Categories
ಬೆಂಗಳೂರು

18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಾಸ್

18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಾಸ್

* ಸ್ಪೀಕರ್ ಯು.ಟಿ ಖಾದರ್ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ
* 18 ಬಿಜೆಪಿ ಶಾಸಕರನ್ನು 6 ತಿಂಗಳು ಅಮಾನತು ಮಾಡಲಾಗಿತ್ತು

NAMMMUR EXPRESS NEWS
ಬೆಂಗಳೂರು: ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು ಭಾನುವಾರ ಹೇಳಿದ್ದಾರೆ.
18 ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ ಖಾದರ್ ನೇತೃತ್ವದ ನಡೆದ ಸಂಧಾನ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ ಮತ್ತು ಮಸೂದೆಯ ಪ್ರತಿಗಳನ್ನು ಹರಿದು ಅವರ ಮೇಲೆ ಎಸೆದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಇದೀಗ ಬಿಜೆಪಿ ಶಾಸಕ ಅಮಾನತು ಆದೇಶವನ್ನು ಹಿಂಪಡೆಯಲು ಸಭೆಯಲ್ಲಿ ತೀರ್ಮಾನವಾಗಿದೆ.
ಶಾಸಕರ ಅಮಾನತು ಆದೇಶವನ್ನ ಹಿಂಪಡೆಯಲಾಗಿದೆ. ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಲ್ಲಿಸಿದ್ದರು. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. 18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಈಗ ಸಂತೋಷದಿಂದ ಶಾಸಕರ ಅಮಾಮತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಎಲ್ಲರೂ ನಮ್ಮ ಮಿತ್ರರು. ಆ ಸಮಯದಲ್ಲಿ ದುರ್ನಡತೆ ತೋರಿದ್ದಕ್ಕೆ ಕ್ರಮಕೈಗೊಂಡೆ. ಕ್ರಮತೆಗೆದುಕೊಳ್ಳುವುದಕ್ಕೆ ನನಗೆ ಅಧಿಕಾರವಿದೆ ಎಂದು ಸ್ಪೀಕರ್​ ಯು.ಟಿ.ಖಾದರ್​ ಹೇಳಿದ್ದಾರೆ.
ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್​. ಅಶೋಕ್, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಕಾನೂನು ಸಚಿವ ಎಚ್​.ಕೆ.ಪಾಟೀಲ್ ಭಾಗಿಯಾಗಿದ್ದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಗೆಲುವಿನೊಂದಿಗೆ ತನ್ನ ಐಪಿಎಲ್ ಅಭಿಯಾನ ಮುಗಿಸಿದ ಚೆನ್ನೈ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಗೆಲುವಿನೊಂದಿಗೆ ತನ್ನ ಐಪಿಎಲ್ ಅಭಿಯಾನ ಮುಗಿಸಿದ ಚೆನ್ನೈ
* ಹೈದ್ರಾಬಾದ್‌ನ ರನ್ ಸುನಾಮಿಯಲ್ಲಿ ಕೊಚ್ಚಿ ಹೋದ ಕೋಲ್ಕತ್ತಾ

NAMMMUR EXPRESS SPORTS NEWS
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ 18ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಅತ್ತ, ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸತತ ಎರಡು ಸೋಲು ಕಂಡಿರುವ ಗುಜರಾತ್‌ ಟೈಟಾನ್ಸ್‌ ತಂಡವು, ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಆದರೆ, ಲೀಗ್‌ ಹಂತದ ಮುಗಿಯುವ ವೇಳೆಗೆ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವ ಸಾಧ್ಯತೆ ಕಡಿಮೆಯಾಗಿದೆ. ಗುಜರಾತ್‌ ತಂಡದ ಸೋಲಿನೊಂದಿಗೆ ಆರ್‌ಸಿಬಿ ತಂಡ ಹಾಗೂ ಅಭಿಮಾನಿಗಳಿಗೆ ಖುಷಿಯಾಗಿದ್ದು,ಆರ್‌ಸಿಬಿ ಅಗ್ರ ಎರಡು ಸ್ಥಾನಗಳಲ್ಲಿ ಲೀಗ್‌ ಹಂತವನ್ನು ಮುಗಿಸುವ ಅವಕಾಶ ಹೆಚ್ಚಾಗಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ಸಿಎಸ್‌ಕೆ, ಈ ಸೀಸನ್‌ನಲ್ಲಿ ತನ್ನ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಸ್ಫೋಟಕ ಪ್ರದರ್ಶನದೊಂದಿಗೆ 5 ವಿಕೆಟ್‌ ಕಳೆದುಕೊಂಡು 230 ರನ್‌ ಕಲೆ ಹಾಕಿತು. ಚೇಸಿಂಗ್‌ ನಡೆಸಿದ ಟೈಟಾನ್ಸ್‌, ಬ್ಯಾಟಿಂಗ್‌ನಲ್ಲಿ ಭಾರಿ ಕುಸಿತ ಕಂಡು 18.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್‌ ಆಯ್ತು. ಇದರೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 83 ರನ್‌ಗಳಿಂದ ಗೆದ್ದು ಬೀಗಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಎಂದಿನಂತೆ ಅಬ್ಬರಿಸಿದ ಆಯುಷ್‌ ಮ್ಹಾತ್ರೆ 200ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿ 17 ಎಸೆತಗಳಲ್ಲಿ 34 ರನ್‌ ಗಳಿಸಿದರು. ಈ ವೇಳೆ ಕಾನ್ವೆ ಹಾಗೂ ಊರ್ವಿಲ್‌ ಪಟೇಲ್‌ ಅರ್ಧಶತಕದ ಜೊತೆಯಾಟವಾಡಿದರು. 37 ರನ್‌ ಗಳಿಸಿ ಊರ್ವಿಲ್‌ ಪಟೇಲ್‌ ಔಟಾದರೆ, ಅವರ ಬೆನ್ನಲ್ಲೇ ಶಿವಂ ದುಬೆ ಕೂಡಾ 17 ರನ್‌ ಗಳಿಸಿ ನಿರ್ಗಮಿಸಿದರು. ಜವಾಬ್ದಾರಿಯುತ ಆಟವಾಡಿದ ಕಾನ್ವೆ 52 ರನ್ ಸಿಡಿಸಿ ಔಟಾದರು.ಕೊನೆಯಲ್ಲಿ ಡೆವಾಲ್ಡ್‌ ಬ್ರೆವಿಸ್‌ ಅಬ್ಬರದ ಬ್ಯಾಟಿಂಗ್‌ ನಡೆಸಿದರು. ಜಡೇಜಾ ಜೊತೆಗೂಡಿ ತಾವೊಬ್ಬರೇ 23 ಎಸೆತಗಳಲ್ಲಿ 5 ಸ್ಫೋಟಕ ಸಿಕ್ಸರ್‌ ಸಹಿತ 57 ರನ್‌ ಬಾರಿಸಿದರು. ಹೀಗಾಗಿ ತಂಡದ ಮೊತ್ತವು 230ಕ್ಕೇರಿತು.
ಬೃಹತ್‌ ಮೊತ್ತದ ಚೇಸ್ ಆರಂಭಿಸಿದ ಗುಜರಾತ್‌, ಈ ಬಾರಿ ಅಂದುಕೊಂಡಂತೆ ಆಡಲು ಸಾಧ್ಯವಾಗಲಿಲ್ಲ. ತಂಡದ ಸ್ಟಾರ್‌ ಆರಂಭಿಕರಾದ ಶುಭ್ಮನ್ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಬ್ಯಾಟ್‌ನಿಂದ ಈ ಬಾರಿ ಜವಾಬ್ದಾರಿಯುತ ಆಟ ಬರಲಿಲ್ಲ. ಬೇಗನೆ ದೊಡ್ಡ ಹೊಡೆತಕ್ಕೆ ಮುಂದಾದ ಶುಭ್ಮನ್‌ ಗಿಲ್‌ 13 ರನ್‌ ಗಳಿಸಿ ಔಟಾದರು. ಅವರ ಬೆನ್ನಲ್ಲೇ ಬಟ್ಲರ್‌ 5 ಹಾಗೂ ರುದರ್‌ಫೋರ್ಡ್‌ 0ಗೆ ಔಟಾದರು. ಶಾರುಖ್‌ ಖಾನ್‌ ಕೂಡಾ 19 ರನ್‌ಗೆ ಆಟ ಮುಗಿಸಿದರು. ಟೂರ್ನಿಯಲ್ಲಿ ಹೆಚ್ಚು ರನ್‌ಗಳೊಂದಿಗೆ ಆರೇಂಜ್‌ ಕ್ಯಾಪ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸುದರ್ಶನ್‌ 28 ಎಸೆತಗಳಲ್ಲಿ 41 ರನ್‌ ಗಳಿಸಿದರು.ಕೊನೆಯಲ್ಲಿ ರಾಹುಲ್‌ ತೆವಾಟಿಯಾ 14, ರಶೀದ್‌ ಖಾನ್‌ 12 ಹಾಗೂ ಅರ್ಷದ್‌ ಖಾನ್‌ 20 ರನ್‌ ಗಳಸಿದರು. ಸಿಎಸ್‌ಕೆ ಪರ 3 ವಿಕೆಟ್‌ ಪಡೆದ ನೂರ್‌ ಅಹ್ಮದ್‌ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡರು.‌
ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಅಂತಿಮವಾಗಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಯಾವುವು ಎಂಬ ಕುತೂಹಲ ಇನ್ನಷ್ಟು ಮುಂದುವರೆದಿದೆ. ಎಲ್ಲಾ ನಾಲ್ಕು ತಂಡಗಳಿಗೆ ಮೊದಲ ಎರಡು ಸ್ಥಾನ ಪಡೆಯುವ ಅವಕಾಶಗಳಿವೆ. ಆದರೆ, ತನ್ನ ಕೊನೆಯ ಲೀಗ್‌ ಹಂತದ ಪಂದ್ಯದಲ್ಲಿ ಗೆದ್ದರೆ ಮಾತ್ರ ಇದು ಸಾಧ್ಯವಾಗಲಿದೆ.

