Categories
ರಾಜ್ಯ

ಶೃಂಗೇರಿಗೆ ರೈಲ್ವೆ ಸಂಪರ್ಕಕ್ಕೆ ಬೇಡಿಕೆ ಇಟ್ಟ ಹೆಚ್‌.ಡಿ.ಡಿ

ಶೃಂಗೇರಿಗೆ ರೈಲ್ವೆ ಸಂಪರ್ಕಕ್ಕೆ ಬೇಡಿಕೆ ಇಟ್ಟ ಹೆಚ್‌.ಡಿ.ಡಿ

* ಬಾಂಬೆ – ಚೆನ್ನೈ ರೈಲು ಶೃಂಗೇರಿ ಮಾರ್ಗವಾಗಿ ಸಂಚರಿಸಲಿ
* ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಪ್ರಧಾನಿ

NAMMUR EXPRESS NEWS
ದೆಹಲಿ: ಮಲೆನಾಡಿನ ಜಗತ್ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣ ಶೃಂಗೇರಿಗೆ ರೈಲ್ವೇ ಸಂಪರ್ಕ ಕಲ್ಪಿಸುವಂತೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಧ್ವನಿ ಎತ್ತಿದ್ದಾರೆ.
ರಾಜ್ಯಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ” ಬಾಂಬೆ ಟು ಚೆನ್ನೈ ರೈಲ್ವೇ ಸಂಪರ್ಕವನ್ನು ಶೃಂಗೇರಿ ಮೂಲಕ ಸಂಪರ್ಕಿಸುವಂತೆ ಮಾಡುವುದು. ಈಗಾಗಲೇ ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೆ ರೈಲ್ವೇ ಸಂಪರ್ಕವಿದ್ದು ಅಲ್ಲಿಂದ ಶಿವಮೊಗ್ಗ – ದಾವಣಗೆರೆಗೆ ಸಂಪರ್ಕ ಕಲ್ಪಿಸಿದರೆ ದಾವಣಗೆರೆಯಿಂದ ಮುಂಬೈಗೆ ಸಂಪರ್ಕವಿದೆ, ಈ ಮಾರ್ಗವನ್ನು ನಿರ್ಮಿಸಿದ್ದೇ ಆದರೆ ಶೃಂಗೇರಿಗೆ ರೈಲ್ವೇ ಸಂಪರ್ಕ ನೀಡಿದಂತಾಗುತ್ತದೆ ಇದರಿಂದ ದೇಶದ ಎಲ್ಲಾ ರಾಜ್ಯಗಳಿಂದ ಪವಿತ್ರ ಕ್ಷೇತ್ರ ಶೃಂಗೇರಿಗೆ ಆಗಮಿಸುವ ಯಾತ್ರಿಗಳು,ಪ್ರವಾಸಿಗರಿಗೆ ಅನುಕೂಲವಾಗಲಿದೆ.ಆದ್ದರಿಂದ ಇಲಾಖೆಯ ಅಧಿಕಾರಿಗಳಿಂದ ಈ ಮಾರ್ಗದ ಸರ್ವೇ ನಡೆಸಿ ರೈಲ್ವೇ ಸಂಪರ್ಕ ಕಲ್ಪಿಸುವ ಬಗ್ಗೆ ಗಮನಹರಿಸಿ” ಎಂದು ತಮ್ಮ ಬೇಡಿಕೆ ಇಟ್ಟಿದ್ದಾರೆ.
ಈ ಮೂಲಕ ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ ಶೃಂಗೇರಿಗೆ ರೈಲ್ವೇ ಸಂಪರ್ಕ ಸಿಗುವ ಆಸೆ ಚಿಗುರೊಡೆದಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಶುಭ ದಿನವಾಗಲಿದೆ. ಆದರೆ, ನೀವು ಖರ್ಚಿನ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಕೋಪವನ್ನು ತಪ್ಪಿಸಿ. ಅಧಿಕಾರಿಗಳೊಂದಿಗೆ ಸಮನ್ವಯವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗಬಹುದು. ಪ್ರಯಾಣದ ಸಾಧ್ಯತೆಗಳಿವೆ. ಇದರೊಂದಿಗೆ ನೀವು ನಿಮ್ಮ ವೃತ್ತಿಜೀವನದಲ್ಲಿ ಪ್ರಮುಖ ಸಾಧನೆಗಳನ್ನು ಸಾಧಿಸುವಿರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

** ವೃಷಭ ರಾಶಿ :
ವೃಷಭ ರಾಶಿಚಕ್ರದ ಜನರಿಗೆ ಇಂದು ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಆತ್ಮವಿಶ್ವಾಸವೂ ಹೇರಳವಾಗಿರುತ್ತದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೆಲಸದ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಬರಲಿದೆ. ಕೆಲಸದ ಒತ್ತಡ ಇರಬಹುದು.

** ಮಿಥುನ ರಾಶಿ :
ಮಿಥುನ ರಾಶಿಚಕ್ರದ ಜನರು ಇಂದು ಸಂತೋಷವಾಗಿರುತ್ತಾರೆ. ಆದರೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಕೆಲಸದಲ್ಲಿ ಸವಾಲುಗಳು ಮತ್ತು ತೊಂದರೆಗಳು ಎದುರಾಗಬಹುದು. ಆದಾಯ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಇದರೊಂದಿಗೆ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ.

** ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರಿಗೆ ಇಂದು ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಕೂಡ ಚಂಚಲವಾಗಿರುತ್ತದೆ. ನೀವು ಒಬ್ಬ ರಾಜಕಾರಣಿಯನ್ನು ಭೇಟಿಯಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಬಹುದು. ನಿಮಗೆ ಹತ್ತಿರವಿರುವ ಯಾರೊಬ್ಬರಿಂದ ಅಚ್ಚರಿ ಸಿಗಬಹುದು. ಸ್ನೇಹಿತರ ಸಹಾಯದಿಂದ ಆರ್ಥಿಕ ಲಾಭದ ಲಕ್ಷಣಗಳು ಕಂಡುಬರುತ್ತವೆ.

** ಸಿಂಹ ರಾಶಿ :
ಸಿಂಹ ರಾಶಿಚಕ್ರದ ಜನರು ಇಂದು ತಮ್ಮ ಮಾತಿನಲ್ಲಿ ಸಿಹಿಯನ್ನು ಹೊಂದಿರುತ್ತಾರೆ. ಆದರೆ, ನಿಮ್ಮ ಸಂಗಾತಿಯ ಆರೋಗ್ಯ ಮತ್ತು ಒಡನಾಟದ ಬಗ್ಗೆ ನೀವು ಚಿಂತಿತರಾಗಬಹುದು. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಖರ್ಚುಗಳು ಹೆಚ್ಚಾಗಲಿವೆ. ಹೆಚ್ಚು ಓಡಾಡುವುದು ಇರುತ್ತದೆ. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ನಿಮ್ಮ ಪ್ರೀತಿಯ ಜೀವನಕ್ಕೆ ವಿಶೇಷ ವ್ಯಕ್ತಿಯ ಆಗಮನವಾಗುತ್ತದೆ.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರ ಆದಾಯ ಹೆಚ್ಚಾಗುವ ಲಕ್ಷಣಗಳಿವೆ. ವ್ಯವಹಾರದಲ್ಲಿ ವಿಸ್ತರಣೆ ಇರಬಹುದು. ಆದಾಗ್ಯೂ, ಅನಗತ್ಯ ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಓದು ಮತ್ತು ಬರವಣಿಗೆಗೆ ಸಂಬಂಧಿಸಿದ ಕೆಲಸಕ್ಕೆ ಇಂದು ಶುಭ ದಿನವಾಗಲಿದೆ. ಇಂದು ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

** ತುಲಾ ರಾಶಿ :
ತುಲಾ ರಾಶಿಚಕ್ರದ ಜನರ ಮನಸ್ಸು ಸಂತೋಷವಾಗಿರುತ್ತದೆ ಆದರೆ ಅವರ ಮನೋಸ್ಥೈರ್ಯ ಕಡಿಮೆಯಿರುತ್ತದೆ. ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಅದನ್ನು ಸದ್ಯಕ್ಕೆ ಮುಂದೂಡಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ವ್ಯವಹಾರದಲ್ಲಿ ಅಡೆತಡೆಗಳು ಎದುರಾಗಬಹುದು. ನಿಮ್ಮ ತಂದೆಯಿಂದ ನಿಮಗೆ ಹಣ ಸಿಗಬಹುದು. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.

** ವೃಶ್ಚಿಕ ರಾಶಿ :
ಇಂದು ವೃಶ್ಚಿಕ ರಾಶಿಚಕ್ರದ ಜನರಿಗೆ ಇಂದು ಅದೃಷ್ಟದ ಬೆಂಬಲ ಸಿಗುತ್ತದೆ. ಅದೃಷ್ಟವಶಾತ್ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಆದರೆ, ನಿಮ್ಮ ಮನಸ್ಸು ಯಾವುದೋ ವಿಷಯದ ಬಗ್ಗೆ ಅತೃಪ್ತವಾಗಿರಬಹುದು. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಕೂಡ ತೊಂದರೆಗೊಳಗಾಗಬಹುದು. ವ್ಯವಹಾರದಲ್ಲಿಯೂ ಏರಿಳಿತಗಳು ಕಂಡುಬರಬಹುದು.

** ಧನಸ್ಸು ರಾಶಿ :
ಇಂದು ಧನು ರಾಶಿ ಜನರಿಗೆ ಇಂದು ಶುಭ ದಿನವಾಗಲಿದೆ. ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಬೆಂಬಲ ಸಿಗುತ್ತದೆ. ಅದರೆ, ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಅನಗತ್ಯ ವಾದಗಳನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗಬಹುದು.

