತಾಲೂಕಿನಲ್ಲಿ ನಾವು ಹೊಂದಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತ ಬಿಜೆಪಿಗೆ ಬರುವ ಹಾಗೆ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಬಿಜೆಪಿ ನೂತನ ಅಧ್ಯಕ್ಷರಾದ ಹೆದ್ದೂರು ನವೀನ್ ಮಾತನಾಡಿ, ತೀರ್ಥಹಳ್ಳಿ ತಾಲೂಕಿನ ಅಧ್ಯಕ್ಷರಾಗುವ ಜವಾಬ್ದಾರಿಯನ್ನು ನನಗೆ ನಂಬಿ ನನಗೆ ಕೊಟ್ಟಿದ್ದೀರಾ ಅದಕ್ಕೆ ನಾನು ನಿಮಗೆ ಚಿರಋಣಿಯಾಗಿರುತ್ತೇನೆ ಹಾಗೂ ಅದಕ್ಕೆ ಧಕ್ಕೆ ಬರದ ಹಾಗೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಆರಗ ಜ್ಞಾನೇಂದ್ರ ಹಾಗೂ ನಮ್ಮ ಸಂಘಟನೆಯ ಹಿರಿಯರ ಹೋರಾಟದ ಪರಿಶ್ರಮದಿಂದ ಕಟ್ಟಿದಂತಹ ಸಂಘಟನೆಯಾಗಿದೆ. ಯುವಜನತೆಯು ತೀರ್ಥಹಳ್ಳಿಯ ಇತಿಹಾಸದ ಅಧ್ಯಯನ ಮಾಡಿ, ಅದರ ಹಿಂದಿನ ಪರಿಶ್ರಮ ಎಷ್ಟು ಜನರ ತ್ಯಾಗ ಇದೆ ಎನ್ನುವುದನ್ನು ತಿಳಿದುಕೊಳ್ಳಿ ಎಂದು ಯುವ ಪೀಳಿಗೆಗೆ ಮನವಿ ಮಾಡಿದರು.

ಸುಮಾರು 6 ಸಾವಿರ ಜನರಲ್ಲಿ ಕೆಲವರ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ಕೊಟ್ಟಿದ್ದಾರೆ. ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಒಂದು ತಂಡ ಈ ತಾಲೂಕಿನಲ್ಲಿ ಬಿಜೆಪಿಯನ್ನು ಕಟ್ಟಬೇಕಿದೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಂಡಕ್ಕೆ ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ಬಳಿಕ ಪ್ರಾಸ್ತವಿಕ ನುಡಿಗಳನ್ನಾಡಿದ ಉಪಾಧ್ಯಕ್ಷರಾದ ಬಾಳೆಬೈಲ್ ರಾಘವೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಮೇಘರಾಜ್, ಸಂಘಟನೆಯ ಹಿರಿಯರಾದ ಪ್ರಕಾಶ್, ಪ್ರಮುಖರಾದ ನಾಗರಾಜ್ ಶೆಟ್ರು, ನಿರ್ದೇಶಕರಾದ ಈಶ್ವರ್, ಶಂಕರನಾರಾಯಣ ಐತಾಕಳ್, ಐತಾಳ್, ಅಶೋಕ್ ಮೂರ್ತಿ, ಸಾಲೆಕೊಪ್ಪ ರಾಮಚಂದ್ರ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಯಶೋಧ ಮಂಜುನಾಥ್, ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷರಾದ ಮೋಹನ್, ಶ್ರೀನಿವಾಸ್, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ಸೇರಿ ಬಹುತೇಕ ಎಲ್ಲಾ ನಾಯಕರು ಹಾಜರಿದ್ದರು.

Categories
ಶಿವಮೊಗ್ಗ

ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು

ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು
-ಶಿವಮೊಗ್ಗ : ಮದುವೆಯಾದ ಹತ್ತೇ ನಿಮಿಷಕ್ಕೆ ಅಧಿಕಾರಿಗಳ ದಾಳಿ

ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ವಿರುದ್ದ ದಾವಣಗೆರೆಯಲ್ಲಿ ಕೇಸ್ ದಾಖಲಾಗಿದೆ. ಉದ್ರೇಕಕಾರಿ ಭಾಷಣ ಸಂಬಂಧ ದಾವಣಗೆರೆ ಬಡಾವಣೆ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಗುರುವಾರ ದಾವಣಗೆರೆಯಲ್ಲಿ ನಡೆದಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಈಶ್ವರಪ್ಪ ಅವರು ‘ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ ಅವರಂತಹ ರಾಷ್ಟ್ರದ್ರೋಹಿಗಳು ದೇಶವನ್ನು ಛಿದ್ರ ಮಾಡ್ತೀವಿ ಅಂತಾ ಹೋರಾಡ್ತರಲ್ಲಾ ಅವರಿಗೆ ಗುಂಡಿಕ್ಕಿ ಕೊಲ್ಲೋ ಅಂತಾ ಕಾನೂನು ತನ್ನಿ ಏನ್ ಅನ್ನೋಂಡಿದಿರಾ ದೇಶ ಅಂದ್ರೆ…’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಅವರ ಶಿವಮೊಗ್ಗದಲ್ಲಿ ಸಮರ್ಥನೆ ಮಾಡಿಕೊಂಡಿದ್ದರು. ಅಲ್ಲದೆ ಕೇಸ್ ಹಾಕಿ ಎಂದಿದ್ದರು. ಈ ಸಂಬಂಧ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ಹನುಮಂತಪ್ಪ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಈಶ್ವರಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದುವೆಯಾದ ಹತ್ತೇ ನಿಮಿಷಕ್ಕೆ ಅಧಿಕಾರಿಗಳ ದಾಳಿ

