Categories
ತೀರ್ಥಹಳ್ಳಿ ಶಿವಮೊಗ್ಗ

ಮಂಜುನಾಥ ಗೌಡ ಪರ್ವ ಶುರು!

ಮಂಜುನಾಥ ಗೌಡ ಪರ್ವ ಶುರು!
– ಎಂಎಡಿಬಿ ಅಧ್ಯಕ್ಷರಾಗಿ ಆರ್‌ಎಂಎಂ ಅಧಿಕಾರ ಸ್ವೀಕಾರ
– ಜವಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದ ಆರ್‌ಎಂಎಂ
– ಸಾವಿರಾರು ಅಭಿಮಾನಿಗಳ ಅಭಿನಂದನೆ

NAMMUR EXPRESS NEWS
ಶಿವಮೊಗ್ಗ: ಕಾಂಗ್ರೆಸ್ ನಾಯಕ ತೀರ್ಥಹಳ್ಳಿಯ ಡಾ.ಆರ್.ಎಂ. ಮಂಜುನಾಥಗೌಡರು ಶಿವಮೊಗ್ಗದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ(ಎಂಎಡಿಬಿ)ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಇಡೀ ಶಿವಮೊಗ್ಗ ಬ್ಯಾನರ್, ಫ್ಲೆಕ್ಸ್ ಇಂದ ತುಂಬಿ ಹೋಗಿದ್ದವು. ಸಾವಿರಾರು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಆ‌ರ್.ಎಂ.ಮಂಜುನಾಥ ಗೌಡರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಎಂಬುವುದು ದಿವಂಗತ ಬಂಗಾರಪ್ಪನವರ ಕನಸು. ನನಗೆ ಕೊಟ್ಟ ಈ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಮಲೆನಾಡು ಅಭಿವೃದ್ಧಿ ಮಂಡಳಿ ಎಂಬುವುದು ಬಹುದೊಡ್ಡದಾದ ಪ್ರಾಧಿಕಾರವಾಗಿದೆ. ಇಲ್ಲಿ ಬೇಕಾದಷ್ಟು ಕೆಲಸವಿದೆ ಎಂಬುವುದು ನಿಜ. ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬುವುದು ಗೊತ್ತು. ಆರ್ಥಿಕ ಮುಗ್ಗಟ್ಟಿನ ಇಂತಹ ಪರಿಸ್ಥಿತಿಯಲ್ಲೂ ಪ್ರಾಧಿಕಾರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವೆ ಎಂದರು. ನನ್ನ ಮೇಲೆ ವಿಶೇಷ ವಿಶ್ವಾಸವಿಟ್ಟು, ಈ ಹುದ್ದೆ ನೀಡಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತೆಲ್ಲ ಸಚಿವರಿಗೆ ಅಭಿನಂದನೆಗಳು ಎಂದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಆ‌ರ್.ಎಂ. ಮಂಜುನಾಥ್‌ಗೌಡರ ದಕ್ಷತೆಗಾಗಿ ಈ ಹುದ್ದೆ ಬಂದಿದೆ. ಅವರ ಜವಬ್ದಾರಿ ಮತ್ತಷ್ಟು ಹೆಚ್ಚಿದೆ. ಅನೇಕ ಏಳುಬೀಳುಗಳ ನಡುವೆಯೂ ಆ‌ರ್.ಎಂ.ಮಂಜುನಾಥಗೌಡರು ಮತ್ತೆಮತ್ತೆ ಪುಟಿದೆದಿದ್ದಾರೆ. ಅವರು ಗಟ್ಟಿಕುಳ. ಅವರು ಈ ಹುದ್ದೆಯನ್ನು ಮತ್ತಷ್ಟು ವಿಸ್ತಾರಗೊಳಿಸಲಿ ಎಂದರು. ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾಬಸವರಾಜ್ ಮಾತನಾಡಿ, ಆ‌ರ್.ಎಂ.ಮಂಜುನಾಥಗೌಡರು ಯುವಕರಿಗೆ ಪ್ರೋತ್ಸಾಹ ನೀಡುತ್ತಾರೆ. ಅತ್ಯಂತ ಪ್ರೀತಿಯ ಮನುಷ್ಯ ಶಾಸಕರಾಗ ಬಯಸಿದ್ದರು ಆಗಲಿಲ್ಲ. ಆದರೆ, ೬೮ ಶಾಸಕರು ಕೂಡ ಅವರ ಮುಂದೆ ಕುಳಿತುಕೊಳ್ಳುತ್ತಾರೆ. ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು. ಶಾಸಕ ಬೇಳೂರ ಗೋಪಾಲಕೃಷ್ಣ ಮಾತನಾಡಿ, ತೀರ್ಥಹಳ್ಳಿಯ ಶಾಸಕರನ್ನಾಗಿ ಆ‌ರ್.ಎಂ.ಮಂಜುನಾಥ್‌ಗೌಡರನ್ನು ನೋಡಬೇಕೆಂಬುದೇ ನನ್ನ ಆಸೆ. ಮುಂದಿನ ದಿನಗಳಲ್ಲಿ ಇದು ಈಡೇರುತ್ತದೆ. ಗೌಡರ ಪರವಾಗಿ ನಾನು ಯಾವಾಗಲೂ ಇರುತ್ತೇನೆ ಎಂದರು.