** ಮಕರ ರಾಶಿ :
ಇಂದು ಮಕರ ರಾಶಿಯವರಿಗೆ ಏರಿಳಿತಗಳಿಂದ ತುಂಬಿದ ದಿನವಾಗಿರುತ್ತದೆ. ಅತಿಯಾದ ಉತ್ಸಾಹದಿಂದ ಇರುವುದನ್ನು ತಪ್ಪಿಸಿ. ಸ್ನೇಹಿತರ ಸಹಾಯದಿಂದ ವ್ಯಾಪಾರ ಅವಕಾಶಗಳು ಲಭ್ಯವಾಗಬಹುದು. ನಿಮ್ಮ ತಾಯಿಯಿಂದ ನಿಮಗೆ ಹಣ ಸಿಗಬಹುದು. ವ್ಯವಹಾರದಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳಿವೆ. ಇಂದು ನೀವು ಆಸ್ತಿ ಸಂಬಂಧಿತ ವಿವಾದಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಆಧ್ಯಾತ್ಮದಲ್ಲಿ ಆಸಕ್ತಿ ಇರುತ್ತದೆ.

** ಕುಂಭ ರಾಶಿ :
ಕುಂಭ ರಾಶಿಯವರಿಗೆ ಇಂದು ವೃತ್ತಿ ಪ್ರಗತಿಗೆ ಹಲವು ಅವಕಾಶಗಳು ಸಿಗಲಿವೆ. ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಲಿವೆ. ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ಸಂತೋಷ ಹೆಚ್ಚಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಬಹುದು. ಖರ್ಚುಗಳು ಹೆಚ್ಚಾಗುತ್ತವೆ. ಹಣಕಾಸಿನ ವಹಿವಾಟುಗಳ ಮೇಲೆ ನಿಗಾ ಇರಿಸಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯಬಹುದು.

** ಮೀನ ರಾಶಿ :
ಮೀನ ರಾಶಿಯವರಿಗೆ ಇಂದು ಹೆಚ್ಚಿನ ಖರ್ಚು ಇರುತ್ತದೆ. ತಲೆನೋವು ಅಥವಾ ಕಣ್ಣಿನ ನೋವು ಕೂಡ ಉಂಟಾಗಬಹುದು. ಅಜ್ಞಾತ ಭಯವು ನಿಮ್ಮನ್ನು ಹಿಂಸಿಸುತ್ತದೆ. ಯಾವುದೇ ವಸ್ತುವನ್ನು ಕಳೆದುಕೊಳ್ಳುವ ಅಪಾಯವಿದೆ. ಆರ್ಥಿಕವಾಗಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಉತ್ತಮ ದಿನವಾಗಿದೆ. ಇದರೊಂದಿಗೆ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ.

Categories
ತೀರ್ಥಹಳ್ಳಿ ಸಿನಿಮಾ

ತೀರ್ಥಹಳ್ಳಿ ಹುಡುಗರ ಸಿನಿಮಾ ‘ಅಪಾಯವಿದೆ ಎಚ್ಚರಿಕೆ’ ತೀರ್ಥಹಳ್ಳಿ ಯಲ್ಲಿ ರೀ ರಿಲೀಸ್

ತೀರ್ಥಹಳ್ಳಿ ಹುಡುಗರ ಸಿನಿಮಾ ‘ಅಪಾಯವಿದೆ ಎಚ್ಚರಿಕೆ’ ತೀರ್ಥಹಳ್ಳಿ ಯಲ್ಲಿ ರೀ ರಿಲೀಸ್
– ರಾಜ್ಯದ ಸಿನಿ ವೀಕ್ಷಕರಿಂದ ಮೆಚ್ಚುಗೆ ಪಡೆದ ಸಿನಿಮಾ
– ಜನರ ಒತ್ತಾಯದ ಮೇರೆಗೆ ತೀರ್ಥಹಳ್ಳಿ ವಿನಾಯಕ ಚಿತ್ರ ಮಂದಿರದಲ್ಲಿ ತೆರೆಗೆ

NAMMUR EXPRESS NEWS
ತೀರ್ಥಹಳ್ಳಿ : ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಸಿನಿಮಾ ‘ಅಪಾಯವಿದೆ ಎಚ್ಚರಿಕೆ ‘ಫೆಬ್ರವರಿ 28ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿದ್ದು ಇದೀಗ ಅವರ ತವರು ತೀರ್ಥಹಳ್ಳಿಯಲ್ಲಿ ಮತ್ತೆ ಅದ್ದೂರಿಯಾಗಿ ಪ್ರದರ್ಶನ ಕಾಣಲಿದೆ.
ಹಾರರ್, ಥ್ರಿಲ್ಲರ್ ಒಳಗೊಂಡಿರುವ ಸಿನಿಮಾವನ್ನು ಜನರ ಒತ್ತಾಯದ ಮೇರೆಗೆ ಮಾರ್ಚ್ 14ರಂದು ರಾಜ್ಯಾದ್ಯಂತ ರೀ ರಿಲೀಸ್ ಗೆ ಸಜ್ಜಾಗಿದೆ.
ಚಿತ್ರದ ಬಹುತೇಕ ಭಾಗವನ್ನು ಕತ್ತಲೆಯ ಕಾಡಲ್ಲೇ ಚಿತ್ರೀಕರಿಸುವ ಮೂಲಕ ವೀಕ್ಷಕರ ಗಮನ ಸೆಳೆಯುವಂತೆ ಮಾಡಿದ್ದಾರೆ. ಹೊಸ ತರಹದ ಚಿತ್ರಕಥೆಯುಳ್ಳ ಈ ಚಿತ್ರದ ಮೇಕಿಂಗ್, ಮ್ಯೂಸಿಕ್, ಲೊಕೇಶನ್ ಎಲ್ಲವೂ ಭರವಸೆ ಮೂಡಿಸಿ ಎಲ್ಲಡೆ ಸದ್ದು ಮಾಡಿ ಇದೀಗ ಮತ್ತೆ ತೆರೆಕಾಣಲಿದೆ. ಎಲ್ಲರೂ ಮತ್ತೆ ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ವೀಕ್ಷಿಸಿಬೇಕೆಂದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಹಾಗೂ ನಟ ಮಿಥುನ್ ತೀರ್ಥಹಳ್ಳಿ ವಿನಂತಿಸಿಕೊಂಡಿದ್ದಾರೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಅಡಿಕೆ ದರ ಏರಿಕೆಯೋ? ಇಳಿಕೆಯೋ?

