Categories
ರಾಜ್ಯ ರಾಷ್ಟ್ರೀಯ ವಾರ್ತೆ

ಬ್ಯಾಂಕ್ ನೌಕರರಿಗೆ ಕಹಿ ಸುದ್ದಿ!

ಬ್ಯಾಂಕ್ ನೌಕರರಿಗೆ ಕಹಿ ಸುದ್ದಿ!

– ಮಾರ್ಚ್ 31 ರಂದು ಇಲ್ಲ ಬ್ಯಾಂಕ್ ರಜೆ!!
– ಹಣಕಾಸು ವರ್ಷದ ಕೊನೆ ದಿನವಾಗಿರುವುದರಿಂದ ರಂಜಾನ್ ರಜೆ ರದ್ದು!

NAMMUR EXPRESS NEWS
ಹೊಸದಿಲ್ಲಿ: ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ ಮೂವತ್ತೊಂದರಂದು ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ವ್ಯವಹಾರ-ವಹಿವಾಟು ನಡೆಯುತ್ತದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಮಾ. 31ರಂದು ರಂಜಾನ್ ಹಬ್ಬವಿರುವುದರಿಂದ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ಮಿಜೋರಾಂ, ಹಿಮಾಚಲ ಪ್ರದೇಶ ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೂ ರಜೆ ಇರಬೇಕಿತ್ತು. ಹಣಕಾಸಿನ ರಿಪೋರ್ಟಿನಲ್ಲಿ ಯಾವುದೇ ವ್ಯತ್ಯಾಸ ಬರದಂತೆ ಕಂಟ್ರೋಲ್ ಮಾಡಲು ಆರ್ ಬಿಐ ಎಲ್ಲಾ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ.
ಹಣಕಾಸು ವರ್ಷದ ಕೊನೆ ದಿನವಾಗಿರುವುದರಿಂದ ವಹಿವಾಟಿನ ಲೆಕ್ಕವನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಲಕ್ಷ್ಮೀ ದೇವಿಯ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ. ಮಾತಿನಲ್ಲಿ ಮಾಧುರ್ಯ ಇರುತ್ತದೆ, ಆದರೂ ತಾಳ್ಮೆಯನ್ನು ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ತೊಂದರೆಗಳು ಎದುರಾಗುತ್ತವೆ, ಆದರೆ ಲಾಭದ ಅವಕಾಶಗಳೂ ಇರುತ್ತವೆ. ವಾಹನ ಸೌಕರ್ಯದಲ್ಲಿ ಹೆಚ್ಚಳವಾಗಲಿದೆ. ಇಂದು ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ.

** ವೃಷಭ ರಾಶಿ :
ಇಂದು ವೃಷಭ ರಾಶಿಯವರಿಗೆ ಏರಿಳಿತಗಳಿಂದ ತುಂಬಿದ ದಿನವಾಗಿರುತ್ತದೆ. ಕೌಟುಂಬಿಕ ಕಾರಣಗಳಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಪೋಷಕರಿಂದ ನಿಮಗೆ ಬೆಂಬಲ ಸಿಗುತ್ತದೆ. ಖರ್ಚುಗಳು ಹೆಚ್ಚಾಗಲಿವೆ. ನಿಮ್ಮ ತಂದೆಯಿಂದ ನಿಮಗೆ ಹಣ ಸಿಗಬಹುದು. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ.

** ಮಿಥುನ ರಾಶಿ :
ಇಂದು ಮಿಥುನ ರಾಶಿಯವರಿಗೆ ಆರ್ಥಿಕ ಪ್ರಗತಿಯ ಲಕ್ಷಣಗಳಿವೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಪೋಷಕರಿಂದ ನಿಮಗೆ ಬೆಂಬಲ ಸಿಗುತ್ತದೆ. ಖರ್ಚುಗಳು ಹೆಚ್ಚಾಗಲಿವೆ. ನಿಮ್ಮ ತಂದೆಯಿಂದ ನಿಮಗೆ ಹಣ ಸಿಗಬಹುದು. ಹಿರಿಯರಿಂದ ನಿಮಗೆ ಆಶೀರ್ವಾದ ಸಿಗುತ್ತದೆ. ಪ್ರಯಾಣದ ಸಾಧ್ಯತೆ ಇರುತ್ತದೆ. ಇಂದು ಪ್ರಸ್ತಾಪವನ್ನು ಪಡೆಯಬಹುದು.

** ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಚಕ್ರದ ಜನರಿಗೆ ಇಂದು ಹಠಾತ್ ಆರ್ಥಿಕ ಲಾಭ ಸಿಗಬಹುದು. ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗುತ್ತವೆ. ಮನಸ್ಸಿನಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಖರ್ಚುಗಳು ಅಧಿಕವಾಗಲಿವೆ. ಶೈಕ್ಷಣಿಕ ಕೆಲಸದಲ್ಲಿ ನಿಮಗೆ ಗೌರವ ಸಿಗುತ್ತದೆ. ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬಹುದು.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರಿಗೆ ಆರ್ಥಿಕ ಪ್ರಗತಿಯನ್ನು ತಂದಿದೆ. ಮನಸ್ಸಿನಲ್ಲಿ ಏರಿಳಿತಗಳು ಇರಬಹುದು. ಶೈಕ್ಷಣಿಕ ಮತ್ತು ಬೌದ್ಧಿಕ ಕೆಲಸದ ಮೂಲಕ ಗೌರವವನ್ನು ಗಳಿಸಬಹುದು. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಬೆಂಬಲ ಸಿಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇರಿಸಿ. ಇಂದು ಎಲ್ಲಾ ಸಮಸ್ಯೆಗಳು ಕುಟುಂಬ ಮತ್ತು ಸ್ನೇಹಿತರ ಬೆಂಬಲದೊಂದಿಗೆ ಪರಿಹರಿಸಲ್ಪಡುತ್ತವೆ.