* ಹೈದ್ರಾಬಾದ್‌ನ ರನ್ ಸುನಾಮಿಯಲ್ಲಿ ಕೊಚ್ಚಿ ಹೋದ ಕೋಲ್ಕತ್ತಾ
ಹೆನ್ರಿಕ್ ಕ್ಲಾಸೆನ್ ಅವರ ಬಿರುಗಾಳಿ ಶತಕ ಮತ್ತು ಜಯದೇವ್ ಉನಾದ್ಕಟ್ ನೇತೃತ್ವದ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 110 ರನ್‌ಗಳಿಂದ ಸೋಲಿಸುವ ಮೂಲಕ ತನ್ನ ಐಪಿಎಲ್ ಅಭಿಯಾನವನ್ನು ಕೊನೆಗೊಳಿಸಿತು. ಈಗಾಗಲೇ ಪ್ಲೇಆಫ್ ರೇಸ್‌ನಿಂದ ಈ ಎರಡೂ ತಂಡಗಳು ಹೊರಬಿದ್ದಿದ್ದು, ಸನ್‌ರೈಸರ್ಸ್ ತಂಡವು 14 ಪಂದ್ಯಗಳಲ್ಲಿ 13 ಅಂಕಗಳೊಂದಿಗೆ ಆರನೇ ಸ್ಥಾನವನ್ನು ತಲುಪಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ 8 ನೇ ಸ್ಥಾನದಲ್ಲಿದೆ. ಈ ಪಂದ್ಯದ ಸೋಲಿನ ನಂತರ, ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಅಜಿಂಕ್ಯ ರಹಾನೆ ತಮ್ಮ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕಳಪೆಯಾಗಿತ್ತು ಎಂದು ಹೇಳಿದರು. ‘ಅವರು ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು, ಬೌಲಿಂಗ್ ಮಾಡುವಾಗ ನಾವು ಕೆಲವು ತಪ್ಪುಗಳನ್ನು ಮಾಡಿದೆವು’ ಎಂದು ರಹಾನೆ ಒಪ್ಪಿಕೊಂಡರು. ಅವರು ಬ್ಯಾಟಿಂಗ್ ಮಾಡಿದ ರೀತಿ, ನಾವು ಎಸೆದ ಎಲ್ಲ ಸುಲಭ ಚೆಂಡುಗಳ ಲಾಭವನ್ನು ಪಡೆದುಕೊಂಡರು ಮತ್ತು ಉತ್ತಮ ಚೆಂಡುಗಳನ್ನು ಸಹ ಹೊಡೆದರು. ಇದರ ಶ್ರೇಯಸ್ಸು ಹೈದರಾಬಾದ್ ಬ್ಯಾಟ್ಸ್‌ಮನ್‌ಗಳಿಗೆ ಸಲ್ಲಬೇಕು, ಅವರ ಉದ್ದೇಶ ನಿಜಕ್ಕೂ ಅದ್ಭುತವಾಗಿತ್ತು ಎಂದಿದ್ದಾರೆ.

* ಅದ್ಭುತ ಇನ್ನಿಂಗ್ಸ್ ಆಡಿದ ಕ್ಲಾನೆಸ್
ಕ್ಲಾಸೆನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ನಲ್ಲಿ 39 ಎಸೆತಗಳಲ್ಲಿ ಒಂಬತ್ತು ಸಿಕ್ಸರ್‌ಗಳು ಮತ್ತು ಏಳು ಬೌಂಡರಿಗಳೊಂದಿಗೆ ಅಜೇಯ 105 ರನ್ ಗಳಿಸಿದರು, ಜೊತೆಗೆ ಹೆಡ್ (76 ರನ್, 40 ಎಸೆತಗಳು, ಆರು ಸಿಕ್ಸರ್‌ಗಳು, ಆರು ಬೌಂಡರಿಗಳು) ಮತ್ತು ಇಶಾನ್ ಕಿಶನ್ (29) ಅವರೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ವಿಕೆಟ್‌ಗಳಿಗೆ 83 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಸನ್‌ರೈಸರ್ಸ್ ಮೂರು ವಿಕೆಟ್‌ಗಳಿಗೆ 278 ರನ್ ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ಸ್ಕೋರ್ ಮತ್ತು ಪ್ರಸಕ್ತ ಋತುವಿನ ಎರಡನೇ ದೊಡ್ಡ ಸ್ಕೋರ್ ಆಗಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗಣಪತಿಯ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮನಸ್ಸು ಸಂತೋಷವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷವಿರುತ್ತದೆ, ಆದರೆ ಕೆಲವೊಮ್ಮೆ ಅಸಮಾಧಾನದ ಭಾವನೆಗಳು ಕೂಡ ಮೂಡಬಹುದು. ಹಾಗಾಗಿ ಸ್ವಯಂ ನಿಯಂತ್ರಣದಲ್ಲಿರಿ. ಅತಿಯಾದ ಖರ್ಚುಗಳಿಂದ ಮನಸ್ಸು ಚಿಂತಿತವಾಗಿರುತ್ತದೆ. ಹಣದ ಒಳಹರಿವಿನ ಹೊಸ ಮಾರ್ಗಗಳು ಸುಗಮವಾಗುತ್ತವೆ. ಕುಟುಂಬ ಜೀವನದ ಸಮಸ್ಯೆಗಳು ದೂರವಾಗುತ್ತವೆ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ.

