Categories
ಕೃಷಿ ತೀರ್ಥಹಳ್ಳಿ ಮಲ್ನಾಡ್

ಅಡಿಕೆ ಸುಲಿಯುವ ಯಂತ್ರಕ್ಕೆ ದಂಡ ಸರಿಯೇ..?

ಅಡಿಕೆ ಸುಲಿಯುವ ಯಂತ್ರಕ್ಕೆ ದಂಡ ಸರಿಯೇ..?
– ಬಡ ರೈತರಿಗೂ 50-60 ಸಾವಿರ ದಂಡ ಹಾಕುತ್ತಿರುವ ಮೆಸ್ಕಾಂ
– ಕೃಷಿ ಚಟುವಟಿಕೆಗೆ ಸರ್ಕಾರದಿಂದಲೇ ಕಿರಿಕಿರಿ
– ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಧರಣೇಶ್ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ: ಅತೀವೃಷ್ಟಿ, ಅನಾವೃಷ್ಟಿ, ಪ್ರಾಣಿಗಳ ಹಾವಳಿ, ಅಡಿಕೆ ರೋಗಗಳಿಂದ ಮಲೆನಾಡಿನ ಅಡಿಕೆ ಬೆಳೆಗಾರ ರೈತರು ತತ್ತರಿಸಿ ಹೋಗಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಮೆಸ್ಕಾಂ ಅಡಿಕೆ ಸುಲಿಯುವ ಯಂತ್ರ ಬಳಸುವ ರೈತರ ಮೇಲೆ ಕೇಸು ಹಾಕಿ 50-60 ಸಾವಿರದ ದುಬಾರಿ ದಂಡ ವಿಧಿಸುತ್ತಿದೆ. ಇಲಾಖೆಯ ಈ ಕ್ರಮದ ವಿರುದ್ಧ ಅಡಿಕೆ ಬೆಳೆಗಾರ ರೈತ ಸಮೂಹ ಇದೀಗ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಮಲೆನಾಡಿನ ಜೀವನಾಡಿಯಾಗಿರುವ ಅಡಿಕೆ ಬೆಳೆ ಬೆಳೆಯುವ ರೈತರನ್ನು ಉಳಿಸಲು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ರೈತರ ನೆರವಿಗೆ ಧಾವಿಸಬೇಕೆಂದು ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಧರಣೇಶ್ ಒತ್ತಾಯಿಸಿದ್ದಾರೆ.

ಅಡಿಕೆಗೆ ರೋಗ, ಕಾರ್ಮಿಕರ ದುಬಾರಿ ವೇತನದಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ವರ್ಷದಲ್ಲಿ ಕೇವಲ 1ರಿಂದ 2 ತಿಂಗಳು ಅಡಿಕೆ ಸುಲಿತ ನಡೆಯುತ್ತದೆ. ಕಾರ್ಮಿಕರ ಸಮಸ್ಯೆಯಿಂದ ರೈತರಿಗೆ ಅಡಿಕೆ ಸುಲಿಯುವ ಯಂತ್ರದ ಉಪಯೋಗ ಅನಿವಾರ್ಯವಾಗಿದೆ. ಸರ್ಕಾರ ರೈತರ ಅಡಿಕೆ ಯಂತ್ರಗಳಿಗೆ ರಿಯಾಯಿತಿ ವಿದ್ಯುತ್ ಒದಗಿಸಬೇಕು. ಇಲ್ಲವೇ ತಾತ್ಕಾಲಿಕ ಕಮರ್ಷಿಯಲ್‌ ಸಂಪರ್ಕಕ್ಕೆ ಅವಕಾಶ ಕಲ್ಪಿಸಬೇಕು. ಆದರೆ ಮೆಸ್ಕಾಂ ಖಾಯಂ ಕಮರ್ಷಿಯಲ್ ಸಂಪರ್ಕ ಪಡೆಯುವಂತೆ ರೈತರ ಮೇಲೆ ಒತ್ತಡ ತರುತ್ತಿದೆ. ಒಂದು-ಎರಡು ತಿಂಗಳು ಮಾತ್ರ ರೈತರ ಅಡಿಕೆ ಯಂತ್ರಕ್ಕೆ ಕರೆಂಟ್ ಬೇಕು. ಖಾಯಂ ಸಂಪರ್ಕ ಪಡೆದರೆ ಬಾಕಿ ಉಳಿದ ತಿಂಗಳುಗಳಿಗೂ ಕನಿಷ್ಟ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಸರ್ಕಾರ ಗೃಹ ಬಳಕೆಯ ವಿದ್ಯುತ್ ಅನ್ನು ಅಡಿಕೆ ಸುಲಿಯಲು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಿ, ಅದು ಸಾಧ್ಯವೇ ಇಲ್ಲ ಎಂದಾದರೆ ತಾತ್ಕಾಲಿಕ ಕಮರ್ಷಿಯಲ್ ಸಂಪರ್ಕ ಕೊಡಲಿ. ಹೀಗೆ ದುಬಾರಿ ದಂಡ ಹಾಕಿದರೆ ರೈತರು ಒಗ್ಗೂಡಿ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದು ಧರಣೇಶ್ ಹೇಳಿದ್ದಾರೆ.