** ಕನ್ಯಾ ರಾಶಿ :
ಕನ್ಯಾ ರಾಶಿಚಕ್ರದ ಜನರ ಯಾವುದೇ ಕನಸು ಇಂದು ನನಸಾಗಬಹುದು. ಭೂಮಿ, ಕಟ್ಟಡ ಮತ್ತು ವಾಹನ ಖರೀದಿ ಸಾಧ್ಯ. ಮನಸ್ಸು ಪ್ರಸನ್ನವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಧಾರ್ಮಿಕ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಬಹುದು. ಸ್ನೇಹಿತರ ಸಹಾಯದಿಂದ ಆದಾಯ ಹೆಚ್ಚಾಗಬಹುದು. ಇಂದು ಕುಟುಂಬ ಸದಸ್ಯರ ಬೆಂಬಲವು ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

** ತುಲಾ ರಾಶಿ :
ತುಲಾ ರಾಶಿಚಕ್ರದ ಜನರು ಇಂದು ತಾಳ್ಮೆಯಿಂದ ವರ್ತಿಸಬೇಕು. ಅನಗತ್ಯ ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಸಂಯಮದಿಂದಿರಿ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಪ್ರಗತಿಯ ಹಾದಿ ಸುಗಮವಾಗುತ್ತದೆ. ಆದಾಯ ಹೆಚ್ಚಾಗಲಿದೆ. ಕೆಲಸದಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕುಟುಂಬದೊಂದಿಗೆ ಹಂಚಿಕೊಳ್ಳಿ.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ ಜನರು ಇಂದು ವಾದಗಳಿಂದ ದೂರವಿರಬೇಕು. ಬೌದ್ಧಿಕ ಕೆಲಸದಲ್ಲಿ ನೀವು ಗೌರವವನ್ನು ಗಳಿಸಬಹುದು. ಮನೆಯಲ್ಲಿ ಸಂತೋಷ ಹೆಚ್ಚಾಗಬಹುದು. ಭೌತಿಕ ಸಂಪತ್ತಿನಲ್ಲಿ ಹೆಚ್ಚಳವಾಗಲಿದೆ. ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ತಂದೆಯ ಆರೋಗ್ಯದ ಕಡೆ ಗಮನ ಕೊಡಿ.

** ಧನಸ್ಸು ರಾಶಿ :
ಧನು ರಾಶಿಯವರಿಗೆ ಇಂದು ಮನಸ್ಸಿನಲ್ಲಿ ಸಂತೋಷದ ಭಾವನೆ ಇರುತ್ತದೆ. ಆದರೆ ತಾಳ್ಮೆಯ ಕೊರತೆ ಇರುತ್ತದೆ. ನಿಮ್ಮ ಕುಟುಂಬದೊಂದಿಗೆ ನೀವು ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗಬಹುದು. ನಿಮ್ಮ ತಾಯಿಯಿಂದ ನೀವು ಹಣವನ್ನು ಪಡೆಯಬಹುದು. ಇಂದು ನಿಮಗೆ ಹಣಕಾಸಿನ ಬಜೆಟ್ ಸಿದ್ಧಪಡಿಸುವುದು ಪ್ರಯೋಜನಕಾರಿಯಾಗಲಿದೆ. ಇಂದು ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗುತ್ತದೆ.

** ಮಕರ ರಾಶಿ :
ಮಕರ ರಾಶಿಯವರಿಗೆ ಇಂದು ಆತ್ಮವಿಶ್ವಾಸದ ಕೊರತೆ ಇರುತ್ತದೆ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ನೀವು ವೃತ್ತಿಪರ ಯಶಸ್ಸನ್ನು ಪಡೆಯುತ್ತೀರಿ. ರಾಜಕೀಯ ಲಾಭ ಸಿಗಲಿದೆ. ಇಂದು ಮಕ್ಕಳ ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ಕೆಲಸದ ಸ್ಥಳದಲ್ಲಿ ನೀವು ಸಣ್ಣ ಸವಾಲುಗಳನ್ನು ಎದುರಿಸಬೇಕಾಗಬಹುದು.

** ಕುಂಭ ರಾಶಿ :
ಕುಂಭ ರಾಶಿಯ ಜನರು ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಕುಟುಂಬದಲ್ಲಿಯೂ ಶಾಂತಿಯನ್ನು ಕಾಪಾಡಿಕೊಳ್ಳಿ. ಸ್ನೇಹಿತರ ಸಹಾಯದಿಂದ, ನಿಮ್ಮ ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು. ಧಾರ್ಮಿಕ ಕಾರ್ಯಗಳಿಗೆ ಖರ್ಚು ಹೆಚ್ಚಾಗುತ್ತದೆ. ನಿಮ್ಮ ಸಂಗಾತಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ನಿಗಾ ಇರಿಸಿ. ಉದ್ಯೋಗವನ್ನು ಹುಡುಕುತ್ತಿರುವ ಜನರು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು.

** ಮೀನ ರಾಶಿ :
ಮೀನ ರಾಶಿಯವರು ಇಂದು ತಮ್ಮ ಸಂಭಾಷಣೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಪ್ರಗತಿಗೆ ಅವಕಾಶಗಳೂ ಇರಬಹುದು. ಶೈಕ್ಷಣಿಕ ಕೆಲಸದಲ್ಲಿ ನಿಮಗೆ ಗೌರವ ಮತ್ತು ಸ್ಥಾನಮಾನ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರ ಸಹಾಯದಿಂದ ನೀವು ವ್ಯಾಪಾರ ಲಾಭವನ್ನು ಪಡೆಯುತ್ತೀರಿ. ಇಂದು ನೀವು ಅಗತ್ಯ ಗೃಹೋಪಯೋಗಿ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಯೋಜಿಸಬಹುದು.

Categories
ಉಡುಪಿ

ಶ್ರೀರಾಮ ಗೆಳೆಯರ ಬಳಗ, ಕೋಡಿ ಕನ್ಯಾಣ ಇವರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ!

ಶ್ರೀರಾಮ ಗೆಳೆಯರ ಬಳಗ, ಕೋಡಿ ಕನ್ಯಾಣ ಇವರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ!

– ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಿದ್ಯಾರ್ಥಿ ವೇತನ!
– ಎಸ್. ಎಸ್. ಎಲ್. ಸಿ. ಹಾಗೂ ದ್ವಿತೀಯ ಪಿ. ಯು. ಸಿ. ಮಕ್ಕಳಿಗೆ ವಿತರಣೆ

NAMMUR EXPRESS NEWS
ಉಡುಪಿ :ಶ್ರೀರಾಮ ಗೆಳೆಯರ ಬಳಗ (ರಿ.), ಕೋಡಿ ಕನ್ಯಾಣ ಇವರ ತೃತೀಯ ವರ್ಷದ ರಾಮ ಪರ್ವದ ಪ್ರಯುಕ್ತ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬ್ರಹ್ಮಾವರ ಮತ್ತು ಕುಂದಾಪುರ ತಾಲೂಕಿನ ಪ್ರತಿಭಾವಂತ ಎಸ್. ಎಸ್. ಎಲ್. ಸಿ. ಹಾಗೂ ದ್ವಿತೀಯ ಪಿ. ಯು. ಸಿ. ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಟ್ಟು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿರಿಸಲಾಯಿತು.

Categories
ಶೃಂಗೇರಿ

2025-26 ನೇ ಸಾಲಿನ ಬಜೆಟ್ ಮಂಡಿಸಿದ ಶೃಂಗೇರಿ ಪಟ್ಟಣ ಪಂಚಾಯ್ತಿ

2025-26 ನೇ ಸಾಲಿನ ಬಜೆಟ್ ಮಂಡಿಸಿದ ಶೃಂಗೇರಿ ಪಟ್ಟಣ ಪಂಚಾಯ್ತಿ 

* ಪಟ್ಟಣದ ಅಭಿವೃದ್ಧಿ ದೃಷ್ಠಿಯಿಂದ ಬಜೆಟ್ ಲೆಕ್ಕಾಚಾರ
* ಪ್ರಮುಖ ಆದಾಯ ಮೂಲ ವಾಹನ ಪಾರ್ಕಿಂಗ್ ಈ ಬಾರಿ ಡೌಟ್

NAMMUR EXPRESS NEWS
ಶೃಂಗೇರಿ: 2025-26 ನೇ ಸಾಲಿನ ಶೃಂಗೇರಿ ಪಟ್ಟಣ ಪಂಚಾಯ್ತಿಯ ಬಜೆಟ್‌ನ್ನು ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಮಂಡಿಸಿದರು.
ಪಟ್ಟಣದ ಅಭಿವೃದ್ಧಿಯನ್ನು ದೃಷ್ಠಿಯಲ್ಲಿಟ್ಟು ಪಟ್ಟಣ ಪಂಚಾಯ್ತಿಯ ಆದಾಯವನ್ನು ಗಮನದಲ್ಲಿಟ್ಟು 2025-26 ನೇ ಸಾಲಿಗೆ ಸುಮಾರು 7,67,67,631 ರೂ.ಗಳ ಬಜೆಟ್‌ನ್ನು ಮಂಡಿಸಲಾಗಿದ್ದು ಇದರಲ್ಲಿ ಸುಮಾರು 7,45,89,500 ರೂ.ಗಳ ಖರ್ಚನ್ನು ಅಂದಾಜು ಮಾಡಲಾಗಿದೆ,ಇದರಿಂದ ಸುಮಾರು 21,78,131 ರೂ.ಗಳ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ತಿಳಿಸಿದ್ದಾರೆ.

ಪಟ್ಟಣ ಪಂಚಾಯ್ತಿಗೆ ಆದಾಯ ಮೂಲ ವಾಹನ ಪಾರ್ಕಿಂಗ್
ಶೃಂಗೇರಿ ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ ಹಾಗೂ ಪ್ರವಾಸಿಗರ ವಾಹನವನ್ನು ಗಾಂಧಿ ಮೈದಾನದಲ್ಲಿ ನಿಗದಿ ಪಡಿಸಲಾದ ಪ್ರದೇಶದಲ್ಲಿ ನಿಲುಗಡೆ ಮಾಡಿ ಅವರಿಂದ ನಿಗದಿತ ಶುಲ್ಕ ಸಂಗ್ರಹಿಸಲಾಗುತ್ತಿತ್ತು ಈ ಕಾರ್ಯಕ್ಕೆ ಪ್ರತಿ ವರ್ಷ ಟೆಂಡರ್ ಕರೆದು ಆ ಮುಖಾಂತರ ಬಿಡ್ಡುದಾರರಿಗೆ ವಹಿಸಿ ಹರಾಜಿನ ಮೊತ್ತವನ್ನು ಪಟ್ಟಣ ಪಂಚಾಯ್ತಿಯ ಆದಾಯ ಮೂಲವಾಗಿ ವಿವಿಧ ಕಾಮಗಾರಿಗೆ,ಪಂಚಾಯ್ತಿಯ ನೌಕರರ ಸಂಬಳ ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಈ ಆದಾಯವೇ ಪಟ್ಟಣ ಪಂಚಾಯ್ತಿಗೆ ದೊಡ್ಡ ಆದಾಯದ ಮೂಲವಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಪಟ್ಟಣ ಪಂಚಾಯ್ತಿಯು ವಾಹನಗಳ ಪಾರ್ಕಿಂಗ್ ಪ್ರದೇಶದ ಹರಾಜು ನಡೆಸುವಂತಿಲ್ಲ ಈ ಪ್ರದೇಶ ಹೊಳೆ ಕರಾಬಿಗೆ ಸೇರಿದ್ದು ಎಂದು ಹೇಳಲಾಗಿದೆ. ಇದರಿಂದ ಇನ್ಮುಂದೆ ಪಟ್ಟಣ ಪಂಚಾಯ್ತಿಂದ ಈ ಆದಾಯದ ಮೂಲ ಕೈತಪ್ಪುವ ಸಾಧ್ಯತೆಯೇ ಹೆಚ್ಚಾಗಿದೆ. ಹೀಗೇನಾದರೂ ಆದಲ್ಲಿ ಈಗ ಮಂಡಿಸಿರೋ ಬಜೆಟ್‌ನಲ್ಲಿ ಸಂಪೂರ್ಣ ವಿಫಲವಾಗಲಿದೆ.

