Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಂಜುನಾಥ ಸ್ವಾಮಿಯ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಹಣಕಾಸಿನ ಲಾಭಗಳು ಸಿಗಬಹುದು. ಪ್ರೇಮ ಜೀವನದಲ್ಲಿ ಹಿಂದಿನ ಸಮಸ್ಯೆಗಳ ಬಗ್ಗೆ ಮಾತಾನಾಡದಿರುವುದು ಉತ್ತಮ. ಮತ್ತೊಂದೆಡೆ, ಹೊಸ ಪಾಲುದಾರಿಕೆಗಳು ಉದ್ಯಮಿಗಳನ್ನು ಆಕರ್ಷಿಸಬಹುದು. ಇಂದು ಅನಗತ್ಯ ವಾದಗಳಲ್ಲಿ ತೊಡಗಿಸಿಕೊಳ್ಳಬೇಡಿ. ಆರೋಗ್ಯದ ವಿಷಯದಲ್ಲಿ ನಿಮ್ಮ ದಿನವು ಸ್ಮರಣೀಯವಾಗಿರುತ್ತದೆ.

** ವೃಷಭ ರಾಶಿ :
​ವೃಷಭ ರಾಶಿಯವರು ಇಂದು ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಬಹುದು. ವೆಚ್ಚಗಳು ಹೆಚ್ಚಾಗಬಹುದು. ಈ ದಿನವು ನಿಮಗೆ ಸ್ವಲ್ಪ ಏರಿಳಿತದಿಂದ ಕೂಡಿರುತ್ತದೆ. ಇಂದು ಹೂಡಿಕೆ ಮಾಡಲು ಒಳ್ಳೆಯ ದಿನವಲ್ಲ. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಆರೋಗ್ಯವು ಉತ್ತಮವಾಗಿರುತ್ತದೆ.

** ಮಿಥುನ ರಾಶಿ :
ಇಂದು ಮಿಥುನ ರಾಶಿಯವರ ಕುಟುಂಬದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಬಹುದು. ನೀವು ಕಚೇರಿಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿರಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆಸ್ತಿಯಲ್ಲಿ ಹೆಚ್ಚಳವಾಗಬಹುದು. ಹಣಕಾಸಿನ ವೆಚ್ಚಗಳು ಹೆಚ್ಚಾಗುತ್ತವೆ. ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸಿ.

** ಕರ್ಕಾಟಕ ರಾಶಿ :
ಇಂದು ನಿಮಗೆ ಶುಭ ದಿನವಾಗಲಿದೆ. ನೀವು ಇಂದು ಕೆಲಸಕ್ಕಾಗಿ ಪ್ರಯಾಣಿಸಬೇಕಾಗಬಹುದು. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ನಿಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಿ. ಇಂದು ತಮ್ಮ ಜೀವನ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಬಹುದು. ಆದರೆ ನಿಮ್ಮ ಸಂಗಾತಿ ನಿಮ್ಮ ಕಾಳಜಿಯುಳ್ಳ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಿ.

** ಸಿಂಹ ರಾಶಿ :
​ಸಿಂಹ ರಾಶಿಯವರು ಇಂದು ಸ್ವ-ಪ್ರೀತಿಯತ್ತ ಗಮನಹರಿಸಬೇಕು. ಇಂದು ಗಡುವಿನೊಳಗೆ ಕೆಲಸವನ್ನು ಮುಗಿಸುವುದು ಮುಖ್ಯವಾಗಿರುತ್ತದೆ. ಪ್ರಮುಖ ಕೆಲಸವು ಉತ್ತಮ ಆದಾಯವನ್ನು ತರಬಹುದು. ದಿನ ಮುಂದುವರೆದಂತೆ ಆರ್ಥಿಕ ಸಮಸ್ಯೆಗಳು ಉದ್ಭವಿಸಬಹುದು. ಸಹೋದ್ಯೋಗಿಯೊಂದಿಗೆ ಯಾವುದೇ ಪ್ರಣಯ ಸಂಬಂಧದಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ.

** ಕನ್ಯಾ ರಾಶಿ :
ಕನ್ಯಾ ರಾಶಿಯವರ ಜೀವನದಲ್ಲಿ ಇಂದು ಗದ್ದಲ ಇರುತ್ತದೆ. ಕನ್ಯಾ ರಾಶಿಯ ಜನರು ಇಂದು ತಮ್ಮ ಮನಸ್ಸಿನಲ್ಲಿ ನಿರಾಶೆ ಮತ್ತು ಅಸಮಾಧಾನವನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಸ್ನೇಹಿತರ ಸಹಾಯದಿಂದ, ಆದಾಯವನ್ನು ಹೆಚ್ಚಿಸುವ ಸಾಧನವನ್ನು ರಚಿಸಬಹುದು. ವ್ಯವಹಾರದಲ್ಲಿ ವಿಸ್ತರಣೆಯಾಗಬಹುದು.

** ತುಲಾ ರಾಶಿ :
ತುಲಾ ರಾಶಿಯವರಿಗೆ ಇಂದು ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಯಶಸ್ಸನ್ನು ಪಡೆಯುತ್ತಾರೆ, ಆದರೆ ಶೈಕ್ಷಣಿಕ ಕೆಲಸಕ್ಕಾಗಿ ಕುಟುಂಬದಿಂದ ದೂರ ಹೋಗಬೇಕಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರ್ಥಿಕವಾಗಿ ನೀವು ಮೊದಲಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತೀರಿ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ.

** ವೃಶ್ಚಿಕ ರಾಶಿ :
ಇಂದು ನೀವು ಸರ್ಕಾರಿ ವ್ಯವಸ್ಥೆಯಿಂದ ಲಾಭವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಬೌದ್ಧಿಕ ಕೆಲಸದಿಂದ ಆದಾಯವೂ ಹೆಚ್ಚಾಗಬಹುದು. ಗೌರವದಲ್ಲಿ ಹೆಚ್ಚಳವಾಗಲಿದೆ. ಆತ್ಮೀಯರೊಂದಿಗೆ ಸಂತೋಷ ಇರುತ್ತದೆ. ಕುಟುಂಬದಲ್ಲಿ ಹೊಸ ಸದಸ್ಯರು ಆಗಮಿಸಬಹುದು. ಆರೋಗ್ಯದ ಕಡೆ ಗಮನ ಕೊಡಿ.