Categories
ಮಲ್ನಾಡ್

ಮಲೆನಾಡಿನ ಸಾಂಪ್ರದಾಯಿಕ ಹಬ್ಬ ಅಂಟಿಗೆ ಪಿಂಟಿಗೆ!

ಮಲೆನಾಡಿನ ಸಾಂಪ್ರದಾಯಿಕ ಹಬ್ಬ ಅಂಟಿಗೆ ಪಿಂಟಿಗೆ!
– ಶಿರುಪತಿ ಟೆಂಕಬೈಲು ಕಲಾವಿದರ ಸೇವಾ ಕಲೆ
– ಗಬಡಿಯಲ್ಲಿ ಅಂಟಿಗೆ ಪಿಂಟಿಗೆಗೆ ಯುವಕರ ಟೀಮ್!

NAMMUR EXPRESS NEWS
ಅಂಟಿಗೆ ಪಿಂಟಿಗೆ ಮಲೆನಾಡಿನ ಸಾಂಪ್ರದಾಯಿಕ ಹಬ್ಬ ದೀಪಾವಳಿ ಸಮಯದಲ್ಲಿ ಮಾಡುವಂತ ಜಾನಪದ ಕಲೆ. ಮಲೆನಾಡಿನ ಜನಪ್ರಿಯ ಸಂಪ್ರದಾಯಿಕ ಜಾನಪದ ಕಲೆಯನ್ನು ಶಿರುಪತಿ ಟೆಂಕ ಬೈಲು ತಂಡದವರು ಪ್ರತಿವರ್ಷದಂತೆ ಈ ವರ್ಷವೂ ಸಹ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಶ್ರೀ ವ್ಯಾಘ್ರ ನರಸಿಂಹಸ್ವಾಮಿ ದೇವರ ಆಶೀರ್ವಾದದೊಂದಿಗೆ ಜ್ಯೋತಿಯನ್ನು ಹಚ್ಚಿ ಮನೆ ಮನೆಗೆ ಭೇಟಿ ನೀಡಿದ್ದಾರೆ. ಕನ್ನಡ ಜಾನಪದ ಪರಿಷತ್ ಸಹಯೋಗದೊಂದಿಗೆ ಕಲೆಯನ್ನು ಮಲೆನಾಡಿನಲ್ಲಿ ಮುಂದಿನ ಪೀಳಿಗೆಗೆ ಯುವಕರಿಗೆ ಉಳಿಸಲು ಮತ್ತು ಈ ಹಿಂದೆ ಅನೇಕ ಸಮಾಜದ ಕೆಲಸಗಳಿಗೆ ಅಂಟಿಗೆ ಪಿಂಟಿಗೆಯಿಂದ ಸಂಗ್ರಹಿಸಿದ ಕಾಣಿಕೆಯನ್ನು ಉತ್ತಮ ಕೆಲಸಕ್ಕೆ ಅಭಿವೃದ್ಧಿಗೆ ಬಳಸಿಕೊಂಡು ಈ ತಂಡವು ಸುಮಾರು ವರ್ಷಗಳಿಂದ ಈ ಕಲೆ ಬೆಳೆಸಿಕೊಂಡು ಬಂದಿದ್ದಾರೆ. ಟೆಂಕಬೈಲು ಶ್ರೀನಿವಾಸ್, ಸಂಜೀವ್, ಗಿರೀಶ್ ಮಂಜುನಾಥ್, ಶಿರುಪತಿ ಇನ್ನು ಪ್ರಮುಖರು ಕುಸ್ಕಿ ಹಾಗೂ ತುಪ್ಪದ ಮನೆ ಅನೇಕ ಯುವಕರು ಸಹಕರಿಸಿದರು.

ಗಬಡಿ ಯಲ್ಲಿ ಯುವಕರ ತಂಡ!

ಆಧುನಿಕ ತಂತ್ರಜ್ಞಾನದ ಸಮಯದಲ್ಲಿ ಅಂದರೆ ಮೊಬೈಲ್ ಯುಗದಲ್ಲಿ ಇಂತಹ ಅದೆಷ್ಟು ಜನಪದ ಕಲೆಗಳು ನಶಿಸಿ ಹೋಗಲು ಸಿದ್ಧವಾಗಿದೆ. ಗಬಡಿ ಯುವಕರು ಈ ದೀಪಾವಳಿಯ ಅಂಟಿಗೆ ಪಿಂಟಿಗೆ ಸೇವೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಪ್ರತಿ ಒಂದನ್ನು ಹಿರಿಯರ ಮಾರ್ಗದರ್ಶನದಂತೆ ಅಚ್ಚುಕಟ್ಟಾಗಿ ನಡೆಸಿ ಈ ಸಂಪ್ರದಾಯವನ್ನು ಉಳಿಸಿ ಮತ್ತು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಂಟಿಗೆ ಪಿಂಟಿಗೆಯ ಉಸಿರು ಪದ್ಯ. ಆ ಪದ್ಯಗಳನ್ನು ತುಂಬಾ ಸುಮಧುರವಾಗಿ ಕಲಿತು ಇಡೀ ಊರಿನ ಗ್ರಾಮಸ್ಥರ ಗಮನವನ್ನು ಸೆಳೆದಿದ್ದಾರೆ.