ಮುಂದಿನ ಪರಿಣಾಮಗಳಿಗೆ ಸಂಪೂರ್ಣ ಡಿ‌.ಸಿಯವರೇ ಹೊಣೆ..
ನಿಯಮದಂತೆ ಇದೇ ಮಾರ್ಚ್ 31ರಂದು ಈಗ ಚಾಲ್ತಿಯಲ್ಲಿರು ವಾಹನ ಪಾರ್ಕಿಂಗ್ ಟೆಂಟರ್ ಅಂತ್ಯಗೊಳ್ಳಲಿದೆ. ಏಪ್ರಿಲ್ 1 ರಿಂದ ಡಿ.ಸಿಯವರ ಮೌಖಿಕ ಆದೇಶದಂತೆ ಪಟ್ಟಣ ಪಂಚಾಯ್ತಿ ನಡೆದುಕೊಂಡಲ್ಲಿ ಎಂದಿನಂತೆ ವಾಹನ ನಿಲುಗಡೆಯಾಗುತ್ತದೆ ಆದರೆ ಪಂಚಾಯ್ತಿ ವತಿಯಿಂದ ದೈನಂದಿನ ಯಾವುದೇ ಸ್ವಚ್ಛತಾ ಕಾರ್ಯಗಳು ನಡೆಯುವುದಿಲ್ಲ,ಅಲ್ಲಿ ಯಾವುದೇ ಗಲಾಟೆ,ಘರ್ಷಣೆಗಳು ನಡೆದರೆ ಅದಕ್ಕೂ ಪಟ್ಟಣ ಪಂಚಾಯ್ತಿಗೂ ಯಾವುದೇ ರೀತಿಯ ಸಂಬಂಧವಿಲ್ಲ, ಮುಂದೆ ಇದರಿಂದ ಏನೇ ಪರಿಣಾಮಗಳಾದಲ್ಲಿ ಇದಕ್ಕೆ ನೇರ ಜಿಲ್ಲಾಧಿಕಾರಿಯವರೇ ನೇರ ಹೊಣೆಯಾಗಿರುತ್ತಾರೆ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಇರುವುದರಿಂದ ಅಂತ ಹೇಳುತ್ತಿದ್ದು, ಈ ಮೊಕದ್ದಮೆಗಳಿಗೂ ಪಾರ್ಕಿಂಗ್ ಬಿಡ್ಡಿಂಗ್‌ಗೂ ಯಾವುದೇ ಸಂಬಂಧವಿಲ್ಲಾ, ಈ ಮೊಕದ್ದಮೆಗಳು ಸುಮಾರು 20ವರ್ಷಗಳಿಂದಲೂ ಇದ್ದು ಆಗಲೂ ಕೂಡ ಹರಾಜು ಪ್ರಕ್ರಿಯೆ ನಡೆದಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಪಾರ್ಕಿಂಗ್ ಸ್ಥಳದಿಂದಾಗುವ ನಷ್ಟ ಜನರ ಮೇಲೆ ಹೊರಿಸಲು ಬಿಡಲ್ಲ..
ಜಿಲ್ಲಾಧಿಕಾರಿಗಳ ಮೌಖಿಕ ಆದೇಶದಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಲಿಖಿತ ಆದೇಶ ನೀಡಿದ್ದು ವಾಹನ ಪಾರ್ಕಿಂಗ್ ಸ್ಥಳ ಪಟ್ಟಣ ಪಂಚಾಯ್ತಿಯಿಂದ ಕೈ ತಪ್ಪುತ್ತದೆ. ಇದರಿಂದಾಗುವ ನಷ್ಟದ ಹೊರೆಯನ್ನು ಯಾವುದೇ ಕಾರಣಕ್ಕೂ ಜನರ ಮೇಲೆ ಹೊರಿಸಲಾಗದು ಹೊರಿಸಲು ಬಿಡುವುದಿಲ್ಲ ಎಂದು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಪ್ರಕಾಶ್ ಎಂ.ಎಲ್ ಹೇಳಿದ್ದಾರೆ.

ಅನುದಾನ ಕೊಡಿಸಿ ಪಟ್ಟಣದ ಅಭಿವೃದ್ಧಿಗೆ ನೆರವಾಗಿ
ತುಂಬಾ ಹಿಂದಿನಿಂದಲೂ ಪಟ್ಟಣ ಪಂಚಾಯ್ತಿಯ ದೊಡ್ಡ ಆದಾಯದ ಮೂಲವಾಗಿದ್ದ ವಾಹನ ಪಾರ್ಕಿಂಗ್ ಸ್ಥಳ ಡಿ‌.ಸಿ ಆದೇಶದಿಂದ ಪಂಚಾಯ್ತಿ ಕೈ ತಪ್ಪಿದ್ದು ಆದ್ದರಿಂದ ಈ ಬಾರಿ ಪಟ್ಟಣ ಪಂಚಾಯ್ತಿ ಆದಾಯದಲ್ಲಿ ಭಾರೀ ಇಳಿಕೆಯಾಗಲಿದೆ ಇದರಿಂದ ಪಂಚಾಯ್ತಿಯ ನೌಕರರ ವೇತನ,ಕಛೇರಿಯ ಖರ್ಚುವೆಚ್ಚ ಹಾಗೂ ಪಟ್ಟಣದ ಅಭಿವೃದ್ದಿಗೆ ದೊಡ್ಡ ಪೆಟ್ಟು ಬೀಳಲಿದೆ. ಆದ್ದರಿಂದ ಪಟ್ಟಣದ ಅಭಿವೃದ್ಧಿಗಾಗಿ ಕ್ಷೇತ್ರದ ಶಾಸಕರು,ಜಿಲ್ಲಾಧಿಕಾರಿಗಳು ಅಗತ್ಯ ಅನುದಾನವನ್ನು ನೀಡಿ ಹಾಗೂ ವಿಶೇಷ ಅನುದಾನವನ್ನು ಸರ್ಕಾರದಿಂದ ಕೊಡಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಶಾಸಕರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘಕ್ಕೆ ನೂತನ ಸಾರಥಿಗಳು!

ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘಕ್ಕೆ ನೂತನ ಸಾರಥಿಗಳು!
– ನೂತನ ಅಧ್ಯಕ್ಷರಾಗಿ ಕೂಳೂರು ಕೃಷ್ಣಮೂರ್ತಿ ಆಯ್ಕೆ
– ಪ್ರ.ಕಾರ್ಯದರ್ಶಿಯಾಗಿ ಆದರ್ಶ ಹೆಚ್.ಎಂ. ಖಜಾಂಚಿಯಾಗಿ ಶಶಿಧ‌ರ್ ಎಂ.ಆ‌ರ್.