** ಧನಸ್ಸು ರಾಶಿ :
​ಧನು ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ. ನೀವು ನಿಮ್ಮ ಹಣಕಾಸಿನ ಯೋಜನೆಗಳನ್ನು ಮರುಪರಿಶೀಲಿಸಬೇಕು. ಹಣವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಮಾನಸಿಕ ಆರೋಗ್ಯವು ನಿಮ್ಮ ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಹಣ ಬರುತ್ತದೆ ಆದರೆ ವೆಚ್ಚಗಳು ಸಹ ಹೆಚ್ಚಾಗುತ್ತವೆ. ನಿಮ್ಮ ಸಂಗಾತಿಯ ಭಾವನಾತ್ಮಕ ಅಗತ್ಯಗಳನ್ನು ನೀವು ಅರ್ಥಮಾಡಿಕೊಳ್ಳಬೇಕು.

** ಮಕರ ರಾಶಿ :
ಮಕರ ರಾಶಿಯವರಿಗೆ ಈ ದಿನ ಶುಭವಾಗಿರುತ್ತದೆ. ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು ಅತ್ಯುತ್ತಮ ಲಾಭವನ್ನು ನೀಡುತ್ತದೆ. ಪ್ರಯಾಣ ಆನಂದದಾಯಕವಾಗಿರುತ್ತದೆ. ಉತ್ತಮ ಆರ್ಥಿಕ ಸ್ಥಿತಿಯಿಂದಾಗಿ, ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಚಿಸಲು ನೀವು ಪ್ರೇರೇಪಿಸಲ್ಪಡಬಹುದು. ಪ್ರೇಮಿಯೊಂದಿಗೆ ಸಮಯ ಕಳೆಯುತ್ತೀರಿ.

** ಕುಂಭ ರಾಶಿ :
ಕುಂಭ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಸಾಕಷ್ಟು ನೀರು ಕುಡಿಯಿರಿ. ಒತ್ತಡದಿಂದ ದೂರವಿರಿ. ಕೆಲಸದಲ್ಲಿ ರಾಜಕೀಯದಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಿ. ಮನೆ ಮತ್ತು ಕುಟುಂಬದಲ್ಲಿ ಶಾಂತಿಯ ವಾತಾವರಣವಿರುತ್ತದೆ. ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು.

** ಮೀನ ರಾಶಿ :
ಇಂದು ನಿಮ್ಮ ಅಹಂಕಾರವು ಕೆಲಸದಲ್ಲಿ ನಿಮ್ಮ ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು. ಹಿಂದಿನ ಹೂಡಿಕೆಗಳು ನಿರೀಕ್ಷೆಯಂತೆ ಫಲಿತಾಂಶಗಳನ್ನು ನೀಡದಿರಬಹುದು. ಮೀನ ರಾಶಿಯ ಕೆಲವುರು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.

Categories
ಚಿಕ್ಕಮಗಳೂರು

ಶೃಂಗೇರಿ,ಕೊಪ್ಪ ತಹಶೀಲ್ದಾರ್‌ರಿಂದ ಮರಳು ಅಡ್ಡೆ ಮೇಲೆ ದಾಳಿ

ಶೃಂಗೇರಿ,ಕೊಪ್ಪ ತಹಶೀಲ್ದಾರ್‌ರಿಂದ ಮರಳು ಅಡ್ಡೆ ಮೇಲೆ ದಾಳಿ

* ಮರಳು ದಂಧೆಯಲ್ಲಿ ತೊಡಗಿದ್ದ 4 ಪಿಕಪ್ ವಶಕ್ಕೆ
* ಶೃಂಗೇರಿ ಭಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಅಕ್ರಮ ಮರಳು ದಂಧೆ

NAMMMUR EXPRESS NEWS
ಶೃಂಗೇರಿ: ಶೃಂಗೇರಿ ತಹಶೀಲ್ದಾರ್ ಅನೂಪ್ ಹಾಗೂ ಕೊಪ್ಪ ತಹಶೀಲ್ದಾರ್ ಲಿಖಿತಾ ಮೋಹನ್ ರಿಂದ ಏಕಕಾಲಕ್ಕೆ ಹಲವು ಕಡೆಗಳಲ್ಲಿ ದಾಳಿ ನಡೆಸಿ ಮರಳು ದಂಧೆಯಲ್ಲಿ ತೊಡಗಿದ್ದ 4 ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ತಡರಾತ್ರಿ 2 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ.ಶೃಂಗೇರಿ ಭಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಅಕ್ರಮ ಮರಳು ಮಾಫಿಯಾಗೆ ಕಳೆದ ಕೆಲವು ತಿಂಗಳಿಂದ ಸ್ವಲ್ಪ ಬ್ರೇಕ್ ಬಿದ್ದಿತ್ತು, ಆದರೆ ಸದ್ದಿಲ್ಲದೇ ಕಳೆದ ಒಂದು ತಿಂಗಳಿನಿಂದ ಮತ್ತೆ ಪ್ರಾರಂಭವಾಗಿದೆ. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ತಹಶೀಲ್ದಾರ್ ಅನೂಪ್ ಹಾಗೂ ಕೊಪ್ಪ ತಹಶೀಲ್ದಾರ್ ಲಿಖಿತಾ ಮೋಹನ್‌ 4 ಪಿಕಪ್ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇನ್ನೂ ಹಲವು ಪಿಕಪ್ ವಾಹನಗಳು ಇದ್ದು ದಾಳಿ ಸಂದರ್ಭದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ದಾಳಿಯಲ್ಲಿ ಅಡ್ಡಗದ್ದೆ ಬಷೀರ್, ಗಣೇಶ್, ನಾಗೇಶ್, ಅಜ್ಜೊಳ್ಳಿ ರಾಘು ಈ ನಾಲ್ವರಿಗೆ ಸೇರಿದ ಒಟ್ಟು 4 ಪಿಕಪ್ ವಾಹನಗಳನ್ನು ವಶಕ್ಕೆ ಪಡೆದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದೆ.