ಶಿವಮೊಗ್ಗ : ನಗರದ ಸಮುದಾಯ ಭವನವೊಂದರಲ್ಲಿ ಅಪ್ರಾಪ್ತೆಯ ವಿವಾಹ ನೆರವೇರಿಸಲಾಗಿದೆ. ವಿಷಯ ತಿಳಿದು ಮಕ್ಕಳ ಸಹಾಯವಾಣಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ. ಮದುವೆ ಶಾಸ್ತ್ರ ಮಾಡಿಸಿದ ಅರ್ಚಕ, ಮದುಮಗ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗದಗ ಜಿಲ್ಲೆಯ 14 ವರ್ಷದ ಬಾಲಕಿಯೊಬ್ಬಳಿಗೆ ಶಿವಮೊಗ್ಗ ನಗರದ ಸಮುದಾಯ ಭವನವೊಂದರಲ್ಲಿ ಜ.30ರಂದು ಮದುವೆ ಮಾಡಲಾಗಿದೆ. ಮುಹೂರ್ತ ಮುಗಿದು ಕೆಲವೆ ನಿಮಿಷದಲ್ಲಿ ವಿಷಯ ತಿಳಿದು ಅಧಿಕಾರಿಗಳು ಸಮುದಾಯ ಭವನಕ್ಕೆ ದಾಳಿ ಮಾಡಿದ್ದಾರೆ. ಬಾಲಕಿಯನ್ನು ರಕ್ಷಿಸಿರುವ ಅಧಿಕಾರಿಗಳು, ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮದುಮಗ, ಆತನ ಪೋಷಕರು, ಬಾಲಕಿಯ ಪೋಷಕರು, ಮದುವೆ ಮಾಡಿದ ಅರ್ಚಕ ಸೇರಿದಂತೆ 8 ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ವಿವಿಧ ಸೆಕ್ಷನ್‌ಗಳ ಅಡಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Categories
ಹೊಸನಗರ

ಮಾಸ್ತಿಕಟ್ಟೆಯಲ್ಲಿ ಲಯನ್ಸ್ ರಜತ ಸಂಭ್ರಮ!

ಮಾಸ್ತಿಕಟ್ಟೆಯಲ್ಲಿ ಲಯನ್ಸ್ ರಜತ ಸಂಭ್ರಮ!
– ವರಾಹಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ
– ಮಲೆನಾಡಿನ ಸಾಧಕರಿಗೆ ಸನ್ಮಾನ ಸಮಾರಂಭ
– ನಮ್ಮೂರ್ ಎಕ್ಸ್ ಪ್ರೆಸ್, ಮಲೆನಾಡು ವಾಯ್ಸ್ ಪತ್ರಿಕೆಗಳಿಗೆ ಪ್ರಶಸ್ತಿ ಗರಿ

NAMMUR EXPRESS NEWS
ಹೊಸನಗರ: ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯು 25ನೇ ವರ್ಷದ ಸಂಭ್ರಮದಲ್ಲಿ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವರಾಹಿ ಮಾಸ್ತಿಕಟ್ಟೆ ಸ್ನೇಹ ಸಂಬಂಧ ಕಾರ್ಯಕ್ರಮವನ್ನು ಫೆಬ್ರವರಿ 11ರ ಭಾನುವಾರ ಸಂಜೆ 4 ಗಂಟೆಗೆ ಮಾಸ್ತಿಕಟ್ಟೆಯ ಕೆಪಿಸಿ ಕಾಲೋನಿಯ ವರಾಹಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದೆ. ಈಗಾಗಲೇ ಅಂತಿಮ ಸಿದ್ಧತೆ ಮುಗಿದಿದೆ. ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಯರಾಮ್ ಶೆಟ್ಟಿ ಕುಂದಾಪುರ ದಂಪತಿ, ಬಿದನೂರು ಸಹೋದರಿಯರಾದ ದಾಕ್ಷಾಯಿಣಿ, ಜ್ಯೋತಿ, ನಿವೃತ್ತ ಶಿಕ್ಷಕರಾದ ಮಂಜುಳಮ್ಮ ಆನಂದ ರೆಡ್ಡಿ, ನಮ್ಮೂರ್ ಎಕ್ಸ್ಪ್ರೆಸ್ ಮುಖ್ಯಸ್ಥರಾದ ರಾಘವೇಂದ್ರ ತೀರ್ಥಹಳ್ಳಿ, ಮಲೆನಾಡು ವಾಯ್ಸ್ ಪತ್ರಿಕೆ ಸಂಪಾದಕ ನಗರ ರಾಘವೇಂದ್ರ, ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್ ಇವರಿಗೆ ಸನ್ಮಾನ ಸಮಾರಂಭ ನಡೆಯಲಿದೆ.

ಕಾರ್ಯಕ್ರಮಗಳ ವೈಶಿಷ್ಟ್ಯತೆ :

– ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ
– ಪೂಜ್ಯ ಸ್ವಾಮೀಜಿಗಳು ಹಾಗೂ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಉಪನ್ಯಾಸ ಹಾಗೂ ವಿಶೇಷ ಭಾಷಣಕಾರರನ್ನು ಒಳಗೊಂಡ ಅತ್ಯುತ್ತಮ ವೇದಿಕೆ ಕಾರ್ಯಕ್ರಮ
– ಮಲೆನಾಡಿನ ವೈಭವ ಸೂಚಿಸುವ ವಿಶೇಷ ಹಸಿರು ರಂಗಸಜ್ಜಿಕೆ
– ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಗೌರವ ಸಮರ್ಪಣೆ, ಲಯನ್ಸ್ ಸೇವಾ ಯೋಜನೆ ಅನುಷ್ಠಾನ
– ಮಾಸ್ತಿಕಟ್ಟೆಯ ಮೂಲ ನಿವಾಸಿಗಳಾಗಿ ಹಾಗೂ ಅನೇಕ ರೀತಿಯಲ್ಲಿ ನಮ್ಮೂರ ನಂಟು ಹೊಂದಿರುವ ನೂರಾರು ಜನರನ್ನು ಒಂದೆಡೆ ಸೇರಿಸುವ ವರಹಿ ಮಾಸ್ತಿ ಕಟ್ಟೆ ಸ್ನೇಹ ಸಂಬಂಧ ಎಂಬ ಬಾಂಧವ್ಯದ ಸಮ್ಮಿಲನ ಕಾರ್ಯಕ್ರಮ
– ಮಲೆನಾಡ ಗಾನ ಕೋಗಿಲೆ ಖ್ಯಾತಿಯ ಕಲಾವಿದೆ ದಿವ್ಯ ರಾಮಚಂದ್ರ ಮತ್ತು ಸಂಗಡಿಗರು, ಬೆಂಗಳೂರು ಇವರಿಂದ ಅಮೋಘ ಗಾನ ವೈಭವ ಕಾರ್ಯಕ್ರಮ ಹಾಗೂ ಸ್ಥಳೀಯವಾಗಿ ಕೆಲವು ಸೀಮಿತ ಮನರಂಜನೆ ಕಾರ್ಯಕ್ರಮಗಳ ಅಳವಡಿಕೆ.
– ಮಲೆನಾಡ ವಿಶೇಷ ಅಡುಗೆಯ ಸಸ್ಯಹಾರ ಮತ್ತು ಮಾಂಸಹಾರ ಭೋಜನ ವ್ಯವಸ್ಥೆ.
– ಆಗಮಿಸಿದ ಸರ್ವರನ್ನು ಒಳಗೊಂಡ ವಿಶೇಷ ಛಾಯಾಚಿತ್ರ ಮಾಡಲಾಗುವುದು.
ನಂದಿನಿ ಸಂಜೆ 4ಕ್ಕೆ ಪ್ರಾರಂಭವಾಗಿ,ಸಂಜೆ 4 ರಿಂದ 5:00 ಚಹಾ ತಿಂಡಿ ಹಾಗೂ ಸಂಜೆ 5 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ರಾತ್ರಿ 8.30 ಕ್ಕೆ ಭೋಜನ ವ್ಯವಸ್ಥೆಯೊಂದಿಗೆ ವಿಶೇಷ ಮನರಂಜನ ಕಾರ್ಯಕ್ರಮ, ಮಲೆನಾಡ ಗಾನಕೋಗಿಲೆ ದಿವ್ಯ ರಾಮಚಂದ್ರ ಹಾಗೂ ಸಂಗಡಿಗರು ಬೆಂಗಳೂರು ಇವರಿಂದ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಮಾಹಿತಿ

– ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವವರು ಮುಂಚಿತವಾಗಿ ತಮ್ಮವರ ಹೆಸರನ್ನು ನೋಂದಾಯಿಸಿ ಪ್ರವೇಶ ಪತ್ರ ಪಡೆದುಕೊಳ್ಳುವುದು
– ಈ ನೋಂದಣಿ ಗೌರವ ಪ್ರವೇಶ ಪತ್ರ ಪಡೆದ ಪ್ರತಿ ಕಾರ್ಡಿಗೆ ಗರಿಷ್ಠ ಇಬ್ಬರಿಗೆ ಅವಕಾಶ ನೀಡಲಾಗುವುದು
– ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರು ನಿಗದಿತ ಸಮಯಕ್ಕೆ ಬರುವುದರ ಮೂಲಕ ಕಾರ್ಯಕ್ರಮ ಸಕಾಲಕ್ಕೆ ನಡೆಸಲು ಸಹಕರಿಸುವುದು
– ಕಾರ್ಯಕ್ರಮದಲ್ಲಿ ಗೌರವ ಪ್ರವೇಶ ಪಡೆದ ಪ್ರತೀ ಕಾರ್ಡಿನ ನೋಂದಣಿ ಸಂಖ್ಯೆಗಳನ್ನು ಒಟ್ಟುಗೂಡಿಸಿ ಚೀಟಿ ಎತ್ತುವುದರ ಮೂಲಕ ಕನಿಷ್ಠ 10 ಜನರನ್ನು ಆಯ್ಕೆಗೊಳಿಸಿ ವೇದಿಕೆಯಲ್ಲಿ ಅಭಿನಂದಿಸಲಾಗುವುದು.
– ಈ ಕಾರ್ಯಕ್ರಮ ನಿಮ್ಮಿಂದಲೇ, ನಿಮಗೋಸ್ಕರ ನಡೆಸುವ ನಮ್ಮೂರಿನ ಪ್ರೀತಿ ಗೌರವದ ಹೆಮ್ಮೆಯ ಕಾರ್ಯಕ್ರಮವಾಗಿದ್ದು ತಮ್ಮೆಲ್ಲರ ಸಂಪೂರ್ಣ ಸಹಕಾರ ಬಯಸುತ್ತೇವೆ.
– ಆಗಮಿಸುವ ಸರ್ವರನ್ನು ಪ್ರೀತಿ, ವಿಶ್ವಾಸ, ಅಭಿಮಾನ ಆದರದಿಂದ ಬರಮಾಡಿಕೊಳ್ಳುವ ಕರ್ತವ್ಯ ನಮ್ಮದು.

Categories
ಕರಾವಳಿ ಕಾರ್ಕಳ ಬೆಂಗಳೂರು ರಾಜ್ಯ ಶಿಕ್ಷಣ

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗೆ “ಸುವರ್ಣ ಸಾಧಕರು ಪ್ರಶಸ್ತಿ”!

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗೆ “ಸುವರ್ಣ ಸಾಧಕರು ಪ್ರಶಸ್ತಿ”!
– ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ
– ಸಾಮಾಜಿಕ, ಶೈಕ್ಷಣಿಕ ಸೇವೆ ಗುರುತಿಸಿ ಗೌರವ
– 7 ಮಂದಿ ಸಂಸ್ಥಾಪಕರಿಂದ ಪ್ರಶಸ್ತಿ ಸ್ವೀಕಾರ

NAMMUR EXPRESS NEWS
ಬೆಂಗಳೂರು: ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಆಶ್ರಯದಲ್ಲಿ ಬೆಂಗಳೂರಲ್ಲಿ ನಡೆದ ಸುವರ್ಣ ಸಾಧಕರು-2024 ಪ್ರಶಸ್ತಿಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದರೆ ಪಾತ್ರವಾಗಿದ್ದು, ಬೆಂಗಳೂರಿನ ಶಾಂಗ್ರಿಲಾ ಹೋಟೆಲಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಕ್ರಿಯೇಟಿವ್ ಕಾಲೇಜಿನ 7 ಮಂದಿ ಸಂಸ್ಥಾಪಕರು ಅದ್ದೂರಿ ವೇದಿಕೆಯಲ್ಲಿ ಸ್ವೀಕರಿಸಿದರು.
ರಾಜ್ಯದ ವಿವಿಧ ಭಾಗದಿಂದ ಸುಮಾರು 32 ಮಂದಿ ಸಾಧಕರಿಗೆ ಈ ಬಾರಿಯ ಸುವರ್ಣ ಸಾಧಕರು 2024 ಪ್ರಶಸ್ತಿ ನೀಡಲಾಗಿದೆ.
ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ ಪ್ರಿನ್ಸಿಪಾಲರಾದ ವಿದ್ವಾನ್ ಗಣಪತಿ ಭಟ್, ಡಾ.ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ.ಕೆ, ಅಶ್ವಥ್ ಎಸ್. ಎಲ್, ವಿಮಲ್ ರಾಜ್, ಗಣಪತಿ ಕೆ. ಎಸ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಶಿಕ್ಷಣ ಸೇವೆಗೆ ಪ್ರಶಸ್ತಿಯ ಗರಿ