[embedyt] https://www.youtube.com/watch?v=NvkAp3N6btc%5B/embedyt%5D

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?

ಬೆಟ್ಟೆ- 45599-52699
ಗೊರಬಲು – 28300-38209
ರಾಶಿ – 45169-47179
ಸರಕು – 56000-84550
ರಾಶಿ ನ್ಯೂ – 45039-47119
ಸಿಪ್ಪೆಗೋಟು –16119-21169
ಚಾಲಿ- 33099-38678
ಕೋಕಾ – 14699-34699
ಕರೆಗೋಟು – 30899-36699
ಬಿಳೆಗೋಟು – 15211-32600

Categories
ತೀರ್ಥಹಳ್ಳಿ

ಜನಮನ ಸೆಳೆದ ಮಹಾ ರಾತ್ರಿ ನಾಟಕ!

ಜನಮನ ಸೆಳೆದ ಮಹಾ ರಾತ್ರಿ ನಾಟಕ!
– ತೀರ್ಥಹಳ್ಳಿಯಲ್ಲಿ ಸಾಗರದ ಸ್ಪಂದನ ಸಂಸ್ಥೆಯ ಕಲಾವಿದರ ನಾಟಕ ಪ್ರದರ್ಶನ
– ಸರ್ಕಾರಿ ಡಿಗ್ರಿ ಕಾಲೇಜು, ತುಂಗಾ ಕಾಲೇಜಲ್ಲಿ ಪ್ರದರ್ಶನ

NAMMUR EXPRESS NEWS
ತೀರ್ಥಹಳ್ಳಿ: ಗೌತಮ ಬುದ್ಧ ಜೀವನ ಕಥೆಯುಳ್ಳ ಮಹಾ ರಾತ್ರಿ ನಾಟಕ ಇತ್ತೀಚಿಗೆ ತೀರ್ಥಹಳ್ಳಿಯ ಸರ್ಕಾರಿ ಡಿಗ್ರಿ ಕಾಲೇಜು, ತುಂಗಾ ಕಾಲೇಜಲ್ಲಿ ಪ್ರದರ್ಶನ ಕಂಡಿತು. ಸಾಗರದ ಸ್ಪಂದನ ಸಂಸ್ಥೆ, ಕುಪ್ಪಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಆಶ್ರಯದಲ್ಲಿ ನಾಟಕ ಪ್ರದರ್ಶನಗೊಂಡಿತು. ಸಿದ್ಧಾರ್ಥ ಓರ್ವ ರಾಜನಾಗಿದ್ದರೂ ಕೂಡ ರಾಜ ವೈಭೋಗ ತೊರೆದು ವೈರಾಗ್ಯದ ಕಡೆಗೆ ಹೋಗುವ ಸನ್ನಿವೇಶ ಅಸಾಮಾನ್ಯವಾಗಿದೆ. ಹಳೆಗನ್ನಡದಲ್ಲಿ ಕುವೆಂಪು ರಚಿಸಿರುವ ಮಹಾರಾತ್ರಿ ನಾಟಕದ ಸಾರಾಂಶ ವಿದ್ಯಾರ್ಥಿಗಳಿಗೆ ತಲುಪಿಸುವುದು ಅತ್ಯಂತ ಕಷ್ಟದ ಕೆಲಸ. ನಾಟಕದ ಕಲಾವಿದರು ಪಾತ್ರಗಳಿಗೆ ಜೀವತುಂಬಿ ವಿದ್ಯಾರ್ಥಿಗಳನ್ನು ತಲುಪಿದ್ದಾರೆ ಎಂದು ಪ್ರಾಂಶುಪಾಲ ಕೆ.ಅಂಜನಪ್ಪ ಅಭಿಪ್ರಾಯಪಟ್ಟರು. ನಾಟಕ ನಿರ್ದೇಶಕಿ ಎಂ.ವಿ.ಪ್ರತಿಭಾ ಇದ್ದರು.

ನಾಟಕದಲ್ಲಿ ಕಲಾವಿದರು

ಸ್ಪೂರ್ತಿ ವೈ ಎಚ್

ಸಿದ್ದಾರ್ಥನ ಪಾತ್ರಧಾರಿ
ಪ್ರಥಮ ಪದವಿ ಶಿಮೊಗ್ಗ ಕಟೀಲು ಅಶೋಕ್ ಪೈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ನೇಹ ಎ
ಸಾಗರದ ಇಂದಿರಾಗಾಂಧಿ ಕಾಲೇಜಿನಲ್ಲಿ ತೃತೀಯ ಬಿ ಕಾಂ

ಸ್ವಾತಿ ವೈ
ಸಾಗರದ ಎಲ್ ಬಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮುಗಿಸಿರುತ್ತಾರೆ .

ಕೀರ್ತಿರಾಜ್
ಪದವಿ ಮುಗಿಸಿ ಕುಟುಂಬದ ಸದಸ್ಯರೊಂದಿಗೆ ಸಾಗರ ಪಟ್ಟಣದಲ್ಲಿ ಹಣ್ಣಿನ ಅಂಗಡಿ ನಡೆಸುತ್ತಿದ್ದಾರೆ.