NAMMUR EXPRESS NEWS

ಸರಕು/ಹಸ : 52010 – 89986

ಬೆಟ್ಟೆ : 45159 – 56199

ರಾಶಿ ಇಡಿ : 35006 – 52009

ಗೊರಬಲು : 17023 – 27069

Categories
ಕರಾವಳಿ

ಮಾರ್ಚ್ 15 ಮಿಯ್ಯಾರು ಲವಕುಶ ಜೋಡುಕೆರೆ ಕಂಬಳ

ಮಾರ್ಚ್ 15 ಮಿಯ್ಯಾರು ಲವಕುಶ ಜೋಡುಕೆರೆ ಕಂಬಳ
– ವಿ ಸುನೀಲ್ ಕುಮಾರ್ ಅವರ ಪತ್ರಿಕಾ ಪ್ರಕಟಣೆ
– ದಿನಾಂಕ 15-3-2025 ಶನಿವಾರ ಬೆಳಿಗ್ಗೆ 8:00 ಗಂಟೆಯಿಂದ ಪ್ರಾರಂಭ

ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಂಬಳ ಕೂಟಗಳಲ್ಲಿ ಒಂದಾದ ಮಿಯ್ಯಾರು ಲವಕುಶ ಜೋಡು ಕರೆ ಕಂಬಳ ಕೂಟವು ದಿನಾಂಕ 15-3-2025 ಶನಿವಾರ ಬೆಳಿಗ್ಗೆ 8:00 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಕಂಬಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ವಾಡಿಕೆಯಂತೆ ಪ್ರತಿವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಿದ್ದ ಈ ಕಂಬಳ ಕ್ರೀಡೆ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂದೂಡಲ್ಪಟ್ಟಿತ್ತು. ಮಾರ್ಚ್ 15ನೇ ತಾರೀಕು ಜಿಲ್ಲೆಯಲ್ಲಿ ಇತರ ಯಾವುದೇ ಕಂಬಳ ಕೂಟ ನಡೆಯದೆ ಇರುವುದರಿಂದ ಜಿಲ್ಲಾ ಕಂಬಳ ಸಮಿತಿ ಮತ್ತು ಸ್ಥಳೀಯ ಸಮಿತಿಯ ನಿರ್ಣಯದಂತೆ ಆ ದಿನದಂದೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಕಂಬಳ ಕೂಟವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಿಯ್ಯಾರು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರು ಆಗಿರುವ ವಿ ಸುನಿಲ್ ಕುಮಾರ್ ಮತ್ತು ಕಾರ್ಯಾಧ್ಯಕ್ಷರಾಗಿರುವ ಜೀವನ್‌ದಾಸ್ ಅಡ್ಯಂತಾಯ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ವರ್ಷ ಕೂಡ ಸುಮಾರು 250ಕ್ಕೂ ಹೆಚ್ಚು ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು 24 ಗಂಟೆಯೊಳಗೆ ಸ್ಪರ್ಧೆಯನ್ನು ಅಂತಿಮ ಹಂತಕ್ಕೆ ತಲುಪಿಸುವ ಎಲ್ಲಾ ಪ್ರಯತ್ನ ಕಂಬಳ ಸಮಿತಿಯಿಂದ ನಡೆಯುತ್ತಿದೆ. ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್, ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ ವೀರಪ್ಪ ಮೊಯ್ಲಿ ಡಾ. ಎಂ ಎನ್ ರಾಜೇಂದ್ರ ಕುಮಾರ್, ಜಿಲ್ಲೆಯ ಶಾಸಕರುಗಳು ಮತ್ತು ವಿಧಾನ ಪರಿಷತ್ ಸದಸ್ಯರುಗಳ ಜೊತೆಗೆ ಆನೇಕ ಗಣ್ಯರು ಈ ಜಾನಪದ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಜನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಂಬಳ ಕ್ರೀಡೋತ್ಸವಕ್ಕೆ ಎಲ್ಲಾ ಕೋಣಗಳ ಯಜಮಾನರಿಗೆ, ಓಟಗಾರರಿಗೆ, ಕಂಬಳ ಕ್ರೀಡಾ ಪ್ರೇಮಿಗಳಿಗೆ ಆತ್ಮೀಯ ಸ್ವಾಗತ ಎಂದು ಪ್ರಕಟಣೆಯಲ್ಲಿ ಕಂಬಳ ಸಮಿತಿ ತಿಳಿಸಿದ್ದಾರೆ.