ಆರ್.ಎಂ.ಮಂಜುನಾಥಗೌಡರ ಅಭಿಮಾನಿಗಳು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು, ಆರ್.ಎಂ.ಮಂಜುನಾಥಗೌಡರಿಗೆ ಶುಭ ಹರಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಎಂ. ಶ್ರೀಕಾಂತ್, ಶಿವಕುಮಾ‌ರ್, ಅನಿತಾಕುಮಾರಿ, ಮೈಲಾರಪ್ಪ ಹೆಚ್‌.ಸಿ. ಯೋಗೀಶ್,ಎಸ್.ಕೆ.ಮರಿಯಪ್ಪ, ಬಲ್ಕಿಶ್‌ಬಾನು, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ಗೋಣಿ ಮಾಲತೇಶ್, ಹೆಚ್.ಪಿ. ಗಿರೀಶ್, ಮಧು, ಪದ್ಮನಾಭ್ ಕೆಸ್ತೂರು, ಹೊಳೆಯಪ್ಪ ಮುಂತಾದವರಿದ್ದರು.

ತೀರ್ಥಹಳ್ಳಿಯ ಹಳ್ಳಿ ಹಳ್ಳಿಯಲ್ಲೂ ಫ್ಲೆಕ್ಸ್

ಮಂಜುನಾಥ ಗೌಡರ ಕರ್ಮ ಭೂಮಿ ತೀರ್ಥಹಳ್ಳಿಯಲ್ಲಿ ಪಟ್ಟಣ ಸೇರಿ ಹಳ್ಳಿಗಳಲ್ಲೂ ಫ್ಲೆಕ್ಸ್ ಬ್ಯಾನರ್ ರಾರಾಜಿಸುತ್ತಿವೆ.

Categories
ಮಲ್ನಾಡ್

ಮಲೆನಾಡಿನಲ್ಲಿ ಮದುವೆ ಸೀಸನ್ ಶುರು..!

ಮಲೆನಾಡಿನಲ್ಲಿ ಮದುವೆ ಸೀಸನ್ ಶುರು..!
– ಪಟ್ಟಣದಲ್ಲಿ ಹೆಚ್ಚಿದ ಜನಸಂಖ್ಯೆ: ಎಲ್ಲೆಡೆ ಟ್ರಾಫಿಕ್ ಜಾಮ್
– ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರು

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಮುಗಿಯುತ್ತಿದ್ದಂತೆ ಮದುವೆ ಸೀಸನ್ ಶುರುವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಎಲ್ಲೆಡೆ ಖರೀದಿ ಭರಟೆ ಜೋರಾಗಿ ನಡೆಯುತ್ತಿದೆ. ಒಂದು ಕಡೆ ಮದುವೆ ಶುಭ ಸಮಾರಂಭ ಕಾರ್ಯಕ್ರಮಗಳು ಶುರುವಾಗುತ್ತಿದ್ದರೆ ಇನ್ನೊಂದೆಡೆ ಖರೀದಿ ಕೂಡ ಜೋರಾಗಿ ನಡೆಯುತ್ತಿದೆ. ಅಡಿಕೆ ಕೊಯ್ಲು ಕೂಡ ಮುಗಿದಿರುವುದರಿಂದ ರೈತರು ಅಡಿಕೆ ಮಾರಿ ವಾಹನ, ಎಲೆಕ್ಟ್ರಾನಿಕ್ಸ್ ಐಟಂಸ್, ಆಭರಣ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಕಲ್ಯಾಣ ಮಂಟಪಗಳು ಸೋಲ್ಡ್ ಔಟ್ :