Categories
ಚಿಕ್ಕಮಗಳೂರು

ಕೆಡಿಪಿ ಸಭೆಯಲ್ಲಿ ಶಾಸಕ ಹಾಗೂ ಪರಿಷತ್ ಸದಸ್ಯರ ನಡುವೆ ವಾಕ್ ಸಮರ

ಕೆಡಿಪಿ ಸಭೆಯಲ್ಲಿ ಶಾಸಕ ಹಾಗೂ ಪರಿಷತ್ ಸದಸ್ಯರ ನಡುವೆ ವಾಕ್ ಸಮರ 

* ಉಸ್ತುವಾರಿ ಸಚಿವರ ಬದಲಾಗಿ ಪ್ರತಿಯೊಂದಕ್ಕೂ ಉತ್ತರಿಸುತ್ತಿದ್ದ ಶಾಸಕ ತಮ್ಮಯ್ಯ
* ಶಾಸಕರ ಸಮಾಜಾಯಿಷಿ ನೀಡಿದರು ಕೇಳದ ಸಿ.ಟಿ ರವಿ

NAMMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಬರೀ ಗಲಾಟೆ ಮತ್ತು ಗದ್ದಲ ನಡೆದಿದೆ. ಮೊದಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಮತ್ತು ಪತ್ರಕರ್ತರ ನಡುವೆ ಜಟಾಪಟಿ ಆಮೇಲೆ ಚಿಕ್ಕಮಗಳೂರು ಶಾಸಕ ಹೆಚ್. ಡಿ ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಧ್ಯೆ ಮಾತಿನ ಯುದ್ಧ. ಈ ಸಭೆಯ ಅಧ್ಯಕ್ಷರು ಉಸ್ತುವಾರಿ ಸಚಿವರಾಗಿದ್ದರೂ ಪ್ರತಿಯೊಂದಕ್ಕೂ ತಮ್ಮಯ್ಯ ಉತ್ತರ ಕೊಡಲಾರಂಭಿಸಿದ್ದು ಮತ್ತು ಸಭಾಧ್ಯಕ್ಷನಂತೆ ವರ್ತಿಸಿದ್ದು ರವಿಯವರಿಗೆ ಸರಿ ಕಂಡಿಲ್ಲ, ಅವರು ಎದ್ದುನಿಂತು ಜಾರ್ಜ್ ಅವರ ಕಡೆ ನೋಡುತ್ತ ಸಭಾಧ್ಯಕ್ಷರೇ, ನೀವು ಮಾತಾಡಿ, ಸಭೆ ನಿಮ್ಮ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ ಎನ್ನುತ್ತಾರೆ. ತಮ್ಮಯ್ಯ ಏನೆಲ್ಲ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಸಿ.ಟಿ ರವಿ ಕೇಳಲಿಲ್ಲ.

Categories
ತೀರ್ಥಹಳ್ಳಿ

ಪಟಮಕ್ಕಿ ರತ್ನಾಕ‌ರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭ

ಪಟಮಕ್ಕಿ ರತ್ನಾಕ‌ರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭ
– ಮೇ 18 ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರ, ಸೊಪ್ಪಗುಡ್ಡೆ, ತೀರ್ಥಹಳ್ಳಿಯಲ್ಲಿ
– ಸಂಜೆ 5.00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಿಮಿಕ್ರಿ ಗೋಪಿ ಅವರಿಂದ ಮಿಮಿಕ್ರಿ

NAMMUR EXPRESS NEWS
ಮಾನವೀಯತೆಯ ಗಣಿ, ಅಪರೂಪದ ರಾಜಕಾರಣಿಯಾದ ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ದಿ॥ ಪಟಮಕ್ಕಿ ರತ್ನಾಕ‌ರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದಿನಾಂಕ: 18.05.2025ರ ಭಾನುವಾರ ಸಂಜೆ 4.00 ಗಂಟೆ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರ, ಸೊಪ್ಪಗುಡ್ಡೆ, ತೀರ್ಥಹಳ್ಳಿಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

ಈ ಸಮಾರಂಭದ ಉದ್ಘಾಟನೆಯನ್ನು ಎಸ್. ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ರಮೇಶ್ ಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಸ್ವಾಮಿ ಜಿತಕಾಮಾನಂದ, ಪುಸ್ತಕದ ಅವಲೋಕನವನ್ನು ಸುಧೀರ್ ಕುಮಾರ್ ಮುರೊಳ್ಳಿ ವಾಗ್ನಿ, ಖ್ಯಾತ ವಕೀಲರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರಗ ಜ್ಞಾನೇಂದ್ರರವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ ಗೌಡ, ನೈಜಲಾ ಪಟ್ಟಮಕಿ ರತ್ನಾಕರ್, ಬಿ ಸ್ವಾಮಿ ರಾವ್, ಕಲಗೋಡು ರತ್ನಾಕರ್ ಇವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ.

ಸಂಜೆ 5.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕರ್ನಾಟಕದ ಹೆಸರಾಂತ ಬಹುಬೇಡಿಕೆಯ ಮಿಮಿಕ್ರಿ (ಅನುಕರಣೆ) ಕಲಾವಿದರಾದ “ಮಿಮಿಕ್ರಿ ಗೋಪಿ” ನಡೆಸಿಕೊಡುವ ರಾಜ್ಯದ ಪ್ರಸಿದ್ಧ ವ್ಯಕ್ತಿಗಳನ್ನು ಅನುಕರಿಸುವ ಮಿಮಿಕ್ರಿ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಪಂದ್ಯ ಪುನರಾರಂಭಕ್ಕೆ ಮಳೆಯದ್ದೇ ಆಟ,ಅಭಿಮಾನಿಗಳಿಗೆ ನಿರಾಸೆ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಪಂದ್ಯ ಪುನರಾರಂಭಕ್ಕೆ ಮಳೆಯದ್ದೇ ಆಟ,ಅಭಿಮಾನಿಗಳಿಗೆ ನಿರಾಸೆ
* ಆರ್‌ಸಿಬಿ ಟೇಬಲ್ ಟಾಪರ್,ಕೆಕೆಆರ್ ಪ್ಲೇ ಆಫ್ ಹಾದಿ ಕಷ್ಟ