Categories
ಕರಾವಳಿ

ತೀವ್ರ ಮಳೆಯಿಂದ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗದೆ ವಿಮಾನಗಳು ಡೈವರ್ಟ್!

ತೀವ್ರ ಮಳೆಯಿಂದ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗದೆ ವಿಮಾನಗಳು ಡೈವರ್ಟ್!

– ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಎರಡು ವಿಮಾನಗಳು ಬೆಂಗಳೂರಿಗೆ ವಾಪಾಸ್
– ಹಲವೆಡೆ ಮರ ಬಿದ್ದಂತೆ ಅನೇಕ ವಿದ್ಯುತ್ ಕಂಬಗಳಿಗೆ ಹಾನಿ

NAMMUR EXPRESS NEWS
ಮಂಗಳೂರು: ಕೆಲ ದಿನಗಳಿಂದ ಮಂಗಳೂರಿನಲ್ಲಿ ರಣ ಬಿಸಿಲಿನ ವಾತವರಣವಿತ್ತು. ಮಳೆಗಾಗಿ ಕರಾವಳಿಗರು ಪ್ರಾರ್ಥಿಸುತ್ತಿದ್ದರು. ಈ ನಡುವೆ, ನಗರದ ಹಲವೆಡೆ ಮಾ.12 ರಾತ್ರಿ ಏಕಾಏಕಿ ಮಳೆಯಾಗಿದೆ. ಇದರಿಂದಾಗಿ ಬೆಂದಿದ್ದ ಧರೆಯು ಹಾಗೆಯೇ ತಂಪಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯ ಅಬ್ಬರ ಜೋರಾಗಿಯೇ ಇತ್ತು. ಮಂಗಳೂರು ಬಜಪೆ ವಲಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಕಳುಹಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದಿರುಗಿಸಲಾಗಿದೆ. ಮಂಗಳೂರಿನ ಬಜ್ಪೆ, ಕಿನ್ನಿಪದವು ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಅಷ್ಟು ಮಾತ್ರವಲ್ಲದೆ, ಹಲವೆಡೆ ಮರ ಬಿದ್ದಂತೆ ಅನೇಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ, ಕಡಬ ಭಾಗದಲ್ಲಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಭಾರಿ ತಾಪಮಾನದಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದ್ದಾನೆ. ಕಡಬದಲ್ಲಿ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

Categories
ತೀರ್ಥಹಳ್ಳಿ

ಸಾಲಕ್ಕೆ ಹೆದರಿ ಯುವ ರೈತ ಆತ್ಮಹತ್ಯೆ!

ಸಾಲಕ್ಕೆ ಹೆದರಿ ಯುವ ರೈತ ಆತ್ಮಹತ್ಯೆ!
– ತೀರ್ಥಹಳ್ಳಿ ತಾಲೂಕಿನ ಕೈಮರ ಸಮೀಪ ಘಟನೆ
– ಸಾಲಗಾರರ ಕಿರಿಕಿರಿಗೆ ಹೆದರಿ ಜೀವ ಬಿಟ್ಟನೇ…?

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಮರ ಸಮೀಪ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಾಗಲಮನೆ ವಾಸಿ ರೈತ ಕೌಶಿಕ್ 30 ವರ್ಷ ಎಂಬ ಯುವಕ ಸಾಲಬಾಧೆಗೆ ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಶವ ಪತ್ತೆಯಾಗಿದೆ.
ಮಾಗರವಳ್ಳಿ ಸೊಸೈಟಿ, ಧರ್ಮಸ್ಥಳ ಸಂಘ., ಮೈಕ್ರೋ ಫೈನಾನ್ಸ್ ಸೇರಿದಂತೆ ಹಲವು ಕಡೆ ಬಡ್ಡಿಗೆ ಸಾಲ ಪಡೆದಿರುವ ಯುವಕ ಸಾಲದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಾರಿ ಅಡಿಕೆ ಬಂದಿರುವ ಎಲೆ ಚುಕ್ಕಿ ರೋಗದಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ತಾಯಿ ಮತ್ತು ಮಗ ಇಬ್ಬರೇ ಇದ್ದು, ತಂಗಿಗೆ 6 ವರ್ಷಗಳ ಹಿಂದೆಯೇ ವಿವಾಹ ಆಗಿತ್ತು. ಸಾಲದ ಸಮಸ್ಯೆ ಕಾರಣ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಂಡದಿಂದ ವನ ಸಿರಿ ಕಿರುಚಿತ್ರ ಮುಹೂರ್ತ