** ವೃಷಭ ರಾಶಿ :
ಇಂದು ಸಾಮಾನ್ಯ ದಿನವಾಗಿರುತ್ತದೆ. ವ್ಯವಹಾರದಲ್ಲಿ ಹಣದ ಲಾಭ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಆದರೆ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಬಜೆಟ್ ಪ್ರಕಾರ ಖರ್ಚು ಮಾಡಿ. ಕಷ್ಟದ ಸಮಯವನ್ನು ಎದುರಿಸಲು ಹಣವನ್ನು ಉಳಿಸಿ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ.

** ಮಿಥುನ ರಾಶಿ :
ಇಂದು ಮಿಥುನ ರಾಶಿಯ ಜನರ ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣವಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪರಿಸರ ಅನುಕೂಲಕರವಾಗಿರುತ್ತದೆ. ಹಣದ ಒಳಹರಿವಿನ ಹೊಸ ಮಾರ್ಗಗಳು ಸೃಷ್ಟಿಯಾಗುತ್ತವೆ, ಆದರೆ ಅತಿಯಾದ ಖರ್ಚುಗಳಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ವ್ಯಾಪಾರ ಲಾಭ ಇರುತ್ತದೆ. ಪೂರ್ವಜರ ಆಸ್ತಿಯಿಂದ ಹಣ ಲಾಭವಾಗುತ್ತದೆ. ಭೌತಿಕ ಸಂತೋಷ ಮತ್ತು ಸಂಪತ್ತಿನಲ್ಲಿ ಹೆಚ್ಚಳವಾಗುತ್ತದೆ.

** ಕರ್ಕಾಟಕ ರಾಶಿ :
ಇಂದು ನೀವು ಕೆಲಸದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೀರಿ. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುತ್ತೀರಿ. ಇಂದು ಜೀವನದಲ್ಲಿ ದೊಡ್ಡ ಬದಲಾವಣೆಗಳಿಗೆ ಸಿದ್ಧರಾಗಿರಿ. ಇಂದು ನಿಮ್ಮ ಮನಸ್ಸು ಕೆಲವು ಅಪರಿಚಿತ ಭಯದಿಂದ ತೊಂದರೆಗೊಳಗಾಗಬಹುದು. ಎಲ್ಲಾ ಕಾರ್ಯಗಳನ್ನು ಸಕಾರಾತ್ಮಕ ಮನಸ್ಥಿತಿಯೊಂದಿಗೆ ಪೂರ್ಣಗೊಳಿಸಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತಿರಿ.

** ಸಿಂಹ ರಾಶಿ :
ಇಂದು ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ಕೆಲಸದ ಸವಾಲುಗಳು ದೂರವಾಗುತ್ತವೆ. ಕಚೇರಿಯಲ್ಲಿ ನಿಷ್ಪ್ರಯೋಜಕ ವಾದಗಳನ್ನು ತಪ್ಪಿಸಿ. ಕೋಪವನ್ನು ನಿಯಂತ್ರಿಸಿ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿರುತ್ತದೆ. ಸಂಬಂಧಗಳಲ್ಲಿ ಅಪಶ್ರುತಿಯ ಲಕ್ಷಣಗಳಿವೆ. ಮಾತಿನಲ್ಲಿ ಸೌಮ್ಯತೆ ಇರುತ್ತದೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನ ಕೊಡಿ. ಶೈಕ್ಷಣಿಕ ಕೆಲಸದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ.

** ಕನ್ಯಾ ರಾಶಿ :
ಇಂದು ನಿಮಗೆ ಬಹಳ ಶುಭ ದಿನವಾಗಲಿದೆ. ಭೌತಿಕ ಸಂತೋಷ ಮತ್ತು ಸಂಪತ್ತಿನಲ್ಲಿ ಹೆಚ್ಚಳವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಹೊಸ ಬಜೆಟ್ ಮಾಡಿ. ಆರ್ಥಿಕ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ಕೆಲವು ಮಹಿಳೆಯರಿಗೆ ಇಂದು ಪ್ರಸ್ತಾವನೆ ಸಿಗಬಹುದು.

** ತುಲಾ ರಾಶಿ :
ಇಂದು ಯಶಸ್ಸನ್ನು ಸಾಧಿಸಲು ನೀವು ಶ್ರಮಿಸಬೇಕಾಗುತ್ತದೆ. ಲೆಕ್ಕಪತ್ರ ನಿರ್ವಹಣೆ ಮತ್ತು ಬೌದ್ಧಿಕ ಕೆಲಸವು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುತ್ತದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆ ಇರಬಹುದು. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸ್ನೇಹಿತರ ಸಹಾಯದಿಂದ, ಆರ್ಥಿಕ ಲಾಭದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಕುಟುಂಬ ಜೀವನವು ಸಂತೋಷದಿಂದ ಕಳೆಯುತ್ತದೆ.

** ವೃಶ್ಚಿಕ ರಾಶಿ :
ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ಭೌತಿಕ ಸಂತೋಷದಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಹೊಸ ಬಜೆಟ್ ಮಾಡಿ. ಆರ್ಥಿಕ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ಕೆಲವು ಮಹಿಳೆಯರಿಗೆ ಇಂದು ಪ್ರಸ್ತಾಪ ಸಿಗಬಹುದು.

** ಧನಸ್ಸು ರಾಶಿ :
ಇಂದು ಯಶಸ್ಸನ್ನು ಸಾಧಿಸಲು ನೀವು ಶ್ರಮಿಸಬೇಕಾಗುತ್ತದೆ. ಸ್ನೇಹಿತರ ಸಹಾಯದಿಂದ, ಹಣದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಕುಟುಂಬ ಜೀವನವು ಸಂತೋಷದಿಂದ ಕಳೆಯುತ್ತದೆ. ಲೆಕ್ಕಪತ್ರ ನಿರ್ವಹಣೆ ಮತ್ತು ಬೌದ್ಧಿಕ ಕೆಲಸವು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುತ್ತದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆ ಇರಬಹುದು. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ.

** ಮಕರ ರಾಶಿ :
ಇಂದು ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಹಣದ ಒಳಹರಿವಿನ ಹೊಸ ಮಾರ್ಗಗಳು ಸುಗಮವಾಗುತ್ತವೆ. ವ್ಯಾಪಾರ ಲಾಭ ಇರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಅತಿಯಾದ ಕೋಪವನ್ನು ತಪ್ಪಿಸಿ. ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ವಾದಗಳನ್ನು ತಪ್ಪಿಸಿ.

** ಕುಂಭ ರಾಶಿ :
ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ಭೌತಿಕ ಸೌಕರ್ಯಗಳಲ್ಲಿ ಹೆಚ್ಚಳವಾಗುತ್ತದೆ. ನೀವು ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಹೊಸ ಬಜೆಟ್ ಮಾಡಿ. ಆರ್ಥಿಕ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ಕೆಲವು ಮಹಿಳೆಯರಿಗೆ ಇಂದು ಮದುವೆ ಪ್ರಸ್ತಾಪ ಸಿಗಬಹುದು. ಜೀವನದಲ್ಲಿ ಸಣ್ಣಪುಟ್ಟ ಸವಾಲುಗಳು ಇರುತ್ತವೆ.