ಹಬ್ಬ-ಹರಿದಿನಗಳು ಮುಗಿಯುತ್ತಿದ್ದಂತೆ ಇದೀಗ ಮದುವೆ ಸೀಸನ್ ಜೋರಾಗಿದೆ. ಇದರಿಂದ ಪಟ್ಟಣದಲ್ಲಿ ಭರ್ಜರಿ ವ್ಯಾಪಾರ ವಹಿವಾಟು ಶುರುವಾಗಿದೆ. ಇತ್ತ ಕಲ್ಯಾಣ ಮಂಟಪಗಳು ಸೋಲ್ಡ್ ಔಟ್ ಆಗಿದ್ದರೆ, ಮದುವೆ ಡೆಕೋರೆಟರ್‌ಗಳು, ಅಡುಗೆ ಕಂಟ್ರಾಕ್ಟರ್ ಫುಲ್ ಬ್ಯುಸಿ ಆಗಿದ್ದಾರೆ. ಇನ್ನು ಬಟ್ಟೆ ಅಂಗಡಿ, ಆಭರಣದ ಅಂಗಡಿ, ಫ್ಯಾನ್ಸಿ ಸ್ಟೋರ್ ಸೇರಿದಂತೆ ಪಟ್ಟಣದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಒಟ್ಟಾರೆ, ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವವರಿಂದ ನಗರದ ಮಾರುಕಟ್ಟೆ ವಹಿವಾಟು ಜೋರಾಗಿ ನಡೆಯುತ್ತಿದೆ. ಇದರಿಂದ ವ್ಯಾಪಾರಸ್ಥರು ಲಾಭದ ನಿರೀಕ್ಷೆಯಲ್ಲಿ ಬಹಳ ಖುಷಿಯಾಗಿದ್ದಾರೆ.

Categories
ಅಡಿಕೆ-ದರ ತೀರ್ಥಹಳ್ಳಿ ಶಿವಮೊಗ್ಗ

ಅಡಿಕೆ ದರ 04-03-2024

ಅಡಿಕೆ ದರ
04-03-2024
ಸರಕು 44100 81396
ಬೆಟ್ಟೆ 42069 54299
ರಾಶಿ 32509 48099
ಗೊರಬಲು 15099 33129
Nammur Express

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ಅಯ್ಯೋ…ರಾಜ್ಯದಲ್ಲಿ ಬಿಸಿಗಾಳಿ..!

ಅಯ್ಯೋ…ರಾಜ್ಯದಲ್ಲಿ ಬಿಸಿಗಾಳಿ..!
– ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
– ಮಕ್ಕಳು, ವೃದ್ಧರು, ರೋಗಿಗಳಿಗೆ ಡೇಂಜರ್!

NAMMUR EXPRESS NEWS
ಬೆಂಗಳೂರು: ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದಲ್ಲಿ ಬಿಸಿಗಾಳಿ ಹೆಚ್ಚಾಗಿದ್ದು ಸಾರ್ವಜನಿಕ ಆರೋಗ್ಯ ಸಲಹೆಯನ್ನು ನೀಡಿದೆ. ಸಾಮಾನ್ಯ ಜನಸಂಖ್ಯೆಯ ಹೊರತಾಗಿ, ಶಿಶುಗಳು ಮತ್ತು ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ಮಾಡುವ ಜನರು, ಮಾನಸಿಕ ಮತ್ತು ದೈಹಿಕ ಕಾಯಿಲೆಗಳು, ವಿಶೇಷವಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ಜನರು ಮತ್ತು ತಂಪಾದ ವಾತಾವರಣದಿಂದ ಬಿಸಿ ವಾತಾವರಣಕ್ಕೆ ಬರುವ ಜನರು ಸೇರಿದಂತೆ ದುರ್ಬಲ ಜನಸಂಖ್ಯೆಯು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಜನರನ್ನು ಹೈಡೇಟೆಡ್ ಆಗಿರಲು, ಮೌಖಿಕ ಪುನರ್ಜಲೀಕರಣ ಪರಿಹಾರಗಳನ್ನು ಬಳಸಿ, ನಿಂಬೆ ನೀರು, ಮಜ್ಜಿಗೆ ಅಥವಾ ಲಸ್ಸಿ ಮತ್ತು ಹಣ್ಣಿನ ರಸವನ್ನು ಸ್ವಲ್ಪ ಉಪ್ಪು ಸೇರಿಸಿ ಸೇವಿಸಲು ಮತ್ತು ಹೆಚ್ಚಿನ ನೀರಿನ ಅಂಶವಿರುವ ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡುತ್ತದೆ.