NAMMMUR EXPRESS SPORTS NEWS
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಬೇದ್ದ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯ ಭಾರೀ ಮಳೆಯ ಕಾರಣ ರದ್ದಾಗಿದೆ,ಸಂಜೆ 6 ಗಂಟೆಯಿಂದಲೇ ಆರಂಭವಾದ ಧಾರಾಕಾರ ಮಳೆ ರಾತ್ರಿ 10 ಗಂಟೆಯಾದರೂ ಬಿಡುವು ನೀಡಲಿಲ್ಲ. ಪಂದ್ಯದ ಓವರ್‌ಗಳನ್ನು ಕಡಿತಗೊಳಿಸುವ ಬಗ್ಗೆ ಅಂಪೈರ್‌ಗಳು ಚರ್ಚೆ ನಡೆಸಿದರಾದರೂ ಮಳೆ ನಿಲ್ಲಲೇ ಇಲ್ಲ.
ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ವಿರಾಟ್‌ ಕೊಹ್ಲಿ ಬೆಂಗಳೂರಿನಲ್ಲಿ ಮೊದಲ ಐಪಿಎಲ್‌ ಪಂದ್ಯ ಆಡಲು ಸಜ್ಜಾಗಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಮಳೆಯ ಮುನ್ಸೂಚನೆ ನಡುವೆಯೂ ಮೈದಾನಕ್ಕೆ ಆಗಮಿಸಿದ್ದರು. ಆದರೆ ವರುಣ ಇತ್ತಂಡಗಳ ಆಟಕ್ಕೆ ಅವಕಾಶ ನೀಡಲಿಲ್ಲ. ಇದು ಅಭಿಮಾನಿಗಳನ್ನು ತೀವ್ರ ನಿರಾಸೆಗೀಡು ಮಾಡಿತು. ಎರಡೂ ತಂಡಗಳಿಗೂ ತಲಾ ಒಂದಂಕ ಹಂಚಿಕೆ ಮಾಡಲಾಯಿತು.
ಈ ಒಂದು ಅಂಕದೊಂದಿಗೆ ಆರ್‌ಸಿಬಿ ಆಡಿದ 12 ಪಂದ್ಯಗಳಲ್ಲಿ 17 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದಿಂದ ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್‌ 18ನೇ ಆವೃತ್ತಿಯು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ನಡುವಿನ ಪಂದ್ಯದೊಂದಿಗ ಪುನಾರಂಭವಾಗಬೇಕಿತ್ತು,ಆದರೆ ಮಳೆ ಇದಕ್ಕೆ ಅಡ್ಡಿಪಡಿಸಿತು.

* ಅಭಿಮಾನಿಗಳಿಂದ ವಿರಾಟ್‌ಗೆ ಗೌರವ
ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್‌ ವಿರಾಟ್‌ ಕೊಹ್ಲಿ ಇತ್ತೀಚಿಗೆ ಟೆಸ್ಟ್‌ ಪಂದ್ಯಗಳಿಗೆ ವಿದಾಯ ಹೇಳಿದ್ದರು. ವಿರಾಟ್‌ ವಿದಾಯದಿಂದ ಅಭಿಮಾನಿಗಳು ಬೇಸರವಾಗಿದ್ದಾರೆ. ಇನ್ನು ಇವರಿಗೆ ವಿಶೇಷ ಗೌರವ ಸೂಚಿಸಲು ಅಭಿಮಾನಿಗಳು ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಣ ಪಂದ್ಯದ ವೇಳೆ ಬಿಳಿ ಬಣ್ಣದ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದಿದ್ದರು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳು ವಿಶೇಷ ಗೌರವ ನೀಡಿದರು.

* ಕೆಕೆಆರ್‌ ಮುಂದಿನ ಭವಿಷ್ಯ ಏನು?
ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡದ ಪ್ಲೇ ಆಫ್‌ ಪ್ರವೇಶಿಸುವ ಆಸೆ ಕಷ್ಟ ಕಷ್ಟವಾಗಿದೆ. ಕೆಕೆಆರ್‌ ಆಡಿದ 13 ಪಂದ್ಯಗಳಲ್ಲಿ 5 ಜಯ, 6 ಸೋಲು ಕಂಡಿದೆ. ಅಲ್ಲದೆ 2 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಕೆಕೆಆರ್‌ ಮುಂದಿನ ಒಂದು ಪಂದ್ಯವನ್ನು ಗೆದ್ದರೆ 14 ಅಂಕಗಳನ್ನು ಕಲೆ ಹಾಕಬಹುದು. ಈ ಮೂಲಕ ಕೆಕೆಆರ್‌ ಬೇರೆ ತಂಡಗಳ ಫಲಿತಾಂಶವನ್ನು ಕಾದು ನೋಡಬೇಕಿದೆ. ಕೆಕೆಆರ್‌ ಪ್ಲೇ ಆಫ್‌ ಪ್ರವೇಶಿಸುವುದು ಕೊಂಚ ಕಷ್ಟವಾಗಿದೆ. ಮೇಲಿರುವ ಮುಂಬೈ, ಡೆಲ್ಲಿ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋತು, ರನ್‌ ರೇಟ್‌ನಲ್ಲಿ ಹಿಂದಿರಬೇಕಾಗುತ್ತದೆ. ಆಗ ಮಾತ್ರ ಕೆಕೆಆರ್‌ ಮುಂದಿನ ಹಂತ ಪ್ರವೇಶಿಸುವ ಪಡೆಯುವ ಸಾಧ್ಯತೆ ಇದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಸೂರ್ಯ ದೇವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಗೆ ಸೇರಿದ ಜನರಿಗೆ ಇಂದು ಮಿಶ್ರಫಲ ದೊರಕುವುದು. ಈ ದಿನ ನೀವು ನಿಮ್ಮ ಸ್ವಲ್ಪ ವಿಷಯಗಳನ್ನು ರಹಸ್ಯವಾಗಿ ಇಡುವುದು ಉತ್ತಮ. ಇಲ್ಲದಿದ್ದರೆ ಯಾವುದಾದರೂ ಸ್ನೇಹಿತರ ಸಹಾಯದಿಂದ ನಿಮ್ಮ ಮನೆಯಲ್ಲಿ ನಿಮ್ಮ ರಹಸ್ಯಗಳು ತಿಳಿಯಬಹುದು. ಇಂದು ಮೇಷ ರಾಶಿಗೆ ಸೇರಿದ ಜನರಿಗೆ ಮಕ್ಕಳಿಂದ ಶುಭ ಸುದ್ಧಿ ಲಭಿಸುವ ಯೋಗವಿದೆ. ಇಂದು ನಿಮಗೆ ಹೊಸ ಕೆಲಸ ದೊರಕುವ ಸಾಧ್ಯತೆ ಇದೆ.