** ಮೀನ ರಾಶಿ :
ಇಂದು ನೀವು ನಿಮ್ಮ ಮಾಜಿ ಸಂಗಾತಿಯನ್ನು ಭೇಟಿಯಾಗಬಹುದು. ನೀವು ಹೊಸ ಸಂಬಂಧವನ್ನು ಪ್ರಾರಂಭಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉದ್ಯಮಿಗಳು ಯಾರನ್ನೂ ಕುರುಡಾಗಿ ನಂಬಬಾರದು. ಸ್ನೇಹಿತರ ಸಹಾಯದಿಂದ, ಕೆಲಸ ಮತ್ತು ವ್ಯವಹಾರದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಹಣದ ಒಳಹರಿವು ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಕೆಲವು ಏರಿಳಿತಗಳು ಉಂಟಾಗುತ್ತವೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ? 
– ಅಡಿಕೆ ದರ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?

NAMMUR EXPRESS NEWS

ಸರಕು
58700-78000-98596

ಬೆಟ್ಟೆ
52009-57900-59099

ರಾಶಿ
48009-55860-57169

ಗೊರಬಲು
18009-28500-32699

Categories
ರಾಜ್ಯ

ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ!

ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ!

– ಖ್ಯಾತ ಪರಮಾಣು ವಿಜ್ಞಾನಿ ಎಂ. ಆರ್. ಶ್ರೀನಿವಾಸನ್ ಇನ್ನಿಲ್ಲ!
– ಖ್ಯಾತ ಭೌತಶಾಸ್ತ್ರಜ್ಞ ಮತ್ತು ಬರಹಗಾರ ಜಯಂತ್ ನಾರ್ಲಿಕರ್ ನಿಧನ

NAMMUR EXPRESS NEWS
ಚೆನ್ನೈ: ಖ್ಯಾತ ಪರಮಾಣು ವಿಜ್ಞಾನಿ ಮತ್ತು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಎಂ. ಆರ್. ಶ್ರೀನಿವಾಸನ್ ಮೇ. 20ರಂದು (ಇಂದು) ನಿಧನರಾಗಿದ್ದಾರೆ. 95 ವರ್ಷದ ಅವರು ತಮಿಳುನಾಡಿನ ಉದಕಮಂಡಲದಲ್ಲಿ ಅಂತಿಮ ದಿನಗಳನ್ನು ಕಳೆಯುತ್ತಿದ್ದರು.
ಪರಮಾಣು ವಿಜ್ಞಾನ ಮತ್ತು ಇಂಜಿನಿಯರಿಂಗ್​ನಲ್ಲಿ ಇವರ ಕೊಡುಗೆ ಅಪಾರವಾಗಿದೆ. ಭಾರತದ ಎರಡನೇ ಅತ್ಯುತ್ತಮ ನಾಗರಿಕ ಪ್ರಶಸ್ತ್ರಿ ಪದ್ಮ ವಿಭೂಷಣಕ್ಕೆ ಭಾಜನರಾಗಿರುವ ಶ್ರೀನಿವಾಸನ್ ಅವರ ದೂರದೃಷ್ಟಿಯ ನಾಯಕತ್ವ, ತಾಂತ್ರಿಕ ನೈಪುಣ್ಯತೆ ಮತ್ತು ದೇಶಕ್ಕೆ ಅವಿರಹಿತ ಸೇವೆಯು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನವಾಗಲಿದೆ.

– ಖ್ಯಾತ ಭೌತಶಾಸ್ತ್ರಜ್ಞ ಮತ್ತು ಬರಹಗಾರ ಜಯಂತ್ ನಾರ್ಲಿಕರ್ ನಿಧನ

ಮುಂಬೈ: ಖ್ಯಾತ ಭೌತಶಾಸ್ತ್ರಜ್ಞ ಮತ್ತು ಬರಹಗಾರ ಜಯಂತ್ ನಾರ್ಲಿಕರ್ ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. ಜಯಂತ್‌ ನಾರ್ಲಿಕ‌ರ್ ಅವರಿಗೆ 86 ವರ್ಷ ವಯಸ್ಸಾಗಿತ್ತು.
‘ಬಿಗ್ ಬ್ಯಾಂಗ್’ ಮಾದರಿಗೆ ಪರ್ಯಾಯ ಮಾದರಿಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯಿಂದಾಗಿ ನಾರ್ಲಿಕರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ.
ಜಯಂತ್‌ ಅವರು 1994ರಿಂದ 1997ರವರೆಗೆ ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ ವಿಶ್ವವಿಜ್ಞಾನ ಆಯೋಗದ ಅಧ್ಯಕ್ಷರಾಗಿದ್ದರು. ನಾರ್ಲಿಕರ್ ಅಂತರ ವಿಶ್ವವಿದ್ಯಾನಿಲಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರದಲ್ಲಿ (IUCAA) ಪ್ರೊಫೆಸರ್ ಆಗಿದ್ದರು.
ಭೌತಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದ ನಾರ್ಲಿಕರ್‌ಗೆ 1962ರಲ್ಲಿ ಸ್ಮಿತ್ ಪ್ರಶಸ್ತಿ ಮತ್ತು 1967ರಲ್ಲಿ ಆಡಮ್ಸ್ ಪ್ರಶಸ್ತಿ ಲಭಿಸಿತ್ತು.
ನಾರ್ಲಿಕರ್ ಅವರು ಟಾಟಾ ಇನ್ಸಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ಗೆ (1972-1989) ಸೇರುವ ಉದ್ದೇಶದಿಂದ ಭಾರತಕ್ಕೆ ಮರಳಿದ್ದರು. 1988ರಿಂದ 2003ರವರೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಪ್ರಸ್ತಾವಿತ ಅಂತರ ವಿಶ್ವವಿದ್ಯಾಲಯ ಖಗೋಳವಿಜ್ಞಾನ ಮತ್ತು ಅಸ್ಟೋಫಿಸಿಕ್ಸ್ ಕೇಂದ್ರದ (IUCAA) ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ನಾರ್ಲಿಕರ್ ಅವರು 2021ರ ಜನವರಿಯಲ್ಲಿ ನಾಸಿಕ್‌ನಲ್ಲಿ ನಡೆದ 94ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ನಾರ್ಲಿಕ‌ರ್ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

Categories
ಕರಾವಳಿ

ಮಣಿಪಾಲ: ಬಾರಿ ಗಾಳಿಮಳೆಯ ಹೊಡೆತಕ್ಕೆ ತೋಡಾಗಿ ಮಾರ್ಪಟ್ಟ ಹೆದ್ದಾರಿ ರಸ್ತೆ

ಕರಾವಳಿ ಟಾಪ್ ನ್ಯೂಸ್!