ತಿಳಿ-ಬಣ್ಣದ ಸಡಿಲವಾದ ಹತ್ತಿ ಉಡುಪುಗಳನ್ನು ಧರಿಸುವುದರ ಜೊತೆಗೆ, ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಸಮಯದಲ್ಲಿ ಜನರು ತಮ್ಮ ತಲೆಯನ್ನು ಮುಚ್ಚಿಕೊಳ್ಳಲು ಮತ್ತು ಗಾಳಿಯಾಡುವ ಪಾದರಕ್ಷೆಗಳನ್ನು ಧರಿಸಲು ಸಲಹೆ ನೀಡಿದೆ. ಸಾಮಾನ್ಯವಾಗಿ, ನೇರ ಸೂರ್ಯನ ಬೆಳಕನ್ನು ನಿರ್ಬಂಧಿಸುವ ಮೂಲಕ ಮತ್ತು ಹಗಲಿನ ಹೊರಾಂಗಣ ಚಟುವಟಿಕೆಗಳನ್ನು ಸೀಮಿತಗೊಳಿಸುವ ಮೂಲಕ ಜನರು ಒಳಾಂಗಣದಲ್ಲಿ ಮತ್ತು ಚೆನ್ನಾಗಿ ಗಾಳಿ, ತಂಪಾದ ಸ್ಥಳಗಳಲ್ಲಿ ಉಳಿಯಲು ಕೇಳಿಕೊಳ್ಳುತ್ತದೆ. ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ಅನಾರೋಗ್ಯ ಪೀಡಿತರನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಅವರ ಆರೋಗ್ಯವನ್ನು ಪ್ರತಿದಿನವೂ ಮೇಲ್ವಿಚಾರಣೆ ಮಾಡಬೇಕು ಎಂದು ಇಲಾಖೆ ತಿಳಿಸಿದೆ.

Categories
ಕರಾವಳಿ ಕಾರ್ಕಳ ಮಂಗಳೂರು

ಸಮುದ್ರದ ಅಲೆಗೆ ಮೂವರು ಯುವಕರು ನೀರುಪಾಲು!

ಸಮುದ್ರದ ಅಲೆಗೆ ಮೂವರು ಯುವಕರು ನೀರುಪಾಲು!
– ಹುಡುಗರ ಹುಚ್ಚಾಟಕ್ಕೆ ಬದುಕೇ ಬಲಿ!
– ಕಾರ್ಕಳ: ಹೊಟೇಲ್‌ ಕಟ್ಟಡದಲ್ಲಿ ಅಗ್ನಿ ಅವಘಡ 1.20 ಲಕ್ಷ ರೂ ನಷ್ಟ

NAMMUR EXPRESS NEWS
ಮಂಗಳೂರು: ಮಂಗಳೂರು ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ನಾಪತ್ತೆಯಾಗಿರುವವರನ್ನು ಮಿಲನ್ (20), ಲಿಖಿತ್ (18) ಮತ್ತು ನಾಗರಾಜ್ (24) ಎಂದು ಗುರುತಿಸಲಾಗಿದೆ. ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಲಿಖಿತ್ ಕೈಕಂಬದ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ, ನಾಗರಾಜ್ ಬೈಕಂಪಾಡಿಯಲ್ಲಿರುವ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ಇವರು ಸ್ನೇಹಿತರಾಗಿದ್ದು, ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಬೃಹತ್‌ ಅಲೆ ಅಪ್ಪಳಿಸಿ ಕೊಚ್ಚಿಕೊಂಡು ಹೋಗಿದ್ದಾರೆ. ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಕಾರ್ಕಳ: ಹೊಟೇಲ್‌ ಕಟ್ಟಡದಲ್ಲಿ ಅಗ್ನಿ ಅವಘಡ 1.20 ಲಕ್ಷ ರೂ ನಷ್ಟ