ಕಾರ್ತಿಕ್
ಸಾಗರದಲ್ಲಿ ಮೊಬೈಲ್ ರಿಪೇರಿ ಶಾಪ್ ನಡೆಸುತ್ತಾರೆ.

ನೇಹ ಎಂ
ಸಾಗರದ ಇಂದಿರಾಗಾಂಧಿ ಕಾಲೇನಲ್ಲಿ ಅಂತಿಮ ಪದವಿ ಓದುತ್ತಿದ್ದಾರೆ ..ನಾಟಕದಲ್ಲಿ ಹಿನ್ನೆಲೆ ಸಂಗೀತ ನಿರ್ವಹಣೆ ಮಾಡುತ್ತಾರೆ.

Categories
ರಾಷ್ಟ್ರೀಯ ವಾರ್ತೆ

ಕ್ರಿಕೆಟ್‌ ವಿಶ್ವಕಪ್‌: ಸೋಲಿನ ನೋವಲ್ಲಿ ದೇಶ!

ಕ್ರಿಕೆಟ್‌ ವಿಶ್ವಕಪ್‌: ಸೋಲಿನ ನೋವಲ್ಲಿ ದೇಶ!
– ಛೇ..ಎಲ್ಲೆಲ್ಲೂ ಅದೇ ಚರ್ಚೆ: ಸಮಾಧಾನ
– ಆಸ್ಟ್ರೇಲಿಯಾ ವಿರುದ್ದ ಭಾರತ ಸೋತಿದ್ದೇಕೆ..?

NAMMUR EXPRESS NEWS
ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ಸೋಲನ್ನು ಭಾರತೀಯರಿಗೆ ಪಂದ್ಯ ಮುಗಿದು ಒಂದು ದಿನ ಕಳೆದರೂ ಮರೆಯಲು ಆಗುತ್ತಿಲ್ಲ. ಭಾರತೀಯ ಆಟಗಾರರು ಕಣ್ಣೀರು ಸುರಿಸಿದ್ದಾರೆ. ಎಲ್ಲೆಲ್ಲೂ ಹತಾಶೆ ಕಂಡು ಬಂತು. ಆದರೆ ಈಗ ಅದೇ ಚರ್ಚೆ ಎಲ್ಲೆಡೆ ಕಂಡು ಬರುತ್ತಿದೆ. ಲೀಗ್‌ ಹಂತದಲ್ಲಿ ಸತತ 9 ಪಂದ್ಯಗಳನ್ನು ಗೆದ್ದಿರುವ ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಭರ್ಜರಿಯಾಗಿಯೇ ಸೋಲಿಸಿ ವಿಶ್ವಕಪ್‌ ಫೈನಲ್‌ಗೆ ತಲುಪಿ ನೂರು ಕೋಟಿ ಜನರ ಮನಸು ಗೆದ್ದಿತ್ತು. ಇನ್ನೇನು ಗೆಲುವು ನಮ್ಮದೇ ಅನ್ನುವಷ್ಟರಲ್ಲಿ ಕೈಚೆಲ್ಲಿತು. ಭಾರತ 20 ವರ್ಷಗಳ ಹಿಂದಿನ ಸೇಡನ್ನು ತೀರಿಸಿಕೊಳ್ಳುತ್ತದೆ ಎಂದು ಕಾದು ಕುಳಿತಿದ್ದ ಭಾರತೀಯರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಫಲಿಸಲಿಲ್ಲ ಭಾರತ ರಣತಂತ್ರ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್, ನಿರೀಕ್ಷೆಗಿಂತ ನಿಧಾನವಾಗಿ ಮತ್ತು ಶುಷ್ಕವಾಗಿದ್ದು ನಿರ್ಣಾಯಕ ಪಾತ್ರವಹಿಸಿತ್ತು. ಜೊತೆಗೆ ಭಾರತ ತಂಡ ಮಾಡಿಕೊಂಡಿದ್ದ ರಣತಂತ್ರ ಫಲಿಸಲೇ ಇಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್‌ ಸ್ವರೂಪ ಬದಲಾಗಿತ್ತು. ನಿಧಾನಗತಿಯ ಪಿಚ್‌ ಲಾಭ ಪಡೆಯವಲ್ಲಿ ಭಾರತ ವಿಫಲವಾಯ್ತು. ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಚಾಣಾಕ್ಷತೆ ಪಂದ್ಯದಲ್ಲಿ ಸಕ್ಸಸ್‌ ಆಗಿದೆ. ಬೌಲಿಂಗ್‌ ಬದಲಾವಣೆಯ ಮೂಲಕ ಭಾರತೀಯ ಆಟಗಾರರನ್ನು ಕಟ್ಟಿ ಹಾಕಿದ್ದಾರೆ.