2020ರಲ್ಲಿ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜು ಸ್ಥಾಪಿಸಿದ್ದು ಇಂದಿನ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಹೊಸ ಕಟ್ಟಡ, ಹೊಸ ಹಾಸ್ಟೆಲ್, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಅತ್ಯುತ್ತಮ ಸೌಲಭ್ಯ, ಪಠ್ಯ ಮತ್ತು ಶಿಕ್ಷಣ ಚಟುವಟಿಕೆ, ನೀಟ್, ಸಿಇಟಿ ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಕಂಪ್ಯೂಟರ್ ಜ್ಞಾನ, ಆನ್ಲೈನ್ ಶಿಕ್ಷಣ, ಹೊಸ ಬಗೆಯ ಕ್ರಾಶ್ ಕೋರ್ಸ್ ಸೇರಿ ಹತ್ತು ಹಲವು ವಿಶೇಷ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದು ರಾಜ್ಯದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಸುವರ್ಣ ಸಾಧಕರು ಪ್ರಶಸ್ತಿ ನೀಡಿ ಗೌರವಿಸಿದೆ.

ರಾಜಕೀಯ, ಸಿನಿಮಾ, ಮೀಡಿಯಾ ತಾರೆಯರಿಂದ ಪ್ರಶಸ್ತಿ ವಿತರಣೆ

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್, ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ, ನಟಿ ಚೈತ್ರಾ ಆಚಾರ್, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗ್ಡೆ, ಪ್ರಮುಖರಾದ ಅಜಿತ್ ಹನುಮಕ್ಕನವರ್, ಜೋಗಿ, ಮಲ್ಲಿಕಾರ್ಜುನಯ್ಯ ಸೇರಿ ಹಲವು ಗಣ್ಯರು ಇದ್ದರು.

 

Categories
ಬೆಂಗಳೂರು ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

– ಬೆಂಗಳೂರಿನಲ್ಲಿ ಹಿಟ್‌ ಆ್ಯಂಡ್ ರನ್‌ ಮಹಿಳೆ ಬಲಿ
– ಬೆಂಗಳೂರು : ಗಾಡಿ ಟಚ್‌ ಆಗಿದ್ದಕ್ಕೆ ಪ್ಯಾಂಟ್‌ ಬಿಚ್ಚಿದ ಕ್ಯಾಬ್‌ ಚಾಲಕ
– ಕೊಡಗು : ಕೊಡಗಿನಲ್ಲಿ ಅರಣ್ಯ ಸಿಬ್ಬಂದಿಯ ಅಟ್ಟಾಡಿಸಿದ ಒಂಟಿ ಸಲಗ
– ಮೈಸೂರು: ಮಿನಿ ಬಸ್‌ಗೆ ಟ್ಯಾಂಕರ್‌ ಡಿಕ್ಕಿ
– ಹಾಸನ : ಹಾಸನದಲ್ಲಿ ಹೋಬಳಿ ಕೇಂದ್ರಕ್ಕೆ ನುಗ್ಗಿದ ಆನೆ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಹಿಟ್​ ಆ್ಯಂಡ್​ ರನ್‌ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು 62 ವರ್ಷದ ಆಶಾರಾಣಿ ಎಂಬವರು ಮೃತಪಟ್ಟಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ. ಆಶಾರಾಣಿ ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ನಿವಾಸಿಯಾಗಿದ್ದು, ಅವರು ಶ್ರೀರಂಗಪಟ್ಟಣಕ್ಕೆ ಹೋಗಲು ಬೆಳಗಿನ‌ ಜಾವ 5:40ರ ಸುಮಾರಿಗೆ ಮನೆ ಬಿಟ್ಟು ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಯಾವುದೋ ವಾಹನ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಬೆಳಕು ಕಡಿಮೆ ಇದ್ದ ಕಾರಣ ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬುದು ಪತ್ತೆಯಾಗಿಲ್ಲ. ಇದೀಗ ಪೊಲೀಸರು ಆ ಭಾಗದಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಹಿಟ್​ ಆ್ಯಂಡ್​ ರನ್‌ ಮಾಡಿ ಹೋದ ವಾಹನವನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಕೆಲವು ಸಮಯದಿಂದ ಹಿಟ್​ ಆ್ಯಂಡ್​ ರನ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾತ್ರಿಯ ಹೊತ್ತು ಮತ್ತು ಮುಂಜಾನೆ ವಾಹನಗಳು ಅತಿವೇಗವಾಗಿ ಮತ್ತು ವಿವೇಚನೆ ಇಲ್ಲದೆ ಸಾಗಿ ಜೀವವನ್ನು ಬಲಿ ಪಡೆಯುತ್ತಿವೆ.