ಮಣಿಪಾಲ: ಬಾರಿ ಗಾಳಿಮಳೆಯ ಹೊಡೆತಕ್ಕೆ ತೋಡಾಗಿ ಮಾರ್ಪಟ್ಟ ಹೆದ್ದಾರಿ ರಸ್ತೆ

– ಮಣಿಪಾಲ: ವಿದ್ಯಾರ್ಥಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
– ಮಂಗಳೂರು: ಜೈಲಿನಲ್ಲಿ ಕೈದಿಗಳ ಹೊಡೆದಾಟ, ಓರ್ವನಿಗೆ ಗಾಯ
– ಕಾಪು: ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

NAMMUR EXPRESS NEWS
ಉಡುಪಿ: ಬಾರಿ ಗಾಳಿಮಳೆಯ ಹೊಡೆತಕ್ಕೆ ಮಣಿಪಾಲದ ಐನಾಕ್ಸ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಕಿತ್ತುಹೋಗಿದೆ.
ಅಪಾರ ಪ್ರಮಾಣದಲ್ಲಿ ಮಳೆಯ ನೀರು ರಸ್ತೆಯಲ್ಲೇ ಹರಿದುಹೋಗುತ್ತಿದ್ದು, ನೀರಿನ ರಭಸಕ್ಕೆ ರಸ್ತೆ ಕಿತ್ತುಹೋಗಿ ತೋಡಾಗಿ ಮಾರ್ಪಟ್ಟಿದೆ. ಇದರಿಂದ ವಾಹನ ಸವಾರರಿಗೆ ಮುಂದಕ್ಕೆ ಚಲಿಸಲು ಆಗದೆ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇದೇ ರೀತಿ ಮಳೆ ಮುಂದುವರಿದರೆ ಮಣಿಪಾಲ ಐನಾಕ್ಸ್ ಮುಂಭಾಗದ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗುವ ಸಾಧ್ಯತೆ ಇದೆ. ಮಳೆನೀರು ಹೋಗಲು ಬೇರೆ ಜಾಗವಿಲ್ಲದೆ, ಹೆದ್ದಾರಿಯಲ್ಲೇ ಹರಿದು ಹೋಗುತ್ತಿದೆ.

– ಮಣಿಪಾಲ: ವಿದ್ಯಾರ್ಥಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮಣಿಪಾಲ: ಮಣಿಪಾಲದ ಸ್ಕೂಲ್ ಆಫ್ ಕಾಮರ್ಸ್ ಎಕೊನೋಮಿಕ್ ಅಕಾಡೆಮಿ ವಿದ್ಯಾರ್ಥಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಛತ್ತಿಸ್‌ಗಡದ ಅನ್ಶುಲ್ ಯಾದವ್ (21) ಎಂದು ಗುರುತಿಸಲಾಗಿದೆ. ಇವರು ಬಿಬಿಎ ವ್ಯಾಸಾಂಗ ಮಾಡುತ್ತಿದ್ದು ಮಣಿಪಾಲದ ಎಂಐಟಿ ಹಾಸ್ಟೆಲಿನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು.
ಇವರು ತನ್ನ ಮೊದಲ ವರ್ಷದ ಸೆಕೆಂಡ್ ಸೆಮಿಸ್ಟರ್‌ನಲ್ಲಿ 4 ವಿಷಯಗಳಲ್ಲಿ ಅನುತ್ತೀರ್ಣಗೊಂಡ ವಿಚಾರದಲ್ಲಿ ಮನನೊಂದಿದ್ದರು. ಮೇ.18ರ ಬೆಳಗಿನ ಮಧ್ಯಾವಧಿಯಲ್ಲಿ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮಂಗಳೂರು: ಜೈಲಿನಲ್ಲಿ ಕೈದಿಗಳ ಹೊಡೆದಾಟ, ಓರ್ವನಿಗೆ ಗಾಯ

ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮೇ. 19ರಂದು ರಾತ್ರಿ ಸುಮಾರು 7 ಗಂಟೆಗೆ ನಡೆದ ವಿಚಾರಣಾಧೀಕ ಕೈದಿಗಳ ಹೊಡೆದಾಟದಲ್ಲಿ ಒಬ್ಬ ಕೈದಿ ಗಾಯಗೊಂಡಿದ್ದಾನೆ. ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ವಾರಂಟೈನ್‌ ಸೆಲ್‌ ವಿಭಾಗದ ಕೆಲವು ವಿಚಾರಣಾ ಕೈದಿಗಳು ಕಚೇರಿ ಮುಂಭಾಗದಲ್ಲಿ ನಿಂತು ʼಬಿʼ ಬ್ಯಾರಕ್‌ನಲ್ಲಿರುವ ಕೈದಿಗಳನ್ನು ಗುರಾಯಿಸಿ ನೋಡಿದ್ದು, ಪರಸ್ಪರ ಅವಾಚ್ಯವಾಗಿ ಬೈದಾಡಿಕೊಂಡಿದ್ದರು. ಸಿಮೆಂಟ್‌ ಇಟ್ಟಿಗೆಯನ್ನು ಒಡೆದು ಅದರ ತುಂಡುಗಳನ್ನು ಎಸೆದಿದ್ದರು. ಇನ್ನೊಂದು ಬ್ಯಾರಾಕ್‌ನ ಕೆಲ ಕೈದಿಗಳು ಮಧ್ಯದ ಗೇಟನ್ನು ದೂಡಿ ಹೊರಬಂದು ಕಚೇರಿಯ ನ್ಯಾಯಾಂಗ ವಿಭಾಗದ ಕೋಣೆಯತ್ತ ನುಗ್ಗಿದ್ದು, ಅದರ ಬಾಗಿಲಿನ ಗಾಜನ್ನು ಒಡೆದು ಹಾಕಿದರು. ಈ ಗಲಾಟೆಯಲ್ಲಿ ಕೈದಿಯೋರ್ವನ ಕಾಲಿಗೆ ಗಾಯವಾಗಿದೆ ಎಂದು ಜೈಲು ಅಧಿಕ್ಷಕರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿ ಕೈದಿಗಳು ಹೊಡೆದಾಡುವ ದೃಶ್ಯವನ್ನು ಸಮೀಪದ ಕಟ್ಟಡವೊಂದರ ಮಹಡಿಯಲ್ಲಿದ್ದವರು ಚಿತ್ರೀಕರಣ ಮಾಡಿದ್ದು, ಹಿಂದೂಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯಲ್ಲಿ ಬಂಧನಕ್ಕೊಳಗಾದ ಆರೋಪಿ ನೌಷಾದ್‌ ಗುರಿಯಾಗಿಸಿ ಹಲ್ಲೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಆರೋಪಿ ನೌಷಾದ್‌ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

– ಕಾಪು: ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಕಾಪು : ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೇ. 18ರಂದು ರಾತ್ರಿ ವೇಳೆ ಕಾಪುವಿನಲ್ಲಿ ನಡೆದಿದೆ.
ಕಾಪುವಿನ ಜಮೀಲಾಬಿ ಮನೆಯ ಬೀಗ ಹಾಕಿ, ಮಗನ ಮನೆಗೆ ಹೋಗಿದ್ದು, ಈ ವೇಳೆ ಮನೆಯ ಬಾಗಿಲು ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಬೆಡ್ ರೂಂನ ಕಪಾಟಿನಲ್ಲಿದ್ದ ಮುತ್ತಿನ ಹಾರ, ಬಳೆ, 4 ಉಂಗುರುಗಳು, ಕಿವಿಯೋಲೆ, ಒಡೆಗೆ ಹಾಕುವ ಹೂ, 3 ಜೊತೆ ಕಿವಿಯ ಟಿಕ್ಕಿ, ಚಿಕ್ಕ ಚೈನ್, ಕಿವಿಯ ರಿಂಗ್ ಸೇರಿ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಮೌಲ್ಯ 3,84,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ: ದಿವಂಗತ ಪಟಮಕ್ಕಿ ರತ್ನಾಕರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದ ಗಣ್ಯರು..!