** ವೃಷಭ ರಾಶಿ :
ವೃಷಭ ರಾಶಿಗೆ ಸೇರಿದ ಜನರು ಇಂದು ಯಾವುದೇ ವಾಹನವನ್ನು ಬೇರೆಯವರಿಂದ ಸಾಲವಾಗಿ ತೆಗೆದುಕೊಳ್ಳದೆ ಇರುವುದು ಉತ್ತಮ. ಇಲ್ಲದಿದ್ದರೆ ಅಪಘಾತವಾಗುವ ಸಂಭವವಿದೆ. ಇಂದು ನೀವು ಬೇರೆಯವರಿಗೆ ದುಃಖವಾಗುವಂತಹ ವಿಚಾರಗಳನ್ನು ಹೇಳದೆ ಇರುವುದು ಉತ್ತಮ. ಪ್ರೀತಿಯಲ್ಲಿರುವ ವೃಷಭ ರಾಶಿಗೆ ಸೇರಿದ ಜನರು ಇಂದು ತಮ್ಮ ಸಂಗಾತಿಯೊಂದಿಗೆ ಯಾವುದಾದರು ವಿಚಾರಕ್ಕೆ ಜಗಳವಾಗುವ ಸಂಭವವಿದೆ.

** ಮಿಥುನ ರಾಶಿ :
ಇಂದು ಮಿಥುನ ರಾಶಿಗೆ ಸೇರಿದ ಜನರು ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಮನೆಯಲ್ಲಿನ ಸಮಸ್ಯೆಗಳಿಂದ ಒತ್ತಡ ಹೆಚ್ಚಾಗಬಹುದು. ಈ ಅವಧಿಯಲ್ಲಿ ನೀವು ಯಾವುದೇ ರೀತಿಯ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಉತ್ತಮ. ಇಂದು ನೀವು ಕೆಲವು ಸಮಯವನ್ನು ನಿಮ್ಮ ಮಕ್ಕಳೊಂದಿಗೆ ಮಾತುಕತೆಯಲ್ಲಿ ಕಳೆಯುವಿರಿ. ಇದರಿಂದಾಗಿ ಮಾನಸಿಕ ಶಾಂತಿ ಹೊಂದಬಹುದು.

** ಕರ್ಕಾಟಕ ರಾಶಿ :
ಕಟಕ ರಾಶಿಗೆ ಸೇರಿದ ಜನರು ಇಂದು ಪಾಲುದಾರಿಕೆಯಲ್ಲಿ ಕೆಲಸವನ್ನು ಶುರು ಮಾಡುವುದು ಉತ್ತಮ. ರಾಜಕೀಯಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರ ಮೇಲೆ ಯಾವುದಾದರು ಆರೋಪ ಇಂದು ಬರಬಹುದು. ಈ ದಿನ ನೀವು ನಿಮ್ಮ ವಿರೋಧಿಗಳಿಂದ ಎಚ್ಚರದಿಂದಿರುವುದು ಉತ್ತಮ. ಇಂದು ನೀವು ಯಾವುದಾದರು ಕೆಲಸಕ್ಕೆ ಸಂಬಂಧಿಸಿದಂತೆ ಹಠಾತ್ ಪ್ರಯಾಣ ಮಾಡಬೇಕಾಗಿ ಬರಬಹುದು.

** ಸಿಂಹ ರಾಶಿ :
ಸಿಂಹ ರಾಶಿಗೆ ಸೇರಿದ ಜನರು ಇಂದು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ದಿನವನ್ನು ಹೊಂದುವರು. ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರು ಇಂದು ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ನೀವು ನಿಮ್ಮ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಚಿಂತೆಗೆ ಒಳಗಾಗದೆ ಇರುವುದು ಒಳ್ಳೆಯದು. ಏಕೆಂದರೆ ನೀವು ಮಹತ್ವಪೂರ್ಣವಾದ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರಬಹುದು.

** ಕನ್ಯಾ ರಾಶಿ :
ಕನ್ಯಾ ರಾಶಿಗೆ ಸೇರಿದ ಜನರು ಇಂದು ಹೊಸ ಸಂಪರ್ಕಗಳಿಂದ ಲಾಭವನ್ನು ಪಡೆಯುವರು. ನೀವು ಯಾವುದಾದರೂ ಮಹತ್ವಪೂರ್ಣವಾದ ಚರ್ಚೆಯಲ್ಲಿ ಭಾಗವಹಿಸುವಿರಿ. ನೀವು ನಿಮ್ಮ ವ್ಯಾಪಾರದಲ್ಲಿ ಬದಲಾವಣೆಯನ್ನು ಮಾಡುವುದು ಉತ್ತಮ. ಇಲ್ಲದಿದ್ದರೆ ನಿಮಗೆ ಯಾರೊಂದಿಗಾದರೂ ಜಗಳವಾಗಬಹುದು. ನೀವು ಯಾರಿಗಾದರೂ ಸಲಹೆಯನ್ನು ನೀಡುತ್ತಿದ್ದರೆ, ಅದರ ಬಗ್ಗೆ ಎಚ್ಚರಿಕೆವಹಿಸುವುದು ಉತ್ತಮ.