ಕಾರ್ಕಳ: ಕಸಬಾ ಗ್ರಾಮದ ಕರಿಯಕಲ್ಲು ಜಂಕ್ಷನ್‌ ಬಳಿ ನಿರ್ಮಲ ರಾವ್‌ ಮಾಲಕತ್ವದ ಹೊಟೇಲ್‌ ಕಟ್ಟಡಕ್ಕೆ ಬೆಂಕಿ ತಗಲಿ ಅಪಾರ ಹಾನಿ ಸಂಭವಿಸಿದ ಘಟನೆ ಮಾ.3ರಂದು ಬೆಳಗಿನ ಜಾವ 4 ಗಂಟೆಗೆ ಸಂಭವಿಸಿದೆ. ಘಟನೆಯಿಂದ ಫ್ರಿಡ್ಜ್, ಗ್ರೈಂಡರ್, ಮಿಕ್ಸಿ, ಅಡುಗೆ ಪಾತ್ರೆ, ದಿನಸಿ ಸಾಮಗ್ರಿ, ವಿದ್ಯುತ್‌ ಸಂಪರ್ಕ ಇತ್ಯಾದಿ ಸುಟ್ಟು ಹೋಗಿವೆ. ಕಟ್ಟಡದ ಮೇಲ್ಛಾವಣಿ ಭಾಗಶಃ ಸುಟ್ಟು ಹೋಗಿದೆ. ಸ್ಥಳೀಯರ ಸಹಕಾರದಿಂದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಸುಮಾರು 1.20 ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ.

Categories
ಕರಾವಳಿ ಬೆಳಗಾವಿ ರಾಜ್ಯ ಶಿವಮೊಗ್ಗ ಹಾಸನ

ಕಡಬದಲ್ಲಿ ನಡೆದಿದೆ ಆ್ಯಸಿಡ್ ದಾಳಿ: ಮೂವರು ಗಂಭೀರ!

ಕಡಬದಲ್ಲಿ ನಡೆದಿದೆ ಆ್ಯಸಿಡ್ ದಾಳಿ: ಮೂವರು ಗಂಭೀರ!
– ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಘಟನೆ
– ಕಡಲೆ ರಾಶಿ ಮಾಡುವ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆ ಸಾವು..!
– ಬೆಳಗಾವಿಯ ಬೈಲಹೊಂಗಲ ತಾಲೂಕಿನಲ್ಲಿ ನಡೆದ ದುರಂತ
– ಮಹಿಳೆಯ ಕಾಲಿನ ಮೇಲೆ ಹತ್ತಿದ ಸಾರಿಗೆ ಬಸ್.!
– ಭದ್ರಾವತಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿ ಘಟನೆ
– ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‌: ವೃದ್ಧ ಸಾವು!

NAMMUR EXPRESS NEWS
ಕಡಬ: ಕಾಲೇಜು ಆವರಣದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್ ದಾಳಿ ಮಾಡಿರುವ ಘಟನೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ದಾಳಿಗೊಳಗಾದ ವಿದ್ಯಾರ್ಥಿನಿಯರನ್ನು ಅಲಿನ ಸಿಬಿ, ಅರ್ಚನಾ, ಅಮೃತ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಅಭಿನ್ ಎಂಬಾತನನ್ನು ಬಂಧಿಸಲಾಗಿದೆ.

ಕಡಲೆ ರಾಶಿ ಮಾಡುವ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆ ಸಾವು..!

ಬೆಳಗಾವಿ : ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕಡಲೆ ರಾಶಿ ಮಾಡುವಾಗ ಮಷಿನ್‌ಗೆ ಸಿಲುಕಿ ಮಹಿಳೆ ಮೃತಪಟ್ಟಿದ್ದಾಳೆ. ದೇವಲಾಪುರ ಗ್ರಾಮದ ಮಹಾದೇವಿ ಮಲ್ಲಪ್ಪ ಗಣಾಚಾರಿ (45) ಮೃತ ರೈತ ಮಹಿಳೆ. ಜಮೀನಿನಲ್ಲಿ ಕಡಲೆ ರಾಶಿ ಮಾಡುವಾಗ ಮಷಿನ್ ಒಳಗಡೆ ಸೀರೆ ಸಿಲುಕಿ ಈ ದುರ್ಘಟನೆ ನಡೆದಿದೆ. ಮಷಿನ್ ಒಳಗೆ ಮಹಿಳೆ ಸಿಲುಕುವುದು ಕಂಡ ಕುಟುಂಬಸ್ಥರು ಮಷಿನ್ ಬಂದ್‌ ಮಾಡಿ ಮಹಿಳೆಯನ್ನು ಹೊರ ತೆಗೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯ ಉಸಿರೆಳೆದಿದ್ದಾರೆ. ಮಹಿಳೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಹಿಳೆಗೆ ಪತಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಪ್ರಕರಣ ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಮಹಿಳೆಯ ಕಾಲಿನ ಮೇಲೆ ಹತ್ತಿದ ಸಾರಿಗೆ ಬಸ್..!