ತೀರ್ಥಹಳ್ಳಿ: ದಿವಂಗತ ಪಟಮಕ್ಕಿ ರತ್ನಾಕರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದ ಗಣ್ಯರು..!
– ಅನೇಕ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿ
– ಮಿಮಿಕ್ರಿ ಕಲಾವಿದ ಗೋಪಿಯವರಿಂದ ಸಮಾರಂಭದ ಉದ್ದಕ್ಕೂ ತಮ್ಮ ಹಾಸ್ಯದ ಹೊನಲು

NAMMUR EXPRESS NEWS
ತೀರ್ಥಹಳ್ಳಿಯ ಸಹ್ಯಾದ್ರಿವಾರ್ತೆ ವಾರಪತ್ರಿಕೆಯ ಸಂಪಾದಕ ಬಿ. ಗಣಪತಿಯವರ ಸಂಪಾದಕತ್ವದಲ್ಲಿ ಮೂಡಿ ಬಂದ ತೀರ್ಥಹಳ್ಳಿಯ ಮಾಜಿ ಶಾಸಕ, ಆಧ್ಯಾತ್ಮಿಕವಾಗಿ ಅಪಾರ ಆಳ ಅಧ್ಯಯನ ಮತ್ತು ಚಿಂತನೆ ಹೊಂದಿದ್ದ ಪ್ರಾಮಾಣಿಕ ರಾಜಕಾರಣಿ ದಿವಂಗತ ಪಟಮಕ್ಕಿ ರತ್ನಾಕರ್ ಕುರಿತಾದ ಪುಸ್ತಕ ಮೇ 18 ರಂದು ಸಂಜೆ 4 ಗಂಟೆಗೆ ಲೋಕಾರ್ಪಣೆಗೊಂಡಿದೆ. ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷರೂ, ಚಿಂತಕರೂ, ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ರಮೇಶ್ ಕುಮಾರ್ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರೂ, ಈ ಕಾರ್ಯಕ್ರಮವನ್ನು ಸ್ವಾಮಿ ಜತಕಾಮಾನಂದ, ರಾಮಕೃಷ್ಣ ಮಠ ಮಂಗಳೂರು ಇವರು ಉದ್ಘಾಟಿಸಿದರು ಪುಸ್ತಕ ಬಿಡುಗಡೆ ಎಸ್ ಮಧು ಬಂಗಾರಪ್ಪ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ಇವರು ನಡೆಸಿಕೊಟ್ಟರು, ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ವಹಿಸಿದ್ದರು. ವಾಗ್ಮಿ, ಕೊಪ್ಪದ ಖ್ಯಾತ ವಕೀಲರೂ ಆದ ಸುಧೀರ್ ಕುಮಾರ್ ಮುರೊಳ್ಳಿ ಪಟಮಕ್ಕಿ ರತ್ನಾಕರ್ ರವರ ವ್ಯಕ್ತಿತ್ವ, ಪುಸ್ತಕದ ಕುರಿತು ಅವಲೋಕನ ಗೈಯದಿದ್ದಾರೆ.

ಪಟಮಕ್ಕಿ ಸೋಲಿಲ್ಲದ ಸರದಾರ: ಆರಗ

ಪಟಮಕ್ಕಿ ರತ್ನಾಕರ್ ಒಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿ ಡಿ.ಬಿ.ಚಂದ್ರಶೇಖರಗೌಡರಂತಹ ಪ್ರಭಾವಿ ರಾಜಕಾರಣಿಯನ್ನು ಸೋಲಿಸಿದರು. ಮತ್ತೆ ಎಂದೂ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ. ಅವರ ಪಕ್ಷ ಅವರಿಗೆ ಟಿಕೆಟ್ ಕೊಡಲಿಲ್ಲ. ರತ್ನಾಕರ್ ನನ್ನ ಬಾಲ್ಯದ ಸ್ನೇಹಿತ ಒಟ್ಟಿಗೇ ಒಂದೇ ತರಗತಿಯಲ್ಲಿ ಓದಿದವರು ನಾವು. ಅವನ ಜೊತೆ ಆತ್ಮೀಯತೆ, ಸಲುಗೆ ಇತ್ತು. ಹಾಗಾಗಿ ನಾನವನಿಗೆ ಚೂಡಾಯಿಸುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ನಾವೆಲ್ಲಾ ಅನೇಕ ಬಾರಿ ಸ್ಪರ್ಧಿಸಿ ಹಲವು ಸೋಲು ಕಂಡಿದ್ದೇವೆ. ನೀನು ಮಾತ್ರ ಸೋಲಿಲ್ಲದ ಸರದಾರ ಕಣೋ ಎನ್ನುತ್ತಿದ್ದೆವು ಎಂದು ಪಟಮಕ್ಕಿ ಒಡನಾಡಿಗಳೂ, ಶಾಸಕರೂ ಆದ ಆರಗ ನೆನಪನ್ನು ಮೆಲುಕು ಹಾಕಿದರು.