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ(ರಿ) ಕುಶಾವತಿ ತೀರ್ಥಹಳ್ಳಿ ಇದರ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ದಿನಾಂಕ 25-03-2025ರ ಮಂಗಳವಾರದಂದು ನಡೆದಿದ್ದು ಅಧ್ಯಕ್ಷರಾಗಿ ಕೂಳೂರು ಕೃಷ್ಣ ಮೂರ್ತಿರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಹಾಗೆಯೇ ಆದರ್ಶ ಹೆಚ್.ಎಂ. ಹೊಸೂರು ರವರು ಪ್ರಧಾನಕಾರ್ಯದರ್ಶಿಯಾಗಿ, ಶಶಿಧರ್ ಎಂ.ಆರ್. ಮೇಲಿನಕೊಪ್ಪರವರು ಖಜಾಂಚಿಯಾಗಿ ಆಯ್ಕೆಯಾಗಿರುತ್ತಾರೆ. ಈ ಪ್ರಕ್ರಿಯೆಯನ್ನು ಕ್ರಮಬದ್ದವಾಗಿ ಸಂಘದ ಕಾನೂನು ತಜ್ಞರ ಸಲಹೆಯಂತೆ ನಡೆಸಿರುವುದಾಗಿ ಆಡಳಿತ ಮಂಡಳಿಯ ಪರವಾಗಿ ಆದರ್ಶ ಹೆಚ್.ಎಂ. ಹೊಸೂರು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ಗಾಯತ್ರಿ ಜ್ಯುವೆಲ್ಲರ್ಸ್ ಕಡೆಯಿಂದ ಗ್ರಾಹಕರಿಗೆ ಬಂಪರ್ ಕೊಡುಗೆ!

ಗಾಯತ್ರಿ ಜ್ಯುವೆಲ್ಲರ್ಸ್ ಕಡೆಯಿಂದ ಗ್ರಾಹಕರಿಗೆ ಬಂಪರ್ ಕೊಡುಗೆ!
– ಯುಗಾದಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಮದುವೆಯ ಆಭರಣಗಳ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆ!
– ಬಂಪರ್ ಬಹುಮಾನದ ಜೊತೆಗೆ ವಿಶೇಷ ಆಫರ್ ಕೇವಲ 5ದಿನಗಳು ಮಾತ್ರ!

NAMMUR EXPRESS NEWS
ತೀರ್ಥಹಳ್ಳಿ :- ತೀರ್ಥಹಳ್ಳಿಯ ಗಾಂಧಿಚೌಕ ಬಳಿ ಇರುವ ಗಾಯತ್ರಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಮದುವೆಯ ಆಭರಣಗಳ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆ ಮಾರ್ಚ್ 27, ಗುರುವಾರದಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಾಧಿಕಾರಿ ಭೀಮೇಶ್ವರ ಜೋಷಿ ಹಾಗೂ ಅವರ ಧರ್ಮಪತ್ನಿ ರಾಜಲಕ್ಷ್ಮಿ ಜೋಷಿ ಅವರಿಂದ ನೆರೆವೇರಿತು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಾಧಿಕಾರಿ ಭೀಮೇಶ್ವರ ಜೋಷಿ ಮಾತನಾಡಿ, ಈ ಸಂಸ್ಥೆ ಇನ್ನು ಉತ್ತಮವಾಗಿ ಬೆಳೆದು,ಗ್ರಾಹಕರಿಗೆ ಅವರ ಅಪೇಕ್ಷಿಗೆ ಅನುಗುಣವಾಗಿ ಗುಣಮಟ್ಟದ ಬೆಳ್ಳಿ ಹಾಗೂ ಬಂಗಾರ ಖರೀದಿ ಮಾಡುವ ಸದಾವಕಾಶ ಪಡೆದುಕೊಳ್ಳುವುದರ ಮೂಲಕ ಗ್ರಾಹಕರಿಗೂ ಹಾಗೂ ಸಂಸ್ಥೆಯ ನಡುವೆ ಅವಿನಾಭಾವ ಸಂಬಂಧವು ಇನ್ನಷ್ಟು ಸಮೃದ್ಧಿಯಾಗಲಿ ಮತ್ತು ಈ ಭಾಗದ ಎಲ್ಲಾ ಗ್ರಾಹಕರ ಪ್ರೀತಿ ಮತ್ತು ವಿಶ್ವಾಸಗಳಿಸುವಂತ ಭಾಗ್ಯ ಸಂಸ್ಥೆಯ ಮಾಲೀಕರಿಗೂ ಹಾಗೂ ಸಿಬ್ಬಂದಿಗಳಿಗೂ ದೊರಕಲಿ ಎಂದು ಶುಭಾಶಯಗಳೊಂದಿಗೆ ಆಶೀರ್ವಾದ ಮಾಡಿದರು.
ಯುಗಾದಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಮದುವೆಯ ಆಭರಣಗಳ ಪ್ರದರ್ಶನ ಮತ್ತು ಮಾರಾಟವು 27-03-2025 ರಿಂದ 31-03-2025ರವರಿಗೆ ನಡೆಯುತ್ತಿದ್ದು, ಬಂಪರ್ ಬಹುಮಾನದ ಜೊತೆಗೆ ವಿಶೇಷ ಆಫರ್ ಕೇವಲ 5ದಿನಗಳು ಮಾತ್ರ ನಡೆಯುತ್ತಿದೆ.ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲೀಕ ಅನಂತ್ ಆಚಾರ್ಯ ಹಾಗೂ ಅವರ ಧರ್ಮಪತ್ನಿ,ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