ಶಿವಮೊಗ್ಗ: ಸಾರಿಗೆ ಬಸ್​ ಮಹಿಳೆಯ ಕಾಲಿನ ಮೇಲೆ ಹತ್ತಿದ ಘಟನೆ ಭದ್ರಾವತಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ನೋಡ ನೋಡುತ್ತಿದ್ದಂತೆ ಮಹಿಳೆಯ ಕಾಲಿನ ಮೇಲೆ ಸಾರಿಗೆ ಬಸ್ ಹತ್ತಿದ್ದು, ಅಪಘಾತದಲ್ಲಿ ಭದ್ರಾವತಿ ಪಟ್ಟಣದ ನಿವಾಸಿಯಾಗಿರುವ ಚಂದ್ರಬಾಯಿ ಎನ್ನುವವರಿಗೆ ಗಂಭೀರ ಗಾಯವಾಗಿದೆ. ಕೂದಲೆಳಿಯ ಅಂತರದಲ್ಲಿ ಪ್ರಾಣಾಪಾಯದಿಂದ ಮಹಿಳೆ ಪಾರಾಗಿದ್ದಾರೆ. ಈ ಘಟನೆ ಇದೀಗ ಎಲ್ಲೆಡೆ ವೈರಲ್ ಆಗಿದೆ.

ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‌: ವೃದ್ಧ ಸಾವು!

ತುಮಕೂರು: ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೂವರು ಮಹಿಳೆಯರು ಸಾವಿಗೀಡಾಗಿದ್ದ ಘಟನೆ ಮಾಸುವ ಮುನ್ನವೇ ಪಾವಗಡದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ನಕಲಿ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್‌ನಿಂದ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಪಾವಗಡ ತಾಲೂಕಿನ ಕೊತ್ತೂರು ಮೂಲದ ಕೋಟೆ ಚಿತ್ತಯ್ಯ (58) ಮೃತ ದುರ್ದೈವಿ. ಅಮಾಯಕ ವೃದ್ಧನನ್ನು ನಕಲಿ ವೈದ್ಯ ಮಾರುತಿ ಎಂಬಾತ ಬಲಿ ತೆಗೆದುಕೊಂಡಿದ್ದಾನೆ. ತುಮಕೂರಿನ ಪಾವಗಡ ತಾಲೂಕು ಕಿಲಾರ್ಲಹಳ್ಳಿ ಗ್ರಾಮದಲ್ಲಿ ಮಾರುತಿ ಎಂಬಾತ ಕ್ಲಿನಿಕ್ ನಡೆಸುತ್ತಿದ್ದ. ಡಾಕ್ಟರ್‌ ಕೊಟ್ಟ ಇಂಜೆಕ್ಷನ್‌ಗೆ ಕ್ಷಣ ಮಾತ್ರದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮೃತ ಕುಟುಂಬಸ್ಥರು ವೈದ್ಯನ ವಿರುದ್ಧ ದೂರು ನೀಡಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ತೀರ್ಥಹಳ್ಳಿಯ ಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ
– ಪಟ್ಟಣ ಪಂಚಾಯತ್ ಹೊಸ ಕಟ್ಟಡ, ರಸ್ತೆ ಉದ್ಘಾಟನೆ
– ಮನೆ ಮನೆಗೂ ಡಸ್ಟ್ ಬಿನ್ ಭಾಗ್ಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮಾ.4ರಂದು ಚಾಲನೆ ಸಿಗಲಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ಕಾರ್ಪರೇಷನ್ ಬ್ಯಾಂಕ್ ಪಕ್ಕದ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿ ನೂತನ ಕಟ್ಟಡ ಉದ್ಘಾಟನೆ ನಡೆಯಲಿದೆ. ಸಮಾರಂಭಕ್ಕೆ ಅಧ್ಯಕ್ಷರಾದ ಗೀತಾ ರಮೇಶ್, ಉಪ ಅಧ್ಯಕ್ಷರಾದ ರೈಹಮಾತ್ ಉಲ್ಲಾ ಅಸಾದಿ ಮತ್ತು ಮುಖ್ಯ ಅಧಿಕಾರಿ ಕುರಿಯಕೋಸ್ ಸರ್ವರನ್ನು ಸ್ವಾಗತಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಅಜಾದ ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿದ ವಾಣಿಜ್ಯ ಕಾಂಪ್ಲೆಕ್ಸ್ ಮೊದಲನೇ ಮಹಡಿ ನೂತನ ಕಟ್ಟಡ, ಗಾಂಧಿನಗರದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳು ಮತ್ತು ಕಸ ವಿಲೇವಾರಿ ಯೋಜನೆ ಅಡಿಯಲ್ಲಿ ಮಲ್ಟಿ ಮಿಲಿನಿಯಂ ಪ್ಲಸ್ ಸಿಟಿ ಯೋಜನೆ ಅಡಿ ಮನೆ, ಮನೆಗೆ ಡಸ್ಟ್ ಬಿನ್ ವಿತರಣಾ ಸಮಾರಂಭ ನಡೆಯಲಿದ್ದು