– ಅವನೇ ಕಷ್ಟದಲ್ಲಿದ್ದರೂ ನನಗೆ 15 ಲಕ್ಷ ಸಾಲ ಕೊಟ್ಟಿದ್ದ: ಕಿಮ್ಮನೆ

ಪಟಮಕ್ಕಿ ರತ್ನಾಕರ್ ಹಾಗೂ ನಾನು ಹೈಸ್ಕೂಲನ್ನು ಒಟ್ಟಿಗೇ ಓದಿದವರು. ಸ್ನೇಹಿತರು. ಮುಂದೆ ನಾನು ಜನತಾ ಪರಿವಾರದಲ್ಲಿ ಗುರುತಿಸಿಕೊಂಡೆ. ಅವರು ಕಾಂಗ್ರೆಸ್‌ನಿಂದ ಶಾಸಕರಾದರು. ಪಟಮಕ್ಕಿಯ ಮೊದಲ ಚುನಾವಣೆಯಲ್ಲಿ ಅವರ ವಿರುದ್ಧ ಸ್ಪರ್ಧಿಸಿದ್ದ ಡಿ.ಬಿ.ಚಂದ್ರೇಗೌಡರಿಗೆ ನಾನು ಚುನಾವಣಾ ಏಜೆಂಟ್ ಆಗಿದ್ದೆ. ಕೇವಲ 32 ಓಟುಗಳಲ್ಲಿ ಡಿಬಿಪಿ ಸೋತಾಗ ಮರು ಎಣಿಕೆಗೆ ನಾನೇ ಅರ್ಜಿ ಸಲ್ಲಿಸಿದ್ದೆ. ಮರು ಎಣಿಕೆ ನಡೆದಾಗ ರತ್ನಾಕರ್ ಗೆ 74 ಓಟು ಹೆಚ್ಚಿಗೆ ಬಂದಿತ್ತು. ರಾಜಕೀಯವಾಗಿ ನಾವು ಬೇರೆ ನಿಲುವು ಹೊಂದಿದ್ದರೂ ಸ್ನೇಹಕ್ಕೆ ಅದು ಅಡ್ಡಿಯಾಗಿರಲಿಲ್ಲ. ನಂತರದಲ್ಲಿ ರತ್ನಾಕರ್ ಓದು. ಅಧ್ಯಾತ್ಮ, ಸೇವೆಯತ್ತ ವಾಲಿದರು. ಹಣ-ಅಧಿಕಾರದ ವ್ಯಾಮೋಹ ಅಂಟಿಸಿಕೊಳ್ಳಲಿಲ್ಲ. ದೇವರು, ಪುನರ್ಜನ್ಮದ ಕುರಿತು ನನಗೂ ಅವರಿಗೂ ವಿಭಿನ್ನ ನಿಲುವುಗಳಿತ್ತು. ನಾನು ಒಮ್ಮೆ ತೀವ್ರ ಸಂಕಷ್ಟದಲ್ಲಿದ್ದಾಗ ನನಗೆ 15 ಲಕ್ಷ ರೂ. ಸಾಲ ಕೊಟ್ಟಿದ್ದರು. ಯಾವತ್ತೂ ಏನೇ ನೆರವು ಬೇಕಿದ್ದರೂ ಕೇಳು ಎನ್ನುವ ವಿಶಾಲ ಹೃದಯ ಅವರಿಗಿತ್ತು. ಅವರೇನು ಬಾರೀ ಶ್ರೀಮಂತರಾಗಿರಲಿಲ್ಲ. ಆದರೆ ಮಾನವೀಯತೆಯ ನೆಲಗಟ್ಟಿನಲ್ಲಿ ಅಪಾರ ಶ್ರೀಮಂತಿಕೆ ಇತ್ತು ಎಂಬುದಾಗಿ ಕಿಮ್ಮನೆ ರತ್ನಾಕರ್ ನುಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ನೈಜಲಾ ಪಟಮಕ್ಕಿ ರತ್ನಾಕರ್, ಮಾಜಿ ಶಾಸಕರು ಹೊಸನಗರ ಕ್ಷೇತ್ರ ಬಿ ಸ್ವಾಮಿರಾವ್, ಕಲಗೋಡು ರತ್ನಾಕರ್, ವಾಗ್ಮಿ, ಸುಧೀರ್ ಕುಮಾರ್ ಮುರೋಳ್ಳಿ, ಖ್ಯಾತ ಚಲನಚಿತ್ರ ಸಾಹಿತಿ ಕವಿರಾಜ್, ಉಪನಿರ್ದೇಶಕರು ಇಸ್ರೋ, ಬೆಂಗಳೂರು ಶಿವಾನಿ ಕೋಣಂದೂರು, ಕುಮಾರಿ ದೀಕ್ಷಾ ಆರ್, ಮಂಜಣ್ಣ ನಾಯಕ್ ಮತ್ತು ಶಿವಕುಮಾರ್ ಕಾರಂತ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಈ ಪುಸ್ತಕ ಬರೆದು ಹಾಗೂ ಮುದ್ರಣ ಮಾಡಿದ ಸಹ್ಯಾದ್ರಿ ವಾರ್ತೆಯ ಮುಖ್ಯ ಸಂಪಾದಕರಾದ ಬಿ ಗಣಪತಿ, ಹಾಗೂ ಅವರ ಬಳಗದವರು ಮತ್ತು ಈ ಪುಸ್ತಕ ಬಿಡುಗಡೆ ಸಮಾರಂಭವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಖ್ಯಾತ ಮಿಮಿಕ್ರಿ ಕಲಾವಿದ ಗೋಪಿಯವರಿಂದ ಮಿಮಿಕ್ರಿ ಖ್ಯಾತ ಮಿಮಿಕ್ರಿ ಕಲಾವಿದ, ದೂರದರ್ಶನ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿ ವಿವಿಧ ರಾಜಕಾರಣಿಗಳ ಧ್ವನಿ ಅನುಕರಣೆ ಮಾಡಿ ನಾಡಿನಾದ್ಯಂತ ಹೆಸರು ಗಳಿಸಿರುವ ಮಿಮಿಕ್ರಿ ಗೋಪಿ ಅವರಿಂದ ಸಂಜೆ 5 ರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯವಲ್ಲದೇ ದೇಶ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಮಿಮಿಕ್ರಿ ಗೋಪಿ ಸಮಾರಂಭದ ಉದ್ದಕ್ಕೂ ತಮ್ಮ ಹಾಸ್ಯದ ಹೊನಲು ಹರಿಸಿದ್ದಾರೆ.

Categories
ಕೊಪ್ಪ

ಕೊಪ್ಪ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ,ಶಾಸಕರೇ ಈ ಬಗ್ಗೆ ಗಮನ ಹರಿಸಿ

ಕೊಪ್ಪ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ,ಶಾಸಕರೇ ಈ ಬಗ್ಗೆ ಗಮನ ಹರಿಸಿ 

* ತಕ್ಷಣವೇ ಸಾರ್ವಜನಿಕರ ಸಭೆ ಕರೆಯಿರಿ,ರಾಜಕೀಯ ಬಿಡಿ
* ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ಆಕ್ಷೇಪ

NAMMMUR EXPRESS NEWS
ಕೊಪ್ಪ: ಪಟ್ಟಣದ ಹುಚ್ಚರಾಯನ ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿದ್ದು,ಇದೇ ನೀರನ್ನು ಪ್ರತಿ ದಿನ ಪಟ್ಟಣದ ನಿವಾಸಿಗಳಿಗೆ ಪೂರೈಸಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನೀರು ವಾಸನೆ ಕಸದಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿ ಪರೀಕ್ಷೆಗೆ ಒಳಪಡಿಸಿದ್ದು ಅಲ್ಲಿ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿತ್ತು.
ಈ ಕುರಿತು ಹುಚ್ಚರಾನ ಕೆರೆ ಬಳಿಯಿರುವ ಪಂಪ್ ಹೌಸ್ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಪ್ರಸ್ತುತ ಬೆಳವಣಿಗೆ ಕುರಿತಂತೆ ಶಾಸಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ನಿಜಕ್ಕೂ ಈ ನೀರು ಕುಡಿಯಲು ಮಾತ್ರವಲ್ಲ ಸ್ನಾನಕ್ಕೂ ಯೋಗ್ಯವಾಗಿಲ್ಲ ಇಂತಹ ನೀರನ್ನು ಜನರಿಗೆ ಪೂರೈಸಲಾಗುತ್ತಿದೆ,ಈ ಕುರಿತಂತೆ ನಾಗರೀಕ ವೇದಿಕೆಗೆ ನೀಯನ್ನು ತೋರಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಬಹುದು ಅಂತಹ ಪರಿಸ್ಥಿತಿ ಇದೆ, ಕೊಪ್ಪದ ಕುಡಿಯುವ ನೀರಿಗಾಗಿ ಇಷ್ಟು ದೊಡ್ಡ ಆಂದೋಲನ ನಡೆಯುತ್ತಿದೆ ಇಂತಹ ಸಝದರ್ಭದಲ್ಲಿ ಪಕ್ಷಾತೀತವಾಗಿ ನಾವೆಲ್ಲರೂ ನಾಗರೀಕರ ಜೊತೆ ನಿಲ್ಲಬೇಕಿದೆ,ಈ ಕೂಡಲೇ ಶಾಸಕರು ಹಾಗೂ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ಶಾಸಕರು ಸಾರ್ವಜನಿಕ ಸಭೆ ಕರೆಯಬೇಕು,ಈಗಾಗಲೇ ಕೊಪ್ಪ,ಶೃಂಗೇರಿ,ಎನ್.ಆರ್ ಪುರ ತಾಲೂಕುಗಳನ್ನು ತುಂಬಾ ದೂರವಿಟ್ಟಿದ್ದೀರಿ ಉಸ್ತುವಾರಿ ಸಚಿವರು ಈ ಬಗ್ಗೆ ಮಾತನಾಡಬೇಕಿದೆ.ರಾಜಕೀಯ ಮರೆತು ನಾಗರೀಕರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದರು.
ಶೃಂಗೇರಿ ಕ್ಷೇತ್ರಕ್ಕೆ ಈಗಾಗಲೇ ಯಾವುದೇ ಅಧಿಕಾರಗಳು ಬರೋದಿಲ್ಲ,ಡಿ ಸಿ,ಎಸ್ಪಿಯವರುಗಳು ಬಂದು ನೀರು ಕುಡಿಯೋದಿಲ್ಲ ಯಾರಿಗೂ ಇಲ್ಲಿನ ಜನರ ಸಮಸ್ಯೆಗಳು ಅರ್ಥವಾಗೋದಿಲ್ಲ,ಕ್ಷೇತ್ರದ ಶಾಸಕರಾದವರು ಇದಕ್ಕೆ ಸ್ಪಂದಿಸಿ ಜನರಿಗೆ ನ್ಯಾಯ ಒದಗಿಸಬೇಕಿದೆ ಎಂದು ಆಗ್ರಹಿಸಿದರು.