Categories
ಹೊಸನಗರ

ಹೊಸನಗರ : ದನದ ಕರುಗಳು ರಬ್ಬರ್ ಹಾಲು ಕುಡಿದು ರುಮಿನಲ್ ಇಂಪ್ಯಾಕ್ಷನ್ ಆಗಿ ಅಸ್ವಸ್ಥ

ಹೊಸನಗರ : ದನದ ಕರುಗಳು ರಬ್ಬರ್ ಹಾಲು ಕುಡಿದು ರುಮಿನಲ್ ಇಂಪ್ಯಾಕ್ಷನ್ ಆಗಿ ಅಸ್ವಸ್ಥ
– ಮೂರು ಕರುಗಳ ಹೊಟ್ಟೆ ತೀವ್ರವಾಗಿ ಉಬ್ಬರದಿಂದ ಶಸ್ತೃ ಚಿಕಿತ್ಸೆಯಿಂದ ಯಶಸ್ವಿ
– ದನದ ಮಾಲೀಕರು ಹಾಗೂ ಸಾರ್ವಜನಿಕರು ಮುಂಜಾಗ್ರತೆ ವಹಿಸಿದರೆ ಉತ್ತಮ

NAMMUR EXPRESS NEWS
ಹೊಸನಗರ : ತಾಲ್ಲೂಕು ನೆವಟೂರು ಪಶುಚಿಕಿತ್ಸಾಲಯ ವ್ಯಾಪ್ತಿಯ ನೆವಟೂರು ಗ್ರಾಮದ ಶ್ರೀಯುತ ದೇವೇಂದ್ರಪ್ಪ ಇವರ 5 ಮಲೆನಾಡು ಗಿಡ್ದ ದನದ ಕರುಗಳು( ಸರಿಸುಮಾರು 1 ವರ್ಷ ವಯಸ್ಸಿನ) ಬಕೆಟ್ ನಲ್ಲಿಟ್ಟಿದ್ದ ಸರಿಸುಮಾರು 10 ಲೀಟರ್ ನಷ್ಟು ರಬ್ಬರ್ ಹಾಲು ಕುಡಿದು ಜೀರ್ಣವಾಗದೇ ಹೊಟ್ಟೆ ಉಬ್ಬರಿಸಿ ರುಮಿನಲ್ ಇಂಪ್ಯಾಕ್ಷನ್ ಆಗಿ ಅಸ್ವಸ್ಥಗೊಂಡಿದ್ದು, ಮೆಡಿಸಿನ್ ನೀಡಿದ ನಂತರ 2 ಕರುಗಳು ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡಿದ್ದು, ಇನ್ನುಳಿದ ಮೂರು ಕರುಗಳು ತೀವ್ರವಾಗಿ ಹೊಟ್ಟೆ ಉಬ್ಬರಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದವು ಕೋಣಂದೂರು ಹಿರಿಯ ಪಶುವೈದ್ಯಾಧಿಕಾರಿ ಡಾ. ಆನಂದ ಜಿ ಹಾಗೂ ನೆವಟೂರು ಹಿರಿಯ ಪಶುವೈದ್ಯಧಿಕಾರಿ ಡಾ. ಧನಂಜಯ ಕೆ ರವರು ರುಮಿನಾಟಮಿ ಶಸ್ತೃ ಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಗಟ್ಟಿಯಾದ ರಬ್ಬರ್ ಮಿಶ್ರಿತ ಮೇವಿನ ಉಂಡೆಗಳನ್ನು (phytobezoar) ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಆಪರೇಷನ್ ನಂತರ ಕರುಗಳು ಚೇತರಿಕಾ ಹಂತದಲ್ಲಿವೆ. ಜಾನುವಾರುಗಳಿಗೆ ರಬ್ಬರ್ ಹಾಲು, ರಬ್ಬರ್ ಸೊಪ್ಪು, ಕರಿಬಸರಿ ಸೊಪ್ಪು, ಕಳಲೆ, ವಾಯುವಿಳಂಗ, ಮುಳ್ಳಿಲ್ಲದ ನಾಚಿಕೆ ಸೊಪ್ಪು, ಪ್ಲಾಸ್ಟಿಕ್ ನಂತಹ ವಸ್ತುಗಳು ಹಾನಿಕಾರಕವಾಗಿದ್ದು, ಸಾರ್ವಜನಿಕರು ಇದರ ಬಗ್ಗೆ ಮುಂಜಾಗ್ರತೆ ವಹಿಸಿದರೆ ಮುಂದಾಗುವ ಅನಾಹುತ ತಡೆಯಬಹುದೆಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Categories
ಶೃಂಗೇರಿ

ಬೇರು – ಭೂಮಿ ತಂಡದಿಂದ ತುಂಗಾನದಿ ತೀರದ ಸ್ನಾನಘಟ್ಟ ಸ್ವಚ್ಛತೆ

ಬೇರು – ಭೂಮಿ ತಂಡದಿಂದ ತುಂಗಾನದಿ ತೀರದ ಸ್ನಾನಘಟ್ಟ ಸ್ವಚ್ಛತೆ

* ಬೆಂಗಳೂರಿನ ಮೂವತ್ತು ಜನರ ತಂಡದಿಂದ ಸ್ವಚ್ಛತಾ ಕಾರ್ಯ
* ಕೈಜೋಡಿಸಿದ ತುಂಗಾನದಿ ಸ್ವಚ್ಛತಾ ಜನಾಂದೋಲನ ಸಮಿತಿ