ತೀರ್ಥಹಳ್ಳಿ ತಂಡದಿಂದ ವನ ಸಿರಿ ಕಿರುಚಿತ್ರ ಮುಹೂರ್ತ
– ಪರಿಸರ ನಾಶ, ದೇವರ ಮಹಿಮೆ ಸಾರುವ ಶಾರ್ಟ್ ಫಿಲಂ
– ತೀರ್ಥಹಳ್ಳಿ ಕಲಾವಿದರ ತಂಡದ ಸಾಥ್: ಶುಭಾಶಯಗಳು

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಕಾಡು ನಾಶ, ದೇವ ಮಹಿಮೆ ಸಾರುವ ವನ ಸಿರಿ ಎಂಬ ಕಿರುಚಿತ್ರ ಮಾಡಲು ತೀರ್ಥಹಳ್ಳಿಯ ಶಿರುಪತಿ ವ್ಯಾಘ್ರ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇತ್ತೀಚಿಗೆ ಮುಹೂರ್ತ ಕಾರ್ಯಕ್ರಮ ನಡೆಯಿತು. ತೀರ್ಥಹಳ್ಳಿ ಕಲಾವಿದರು, ತಂತ್ರಜ್ಞರು ಸೇರಿ ಈ ಕಿರುಚಿತ್ರ ಮಾಡುತ್ತಿದ್ದಾರೆ.
ಶಿರುಪತಿ ವ್ಯಾಘ್ರ ನರಸಿಂಹ ಕ್ರಿಯೇಷನ್ ಬ್ಯಾನರ್ ಅಡಿ ಪ್ರಧಾನ ನಿರ್ಮಾಣ ಗಣೇಶ್ ಭಟ್ ಚಿಟ್ಟಬೈಲು, ಚಿತ್ರಕತೆ ಸಂಭಾಷಣೆಯನ್ನು ಸುರಾನಿ ಮ್ಯಾತ್ಯು, ಮಂಜುನಾಥ್ ಶಿರುಪತಿ ಟೆಂಕಬೈಲು ಇವರು ಮಾಡಿದ್ದಾರೆ.
ಛಾಯಾಗ್ರಾಹಕ ಸುರೇಶ ಕುಮಾರ್ ಬಾಳಗಾರು ಇವರು ಮಾಡುತ್ತಿದ್ದು,
ಮಲೆನಾಡ ಮಡಿಲು ತೀರ್ಥಹಳ್ಳಿ ಸುಂದರ ಪರಿಸರದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ.
ಸಹ ನಿರ್ದೇಶಕರಾಗಿ, ನಟರಾಗಿ, ನಿರ್ದೇಶಕರಾಗಿ ಅನುಭವ ಜತೆಗೆ ಸುವರ್ಣ ವಾಹಿನಿಯಲ್ಲಿ ಎಸ್ ಎಸ್ ಎಲ್ ಸಿ ನನ್ನ ಮಕ್ಕಳ ಧಾರವಾಹಿಯಲ್ಲಿ ನಟನೆ ಹಾಗೂ ಪ್ರೊಡಕ್ಷನ್ ಮ್ಯಾನೇಜರ್ ಆಗಿ ರಂಗಭೂಮಿ ಕಥೆ ನಿರ್ದೇಶನ ಜನಪದ ಸಂಹಿತೆ ಅಧ್ಯಕ್ಷರಾಗಿ ಕೆಲಸ ಮಾಡಿರುವ ಮಂಜುನಾಥ್ ಶಿರುಪತಿ ಇದರ ಉಸ್ತುವಾರಿ ಹೊತ್ತಿದ್ದಾರೆ.
ಕಿರುಚಿತ್ರ ಮುಹೂರ್ತ ಸಮಾರಂಭದಲ್ಲಿ ಶ್ರೀ ವ್ಯಾಘ್ರ ನರಸಿಂಹಸ್ವಾಮಿ ದೇವಸ್ಥಾನ, ಶಿರುಪತಿ ಇದರ ಅರ್ಚಕರಾದ ಸತೀಶ್ ಜೋಯಿಸ್ ಮೇಗರವಳ್ಳಿ ಮಲೆನಾಡಿನ ಕಲಾವಿದರಾದ ಮ್ಯಾತ್ಯು ಸುರಾನಿ, ಗಣೇಶ್ ಮೂರ್ತಿ ಭಟ್ ಚಿಟ್ಟೇಬೈಲು, ಮಂಜುನಾಥ್ ಶಿರುಪತಿ, ಕೊಳಲು ವಾದಕರಾದ ಹೆಗಡೆಮನೆ ಯೋಗೀಶ್, ನಾಗರಾಜ್, ಸುರೇಶ್ ಜೋಗಿ, ಮೇಗರವಳ್ಳಿ ಸತೀಶ್ ಮೇಳಿಗೆ ಸ್ಟೀಫನ್ ಮೆಂತೆರೋ, ಹಿನ್ನೆಲೆ ಗಾಯಕರಾದ ಕು. ಮೇಘಾ ಎನ್. ಭಟ್, ಗುಡ್ಡೇಕೊಪ್ಪ, ಸುದೀಪ್ ಕಟ್ಟೆಹಕ್ಲು ಕುಮಾರಿ ಆತ್ಮಿಕಾ ಜಿ. ಭಟ್ ಹಾಜರಿದ್ದರು ಹಾಗೂ ಊರಿನ ಪ್ರಮುಖರಾದ ಮಂಜುನಾಥ್ ಟೆಂಕಬೈಲು, ಗಣೇಶ್ ಮತ್ತು ಇತರರು ಹಾಜರಿದ್ದು ಕಿರುಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