Categories
ಬೆಳ್ತಂಗಡಿ

ರಾಷ್ಟ್ರ ಮಟ್ಟದಲ್ಲಿ ಎಕ್ಸೆಲ್ ವಿದ್ಯಾರ್ಥಿಗಳು ಮಿಂಚಿಂಗ್!

ರಾಷ್ಟ್ರ ಮಟ್ಟದಲ್ಲಿ ಎಕ್ಸೆಲ್ ವಿದ್ಯಾರ್ಥಿಗಳು ಮಿಂಚಿಂಗ್!

– ಏರ್ ಕ್ರಾಫ್ಟ್ ಮೇಂಟೆನೆನ್ಸ್ ಎಂಜಿನಿಯರಿಂಗ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದು ಸಾಧನೆ
– ರಾಷ್ಟ್ರಮಟ್ಟದ ಸ್ಕಾಲರ್ ಶಿಪ್‌ಗೆ ಅರ್ಹರಾಗಿರುವ ಎಕ್ಸೆಲ್ ವಿದ್ಯಾರ್ಥಿಗಳು

NAMMUR EXPRESS NEWS
ಬೆಳ್ತಂಗಡಿ: ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಏರ್ ಕ್ರಾಫ್ಟ್ ಮೇಂಟೆನೆನ್ಸ್ ಎಂಜಿನಿಯರಿಂಗ್‌ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗುರುವಾಯನಕೆರೆ
ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿ ಮಾದರಿ ವಿದ್ಯಾರ್ಥಿಗಳಾಗಿದ್ದಾರೆ.
ಹೌದು ಪರೀಕ್ಷೆ ಬರೆದ ವಿದ್ಯಾರ್ಥಿಗಳಾದ ಧ್ರುವ ಅನೂಪ್, ಮನ್ವಿತ್ ಎಂ.ಬಿ, ಗೌತಮ್ ಎಸ್, ಇಂಚರಾ ಟಿ.ಆ‌ರ್, ನೇಹನ್ ಯು, ವರ್ಷಿತಾ ಎಲ್.ಬಿ, ರೋಹಿತ್ ಎಂ, ಶ್ರೀಲಕ್ಷ್ಮೀ ಅವರು ರ‍್ಯಾಂಕ್‌ ಗಳಿಸಿ ರಾಷ್ಟ್ರಮಟ್ಟದ ಸ್ಕಾಲರ್ ಶಿಪ್‌ಗೆ ಅರ್ಹರಾಗಿದ್ದಾರೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್‌ ಅವರು ತಿಳಿಸಿದ್ದಾರೆ.

Categories
ಚಿಕ್ಕಮಗಳೂರು

ಚಿಕ್ಕಮಗಳೂರಿನಾದ್ಯಂತ ರಾತ್ರಿಯಿಡೀ ಜಿಟಿಜಿಟಿ ಮಳೆ

ಚಿಕ್ಕಮಗಳೂರಿನಾದ್ಯಂತ ರಾತ್ರಿಯಿಡೀ ಜಿಟಿಜಿಟಿ ಮಳೆ

* 14 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದ ಹವಾಮಾನ ಇಲಾಖೆ
* ಶೃಂಗೇರಿ,ಕೊಪ್ಪ, ಎನ್‌.ಆರ್ ಪುರ,ಕಳಸ,ಮೂಡಿಗೆರೆಯಲ್ಲಿ ಮಳೆಯಾದ ವರದಿ

NAMMMUR EXPRESS NEWS
ಚಿಕ್ಕಮಗಳೂರು: ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆಯೊಂದಿಗೆ ರಾಜ್ಯದ 14 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಯಾದ ಬೆನ್ನಲ್ಲೇ ನಿನ್ನೆ ಸಂಜೆಯಿಂದಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಶುರುವಾಗಿದ್ದು, ರಾತ್ರಿಯಿಡೀ ಒಂದೇ ಸಮನೇ ಬಿಡದೇ ಜಿಟಿ ಜಿಟಿ ಮಳೆಯಾಗುತ್ತಿದೆ. ಶೃಂಗೇರಿ,ಕೊಪ್ಪ,ಎನ್.ಆರ್ ಪುರ,ಕಳಸ,ಮೂಡಿಗೆರೆ ತಾಲೂಕುಗಳಲ್ಲಿ ಮಳೆಯಾದ ವರದಿಯಾಗಿದೆ.ಇಂದೂ ಕೂಡ ಬೆಳ್ಳಂಬೆಳಿಗ್ಗೆ‌ಯಿಂದ ಸುರಿಯುತ್ತಿರುವ ಮಳೆಯಿಂದ ಒಂಥರಾ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ, ಮಲೆನಾಡಿನಲ್ಲಿ ಮಳೆಗಾಲ ಪೂರ್ವದ ಕೆಲ ಕೆಲಸಗಳು ಅರ್ಧಕ್ಕೇ ನಿಂತಿವೆ,ಇನ್ನೊಂದೆಡೆ ಮಳೆಗಾಲವೇ ಶುರುವಾಯಿತು ಎಂದು ರೈತರು ಗದ್ದೆ,ತೋಟದ ಕಡೆ ಮುಖ ಮಾಡಿದ್ದಾರೆ.ಹಲವೆಡೆ ಈ ಅಕಾಲಿಕ ಮಳೆಯಿಂದಾಗಿ ರಸ್ತೆ,ಚರಂಡಿ ಕಾಮಾಗಾರಿಗಳು ಅಸ್ಥವ್ಯಸ್ಥಗೊಂಡಿದೆ. ಕಳೆದ ಬಾರಿಯ ಮಳೆಗೆ ಅಪಾರ ಹಾನಿ ಅನುಭವಿಸಿದ್ದ ಜನತೆ ಈ ಬಾರಿ ಮಳೆ ಇನ್ನು ಹೇಗಿರಲಿದೆ ಎಂದು ಯೋಚಿಸುತ್ತಿದ್ದಾರೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಪ್ರವಾಸಿಗರಿಂದ ತುಂಬಿರುವ ಕಾಫಿನಾಡಿನ ಎಲ್ಲಾ ತಾಲೂಕುಗಳು ಪ್ರವಾಸಿಗರಿಂದ ಉತ್ತಮ ವ್ಯಾಪಾರಗಳಿಸುತ್ತಿತ್ತು ಈಗ ಮಳೆಯಿಂದಾಗಿ ಪ್ರವಾಸಿಗರ ಸಂಖ್ಯೆಯಿದ್ದರೂ ವ್ಯಾಪಾರಕ್ಕೆ ಜನ ಬಾರದೇ ಸಣ್ಣಪುಟ್ಟ ವ್ಯಾಪಾರಸ್ಥರು ಯೋಚನೆ ಮಾಡುವಂತಾಗಿದೆ.