NAMMUR EXPRESS NEWS
ಶೃಂಗೇರಿ:ಪ್ರಸಿದ್ಧ ಧಾರ್ಮಿಕ ಪ್ರವಾಸಿ ತಾಣ ಶೃಂಗೇರಿ ಸದಾ ಪ್ರವಾಸಿಗರಿಂದ ತುಂಬಿರುತ್ತದೆ.ದಿನವೂ ಸಾವಿರಾರು ಭಕ್ತರು ಭೇಟಿ ನೀಡುವ ಇಲ್ಲಿನ ತುಂಗಾ ನದಿ ತೀರದ ಸ್ನಾನಘಟ್ಟದ ಬಳಿ ಪಟ್ಟಣ ಪಂಚಾಯ್ತಿಯ ದೈನಂದಿನ ಸ್ವಚ್ಛತೆ ಹಾಗೂ ಪ್ರವಾಸಿಗರಿಗೆ ನಿರಂತರ ಮಾಹಿತಿಯ ನಂತರವು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸಗಳನ್ನು ರಾಶಿ ರಾಶಿ ಎಸೆದಿದ್ದರು.
ಇದನ್ನು ಮನಗಂಡ ಸ್ಥಳೀಯ ತುಂಗಾ ನದಿ ಸ್ವಚ್ಛತಾ ಜನಾಂದೋಲನ ಸಮಿತಿ ಬೆಂಗಳೂರಿನ ಬೇರು – ಭೂಮಿ ತಂಡ ನಡೆಸುತ್ತಿರುವ ನದಿ ಮೂಲಗಳಲ್ಲಿ ಪ್ಲಾಸ್ಟಿಕ್ ಸ್ವಚ್ಛತೆಯ ತನ್ನ 6 ನೇ ಅಭಿಯಾದಲ್ಲಿ ಸುಮಾರು 30 ಜನರ ತಂಡದಿಂದ ಶೃಂಗೇರಿಯ ತುಂಗಾ ನದಿ ತೀರದ ಗಾಂಧಿಮೈದಾನದ ಸ್ನಾನಘಟ್ಟದ ಬಳಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶ್ರಮಾದಾನ ಮಾಡುವ ಮೂಲಕ ನದಿಯ ಸ್ವಚ್ಛತೆಗೆ ಸಹಕರಿಸುವಂತೆ ಪ್ರವಾಸಿಗರು,ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
” ನದಿಗಳಿಂದಲೇ ಸಕಲ ಜೀವಿಗಳಿಗೆ ಜಲ ದೊರೆಯುವುದರಿಂದ ನದಿಗಳ ಉಳಿವು ತುಂಬಾ ಮುಖ್ಯ ಎಂದು ಬೇರು – ಭೂಮಿ ಬೆಂಗಳೂರು ತಂಡದ ಮುಖ್ಯಸ್ಥರಾದ ಯಶಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆಂದೋಲನದಲ್ಲಿ ಭಾಗವಹಿಸಿದ ತುಂಗಾನದಿ ಸ್ವಚ್ಛತಾ ಜನಾಂದೋಲನ ಸಮಿತಿಯ ಅಧ್ಯಕ್ಷರಾದ ರಜಿತ್ ಗೌಡ ಬೇಸೂರು ” ಗಂಗಾ ಸ್ನಾನ ತುಂಗಾಪಾನ ಎನ್ನುವುದು ಈಗ ತುಂಗಾಪಾನ ಸ್ವಲ್ಪ ಜೋಪಾನ ಎನ್ನುವಂತಾಗಿದ್ದು,ನದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಒಟ್ಟಾರೆ ಒಂದು ದಿನದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ಥಕ ಭಾವವನ್ನು ತಂಡ ಸದಸ್ಯರು ವ್ಯಕ್ತಪಡಿಸಿದರು.

Categories
ತೀರ್ಥಹಳ್ಳಿ

ಹಣಗೆರೆ ಕಟ್ಟೆ ದೇಗುಲದಲ್ಲಿ 73.23 ಲಕ್ಷ ಕಾಣಿಕೆ

ಟಾಪ್ ನ್ಯೂಸ್ ತೀರ್ಥಹಳ್ಳಿ

ಹಣಗೆರೆ ಕಟ್ಟೆ ದೇಗುಲದಲ್ಲಿ 73.23 ಲಕ್ಷ ಕಾಣಿಕೆ

ಇಂದು ತೀರ್ಥಹಳ್ಳಿಯಲ್ಲಿ ಸೌಹಾರ್ದ ಇಫ್ತಿಯಾರ್ ಕೂಟ!
– ಸಂಜೆ 6.00 ಗಂಟೆಗೆ ಜಾಮಿಯಾ ಮಸೀದಿ ತೀರ್ಥಹಳ್ಳಿಯಲ್ಲಿ ಕೂಟ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಸೌಹಾರ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆಯಲ್ಲಿ ಹುಂಡಿ ಎಣಿಕೆ ಬುಧವಾರ ನಡೆದಿದೆ
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ತಹಸೀಲ್ದಾ‌ರ್ ರಂಜಿತ್ ರವರ ನೇತೃತ್ವದಲ್ಲಿ ಹುಂಡಿಯ ಹಣ ಎಣಿಸುವ ಕಾರ್ಯ ನಡೆದಿದ್ದು ಈ ಬಾರಿಯೂ ಲಕ್ಷಗಟ್ಟಲೆ ಹಣ ಸಂಗ್ರಹವಾಗಿದೆ. ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕವಾಗಿ 2 ಕೋಟಿ ರೂಪಾಯಿಗೂ ಹೆಚ್ಚು ಹುಂಡಿ ಹಣ ಸಂಗ್ರಹವಾಗುತ್ತಿದೆ. ತ್ರೈಮಾಸಿಕ ಎಣಿಕೆಯಲ್ಲಿ ಸರಾಸರಿ 50 ಲಕ್ಷ ಹಣ ಸಂಗ್ರಹಣೆಯಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿಯೇ ಅತೀ ಹೆಚ್ಚು ಹುಂಡಿ ಹಣ ಸಂಗ್ರಹವಾಗುವ ಮುಜರಾಯಿ ದೇವಸ್ಥಾನಗಳಲ್ಲಿ ತಾಲೂಕಿನ ಹಣಗೆರೆಕಟ್ಟೆ ದೇವಸ್ಥಾನ ಕೂಡ ಒಂದಾಗಿದೆ.
ಈ ಬಾರಿ ಹುಂಡಿ ಎಣಿಕೆಯಲ್ಲಿ 73,23,910 ರೂ.ಸಿಕ್ಕಿದೆ.

ಇಂದು ತೀರ್ಥಹಳ್ಳಿಯಲ್ಲಿ ಸೌಹಾರ್ದ ಇಫ್ತಿಯಾರ್ ಕೂಟ!

ಮುಸ್ಲಿಂ ಬಾಂಧವರಿಂದ ಸೌಹಾರ್ದ ಇಫ್ತಿಯಾರ್ ಕೂಟ ಆಯೋಜನೆ ಮಾಡಲಾಗಿದೆ. ಮಾ. 27 ರಂದು ಸಂಜೆ 6.00 ಗಂಟೆಗೆ ಜಾಮಿಯಾ ಮಸೀದಿ, ಮಸೀದಿ ರಸ್ತೆ ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದೆ. ಈ ಸೌಹಾರ್ದ ಇಫ್ತಿಯಾರ್ ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಭಾಗವಹಿಸುವ ಸೌಹಾರ್ದ ಕ್ಷಣ. ಈ ಸೌಹಾರ್ದ ಇಫ್ತಿಯಾರ್ ಕೂಟಕ್ಕೆ ಸರ್ವರಿಗೂ ಕೂಡ ಆದರದ ಸ್ವಾಗತವನ್ನು ಮುಸ್ಲಿಂ ಬಾಂಧವರು ಕೋರಿದ್ದಾರೆ.