Categories
ತೀರ್ಥಹಳ್ಳಿ

11ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ ಯಶಸ್ವಿ

11ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ ಯಶಸ್ವಿ

– ಟಿ.ಕೆ.ರಮೇಶ್ ಶೆಟ್ಟಿ ಸಾರಥ್ಯದಲ್ಲಿ ಎರಡು ದಿನಗಳ ಕಾಲ ನಾ. ಡಿಸೋಜ ವೇದಿಕೆಯಲ್ಲಿ 11ನೇ ಸಾಹಿತ್ಯ ಸಮ್ಮೇಳನ
– ಸರ್ಕಾರಿ ಶಾಲೆಗಳ ವಾಸ್ತವಿಕ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟ ಪ್ರೊ.ಪುರುಷೋತ್ತಮ ಬಿಳಿಮಲೆ
– ವಿಶೇಷವಾದ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ 11ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ ಪರಿಷತ್ತು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಸಾರಥ್ಯದಲ್ಲಿ ಎರಡು ದಿನಗಳ ಕಾಲ ನಾ ಡಿಸೋಜ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಎರಡನೇ ದಿನದಂದು ನಡೆದ ಗೋಷ್ಠಿ ಮಾಜಿ ಶಾಸಕ ದಿ.ಪಟಮಕ್ಕಿ ರತ್ನಾಕರ ಗೋಷ್ಠಿಯಲ್ಲಿ ರಾಜಕಾರಣಿ, ಶಾಸಕನಾಗಿ ಅಪಾರವಾಗಿ ಸಾಹಿತ್ಯಾಭ್ಯಾಸ ಮಾಡಿದ್ದ ವಿರಳ ವ್ಯಕ್ತಿತ್ವದ ಪಟಮಕ್ಕಿ ರತ್ನಾಕ‌ರ್ ಕುರಿತು ಸುಧೀರ್ಘ ಕಾಲ ಅವರ ಒಡನಾಡಿಯಾಗಿದ್ದ ಹಿರಿಯ ಪತ್ರಕರ್ತ ಡಿ.ಎಸ್.ವಿಶ್ವನಾಥ ಶೆಟ್ಟಿ ಸ್ವಾರಸ್ಯಕರ ವಿಷಯವನ್ನು ಹಂಚಿಕೊಂಡರು.
ಇನ್ನೊಂದು ವಿಶಿಷ್ಟ ಗೋಷ್ಠಿ
ಯಕ್ಷಗಾನ-ರಂಗಭೂಮಿ-ಇಂದ್ರಜಾಲ, ವಿಷಯದ ಕುರಿತು ಹಿರಿಯ ರಂಗಕರ್ಮಿ ಮ್ಯಾಥ್ಯ ಸುರಾನಿ, ಯಕ್ಷಗಾನ ಕಲಾವಿದ ಬಿ.ಗಣಪತಿ, ಜಾದೂ ಕಲಾವಿದ ನಿಶ್ಚಲ್ ಜಾದೂಗಾರ್ ವಿಶೇಷ ವಿವರಗಳನ್ನು ಜನರ ಮುಂದಿಟ್ಟರು.ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅದ್ದೂರಿ ಸಮರೋಪ ಸಮಾರಂಭದಲ್ಲಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.ಸಮಾರೋಪ ಸಮಾರಂಭದಲ್ಲಿ ಕ,ಸಾ,ಪ ಅಧ್ಯಕ್ಷರಾದ ಟಿ ಕೆ ರಮೇಶ್ ಶೆಟ್ಟಿ, ಪ್ರಸ್ತಾವಿಕ ಭಾಷಣ ಮಾಡಿ ಈ ಬಾರಿಯ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಶ್ರಮಿಸಿದಂತಹ ಹಾಗೂ ಸಹಕರಿಸಿದಂತ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು.

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ,ನಮ್ಮ ಕನ್ನಡ ಭಾಷೆಯನ್ನು ಸಾಯಲು ಬಿಡಬಾರದು,ಕನ್ನಡ ಶಾಲೆಗಳು ಹೆಚ್ಚಾಗಬೇಕೇ ಹೊರತು ಕಡಿಮೆಯಾಗಬಾರದೆಂದು ಸರ್ಕಾರಿ ಶಾಲೆಗಳ ವಾಸ್ತವಿಕ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ್ ಬಿಳಿಮಲೆ, ಸಮ್ಮೇಳನದ ಸರ್ವಧ್ಯಕ್ಷರಾದ ಕೆ, ಆರ್,ಉಮಾದೇವಿ ಉರಾಳ್, ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ,ಸರ್ಜಾ ಶಂಕರ್ ಹರಳೀಮಠ, ಪಟ್ಟಣ ಪಂಚಾಯಿತಿಯ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಹಾಲಿಗೆ ನಾಗರಾಜ್, ಸೌಳಿ ನಾಗರಾಜ್, ಗಾಯತ್ರಿ ಶೇಷಗಿರಿ, ಹಾಗೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.