ಬೆಂಗಳೂರು : ಗಾಡಿ ಟಚ್‌ ಆಗಿದ್ದಕ್ಕೆ ಪ್ಯಾಂಟ್‌ ಬಿಚ್ಚಿದ ಕ್ಯಾಬ್‌ ಚಾಲಕ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ರೋಡ್ ರೇಜ್‌ ಪ್ರಕರಣವು ಮುಂದುವರಿದಿದೆ. ಕಾರಿನ ಗಾಡಿ ಟಚ್‌ ಆಗಿದ್ದಕ್ಕೆ ಸಿಟ್ಟಾದ ಕ್ಯಾಬ್‌ ಚಾಲಕನೊಬ್ಬ ಗಲಾಟೆ ಮಾಡಿದ್ದಾನೆ. ಒಂದು ಹೆಜ್ಜೆ ಮುಂದೆ ಹೋದ ಕ್ಯಾಬ್‌ ಚಾಲಕ ಗಲಾಟೆಯಲ್ಲಿ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಫೆ.9ರ ರಾತ್ರಿ ಘಟನೆ ನಡೆದಿದೆ. ಫ್ಲೈಓವರ್‌ನಲ್ಲಿ ಹೋಗುವಾಗ ಕ್ಯಾಬ್‌ಗೆ ಮತ್ತೊಂದು ಕಾರು ಟಚ್‌ ಆಗಿತ್ತು. ಇದರಿಂದ ಸಿಟ್ಟಿಗೆದ್ದು ಚಾಲಕ ಹಾಗೂ ಸವಾರನ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಈ ಸಿಟ್ಟಿಗೆದ್ದ ಕ್ಯಾಬ್‌ ಚಾಲಕ ಪ್ಯಾಂಟ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಚಾಲಕನ ವಿಕೃತಿಗೆ ಗಲಾಟೆ ಮತ್ತಷ್ಟು ಹೆಚ್ಚಾಗಿದೆ.

ಕ್ಯಾಬ್‌ ಚಾಲಕನ ವರ್ತನೆಗೆ ಇತರೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಕಾರಲ್ಲಿ ಮಹಿಳೆಯರು ಮಕ್ಕಳು ಇದ್ದರೂ, ಅವರ ಮುಂದೆ ಪ್ಯಾಂಟ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕಿಡಿಕಾರಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದು, ಕ್ಯಾಬ್‌ ಚಾಲಕನ ವರ್ತನೆಗೆ ನೆಟ್ಟಿಗೆರು ಕಿಡಿಕಾರಿದ್ದಾರೆ. ಈ ರೀತಿ ಅಸಹ್ಯ ವರ್ತನೆಯು ಮುಜುಗರವನ್ನುಂಟು ಮಾಡುತ್ತಿದೆ. ರಸ್ತೆಯಲ್ಲಿ ಓಡಾಡುವವರಿಗೆ, ಸವಾರರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಕೊಡಗಿನಲ್ಲಿ ಅರಣ್ಯ ಸಿಬ್ಬಂದಿಯ ಅಟ್ಟಾಡಿಸಿದ ಒಂಟಿ ಸಲಗ

ಕೊಡಗು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷವು ಮುಂದುವರಿದಿದೆ. ಆಹಾರವನ್ನು ಅರಸಿ ಬರುವ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಸದ್ಯ ಕೊಡಗಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಕಾಜೂರು ಅರಣ್ಯ ಪ್ರದೇಶದಿಂದ ಬಂದ ಮದವೇರಿದ ಕಾಡಾನೆಯು ದಾಳಿ ಮಾಡಿದೆ. ಪ್ರಾಣಪಾಯದಿಂದ ಆರ್‌ಆರ್‌ಟಿ ಸಿಬ್ಬಂದಿ , ಅರಣ್ಯ ರಕ್ಷಕ ಪಾರಾಗಿದ್ದಾರೆ. ಬೆಳಗ್ಗೆ ಕಾಡಾನೆಯು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್‌ನಲ್ಲಿತ್ತು. ಈ ಮಾಹಿತಿ ತಿಳಿದು ಸ್ಥಳಕ್ಕೆ ಆರ್‌ಆರ್‌ಟಿ ಮತ್ತು ಅರಣ್ಯ ಸಿಬ್ಬಂದಿ ತೆರಳಿದ್ದರು. ಈ ವೇಳೆ ಸಿಬ್ಬಂದಿಯನ್ನು ಕಂಡು ಆನೆಯು ದಾಳಿ ಮಾಡಿ, ಬೈಕ್ ಜಖಂಗೊಳಿಸಿದೆ. ನಂತರ ಎಸ್ಟೇಟ್‌ನಿಂದ ಅರಣ್ಯಕ್ಕೆ ವಾಪಸ್‌ ತೆರಳಿದೆ. ಅದೃಷ್ಟವಶಾತ್‌ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ ಮದವೇರಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಕಾಡಾನೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.

ಮಿನಿ ಬಸ್‌ಗೆ ಟ್ಯಾಂಕರ್‌ ಡಿಕ್ಕಿ

ಮೈಸೂರು : ಖಾಸಗಿ ಶಾಲಾ ಬಸ್‌ಗೆ ಟ್ಯಾಂಕರ್ ವಾಹನವು ಡಿಕ್ಕಿ ಹೊಡೆದಿದೆ. ಪರಿಣಾಮ ಶಾಲಾ ಮಕ್ಕಳಿಂದ ಬಸ್‌ ಉರುಳಿ ಬಿದ್ದಿದೆ. ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಸಿಇಟಿ ಖಾಸಗಿ ಶಾಲೆಗೆ ಸೇರಿ ಮಿನಿ ಬಸ್ ಇದಾಗಿದೆ. ಮೈಸೂರಿನ ಸಾಲಿಗ್ರಾಮ- ಭೇರ್ಯ ಹೆದ್ದಾರಿಯಲ್ಲಿ ಬರುವ ಕುರುಬಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ. ಟ್ಯಾಂಕರ್‌ ವಾಹನವು ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿತ್ತು. ಕುರುಬಹಳ್ಳಿ ಗ್ರಾಮದಿಂದ ಇದೇ ಮಾರ್ಗವಾಗಿ ಶಾಲಾ ಮಕ್ಕಳಿದ್ದ ಮಿನಿ ಬಸ್‌ ಮಿರ್ಲೆ ಗ್ರಾಮಕ್ಕೆ ಹೋಗುತ್ತಿತ್ತು. ಕುರುಬಹಳ್ಳಿ ಗೇಟ್ ಬಳಿ ಏಕಾಏಕಿ ಶಾಲಾ ಮಕ್ಕಳಿರುವ ಮಿನಿ ಬಸ್‌ಗೆ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಯಲ್ಲಿ ಮಿನಿ ಬಸ್‌ ಉರುಳಿ ಬಿದ್ದಿದೆ. ಶಾಲೆ ಬಸ್‌ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. ಬಸ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಗೊಂಡ ಮಕ್ಕಳನ್ನು ರವಾನಿಸಲಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನದಲ್ಲಿ ಹೋಬಳಿ ಕೇಂದ್ರಕ್ಕೆ ನುಗ್ಗಿದ ಆನೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ಒಂಟಿ ಸಲಗವೊಂದು ಹೋಬಳಿ ಕೇಂದ್ರಕ್ಕೆ ನುಗ್ಗಿದೆ. ತಡರಾತ್ರಿ ಗ್ರಾಮದೊಳಗೆ ಬಂದ ಕಾಡಾನೆ ಕಂಡು ಬೈಕ್‌ನಲ್ಲಿ ಬರುತ್ತಿದ್ದ ಸವಾರರು ಎದ್ದು ಬಿದ್ದು ಓಡಿದ್ದಾರೆ. ಇತ್ತ ನೈಟ್‌ ಬೀಟ್‌‌ನಲ್ಲಿದ್ದ ಪೊಲೀಸರು ಒಂಟಿಸಲಗವನ್ನು ಕಂಡು ಠಾಣೆಯೊಳಗೆ ಓಡಿ ಹೋಗಿದ್ದಾರೆ. ಒಂಟಿ ಸಲಗವು ರಸ್ತೆ ಬದಿ ನಿಂತಿದ್ದ ವಾಹನಗಳನ್ನು ಬೀಳಿಸಿ ಹೋಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದೆ. ಯಸಳೂರು ಗ್ರಾಮದ ಸಮೀಪವಿರುವ ಕಾಫಿ ತೋಟದಲ್ಲಿ ಕಾಡಾನೆ ಬೀಡುಬಿಟ್ಟಿದೆ. ಕಾಡಾನೆ ಇರುವ ಬಗ್ಗೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡಿದ್ದಾರೆ.