Categories
ತೀರ್ಥಹಳ್ಳಿ

ಎ.ಪಿ ರಾಮಪ್ಪ ಅವರ ಕುರಿತು ನುಡಿ ನಮನ ಕಾರ್ಯಕ್ರಮ ಯಶಸ್ವಿ

ಎ.ಪಿ ರಾಮಪ್ಪ ಅವರ ಕುರಿತು ನುಡಿ ನಮನ ಕಾರ್ಯಕ್ರಮ ಯಶಸ್ವಿ
– ಎ. ಪಿ. ರಾಮಪ್ಪನವರು ಬಿಟ್ಟುಹೋದ ಮೌಲ್ಯಗಳಿಂದು ನಮ್ಮೊಂದಿಗೆ ಇದೆ : ಆರಗ ಜ್ಞಾನೇಂದ್ರ
– ಮುಂದಿನ ಪೀಳಿಗೆಗೆ ಶಾಶ್ವತವಾಗಿರಬೇಕು ನೆನಪಿನ ಪುಸ್ತಕ ಬರಲ್ಲಿ ಎಂದು ಎಲ್ಲರ ಆಶಯ

NAMMUR EXPRESS NEWS
ತೀರ್ಥಹಳ್ಳಿ: ಇಂದು ಸಿದ್ದಾಂತಗಳು ಕೇವಲ ಭಾಷೆಗಳಾಗಿದ್ದು, ಬದುಕಿಗೆ ಅಳವಡಿಸಿಕೊಳ್ಳದವರು ಹಲವರಿದ್ದಾರೆ. ಸಮಾಜವಾದಿ ಶಾಂತವೇರಿ ಗೋಪಾಲಗೌಡ ಅವರ ಸಿದ್ಧಾಂತಕ್ಕೆ ಶಕ್ತಿ ನೀಡಿದ ಈ ಮಣ್ಣಿನ ಹಲವು ಸಮಾಜವಾದಿಗಳ ನೆನಪುಗಳನ್ನು ನಾವು ಮರೆಯಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಬಂಟರ ಭವನದಲ್ಲಿ ಸಮಾನ ಮನಸ್ಕರ ಸಂಘಟನೆಯ ವತಿಯಿಂದ ಇತ್ತೀಚಿಗೆ ನಿಧನರಾದ ಹಿರಿಯ ಸಮಾಜವಾದಿ ನೇತಾರ, ನಿವೃತ್ತಿ ಶಿಕ್ಷಕ ಎ.ಪಿ ರಾಮಪ್ಪ ಅವರ ಕುರಿತು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಸ್ತು ಆಲೋಚನಾ ರೀತಿಯೊಂದಿಗೆ ಎ.ಪಿ ರಾಮಪ್ಪನವರು ಬಿಟ್ಟು ಹೋದ ಮೌಲ್ಯಗಳು ನಮ್ಮೊಂದಿಗಿದೆ, ಮುಂದಿನ ದಿನಗಳಲ್ಲಿ ಇವರ ಬದುಕು, ವೃತ್ತಿ, ನಿಷ್ಠೆ, ಹೋರಾಟ ಜೀವನ ಮುಂದಿನ ಪೀಳಿಗೆಗೆ ಶಾಶ್ವತವಾಗಿರಬೇಕು ಎಂದಾದರೆ ಅದಕ್ಕೆ ಅಕ್ಷರ ರೂಪ ನೀಡಿ ನೆನಪಿನ ಪುಸ್ತಕ ಬರುವಂತಾಗಲಿ ಎಂದರು.

ರಾಮಪ್ಪನವರು ಶಿಕ್ಷಕರಾಗಿ ತಮ್ಮ ಅನಂತರ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನ ತೊಡಗಿಸಿಕೊಂಡು ಹೇಗೆ ಮಾದರಿ ವ್ಯಕ್ತಿತ್ವ ರೂಪಿಸಿಕೊಂಡಿದ್ದರು ಎಂಬುವುದನ್ನು ಸಹಕಾರಿ ದುರೀಣ ನಾಗರಾಜ್ ಶೆಟ್ಟಿ, ಪ್ರಗತಿಪರ ಕೃಷಿಕ ಕಡಿದಾಳ್ ದಯಾನಂದ, ರೈತ ಮುಖಂಡರ ಕಂಬಳಿಗೆರೆ ರಾಜೇಂದ್ರ, ರಂಗ ಕರ್ಮಿ ಸಂದೇಶ ಜವಳಿ ಬರಹಗಾರ ನೆಂಪೆ ದೇವರಾಜ್ ಚಿಂತಕ ಶಿವಾನಂದ ಕರ್ಕಿ, ಪತ್ರಕರ್ತ ಎಂ ಕೆ ರಾಘವೇಂದ್ರ, ಕಸಬಾ ಅಧ್ಯಕ್ಷ ಟಿ.ಕೆ ರಮೇಶ್ ಶೆಟ್ಟಿ, ಶಿರುಪತಿ ಮಂಜುನಾಥ ಸ್ಮರಿಸಿದರು.

ಎ ಪಿ ಆರ್ ಕೌಟುಂಬಿಕವಾಗಿಯೂ ಹೇಗೆ ಆದರ್ಶ ವ್ಯಕ್ತಿಯಾಗಿದ್ದರು ಎಂಬುವುದು ಅವರ ಪುತ್ರ ಆರ್ ಮದನ್, ಮಗಳು ಮಮತಾ ಸಾಯಿನಾಥ್ ಹಾಗೂ ಸಮೀಪ ಬಂಧು ನಿತಿನ್ ಹೆಗ್ಡೆ ಕಟ್ಟಿಕೊಟ್ಟರು. ಪತ್ರಕರ್ತ ರಾಮಚಂದ್ರ ಕೊಪ್ಪಲು ಕಾರ್ಯಕ್ರಮ ನಿರೂಪಿಸಿದರು.