ಈ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಪೌರಾಡಳಿತ ಸಚಿವರಾದ ರಹೀಮ್ ಖಾನ್, ಶಾಸಕರಾದ ಆರಗ ಜ್ಞಾನೇಂದ್ರ ,ಲೋಕಸಭಾ ಸದಸ್ಯರಾದ ಬಿ. ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್ .ಬೋಜೇಗೌಡ , ಎಸ್. ರುದ್ರೇಗೌಡ, ಭಾರತೀ ಶೆಟ್ಟಿ, ಬಿ.ಎಸ್. ಅರುಣ್, ಮಲ್ನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್. ಎಂ. ಮಂಜುನಾಥಗೌಡ ಮತ್ತು ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಸಿದ್ದಲಿಂಗ ರೆಡ್ಡಿ ಭಾಗವಹಿಸಲಿದ್ದಾರೆ. ಈ ಎಲ್ಲಾ ಶುಭ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರಹಮಾತುಲಾ ಅಸಾದಿ ಮತ್ತು ಮುಖ್ಯ ಅಧಿಕಾರಿಗಳಾದ ಕುರಿಯ ಕೋಸ್ ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು ಸಾರ್ವಜನಿಕರನ್ನು ಪಟ್ಟಣ ಪಂಚಾಯಿತಿ ತೆರಿಗೆದಾರರನ್ನು ಆಹ್ವಾನಿಸಿದ್ದಾರೆ.

Categories
ಬೆಂಗಳೂರು ರಾಜ್ಯ

ಪಡಿತರ ಚೀಟಿದಾರರಿಗೆ ಬಿಗ್ ಶಾಕ್..!

ಪಡಿತರ ಚೀಟಿದಾರರಿಗೆ ಬಿಗ್ ಶಾಕ್..!
– ಅನ್ನ ಭಾಗ್ಯ ಹಣ ಜಮಾ ಆಗಲ್ಲ

NAMMUR EXPRESS NEWS
ಜನರು ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದು, ಕಳೆದ ಆರು ತಿಂಗಳಿನಿಂದ ಪಡಿತರವನ್ನು ಪಡೆದುಕೊಳ್ಳದೇ ಸರ್ಕಾರದ ಇತರ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ, ಇಂತಹ ಪಡಿತರದಾರರನ್ನು ಗುರುತಿಸಿ ಅವರ ರೇಷನ್ ಕಾರ್ಡ್ ತಕ್ಷಣ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ.ಈಗಾಗಲೇ ಲಕ್ಷಾಂತರ ಪಡಿತರ ಕಾರ್ಡ್ ರದ್ದು ಮಾಡಲಾಗಿದೆ. ಅಷ್ಟೇ ಅಲ್ಲದೆ ಅವರ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಸಹ ಜಮಾ ಆಗುವುದಿಲ್ಲ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಹಿರಿಯ ರಾಜಕಾರಣಿ ರಾಮಕೃಷ್ಣ ಗೌಡ ಇನ್ನಿಲ್ಲ