** ತುಲಾ ರಾಶಿ :
ತುಲಾ ರಾಶಿಗೆ ಸೇರಿದ ಜನರಿಗೆ ಇಂದು ಮಿಶ್ರಫಲ ದೊರಕುವುದು. ನಿಮ್ಮ ಮನೆಗೆ ಯಾವುದಾದರು ಹೊಸ ಅತಿಥಿಯ ಆಗಮನವಾಗುವ ಸಂಭವವಿದೆ. ನೀವು ನಿಮ್ಮ ಮನೆಯವರೊಂದಿಗೆ ಸಂತೋಷಮಯವಾದ ಸಮಯವನ್ನು ಕಳೆಯಬೇಕೆಂದು ಕಾಯುತ್ತಿದ್ದರೆ, ನಿಮ್ಮ ಮನೆಯ ಸದಸ್ಯರ ಮದುವೆಯಲ್ಲಿ ಅಡೆತಡೆ ಉಂಟಾಗುತ್ತಿದ್ದರೆ, ಅದೆಲ್ಲವೂ ದೂರವಾಗುವುದು. ಇದರಿಂದಾಗಿ ಮನೆಯಲ್ಲಿ ಸಂತೋಷಮಯವಾದ ವಾತಾವರಣವಿರಲಿದೆ.

** ವೃಶ್ಚಿಕ ರಾಶಿ :
ವ್ಯಾಪಾರವನ್ನು ಮಾಡುವ ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಇಂದು ಕೆಲವು ಸಮಸ್ಯೆಗಳು ಎದುರಾಗಬಹುದು. ನಿಮ್ಮ ಮನೆಗೆ ಯಾವುದಾದರು ಹೊಸ ಅತಿಥಿ ಆಗಮನವಾಗಬಹುದು. ನೀವು ನಿಮ್ಮ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಮೋಜು-ಮಸ್ತಿಯಿಂದ ಸಮಯವನ್ನು ಕಳೆಯುವಿರಿ. ಮಕ್ಕಳಿಗೆ ಸಂಬಂಧಿಸಿದಂತೆ ಯಾವುದಾದರೂ ಶುಭ ಸುದ್ದಿ ಲಭಿಸುವ ಸಂಭವವಿದೆ.

** ಧನಸ್ಸು ರಾಶಿ :
ಧನು ರಾಶಿಗೆ ಸೇರಿದ ಜನರಿಗೆ ಇಂದು ಮಿಶ್ರಫಲ ದೊರಕುವುದು. ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಆನಂದಮಯವಾದ ಕ್ಷಣಗಳನ್ನು ಕಳೆಯುವಿರಿ. ನಿಮ್ಮ ಮನೆಯಲ್ಲಿ ಯಾವುದಾದರೂ ಉತ್ಸವವನ್ನು ಆಯೋಜಿಸುವ ಬಗ್ಗೆ ಯೋಚನೆಯನ್ನು ಮಾಡುವಿರಿ. ನಿಮಗೆ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ದೊರಕುವುದರಿಂದ ನೀವು ಸಂತಸದಿಂದಿರುವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಯೋಜನೆಯನ್ನು ಪೂರ್ಣಗೊಳಿಸುವುದಕ್ಕಾಗಿ ನಿಮಗೆ ಇಂದು ಪ್ರಯಾಣಿಸಬೇಕಾಗಿ ಬರಬಹುದು.

** ಮಕರ ರಾಶಿ :
ಇಂದು ಮಕರ ರಾಶಿಗೆ ಸೇರಿದ ಜನರ ಆರೋಗ್ಯವು ಸಾಕಷ್ಟು ಉತ್ತಮವಾಗಿರುವುದಿಲ್ಲ. ಕೆಲಸ ಹೆಚ್ಚಾಗುವುದರಿಂದಾಗಿ ನೀವು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಅಡೆತಡೆಗಳನ್ನು ಎದುರಿಸುವಿರಿ. ನೀವು ಮನೆಯಿಂದ ಹೊರಗೆ ಹೋಗುತ್ತಿದ್ದರೆ, ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ. ಇಲ್ಲದಿದ್ದರೆ ಅವು ಕಳೆದುಹೋಗುವ ಅಥವಾ ಕಳ್ಳತನವಾಗುವ ಸಂಭವವಿದೆ. ನಿಮ್ಮ ಮನೆಯ ಯಾವುದಾದರೂ ಸದಸ್ಯರಿಗೆ ಹೊಸ ಕೆಲಸ ದೊರಕುವ ಸಂಭವವಿದೆ.

** ಕುಂಭ ರಾಶಿ :
ಕುಂಭ ರಾಶಿಗೆ ಸೇರಿದ ಜನರಿಗೆ ಇಂದು ಅನುಕೂಲಕರ ದಿನವಾಗಿರುವುದು. ನೀವು ನಿಮ್ಮ ಮನೆಯವರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ ಮತ್ತು ನೀವು ಹೊರಗೆ ಸುತ್ತಾಡಲು ತೆರಳುವ ಬಗ್ಗೆ ಯೋಜನೆಗಳನ್ನು ರೂಪಿಸುವಿರಿ. ಅವಿವಾಹಿತ ಕುಂಭ ರಾಶಿಗೆ ಸೇರಿದ ಜನರು ಇಂದು ತಮ್ಮ ಸಂಗಾತಿಯನ್ನು ಅಥವಾ ಪ್ರೇಮಿಯನ್ನು ಭೇಟಿಯಾಗುವ ಸಂಭವವಿದೆ. ಹಳೆಯ ಹೂಡಿಕೆಗಳಿಂದ ಇಂದು ನಿಮಗೆ ಹೆಚ್ಚಿನ ಲಾಭ ದೊರಕುವ ಸಂಭವವಿದೆ.