Categories
ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

ಬೀರೂರು: ಪಿಎಸ್‌ಐ ಬಳಸುತ್ತಿದ್ದ ಜೀಪ್‍ ವಾಪಸ್‌ ಪಡೆದ ಇಲಾಖೆ
-ಬಾಳೆಹೊನ್ನೂರು: ಯುವತಿಗೆ ಚಾಕು ಇರಿತ
-ಮೂಡಿಗೆರೆ: ಗಾಂಜಾ ಮಾರಾಟ ಓರ್ವ ಆರೋಪಿ ಬಂಧನ
-ಮೂಡಿಗೆರೆ: ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ ಎಸ್ಟೇಟ್ ಮಾಲೀಕ

NAMMUR EXPRESS NEWS
ಬೀರೂರು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದಂತೆ ಹದಿನೈದು ವರ್ಷಗಳ ಹಳೆಯ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿರುವ ಕಾರಣ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪೊಲೀಸ್ ಠಾಣೆಯ ಪಿ.ಎಸ್.ಐ ಬಳಸುತ್ತಿದ್ದ ಜೀಪ್ ಅನ್ನು ಹಿಂಪಡೆಯಲಾಗಿದ್ದು, 15 ದಿನಗಳು ಕಳೆದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಪಿ.ಎಸ್.ಐ ಬೈಕ್ ನಲ್ಲಿ ಸಂಚರಿಸುವಂತಾಗಿದೆ. ಬೀರೂರು ಠಾಣೆಗೆ 2007 ನೇ ಸಾಲಿನಲ್ಲಿ ಪಿ.ಎಸ್‌.ಐ ತಮ್ಮ ಸರಹದ್ದಿನಲ್ಲಿ ಸಂಚರಿಸಿ ಬಂದೋಬಸ್ತ್ ನೀಡಲು ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ 17 ವರ್ಷಗಳಿಂದ ಈ ವಾಹನ ಇಲಾಖೆಗೆ ಬಳಸಿಕೊಳ್ಳಲಾಗಿತ್ತು. ಆದರೆ ಈಗ ಅದು ಸುವ್ಯವಸ್ಥೆಯಲ್ಲಿಲ್ಲ ಎನ್ನುವ ಕಾರಣಕ್ಕೆ ವಾಹನವನ್ನು ಹಿಂಪಡೆಯಲಾಗಿದೆ.

ಪರಿಸರ ಮಾಲಿನ್ಯ ತಡೆಯಲು ವಾಹನ ಹಿಂಪಡೆದಿರುವುದು ಸರಿಯಷ್ಟೆ, ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಹಿಂಪಡೆದಿದ್ದರೆ ಯಾವುದೇ ಸಮಸ್ಯೆಗಳು ಇರುತ್ತಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು ಇನ್ನು ಈ ಕುರಿತು ಬೀರೂರು ಪೊಲೀಸ್ ಪಿ.ಎಸ್.ಐ ಸಜಿತ್ ಕುಮಾರ್ ಪ್ರತಿಕ್ರಿಯಿಸಿ, ವಾಯು ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ 15 ವರ್ಷ ಹಳೆಯ ವಾಹನಗಳನ್ನು ಚಲಾಯಿಸುವಂತಿಲ್ಲ ಎನ್ನುವುದು ಹಸಿರುಪೀಠದ ಆದೇಶವಾಗಿದ್ದು, ಇಲಾಖೆ ವತಿಯಿಂದ ಹೊಸ ವಾಹನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡುವವರೆಗೂ ದ್ವಿಚಕ್ರ ಅಥವಾ ಗಸ್ತು ವಾಹನವಾಗಿರುವ 112 ಬಳಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದರು. ಜಿಲ್ಲೆಯ 5-6 ಠಾಣೆಗಳ ಉಪನಿರೀಕ್ಷಕರ ಜೀಪುಗಳು ಅವಧಿ ಮೀರಿದೆ. ಅಂತಹ ವಾಹನಗಳನ್ನು ಗುರುತಿಸಿ ಹಿಂಪಡೆಯಲಾಗಿದೆ. ಕೆಲವೇ ದಿನಗಳಲ್ಲಿ ಹೊಸ ವಾಹನಗಳನ್ನು ನೀಡಲಾಗುತ್ತದೆ. ಅಲ್ಲಿಯವರೆಗೆ 112 ಮತ್ತು ಇ.ಆರ್‌.ಎಸ್‍.ಎಸ್ ವಾಹನಗಳನ್ನು ಬಳಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ತಿಳಿಸಿದರು.