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್‌

ಭಾರತ ನೀಡಿದ್ದ ಗುರಿಯನ್ನು ಬೆನ್ನತ್ತಲು ಹೊರಟ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಟ್ರಾವೆಸ್‌ ಹೆಡ್‌ ಹಾಗೂ ಲಾಬುಶಂಗೆ ಉತ್ತಮ ಜೊತೆಯಾಟ ಬ್ರೇಕ್ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಇಬ್ಬನಿ ಕಾರಣ ಒದ್ದೆಯಾದ ಚೆಂಡಿನ ಕಾರಣದಿಂದಾಗಿ ಸ್ಪಿನ್ನರ್‌ಗಳು ಹೆಚ್ಚು ಟರ್ನ್‌ ಮಾಡೋದಕ್ಕೆ ಸಾಧ್ಯವಾಗಿಲ್ಲ. ಇದು ಆಸ್ಟ್ರೇಲಿಯಾ ಆಟಗಾರರಿಗೆ ವರದಾನವಾಗಿತ್ತು. ಅಲ್ಲದೇ ಉತ್ತಮ ಜೊತೆಯಾಟಕ್ಕೂ ಸಹಕಾರಿಯಾತ್ತು.
ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಲು ಬೌಲರ್‌ಗಳನ್ನು ಬಳಸಿಕೊಂಡ ರೀತಿ ಸರಿಯಾಗಿ ಇರಲಲ್ಲ. ಅಷ್ಟೇ ಅಲ್ಲ ಭಾರತ ಫೀಲ್ಡಿಂಗ್‌ ಕೂಡ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರಲಿಲ್ಲ.

ಭಾರತ ಬ್ಯಾಟಿಂಗ್ ಕಳಪೆ!

ಆಸ್ಟ್ರೇಲಿಯಾದ ಪ್ರತೀ ಆಟಗಾರರು ಅದ್ಬುತ ಫೀಲ್ಡಿಂಗ್‌ ಭಾರತಕ್ಕೆ ಸಂಕಷ್ಟಕ್ಕೆ ನೂಕಿತ್ತು. ಇದೇ ಕಾರಣದಿಂದ ಭಾರತ ಕೇವಲ 241 ರನ್‌ಗಳಿಸಲಷ್ಟೇ ಸಾಧ್ಯವಾಯಿತು ಭಾರತ ತಂಡದ ಪರ ಶರ್ಮ, ವಿರಾಟ್‌ ಕೊಹ್ಲಿ ಹಾಗೂ ಕೆಎಲ್‌ ರಾಹುಲ್‌ ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಗಿದ್ದು, ಭಾರತ ಸೋಲಿಗೆ ಪ್ರಮುಖ ಕಾರಣ. ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜಾ ಆಡಲಿಲ್ಲ. ಕೆಎಲ್‌ ರಾಹುಲ್‌ ನಿಧಾನಗತಿಯ ಬ್ಯಾಟಿಂಗ್ ಭಾರತಕ್ಕೆ ಮಾರಕವಾಯಿತು. ಆದರೆ ಆಸ್ಟ್ರೇಲಿಯಾ ಬ್ಯಾಟಿಂಗ್ ಪಕ್ಕಾ ಮಾಡಿತು. ವಿಶ್ವ ಕಪ್ ಗೆದ್ದಿತು.

Categories
ಉಡುಪಿ ಕರಾವಳಿ

ಕರಾವಳಿಯಲ್ಲಿ ದೀಪಾಲಂಕಾರ..!

ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ
– ಎಲ್ಲರ ಗಮನ ಸೆಳೆದ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ರಂಗೋಲಿ!
– ಕಲ್ಯಾಣಪುರದಲ್ಲಿ ” ಭಾರತ್ ” ಹೂವಿನ ರಂಗವಲ್ಲಿ

NAMMUR EXPRESS NEWS
ಉಡುಪಿ: ಅಂಬಾಗಿಲು ವೈಶವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಪಕ್ಷಿ ಜಾಗರಣೆಯ ಪ್ರಯುಕ್ತ ಆದಿತ್ಯವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆ ದೀಪಗಳಿಂದ ವಿಶ್ವರೂಪ ದರ್ಶನ ನಡೆಯಿತು. ಈ ಸಂದರ್ಭದಲ್ಲಿ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ಮಾದರಿಯ ರಂಗೋಲಿಯು ಭಕ್ತಾಧಿಗಳ ಗಮನ ಸೆಳೆಯಿತು ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ, ದೀಪಾರಾಧನೆ, ಭಜನಾ ಕಾರ್ಯಕ್ರಮ ನಡೆಯಿತು. ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.ವೈಶವಾಣಿ ಸಮಾಜದ ದೇವಳದ ಆಡಳಿತ ಮಂಡಳಿ ಸದಸ್ಯರು ಯುವಕ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ
– ಎಲ್ಲರ ಗಮನ ಸೆಳೆದ ಹಣತೆಗಳ ನಡುವೆ ಮೂಡಿ ಬಂದ ” ಭಾರತ್ ” ಹೂವಿನ ರಂಗವಲ್ಲಿ