** ಮೀನ ರಾಶಿ :
ಇಂದು ಮೀನ ರಾಶಿಗೆ ಸೇರಿದ ಜನರಿಗೆ ಸಂತೋಷದಿಂದ ಕೂಡಿದ ದಿನವಾಗಿರುವುದು. ಪ್ರೀತಿಯ ಜೀವನ ನಡೆಸುತ್ತಿರುವವರಿಗೆ ನಾಳೆ ಉತ್ತಮ ದಿನವಾಗಿರುವುದು. ನಿಮಗೆ ನಿಮ್ಮ ಸಂಗಾತಿಯಿಂದ ಯಾವುದಾದರೂ ಉಡುಗೊರೆ ದೊರಕಬಹುದು ಮತ್ತು ನೀವು ನಿಮ್ಮ ಸಂಗಾತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಿರಿ. ಇಂದು ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಪಾಲುದಾರಿಕೆಯನ್ನು ಹೊಂದದೆ ಇರುವುದು ಉತ್ತಮ.

Categories
Uncategorized

ಎ ಐ ಆಧಾರಿತ ಕನ್ನಡದ ಮೊದಲ ಚಿತ್ರ ಲವ್ ಯು!

ಎ ಐ ಆಧಾರಿತ ಕನ್ನಡದ ಮೊದಲ ಚಿತ್ರ ಲವ್ ಯು!
– ವಿಶ್ವದ ಮೊದಲ ಎಐ ಚಿತ್ರ ಎಂಬ ಹೆಗ್ಗಳಿಕೆಗೆ ಕನ್ನಡದ ಸಿನಿಮಾ
– ಹೇಗಿದೆ ಸಿನಿಮಾ…? ಏನಿದು ವಿಶೇಷ…?

NAMMUR EXPRESS NEWS
ಇತ್ತೀಚೆಗೆ ಯುವಜನತೆಯನ್ನು ಆಕರ್ಷಿಸಿದ ನೂತನ ತಂತ್ರಜ್ಞಾನ ಎಐ. ಇದರ ಮೂಲಕ ಜನರು ತಮ್ಮ ಫೋಟೋಗಳನ್ನು, ವೀಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಸಹಜ ಸಂಗತಿಯಾಗಿದೆ. ಆದರೆ ಕನ್ನಡದ ನಿರ್ದೇಶಕರೊಬ್ಬರು ಇದನ್ನೇ ಅಸ್ತ್ರವನ್ನಾಗಿಸಿಕೊಂಡು, ಕನ್ನಡ ಚಿತ್ರವೊಂದನ್ನು ತಯಾರಿಸಿರುವುದಲ್ಲದೆ ಇದೇ ವಾರ ಬಿಡುಗಡೆಗೂ ಸಿದ್ಧಗೊಂಡಿದೆ.
ಗರುಡಾಕ್ಷ ಮತ್ತು ಕಂಟೇನರ್ ಚಿತ್ರಗಳನ್ನು ನಿರ್ದೆಶಿಸಿದ ಎಸ್. ನರಸಿಂಹಮೂರ್ತಿ ಅವರು ಇದೀಗ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಿಕೊಂಡು ಲವ್ ಯು ಎಂಬ ಕನ್ನಡ ಚಿತ್ರವೊಂದನ್ನು ನಿರ್ಮಿಸಿ, ನಿರ್ದೇಶಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಚಿತ್ರವು ತಯಾರಾಗಿದ್ದು, ಇದೇ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿ ನಿಂತಿದೆ.
ಲವ್ ಯು ಚಿತ್ರವನ್ನು ತಯಾರಿಸಲು ಇಪ್ಪತ್ತು ಎಐ ಉಪಕರಣಗಳನ್ನು ಬಳಸಲಾಗಿದ್ದು, 95 ನಿಮಿಷಗಳ ಈ ಚಿತ್ರದಲ್ಲಿ ಹನ್ನೆರಡು ಹಾಡುಗಳಿವೆ ಎಂದು ಚಿತ್ರದ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಕನ್ನಡ ಅಷ್ಟೇ ಅಲ್ಲದೆ, ವಿಶ್ವದ ಮೊದಲ ಎಐ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಲವ್ ಯು ಚಿತ್ರತಂಡ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿಯನ್ನು ಮೂಡಿಸಿದೆ. ಎಐ ಇಂಜಿನಿಯರ್ ಆದ ನೂತನ್ ಚಿತ್ರತಂಡದ ಜೊತೆಗಿದ್ದು, ಸುಂದರ ರಾಜ್ ಗುಂಡೂರಾವ್ ಅವರು ಚಿತ್ರದ ಸೃಜನಶೀಲತೆಯ ಬೆನ್ನೆಲುಬಾಗಿ ನಿಂತಿದ್ದಾರೆ. ಅಲ್ಲದೆ ಸಿಬಿಎಫ್ ಸಿ ಯಿಂದ U/A ಪ್ರಮಾಣ ಪತ್ರ ಪಡೆದ ಮೊದಲ ಎಐ ಚಿತ್ರ ಎಂಬ ಪ್ರಶಂಸೆಗೂ ಪಾತ್ರವಾಗಿದೆ ಲವ್ ಯು ಚಿತ್ರ. ಈ ಮೂಲಕ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಅನುಮತಿ ದೊರೆತಂತಾಗಿದೆ.
ಪ್ರಣಯದ ಕಥೆಯನ್ನು ಹೇಳುವ ಭಾಷೆ ಎಂದಿನಂತಿರದೆ ಸಂಪೂರ್ಣವಾಗಿ ಹೊಸತಾಗಿದೆ ಎಂದು ಚಿತ್ರತಂಡ ಹೇಳಿಕೆ ನೀಡುವ ಮೂಲಕ ಚಿತ್ರರಸಿಕರ ಕುತೂಹಲವನ್ನು ಮತ್ತಷ್ಟು ಕೆರಳಿಸಿದ್ದಾರೆ. ಚಿತ್ರದ ವೀಕ್ಷಣೆಗೆ ಎಲ್ಲರು ಕಾತರತೆಯಿಂದ ಕಾದಿದ್ದಾರೆ ಎನ್ನಲಾಗಿದೆ.