ಬಾಳೆಹೊನ್ನೂರು: ಯುವತಿಗೆ ಚಾಕು ಇರಿತ

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಇಟ್ಟಿಗೆ ಸೀಗೋಡು ಗ್ರಾಮದ ಯುವತಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಗಳನ್ನು ಗುರವಾರ ಪೊಲೀಸರು ಬಂಧಿಸಿದ್ದಾರೆ. ಶೋಧನ್, ಕೃಷ್ಣ ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಮನೆಯಿಂದ ರಾತ್ರಿ ಹೊರ ನಿಂತಿದ್ದಾಗ ಯುವತಿಯ ಕುತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದರು. ಈ ಕುರಿತು ಯುವತಿಯ ಪೋಷಕರು ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಗುರವಾರ ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಾಳು ಯುವತಿ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಡಿಗೆರೆ: ಗಾಂಜಾ ಮಾರಾಟ ಓರ್ವ ಆರೋಪಿ ಬಂಧನ

ಮೂಡಿಗೆರೆ: ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ನಡೆದಿದೆ. ಚಾರ್ಮಾಡಿ ಮಾರ್ಗವಾಗಿ ಬಣಕಲ್ ಕಡೆಗೆ ಬರುತ್ತಿದ್ದ ವ್ಯಕ್ತಿಯನ್ನು PSI ಬಣಕಲ್ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ತರುವೆ ಗ್ರಾಮದಲ್ಲಿ ವಶಕ್ಕೆ ಪಡೆದುಕೊಂಡು, ಆರೋಪಿಯಿಂದ 85 ಗ್ರಾಂ ಗಾಂಜಾ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.

ಮೂಡಿಗೆರೆ: ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ ಎಸ್ಟೇಟ್ ಮಾಲೀಕ

ಮೂಡಿಗೆರೆ: ಕಾಫಿ ತೋಟದ ಎದುರು ಪೆಟ್ಟಿಗೆ ಅಂಗಡಿ ತೆರದಿದ್ದಕ್ಕೆ ಆಕ್ರೋಶಗೊಂಡ ತೋಟದ ಮಾಲೀಕ ಅಂಗಡಿಯನ್ನು ಧ್ವಂಸ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಕ್ಕಿ ಗ್ರಾಮದಲ್ಲಿ ನಡೆದಿದೆ. ವಿದ್ಯಾಶ್ರೀ ಸತ್ಯೇಂದ್ರ ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ ವ್ಯಕ್ತಿ. ಅಂಗವಿಕಲವಿರುವ ಪತ್ನಿಗಾಗಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು, ಪತಿ ರಾಜು 15 ದಿನಗಳ ಹಿಂದೆ ರಸ್ತೆ ಬದಿ ಅಂಗಡಿ ತೆರೆದಿದ್ದರು. ಇದೀಗ ಕಾಫಿ ತೋಟದ ಮಾಲೀಕ ವಿದ್ಯಾಶ್ರೀ ಸತ್ಯೇಂದ್ರ ಅಂಗಡಿಯಲ್ಲಿನ ಸಾಮಾಗ್ರಿಗಳನ್ನು ಚೆಲ್ಲಿ ಧ್ವಂಸಗೊಳಿಸಿದ್ದಾರೆ ಎಂದು ಪೆಟ್ಟಿಗೆ ಅಂಗಡಿಯ ಮಹಿಳೆ ಆರೋಪ ಮಾಡಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ

ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ
– ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಸಾಧನೆಗೈದ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ
– ತಾಲೂಕಿನ ಹಳ್ಳಿ-ಹಳ್ಳಿಗಳಿಂದ ಆಗಮಿಸಿದ ಸಾವಿರಾರು ಜನ

NAMMUR EXPRESS NEWS
ತೀರ್ಥಹಳ್ಳಿ : ಜಿಲ್ಲಾಡಳಿತ ಶಿವಮೊಗ್ಗ, ತಾಲೂಕು ಆಡಳಿತ ತೀರ್ಥಹಳ್ಳಿ, ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ ಹಾಗೂ ತಾಲೂಕು ಪಂಚಾಯಿತಿ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ತೀರ್ಥಹಳ್ಳಿಯಲ್ಲಿ ಫೆ.10 ರ ಇಂದು ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸಾರ್ವಜನಿಕರು ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೂಡ ಭಾಗವಹಿಸಿದ್ದರು. ಸರ್ಕಾರದ ಈ ಗ್ಯಾರಂಟಿ ಯೋಜನೆಯ ಬಗ್ಗೆ ಫಲಾನುಭವಿಗಳು ಮಾತನಾಡಿ ಈ ಯೋಜನೆಯಿಂದ ತುಂಬಾ ಅನುಕೂಲವಾಗಿದೆ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ ಎದ್ದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಯಾರಿಗೆ ಗ್ಯಾರಂಟಿ ಯೋಜನೆ ಸಿಕ್ಕಿಲ್ಲವೋ ಅವರಿಗೂ ಕೂಡ ಗ್ಯಾರಂಟಿ ಯೋಜನೆ ಸಿಗಬೇಕು ಎಂದು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಯಾರಿಗೆ ಈ ಯೋಜನೆ ತಲುಪಬೇಕೋ ಅವರಿಗೆ ತಲುಪಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ನಿಮ್ಮ ಸೇವೆ ಮಾಡಲು ನಾವು ಸದಾ ಸಿದ್ಧ ಎಂದರು. ಐದು ವರ್ಷ ನಮ್ಮ ಪಕ್ಷ ಇದ್ದೇ ಇರುತ್ತದೆ, ಪಕ್ಷದ ಎಲ್ಲ ಗ್ಯಾರಂಟಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಅವರು ಮಾತನಾಡಿ ಈ ಕಾರ್ಯಕ್ರಮ ಮಾಡುವ ಅನಿವಾರ್ಯತೆ ಇತ್ತು.