ತೀರ್ಥಹಳ್ಳಿಯ ಹಿರಿಯ ರಾಜಕಾರಣಿ ರಾಮಕೃಷ್ಣ ಗೌಡ ಇನ್ನಿಲ್ಲ
– ಯುವ ಮುಖಂಡ ಶಂಕರಮನೆ ಅರುಣ್ ಅವರಿಗೆ ಪಿತೃ ವಿಯೋಗ
– ಇಂದು ಸಂಜೆ ಅಂತ್ಯಕ್ರಿಯೆ: ಗಣ್ಯರ ಸಂತಾಪ

NAMMUR EXPRESS NEWS
ಕಾಂಗ್ರೆಸ್ ಮುಖಂಡರು ಹಾಗೂ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಆದ ಯುವ ಮುಖಂಡ ಶಂಕರಮನೆ ಅರುಣ ಇವರ ತಂದೆಯವರಾದ ರಾಮಕೃಷ್ಣ ಗೌಡರು ಸೋಮವಾರ ಬೆಳಿಗ್ಗೆ 6 ಗಂಟೆಗೆ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸೋಮವಾರ ಸಂಜೆ 4 ಗಂಟೆಗೆ ಸ್ವಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.
ಗ್ರಾಮಸ್ಥರು, ದುಃಖತಪ್ತ ಕುಟುಂಬದವರು

Categories
ಉಡುಪಿ ಕರಾವಳಿ

ಉಡುಪಿ: ಗುಂಡು ಹಾರಿಸಿ ಕೊಲೆ!

ಉಡುಪಿ: ಗುಂಡು ಹಾರಿಸಿ ಕೊಲೆ!
– ಜನತೆಯನ್ನು ಬೆಚ್ಚಿ ಬೀಳಿಸಿದ ಘಟನೆ
– ಅಪರಿಚಿತನಿಂದ ಶೂಟ್ ಔಟ್: ಏನಿದು ಘಟನೆ?

NAMMUR EXPRESS NEWS
ಉಡುಪಿ: ಕರಾವಳಿಯಲ್ಲಿ ಗುಂಡಿನ ದಾಳಿಗೆ ವ್ಯಕ್ತಿಯೊಬ್ಬ ಬಲಿ ಆಗಿದ್ದಾನೆ. ಹನೆಹಳ್ಳಿಯ ನಿವಾಸಿ ಕೃಷ್ಣ ಎಂಬುವನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದ ಘಟನೆ ಬ್ರಹ್ಮಾವರ ಸಮೀಪದ ಬಾರ್ಕೂರಿನ ಹನೆಹಳ್ಳಿಯಲ್ಲಿ ನಡೆದಿದೆ. ನಾಲ್ಕು ಸುತ್ತು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಅದರ ಜೊತೆ ಮೇಲ್ನೋಟಕ್ಕೆ ಪಿಸ್ತೂಲ್ ನಿಂದ ಶೂಟ್ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಫಾರೆನ್ಸಿಕ್ ವರದಿಯಿಂದ ಮಾಹಿತಿ ತಿಳಿಯಬೇಕಿದೆ. ಕೃಷ್ಣ ಅವರು ಸೆಂಟ್ರಿಂಗ್ ಮೊದಲಾದ ಕೆಲಸ ಮಾಡುತ್ತಿದ್ದು ಎಂದಿನಂತೆ ರಾತ್ರಿ ಮನೆಗೆ ಬಂದು ಸುಮಾರು 9.30 ರ ಸುಮಾರಿಗೆ ಊಟ ಮಾಡುತ್ತಿರುವಾಗ ದುಷ್ಕರ್ಮಿಗಳು ಆಗಮಿಸಿ ಶೂಟೌಟ್ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯರಿಗೆ ರಾತ್ರಿ ಯಾವುದೋ ಶಬ್ದ ಕೇಳಿದ್ದು ಪಟಾಕಿ ಶಬ್ದ ಎಂದು ಸುಮ್ಮನಾಗಿದ್ದರು. ಮುಂಜಾನೆ ಘಟನೆ ಬೆಳಕಿಗೆ ಬಂದಿದೆ. ಕೃಷ್ಣ ವಿವಾಹಿತರಾಗಿದ್ದು ಮನೆಯಲ್ಲಿ ಒಬ್ಬರೇ ವಾಸವಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಬ್ರಹ್ಮಾವರ ಸಿಪಿಐ ಹಾಗೂ ಪೊಲೀಸರ ತಂಡ ಭೇಟಿ ನೀಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