Categories
ಹಾಸನ

ಕಾಡಾನೆ ಆಯ್ತು ಈಗ ಕಾಡೆಮ್ಮೆ ಕಾಟ

ಕಾಡಾನೆ ಆಯ್ತು ಈಗ ಕಾಡೆಮ್ಮೆ ಕಾಟ

ಸಕಲೇಶಪುರದ ಕಲ್ಲಹಳ್ಳಿ ಗ್ರಾಮದಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡೆಮ್ಮೆಗಳ ಹಾವಳಿ ಮಿತಿ ಮೀರಿದ್ದು ತಾಲುಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಹಿಂಡು ಹಿಂಡಾಗಿ ಬೆಳೆ ನಾಶ ಮಾಡ್ತಿರೊ ಕಾಟಿ ಗಳ ಹಾವಳಿಯಿಂದ ಜನರು ಆತಂಕಗೊಂಡಿದ್ದಾರೆ.

ಹಾಸನದಲ್ಲಿ ಕಾಡಾನೆಗಳ ಹಾವಳಿ ಕೊಂಚ ಕ್ಷೀಣಿಸಿದ ಬೆನ್ನಲ್ಲೇ ಇದೀಗ ಕಾಡೆಮ್ಮೆಗಳ ಉಪಟಳ ಹೆಚ್ಚಾಗಿದ್ದು ಒಂದೆಡೆ ಬೆಳೆ ನಾಶದಿಂದ ಜನ ಕಂಗಾಲಾಗಿದ್ದರೆ ಇನ್ನೊಂದೆಡೆ ಅವುಗಳ ಧಾಳಿಯ ಭಯದಲ್ಲಿ ಆತಂಕಗೊಂಡಿದ್ದಾರೆ. ಒಂದು ವಾರದ ಹಿಂದೆ ವೃದ್ದನ ಕಾಡೆಮ್ಮೆ ಧಾಳಿ ಮಾಡಿ ಜೀವ್ ತೆಗೆದಿತ್ತು. ಇದೀಗ ಮತ್ತೆ ಹಿಂಡು ಹಿಂಡಾಗಿ ಕಾಡೆಮ್ಮೆ ಕಾಣಿಸಿಕೊಂಡಿದ್ದು ಒಂಟಿಯಾಗಿ ಓಡಾಡಲು ಜನ ಭಯ ಪಡುತ್ತಿದ್ದಾರೆ . ಸಂಜೆ ಯಾಗುತ್ತಲೇ ರೈತರ ಬೆಳೆಗಳತ್ತ ಧಾವಿಸಿ ಬರ್ತಿರೊ ಕಾಡೆಮ್ಮೆಗಳ ಹಾವಳಿ ತಡೆಗೆ ಕ್ರಮ ವಹಿಸುವಂತೆ ಅರಣ್ಯ ಇಲಾಖೆಗೆ ಮಲೆನಾಡಿಗರು ಆಗ್ರಹಿಸಿದ್ದಾರೆ.

Categories
ಅಡಿಕೆ-ದರ

ಇಂದಿನ ಅಡಿಕೆ ದರ ಎಷ್ಟಿದೆ?

ಇಂದಿನ ಅಡಿಕೆ ದರ ಎಷ್ಟಿದೆ?
– ಅಡಿಕೆ ಬೆಲೆ ಏರಿಕೆಯಾಗುತ್ತಾ?ಇಳಿಕೆಯಾಗುತ್ತಾ?

NAMMUR EXPRESS NEWS

ಶಿವಮೊಗ್ಗ

ಬೆಟ್ಟೆ: 47069- 57299

ಸರಕು: 61209- 85710

ಗೊರಬಲು: 18651- 29150

ರಾಶಿ: 46169- 57500

Categories
ಮಂಗಳೂರು

ಬಜ್ಪೆ ಭಟ್ರಕೆರೆಯಲ್ಲಿ ನೂತನ ರಿಕ್ಷಾ ಪಾರ್ಕ್ ಉದ್ಘಾಟನೆ!

ಬಜ್ಪೆ ಭಟ್ರಕೆರೆಯಲ್ಲಿ ನೂತನ ರಿಕ್ಷಾ ಪಾರ್ಕ್ ಉದ್ಘಾಟನೆ!

– ಉದ್ಘಾಟನೆ ಮಾಡಿ ಮಾತನಾಡಿದ – ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ
– “ರಿಕ್ಷಾ, ಆಟೋ ಚಾಲಕ ಮಾಲಕರ ಪರವಾಗಿ ಎಂದಿಗೂ ನಾನಿದ್ದೇನೆ”: ಐವನ್

NAMMUR EXPRESS NEWS
ಬಜ್ಪೆ: ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಟ್ರಕೆರೆ ಎಂಬಲ್ಲಿ ನೂತನ ರಿಕ್ಷಾ ಪಾರ್ಕ್ ಉದ್ಘಾಟನೆಯು ನಡೆಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾರವರು ರಿಕ್ಷಾ ಪಾರ್ಕ್ ಉದ್ಘಾಟನೆ ಮಾಡಿ ಮಾತನಾಡಿದರು.
ರಿಕ್ಷಾ ಆಟೋ ಚಾಲಕ ಮಾಲಕರ ಪರವಾಗಿ ನಾನು ಯಾವಾಗಲು ಇದ್ದೇನೆ, ತಮ್ಮ ಕುಟುಂಬ ನಿರ್ವಹಣೆಗೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರದಿಂದ ಸಿಗುವ ಸವಲತುಗಳನ್ನು ತಮಗೆ ಪ್ರಾಮಾಣಿಕವಾಗಿ ಸಿಗಲು ಪ್ರಯತ್ನಿಸುತ್ತೇನೆ ಮತ್ತು ಅದರ ಸದುಪಾಯೋಗ ತಾವುಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ, ಗ್ರಾ. ಪಂ ಉಪಾಧ್ಯಕ್ಷರಾದ ಸಂದೇಶ್ ,ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ, ಗ್ರಾ. ಪಂ ಸದಸ್ಯರಾದ ಸರೋಜ, ಸಾದಿಕ್, ಗ್ರಾ ಪಂ PDO ರಾಥೋಡ್, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಸುಹೈಲ್, ದೀಪಕ್ ಪೆರ್ಮುದೆ ಉಪಸ್ಥಿತರಿದ್ದರು.