ಸರ್ಕಾರ 5 ಗ್ಯಾರಂಟಿಗಳನ್ನು ತಂದಂತಹ ಸಂದರ್ಭದಲ್ಲಿ ಪ್ರತಿ ವ್ಯಕ್ತಿಗೂ ಅದು ದೊರಕಿದೆಯಾ ಎನ್ನುವುದಕ್ಕೆ ಸರ್ಕಾರ ಈ ಒಂದು ಸಮಾವೇಶವನ್ನು ಮಾಡುವುದರ ಮೂಲಕ ಯಾರಿಗೆ ಯೋಜನೆ ತಲುಪಿಲ್ಲವೋ ಅವರಿಗೂ ತಲುಪಿಸುವಂತಹ ವ್ಯವಸ್ಥೆ ಮಾಡಿರುವುದು ಒಳ್ಳೆಯ ಕೆಲಸ. ದೊಡ್ಡ ಮಟ್ಟದ ಸಮಾವೇಶ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯ. ಈ ಯೋಜನೆಗಳಿಂದ ನಮಗೆ ತುಂಬಾ ಅನುಕೂಲವಾಗುತ್ತಿದೆ. ಮಾತಿನಂತೆ ನಡೆದ ಸಿದ್ದರಾಮಯ್ಯ ಸರ್ಕಾರ. ಈ ಯೋಜನೆಗಳನ್ನು ಕೊಟ್ಟಂತ ಸಿದ್ದರಾಮಯ್ಯ ಸರ್ಕಾರಕ್ಕೆ ಎಲ್ಲ ಮಹಿಳೆಯರ ಪರವಾಗಿ ನಾನು ಅಭಿನಂದನೆಯನ್ನು ತಿಳಿಸುತ್ತೇನೆ ಎಂದರು.

ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರೆಹಮತ್ತುಲ್ಲಾ ಅಸಾದಿ ಅವರು ಮಾತನಾಡಿ ಕರ್ನಾಟಕ ಸರ್ಕಾರದ ವತಿಯಿಂದ ಜಿಲ್ಲಾಡಳಿತ, ತಾಲೂಕು ಆಡಳಿತ, ಪಟ್ಟಣ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳನ್ನು ಎಲ್ಲ ಜನರಿಗೂ ತಲುಪಿಸುವಂತಹ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಐದು ಯೋಜನೆಗಳನ್ನು ತುಂಬಾ ಕಡಿಮೆ ಅವಧಿಯಲ್ಲಿ, ವ್ಯವಸ್ಥಿತವಾಗಿ ಸರ್ಕಾರ ಜಾರಿಗೆ ತಂದಿದೆ ಎಂದರು. ಶಿವಮೊಗ್ಗ ಡಿಸಿ ಗುರುದತ್ ಹೆಗ್ಡೆ ಅವರು ಮಾತನಾಡಿ ತೀರ್ಥಹಳ್ಳಿ ಒಂದು ಸುಂದರವಾದ ತಾಲೂಕು ಇಲ್ಲಿ ಬರಲು ಬಹಳ ಖುಷಿ ಆಗುತ್ತದೆ, ಗ್ಯಾರಂಟಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಇಲ್ಲಿಯವರೆಗೂ ಎಲ್ಲೂ ನಡೆದಿಲ್ಲ. ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಗೃಹ ಜ್ಯೋತಿಗೆ 4,58,848 ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. 105 ಕೋಟಿ ದೊರಕಿದೆ ಎಂದರು. ತೀರ್ಥಹಳ್ಳಿ ತಾಲೂಕಿನಲ್ಲಿ 38,718 ಯೋಜನೆ ಪಡೆದುಕೊಂಡಿದ್ದಾರೆ. ಅದೇ ರೀತಿ ಗೃಹಲಕ್ಷ್ಮಿಯಲ್ಲಿ ಶಿವಮೊಗ್ಗದಲ್ಲಿ 3,84,952 ಜನ ಫಲಾನುಭವಿಗಳು ಪಡೆದುಕೊಂಡಿದ್ದಾರೆ ಸುಮಾರು 350 ಕೋಟಿ ದೊರಕಿದೆ. 31ಕೋಟಿ 70 ಲಕ್ಷ ರೂ ಹಣವನ್ನು ತೀರ್ಥಹಳ್ಳಿಯಲ್ಲಿ ಗೃಹಲಕ್ಷ್ಮಿಗೆ ಪಡೆದುಕೊಂಡಿದ್ದಾರೆ. ಸುಮಾರು ಒಂದು ಕೋಟಿ 79 ಲಕ್ಷ 55 ಸಾವಿರ ಜನ ಮಹಿಳೆಯರು ಉಚಿತ ಬಸ್ ಬಳಸಿಕೊಂಡಿದ್ದಾರೆ. ಅದೇ ರೀತಿ ಅನ್ನ ಭಾಗ್ಯ ಯೋಜನೆಯಲ್ಲಿ ತೀರ್ಥಹಳ್ಳಿಯಲ್ಲಿ 27,154 ಫಲಾನುಭವಿಗಳಿದ್ದು ಸುಮಾರು ಒಂದೂವರೆ ಕೋಟಿ ಹಣ ಫಲಾನುಭವಿಗಳಿಗೆ ದೊರಕಿದೆ. ಎಲ್ಲ ಜನರಿಗೂ ಈ ಯೋಜನೆಯನ್ನು ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಡಿಸಿ ಗುರುದತ್ ಹೆಗ್ಡೆ, ಪ ಪಂ ಅಧ್ಯಕ್ಷರಾದ ಗೀತಾ ರಮೇಶ್, ಪ ಪಂ ಉಪಾಧ್ಯಕ್ಷರಾದ ರೆಹಮದ್ ಉಲ್ಲಾ ಅಸಾದಿ, ಕಾರ್ಯನಿರ್ವಹಣಾಧಿಕಾರಿ ಶೈಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹ ಸುಧಾಕರ್, ಡಿಸ್ಟಿಕ್ ಆಫೀಸರ್ ಸುಮಾ, ಡಿಸ್ಟಿಕ್ ಎಂಪ್ಲಾಯ್ಮೆಂಟ್ ಆಫೀಸರ್, ಪಟ್ಟಣ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಹಲವು ಸಂಘಟನೆಗಳ ಪ್ರಮುಖರು, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಅಧಿಕಾರಿ ವರ್ಗ, ಸದಸ್ಯರು ಸೇರಿದಂತೆ ಹಲವರು ಇದ್ದರು.