ಉಡುಪಿ: ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆದಿತ್ಯವಾರ ಮುಂಜಾನೆ ವಿಶ್ವರೂಪ ದರ್ಶನ ಜರಗಿತು. ಸಾವಿರಾರು ಹಣತೆ ದೀಪಗಳ ನಡುವೆ ಮೂಡಿಬಂದ “ಭಾರತ್ ” ಹೂವಿನ ರಂಗವಲ್ಲಿ ಭಕ್ತರ ಮನ ಸೆಳೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು
ಆಡಳಿತ ಮೊಕ್ತಸರ ಕೆ. ಅನಂತಪದ್ಮನಾಭ ಕಿಣಿ, ಅರ್ಚಕ ಜಯದೇವ ಭಟ್, ಗಣಪತಿ ಭಟ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಜಿ ಎಸ್ ಬಿ ಸಭಾ ಸದಸ್ಯರು ಹಾಗೂ ಸಮಾಜ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಕೋಣಂದೂರಿನಲ್ಲಿ ಸೀನಿಯರ್ ಚೇಂಬರ್ ಶುರು!

ಕೋಣಂದೂರಿನಲ್ಲಿ ಸೀನಿಯರ್ ಚೇಂಬರ್ ಶುರು!
– ಇಂಟರ್ನ್ಯಾಷನಲ್ ಘಟಕ ತೀರ್ಥಹಳ್ಳಿ ಘಟಕದಿಂದ ಸ್ಥಾಪನೆ
– ಸಮಾಜಮುಖಿ ಕೆಲಸಕ್ಕೆ ಸೀನಿಯರ್ ಟೀಮ್ ಎಂಟ್ರಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕ್ ಕೋಣಂದೂರಿನಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ನೂತನ ಘಟಕವನ್ನು ಸೀನಿಯರ್ ಕೆ ಪಿ ಎಸ್ ಸ್ವಾಮಿ, ಅಧ್ಯಕ್ಷರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತೀರ್ಥಹಳ್ಳಿ ಇವರು ವಿಶ್ವನಾಥ್ ಡಿ ಪಿ ಇವರಿಗೆ ಅಧ್ಯಕ್ಷರಾಗಿ ಪ್ರಮಾಣ ವಚನ ಬೋಧಿಸಿದರು. ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೀನಿಯರ್ ನವೀನ್ ಅಮೀನ್, ರಾಷ್ಟ್ರೀಯ ಉಪಾಧ್ಯಕ್ಷ ಇವರು 30 ಜನ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸೀನಿಯರ್ ವರ್ಗೀಸ್ ವೈದ್ಯನ್ , ರಾಷ್ಟ್ರೀಯ ಅಧ್ಯಕ್ಷರು ಸನ್ನದು ಮತ್ತು ಪಿನ್ ಕೊಡುವುದರ ಮೂಲಕ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಣಂದೂರು ಘಟಕವನ್ನು ಸ್ಥಾಪಿಸಿದರು.

ಸಹನೆ ಇರುವ ವ್ಯಕ್ತಿ ನಾಯಕನಾಗಬೇಕು,ಸಮಾಜದ ಹಿಂದುಳಿದ ಪ್ರಜೆಗಳಿಗೆ ಸಹಾಯ ಮಾಡುವುದರ ಮೂಲಕ ಸೀನಿಯರ್ ಚೇಂಬರ್ ಸಂಸ್ಥೆ ಬೆಳವಣಿಗೆಗೆ ಹೊಂದಲಿ ಎಂದು ಜಿ ಎಸ್ ನಾರಾಯಣರಾವ್, ಅಧ್ಯಕ್ಷರು, ಎನ್ ಇ ಎಸ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಹಾರೈಸಿದರು. ಸೀನಿಯರ್ ಡಾ.ಅರವಿಂದ ರಾವ್ ಕೇದಿಗೆ, ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರು, ಸೀನಿಯರ್ ಚಿತ್ರಕುಮಾರ್, ಸೀನಿಯರ್ ಜಯೇಶ್ ಮಾಕಾರ್, ರಾಷ್ಟ್ರೀಯ ನಿರ್ದೇಶಕರು ಘಟಕ ಸ್ಥಾಪನೆ ಬಗ್ಗೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ ಪಿ ಎಸ್ ಸ್ವಾಮಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಶ್ವನಾಥ್ ದೇಮ್ಲಾಪುರ, ಇವರು ಎಲ್ಲರ ಸಹಕಾರದಿಂದ ಸಂಸ್ಥೆಯನ್ನು ಮುನ್ನೆಡೆಸುವ ಇಚ್ಛೆ ವ್ಯಕ್ತಪಡಿಸಿದ್ದರು. ಸೀನಿಯರ್ ಸೂರ್ಯನಾರಾಯಣ ಇವರು ವೇದಿಕೆಗೆ ಗಣ್ಯರನ್ನು ಸ್ವಾಗತಿಸಿದರು. ಸೀನಿಯರ್ ಟಿ ಎನ್ ಜಗದೀಶ್ , ಸರ್ಜಾ ಕೃಷ್ಣಮೂರ್ತಿ, ಬಿಸಿಲುಮನೆ ಮಂಜುನಾಥ್,ಅಮರೇಂದ್ರ ಜೋಯಿಸ್, ಮಂಜುನಾಥ್,ಮುರಗರಾಜ್ ಅತಿಥಿಗಳನ್ನು ಪರಿಚಯಿಸಿದರು. ಸೀನಿಯರ್ ಹೆಚ್ ಕೆ ನಾಗಭೂಷಣ, ಖಜಾಂಚಿ ಉಪಸ್ಥಿತರಿದ್ದರು. ಸೀನಿಯರ್ ಪ್ರಕಾಶ್ ಬಿ ಕೋಲಿಗೆ ಎಲ್ಲರಿಗೂ ವಂದಿಸಿದರು.