Categories
ಮಲ್ನಾಡ್

ಮಲೆನಾಡಲ್ಲಿ ತಂಪೆರೆದ ವರುಣ ದೇವ!!

ಮಲೆನಾಡಲ್ಲಿ ತಂಪೆರೆದ ವರುಣ ದೇವ!!

* ಬಿಸಿಲ ಬೇಗೆಗೆ ತತ್ತರಿಸಿದ ಮಲೆನಾಡು
* ಬೇಸಿಗೆಯ ಮೊದಲ ಮಳೆಗೆ ಅವಾಂತ ಸೃಷ್ಠಿ

NAMMUR EXPRESS NEWS
ಕಳಸ: ಈ ಬಾರಿ ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪಮಾನಕ್ಕೆ ಮಲೆನಾಡು ಕಾದ ಕಾವಲಿಯಂತಾಗಿತ್ತು. ಸುಡು ಬಿಸಿಲಿನ ಜಳಕ್ಕೆ ಜನರು ಬಸವಳಿದು ಹೋಗಿದ್ದರು. ನಿನ್ನೆ ಸಂಜೆ ಕಳಸ ಸುತ್ತಮುತ್ತಾ ವರುಣದೇವ ತಂಪೆರೆದಿದ್ದಾನೆ. ಇದರಿಂದ ಬಿಸಿಲಿಗೆ ಸೊರಗಿದ್ದವರಿಗೆ ವರುಣ ಕೊಂಚ ರಿಲೀಫ್ ನೀಡಿದ್ದಾನೆ. 20 ನಿಮಿಷ ಸಾಧಾರಣ ಮಳೆಯಾಗಿದ್ದು,
ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದಂತೆಯೇ ಕಾಫಿ, ಅಡಿಕೆ ತೋಟಗಳಿಗೆ ಒಂದು ತಿಂಗಳಿಂದ ಕೃಷಿಕರು ನೀರನ್ನು ಹಾಯಿಸುತ್ತಿದ್ದರು. ಆದರೆ ಮಳೆ ಕೊಂಚಮಟ್ಟಿಗೆ ಬಂದಿರುವುದರಿಂದ ಮತ್ತಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ನೀರಿನ ಸೌಲಭ್ಯವುಳ್ಳ ದೊಡ್ಡ ರೈತರು ಮಾತ್ರ ಬೆಳೆಗಳಿಗೆ ನೀರನ್ನು ಹಾಯಿಸುತ್ತಿದ್ದರೆ ಸಣ್ಣ ಪುಟ್ಟ ಅಡಿಕೆ ಕಾಫಿ ಬೆಳಗಾರರು ಇದೇ ರೀತಿ ತಾಪಮಾನ ಮುಂದುವರೆದರೆ ಸೂರ್ಯನ ಶಾಖಕ್ಕೆ ಕಾಫಿಗಿಡಗಳು ನಾಶಗೊಳ್ಳುವ ಭೀತಿಯು ಎದುರಾಗಿದೆ. ಹೀಗಾಗಿ ಏಪ್ರಿಲ್, ಮೇ ತಿಂಗಳವರೆಗೆ ಈ ತಾಪಮಾನ ಹೇಗಪ್ಪ ಸಹಿಸುವುದು ಅಂತ ಮಲೆನಾಡಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಬೇಸಿಗೆಯ ಮೊದಲ ಮಳೆಗೆ ಅವಾಂತರ ಸೃಷ್ಟಿ.

ನಿನ್ನೆ ಸುರಿದ ಬೇಸಿಗೆಯ ಮೊದಲ ಮಳೆಗೆ ಅವಾಂತರ ಸೃಷ್ಟಿಯಾಗಿದೆ, ಭಾರೀ ಗಾಳಿಗೆ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಕಾರಿನ ಗ್ಲಾಸ್ ಪುಡಿ-ಪುಡಿಯಾಗಿದೆ.
ಕಳಸ ತಾಲೂಕಿನ ಹಿರೇಬೈಲ್ ಗ್ರಾಮದ ಬಳಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳಸದಿಂದ ಬೆಂಗಳೂರಿಗೆ ಕಾರು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಒಣಗಿ ನಿಂತಿದ್ದ ಸಾಧಾರಣ ಮರವೊಂದು ಬಿದ್ದ ಪರಿಣಾಮ ಕಾರಿನ ಗ್ಲಾಸ್ ಪುಡಿಯಾಗಿದೆ.
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಬದಿಯಲ್ಲಿ ಒಣಗಿ ನಿಂತಿರುವ ಮರಗಳನ್ನು ತೆರವು ಗೊಳಿಸುವಂತೆ ವಾಹನ ಚಾಲಕರು ಒತ್ತಾಯಿಸಿದ್ದಾರೆ. ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಬಹುತೇಕ ಮಳೆಯಾಗಿದ್ದು ಕೆಲವೆಡೆ ಧಾರಾಕಾರ ಮಳೆಯಾಗಿದೆ.