Categories
ರಾಜ್ಯ

ಕರ್ನಾಟಕ ಟಾಪ್ 4 ನ್ಯೂಸ್..!

ಮುರುಘಾಶ್ರೀ ಮತ್ತೆ ಅರೆಸ್ಟ್!
– ಸಾಂಬಾರ್ ಪಾತ್ರೆಗೆ ಬಿದ್ದಿದ್ದ ಬಾಲಕಿ ಸಾವು.!
– ಬೆಸ್ಕಾಂ ನಿರ್ಲಕ್ಷಕ್ಕೆ ರಾಜಧಾನಿಯಲ್ಲಿ ಇಬ್ಬರ ಸಾವು.!
– ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ

NAMMUR EXPRESS NEWS
ದಾವಣಗೆರೆ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಸ್ವಾಮೀಜಿ ಮುರುಘಾಶ್ರೀ ಜಾಮೀನು ಪಡೆದು ಬಿಡುಗಡೆಯಾದ ಕೆಲವೇ ದಿನದಲ್ಲಿ ಮತ್ತೆ ಅರೆಸ್ಟ್ ಆಗಿದ್ದಾರೆ. ವಿಚಾರಣೆಗೆ ಕೋರ್ಟ್ ಗೆ ಹಾಜರಾಗದೇ, ವಿಡಿಯೋ ಕಾನ್ಸರೆನ್ಸ್ ನಲ್ಲಿ ಹಾಜರಾಗುವುದಾಗಿ ಆರೋಪಿ ಸ್ವಾಮೀಜಿ ಪಟ್ಟು ಹಿಡಿದ್ದಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿತ್ತು. ತನಿಖಾಧಿಕಾರಿ ಡಿವೈಎಸ್ ಪಿ ಅನಿಲ್, ಸಿಪಿಐ ಮುದ್ದುರಾಜ್ ನೇತೃತ್ವದ ಅಧಿಕಾರಿಗಳ ತಂಡ ಮಠಕ್ಕೆ ಆಗಮಿಸಿತ್ತು. ಬಳಿಕ ಆರೋಪಿ ಶ್ರೀಯ ಕೋಣೆಗೆ ತೆರಳಿ ಅರೆಸ್ಟ್ ವಾರೆಂಟ್ ತೋರಿಸಿ ಕರೆದುಕೊಂಡು ಹೋಗಿದ್ದಾರೆ.

ಸಾಂಬಾರ್ ಪಾತ್ರೆಗೆ ಬಿದ್ದಿದ್ದ ಬಾಲಕಿ ಸಾವು!

ಕಲಬುರಗಿ: ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದ ಅಫಜಲಪುರ ತಾಲೂಕು ಚಿಮಣಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಚಿಕಿತ್ಸೆ ಫಲಸದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾಳೆ. 2ನೇ ತರಗತಿ ಓದುತ್ತಿದ್ದ ಮಹಾಂತಮ್ಮ (8) ನ.16ರಂದು ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಲು ಸರದಿ ನಿಂತಾಗ ಮಕ್ಕಳ ತಳ್ಳಾಟದಲ್ಲಿ ಆಯತಪ್ಪಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿದ್ದಳು. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಶನಿವಾರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಸ್ಕಾಂ ನಿರ್ಲಕ್ಷಕ್ಕೆ ಇಬ್ಬರ ಸಾವು

ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್‌ ತಂತಿ ತುಳಿದು ತಾಯಿ, ಮಗಳು ಸಜೀವ ದಹನವಾದ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ ಕಾಡುಗೋಡಿಯಲ್ಲಿ ನಡೆದಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಎರಡೂ ಕುಟುಂಬದವರು ಮೃತದೇಹವನ್ನು ದೇವನಗುಂದಿ ಬಳಿ ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಜೊತೆಗೆ ಪೊಲೀಸರು ತೆರಳಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧ ಬೆಸ್ಕಾಂ ಅಧಿಕಾರಿಗಳನ್ನ ವಶಕ್ಕೆ ಪಡೆಯಲಾಗಿತ್ತು. ಆದ್ರೆ ಐವರು ಆರೋಪಿಗಳು ಭಾನುವಾರ ರಾತ್ರಿ ಸುಮಾರು 1 ಗಂಟೆಗೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ. ಇದಕ್ಕೆ ಮೃತರ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ಅರೆಸ್ಟ್

ಮಡಿಕೇರಿ : ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬರು ಹೆಲ್ಕೆಟ್ ನಿಂದ ಹಲ್ಲೆ ಮಾಡಿರುವ ಘಟನೆ ಸಿದ್ದಾಪುರ ಬಸ್‌ ನಿಲ್ದಾಣದಲ್ಲಿ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿ.ಎ.ಗಣಪತಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್‌ ಸಿಬ್ಬಂದಿ ಸಂತೋಷ್ ಚೌಹಾನ ಎಂಬುವವರು ಹಲ್ಲೆಗೊಳಗಾಗಿದ್ದು, ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್‌ ಸಿಬ್ಬಂದಿ ಸಂತೋಷ್ ಚೌಹಾನ ಎಂಬುವವರು ಹಲ್ಲೆಗೊಳಗಾಗಿದ್ದು, ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಅಪಘಾತ ತೀರ್ಥಹಳ್ಳಿ

ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು.!

ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು.!
– ಕುಪ್ಪಳ್ಳಿ ಸಮೀಪ ಸಂಭವಿಸಿದ ದುರಂತ
– ಕಾರು ಚಾಲಕನಿಗೆ ಗಾಯ!

NAMMUR EXPRESS NEWS
ತೀರ್ಥಹಳ್ಳಿ : ಅತೀ ವೇಗವಾಗಿ ಚಲಾಯಿಸಿದ ಕಾರು ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ಕಾರು ಜಖಂ ಆದ ಘಟನೆ ತಾಲೂಕಿನ ಕುಪ್ಪಳ್ಳಿ ಸಮೀಪದಲ್ಲಿ ನೆಡೆದಿದೆ. ಕೊಪ್ಪದ ಸಿದ್ದರಮಠದ ಹೊಂಡಯ್ i 20 ಕಾರು ತೀರ್ಥಹಳ್ಳಿ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು ಅವರಿಗೆ ಗಾಯವಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೋಯ್ಯಲಾಗಿದೆ ಎಂದು ತಿಳಿದು ಬಂದಿದೆ.

Categories
ಅಪರಾಧ ತೀರ್ಥಹಳ್ಳಿ ರಾಜ್ಯ

ಚಿನ್ನ, ಹಣಕ್ಕಾಗಿ ಅಧಿಕಾರಿ ಪ್ರತಿಮಾ ಕೊಲೆ!

ಚಿನ್ನ, ಹಣಕ್ಕಾಗಿ ಅಧಿಕಾರಿ ಪ್ರತಿಮಾ ಕೊಲೆ!
– ತೀರ್ಥಹಳ್ಳಿ ಮೂಲದ ಗಣಿ ಇಲಾಖೆ ಅಧಿಕಾರಿ ಕೊಲೆ ರಹಸ್ಯ
– ಆರೋಪಿಯಿಂದ ಹಣ, ಚಿನ್ನ ವಶ: ಪೊಲೀಸ್ ವರದಿ ಏನು?

NAMMUR EXPRESS NEWS
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ವಿಚಾರಣೆ ವೇಳೆ ಆರೋಪಿ ಕಿರಣ್ ಹಣ ಹಾಗೂ ಚಿನ್ನಾಭರಣಕ್ಕಾಗಿ ಪ್ರತಿಮಾರನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಆರೋಪಿ ಕಿರಣ್ ಪ್ರತಿಮಾ ಕೊಲೆಗೆ ಸಂಚು ರೂಪಿಸಿ ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿದ್ದು, ಬಳಿಕ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದನು. ಆರೋಪಿ 5 ಲಕ್ಷ ರೂ. ನಗದು, 3 ರಿಂದ 4 ಲಕ್ಷ ಮೌಲ್ಯದ 2 ಚಿನ್ನದ ಬಳೆ, ಬ್ರೇಸ್ ಲೇಟ್ ಅನ್ನು ಕಳವು ಮಾಡಿದ್ದನು. ಆರೋಪಿ ಕಿರಣ್ ಕಳವು ಮಾಡಿದ ಹಣವನ್ನು ಕೋಣನಕುಂಟೆ ಬಳಿಯ ತನ್ನ ಗೆಳೆಯ ಶಿವು ಕೈಯಲ್ಲಿ ಕೊಟ್ಟು ಈ ಹಣ ನಿನ್ನ ಮನೆಯಲ್ಲಿ ಇರಲಿ, ನಾನು ಮಲೆ ಮಹದೇಶ್ವರ ಬೆಟ್ಟ ಹೋಗಿ ಬಂದ ಮೇಲೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ ಇಟ್ಟಿದ್ದಾನೆ.

ಆರೋಪಿಯು ಶಿವುಗೆ ಹಣ, ಚಿನ್ನ ತಂದು ಕೊಟ್ಟಿದ್ದು ಸ್ಪಷ್ಟವಾಗಿರುವುದರಿಂದ ಪೊಲೀಸರು ಶಿವು ಅನ್ನು ಸಾಕ್ಷಿಯಾಗಿ ಮಾಡಿದ್ದಾರೆ. ಇನ್ನು ಆರೋಪಿ ಕಳವುಗೈದಿದ್ದ ಐದು ಲಕ್ಷ ನಗದು ಮತ್ತು ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಹಣ, ಚಿನ್ನಾಭರಣ ಕಳವು ಮಾಡುವ ಉದ್ದೇಶದಿಂದ ಈ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.